Tag: ಭಾರತ್ ಬಂದ್

  • ಬ್ಯಾಂಡ್ ಬಾರಿಸಿ ಅಂಚೆ ಸಿಬ್ಬಂದಿಯಿಂದ ವಿನೂತನ ಪ್ರತಿಭಟನೆ

    ಬ್ಯಾಂಡ್ ಬಾರಿಸಿ ಅಂಚೆ ಸಿಬ್ಬಂದಿಯಿಂದ ವಿನೂತನ ಪ್ರತಿಭಟನೆ

    ಉಡುಪಿ: ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ವೇಳೆ ಉಡುಪಿಯ ಅಂಚೆ ಸಿಬ್ಬಂದಿ ವಿಭಿನ್ನವಾಗಿ ತಮ್ಮ ಆಕ್ರೋಶ ಹೊರಹಾಕಿದರು. ಬ್ಯಾಂಡ್ ಬಾರಿಸಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು.

    ಉಡುಪಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಡೋಲು ಬಾರಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಯಿತು. ಅಂಚೆ ಕಾರ್ಮಿಕರು ಬ್ಯಾಂಡ್ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಅಂಚೆ ಕಚೇರಿ ಸಿಬ್ಬಂದಿ ಬ್ಯಾಂಡ್ ಬಾರಿಸುತ್ತಾ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಸಿಬ್ಬಂದಿ ಬ್ಯಾಂಡ್ ಬಾರಿಸೋದನ್ನು ನೋಡಲು ಸಾರ್ವಜನಿಕರೂ ಸ್ಥಳದಲ್ಲಿ ಜಮಾಯಿಸಿದರು.

    ಕಾರ್ಮಿಕ ಸಂಘಟನೆಯ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಎಲ್‍ಐಸಿ ಕಚೇರಿ, ಬ್ಯಾಂಕುಗಳ ಮುಂಭಾಗ, ಬಿಎಸ್ ಎನ್ ಎಲ್ ಕಚೇರಿಗಳ ಮುಂದೆ ಕೆಲಕಾಲ ಪ್ರತಿಭಟನೆ ಮಾಡಿದರು.

    ಇದನ್ನು ಹೊರತುಪಡಿಸಿ ಉಡುಪಿಯಲ್ಲಿ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ಚಿತ್ರ ಮಂದಿರ ಎಂದಿನಂತೆ ತೆರೆದಿವೆ. ಒಟ್ಟಾರೆ ಉಡುಪಿ ಮಾತ್ರವಲ್ಲದೆ ಗಂಗೊಳ್ಳಿ, ಕುಂದಾಪುರ, ಕಾರ್ಕಳ, ಕಾಪು ತಾಲೂಕಿನಲ್ಲೂ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1 ತಿಂಗ್ಳ ಕಂದಮ್ಮನನ್ನ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಡ್ರಾಪ್ – ಪ್ರತಿ ಬಂದ್‍ನಲ್ಲೂ ಬಟ್ಟೆ ವ್ಯಾಪಾರಿಯಿಂದ ಉಚಿತ ಸೇವೆ

    1 ತಿಂಗ್ಳ ಕಂದಮ್ಮನನ್ನ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಡ್ರಾಪ್ – ಪ್ರತಿ ಬಂದ್‍ನಲ್ಲೂ ಬಟ್ಟೆ ವ್ಯಾಪಾರಿಯಿಂದ ಉಚಿತ ಸೇವೆ

    ಬೆಂಗಳೂರು: ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರದಾಡುತ್ತಿದ್ದ ದಂಪತಿಗೆ ನಗರದ ಬಟ್ಟೆ ವ್ಯಾಪಾರಿಯೊಬ್ಬರು ಸಹಾಯಕ್ಕೆ ಮುಂದಾಗಿ ಮಾನವೀಯತೆ ತೋರಿಸಿದ್ದಾರೆ.

    ಬೆಂಗಳೂರು ಬಟ್ಟೆ ವ್ಯಾಪಾರಿ ಸಭಾಪತಿ, ದಂಪತಿಗೆ ಸಹಾಯ ಮಾಡಿದ್ದಾರೆ. ಒಂದು ತಿಂಗಳ ಕಂದಮ್ಮ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿತ್ತು. ಇಂದೇ ನಾರಾಯಣ ನೇತ್ರಾಲಯಕ್ಕೆ ಕರೆದುಕೊಂಡು ಹೋಗಬೇಕಾಗಿತ್ತು. ಆದ್ದರಿಂದ ಬಿಜಾಪುರದಿಂದ ಬಂದಿದ್ದ ದಂಪತಿ ಮಗುವಿನ ಜೊತೆ ಬಸ್ಸಿಗಾಗಿ ಕಾದು ಕುಳಿತಿದ್ದರು.

    ಸುಮಾರು ಮೂರು ತಾಸು ಕಾದು ಕುಳಿತರೂ ಬಸ್ ಬಂದಿರಲಿಲ್ಲ. ಇತ್ತ ಆಟೋಗೆ ಹೋಗೋದಕ್ಕೂ ಅವರ ಬಳಿ ಅಷ್ಟೋಂದು ಹಣವೂ ಇರಲಿಲ್ಲ. ಕೊನೆಗೆ ಸಭಾಪತಿ ಅವರು ಪುಟಾಣಿಯನ್ನು ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.

    ಬೆಂಗಳೂರು ಬಟ್ಟೆ ವ್ಯಾಪಾರಿ ಸಭಾಪತಿ ಪ್ರತಿ ವರ್ಷ ಬಂದ್ ಆದ ಸಂದರ್ಭದಲ್ಲಿ ಗರ್ಭಿಣಿಯರಿಗೆ, ಆಸ್ಪತ್ರೆಗೆ ಹೋಗುವವರಿಗೆ ಮತ್ತು ತುರ್ತು ಸೇವೆ ಬೇಕಾದವರಿಗೆ ಉಚಿತವಾಗಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯೂ ಕೂಡ ಬಂದ್ ಸಮಯದಲ್ಲಿ ಬಿಜಾಪುರ ದಂಪತಿಯ ಮಗುವನ್ನು ಸ್ವತಃ ಸಭಾಪತಿ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಈ ವೇಳೆ ತಾಯಿ ಮಾತನಾಡಿ, ಮಗುವಿಗೆ ಕಣ್ಣಿನ ತೊಂದರೆ ಇದೆ. ಹೀಗಾಗಿ ನಾರಾಯಣ ಆಸ್ಪತ್ರೆಗೆ ತೋರಿಸಲು ಕರೆದುಕೊಂಡು ಬಂದಿದ್ದೇವೆ. ವೈದ್ಯರು ಚಿಕಿತ್ಸೆಗಾಗಿ ಇಂದೇ ಬರಬೇಕು ಎಂದು ಹೇಳಿದ್ದರು. ಆದ್ದರಿಂದ ಬೇಗ ತೋರಿಸಲು ಬಂದಿದ್ದೆವು. ಆದರೆ ಬಸ್ ಸಿಗಲಿಲ್ಲ. ಕೊನೆಗೆ ಇವರೇ ಆಸ್ಪತ್ರೆಗೆ ಬಿಟ್ಟಿದ್ದಾರೆ ಎಂದು ಸಂತಸದಿಂದ ಹೇಳಿದ್ದಾರೆ.

    ನಾನು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಬಂದ್ ವೇಳೆ ಈ ರೀತಿಯ ಸೇವೆ ಮಾಡುತ್ತೇವೆ. ಈ ರೀತಿ ಬಂದ್ ಮಾಡಿದರೆ ಯಾರಿಗೂ ಲಾಭವಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ವಯಸ್ಸಾದರಿಗೆ, ರೋಗಿಗಳಿಗೆ ಮತ್ತು ತುರ್ತು ಪರಿಸ್ಥಿಯಲ್ಲಿರುವರಿಗೆ ಸಹಾಯ ಮಾಡುತ್ತೇವೆ. ಬಂದ್ ಸಮಯದಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ ಎಂದು ಕಳಸ ಬಂಡೂರಿ ಸಮಯದಲ್ಲಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದ್ದರಿಂದ ಪ್ರತಿ ಬಾರಿ ಬಂದ್ ನಡೆದಾಗಲೂ ಉಚಿತ ಕ್ಯಾಬ್ ಸೇವೆ ನೀಡುತ್ತೇನೆ ಎಂದು ಸಭಾಪತಿ ಪಬ್ಲಿಕ್ ಟಿವಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ್ ಬಂದ್: ದಾವಣಗೆರೆ ಬಸ್‍ಸ್ಟ್ಯಾಂಡ್‍ನಲ್ಲಿ ಬಾಣಂತಿ ಪರದಾಟ.!

    ಭಾರತ್ ಬಂದ್: ದಾವಣಗೆರೆ ಬಸ್‍ಸ್ಟ್ಯಾಂಡ್‍ನಲ್ಲಿ ಬಾಣಂತಿ ಪರದಾಟ.!

    ದಾವಣಗೆರೆ: ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ಗರ್ಭಿಣಿಯೊಬ್ಬರು ಪರದಾಡಿದ್ದಾರೆ.

    ದಾವಣಗೆರೆಯ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬಸ್ ಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಗರ್ಭಿಣಿ, ಬಸ್ ಸಿಗದೇ ಬೆಂಚ್ ಮೇಲೆಯೇ ಮಲಗಿರುವ ದೃಶ್ಯ ಮನಕಲಕುವಂತಿತ್ತು.

    ಚಿತ್ರದುರ್ಗದ ಹಿರಿಯೂರು ತಾಲೂಕಿನ ಅದಿವಾಲ ಗ್ರಾಮದ ನಿವಾಸಿ ಗರ್ಭಿಣಿ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರು ಡಿಸ್ಚಾರ್ಜ್ ಆಗಿದ್ದು, ಬಸ್ ಗಾಗಿ ಕಾಯುತ್ತಿದ್ದರು. ಆದ್ರೆ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಖಾಸಗಿ ಬಸ್ ನಲ್ಲಿ ಪ್ರಯಾಣಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ದಿಕ್ಕು ತೋಚದ ಸ್ಥಿತಿಯಲ್ಲಿ ಸಂಬಂಧಿಕರಿದ್ದು, ಗರ್ಭಿಣಿ ನಿಲ್ದಾಣದಲ್ಲೇ ಬೆಂಚ್ ಮೇಲೆ ಮಲಗಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್- ಪಬ್ಲಿಕ್ ಟಿವಿ ವಾಹನದಲ್ಲಿ ರೋಗಿ ಆಸ್ಪತ್ರೆಗೆ ರವಾನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್ ನಿಲ್ದಾಣ ಸ್ವಚ್ಛ ಮಾಡಿದ್ರು NWKRTC ಅಧಿಕಾರಿಗಳು..!

    ಬಸ್ ನಿಲ್ದಾಣ ಸ್ವಚ್ಛ ಮಾಡಿದ್ರು NWKRTC ಅಧಿಕಾರಿಗಳು..!

    ಗದಗ: ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕಾರ್ಮಿಕರ ಮುಷ್ಕರ ಹಿನ್ನೆಲೆ ಸ್ವಚ್ಛತಾ ಸಿಬ್ಬಂದಿ ಬಾರದೆ ಸ್ವತಃ NWKRTC ಅಧಿಕಾರಿಗಳೇ ಜಿಲ್ಲೆಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ.

    ಇಂದು ಮತ್ತು ನಾಳೆ ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟಿವೆ. ಈ ಮುಷ್ಕರಕ್ಕೆ ಬಹುತೇಕ ಕಾರ್ಮಿಕರು ಬೆಂಬಲ ನೀಡುತ್ತಿದ್ದು, ಇಂದು ಕೆಲಸ ನಿರ್ವಹಿಸಲು ನಿರಾಕರಿಸಿದ್ದಾರೆ. ಹೀಗಾಗಿ ಇಂದು ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಡಲು ಸಿಬ್ಬಂದಿ ಬರದಿದ್ದ ಕಾರಣ ಸ್ವತಃ ಅಧಿಕಾರಿಗಳೇ ನಿಲ್ದಾಣವನ್ನು ಸ್ವಚ್ಛಗೊಳಿಸಲು ಮುಂದಾದರು. ಕೈಯಲ್ಲಿ ಪೊರಕೆ ಹಿಡಿದು ಬಸ್ ನಿಲ್ದಾಣದ ಮೇಲ್ವಿಚಾರಕರು ಹಾಗೂ ಇತರೇ ಅಧಿಕಾರಿಗಳು ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.

    ಭಾರತ್ ಬಂದ್ ಹಿನ್ನಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಆದ್ರೆ ಬಸ್ ನಿಲ್ದಾಣದಲ್ಲಿ ಕಸವಿದ್ದ ಕಾರಣಕ್ಕೆ, ಇಡೀ ಬಸ್ ನಿಲ್ದಾಣಕ್ಕೆ ನೀರು ಹೊಡೆದು ಕಸ ಗುಡಿಸಿ ಸಾರಿಗೆ ಅಧಿಕಾರಿಗಳು ಸ್ವಚ್ಛ ಮಾಡಿದ್ದಾರೆ. ಬೆಳಿಗ್ಗೆಯಿಂದ ಬಸ್ ಹಾಗೂ ಪ್ರಯಾಣಿಕರು ಇಲ್ಲದೇ ಬಣಗುಡುತ್ತಿರುವ ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಿದ ಅಧಿಕಾರಿಗಳ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೇಟ್‍ಗೆ ಬೀಗ ಹಾಕಿ ರಜೆಯ ಬೋರ್ಡ್ – ಒಳಗೆ ಶಿಕ್ಷಣ ಸಂಸ್ಥೆಯಿಂದ ಪರೀಕ್ಷೆ

    ಗೇಟ್‍ಗೆ ಬೀಗ ಹಾಕಿ ರಜೆಯ ಬೋರ್ಡ್ – ಒಳಗೆ ಶಿಕ್ಷಣ ಸಂಸ್ಥೆಯಿಂದ ಪರೀಕ್ಷೆ

    ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಜಿಲ್ಲಾಢಳಿತದಿಂದ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೂ ಖಾಸಗಿ ಶಿಕ್ಷಣ ಸಂಸ್ಥೆ ಪರೀಕ್ಷೆ ನಡೆಸುತ್ತಿದೆ.

    ಕುವೆಂಪುನಗರದ ಬಿಜಿಎಸ್ ವಿದ್ಯಾಪೀಠ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದೆ. ಭಾತರ್ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧದ ನಡುವೆಯೂ ಜಿಲ್ಲಾಡಳಿತ ಇಂದು ಶಾಲಾ-ಕಾಲೇಜಿಗೆ ರಜೆಯನ್ನು ಘೋಷಣೆ ಮಾಡಿತ್ತು. ಆದರೆ ಜಿಲ್ಲಾಡಳಿತದ ಆದೇಶವನ್ನೇ ಧಿಕ್ಕರಿಸಿ ಶಿಕ್ಷಣ ಸಂಸ್ಥೆ ಪರೀಕ್ಷೆ ನಡೆಸುತ್ತಿತ್ತು.

    ಅಷ್ಟೇ ಅಲ್ಲದೇ ಬಿಜಿಎಸ್ ಕಾಲೇಜಿನ ಗೇಟ್‍ಗೆ ಬೀಗ ಹಾಕಿ ಇಂದು ರಜೆ ಎಂದು ಬೋರ್ಡ್ ನೇತುಹಾಕಿದೆ. ಆದರೆ ಒಳಗೆ ಪಿಯುಸಿ ಪೂರಕ ಪರೀಕ್ಷೆಯನ್ನು ನಡೆಸುತ್ತದೆ. ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಪರೀಕ್ಷೆ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಇಬ್ಬರು ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಬಂದ ಮೇಲೆ ಪರೀಕ್ಷೆಯನ್ನು ನಿಲ್ಲುಸುತ್ತೇವೆ ಅಂತ ಕಾಲೇಜು ಮಂಡಳಿ ಹೇಳಿದೆ ಎಂದು ಮಾಹಿತಿ ಲಭ್ಯವಾಗಿದೆ.

    ಭಾರತ್ ಬಂದ್ ಕಾರಣಕ್ಕೆ ರಜೆ ಘೋಷಣೆ ಮಾಡಿದ್ದ ಜಿಲ್ಲಾಡಳಿತ ನಿರ್ಧಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿದೆ. ಪಾಠ ಮುಗಿಸಲು ಸಮಯದ ಅಭಾವವಿದೆ. ಹೀಗಾಗಿ ಶಾಲಾ-ಕಾಲೇಜುಗಳ ಸೂಕ್ತ ರಕ್ಷಣೆಗೆ ಪತ್ರ ಬರೆದಿದ್ದೆವು. ಸ್ವಂಪ್ರೇರಿತವಾಗಿ ಕಾಲೇಜು ನಡೆಸಲು ಮುಂದಾಗಿದ್ದ ನಮಗೆ ಜಿಲ್ಲಾಡಳಿತ ಒತ್ತಾಯ ಪೂರ್ವಕವಾಗಿ ಬಂದ್ ನಡೆಸುವಂತೆ ಮಾಡಿದೆ. ಬೇಸರದಿಂದ ಶಾಲಾ ಕಾಲೇಜುಗಳನ್ನ ಬಂದ್ ಮಾಡುತ್ತಿದ್ದೇವೆ ಎಂದು ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ರಾಜ್ಯ ಉಪಾಧ್ಯಕ್ಷ ಆರ್.ರಘು ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯಪ್ರಿಯರಿಗಿಲ್ಲ ಬಂದ್ ಬಿಸಿ- ಬೆಳ್ಳಂಬೆಳಗ್ಗೆ ಬಾರ್​ಗೆ ಮಹಿಳೆ ಎಂಟ್ರಿ

    ಮದ್ಯಪ್ರಿಯರಿಗಿಲ್ಲ ಬಂದ್ ಬಿಸಿ- ಬೆಳ್ಳಂಬೆಳಗ್ಗೆ ಬಾರ್​ಗೆ ಮಹಿಳೆ ಎಂಟ್ರಿ

    – ಬಂದ್ ಆದ್ರೂ ಕೊಪ್ಪಳದಲ್ಲಿ ಬಾರ್ ಓಪನ್

    ಕೊಪ್ಪಳ: ಎರಡು ದಿನ ಕಾರ್ಮಿಕ ಮುಷ್ಕರ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭಾರತ್ ಬಂದ್ ಘೋಷಣೆಯಾಗಿದೆ. ಆದರೆ ಕೊಪ್ಪಳದಲ್ಲಿ ಬೆಳ್ಳಂಬೆಳ್ಳಗೆ ಬಾರ್ ಓಪನ್ ಆಗಿದ್ದು, ಮದ್ಯ ಪ್ರಿಯರು ಫುಲ್ ಖುಷಿಯಾಗಿದ್ದಾರೆ.

    ಇಂದು ಬಂದ್ ಇದ್ದರೂ ಕೂಡ ಬಾರ್ ಮಾಲೀಕರು ಬೆಳ್ಳಂಬೆಳ್ಳಗೆ ತಮ್ಮ ಅಂಗಡಿಯನ್ನು ಓಪನ್ ಮಾಡಿದ್ದಾರೆ. ಹಾಗಾಗಿ ಬೆಳ್ಳಂಬೆಳ್ಳಗೆ ಮದ್ಯ ಪ್ರಿಯರು ಬಾರ್ ಮುಂದೆ ಹಾಜರಾಗಿದ್ದಾರೆ. ಬಾರ್ ಓಪನ್ ಆಗುತ್ತಿದ್ದಂತೆಯೇ ಮಹಿಳೆಯೊಬ್ಬರು ಎಣ್ಣೆ ಹೊಡೆಯಲು ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಭಾರತ್ ಬಂದ್ ದಿನ ಕೂಡ ಬಾರ್ ಓಪನ್ ಇರುವುದು ಎಲ್ಲಾ ಕುಡುಕರಿಗೂ ಖುಷಿ ತಂದಿದೆ. ಎಲ್ಲರೂ ಬಾರ್ ಮುಂದೆ ಮದ್ಯಪಾನ ಮಾಡಿ ಖುಷಿಪಡುತ್ತಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾ., ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ತುಮಕೂರು, ರಾಯಚೂರು, ದಾವಣಗೆರೆ, ರಾಮನಗರ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಬಾಗಲಕೋಟೆ, ಬೀದರ್, ಕಲಬುರಗಿ, ಗದಗ, ಚಿಕ್ಕಬಳ್ಳಾಪುರ, ಕೊಪ್ಪಳ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಮಡಿಕೇರಿ, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಹಾಸನ, ಯಾದಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್‍ಗೆ ಈವರೆಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ್ ಬಂದ್- ಪಬ್ಲಿಕ್ ಟಿವಿ ವಾಹನದಲ್ಲಿ ರೋಗಿ ಆಸ್ಪತ್ರೆಗೆ ರವಾನೆ

    ಭಾರತ್ ಬಂದ್- ಪಬ್ಲಿಕ್ ಟಿವಿ ವಾಹನದಲ್ಲಿ ರೋಗಿ ಆಸ್ಪತ್ರೆಗೆ ರವಾನೆ

    ಗದಗ: ಎರಡು ದಿನ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಗಿ ಪರದಾಡುತ್ತಿದ್ದು, ಅವರನ್ನು ಪಬ್ಲಿಕ್ ಟಿವಿ ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ.

    ರಾಜಶೇಖರ್ ಪಾಶ್ರ್ವವಾಯು ರೋಗದಿಂದ ಬಳಲುತ್ತಿದ್ದರು. ಅಲ್ಲದೇ ಕಲಬುರಗಿ ಜಿಲ್ಲೆಯಿಂದ ಬಂದ ಅವರು ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ಆಸ್ಪತ್ರೆಗೆ ಹೋಗಲು ರಾಜಶೇಖರ್ ಬಸ್ ಇಲ್ಲದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ಅಲ್ಲದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೋ ಚಾಲಕರು 400 ರಿಂದ 800 ರೂಪಾಯಿ ಬೇಡಿಕೆ ಇಟ್ಟಿದ್ದರು.

    ಆಳಂದ ತಾಲೂಕಿನ ಅಲ್ಲದಾಪೂರ ಗ್ರಾಮದ ಪುತ್ರ ರಾಜಶೇಖರ್ ತಮ್ಮ ತಾಯಿ ಜೊತೆ ಚಿಕಿತ್ಸೆಗೆ ಗದಗ ತಾಲೂಕಿನ ಸೊರಟೂರ ಗ್ರಾಮಕ್ಕೆ ಚಿಕಿತ್ಸೆಗೆ ಆಗಮಿಸಿದ್ದರು. ಬಸ್ ಇಲ್ಲದೇ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ಈ ವೇಳೆ ಪಬ್ಲಿಕ್ ಟಿವಿ ವಾಹನ ಮೂಲಕ ಗದಗ ನಿಂದ ಸೋರಟೂರ ಆಸ್ಪತ್ರೆಗೆ ರಾಜಶೇಖರ್ ಅವರನ್ನು ರವಾನಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ್ ಬಂದ್ – ಖಡಕ್ ಸೂಚನೆ ನೀಡಿದ ಡಿಜಿಪಿ ನೀಲಮಣಿ ರಾಜು

    ಭಾರತ್ ಬಂದ್ – ಖಡಕ್ ಸೂಚನೆ ನೀಡಿದ ಡಿಜಿಪಿ ನೀಲಮಣಿ ರಾಜು

    ಬೆಂಗಳೂರು: ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ಡಿಜಿಪಿ ನೀಲಮಣಿ ರಾಜು ಅವರು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಒದಗಿಸಬೇಕೆಂದು ಪೊಲೀಸರಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ.

    ಕಾರ್ಮಿಕ ಸಂಘಟನೆಗಳು 12 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡು ದಿನ ಭಾರತ್ ಬಂದ್ ಮಾಡಿದ್ದಾರೆ. ಆದ್ದರಿಂದ ಎರಡು ದಿನ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಗೆ ಡಿಜಿಪಿ ನೀಲಮಣಿ ರಾಜು ಅವರು ಸೂಚನೆ ನೀಡಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಿನ ಬಂದೋಬಸ್ತ್ ಒದಗಿಸಲಾಗಿದೆ. ರಾಜ್ಯಾದ್ಯಂತ ಬಂದೋಬಸ್ತ್ ಗಾಗಿ ಬರೋಬ್ಬರಿ 54 ಸಾವಿರ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿದೆ.

    ಜಿಲ್ಲೆಗಳಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಬಲವಂತವಾಗಿ ಬಂದ್ ಮಾಡುವುದು, ತೊಂದರೆ ಕೊಟ್ಟರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆಯನ್ನು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೇಚ್ಛರಿಕೆಗೆ ವಹಿಸುವಂತೆ ಎಲ್ಲ ಜಿಲ್ಲೆಗಳ ಎಸ್‍ಪಿ, ಐಜಿಪಿಗಳು ಮತ್ತು ಕಮೀಷನರೇಟ್ ಗಳಿಗೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv