– ಜೈಸ್ವಾಲ್ ಅಮೋಘ ಶತಕ; ಆಕಾಶ್, ಜಡೇಜಾ, ವಾಷಿಂಗ್ಟನ್ ಫಿಫ್ಟಿ ಆಟ
ಲಂಡನ್: ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನ 3ನೇ ದಿನದಾಟದಂದು ಯಶಸ್ವಿ ಜೈಸ್ವಾಲ್ ಅಮೋಘ ಶತಕ, ಆಕಾಶ್, ಜಡೇಜಾ, ವಾಷಿಂಗ್ಟನ್ ಆಕರ್ಷಕ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾವು ಇಂಗ್ಲೆಂಡ್ ಗೆಲುವಿಗೆ ದೊಡ್ಡ ಮೊತ್ತದ ಸವಾಲನ್ನು ಒಡ್ಡಿದೆ.
ಭಾರತವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಿದ್ದು, ಇಂಗ್ಲೆಂಡ್‌ಗೆ 374 ರನ್‌ಗಳ ಗುರಿಯನ್ನು ನೀಡಿದೆ. ಹೆಡಿಂಗ್ಲಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಮತ್ತೊಂದು ಶತಕ ಗಳಿಸಿದ್ದಾರೆ. 118 ರನ್ ಗಳಿಸಿದ ಜೈಸ್ವಾಲ್, ಸರಣಿಯಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದ್ದಾರೆ.
ಜೈಸ್ವಾಲ್‌ಗೆ ಸಾಥ್ ನೀಡಿದ ಆಕಾಶ್ ದೀಪ್ ಅರ್ಧಶತಕ ಗಳಿಸಿ ಗಮನ ಸೆಳೆದರು. ಈ ಜೋಡಿ 3ನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟದ ಕೊಡುಗೆ ನೀಡಿತು. ಭಾರತಕ್ಕೆ ಉತ್ತಮ ರನ್‌ಗಳ ಅಡಿಪಾಯ ಹಾಕಿಕೊಡುವಲ್ಲಿ ಇಬ್ಬರು ಪ್ರಮುಖ ಪಾತ್ರ ವಹಿಸಿದರು.
2ನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ (56) ಮತ್ತು ವಾಷಿಂಗ್ಟನ್ ಸುಂದರ್ (53) ಅರ್ಧಶತಕ ಗಳಿಸಿ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡುವಲ್ಲಿ ನೆರವಾದರು. ಜಡೇಜಾ ತಾಳ್ಮೆಯ ಆಟವಾಡಿದರೆ, ಸುಂದರ್ ಆಕ್ರಮಣಕಾರಿಯಾಗಿ ಆಡಿದರು.
2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 396 ರನ್ ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋಶ್ ಟಂಗ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ 5 ವಿಕೆಟ್ ಪಡೆದರು. ಗಸ್ ಅಟ್ಕಿನ್ಸನ್ 3 ಹಾಗೂ ಜೇಮೀ ಓವರ್ಟನ್ 2 ವಿಕೆಟ್ ಕಿತ್ತರು.
ವಿಶಾಖಪಟ್ಟಣಂ: ಇಂಗ್ಲೆಂಡ್ (India-England 2nd Test) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟರ್ ಶುಭಮನ್ ಗಿಲ್ (Shubman Gill) ಅವರ ಅಮೋಘ ಶತಕದಾಟದೊಂದಿಗೆ ಭಾರತ ತಂಡವು 78.3 ಓವರ್‌ಗೆ 255 ರನ್ ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಗೆಲುವಿಗೆ 399 ರನ್‌ಗಳ ಗುರಿ ನೀಡಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ 255 ರನ್ ಗಳಿಸಿತು. 28/0 ಇರುವಾಗಲೇ ರೋಹಿತ್ ಶರ್ಮಾ (13) ಮತ್ತು ಯಶಸ್ವಿ ಜೈಸ್ವಾಲ್ (17) ಎರಡು ಆರಂಭಿಕ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದಲೂ ಕೊಹ್ಲಿ ಔಟ್?
ಈ ವೇಳೆ ಶುಭಮನ್ ಗಿಲ್ ತಂಡದ ಪರ ಲಯ ಕಾಯ್ದುಕೊಂಡು, 104 ರನ್ (147 ಬಾಲ್, 11 ಫೋರ್, 2 ಸಿಕ್ಸರ್) ಗಳಿಸಿದರು. ಅಕ್ಷರ್ ಪಟೇಲ್ ಕೂಡ 45 ರನ್ ಗಳಿಸಿ ಅರ್ಧಶತಕ ವಂಚಿತರಾದರು.
ಮುಂಬೈ: ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ (India-England 3rd Test) ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯ್ಕೆದಾರರಿಗೆ ಕೊಹ್ಲಿ ಲಭ್ಯತೆಯ ಬಗ್ಗೆ ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ. ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಹಿಂದೆ ಸರಿದಿದ್ದಾರೆ ಎಂದು ಬಿಸಿಸಿಐ ಈ ಹಿಂದೆ ಪ್ರಕಟಿಸಿತ್ತು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಂದ ಹಿಂತೆಗೆದುಕೊಳ್ಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದರು.
ಈ ಸಮಯದಲ್ಲಿ ಕೊಹ್ಲಿಯ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ಬಿಸಿಸಿಐ ವಿನಂತಿಸಿತ್ತು. ಕೊಹ್ಲಿ ಅವರ ವೈಯಕ್ತಿಕ ಕಾರಣಗಳ ಬಗ್ಗೆ ಊಹಾಪೋಹ ಸುದ್ದಿ ಹರಡಬೇಡಿ. ಟೆಸ್ಟ್ ಸರಣಿಯಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಭಾರತ ಕ್ರಿಕೆಟ್ ತಂಡವನ್ನು ಎಂದು ಬಿಸಿಸಿಐ ವಿನಂತಿ ಮಾಡಿತ್ತು. ಇದನ್ನೂ ಓದಿ: 6 ತಿಂಗಳಿಂದ ಪಾಕ್‌ನ ಹಾಕಿ ಆಟಗಾರರಿಗಿಲ್ಲ ಸಂಬಳ – ಮ್ಯಾನೇಜ್‌ಮೆಂಟ್‌ನೊಂದಿಗೆ ಆಟಗಾರರ ಸಂಘರ್ಷ
ಇಂಗ್ಲೆಂಡ್ ವಿರುದ್ಧದ ಭಾರತದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಬಲಗೈ ಬ್ಯಾಟರ್ ರಜತ್ ಪಾಟಿದಾರ್ ಅವರನ್ನು ಕಣಕ್ಕಿಳಿಸಲಾಗಿತ್ತು. ಪಾಟಿದಾರ್ ಕಳೆದ ವರ್ಷ ಡಿಸೆಂಬರ್ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ 3 ನೇ ODI ಪಂದ್ಯದಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯ ಆಡಿದ್ದರು.
ಹೈದರಾಬಾದ್: ಗುರುವಾರ ಹೈದರಾಬಾದ್‌ನಲ್ಲಿ (Hyderabad) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ (R.Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ.
138 ಟೆಸ್ಟ್ ಪಂದ್ಯಗಳಲ್ಲಿ 1,039 ವಿಕೆಟ್‌ಗಳನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಕಬಳಿಸಿದೆ. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಈ ಜೋಡಿ ಬರೆದಿದೆ. ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ 81 ಟೆಸ್ಟ್‌ಗಳಲ್ಲಿ 643 ವಿಕೆಟ್‌ಗಳನ್ನು ಪಡೆದು ದಾಖಲೆಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs ENG 1st Test) ಮೊದಲ ಇನ್ನಿಂಗ್ಸ್‌ನ 64.3 ಓವರ್‌ಗಳಲ್ಲಿ 246 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಇದನ್ನೂ ಓದಿ: ಬಾಕ್ಸಿಂಗ್‌ಗೆ ಮೇರಿಕೋಮ್ ನಿವೃತ್ತಿ ಘೋಷಣೆ
ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲಿಂಗ್ ಜೋಡಿ
ಅಶ್ವಿನ್/ಜಡೇಜಾ – 504 ವಿಕೆಟ್
ಕುಂಬ್ಳೆ/ಹರ್ಭಜನ್ – 501
ಜಹೀರ್/ ಹರ್ಭಜನ್ – 474
ಅಶ್ವಿನ್/ ಉಮೇಶ್ – 431
ಕುಂಬ್ಳೆ/ ಶ್ರೀನಾಥ್ – 412
ನವದೆಹಲಿ: ಭಾನುವಾರ ಇಂಗ್ಲೆಂಡ್ (England) ವಿರುದ್ಧದ ಪಂದ್ಯದಲ್ಲಿ ಭಾರತ (India) ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli) ಡಕೌಟ್ ಆಗಿದ್ದನ್ನು ಲೇವಡಿ ಮಾಡಲು ಹೋಗಿ ಇಂಗ್ಲೆಂಡ್ ಅಭಿಮಾನಿಗಳು ಪೇಚಿಗೆ ಸಿಲುಕಿದ್ದಾರೆ. ಇಂಗ್ಲೆಂಡ್ ಅಭಿಮಾನಿಗಳಿಗೆ ಎರಡು ಡಕ್ (ಬಾತುಕೋಳಿ)ಗಳನ್ನ ಗಿಫ್ಟ್ ನೀಡಿ ಭಾರತದ ಅಭಿಮಾನಿಗಳು ಕಾಲೆಳೆದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು?
— England’s Barmy Army ???????????????????????????????? (@TheBarmyArmy) October 29, 2023
ಭಾನುವಾರ ಲಕ್ನೋದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಭರವಸೆ ಆಟಗಾರನಾದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 9 ಬಾಲ್‌ಗಳನ್ನು ಆಡಿದ ಕೊಹ್ಲಿ ಒಂದು ರನ್ ಕೂಡ ಕಲೆಹಾಕಲಾಗದೇ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದರು. ಕೊಹ್ಲಿ ಡಕೌಟ್ ಅನ್ನು ಇಂಗ್ಲೆಂಡ್ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ
ಇಂಗ್ಲೆಂಡ್ಸ್ ಬರ್ಮಿ ಆರ್ಮಿ ತನ್ನ ಎಕ್ಸ್ ಖಾತೆಯಲ್ಲಿ, ನೀರಿನಲ್ಲಿ ಈಜುತ್ತಿದ್ದ ಎರಡು ಬಾತುಕೋಳಿಗಳ ಪೈಕಿ ಒಂದರ ತಲೆಗೆ ವಿರಾಟ್ ಕೊಹ್ಲಿ ಚಿತ್ರವನ್ನು ಹಾಕಿದ್ದ ಎಡಿಟ್ ಫೋಟೊ ಹಾಕಿ ಪೋಸ್ಟ್ ಮಾಡಿತ್ತು. ಆ ಫೋಟೊಗೆ ‘ಬೆಳಗ್ಗೆ ವಾಕ್‌ಗೆ ಹೊರಟಾಗ’ ಎಂದು ಶೀರ್ಷಿಕೆ ನೀಡಿತ್ತು. ಇದಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಭಾರತದ ಫ್ಯಾನ್ಸ್, ಇಂಗ್ಲೆಂಡ್ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ್ದಾರೆ.
ಅದೇ ಬಾತುಕೋಳಿಗಳ ಫೋಟೊಗೆ ಇಂಗ್ಲೆಂಡ್ ಆಟಗಾರರಾದ ಜೋ ರೂಟ್ (Joe Root) ಮತ್ತು ಬೆನ್ ಸ್ಟೋಕ್ಸ್ (Ben Stokes) ತಲೆ ಸೇರಿಸಿ ಇಂಗ್ಲೆಂಡ್ ಫ್ಯಾನ್ಸ್‌ಗೆ ದಿ ಭಾರತ್ ಆರ್ಮಿ ಕೌಂಟರ್ ಕೊಟ್ಟಿದೆ. ಜೋ ರೂಟ್ ಇರುವ ಫೋಟೊಗೆ ‘ಸಂಜೆ ವೇಳೆ ವಾಕ್‌ಗೆ ಹೊರಟಾಗ’ ಎಂದು ಶೀರ್ಷಿಕೆ ಕೊಟ್ಟಿದೆ. ಅಲ್ಲದೇ ಬೆನ್ ಸ್ಟೋಕ್ಸ್ ಇರುವ ಫೋಟೊಗೆ ‘ಎಡಿಟ್ ಮಾಡಲು ನಮಗೆ ಸ್ವಲ್ಪ ಸಮಯ ಕೊಡಿ’ ಎಂದು ಶೀರ್ಷಿಕೆ ಕೊಟ್ಟು ಠಕ್ಕರ್ ಕೊಟ್ಟಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಅವರು ತಂಡದ ಪರ 87 ರನ್ ಗಳಿಸಿದ್ದರು. 230 ರನ್‌ಗಳ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ 129 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಭಾರತದಲ್ಲಿ ಐಸಿಸಿ ವಿಶ್ವಕಪ್-2023 (World Cup 2023) ಟೂರ್ನಿ ನಡೆಯುತ್ತಿದ್ದು, ಅ.29 ರಂದು ಲಕ್ನೋದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಭಾರತ (India-England) ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರ ಲಕ್ನೋದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
2023 ರ ವಿಶ್ವಕಪ್‌ನಲ್ಲಿ (World Cup 2019) ರೋಹಿತ್ ಪಡೆ ಐದಕ್ಕೆ ಐದೂ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸೆಮಿಫೈನಲ್ ಹಾದಿ ಸುಗಮಗೊಳಿಸಲು ಇಂಡಿಯಾ ಹವಣಿಸುತ್ತಿದೆ. ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್, ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸುವ ಕನಸು ಹೊತ್ತಿದೆ. ಇದನ್ನೂ ಓದಿ: World Cup 2023: ಅಂದು ರೋಹಿತ್ ಶರ್ಮಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದು ಇದೇ ಕಾರಣಕ್ಕೆ
2019 ರ ಆವೃತ್ತಿಯಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಕೊನೆ ಬಾರಿಗೆ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಸೋಲಿನ ನೆರಳಿನಲ್ಲೇ ಇಂಗ್ಲೆಂಡ್ ಭಾರತದೊಂದಿಗೆ ಕಣಕ್ಕಿಳಿದಿತ್ತು. ಆತಿಥೇಯರು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿತ್ತು. ಆದರೆ ಭಾರತದ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿತು. ಇದರಿಂದ ಆಂಗ್ಲರಿಗೆ ಅವಕಾಶ ಸುಧಾರಿಸಿತು. ಇಂಗ್ಲೆಂಡ್ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ಸೆಮಿ-ಫೈನಲ್‌ಗೆ ಮುನ್ನಡೆಯಿತು.
2019 ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿಯ ಕೊನೆ ಪಂದ್ಯ ಕುತೂಹಲ ಮೂಡಿಸಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆಂಗ್ಲ ಪಡೆಯ ಜೇಸನ್ ರಾಯ್ ಮತ್ತು ಜಾನಿ ಬೈರ್‌ಸ್ಟೋವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆ ಮೂಲಕ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 337 ಅಸಾಧಾರಣ ಮೊತ್ತ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ 31 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಭಾರತದ ಇನ್ನಿಂಗ್ಸ್ 306/5 ಕ್ಕೆ ಕೊನೆಗೊಂಡಿತು. ಇದನ್ನೂ ಓದಿ: 20 ವರ್ಷಗಳಿಂದ ಆಂಗ್ಲರ ವಿರುದ್ಧ ಗೆದ್ದೇ ಇಲ್ಲ ಭಾರತ – ಸೇಡು ತೀರಿಸಿಕೊಳ್ಳಲು ಸಮರಾಭ್ಯಾಸ?
ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೈರ್‌ಸ್ಟೋವ್ ಸೇರಿದಂತೆ ಆಂಗ್ಲ ಬ್ಯಾಟ್ಸ್‌ಮನ್‌ಗಳು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಜೊತೆಗೆ ಭಾರತದ ಬೌಲರ್‌ಗಳನ್ನು ದಂಡಿಸಿದರು. ಸ್ಟೋಕ್ಸ್ ಕೇವಲ 54 ಎಸೆತಗಳಲ್ಲಿ ಆಕರ್ಷಕ 79 ರನ್ ಗಳಿಸಿದರು. ಭಾರತದ ಪರವಾಗಿ ರೋಹಿತ್ ಶರ್ಮಾ ಟೂರ್ನಿಯ ಮೂರನೇ ಶತಕ (109 ಎಸೆತ, 15 ಬೌಂಡರಿ) ಮತ್ತು ವಿರಾಟ್ ಕೊಹ್ಲಿ ಅವರ ಸತತ ಐದನೇ ಅರ್ಧಶತಕ (76 ಎಸೆತ, 7 ಬೌಂಡರಿ) ಹೊರತಾಗಿಯೂ ಇಂಗ್ಲೆಂಡ್ ತಂಡದ ಮೊತ್ತ ಭಾರತಕ್ಕೆ ನಿಲುಕದ್ದು ಎಂದು ಸಾಬೀತಾಯಿತು.
ಭಾರತದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ಎಂ.ಎಸ್. ಧೋನಿ ಅವರು ಅಂತಿಮ ಓವರ್‌ಗಳಲ್ಲಿ ರನ್ ವೇಗ ಹೆಚ್ಚಿಸಲು ಅಸಮರ್ಥರಾಗಿ ಟೀಕೆ ಎದುರಿಸಬೇಕಾಯಿತು. ಸೋಲಿನ ಹೊರತಾಗಿಯೂ, ಭಾರತವು ವಿಶ್ವಕಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಬಲ ದಾಖಲೆಯನ್ನು ಹೊಂದಿದೆ. ಈ ಹಿಂದೆ ಹಲವಾರು ಬಾರಿ ಗೆದ್ದಿದೆ. 1983 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಗಮನಾರ್ಹ ಗೆಲುವನ್ನೂ ದಾಖಲಿಸಿತ್ತು. ಇದನ್ನೂ ಓದಿ: ಪಾಕ್ ಆಟಗಾರರಿಗೆ ಐದು ತಿಂಗಳಿಂದ ಸಂಬಳ ಕೊಟ್ಟಿಲ್ಲ: ಮಾಜಿ ನಾಯಕ ಲತೀಫ್