Tag: ಭಾರತ್ ಮಾತಾ ಕೀ ಜೈ

  • ಭಾರತ್ ಮಾತಾ ಕೀ ಜೈ, ವಂದೇ ಮಾತರಂ: ಘೋಷಣೆ ಕೂಗಿದ ವಿದ್ಯಾರ್ಥಿಗಳು

    ಭಾರತ್ ಮಾತಾ ಕೀ ಜೈ, ವಂದೇ ಮಾತರಂ: ಘೋಷಣೆ ಕೂಗಿದ ವಿದ್ಯಾರ್ಥಿಗಳು

    ನವದೆಹಲಿ: ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 41 ಕರ್ನಾಟಕದ ವಿದ್ಯಾರ್ಥಿಗಳು ರೊಮೆನಿಯಾನಿಂದ ತಾಯ್ನಾಡಿಗೆ ಮರಳಿ ಬರುತ್ತಿರುವ ಖುಷಿಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿ ದೇಶಾಭಿಮಾನ ಮೆರೆದಿದ್ದಾರೆ.

    ನಗರದ ಶಶಾಂಕ್ ಹಾಗೂ ವಿವೇಕ್ ತಾಯ್ನಾಡಿಗೆ ಆಗಮಿಸಿದ್ದು ಅವರ ಪೋಷಕರಲ್ಲಿದ್ದ ಆತಂಕ ದೂರವಾಗಿದೆ. ನಿನ್ನೆ ಯುದ್ಧಭೂಮಿ ಖಾರ್ಕಿವ್‍ನ ಪಿಶಾಚಿನ್ ಎಂಬ ಸ್ಥಳದಿಂದ ಸತತ 45 ಗಂಟೆಗಳ ಕಾಲ ಪ್ರಯಾಣ ಮಾಡಿ ಕನ್ನಡಿಗರು ರೊಮೆನಿಯಾ ತಲುಪಿದ್ದರು. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

    ಸದ್ಯ ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿ ವಿಶ್ರಾಂತಿ ಪಡೆಯಲಿದ್ದು ಕೊರೊನಾ ಟೆಸ್ಟ್ ರಿಪೋರ್ಟ್ ಬಂದ ಬಳಿಕ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆ ಕಡೆ ಪ್ರಯಾಣ ಮಾಡಲಿದ್ದಾರೆ. ಶಶಾಂಕ್ ಮತ್ತು ವಿವೇಕ್ ಇಂದು ಸಂಜೆ ದೆಹಲಿಯಿಂದ ಹೈದರಾಬಾದ್ ಅಥವಾ ಬೆಂಗಳೂರಿಗೆ ಬರುವ ಸಾದ್ಯತೆ ಇದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

  • ‘ಭಾರತ್ ಮಾತಾ ಕೀ ಜೈ’ ಘೋಷಣೆ ದುರ್ಬಳಕೆಯಾಗುತ್ತಿದೆ- ಮನಮೋಹನ್ ಸಿಂಗ್ ಕಳವಳ

    ‘ಭಾರತ್ ಮಾತಾ ಕೀ ಜೈ’ ಘೋಷಣೆ ದುರ್ಬಳಕೆಯಾಗುತ್ತಿದೆ- ಮನಮೋಹನ್ ಸಿಂಗ್ ಕಳವಳ

    ನವದೆಹಲಿ: ದೇಶದ ಜನರನ್ನು ಭಾವನಾತ್ಮಕ ಒಂದುಗೂಡಿಸಿದ್ದ, ದೇಶ ನಿರ್ಮಿಸುವ ಸಲುವಾಗಿ ಬಳಸಲಾಗುತ್ತಿದ್ದ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಘೋಷಣೆ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಇಂಡಿಯಾ ಹೆಬಿಟೆಟ್ ಸೆಂಟರ್‍ನಲ್ಲಿ ಪ್ರೊ. ಕೆ.ಈ.ರಾಧಾಕೃಷ್ಣ ಅನುವಾದಿಸಿದ ‘ಯಾರು ಭಾರತ ಮಾತೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತಿಹಾಸ ಓದದವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನೆಹರು ಒಬ್ಬ ಇತಿಹಾಸಕಾರರು. ನವ ಭಾರತ ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದು ಎಂದರು.

    ವಿಶ್ವ ವೇದಿಕೆಗಳಲ್ಲಿ ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿರುವುದರ ಹಿಂದೆ ಮತ್ತು ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ ಎಂದು ಮನಮೋಹನ್ ಸಿಂಗ್ ಬಣ್ಣಿಸಿದರು.

    ಪ್ರಜಾಪ್ರಭುತ್ವ ಅಳವಡಿಸಿಕೊಂಡಿದ್ದ ಕಾಲದಲ್ಲಿ ಅತ್ಯಂತ ಕಷ್ಟದ ದಿನಗಳಲ್ಲಿ, ಇನ್ನಷ್ಟೇ ದೇಶ ನಿರ್ಮಾಣವಾಗಬೇಕಿದ್ದ ಕಾಲಘಟ್ಟದಲ್ಲಿ ನೆಹರು ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳೊಂದಿಗೆ ಈ ದೇಶವನ್ನು ಮುನ್ನಡೆಸಿದ್ದಾರೆ. ನವ ಭಾರತದ ನಿರ್ಮಾಣಕ್ಕಾಗಿ ನೆಹರು ಹಲವು ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ ಅವರು ಅಂದುಕೊಂಡ ದೇಶವಾಗಿ ಇಂದು ಭಾರತ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಲಕ್ಷಾಂತರ ಜನರು, ನಾಗರಿಕರ ಹೊರತಾದ ಯುದ್ಧೋನ್ಮಾದದ ಮತ್ತು ಸಂಪೂರ್ಣ ಭಾವನಾತ್ಮಕ ಕಲ್ಪನೆಯ ಭಾರತ ಕಟ್ಟುವ ಸಲುವಾಗಿ ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರು ಭಾರತ ಮಾತೆ ಎನ್ನುವ ಪುಸ್ತಕ ಅತ್ಯಂತ ಪ್ರಸ್ತುತ ಎನಿಸಿದೆ. ಕನ್ನಡಕ್ಕೆ ಅನುವಾದವಾಗಿರುವುದು ಖುಷಿಯಾಗಿದೆ ಎಂದರು.

  • ಭಾರತ್ ಮಾತಾ ಕೀ ಜೈ ಎಂದವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ – ಧರ್ಮೇಂದ್ರ ಪ್ರಧಾನ್

    ಭಾರತ್ ಮಾತಾ ಕೀ ಜೈ ಎಂದವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ – ಧರ್ಮೇಂದ್ರ ಪ್ರಧಾನ್

    ಮುಂಬೈ: ಭಾರತ್ ಮಾತಾ ಕೀ ಜೈ ಎಂದವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

    ಪುಣೆಯಲ್ಲಿ ನಡೆದ ಎಬಿವಿಪಿಯ 54ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿಲ್ಲ ಎಂದು ಭಾವಿಸಿ ಕೆಲವರು ಭಾರತವನ್ನು ಧರ್ಮಶಾಲೆ ಮಾಡಲು ಹೊರಟಿದ್ದಾರೆ. ಇದರಿಂದ ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್ ಅವರ ತ್ಯಾಗ ವ್ಯರ್ಥವಾಗುವುದಿಲ್ಲವೇ? ಅವರು ಏಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ನಾವು ನೆನೆಯಬೇಕಿದೆ. ಅಂದರೆ ನಾವು ಭಾರತವನ್ನು ಧರ್ಮಶಾಲೆಯನ್ನಾಗಿ ಪರಿವರ್ತಿಸಲು ಹೊರಟಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ.

    ಯಾರು ಬರುತ್ತಾರೋ ಬಂದು ಇಲ್ಲಿ ನೆಲೆಸಲಿ. ಈ ಕುರಿತು ನಾವು ಸವಾಲು ಸ್ವೀಕರಿಸಲು ಸಿದ್ಧರಿದ್ದೇವೆ. ಆದರೆ ಭಾರತದಲ್ಲಿ ಇರಲು ಬಯಸುವವರು ಭಾರತ್ ಮಾತಾ ಕೀ ಜೈ ಎಂದು ಹೇಳುವುದನ್ನು ಕಡ್ಡಾಯಗೊಳಿಸಬೇಕಿದೆ. ನಾವಿದನ್ನು ಸ್ಪಷ್ಟಪಡಿಸಬೇಕು, ಅಂತಹವರಿಗೆ ಮಾತ್ರ ಭಾರತದಕಲ್ಲಿರಲು ಅವಕಾಶ ನೀಡಬೇಕಿದೆ ಎಂದು ತಿಳಿಸಿದ್ದಾರೆ.

    ಎನ್‍ಆರ್ ಸಿ ಹಾಗೂ ಸಿಎಎ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಧಾರ್ಮಿಕತೆ ಆಧಾರದ ಮೇಲೆ ಪೌರತ್ವ ನೀಡುವ ಕಾನೂನನ್ನು ಹಿಂಪಡೆಯಬೇಕೆಂದು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.

  • ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

    ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

    ಗಾಂಧಿನಗರ: ಭಾರತ್ ಮಾತಾ ಕೀ ಜೈ… ಇದು ಪ್ರತಿಯೊಬ್ಬ ಭಾರತೀಯರು ಎದೆಯುಬ್ಬಿಸಿ ಮೊಳಗಿಸೋ ಘೋಷಣೆ. ಆದರೆ ಈ ಘೋಷಣೆಗೂ ಪೇಟೆಂಟ್ ಅಥವಾ ಕಾಪಿರೈಟ್ ಆಗ್ಬಿಟ್ರೇ ಏನಾಗ್ಬೇಡ.

    ಗುಜರಾತ್‍ನ ಗಾಂಧಿನಗರದದಲ್ಲಿ ನಡೆದ ಸಮಾವೇಶದಲ್ಲಿ ಮಾತಾಡುವಾಗ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಯಲ್ ಅವರು, `ಭಾರತ್ ಮಾತಾಕೀ ಜೈ’ ಎನ್ನುವುದು ನಮ್ಮ ಘೋಷಣೆ. ಸ್ವಾತಂತ್ರ್ಯ ಹೋರಾಟದ ವೇಳೆ ಮೊದಲಿಗೆ ನಾವು ಈ ಘೋಷಣೆಯನ್ನು ಬಳಸಿದ್ದು ಅಂತ ಪ್ರತಿಪಾದಿಸಿದ್ದಾರೆ. ಈ ಮೂಲಕ ರಾಷ್ಟ್ರೀಯತೆಯನ್ನು ಬಿತ್ತಲು ಯತ್ನಿಸಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕಾಂಗ್ರೆಸಿಗರ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಭಾರತ್ ಮಾತಾಕೀ ಜೈ ಎನ್ನುವುದು ಈಗ ನೆನಪಿಗೆ ಬಂತಾ ಎಂದು ಕೇಳಿದೆ. 2018ರ ರಾಜಸ್ಥಾನ ಚುನಾವಣೆ ವೇಳೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾರ್ಯಕರ್ತನೋರ್ವ ಈ ಘೋಷಣೆ ಕೂಗಿದ್ದಕ್ಕೆ ಅಲ್ಲಿದ್ದ ನಾಯಕರು ಅವರ ಬಾಯಿ ಮುಚ್ಚಿಸಿದ್ದರು. ಅಂದಹಾಗೆ, ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಅಂತ್ಯದಲ್ಲಿ ಎಲ್ಲಿ ಹೋದರೂ `ಭಾರತ್ ಮಾತಾ ಕೀ ಜೈ’ ಎಂದು ಹೇಳಿ ಭಾಷಣವನ್ನು ಮುಗಿಸುತ್ತಾರೆ.

    ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಭಾರತ್ ಮಾತಾ ಕೀ ಜೈ’ ಅನ್ನೋದು ಅಪರಾಧವಾದ್ರೆ, ನನ್ನನ್ನೂ ಶೂಟ್ ಮಾಡಿ: ಮೃತನ ತಾಯಿ

    `ಭಾರತ್ ಮಾತಾ ಕೀ ಜೈ’ ಅನ್ನೋದು ಅಪರಾಧವಾದ್ರೆ, ನನ್ನನ್ನೂ ಶೂಟ್ ಮಾಡಿ: ಮೃತನ ತಾಯಿ

    ಲಕ್ನೋ: ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ ಗಣರಾಜ್ಯೋತ್ಸವ ದಿನದಂದೇ ಭುಗಿಲೆದ್ದ ಹಿಂಸಾಚಾರದಲ್ಲಿ 23 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಈ ಕುರಿತು ಮೃತನ ತಾಯಿ ತನ್ನ ಆಕ್ರೋಶ ಹೊರ ಹಾಕಿದ್ದಾರೆ.

    ಈ ನೆಲದಲ್ಲೇ ಬದುಕಿ, ಹಿಂದೂಸ್ತಾನ್ ಜಿಂದಾಬಾದ್… ಭಾರತ್ ಮಾತಾ ಕೀ ಜೈ ಅಂತ ಹೇಳೋದು ಅಪರಾಧವಾಗೋದಾದ್ರೆ ನನ್ನನ್ನೂ ಕೂಡ ಗುಂಡಿಕ್ಕಿ ಸಾಯಿಸಿ ಅಂತ ಚಂದನ್ ತಾಯಿ ಸಂಗೀತ ಗುಪ್ತಾ ಹೇಳಿದ್ದಾರೆ.

    ಏನಿದು ಘಟನೆ?: ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ 69 ಗಣರಾಜ್ಯೋತ್ಸವ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಕಾರ್ಯಕರ್ತರು ನಗರದಲ್ಲಿ ಬೈಕ್ ಜಾಥಾ ನಡೆಸಿದ್ದರು. ಈ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಹಿಂಸಾಚಾರದಲ್ಲಿ 22 ವರ್ಷದ ಚಂದನ್ ಬಲಿಯಾಗಿದ್ದರು. ಪರಿಣಾಮ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

    ನನ್ನ ಮಗ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂತ ಹೇಳಿಲ್ಲವೆಂದು ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ ಅಂತ ಚಂದನ್ ತಂದೆ ಸುಶೀಲ್ ಗುಪ್ತಾ ಆರೋಪಿಸಿದ್ದಾರೆ.

    ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರೋ ಇವರು, ನನ್ನ ಮಗ ಪಾಕಿಸ್ತಾನಕ್ಕೆ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂದು ಹೇಳುವುದನ್ನು ನಿಲ್ಲಿಸಿ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದಾನೆ. ಇದರಿಂದ ಸಿಟ್ಟುಗೊಂಡ ದುಷ್ಕರ್ಮಿಗಳು ಆತನ ಮೇಲೆ ಕಲ್ಲು ತೂರಾಟ ನಡೆಸಿ ಹತ್ಯೆಗೈದಿದ್ದಾರೆ ಅಂತ ಅವರು ಅಳಲು ತೋಡಿಕೊಂಡಿದ್ದಾರೆ.

    ನಗರದ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿರೋ ಚಂದನ್, ಸಂಕಲ್ಪ ಅನ್ನೋ ಖಾಸಗಿ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದನು ಎಂದು ಅವರು ತಿಳಿಸಿದ್ದಾರೆ.

    ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 53 ಮಂದಿಯನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ದುಷ್ಕರ್ಮಿಗಳು 3 ಅಂಗಡಿಗಳು ಹಾಗೂ ಕೆಲ ವಾಣಿಜ್ಯ ಸಂಸ್ಥೆಗಳಿಗೆ ತೊಂದರೆ ನೀಡಿದ್ದಾರೆ. ಅಲ್ಲದೇ ಬಸ್ ಗೂ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗರದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಹಿಂಸಾಚಾರದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.