Tag: ಭಾರತ್ ಬಂದ್

  • ನಂದಿಗಿರಿಧಾಮಕ್ಕೂ ತಟ್ಟಿದ ಬಂದ್ ಬಿಸಿ

    ನಂದಿಗಿರಿಧಾಮಕ್ಕೂ ತಟ್ಟಿದ ಬಂದ್ ಬಿಸಿ

    ಚಿಕ್ಕಬಳ್ಳಾಪುರ: ಭಾರತ್ ಬಂದ್ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೂ ಬಂದ್‍ನ ಬಿಸಿ ತಟ್ಟಿದ್ದು, ನಂದಿಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

    ಪ್ರತಿನಿತ್ಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಇಂದು ನಂದಿಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬೆಳ್ಳಂಬೆಳಿಗ್ಗೆ ಸೂರ್ಯೋದಯ ಕಣ್ತುಂಬಿಕೊಳ್ಳಲು ಎಂದಿನಂತೆ ಪ್ರವಾಸಿಗರು ಆಗಮಿಸಿದರೂ ಸೂರ್ಯೋದಯದ ನಂತರ ಪ್ರವಾಸಿಗರ ಆಗಮನ ಕಡಿಮೆಯಾಗಿದೆ. ಹೀಗಾಗಿ ನಂದಿಗಿರಿಧಾಮಕ್ಕೂ ಬಂದ್ ಬಿಸಿ ತಟ್ಟಿದೆ.

    ಅಂದಹಾಗೆ ಪ್ರತಿ ದಿನ ಸರಾಸರಿ 3 ರಿಂದ 4 ಸಾವಿರ ಹಾಗೂ ವೀಕೆಂಡ್‌ನಲ್ಲಿ 10 ರಿಂದ 15 ಸಾವಿರ ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಬಂದು ಹೋಗುತ್ತಾರೆ. ಆದರೆ ಇಂದು ಬಂದ್ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

    ಇನ್ನೂ ಭಾರತ್ ಬಂದ್‍ಗೆ ರಾಜ್ಯದ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಮಾತ್ರ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗೇಪಲ್ಲಿ ಪಟ್ಟಣದಲ್ಲಿ ಸಿಪಿಐಎಂ ಮುಖಂಡರು ರಸ್ತೆಗಿಳಿದು ಬಲವಂತವಾಗಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದು, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದೆ.

  • ಸಕ್ಕರೆ ನಾಡಿಗೆ ತಟ್ಟದ ಬಂದ್ ಬಿಸಿ

    ಸಕ್ಕರೆ ನಾಡಿಗೆ ತಟ್ಟದ ಬಂದ್ ಬಿಸಿ

    ಮಂಡ್ಯ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ ನಗರ ಹಾಗೂ ಜಿಲ್ಲೆಯಾದ್ಯಂತ ಎಂದಿನಂತೆ ವಾಹನ ಸಂಚಾರ ಹಾಗೂ ಜನ ಜೀವನ ನಡೆಯುತ್ತಿದೆ. ಈ ಮೂಲಕ ಜಿಲ್ಲೆಯಾದ್ಯಂತ ಬಂದ್‍ಗೆ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿಲ್ಲ.

    ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಸಹ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು. ಆದರೆ ಜಿಲ್ಲೆಯಾದ್ಯಂತ ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ, ಜನ ಜೀವನ ಸುಗಮವಾಗಿ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

    ಇಂದು ಬಂದ್ ಇದ್ದರೂ ಸಹ ಮಂಡ್ಯಗೆ ಬಂದ್ ಬಿಸಿ ತಟ್ಟುವುದಿಲ್ಲ ಎಂಬ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿರಲಿಲ್ಲ. ಹೀಗಾಗಿ ಶಾಲಾ-ಕಾಲೇಜುಗಳು ಸಹ ಎಂದಿನಂತೆ ತೆರೆದಿವೆ. ಕೆಎಸ್ಆರ್‌ಟಿಸಿ ಬಸ್‍ನ ನೌಕರರು ಸಹ ಬಂದ್‍ಗೆ ಬೆಂಬಲ ನೀಡಿದ್ದರು. ಆದರೂ ಬಂದ್‍ನಲ್ಲಿ ಭಾಗಿಯಾಗದೇ ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದಾರೆ.

    ಮಂಡ್ಯದಲ್ಲಿ ಕರ್ನಾಟಕ ಬಂದ್ ಹಾಗೂ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾತ್ರ ಬಂದ್‍ಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಹಿಂದೆ ಭಾರತ್ ಬಂದ್ ಆದ ಸಂದರ್ಭದಲ್ಲೂ ಸಹ ಬೆಂಬಲ ವ್ಯಕ್ತವಾಗಿರಲಿಲ್ಲ. ಅದೇ ರೀತಿ ಇಂದು ನಡೆಯುತ್ತಿರುವ ಭಾರತ್ ಬಂದ್‍ಗೆ ಪ್ರತಿಕ್ರಿಯೆ ದೊರೆತಿಲ್ಲ.

  • ಕೆ.ಆರ್ ಮಾರ್ಕೆಟ್ ಮೇಲೆ ಬಂದ್ ಎಫೆಕ್ಟ್ – ವ್ಯಾಪಾರಿಗಳ ಅಳಲು

    ಕೆ.ಆರ್ ಮಾರ್ಕೆಟ್ ಮೇಲೆ ಬಂದ್ ಎಫೆಕ್ಟ್ – ವ್ಯಾಪಾರಿಗಳ ಅಳಲು

    ಬೆಂಗಳೂರು: ಇಂದು ದೇಶವ್ಯಾಪಿ ವಿವಿಧ ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್ ಎಫೆಕ್ಟ್ ಕೆ.ಆರ್ ಮಾರ್ಕೆಟ್ ಮೇಲೆ ಬಿದ್ದಿದೆ. ಪ್ರತಿದಿನಕ್ಕಿಂತ ಕಡಿಮೆ ಮಟ್ಟದಲ್ಲಿ ಹೂವು, ಹಣ್ಣು, ತರಕಾರಿಗಳ ಮಾರಾಟವಾಗುತ್ತಿದ್ದು, ವ್ಯಾಪಾರ ಡಲ್ ಆಗಿದೆ.

    ಬೆಳ್ಳಂಬೆಳಗ್ಗೆ 3 ಗಂಟೆಗೆ ರಾಜ್ಯದ ವಿವಿಧ ಭಾಗಗಳಿಂದ ಬಂದ ರೈತರು ಹಾಗೂ ವ್ಯಾಪಾರಿಗಳು ವ್ಯಾಪಾರ ಆರಂಭಿಸಿದ್ದಾರೆ. ಆದರೇ ಗ್ರಾಹಕರು ಬರುತ್ತಿಲ್ಲ, ಬೋಣಿಯೇ ಆಗಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಉಂಟಾಯಿತು. ಅಲ್ಲದೆ ಉಳಿದಿರುವ ಹೂವು ಮಾರಾಟ ಮಾಡಬೇಕು ಇಲ್ಲವೆಂದರೆ ನಾಳೆಗೆ ಇಡಬೇಕಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.

    ಭಾರತ ಬಂದ್‍ಗೆ ಕೆ.ಆರ್ ಮಾರ್ಕೆಟ್‍ನಲ್ಲಿ ಕರುನಾಡ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು. ಮಾರ್ಕೆಟ್‍ಗೆ ಬರುವ ಜನರಿಗೆ, ವಾಹನ ಸವಾರರಿಗೆ, ಗ್ರಾಹಕರಿಗೆ, ವ್ಯಾಪಾರಿಗಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ನೀಡಿದರು. ಬಂದ್ ಜನವಿರೋಧಿ ಸಾವಿರಾರು ಕೋಟಿ ನಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಕೆ.ಆರ್ ಮಾರ್ಕೆಟ್ ಜನಗಳಿಲ್ಲದೇ ಬೀಕೋ ಎನ್ನುತ್ತಿದೆ.

  • ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

    ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

    ಮಡಿಕೇರಿ: ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಹೊರವಲಯದ ಚೈನ್ ಗೇಟ್ ಬಳಿ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

    ಇಂದು ಬೆಳಿಗ್ಗೆ ಮಡಿಕೇರಿಯಿಂದ ಮೈಸೂರಿಗೆ ಸರ್ಕಾರಿ ಬಸ್ ತೆರಳುತ್ತಿತ್ತು. ಆಗ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಬಸ್ಸಿನ ಮುಂಭಾಗದ ಗ್ಲಾಸ್‌ಗೆ ಸಣ್ಣಪುಟ್ಟ ಹಾನಿಯಾಗಿದೆ. ಬಸ್ಸಿನಲ್ಲಿ ಯಾರೊಬ್ಬ ಪ್ರಯಾಣಿಕರು ಇಲ್ಲದೇ ಇದ್ದುದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

    ಮಂಡ್ಯ ಜಿಲ್ಲೆಯ ಪಾಂಡವಪುರ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್ ಇದಾಗಿದ್ದು. ಬಸ್ ಚಾಲಕ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತಿಭಟನೆ ಮಾಡುವವರು ಈ ರೀತಿಯಲ್ಲಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿಯಲ್ಲಿ ಮಾಡಿದ್ದಾರೆ. ಕೊಡಗು ಶಾಂತಿ ಪ್ರಿಯನಾಡು ಈ ರೀತಿಯಲ್ಲಿ ಕೃತ್ಯ ಮಾಡುವವರನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

  • ಭಾರತ್ ಬಂದ್- ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆಗೆ ಯತ್ನ

    ಭಾರತ್ ಬಂದ್- ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆಗೆ ಯತ್ನ

    ಚಿಕ್ಕಬಳ್ಳಾಪುರ: ಭಾರತ್ ಬಂದ್‍ಗೆ ಕರೆ ನೀಡಿದರೂ ಟೀ ಅಂಗಡಿ ಓಪನ್ ಮಾಡಿದ್ದೀಯಾ ಎಂದು ಮಾಲೀಕನ ಮೇಲೆ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಸಂಪಂಗಿ ವೃತ್ತದಲ್ಲಿನ ಎಸ್‍ಎಲ್‍ಎನ್ ಕಾಂಡಿಮೆಂಟ್ಸ್ ಶಾಪ್ ಎಂದಿನಂತೆ ಆರಂಭವಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಸಿಪಿಐಎಂ ಮುಖಂಡ ಲಕ್ಷ್ಮೀನಾರಾಯಣ ಎಂಬಾತ ಇಂದು ಬಂದ್ ಇದೆ. ನೀನು ಯಾಕೆ ಟೀ ಅಂಗಡಿ ಓಪನ್ ಮಾಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

    ಅಂಗಡಿ ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಟೀ ಅಂಗಡಿಯಲ್ಲಿದ್ದ ಹಾಲನ್ನೇ ಕಸಿದುಕೊಂಡು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ಗ್ರಾಹಕರು ಹಾಲಿನ ಕೆಟಲ್ ವಾಪಾಸ್ ಕೊಡಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಆರಂಭವಾಗಿದ್ದ ಟೀ ಅಂಗಡಿಯನ್ನು ಬಂದ್ ಮಾಡುವಂತೆ ಅಂಗಡಿ ಮಾಲೀಕನ ಮೇಲೆ ಸಿಪಿಎಂ ಮುಖಂಡ ಒತ್ತಡ ಹೇರಿ ಬಲವಂತವಾಗಿ ಬಂದ್ ಮಾಡಿಸಿದ್ದಾರೆ.

  • ಪ್ರಯಾಣಿಕರಿಗೆ ತಟ್ಟದ ಮುಷ್ಕರದ ಬಿಸಿ- ನಗರಾದ್ಯಂತ ಎಂದಿನಂತಿದೆ ಜನಜೀವನ

    ಪ್ರಯಾಣಿಕರಿಗೆ ತಟ್ಟದ ಮುಷ್ಕರದ ಬಿಸಿ- ನಗರಾದ್ಯಂತ ಎಂದಿನಂತಿದೆ ಜನಜೀವನ

    – ಪೊಲೀಸರ ಹೈ ಅಲರ್ಟ್

    ಬೆಂಗಳೂರು: ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ದೇಶದಾದ್ಯಂತ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಮುಷ್ಕರದ ಎಫೆಕ್ಟ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ತಟ್ಟಿಲ್ಲ.

    ನಗರದ ಹೃದಯ ಭಾಗ ಮೆಜೆಸ್ಟಿಕ್‍ನಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಬಿಎಂಟಿಸಿ, ಕೆಎಸ್ಆರ್​ಟಿಸಿ, ರೈಲ್ವೆ ನಿಲ್ದಾಣದಲ್ಲಿ ಜನಜೀವನ ಎಂದಿನಂತೆ ಇದೆ. ಪ್ರಯಾಣಿಕರು ಕೂಡ ಎಂದಿನಂತೆ ತಮ್ಮ ಕೆಲಸಗಳಿಗೆ ಹಾಜರ್ ಆಗುತ್ತಿದ್ದಾರೆ. ಇನ್ನೂ ಮೆಜೆಸ್ಟಿಕ್‍ನಲ್ಲಿ ಆಟೋಗಳು ಕೂಡ ಸಂಚರಿಸುತ್ತಿವೆ. ಅವರು ಕೂಡ ಮುಷ್ಕರಕ್ಕೆ ಬೆಂಬಲ ಕೊಟ್ಟಿಲ್ಲ. ಕೆಲ ಪ್ರಯಾಣಿಕರಿಗೆ ಮುಷ್ಕರದ ಬಗ್ಗೆ ಗೊಂದಲ ವಿದ್ದು ಕೊಂಚ ಆತಂಕದಲ್ಲಿ ಬಂದಿದ್ದರು.

    ಬೆಳಗ್ಗೆ 10 ಗಂಟೆಯ ನಂತರ ಮುಷ್ಕರಕ್ಕೆ ಕರೆಕೊಟ್ಟಿರುವ ಸಂಘಟನೆಗಳು ಮೆಜೆಸ್ಟಿಕ್ ಸೇರಿದಂತೆ ಕೆಲ ಏರಿಯಾಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. 10 ಗಂಟೆಯ ನಂತರ ಜನ ಜೀವನದಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ನಗರಾದ್ಯಂತ ಪೊಲೀಸರು ಕೂಡ ಯಾವುದೇ ಅನಾಹುತ ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

    ಪೊಲೀಸರ ಹೈ ಅಲರ್ಟ್:
    ಭಾರತ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ. ಪ್ರತಿ ರಸ್ತೆಯಲ್ಲೂ ಪೊಲೀಸರು ಹೈ ಅಲರ್ಟ್ ಆಗಿದ್ದು, ಕಾರ್ಮಿಕ ಸಂಘಟನೆಗಳು ರ‍್ಯಾಲಿ ಮಾಡಿದರೆ, ಅಂಗಡಿ ಮುಂಗಟ್ಟುಗಳ ಬಲವಂತವಾಗಿ ಮುಚ್ಚಿಸದಂತೆ ಹೆಚ್ಚಿನ ಗಸ್ತು ಸುತ್ತುತ್ತಾ ಇದ್ದಾರೆ.

    ಅದರಲ್ಲೂ ಕೈಗಾರಿಕಾ ಪ್ರದೇಶಗಳಿಗೆ ಹೆಸರುವಾಸಿಯಾಗಿರುವ ಪೀಣ್ಯಾದಲ್ಲಿ ಅತಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರನ್ನು ಅತಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಪಿಎಫ್ ವಿಚಾರಕ್ಕೆ ಆದಂತಹ ಘಟನೆ ಮರುಕಳಿಸದಂತೆ ಅತಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ. ಪ್ರತಿ ರಸ್ತೆಯಲ್ಲೂ ಪೊಲೀಸರ ನಿಯೋಜನೆ ಮಾಡಲಾಗಿದೆ.

  • ಭಾರತ್ ಬಂದ್: ಪಿಎಸ್‍ಐ ಪರೀಕ್ಷೆಗಳು ಮುಂದೂಡಿಕೆ

    ಭಾರತ್ ಬಂದ್: ಪಿಎಸ್‍ಐ ಪರೀಕ್ಷೆಗಳು ಮುಂದೂಡಿಕೆ

    ಹುಬ್ಬಳ್ಳಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ ಹಿನ್ನಲೆಯಲ್ಲಿ ಜ.7ರಿಂದ 28ರವರೆಗೆ ನಡೆಯಬೇಕಾಗಿದ್ದ ಪಿಎಸ್‍ಐ ಸಿವಿಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ಪರೀಕ್ಷೆಯನ್ನ ಮುಂದೂಡಲಾಗಿದೆ.

    ಅರ್ಹ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯನ್ನು ದಿನಾಂಕ ಜ.07 ರಿಂದ ಜ.28 ರವರೆಗೂ ನಿಗದಿಪಡಿಸಲಾಗಿತ್ತು. ಆದರೆ ಜ.8ರಂದು ಭಾರತ ಬಂದ್ ಘೋಷಣೆಯಾಗಿರುವುದರಿಂದ ಸದರಿ ದಿನಾಂಕದಂದು ಇಟಿ/ಪಿಎಸ್‍ಟಿ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಲು ತೊಂದರೆಯುಂಟಾಗುವ ಸಾಧ್ಯತೆ ಇರುವ ಕಾರಣ ಪರೀಕ್ಷೆಯನ್ನು ಜ.13ರಂದು ನಿಗದಿಪಡಿಸಲಾಗಿದೆ. ಸದರಿ ಆದೇಶದಂತೆ ಇಟಿ/ಪಿಎಸ್‍ಟಿ ಪರೀಕ್ಷೆಗೆ ಹಾಜರಾಗುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತ ಆರ್.ದಿಲೀಪ್ ತಿಳಿಸಿದ್ದಾರೆ.

  • ಭಾರತ್ ಬಂದ್: ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಕೊಟ್ಟ ಪೊಲೀಸರು

    ಭಾರತ್ ಬಂದ್: ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಕೊಟ್ಟ ಪೊಲೀಸರು

    ಬೆಂಗಳೂರು: ಜ.8 ರಂದು ನಡೆಯಲಿರುವ ಭಾರತ್ ಬಂದ್‍ಗೆ ಬರೋಬ್ಬರಿ 46 ಸಂಘಟನೆಗಳು ಅನುಮತಿ ಕೇಳಿದ್ದು, ಅಷ್ಟು ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಯನ್ನ ಬೆಂಗಳೂರು ಪೊಲೀಸರು ಪೊಲೀಸರು ನೀಡಿದ್ದಾರೆ.

    ಭಾರತ್ ಬಂದ್ ವೇಳೆ ಮುಷ್ಕರವಷ್ಟೇ ಮಾಡಬೇಕು. ಯಾವುದೇ ಕಾರಣಕ್ಕೂ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಲ್ಲ. ಪ್ರತಿಭಟನೆಯ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಕಾನೂನು ಸುವ್ಯವಸ್ಥೆ ಉಂಟು ಮಾಡಿದರೆ ಆಯೋಜಕರೆ ನೇರ ಹೊಣೆ. ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದರೆ ಅದರ ವೆಚ್ಚ ಬಂದ್ ಆಯೋಜಕರೆ ಭರಿಸಿಕೊಡ ಬೇಕೆಂಬ ಷರತ್ತುಗಳನು ಪೊಲೀಸರು ವಿಧಿಸಿದ್ದಾರೆ.

    ಸಂಘಟನೆಗಳಿಂದ 15 ಲಕ್ಷ ರೂ. ಬೆಲೆ ಬಾಳು ಮುಚ್ಚಳಿಕೆಯ ಪತ್ರವನ್ನು ಪಡೆದಿರುವ ಪೊಲೀಸರು ಸಂಘಟನೆಗಳಿಗೆ ಅನುಮತಿಯನ್ನ ಕೊಟ್ಟಿದ್ದಾರೆ. ಪ್ರತಿಭಟನೆ ವೇಳೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಅಥವಾ ಮನವಿ ಮಾಡಿಕೊಂಡು ಮುಚ್ಚಿಸುವಂತ ಕೆಲಸ ಮಾಡಬಾರದು. ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.

    ನಾವು ಸಾರ್ವಜನಿಕರ ಅನುಕೂಲಕ್ಕಾಗಿ ಈ ಒಂದು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮೆರವಣಿಗೆ ಮಾಡಿದರೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಕಿರಿಕಿರಿ ಉಂಟುಟಾಗುತ್ತದೆ. ಪರಿಣಾಂ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ. ಅನುಮತಿಯನ್ನು ಉಲ್ಲಂಘಿಸಿ ಮೆರವಣಿಗೆಗೆ ಮುಂದಾದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 107 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

  • ಭಾರತ್ ಬಂದ್‍ಗೆ ರಾಯಚೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

    ಭಾರತ್ ಬಂದ್‍ಗೆ ರಾಯಚೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

    ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿಗಳು, ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯಿಂದ ಸಾರಿಗೆ ನಿಯಮಗಳನ್ನು ಖಾಸಗಿಯವರಿಗೆ ವಹಿಸಿರುವ ನೀತಿಗಳ ವಿರುದ್ಧ ಹಾಗೂ ಕಾರ್ಮಿಕರ ಇನ್ನಿತರೆ ಬೇಡಿಕೆಗಳನ್ನು ಒತ್ತಾಯಿಸಿ ನಾಳೆ ನಡೆಯಲಿರುವ ಭಾರತ ಬಂದ್ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ 3 ಕೆಎಸ್‌ಆರ್‌ಪಿ, 10 ಡಿಎಆರ್, 500 ಪೊಲೀಸ್ ಕಾನ್‍ಸ್ಟೇಬಲ್‍ಗಳು, ಅತಿ ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಮೆರಾ ಮ್ಯಾನ್‍ಗಳನ್ನು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 40 ಪಿಎಸ್‍ಐಗಳು, 20 ಸಿಪಿಐಗಳು, 04 ಡಿವೈಎಪಿಗಳು, ಹಾಗೂ ಇಬ್ಬರು ಎಸ್‍ಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.

    ಬಂದ್ ಸಮಯದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಕರಣ ನಡೆದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಮೇಲೆ ಟೈಯರ್‍ಗಳನ್ನು ಸುಟ್ಟು ಸಂಚಾರಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾದ್ಯಾಂತ ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇಧಮೂರ್ತಿ ಹೇಳಿದರು.

    ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಲ್ಲಿನ ಸಿಐಟಿಯು, ಎಐಟಿಯುಸಿ, ಬಿಎಸ್‍ಎನ್‍ಎಲ್‍ಇಯು, ಎಐಯುಟಿಯುಸಿ ಸೇರಿ 10ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ಬೆಳಗ್ಗೆ 10 ಗಂಟೆಯಿಂದ 12ರವರೆಗೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶ ನಡೆಸಲಿವೆ. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

    ಬುಧವಾರ ಎಂದಿನಂತೆ ಬಸ್ ಸಂಚಾರ, ಶಾಲಾ ಕಾಲೇಜುಗಳು ನಡೆಯಲಿದ್ದು, ಸ್ವಯಂ ಪ್ರೇರಿತರಾಗಿ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟು ಬಂದ್ ಮಾಡುವ ಸಾಧ್ಯತಯಿದೆ. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಿರುವುದರಿಂದ ಖಾಸಗಿ ಶಾಲಾ ಕಾಲೇಜುಗಳು ರಜೆ ಘೋಷಿಸುವ ಸಾಧ್ಯತೆಯಿದೆ. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ.

  • ಹೆಚ್ಚು ಕಡಿಮೆ ಆದ್ರೆ ನೀವೇ ಜವಾಬ್ದಾರಿ, ಬಿ ಕೇರ್ ಫುಲ್: ಭಾಸ್ಕರ್ ರಾವ್

    ಹೆಚ್ಚು ಕಡಿಮೆ ಆದ್ರೆ ನೀವೇ ಜವಾಬ್ದಾರಿ, ಬಿ ಕೇರ್ ಫುಲ್: ಭಾಸ್ಕರ್ ರಾವ್

    ಬೆಂಗಳೂರು: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಕರೆದಿರುವ ಭಾರತ್ ಬಂದ್‍ಗೆ ಎಲ್ಲೆಡೆ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಈಗಾಗಲೇ 46 ಸಂಘಟನೆಗಳು ಪ್ರತಿಭಟನೆಗೆ ಅವಕಾಶವನ್ನು ಪಡೆದುಕೊಂಡಿವೆ. ಆದರೆ ಪೊಲೀಸ್ ಇಲಾಖೆ ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ ಸೂಚನೆ ನೀಡಲಾಗಿದೆ.

    ನಾಳೆಯ ಭಾರತ್ ಬಂದ್‍ಗೆ ಖಡಕ್ ಸೂಚನೆಗಳನ್ನು ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರತಿಯೊಂದು ಸ್ಟೇಷನ್ ವ್ಯಾಪ್ತಿಯ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮ ಎಚ್ಚರಿಕೆಯನ್ನೂ ಮೀರಿ ಪ್ರತಿಭಟನಾ ರ‍್ಯಾಲಿಗಳು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸೋದು, ಕಲ್ಲು ತೂರಾಟ ಮಾಡಿದ ಕುರಿತು ವರದಿಯಾದರೆ ಅದಕ್ಕೆ ಇನ್ಸ್‍ಪೆಕ್ಟರ್‍ಗಳೇ ಜವಾಬ್ದಾರಿ ಎಂದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಬುಧವಾರ ಭಾರತ್ ಬಂದ್ – ಏನು ಇರುತ್ತೆ? ಏನು ಇರಲ್ಲ?

    ಇಂದು ರಾತ್ರಿಯಿಂದಲೇ ಅತಿ ಹೆಚ್ಚು ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಬೆಳ್ಳಂಬೆಳಗ್ಗೆ ಸಂಚರಿಸುವ ಬಸ್‍ಗಳಿಗೂ ಭದ್ರತೆಯನ್ನು ಒದಗಿಸಬೇಕು. ಗುಂಪು ಸೇರಿ ಹೊಂಚು ಹಾಕುವವರ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.