Tag: ಭಾರತ್ ಬಂದ್

  • ಬಂದ್ ನಡುವೆಯೂ ಮಾನವೀಯತೆ ಮೆರೆದ ಮಂಡ್ಯ ಪೊಲೀಸರು

    ಬಂದ್ ನಡುವೆಯೂ ಮಾನವೀಯತೆ ಮೆರೆದ ಮಂಡ್ಯ ಪೊಲೀಸರು

    ಮಂಡ್ಯ: ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತ್ ಬಂದ್ ನಡೆಯುತ್ತಿದೆ. ಈ ಬಂದ್ ನಡುವೆಯೂ ವೃದ್ಧರೊಬ್ಬರಿಗೆ ಸಹಾಯ ಮಾಡುವ ಮೂಲಕ ಮಂಡ್ಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

    ಸಂಜಯ ವೃತ್ತದ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಿದ್ದಿದ್ದ ವೃದ್ಧನನ್ನು ಆಸ್ಪತ್ರೆಗೆ ಕಳುಹಿಸಿ ಮಂಡ್ಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ವೃದ್ಧರೊಬ್ಬರು ಹೆದ್ದಾರಿಯಲ್ಲಿ ಬಿದ್ದು ತಲೆಗೆ ಗಾಯವಾಗಿ ರಕ್ತ ಸೋರುತ್ತಿತ್ತು. ಇಂದು ಬಂದ್ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಬಂದೋಬಸ್ತ್ ನಲ್ಲಿ ಪೊಲೀಸರು ಇದ್ದರು.

    ವೃದ್ಧನನ್ನು ನೋಡಿ ಸ್ಥಳಕ್ಕೆ ಬಂದ ಸಂಚಾರ ಪೇದೆ ಗಿರೀಶ್ ಮತ್ತು ಪಶ್ಚಿಮ ಠಾಣೆ ಪೇದೆ ರುದ್ರಪ್ಪ ಅವರನ್ನು ಮೇಲೆತ್ತಿ ಆಟೋವನ್ನು ಸ್ಥಳಕ್ಕೆ ಕರೆಸಿದ್ದಾರೆ. ಬಳಿಕ ವೃದ್ಧನನ್ನು ಆಟೋದಲ್ಲಿ ಕೂರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಜೇಬಿನಿಂದ ವೃದ್ಧನಿಗೆ ಹಣ ಕೊಟ್ಟಿದ್ದಾರೆ. ಪೊಲೀಸರ ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಪೊಲೀಸರ ಸಹಾಯಕ್ಕೆ ವೃದ್ಧ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ದಿಡೀರ್ ಅಂತ ಬಸ್, ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾಗಿದೆ. ಇದರಿಂದ ಆಕ್ರೋಶಗೊಂಡು ಜನರು ಇಂದು ಭಾರತ್ ಬಂದ್ ಮಾಡುತ್ತಿದ್ದಾರೆ. ಬಿಜೆಪಿ ಆಡಳಿತ ರಾಜ್ಯಗಳನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ಕೂಡ ಭಾರತ್ ಬಂದ್ ನಡೆಯುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಬಹಿರಂಗವಾಗಿ ಬಂದ್‍ಗೆ ಬೆಂಬಲ ಘೋಷಿಸಿದೆ. ಕನ್ನಡಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಬಂದ್‍ಗೆ ಬೆಂಬಲ ನೀಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ: ಪರಸ್ಪರ ತಳ್ಳಾಡಿದ ಉದ್ರಿಕ್ತರು

    ಉಡುಪಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ: ಪರಸ್ಪರ ತಳ್ಳಾಡಿದ ಉದ್ರಿಕ್ತರು

    ಉಡುಪಿ: ಭಾರತ್ ಬಂದ್ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರ ನಡುವೆ ಜಟಾಪಟಿಯಾಗಿರುವ ಘಟನೆ ಜಿಲ್ಲೆಯ ಕಡಿಯಾಳಿಯಲ್ಲಿ ವರದಿಯಾಗಿದೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಒತ್ತಾಯದ ಬಂದ್ ಮಾಡಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಗೆ ಧಿಕ್ಕಾರ ಕೂಡಿ, ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಪ್ರಧಾನಿ ಮೋದಿಗೆ ಜೈಕಾರ ಕೂಗಿದರು. ಆಗ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ.

    ಹಿಂದೂ ಕಾರ್ಯಕರ್ತೆಯೊಬ್ಬರ ನಡುವೆ ವಾಗ್ಯುದ್ಧ ಶುರುವಾಯ್ತು. ಪರಸ್ಪರ ತಳ್ಳಾಟ ಮಾಡಿಕೊಂಡ ಕಾರ್ಯಕರ್ತರನ್ನು ಬಿಡಿಸಲು ಪೊಲೀಸರು ಹರಸಾಹಸಪಟ್ಟರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಲಾಟೆ ಬಿಡಿಸುವಷ್ಟರಲ್ಲಿ ಹೈರಾಣಾಗಿ ಹೋದರು. ಎರಡು ಗುಂಪುಗಳ ಮನವೊಲಿಸುವಷ್ಟರಲ್ಲಿ ಖಾಕಿಧಾರಿಗಳು ಸುಸ್ತಾಗಿ ಹೋದರು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹಿಂದೂ ಕಾರ್ಯಕತೆ, ಧಮ್ಕಿ ಹಾಕಿ, ರೌಡೀಸಂ ಮಾಡಿ ಅಂಗಡಿ ಮುಚ್ಚಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ನಾನು ಅಲ್ಲೇ ಇದ್ದೆ. ಇದು ಕಾನೂನು ಬಾಹಿರ ಮತ್ತು ಅನ್ಯಾಯದ ಚಟುವಟಿಕೆಯಾಗಿದೆ. ನಾವು ಮಾಡಿದ ಸ್ಥಳದಲ್ಲೇ ಖಂಡಿಸಿದ್ದೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಣೇಬೆನ್ನೂರಿನಿಂದ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕನನ್ನು ಹಾವೇರಿಯಲ್ಲಿ ಬಿಟ್ಟ ಸಾರಿಗೆ ಸಿಬ್ಬಂದಿ

    ರಾಣೇಬೆನ್ನೂರಿನಿಂದ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕನನ್ನು ಹಾವೇರಿಯಲ್ಲಿ ಬಿಟ್ಟ ಸಾರಿಗೆ ಸಿಬ್ಬಂದಿ

    ಹಾವೇರಿ: ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ದೇಶ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಎಂದಿನಂತೆ ಸಾರಿಗೆ ಬಸ್ ಕಾರ್ಯ ನಿರ್ವಹಿಸುತ್ತಿದ್ದು, ರಾಣೇಬೆನ್ನೂರಿನಿಂದ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕನನ್ನು ಹಾವೇರಿಯಲ್ಲಿ ಬಿಟ್ಟಿದ್ದಕ್ಕಾಗಿ ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕನ ನಡುವೆ ಮಾತಿನ ಚಕಮಕಿ ನಡೆದಿದೆ.

    ರಾಣೇಬೆನ್ನೂರು ನಗರದಿಂದ ಹುಬ್ಬಳ್ಳಿ ಸಾರಿಗೆ ಬಸ್ ಬಿಡಲಾಗಿದೆ. ಆದರೆ ಹುಬ್ಬಳ್ಳಿಯಲ್ಲಿ ಸಂಪೂರ್ಣ ಬಂದ್ ಆಗಿರೋ ಹಿನ್ನೆಲೆಯಲ್ಲಿ ರಾಣೇಬೆನ್ನೂರಿನಿಂದ ಕರೆದುಕೊಂಡು ಬಂದು ಹಾವೇರಿಗೆ ಬಿಡಲಾಯಿತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರೊಬ್ಬರು ಬಸ್ ಬಂದ್ ಮಾಡಿ, ಇಲ್ಲ ಅಂದರೆ ಪ್ರಯಾಣಿಕರು ಹೇಳಿದ ಸ್ಥಳಕ್ಕೆ ತಲುಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದನು.

    ಆಕ್ರೋಶಗೊಂಡ ಪ್ರಯಾಣಿಕ ಮತ್ತು ಕೆಎಸ್‍ಆರ್‍ಟಿಸಿ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸಾರಿಗೆ ಇಲಾಖೆಯ ಸಿಬ್ಬಂದಿ ಪ್ರಯಾಣಿಕನನ್ನು ಹಿಡಿದು ಕಳಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ ಇಳಿಸಿ ಅಂದ್ರೆ ನೀರಲ್ಲಿ ಬಸ್ ಓಡಿಸುವುದಕ್ಕೆ ಸಾಧ್ಯವಾಗುತ್ತಾ..?- ಎಚ್‍ಡಿಡಿ

    ದರ ಇಳಿಸಿ ಅಂದ್ರೆ ನೀರಲ್ಲಿ ಬಸ್ ಓಡಿಸುವುದಕ್ಕೆ ಸಾಧ್ಯವಾಗುತ್ತಾ..?- ಎಚ್‍ಡಿಡಿ

    ಮಂಡ್ಯ: ಬಸ್ ಸಂಚಾರ ದರ ಹೆಚ್ಚಿಸುತ್ತಿರುವುದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯಿಸಿದ್ದು, ಬಸ್ ಸಂಚಾರ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ದೇವೇಗೌಡರು, ಡೀಸೆಲ್, ಪೆಟ್ರೋಲ್ ದರ ಇಳಿಸಿ ಎಂದು ಭಾರತ್ ಬಂದ್ ಮಾಡುತ್ತಿದ್ದಾರೆ. ದರ ಇಳಿಸಿ ಅಂದರೆ ಏನು ನೀರಲ್ಲಿ ಬಸ್ ಓಡಿಸುವುದಕ್ಕೆ ಸಾಧ್ಯವಾಗುತ್ತಾ. ಬಸ್ ದರವನ್ನು ಸುಮ್ಮ ಸುಮ್ಮನೆ ಏರಿಸುತ್ತಾರಾ. ಆದ್ದರಿಂದ ಬಂದ್‍ಗೆ ನಮ್ಮ ಬೆಂಬಲವಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ ಎಂದು ಬಸ್ ಸಂಚಾರ ದರ ಏರಿಕೆಗೆ ಕಾರಣ ನೀಡಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

    ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಬಸ್ ಪ್ರಮಾಣದ ದರ ಹೆಚ್ಚಿಸುವ ಕುರಿತು ಈ ಹಿಂದೆ ಸುಳಿವು ನೀಡಿದ್ದರು. ಆದರೆ ಈಗ ಮುಂದಿನ ವಾರದಲ್ಲಿಯೇ ದರ ಏರಿಕೆಯಾಗಲಿದೆ ಸ್ಪಷ್ಟನೆ ನೀಡಿದ್ದಾರೆ. ಭಾನುವಾರ ಈ ಬಗ್ಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿದೆ. ಇದರಿಂದಾಗಿಯೇ ಬಸ್ ಪ್ರಯಾಣದ ದರ ಏರಿಕೆ ಮಾಡಲಾಗುತ್ತಿದೆ ಎಂದ ಅವರು, ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯದಲ್ಲಿಯೇ ಬಸ್ ಪ್ರಯಾಣ ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದರು.

    ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬಸ್ ಪ್ರಯಾಣದ ದರ ಏರಿಕೆಗೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಆದರೆ ನಾನು ಅದನ್ನು ತಡೆಹಿಡಿದಿದ್ದೆ. ಈಗ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದೆ. ಹೀಗಾಗಿ ಈ ಹಿಂದೆ ಅಧಿಕಾರಿಗಳು ಸಲ್ಲಿಸಿರುವ ಬಸ್ ಪ್ರಯಾಣದ ದರದ ಆಧಾರದ ಮೇಲೆ ದರವನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದರು.

    ಪ್ರಯಾಣದ ದರ ಹೆಚ್ಚಾದರೆ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್‍ಗೆ ಹೆಚ್ಚು ಹಣ ಪಾವತಿಸಿ ಖರೀದಿಸುತ್ತಿದ್ದಾರೆ. ಇದು ಅವರಿಗೆ ಹೊರೆ ಆಗುತ್ತಿಲ್ಲವೇ? ಹಾಗೇ ಬಸ್ ಪ್ರಯಾಣದ ದರ ಏರಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದರು. .

    ಭಾರತ್ ಬಂದ್ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಂದ್‍ಗೆ ಜೆಡಿಎಸ್ ಪಕ್ಷದಿಂದ ಬೆಂಬಲ ನೀಡಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಬಂದ್ ಅನ್ನು ಬೆಂಬಲಿಸುತ್ತಾರೆ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಗ್ಗೆ ಕರವೇ ವತಿಯಿಂದ ಪಂಜಿನ ಮೆರವಣಿಗೆ

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಗ್ಗೆ ಕರವೇ ವತಿಯಿಂದ ಪಂಜಿನ ಮೆರವಣಿಗೆ

    ಚಿಕ್ಕಬಳ್ಳಾಪುರ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ನೀಡಿರುವ ಭಾರತ್ ಬಂದ್‍ಗೆ ಚಿಕ್ಕಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

    ಬೆಳ್ಳಂ ಬೆಳಗ್ಗೆ ಬೀದಿಗೆ ಇಳಿದಿರೋ ಕರವೇ ಯುವಸೇನೆಯಯ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸುವ ಮೂಲಕ ಭಾರತ್ ಬಂದ್‍ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ನಗರದ ಬಲಮುರಿ ವೃತ್ತದಿಂದ ಬಿಬಿ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಪ್ರತಿಭಟನಾ ಪಂಜಿನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

    ಪೆಟ್ರೋಲ್ ಹಾಗೂ ಡೀಸಲ್ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದ್ದು, ಪೆಟ್ರೋಲ್ ಡೀಸಲ್ ಬೆಲೆ ಇಳಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ನಮ್ಮ ಮೆಟ್ರೋ’ಗೆ ತಟ್ಟಿದ ಭಾರತ್ ಬಂದ್ ಬಿಸಿ..?

    ‘ನಮ್ಮ ಮೆಟ್ರೋ’ಗೆ ತಟ್ಟಿದ ಭಾರತ್ ಬಂದ್ ಬಿಸಿ..?

    ಬೆಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಮೆಟ್ರೋ ಸಂಚಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿದ್ದು, 10 ಗಂಟೆಯ ನಂತರ ನಿಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಈ ಮೊದಲು ಬಸ್ ಗಳಿಲ್ಲದೇ ಪ್ರಯಾಣಿಕರಿಗೆ ಮೆಟ್ರೋನೇ ಆಶ್ರಯ. ಹಾಗಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸದಂತೆ ಬಿಎಂಆರ್ ಸಿಎಲ್ ಎಂಡಿ ಸೂಚನೆ ನೀಡಿದ್ದರು. ಆದ್ರೆ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯ ನಂತರ ಟಿಕೆಟ್ ವಿತರಿಸದಂತೆ ಮೆಟ್ರೋ ಅಧಿಕಾರಿಗಳು ಸಿಬ್ಬಂದಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ನಮ್ಮ ಮೆಟ್ರೋ ಸಂಚಾರ ನಿಂತರೆ ಇಡೀ ಬೆಂಗಳೂರು ನಗರ ಸ್ತಬ್ಧವಾಗಲಿದೆ.

    ನಗರದಲ್ಲಿ ಆಟೋಗಳ ಸಂಚಾರವಿದ್ದು, ಆದ್ರೆ ಚಾಲಕರು ಹಗಲು ದರೋಡೆಗೆ ನಿಂತಿದ್ದಾರೆ. ಬೆಂಗಳೂರು ನಗರದ ಕೆಲವೆಡೆ ಖಾಸಗಿ ವಾಹನಗಳ ಸಂಚರಿಸುತ್ತಿದ್ದರೂ, ಪ್ರಯಾಣಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಇದೂವರೆಗೂ ಬೆಂಗಳೂರಿನ ಯಾವುದೇ ಡಿಪೋಗಳಿಂದ ಬಸ್ ಗಳು ರಸ್ತೆಗೆ ಇಳಿದಿಲ್ಲ.

    ದೇಶದಲ್ಲಿ ಈ ಮೊದಲು 12 ಅಥವಾ 15 ದಿನಕ್ಕೊಮ್ಮೆ ತೈಲದರ ಪರಿಷ್ಕರಣೆ ಆಗುತ್ತಿತ್ತು. ಆದರೆ ಜೂನ್ 15, 2017ರಿಂದ ಪ್ರತಿದಿನ ಪರಿಷ್ಕರಣೆ ಆಗುತ್ತಿದೆ. ಅದರಂತೆ, ಆಗಸ್ಟ್ 31ರಿಂದ ಇವತ್ತಿನ ವರಗೆ ನಿರಂತರವಾಗಿ 12 ದಿನಗಳಲ್ಲಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 3 ರೂಪಾಯಿ ಹಾಗೂ ಡೀಸೆಲ್ ಲೀಟರ್‍ಗೆ ಎರಡೂವರೆ ರೂಪಾಯಿ ದುಬಾರಿಯಾಗಿದೆ.

    ದೇಶವ್ಯಾಪಿ ಸಾವಿರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂದಹಾಗೆ, ಮೇ 2014ರಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ತೈಲದರದ ಮೇಲಿನ ಅಬಕಾರಿ ಸುಂಕ 12 ಬಾರಿ ಹೆಚ್ಚಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ.211.7ರಷ್ಟು ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಬರೋಬ್ಬರಿ ಶೇ. 443.06ರಷ್ಟು ಹೆಚ್ಚಾಗಿದೆ. 414 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ದರ 754 ರೂಪಾಯಿಗೆ ದುಪ್ಪಟ್ಟಾಗಿದೆ ಅಂತ ಕಾಂಗ್ರೆಸ್ ಅರೋಪಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಂದ್ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ – ಮೋದಿ ಸರ್ಕಾರದ ವಿರುದ್ಧ ಜನಾಕ್ರೋಶ

    ಬಂದ್ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ – ಮೋದಿ ಸರ್ಕಾರದ ವಿರುದ್ಧ ಜನಾಕ್ರೋಶ

    ಬೆಂಗಳೂರು: ದೇಶದಲ್ಲಿ ಈ ಮೊದಲು 12 ಅಥವಾ 15 ದಿನಕ್ಕೊಮ್ಮೆ ತೈಲದರ ಪರಿಷ್ಕರಣೆ ಆಗುತ್ತಿತ್ತು. ಆದರೆ ಜೂನ್ 15, 2017ರಿಂದ ಪ್ರತಿದಿನ ಪರಿಷ್ಕರಣೆ ಆಗುತ್ತಿದೆ. ಅದರಂತೆ, ಆಗಸ್ಟ್ 31ರಿಂದ ಇವತ್ತಿನ ವರಗೆ ನಿರಂತರವಾಗಿ 12 ದಿನಗಳಲ್ಲಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 3 ರೂಪಾಯಿ ಹಾಗೂ ಡೀಸೆಲ್ ಲೀಟರ್‍ಗೆ ಎರಡೂವರೆ ರೂಪಾಯಿ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 1ರಿಂದ ಇವತ್ತಿನವರೆಗೆ 10 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಕೆಯಾಗಿದೆ.

    • ದಿನಾಂಕ             ಪೆಟ್ರೋಲ್                  ಡೀಸೆಲ್
      * ಸೆಪ್ಟೆಂಬರ್ 10   83.36 (24 ಪೈಸೆ)      75.18 (23 ಪೈಸೆ)
      * ಸೆಪ್ಟೆಂಬರ್ 9     83.12 (12 ಪೈಸೆ)       74.95 (11 ಪೈಸೆ)
      * ಸೆಪ್ಟೆಂಬರ್ 8     83.00 (40 ಪೈಸೆ)     74.84 (45 ಪೈಸೆ)
      * ಸೆಪ್ಟೆಂಬರ್ 7     82.60 (57 ಪೈಸೆ)      74.39 (60 ಪೈಸೆ)
      * ಸೆಪ್ಟೆಂಬರ್ 6     82.03 (14 ಪೈಸೆ)      73.79 (16 ಪೈಸೆ)
      * ಸೆಪ್ಟೆಂಬರ್ 5     81.89 (ಏರಿಕೆ ಆಗಿಲ್ಲ)  73.63 (ಏರಿಕೆ ಆಗಿಲ್ಲ)
      * ಸೆಪ್ಟೆಂಬರ್ 4    81.89 (17 ಪೈಸೆ)       73.63 (19 ಪೈಸೆ)
      * ಸೆಪ್ಟೆಂಬರ್ 3     81.72 (32 ಪೈಸೆ)     73.44 (41 ಪೈಸೆ)
      * ಸೆಪ್ಟೆಂಬರ್ 2    81.40 (13 ಪೈಸೆ)       73.03 (32 ಪೈಸೆ)
      * ಸೆಪ್ಟೆಂಬರ್ 1     81.27 (20 ಪೈಸೆ)      72.71 (25 ಪೈಸೆ)

    ತೈಲದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರದ ಮೋದಿ ಸರ್ಕಾರ ಕನಿಷ್ಠ ಮಧ್ಯ ಪ್ರವೇಶದ ಯತ್ನವನ್ನೂ ಮಾಡಿಲ್ಲ. ಇದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಇದು `ಹಗಲು ಲೂಟಿ’ ಅಂತ ಕಾಂಗ್ರೆಸ್ ಆರೋಪಿಸಿದೆ. ತತ್‍ಕ್ಷಣವೇ ತೈಲದರ ಕಡಿಮೆ ಮಾಡುವುದು, ಹಾಗೂ ಪೆಟ್ರೋಲ್-ಡೀಸೆಲ್ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಅಂತ ಆಗ್ರಹಿಸಿದೆ. ಹೀಗಾಗಿ, ಕಾಂಗ್ರೆಸ್ ನೇತೃತ್ವದಲ್ಲಿ ದೇಶದ 21 ಪಕ್ಷಗಳು ಇವತ್ತು ಭಾರತ್ ಬಂದ್ ನಡೆಡುತ್ತಿವೆ.

    ದೇಶವ್ಯಾಪಿ ಸಾವಿರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂದಹಾಗೆ, ಮೇ 2014ರಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ತೈಲದರದ ಮೇಲಿನ ಅಬಕಾರಿ ಸುಂಕ 12 ಬಾರಿ ಹೆಚ್ಚಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ.211.7ರಷ್ಟು ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಬರೋಬ್ಬರಿ ಶೇ. 443.06ರಷ್ಟು ಹೆಚ್ಚಾಗಿದೆ. 414 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ದರ 754 ರೂಪಾಯಿಗೆ ದುಪ್ಪಟ್ಟಾಗಿದೆ ಅಂತ ಕಾಂಗ್ರೆಸ್ ಅರೋಪಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶಾದ್ಯಂತ ಭಾರತ್ ಬಂದ್ ಆರಂಭ- ಬೃಹತ್ ಬೆಂಗಳೂರು ಸ್ತಬ್ಧ

    ದೇಶಾದ್ಯಂತ ಭಾರತ್ ಬಂದ್ ಆರಂಭ- ಬೃಹತ್ ಬೆಂಗಳೂರು ಸ್ತಬ್ಧ

    ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕರೆಕೊಟ್ಟಿರುವ ಭಾರತ್ ಬಂದ್‍ಗೆ ಬೆಂಗಳೂರಲ್ಲಿ ಇಡೀ ಸಾರಿಗೆ ವ್ಯವಸ್ಥೆಯೇ ಸ್ತಬ್ಧವಾಗಿದೆ. ಬಂದ್‍ಗೆ ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಬೆಂಗಳೂರಿನ ಸಂಚಾರ ವ್ಯವಸ್ಥೆಯೇ ಸ್ತಬ್ಧವಾಗಿದೆದೆ. ಬಿಎಂಟಿಸಿ ಜೊತೆಗೆ ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ಸಂಚಾರ ಕೂಡ ನಿಂತಿದೆ. ಹಾಗಾಗಿ ಬೆಂಗಳೂರಿಗೆ ಬರುವವರು ಹಾಗೂ ಬೆಂಗಳೂರಿನಿಂದ ತೆರಳುವವರು ತಮ್ಮ ಪ್ರಯಾಣವನ್ನು ಕ್ಯಾನ್ಸಲ್ ಮಾಡಿದ್ರೆ ಒಳ್ಳೆಯದು.

    ಬಸ್ ಸಂಚಾರದ ಬಳಿಕ ಆಟೋ, ಟ್ಯಾಕ್ಸಿ ಮತ್ತು ಆಪ್ ಆಧಾರಿತ ಓಲಾ, ಊಬರ್ ಕ್ಯಾಬ್‍ಗಳನ್ನು ಜನರು ಬಳಸುತ್ತಾರೆ. ಓಲಾ, ಊಬರ್, ಟ್ಯಾಕ್ಸಿ ಫಾರ್ ಶ್ಯೂರ್ ಎಲ್ಲವೂ ಬಂದ್ ಆಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಜಯ ಕರ್ನಾಟಕ ಆಟೋ ಘಟಕ ಮಾತ್ರ ಬಂದ್‍ಗೆ ಬೆಂಬಲಿಸಿದ್ದು, ಉಳಿದ ಆಟೋಗಳು ಬಂದ್ ಬೆಂಬಲಿಸಲ್ಲ. ಹಾಗಾಗಿ ಆಟೋ ಸಂಚಾರ ವ್ಯವಸ್ಥೆ ಇದೆ.

    ಭಾರತ್ ಬಂದ್ ಬಂಡವಾಳ ಮಾಡಿಕೊಂಡ ಆಟೋದವರು ಪ್ರಯಾಣಿಕರ ಸುಲಿಗೆಗೆ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತ್ತ ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾಗಿದೆ. ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಕೆ.ಆರ್.ಮಾರುಕಟ್ಟೆ ಜನರಿಲ್ಲದೇ ಖಾಲಿ ಖಾಲಿ ಕಾಣುತ್ತಿದೆ. ಯಶವಂತಪುರ, ಶಾಂತಿ ನಗರ ಡಿಪೋಗಳಿಂದ ಬಸ್ ಗಳು ಹೊರ ಬಂದಿಲ್ಲ. ದೂರದ ಊರುಗಳಿಂದ ಬಂದಿರುವ ಜನರು ತಮ್ಮ ನಿಗದಿತ ಸ್ಥಳಕ್ಕೆ ತಲುಪಲು ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಭಾರತ್ ಬಂದ್- ಏನಿರುತ್ತೆ..? ಏನಿರಲ್ಲ..?

    ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಭಾರತ್ ಬಂದ್- ಏನಿರುತ್ತೆ..? ಏನಿರಲ್ಲ..?

    ಬೆಂಗಳೂರು: 2014ರ ಚುನಾವಣೆ ಪ್ರಚಾರದಲ್ಲಿ ಮೋದಿ ನೇತೃತ್ವದ ಬಿಜೆಪಿ ಜಪಿಸಿದ್ದು ಅಚ್ಚೇ ದಿನ್ ಮಂತ್ರ. ಆದ್ರೆ ಅಧಿಕಾರಕ್ಕೆ ಬಂದ ನಂತ್ರ ಪ್ರಧಾನಿ ಮೊದಿ ಅದನ್ನು ಮರೆತೆ ಬಿಟ್ಟಂತೆ ಕಾಣುತ್ತಿದೆ. ಯುಪಿಎ ಅವಧಿಗಿಂತ ದೇಶದಲ್ಲಿ ದಿನಗಳು ದುಬಾರಿಯಾಗುತ್ತಿದೆ. ಅದ್ರಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಂತೂ ಯಾರ ಹಿಡಿತಕ್ಕೂ ಸಿಗದ ರೀತಿಯಲ್ಲಿ ಗಗನಮುಖಿಯಾಗಿದೆ.

    ಇದೀಗ ಮತ್ತೆ ಲೋಕಸಭೆ ಚುನಾವಣೆ ಬರುತ್ತಿದೆ. ಅದಕ್ಕೆ ಸಿದ್ಧವಾಗುತ್ತಿರೋ ವಿಪಕ್ಷ ಕಾಂಗ್ರೆಸ್ ಇದೀಗ ತೈಲ ಬೆಲೆ ಅಸ್ತ್ರವನ್ನು ಪ್ರಯೋಗಿಸಿದೆ. ಸೋಮವಾರ ಭಾರತ್ ಬಂದ್‍ಗೆ ಕರೆ ನೀಡಿದೆ. ಸೋಮವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಂದ್ ನಡೆಯಲಿದೆ. ಭಾರತ್ ಬಂದ್‍ಗೆ ಕರೆ ನೀಡುವ ಮೂಲಕ ಬಿಜೆಪಿ ವಿರೋಧಿ ಮಹಾ ಮೈತ್ರಿಕೂಟಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ.

    ಬಂದ್ ಬೆಂಬಲಿಸಿದ ಪಕ್ಷಗಳು:
    * ಜೆಡಿಎಸ್, ಎಸ್‍ಪಿ, ಬಿಎಸ್‍ಪಿ, ಆರ್‍ಜೆಡಿ
    * ಡಿಎಂಕೆ,ಸಿಪಿಎಂ, ಸಿಪಿಐ, ಎಸ್‍ಯುಸಿಐ
    * ಎನ್‍ಸಿಪಿ, ಜನಸೇನಾ, ಶಿವಸೇನೆ, ಎಂಎನ್‍ಎಸ್
    * ಟಿಎಂಸಿಯಿಂದ ಬಂದ್‍ಗೆ ಬೆಂಬಲ ಇಲ್ಲ. (ಪ್ರತಿಭಟನೆ ಮಾತ್ರ)

    ಬಿಜೆಪಿ ಆಡಳಿತ ರಾಜ್ಯಗಳನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ಕೂಡ ಭಾರತ್ ಬಂದ್ ಉಗ್ರ ಸ್ವರೂಪ ತಳೆಯುವ ಸಾಧ್ಯತೆ ಇದೆ. ಅದರಲ್ಲೂ ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಬಹಿರಂಗವಾಗಿ ಬಂದ್‍ಗೆ ಬೆಂಬಲ ಘೋಷಿಸಿದೆ. ಕನ್ನಡಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ರಾಜ್ಯದಲ್ಲಿ ಉತ್ತರ ಕನ್ನಡ, ಹಾವೇರಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಬಂದ್ ಜೋರಾಗೋ ಸಾಧ್ಯತೆ ಇದೆ.

    ಯಾವುದೆಲ್ಲಾ ಇರಲ್ಲ?
    * ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್, ಖಾಸಗಿ ಬಸ್ ಸೇವೆ..!
    * ಆಟೋ, ಓಲಾ-ಊಬರ್, ಖಾಸಗಿ ಶಾಲೆಗಳ ವಾಹನಗಳು, ಐಟಿ-ಬಿಟಿ ವಾಹನ
    * ಸರ್ಕಾರಿ ಶಾಲಾ ಕಾಲೇಜು, ಖಾಸಗಿ ಶಾಲಾ ಕಾಲೇಜುಗಳು..!
    * ಸರ್ಕಾರಿ ಕಚೇರಿ, ಬ್ಯಾಂಕುಗಳು, ಗಾರ್ಮೆಂಟ್ಸ್ ?
    * ಥಿಯೇಟರ್, ಶಾಪಿಂಗ್ ಮಾಲ್
    * ಬೀದಿ ಬದಿ ವ್ಯಾಪಾರ, ಅಂಗಡಿಗಳು, ಹೋಟೆಲ್..?

    ಭಾರತ್ ಬಂದ್‍ಗೆ ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ನಾಲ್ಕು ಸಾರಿಗೆ ನಿಗಮಗಳ ನೌಕರರು ಬಂದ್‍ಬೆ ಬೆಂಬಲ ಸೂಚಿಸಿರೋ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು ಸೇರಿ ರಾಜ್ಯದಲ್ಲಿ ಎಲ್ಲಿಯೂ ಬಸ್‍ಗಳು ರಸ್ತೆಗೆ ಇಳಿಯಲ್ಲ. ದಕ್ಷಿಣ ಕನ್ನಡ, ಮಡಿಕೇರಿ ಸೇರಿ ಹಲವೆಡೆ ಖಾಸಗಿ ಬಸ್‍ಗಳ ಮಾಲೀಕರ ಸಂಘವೂ ಬಂದ್‍ಗೆ ಬೆಂಬಲ ಸೂಚಿಸಿದೆ. ಆಟೋ, ಓಲಾ-ಊಬರ್, ಖಾಸಗಿ ಶಾಲೆಗಳ ವಾಹನಗಳು, ಐಟಿ-ಬಿಟಿ ವಾಹನಗಳ ಸಂಸಘಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಕೆಲ ಆಟೋ ಸಂಘಟನೆಗಳು ಮಾತ್ರ ಬಂದ್‍ಗೆ ಬೆಂಬಲ ನೀಡಿಲ್ಲ. ಸರ್ಕಾರಿ ಶಾಲಾ ಕಾಲೇಜು, ಖಾಸಗಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಬ್ಯಾಂಕುಗಳು, ಗಾರ್ಮೆಂಟ್ಸ್ ಗಳು ನಾಳೆಯ ಪರಿಸ್ಥಿತಿ ನೋಡಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಿವೆ. ಥಿಯೇಟರ್‍ಗಳು, ಶಾಪಿಂಗ್ ಮಾಲ್‍ಗಳು ಬಂದ್ ಆಗಲಿವೆ. ಬೀದಿಬದಿ ವ್ಯಾಪಾರಿಗಳ ಸಂಘಟನೆ ಬಂದ್‍ಗೆ ಬೆಂಬಲ ಸೂಚಿಸಿವೆ. ಅಂಗಡಿ ಹೋಟೆಲ್‍ಗಳು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಿವೆ.

    ಯಾವೆಲ್ಲ್ಲಾ ಸೇವೆ ಲಭ್ಯ?
    * ಔಷಧಿಗಳು, ಆಸ್ಪತ್ರೆ, ಆಂಬ್ಯುಲೆನ್ಸ್
    * ತರಕಾರಿ, ಹಾಲು ಸರಬರಾಜು, ಪತ್ರಿಕೆ
    * ಮೆಟ್ರೋ ಸಂಚಾರ ಸೇವೆಗಳು

    ತುರ್ತು ಅಗತ್ಯಗಳಾದ ಔಷಧಿಗಳು, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆಗಳು, ತರಕಾರಿ, ಹಾಲು ಸರಬರಾಜು, ಪತ್ರಿಕೆ, ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೌರಿಂಗ್, ಕೆಸಿ ಜನರೆಲ್ ಆಸ್ಪತ್ರೆಗಳೂ ಒಪನ್ ಇರಲಿವೆ.

    ಇತ್ತ ಭಾರತ್ ಬಂದ್‍ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಇದು ರಾಜಕೀಯ ಪ್ರೇರಿತ ಬಂದ್. ನಿರ್ಲಕ್ಷ್ಯ ಮಾಡಿ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ರಾಜದೆಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕರೆ ನೀಡಿರೋ ಭಾರತ್ ಬಂದ್ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿಯಿಂದ ವಾಮಮಾರ್ಗ: ಪುಟ್ಟರಂಗಶೆಟ್ಟಿ

    ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿಯಿಂದ ವಾಮಮಾರ್ಗ: ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿಯು ವಾಮಮಾರ್ಗ ಅನುಸರಿಸುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಐಟಿ ಇಲಾಖೆ ದುರ್ಬಳಕೆ ಮಾಡಿಕೊಂಡು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರ ಮೇಲೆ ದಾಳಿ ನಡೆಸುತ್ತಿದೆ. ಇದು ಬಿಜೆಪಿಯವರ ಸೇಡಿನ ರಾಜಕಾರಣವೇ ಹೊರತು ಬೇರೇನೂ ಅಲ್ಲ. ಎಲ್ಲದರ ಬಗ್ಗೆ ನಾಡಿನ ಜನತೆಗೆ ಗೊತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಏನೇ ಮಾಡಿದರೂ, ಅದನ್ನು ಎದುರಿಸುವ ಶಕ್ತಿ ಡಿಕೆಶಿ ಅವರಿಗಿದೆ ಎಂದು ಹೇಳಿದರು.

    ಡಿಕೆಶಿಯವರು ತೆರಿಗೆಯನ್ನು ಕಟ್ಟಿ ಕಾನೂನು ಮೂಲಕವೇ ಆಸ್ತಿ ಸಂಪಾದನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರಿಗಿಂತಲೂ ಬಿಜೆಪಿಯವರು ಹೆಚ್ಚಿನ ಭ್ರಷ್ಟಾಚಾರ ಮಾಡಿದ್ದಾರೆ. ಆದರೆ ಅವರ ಮನೆಯ ಮೇಲೆ ದಾಳಿ ಮಾಡುವ ಕೆಲಸವನ್ನು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸಂಸದೆ ಶೋಭಾ ಕರಂದ್ಲಾಜೆಯವರ ತಾಕತ್ತಿದ್ದರೆ ಶಾಸಕರು ಹಾಗೂ ಸಚಿವರನ್ನು ಉಳಿಸಿಕೊಳ್ಳಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಬಿಜೆಪಿಯವರು ಮಾಡಿದ ಆಪರೇಷನ್ ಕಮಲಕ್ಕೆ ತುತ್ತಾಗಿದ್ದ ಶಾಸಕರ ಪರಿಸ್ಥಿತಿ ಇವತ್ತು ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಯಾರಾದರೂ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ. ಯಾರು ಕೂಡ ಬಿಜೆಪಿ ಪಕ್ಷ ಸೇರುವುದಿಲ್ಲ ಮತ್ತು ಕ್ಷೇತ್ರದ ಮತದಾರರಿಗೆ ಅನ್ಯಾಯ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಕಾಂಗ್ರೆಸ್ಸಿಗೆ ತಾಕತ್ತಿದ್ರೆ ಅವ್ರ ಶಾಸಕರು, ಸಚಿವರನ್ನ ಹಿಡಿದಿಟ್ಟುಕೊಳ್ಳಲಿ: ಶೋಭಾ ಕರಂದ್ಲಾಜೆ

    ಸೋಮವಾರದ ಭಾರತ್ ಬಂದ್ ಕುರಿತು ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ್ದು, ಈಗಾಗಲೇ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ನಮಗೆ ಖಾಸಗಿ ಬಸ್ ಮಾಲೀಕರು, ಆಟೋ ಮಾಲೀಕರ ಸಂಘ, ಥಿಯೇಟರ್ ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಪೆಟ್ರೋಲಿಯಂ ಉತ್ಪನ್ನಗಳು ಏರಿಕೆಯಾಗುತ್ತಲೇ ಇದೆ. ತರಕಾರಿ, ಹಾಲು ಎಲ್ಲದರ ಬೆಲೆಗಳು ಗಗನಕ್ಕೇರಿದೆ. ಹೀಗಾಗಿ ಬಂದ್‍ಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಹುತೇಕ ಬಂದ್ ಖಚಿತ – ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರಿಗೆ ಸ್ತಬ್ಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv