ನವದೆಹಲಿ: ತಮಿಳು ನಟಿ ರಾಧಿಕಾ ಶರತ್‌ಕುಮಾರ್ (Radhika Sarathkumar) ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರನ್ನು (Virat Kohli) ಭೇಟಿಯಾಗಿದ್ದು, ಅವರೊಂದಿಗಿನ ಸೆಲ್ಫಿಯನ್ನು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೆ.19ರಿಂದ ನಡೆಯಲಿರುವ ಬಾಂಗ್ಲಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ವಿರಾಟ್ ಕೊಹ್ಲಿ ಲಂಡನ್‌ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ರಾಧಿಕಾ ಶರತ್‌ಕುಮಾರ್, ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯನ್ನು ನಾನು ಭೇಟಿಯಾಗಿರುವುದು ರೋಮಾಂಚನವನ್ನುಂಟು ಮಾಡಿದೆ. ಅವರೊಂದಿಗೆ ಪ್ರಯಾಣಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ನಟಿ ರಾಧಿಕಾ ಶರತ್‌ಕುಮಾರ್ ತೇರಿ, ಚಂದ್ರಮುಖಿ, ಪೊಕ್ಕಿರಿ ರಾಜ, ಚಿತ್ತಿ ಮತ್ತು ನಲ್ಲವನುಕ್ಕು ನಲ್ಲವನ್‌ನಲ್ಲಿ ತಮ್ಮ ಪಾತ್ರಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಅವರು ಹಿಮ್ಮತ್ವಾಲಾ, ಲಾಲ್ ಬಾದ್ಶಾ, ನಸೀಬ್ ಅಪ್ನಾ ಅಪ್ನಾ, ಮತ್ತು ಮೇರಾ ಪತಿ ಸಿರ್ಫ್ ಮೇರಾ ಹೈ ಸೇರಿದಂತೆ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ರೈತರಿಗೆ ಅನುಕೂಲ ಮಾಡದೇ ಮಣ್ಣಿನ ಮಕ್ಕಳು ಅಂತಾರೆ: ಹೆಚ್‌ಡಿಕೆ ವಿರುದ್ಧ ಸಿಎಂ ವಾಗ್ದಾಳಿ
ಮುಂಬೈ: ಭಾರತದ (India) ಸ್ಟಾರ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಪ್ರತಿಸ್ಪರ್ಧಿ ತಂಡ ಯಾವುದು ಎಂಬುವುದರ ಕುರಿತು ಇತ್ತೀಚಿಗೆ ಮಾತನಾಡಿದ್ದಾರೆ.
ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ 3 ಬಾರಿ ಗೆದ್ದ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (Kolkatta Knight Riders) ತಂಡಗಳ ನಡುವೆ ನಿಮ್ಮ ನೆಚ್ಚಿನ ಪ್ರತಿಸ್ಪರ್ಧಿ ಯಾವುದು ಎಂದು ಕೇಳಿದಕ್ಕೆ ಪ್ರತಿಕ್ರಿಯಿಸಿ, ನನಗೆ ಕೆಕೆಆರ್ (KKR) ನೆಚ್ಚಿನ ಪ್ರತಿಸ್ಪರ್ಧಿ ತಂಡ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿದ ಶ್ರುತಿ
16 years ago today, a 19-year-old @imVkohli stepped onto the international stage for the first time, marking the beginning of what has become a truly legendary career. Congratulations to the King on completing 16 years in international cricket! pic.twitter.com/Q6U17q6nP1
ಕಳೆದ ಭಾನುವಾರವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) 16 ವರ್ಷಗಳನ್ನು ಪೂರೈಸಿದ ಕೊಹ್ಲಿಗೆ ಬಿಸಿಸಿಐ (BCCI) ಕಾರ್ಯದಶಿ ಜಯ್ ಶಾ (Jay Shah) 16 ವರ್ಷದ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ 19 ವರ್ಷದ ಯುವಕ. ಇಂದು 16 ವರ್ಷಗಳನ್ನು ಪೂರೈಸಿದ್ದಾರೆ. ಇದು ನಿಜವಾದ ವೃತ್ತಿಜೀವನದ ಆರಂಭ ಹಾಗೂ ಪೂರೈಸಿದ ರಾಜನಿಗೆ ಅಭಿನಂದನೆಗಳು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಶುಭ ಹಾರೈಸಿದ್ದರು.
ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ 2008ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಶಕ್ತಿಶಾಲಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಇದನ್ನೂ ಓದಿ: ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚಿಸಿದ ಸುಪ್ರೀಂ ಕೋರ್ಟ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಕೊಹ್ಲಿ 2008ರಲ್ಲಿ ಆರ್‌ಸಿಬಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಬೇರೆ ತಂಡಕ್ಕೆ ಹೋಗದೇ ನಿರಂತರವಾಗಿ ಆರ್‌ಸಿಬಿ (RCB) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಕಾತರವಾಗಿದೆ.
ಲಂಡನ್‌ನ ಓವೆಲ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 110 ರನ್ ಗಳಿಸಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ಇಂದು 2ನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಲಿದೆ. ಲಂಡನ್‌ನ ಲಾರ್ಡ್ಸ್ ಅಂಗಳದಲ್ಲಿ ಸಂಜೆ 5.30ಕ್ಕೆ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಗುರಿ ಹೊಂದಿದ್ದು, ಬೌಲಿಂಗ್ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ
ಟಿ20 ಸರಣಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ, ಮೊದಲ ಏಕದಿನದಲ್ಲಿ ಆಂಗ್ಲರನ್ನು ಮಣ್ಣುಮುಕ್ಕಿಸಿತ್ತು. ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ ತನ್ನ ಲಯ ಮುಂದುವರಿಸಲು ಎದುರು ನೋಡುತ್ತಿದ್ದರೆ, ಇಂಗ್ಲೆಂಡ್ ಸಮಬಲ ಸಾಧಿಸಿ ಮುಖಭಂಗ ತಪ್ಪಿಸಿಕೊಳ್ಳುವ ಕಾತರದಲ್ಲಿದೆ.
ರೋಹಿತ್ ಅಬ್ಬರದ ಫಾರ್ಮ್ ಭಾರತಕ್ಕೆ ಮತ್ತಷ್ಟು ಬಲ ತುಂಬಿದ್ದು, ಶಿಖರ್ ಧವನ್ ಸಹ ಭರವಸೆ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದು, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ರಿಷಬ್ ಸಂತ್, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿ ಕಣಕ್ಕಿಳಿದು ಅಬ್ಬರಿಸಲಿದ್ದಾರೆ.
ಇಂಗ್ಲೆಂಡ್ ಬ್ಯಾಟರ್‌ಗಳು, ಬೌಲರ್‌ಗಳೂ ನಿರಂತರವಾಗಿ ಒತ್ತಡಕ್ಕೆ ಸಿಲುಕುತ್ತಿದ್ದು, ಇದರ ಲಾಭ ಪಡೆಯಲು ಭಾರತ ಇನ್ನಷ್ಟು ರಣತಂತ್ರಗಳನ್ನು ಹೂಡಿದೆ.
ವಿರಾಟ್ ಕೊಹ್ಲಿ ಅಲಭ್ಯ: ಸತತ ಬ್ಯಾಟಿಂಗ್ ಲಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿಗೆ ಗಾಯದ ಸಮಸ್ಯೆಯೂ ಕಾಡುತ್ತಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು 2ನೇ ಏಕದಿನ ಪಂದ್ಯಕ್ಕೂ ಆಯ್ಕೆಗೆ ಲಭ್ಯರಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Live Tv
[brid partner=56869869 player=32851 video=960834 autoplay=true]
ಲಂಡನ್: ಡೇವಿಡ್ ಮಲನ್ ಸ್ಫೋಟಕ ಅರ್ಧ ಶತಕದ ನೆರವಿನಿಂದ ನಾಟಿಂಗ್ ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 17ರನ್‌ಗಳ ಜಯ ಸಾಧಿಸಿತು.
ಟಾಸ್‌ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215ರನ್ ಗಳಿಸಿ 216 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 198 ರನ್‌ಗಳನ್ನು ಗಳಿಸುವ ಮೂಲಕ ತನ್ನ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ
ಮೂರು ಪಂದ್ಯಗಳ ಸರಣಿಯನ್ನು ಭಾರತ ಈಗಾಗಲೇ 2–0 ಅಂತರದಲ್ಲಿ ಗೆದ್ದುಕೊಂಡಿದೆ. ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ದೊಡ್ಡ ಬದಲಾವಣೆಯೊಂದಿಗೆ ಕಣಕ್ಕಿಳಿದು ಯುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿತು.
ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ:
ಟಾಸ್ ಸೋತು ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪವರ್ ಪ್ಲೇನಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಬೇಗನೆ ನಿರ್ಗಮಿಸಿದರು. ರೋಹಿತ್ 12 ಎಸೆತಗಳಲ್ಲಿ 11 ರನ್ ಹಾಗೂ ರಿಷಭ್ 5 ಎಸೆತಗಳಲ್ಲಿ 1 ರನ್‌ಗಳಿಸಿ ಹೊರನಡೆದರು. ಸತತ ಬ್ಯಾಟಿಂಗ್ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ಸೂರ್ಯಕುಮಾರ್ ಸ್ಫೋಟಕ ಶತಕ:
3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸೂರ್ಯಕುಮಾರ್ ಸ್ಪೋಟಕ ಶತಕ ಸಿಡಿಸಿದರು. ಗೆಲುವಿನ ವಿಶ್ವಾಸಕ ಕಳೆದುಕೊಂಡಿದ್ದ ಟೀ ಇಂಡಿಯಾಕ್ಕೆ ಮತ್ತೆ ಗೆಲುವಿನ ಆಸೆ ಚಿಗುರಿಸಿದ್ದರು. ಆಂಗ್ಲ ಬೌಲರ್‌ಗಳರ ಬೆಂಡೆತ್ತಿದ್ದ ಯಾದವ್ 48 ಎಸೆಗಳಲ್ಲೇ 5 ಸಿಕ್ಸರ್ ಮತ್ತು 12 ಬೌಂಡರಿಗಳನ್ನು ಚಚ್ಚಿ 101 ರನ್‌ಗಳಿಸಿದರು. ನಂತರವೂ ಆಂಗ್ಲರ ವಿರುದ್ಧ ದಾಳಿ ಮುಂದುವರಿಸಿದರು. ಸೂರ್ಯಕುಮಾರ್ ಯಾದವ್ 117 ರನ್(6 ಸಿಕ್ಸರ್, 14 ಬೌಂಡರಿ) ಗಳಿಸಿದರೆ, ಶ್ರೇಯಸ್ ಅಯ್ಯರ್ 28 ರನ್ (23 ಎಸೆತ, 2 ಸಿಕ್ಸರ್) ಗಳಿಸಿ ತಂಡಕ್ಕೆ ನೆರವಾದರು. ದಿನೇಶ್ ಕಾರ್ತಿಕ್ 6ರನ್, ರವಿಂದ್ರ ಜಡೇಜಾ 7 ರನ್ ಹಾಗೂ ಹರ್ಷಲ್ ಪಟೇಲ್ 5 ರನ್‌ಗಳಿಸಿದರು.
ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ್ದರು. ರಾಯ್ 26 ಎಸೆತಗಳಲ್ಲಿ 27 ರನ್‌ಗಳಿಸಿದರೆ, ಬಟ್ಲರ್ 2 ಬೌಂಡರಿ 1 ಸಿಕ್ಸರ್‌ಗಳೊಂದಿಗೆ 9 ಎಸೆತಗಳಲ್ಲಿ 18 ರನ್‌ಗಳಿಸಿ ಪೆವಿಲಿಯನ್ ಸೇರಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇವಿಡ್ ಮಲನ್ ತಮ್ಮ ಸ್ಫೋಟಕ ಅರ್ಧ ಶತಕದ ನೆರವಿಂದ ತಂಡವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಲಿಯಾಂ ಲಿವಿಂಗ್‌ಸ್ಟೋನ್ ಸಹ ಇದಕ್ಕೆ ಜೊತೆಯಾದರು.
ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ 39 ಎಸೆತಗಳಲ್ಲಿ 77 ರನ್ (6 ಬೌಂಡರಿ, 5ಸಿಕ್ಸರ್) ಗಳಿಸಿದರೆ, 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಲಿಯಾಂ ಲಿವಿಂಗ್‌ಸ್ಟೋನ್ 29 ಎಸೆತಗಳಲ್ಲಿ 42 ರನ್ (4 ಸಿಕ್ಸರ್) ಗಳಿಸಿ ಅಜೇಯರಾಗುಳಿದರು. ಇಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡವು 200ರ ಗಡಿ ದಾಟಿತು. ಫಿಲ್‌ಸಾಲ್ಟ್ 8 ರನ್, ಹ್ಯಾರಿಬುಕ್ 19, ಚೆರೀಸ್ ಜೊರ್ಡನ್ 11 ರನ್‌ಗಳಿಸಿದರೆ ಭರವಸೆ ಆಟಗಾರ ಮೊಯಿನ್ ಅಲಿ ಶೂನ್ಯಕ್ಕೆ ನಿರ್ಗಮಿಸಿದರು.
ರನ್ ಏರಿದ್ದು ಹೇಗೆ?
34 ಎಸೆತ 50 ರನ್
68 ಎಸೆತ 100 ರನ್
88 ಎಸೆತ 150 ರನ್
120 ಎಸೆತ 215 ರನ್
ಟೀಂ ಇಂಡಿಯಾದಲ್ಲಿ ಮೆಘಾ ಬದಲಾವಣೆ: ಭಾರತ ಈ ಬಾರಿ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಅಂತಿಮ ಪಂದ್ಯದಲ್ಲಿ ಕೈಬಿಡಲಾಗಿತ್ತು. ಶೀಘ್ರವೇ ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲಾಗಿ ರವಿ ಬಿಶ್ನೋಯ್, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಕ್ ಹೂಡಾ ಅವರನ್ನು ಪಂದ್ಯದಿಂದ ಕೈಬಿಟ್ಟದ್ದು ಹಲವು ಹಿರಿಯ ಕ್ರಿಕೆಟಿಗರಲ್ಲಿ ಬೇಸರ ತರಿಸಿತು.
Live Tv
[brid partner=56869869 player=32851 video=960834 autoplay=true]
ಲಂಡನ್: ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಜುಲೈ 1ರಿಂದ ಆರಂಭವಾಗಲಿದೆ.
15 ವರ್ಷಗಳ ಬಳಿಕ ಇಂಗ್ಲೆಂಡ್ ತವರಿನಲ್ಲೇ ಟೆಸ್ಟ್ ಸರಣಿ ಗೆಲ್ಲುವ ಕಾತರದಲ್ಲಿ ಟೀಂ ಇಂಡಿಯಾ ಸಜ್ಜಾಗಿದೆ. ಹೈವೋಲ್ವೇಜ್ ಪಂದ್ಯಕ್ಕೆ ಈಗಾಗಲೇ ದೀರ್ಘ ಅಭ್ಯಾಸದಲ್ಲಿ ನಿರತರಾಗಿರುವ ಭಾರತೀಯ ಆಟಗಾರರು ಇಂಗ್ಲೆಂಡ್ ತವರಲ್ಲೇ ಬಗ್ಗುಬಡಿದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
ಇಂಗ್ಲೆಂಡ್‌ನಲ್ಲಿ 1971ರಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದಿದ್ದ ಭಾರತಕ್ಕೆ 2ನೇ ಟೆಸ್ಟ್ ಸರಣಿ ಜಯ ಒಲಿದಿದ್ದು 1986ರಲ್ಲಿ. ಬಳಿಕ 2007ರಲ್ಲಿ ಪಟೌಡಿ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆ ಬಾರಿ ಭಾರತ ಸರಣಿ ಗೆದ್ದಿತ್ತು. 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಗೆದ್ದಿದ್ದ ಟೀಂ ಇಂಡಿಯಾ, ಬಳಿಕ 3 ಬಾರಿ (2011, 2014 ಹಾಗೂ 2018) ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡಿದ್ದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ರ್‍ಯಾಂಕಿಂಗ್‌ನಲ್ಲಿ ಕೊಹ್ಲಿಯ ಅಪರೂಪದ ವಿಶ್ವ ದಾಖಲೆ ಮುರಿದ ಬಾಬರ್ ಅಜಮ್
ಆ ಬಳಿಕ ಕಳೆದ ವರ್ಷ ಆಗಸ್ಟ್ನಲ್ಲಿ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿತ್ತು. ಸರಣಿಯಲ್ಲಿ ನಡೆದಿದ್ದ 4 ಪಂದ್ಯಗಳಲ್ಲಿ ಪ್ರವಾಸಿ ಭಾರತ 2-1 ರಿಂದ ಮುಂದಿದ್ದರೂ ಕೊನೆ ಟೆಸ್ಟ್ ಪಂದ್ಯ ನಡೆಯದಿದ್ದರಿಂದ ಸರಣಿ ಭಾರತಕ್ಕೆ ಒಲಿಯುವುದು ಕೈತಪ್ಪಿತು. ಇದೀಗ ಮತ್ತೆ ಮರು ನಿಗದಿಯಾಗಿರುವ ಟೆಸ್ಟ್ ಸರಣಿ ಜುಲೈ 1ರಿಂದ ಆರಂಭವಾಗಲಿದೆ.
ಬುಮ್ರಾಗೆ ನಾಯಕನ ಪಟ್ಟ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಯುವ ವೇಗಿ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.
1987ರಲ್ಲಿ ಕಪಿಲ್ ದೇವ್ ಅವರು ಟೀಂ ಇಂಡಿಯಾವನ್ನು ಕೊನೆಯ ಬಾರಿಗೆ ಮುನ್ನಡೆಸಿದ್ದ ಬೌಲರ್ ಆಗಿದ್ದರು. ಜುಲೈ 1ರಿಂದ ಪ್ರಾರಂಭವಾಗುವ ಈ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದಾರೆ. ಕಾರಣ ಅವರ RTPCR ಪರೀಕ್ಷೆಯು ಮತ್ತೊಮ್ಮೆ ಪಾಸಿಟಿವ್ ಬಂದಿದ್ದು, ಅವರನ್ನು ಐಸೋಲೇಟ್ ಮಾಡಲಾಗಿದೆ. ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಉಪನಾಯಕರಲ್ಲಿ ಒಬ್ಬರಾಗಿರುವ ಜಸ್ಪ್ರಿತ್ ಬುಮ್ರಾ ತಮ್ಮ ನಾಯಕತ್ವದಲ್ಲಿ ಮುನ್ನಡೆಸಲಿದ್ದಾರೆ.
ಮುಂಬೈ: ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅಮೋಘ ಅರ್ಧ ಶತಕಗಳ ಅಬ್ಬರ ಹಾಗೂ ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್ ಅವರ ಬೌಲಿಂಗ್ ಕಮಾಲ್ ನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿತು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3ನೇ T20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ, ಎದುರಾಳಿ ತಂಡಕ್ಕೆ 180 ರನ್‌ಗಳ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 19.1 ಓವರ್‌ಗಳಲ್ಲೇ 131 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ಮಂಡಿಯೂರಿತು. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL
ಟಾಸ್ ಸೋತು ನಂತರ ಬ್ಯಾಟಿಂಗ್ ಮಾಡಿದ ದಕ್ಷಿಣಾಫ್ರಿಕಾ ತಂಡ ಪವರ್ ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡರೂ ಸಾಧಾರಣ ಮೊತ್ತ ದಾಖಲಿಸಿತ್ತು. 36 ಎಸೆತಗಳಲ್ಲಿ 37 ರನ್‌ಗಳನ್ನು ಕಲೆಹಾಕಿತ್ತು. ನಂತರ ತನ್ನ ಬೌಲಿಂಗ್ ಪರಾಕ್ರಮ ಮೆರೆದ ಟೀಂ ಇಂಡಿಯಾ ಬೌಲರ್‌ಗಳು ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸಿದರು.
ಎಸ್‌ಎ ಕ್ಯಾಪ್ಟನ್ ತೆಂಬಾ ಬವುಮಾ ಪವರ್ ಪ್ಲೇನಲ್ಲೇ ಕೇವಲ 8 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ರೀಜಾ ಹೆನ್ರಿಕ್ಸ್ 20 ಎಸೆತಗಳಲ್ಲಿ 23 ರನ್‌ಗಳಿಸಿದರು. ಇದಕ್ಕೆ ಜೊತೆಯಾದ ಡ್ವೇನ್ ಪ್ರಿಟೊರಿಯಸ್ 16 ಎಸೆತಗಳಲ್ಲಿ 20 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾಗಿ ಕಂಠಕವಾಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಹಾಗೂ ಡುಸ್ಸೆನ್ ಕ್ರಮವಾಗಿ 3 ಮತ್ತು 1 ರನ್‌ಗಳಿಸಿ ಹೊರನಡೆದರು. ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿಯೊಂದಿಗೆ 29 ರನ್‌ಗಳಿಸಿದರೆ, ಕಗಿಸೊ ರಬಾಡ 9 ರನ್ ಹೊಡೆದರು.
ಗಾಯಕ್ವಾಡ್ ಇಶಾನ್ ಶೈನ್:
ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಗಾಯಕವಾಡ್ ಹಾಗೂ ಇಶಾನ್ ಭದ್ರ ಬುನಾದಿ ಹಾಕಿಕೊಟ್ಟರು. ಕಳೆದ 2 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್ ಇಂದಿನ ಪಂದ್ಯದಲ್ಲಿ ಆರಂಭದಿಂದಲೇ ಅತಿಥೇಯ ತಂಡದ ಬೌಲರ್‌ಗಳ ಬೆವರಿಳಿಸಿದರು. ಗಾಯಕ್ವಾಡ್ 34 ಎಸೆತಗಳಲ್ಲಿ 57 ರನ್ ಚಚ್ಚಿ 57 ರನ್ (7 ಬೌಂಡರಿ, 2 ಸಿಕ್ಸರ್) ಗಳಿಸಿ ತಮ್ಮ 35ನೇ ಎಸೆತದಲ್ಲಿ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು.
ಇದೇ ವೇಳೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಸಹ 35 ಎಸೆತಗಳಲ್ಲಿ 54 ರನ್ (2 ಸಿಕ್ಸರ್, 5 ಬೌಂಡರಿ) ಪೇರಿಸಿದರು. ಇಬ್ಬರ ಸಾಂಘಿಕ ಬ್ಯಾಟಿಂಗ್ ಪ್ರರ್ಶನದಿಂದ ಟೀಂ ಇಂಡಿಯಾ 180 ರನ್ ಗುರಿ ನೀಡಲು ಸಾಧ್ಯವಾಯಿತು.
ನಿಗದಿತ 20 ಓವರ್‌ಗಳಲ್ಲಿ ಟೀಂ ಇಂಡಿಯಾ 200 ರನ್‌ಗಳ ಗುರಿ ತಲುಪುವ ನಿರೀಕ್ಷೆಯಿತ್ತು. ಆದರೆ ನಂತರ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಶ್ರೇಯಸ್ ಅಯ್ಯರ್ 14 ರನ್, ರಿಷಭ್ ಪಂತ್ 6 ರನ್ ದಿನೇಶ್ ಕಾರ್ತಿಕ್ 6 ರನ್ ಗಳಿಸಿದರೆ ಅಕ್ಷರ್ ಪಟೇಲ್ ಸಹ 6 ರನ್‌ಗಳಿಸಿ ಅಜೇಯರಾಗುಳಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 31 ರನ್ ಸಿಡಿಸಿ ಅಜೇಯರಾಗುಳಿದರು.
ಚಾಹಲ್, ಪಟೇಲ್ ಬೌಲಿಂಗ್ ಕಮಾಲ್: ತಮ್ಮ ಬೌಲಿಂಗ್ ದಾಳಿಯಿಂದ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸುವಲ್ಲಿ ಯಜುವೇಂದ್ರ ಚಾಹಲ್ ಹಾಗೂ ಹರ್ಷಲ್ ಪಟೇಲ್ ಯಶಸ್ವಿಯಾದರು. ಚಾಹಲ್ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 3.1 ಓವರ್‌ನಲ್ಲಿ 25 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು. ಇದು ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಯ್ತು. ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಬೆಂಗಳೂರು: ಕ್ರಿಕೆಟ್ ಮೇಲಿನ ಅಭಿಮಾನದಿಂದ ನಗರದ ವ್ಯಕ್ತಿಯೊಬ್ಬರು 0.490 ಮಿಲಿ ಗ್ರಾಂ ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ್ದಾರೆ.
ಶ್ರೀರಾಮಪುರದ ಕುಶಲಕರ್ಮಿ ನಾಗರಾಜ್ ರೇವಣಕರ್ 0.490 ಮಿಲಿ ಗ್ರಾಂ ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ್ದಾರೆ. ಈ ಬಂಗಾರದ ಕಪ್ ಅನ್ನು 1.5 ಸೆಂಟಿಮೀಟರ್ ನಲ್ಲಿ ಸುಂದರವಾಗಿ ಸಿದ್ಧಪಡಿಸಿದ್ದಾರೆ. ಈ ಕುಸುರಿ ಕಲೆ ತಯಾರಿಸಲು 2 ಸಾವಿರ ರೂ. ವೆಚ್ಚ ತಗುಲಿದೆ.
ಭಾರತದ ಕ್ರಿಕೆಟ್ ಟೀಂ ವಿಶ್ವಕಪ್ ಗೆಲ್ಲಬೇಕು ಎನ್ನುವ ಅಭಿಲಾಷೆಯೊಂದಿಗೆ ಚಿನ್ನದಲ್ಲಿ ವಿಶ್ವಕಪ್ ಅರಳಿಸಿದ್ದೇನೆ. ಟೀಂ ಇಂಡಿಯಾ ಗೆದ್ದರೆ ನಾಯಕ ವಿರಾಟ್ ಕೊಹ್ಲಿಯವರಿಗೆ ಈ ಚಿನ್ನದ ವಿಶ್ವಕಪ್ ಪ್ರತಿಕೃತಿ ನೀಡುವ ಅಭಿಲಾಷೆಯನ್ನು ನಾಗರಾಜ್ ರೇವಣಕರ್ ಹೊಂದಿದ್ದಾರೆ.
ಈ ಬಗ್ಗೆ ಮಾತನಾಡಿದ ನಾಗರಾಜ್, ಈ ಬಾರಿ ಭಾರತ ತಂಡ ವಿಶ್ವಕಪ್ ಗೆದ್ದು ಬರಲಿ ಎಂದು ಈ ಕಲಾಕೃತಿ ಮಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. 0.490 ಮಿಲಿ ಗ್ರಾಂ ಇದ್ದು, 1.5 ಸೆ.ಮೀ ಇದೆ. ಭಾರತ ತಂಡ ವಿಶ್ವಕಪ್ ಗೆದ್ದ ಮೇಲೆ ನಮ್ಮ ತಂಡಕ್ಕೆ ಈ ಕಲಾಕೃತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಮೊದಲು ಅಂದರೆ ಭಾರತ- ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹಾಸನದ ಕ್ರಿಕೆಟ್ ಪ್ರೇಮಿಯೊಬ್ಬರು ಕೂಡ ತಮ್ಮ ಕೈಚಳಕದಿಂದ ಮೈಕ್ರೋ ವಿಶ್ವಕಪ್ ತಯಾರಿಸಿದ್ದರು. ಹಾಸನ ನಗರದ ಹೊಸಲೈನ್ ರಸ್ತೆ ನಿವಾಸಿ ನರೇಂದ್ರ ತಮ್ಮ ಕೈಚಳಕದಿಂದ ವಿಶ್ವಕಪ್‍ನ ತದ್ರೂಪಿ ಮೈಕ್ರೋ ವಿಶ್ವಕಪ್ ತಯಾರಿಸಿದ್ದರು. ಅಲ್ಲದೆ ಈ ಮೈಕ್ರೋ ವಿಶ್ವಕಪ್ ಅನ್ನು ತಂಡದ ನಾಯಕ ವಿರಾಟ್ ಕೋಹ್ಲಿಗೆ ನೀಡುತ್ತೇನೆ ಎಂದು ನರೇಂದ್ರ ಹೇಳಿದ್ದರು.
ಮೂಲತಃ ವಿಶ್ವಕರ್ಮರಾದ ನರೇಂದ್ರರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಈ ಹಿಂದೆಯೂ ಕೂಡ ಕಳೆದ ವಿಶ್ವಕಪ್‍ನಲ್ಲಿ ಬೆಳ್ಳಿಯ ವಿಶ್ವಕಪ್ ಮಾಡಿದ್ದ ನರೇಂದ್ರ ಅವರು ಈ ಬಾರಿ ಚಿನ್ನದ ಮೈಕ್ರೋ ವಿಶ್ವಕಪ್ ತಮ್ಮ ಕೈಯಾರೆ ಮಾಡಿದ್ದು, ಅತೀ ಸಣ್ಣ ಕರಕುಶಲ ಕೆಲಸ ಮಾಡಿರುವ ನರೇಂದ್ರರವರ ಈ ಕೆಲಸಕ್ಕೆ ಪತ್ನಿಯ ಶಹಬ್ಬಾಸ್‍ಗಿರಿ ಕೂಡ ಸಿಕ್ಕಿತ್ತು.