Tag: ಭಾರತ್ ಪೇ

  • ಕ್ಯೂ ಆರ್ ಕೋಡ್ ಅಪ್ಡೇಟ್ ಮಾಡಿಕೊಡುತ್ತೇವೆಂದು ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂ. ವಂಚನೆ

    ಕ್ಯೂ ಆರ್ ಕೋಡ್ ಅಪ್ಡೇಟ್ ಮಾಡಿಕೊಡುತ್ತೇವೆಂದು ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂ. ವಂಚನೆ

    ಬೆಂಗಳೂರು: ಅಂಗಡಿ ಮಾಲೀಕರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಹಣವನ್ನು ಆನ್‍ಲೈನ್ ಮೂಲಕ ವಂಚಿಸಿ ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

    ಆನೇಕಲ್ ಪಟ್ಟಣದ ತುಳಸಿ ಕಲೆಕ್ಷನ್ ಬಟ್ಟೆ ಅಂಗಡಿ ಮತ್ತು ಸೂರ್ಯ ಹಾರ್ಡ್‍ವೇರ್ ಅಂಗಡಿಯವರಿಗೆ ವಂಚಿಸಿದ್ದಾರೆ. ದುಷ್ಕರ್ಮಿಗಳು ಭಾರತ್ ಪೇ ಕ್ಯೂ ಆರ್ ಕೋಡ್ ಅಪ್ಡೇಟ್ ಮಾಡಿಸಿಕೊಡುವುದಾಗಿ ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಇದನ್ನೂ ಓದಿ: ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!

    BRIBE

    ವಂಚಕರ ತಂಡದ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾದ ತೈಲದಲ್ಲಿ ಉಕ್ರೇನ್ ಪ್ರಜೆಗಳ ರಕ್ತದ ವಾಸನೆ ಬೆರೆತಿದೆ: ಉಕ್ರೇನ್ ವಿದೇಶಾಂಗ ಸಚಿವ

  • ರಾಜೀನಾಮೆಗೂ ಮೊದಲೇ ಅಶ್ನೀರ್ ಗ್ರೋವರ್‌ಗೆ ಗೇಟ್‍ಪಾಸ್ ನೀಡಿದ್ದ ಭಾರತ್ ಪೇ

    ನವದೆಹಲಿ: ಫಿನ್ ಟೆಕ್ ಕಂಪನಿ ಭಾರತ್ ಪೇಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ಹಾಗೂ ಅವರ ಕುಟುಂಬ ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತ್ ಪೇ ಆರೋಪಿಸಿದೆ.

    ಮಂಗಳವಾರ ಅಶ್ನೀರ್ ಗ್ರೋವರ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇಂದು ಭಾರತ್ ಪೇ ಸ್ವತಃ ಸಹ ಸಂಸ್ಥಾಪಕನ ಮೇಲೆ ಆರೋಪ ಹೊರಿಸುತ್ತಿದೆ.

    ಅಶ್ನೀರ್ ಗ್ರೋವರ್ ಅವರನ್ನು ಮಂಡಳಿಯ ನಿರ್ದೇಶಕ ಹುದ್ದೆ ಸೇರಿದಂತೆ ಕಂಪನಿಯ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಲಾಗಿದೆ. ಅಶ್ನೀರ್ ಗ್ರೋವರ್ ಹಾಗೂ ಅವರ ಕುಟುಂಬ ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತ್‍ಪೇ ಆರೋಪಿಸಿದೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಸಂಸ್ಥೆಯ ಆಂತರಿಕ ದಾಖಲೆಗಳನ್ನು ಸ್ವತಂತ್ರ ಬಾಹ್ಯ ಸಲಹೆಗಾರರಿಂದ ಪರಿಶೀಲಿಸಲಾಗುವುದು ಎಂದು ತಿಳಿಸಿದ ತಕ್ಷಣ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಗ್ರೋವರ್ ಸ್ವತಃ ರಾಜಿನಾಮೆ ನೀಡಿರುವುದಾಗಿ ಸುಳ್ಳು ನಿರೂಪಣೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.

    ಗ್ರೋವರ್ ಕುಟುಂಬ ಹಾಗೂ ಅವರ ಸಂಬಂಧಿಕರು ಕಂಪನಿಯ ಹಣವನ್ನು ದುರುಪಯೋಗ ಪಡಿಸಿದ್ದಾರೆ. ಇದನ್ನು ಮರೆ ಮಾಚಲು ನಕಲಿ ಮಾರಾಟಗಾರರನ್ನು ಸೃಷ್ಟಿಸಿ ಈ ಮೂಲಕ ಕಂಪನಿಯ ಖಾತೆಯಿಂದ ಹಣವನ್ನು ತೆಗೆದಿದ್ದಾರೆ ಹಾಗೂ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

    ಅವರ ದುಷ್ಕೃತ್ಯಗಳ ಪರಿಣಾಮವಾಗಿ ಗ್ರೋವರ್ ಇನ್ನು ಮುಂದೆ ಕಂಪನಿಯ ಉದ್ಯೋಗಿ, ಸಂಸ್ಥಾಪಕ ಅಥವಾ ನಿರ್ದೇಶಕರಾಗಿಲ್ಲ ಎಂದು ಭಾರತ್ ಪೇ ಹೇಳಿದೆ.