Tag: ಭಾರತ್

  • ಮೇ 23ಕ್ಕೆ ನನ್ನ ಮದ್ವೆ ಬಗ್ಗೆ ಹೇಳುತ್ತೇನೆ: ಸಲ್ಮಾನ್ ಖಾನ್

    ಮೇ 23ಕ್ಕೆ ನನ್ನ ಮದ್ವೆ ಬಗ್ಗೆ ಹೇಳುತ್ತೇನೆ: ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಮೇ 23ರಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ಹೇಳುವುದಾಗಿ ತಮಾಷೆ ಮಾಡಿದ್ದಾರೆ.

    ಸಲ್ಮಾನ್ ಖಾನ್ ತಮ್ಮ ಮುಂದಿನ ‘ಭಾರತ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಪ್ರತಿಕೆಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಸಂದರ್ಶಕ ನಿಮ್ಮ ಮದುವೆ ಬಗ್ಗೆ ಇಡೀ ರಾಷ್ಟ್ರ ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

    ಈ ವೇಳೆ ಸಲ್ಮಾನ್, “ಹೌದು. ನಾನು ಮೇ 23ಕ್ಕೆ ನನ್ನ ಮದುವೆ ಬಗ್ಗೆ ಹೇಳೋಣ ಎಂದು ಯೋಚಿಸುತ್ತಿದ್ದೇನೆ” ಎಂದು ನಗುತ್ತಾ ಉತ್ತರಿಸಿದ್ದಾರೆ. ಮೇ 23ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬರಲಿದೆ. ಜನರು ಫಲಿತಾಂಶದ ಬದಲು ತಮ್ಮ ಮದುವೆ ಬಗ್ಗೆ ಎಷ್ಟು ಆಸಕ್ತಿ ಹೊಂದಿದ್ದಾರೆಂದು ನೋಡಲು ಸಲ್ಮಾನ್ ಈ ರೀತಿ ಉತ್ತರಿಸಿದ್ದಾರೆ.

    ಇದಾದ ಬಳಿಕ ಸಂದರ್ಶಕ ನಿಮಗೆ ಮಕ್ಕಳು ಎಂದರೆ ಇಷ್ಟ. ಮಕ್ಕಳು ಬೇಡವಾ ಎಂದು ಪ್ರಶ್ನಿಸಿದ್ದಾರೆ. ಆಗ ಸಲ್ಮಾನ್, “ನನಗೆ ಮಕ್ಕಳು ಬೇಕು. ಆದರೆ ಮಕ್ಕಳು ಜೊತೆ ತಾಯಿ ಕೂಡ ಬರುತ್ತಾರೆ. ನನಗೆ ತಾಯಿ ಬೇಡ. ಆದರೆ ಮಕ್ಕಳಿಗೆ ತಾಯಿಯ ಅವಶ್ಯಕತೆ ಇದೆ. ಮಕ್ಕಳನ್ನು ನೋಡಿಕೊಳ್ಳಲು ಇಡೀ ಕುಟುಂಬವೇ ಇದೆ” ಎಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಸರೋಗಸಿ ಮೂಲಕ ಮಗು ಪಡೆಯಲಿದ್ದಾರೆ ಎಂಬ ಸುದ್ದಿ ಬಾಲಿವುಡ್‍ನಲ್ಲಿ ಹರಿದಾಡುತ್ತಿತ್ತು. ಸಲ್ಮಾನ್ ಮುಂದಿನ ದಿನಗಳಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದು ತಂದೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸಲ್ಮಾನ್ ಯಾವುದೇ ಅಧಿಕೃತವಾದ ಹೇಳಿಕೆ ನೀಡಿಲ್ಲ.

  • ಭಾಯ್‍ಜಾನ್ ಎಂದು ಕತ್ರಿನಾ ಕರೆಯೋದು ಬೇಡ: ಸಲ್ಮಾನ್ ಖಾನ್

    ಭಾಯ್‍ಜಾನ್ ಎಂದು ಕತ್ರಿನಾ ಕರೆಯೋದು ಬೇಡ: ಸಲ್ಮಾನ್ ಖಾನ್

    ಮುಂಬೈ: ಕತ್ರಿನಾ ಕೈಫ್ ನನಗೆ ಭಾಯ್‍ಜಾನ್ ಬದಲು ‘ಮೇರಾ ಜಾನ್’ ಎಂದು ಕರೆಯಲಿ ಎಂದು ದಬಾಂಗ್ ಸಲ್ಮಾನ್ ಖಾನ್ ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

    ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ತಮ್ಮ ಮುಂದಿನ ‘ಭಾರತ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಇಬ್ಬರು ಐಪಿಎಲ್ ಫೈನಲ್‍ಗೆ ಹೋಗಿದ್ದರು. ಬಳಿಕ ಇಬ್ಬರು ತಮ್ಮ ಚಿತ್ರತಂಡದ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.

    ಕಾರ್ಯಕ್ರಮದಲ್ಲಿ ಮಾಧ್ಯಮದವರು ಕತ್ರಿನಾ ಅವರಿಗೆ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರಶ್ನಿಸಿದ್ದರು. ಬಳಿಕ ನೀವು ಸಲ್ಮಾನ್ ಖಾನ್‍ಗೆ ಭಾಯ್‍ಜಾನ್ ಎಂದು ಕರೆಯುತ್ತೀರಾ ಎಂದು ಕೇಳಿದ್ದರು. ವರದಿಗಾರರ ಪ್ರಶ್ನೆ ಕೇಳಿದ ಸಲ್ಮಾನ್ ಖಾನ್, ‘ನಾನು ನಿಮಗೆ ಭಾಯ್‍ಜಾನ್ ಅವರಿಗೆ ಅಲ್ಲ’ ಎಂದು ಉತ್ತರಿಸಿದ್ದರು.

    ಸಲ್ಮಾನ್ ಖಾನ್ ಈ ರೀತಿ ಹೇಳುತ್ತಿದ್ದಂತೆ ಕತ್ರಿನಾ ನಗಲು ಶುರು ಮಾಡಿದ್ದಾರೆ. ಇದಾದ ಬಳಿಕ ಮಾಧ್ಯಮದವರು ‘ನೀವು ಸಲ್ಮಾನ್ ಖಾನ್ ಅವರನ್ನು ಭಾಯ್‍ಜಾನ್ ಎಂದು ಕರೆಯಲು ಇಷ್ಟಪಡುವುದಿಲ್ಲ ಎಂದರೆ ಮತ್ತೆ ಯಾವ ಜಾನ್ ಎಂದು ಕರೆಯುತ್ತೀರಾ’ ಎಂದು ಕ್ರತಿನಾ ಅವರಿಗೆ ಪ್ರಶ್ನಿಸಿದ್ದಾರೆ.

    ಮಾಧ್ಯಮದವರು ಕತ್ರಿನಾರನ್ನು ಪ್ರಶ್ನಿಸುತ್ತಿದ್ದಂತೆ ಸಲ್ಮಾನ್ ಖಾನ್ ‘ಮೇರಾ ಜಾನ್'(ನನ್ನ ಜೀವ) ಎಂದು ಕರೆಯಲಿ ಎಂದು ಹೇಳಿದ್ದರು. ಸಲ್ಮಾನ್ ಅವರ ಈ ಮಾತು ಕೇಳಿದ ನಂತರ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಈಗಲೂ ಕತ್ರಿನಾ ಮೇಲೆ ಪ್ರೀತಿ ಇದೆ ಎಂದು ಭಾವಿಸುತ್ತಿದ್ದಾರೆ.

  • ಸಲ್ಮಾನ್ ಅಭಿನಯದ ಭಾರತ್ ಟೀಸರ್ ಔಟ್

    ಸಲ್ಮಾನ್ ಅಭಿನಯದ ಭಾರತ್ ಟೀಸರ್ ಔಟ್

    ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಟೀಸರ್ ಅನ್ನು ಸ್ವಾಂತತ್ರ್ಯೋತ್ಸವ ದಿನದಂದೇ ಬಿಡುಗಡೆ ಮಾಡಲಾಗಿದೆ.

    ಭಾರತ್ ಸಿನಿಮಾವು ಬಾಲಿವುಡ್‍ನ ಖ್ಯಾತ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್‍ರವರು ಮಾತೃ ದೇಶವನ್ನು ಹುಡುಕುತ್ತಾ ಪ್ರಯಾಣಿಸುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ್ ಸಿನಿಮಾವು 2019ರ ಈದ್ ನಂದು ಬಿಡುಗಡೆಗೊಳ್ಳಲಿದೆ ಎಂದು ತಿಳಿದು ಬಂದಿದೆ.

    ಖುದ್ದು ಸಲ್ಮಾನ್ ಖಾನ್‍ರವರು ಇಂದು ಭಾರತ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿ, ತಮ್ಮ ಟ್ವಿಟ್ಟರ್ ನಲ್ಲಿ, ಕೆಲವು ಸಂಬಂಧಗಳು ರಕ್ತದಿಂದ ಬಂದಿದ್ದರೆ, ಇನ್ನೂ ಕೆಲವು ಮಣ್ಣಿನಿಂದ ಬಂದಿರುತ್ತವೆ, ಆದರೆ ನಾನೂ ಎರಡನ್ನೂ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಭಾರತ್ ಸಿನಿಮಾದಲ್ಲಿ, ಮಾಜಿ ವಿಶ್ವಸುಂದರಿ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಿಶಾ ಪಟನಿ, ಸುನಿಲ್ ಗ್ರೋವರ್, ಆಸಿಫ್ ಶೇಕ್ ಮತ್ತು ಟಬೂ ಸಹ ಅಭಿನಯಿಸಿದ್ದಾರೆ. ಚಿತ್ರ ದಕ್ಷಿಣಯ ಕೊರಿಯಾದ ಒಡೇ ಟು ಮೈ ಫಾದರ್ ಚಿತ್ರದ ರಿಮೇಕ್ ಆಗಿದೆ. ಚಿತ್ರದಲ್ಲಿ 1940 ರಲ್ಲಿ ಭಾರತ ವಿಭಜನೆಯಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು, 70ರ ದಶಕದ ಶೈಲಿಯಲ್ಲಿ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗಿದೆ.

    ಸಲ್ಮಾನ್ ಖಾನ್ ಜೊತೆ ಮೂರನೇ ಬಾರಿ ಜಾಫರ್ ಚಿತ್ರಕ್ಕೆ ಕೈಜೋಡಿಸಿದ್ದು, ಈ ಮೊದಲು ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದ ಸುಲ್ತಾನ್ ಹಾಗೂ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಅಭಿನಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಲ್ಮಾನ್‍ರನ್ನ ಕಂಡು ಕಾಣದಂತೆ ಎದುರಲ್ಲೆ ತಿರುಗಾಡಿದ ಜನರು-ವಿಡಿಯೋ ನೋಡಿ

    ಸಲ್ಮಾನ್‍ರನ್ನ ಕಂಡು ಕಾಣದಂತೆ ಎದುರಲ್ಲೆ ತಿರುಗಾಡಿದ ಜನರು-ವಿಡಿಯೋ ನೋಡಿ

    ದುಬೈ: ಸಾರ್ವಜನಿಕ ಸ್ಥಳಗಳಲ್ಲಿ ಸಿನಿಮಾ ತಾರೆಯರು ಸಿಕ್ಕರೆ ಜನರು ಸೆಲ್ಫಿಗಾಗಿ ನಟ/ನಟಿಯರಿಗೆ ಮುತ್ತಿಗೆ ಹಾಕೋದನ್ನು ನೋಡಿರುತ್ತವೆ. ಆದರೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ದುಬೈ ಮಾಲ್ ಗೆ ತೆರಳಿದ್ದು, ಅಲ್ಲಿಯ ಜನರು ಕಂಡು ಕಾಣದಂತೆ ತಿರುಗಾಡಿದ್ದಾರೆ.

    ಮಾಲ್ ಗೆ ಎಂಟ್ರಿ ನೀಡಿದ ಸಲ್ಮಾನ್ ಜೊತೆ ಇಬ್ಬರು ಬಾಡಿಗಾರ್ಡ್ ಗಳಿದ್ದರು. ಸಲ್ಮಾನ್ ಎದರು ಬರುತ್ತಿದ್ರೂ ಅಲ್ಲಿಯ ಜನರು ತಮ್ಮಷ್ಟಕ್ಕೆ ತಾವು ಹೋಗುತ್ತಿದ್ದರು. ಮಾಲ್ ನಲ್ಲಿಯ ಹೊರಾಂಗಣದ ಸೀಟ್‍ನಲ್ಲಿ ಕೆಲಕಾಲ ಕುಳಿತು ಸಲ್ಮಾನ್ ಮೊಬೈಲ್‍ನಲ್ಲಿ ಚಾಟ್ ಮಾಡಿದ್ದಾರೆ. ಆದ್ರೆ ದುಬೈನ ಜನರು ಸಲ್ಮಾನ್‍ರನ್ನ ಗುರುತಿಸದೇ ಹೊರಟು ಹೋಗಿದ್ದಾರೆ. ಈ ಎಲ್ಲ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ದುಬೈನಲ್ಲಿ ‘ಭಾರತ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸಲ್ಮಾನ್ ತಮ್ಮ ಬಿಡುವಿನ ವೇಳೆಯಲ್ಲಿ ಮಾಲ್ ಗೆ ಬಂದಿದ್ದರು. ಅಲಿ ಅಬ್ಬಾಸ್ ಜಾಫರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ, ದಿಶಾ ಪಟಾಣಿ, ಸುನಿಲ್ ಗ್ರೋವರ್ ಮತ್ತು ಆಶಿಫ್ ಶೇಖ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಭಾರತ್ 2019ಕ್ಕೆ ತೆರೆಕಾಣುವ ಸಾಧ್ಯತೆಗಳಿವೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.

    ಕೆಲವು ದಿನಗಳ ಹಿಂದೆ ಕತ್ರಿನಾ ಕೈಫ್‍ರನ್ನು ನೋಡಲು ವಿದೇಶದಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಸೈಫ್ ಅಲಿ ಖಾನ್ ಕುಟುಂಬದ ಜೊತೆಯಲ್ಲಿ ವಿದೇಶದಲ್ಲಿ ರಜೆಯ ದಿನಗಳನ್ನು ಕಳೆಯಲು ತೆರಳಿದ್ದಾಗಲೂ ಸ್ಥಳೀಯ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದರು.

    https://www.instagram.com/p/BlPYGvEne2c/?utm_source=ig_embed

  • ನನಗೆ ಹುಡುಗಿ ಸಿಕ್ಕಿಬಿಟ್ಳು- ಸಲ್ಮಾನ್ ಖಾನ್ ಟ್ವೀಟ್ ಒಂದೇ ಗಂಟೆಯಲ್ಲಿ ವೈರಲ್

    ನನಗೆ ಹುಡುಗಿ ಸಿಕ್ಕಿಬಿಟ್ಳು- ಸಲ್ಮಾನ್ ಖಾನ್ ಟ್ವೀಟ್ ಒಂದೇ ಗಂಟೆಯಲ್ಲಿ ವೈರಲ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆ ಬಾಲಿವುಡ್ ಅಂಗಳದಲ್ಲಿ ಬಹುಚರ್ಚಿತ ವಿಷಯ. ಸಲ್ಮಾನ್ ಯಾವಾಗ ಮದುವೆಯಾಗ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಈ ಹೊತ್ತಲ್ಲೇ ಸಲ್ಮಾನ್, ಮುಜೆ ಲಡ್ಕಿ ಮಿಲ್ ಗಯಿ (ನನಗೆ ಹುಡುಗಿ ಸಿಕ್ಕಿಬಿಟ್ಳು) ಎಂದು 1 ಗಂಟೆ ಹಿಂದಷ್ಟೇ ಟ್ವೀಟ್ ಮಾಡಿದ್ದು, ಈಗಾಗಲೇ ವೈರಲ್ ಆಗಿದೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.

    ಆದ್ರೆ ಸಲ್ಮಾನ್ ಖಾನ್ ಮಾತನಾಡುತ್ತಿರುವುದು ಯಾವ ಹುಡುಗಿ ಬಗ್ಗೆ ಅನ್ನೋದು ಸದ್ಯದ ಕುತೂಹಲ. ಅವರು ತಮ್ಮ ಮುಂದಿನ ಸಿನಿಮಾ ಭಾರತ್ ಚಿತ್ರಕ್ಕೆ ಹೀರೋಯಿನ್ ಸಿಕ್ಕಿದ್ದಾಳೆಂದು ಹೇಳುತ್ತಿರಬಹುದು.

    ದೇಶಭಕ್ತಿಯ ಚಿತ್ರವಾದ ಭಾರತ್ 2019ರ ಈದ್‍ಗೆ ಬಿಡುಗಡೆಯಾಗಬೇಕಿದ್ದು, ಅಲಿ ಅಬ್ಬಾಸ್ ಝಫರ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರಕ್ಕೆ ನಾಯಕಿ ಅಂತಿಮವಾಗಿರಲಿಲ್ಲ. ಆದರೂ ಕತ್ರೀನಾ ಕೈಫ್ ಅವರನ್ನ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಅಂತ ವದಂತಿಗಳು ಹರಿದಾಡ್ತಿದೆ.

    ಸಲ್ಮಾನ್ ಖಾನ್ ಮುಂಬೈನಲ್ಲಿ ರೇಸ್ 3 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರವನ್ನ ರೆಮೋ ಡಿಸೋಜಾ ನಿರ್ದೇಶಿಸುತ್ತಿದ್ದು, ಜಾಕ್ವೆಲೀನ್ ಫರ್ನಾಂಡಿಸ್, ಬಾಬಿ ಡಿಯೋಲ್, ಡೈಸಿ ಶಾಹ್, ಅನಿಲ್ ಕಪೂರ್ ಮುಂತಾದವರು ನಟಿಸಿದ್ದಾರೆ. ಇದೇ ವರ್ಷ ಈದ್‍ಗೆ ರೇಸ್-3 ಚಿತ್ರ ಬಿಡುಗಡೆಯಾಗಲಿದೆ.