Tag: ಭಾರತ್

  • ಜಿ20 ಸಭೆಯಲ್ಲಿ ಮತ್ತೆ ‘ಭಾರತ್’ ನಾಮಸ್ಮರಣೆ – ಪ್ರಧಾನಿ ಆಸನದ ಮುಂದೆ ಭಾರತ್ ಪದ ಬಳಕೆ

    ಜಿ20 ಸಭೆಯಲ್ಲಿ ಮತ್ತೆ ‘ಭಾರತ್’ ನಾಮಸ್ಮರಣೆ – ಪ್ರಧಾನಿ ಆಸನದ ಮುಂದೆ ಭಾರತ್ ಪದ ಬಳಕೆ

    ನವದೆಹಲಿ: ಇಂಡಿಯಾ (India) ಅಥವಾ ಭಾರತ್ (Bharat) ಪದ ಬಳಕೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಜಿ20 ಶೃಂಗಸಭೆಯಲ್ಲಿ (G20 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿನಿಧಿಸುವ ನಾಮಫಲಕದಲ್ಲಿ (Name Plate) ಇಂಡಿಯಾ ಬದಲು ಭಾರತ್ ಎನ್ನುವ ಪದವನ್ನು ಬಳಕೆ ಮಾಡಲಾಗಿದೆ.

    ಜಿ20 ಅಂತರಾಷ್ಟ್ರೀಯ ಸಭೆಯಾಗಿರುವ ಹಿನ್ನೆಲೆ ಸಜಹವಾಗಿ ಇಂಡಿಯಾ ಎನ್ನುವ ಪದ ಬಳಕೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಭಾರತ್ ಎನ್ನುವ ಪದ ಬಳಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಂತಿದೆ. ಇದನ್ನೂ ಓದಿ: ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ

    ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಏರ್ಪಡಿಸಿರುವ ವಿಶೇಷ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎನ್ನುವ ಪದ ಬಳಕೆ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಕೇಂದ್ರ ಸರ್ಕಾರ ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಬದಲಿಸುವ ನಿರ್ಧಾರ ತೆಗೆದುಕೊಳ್ಳಲಿದ್ದು, ಭಾರತ್ ಎನ್ನುವ ಒಂದೇ ಹೆಸರನ್ನು ಉಳಿಸಿಕೊಳ್ಳಲಿದೆ ಎನ್ನುವ ಚರ್ಚೆ ಶುರುವಾಗಿತ್ತು. ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?

    ಇದಕ್ಕೆ ಪೂರಕ ಎನ್ನುವಂತೆ ಇಂದು ಭಾರತ ಜಿ20 ಸಭೆಯ ಅಧ್ಯಕ್ಷತೆ ವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಆಸಿನರಾಗಿದ್ದ ಕುರ್ಚಿ ಮುಂಭಾಗದಲ್ಲಿ ಇಂಡಿಯಾ ಬದಲು ಭಾರತ್ ಪದ ಬಳಕೆ ಮಾಡಲಾಗಿತ್ತು. ಭಾಷಣ ಅಂತ್ಯವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಈ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ನಾನೊಬ್ಬ ಹೆಮ್ಮೆಯ ಹಿಂದೂ: ರಿಷಿ ಸುನಕ್

    ಸರ್ಕಾರವು ಹಲವಾರು ಅಧಿಕೃತ ಜಿ20 ದಾಖಲೆಗಳಲ್ಲಿ ಭಾರತದೊಂದಿಗೆ ದೇಶಕ್ಕೆ ಸಂವಿಧಾನದಲ್ಲಿ ಬಳಸಲಾದ ‘ಭಾರತ್’ ಎಂಬ ಹೆಸರನ್ನು ಬಳಸಿದೆ. ಇದೊಂದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅಧಿಕೃತ ಮೂಲಗಳು ಹೇಳಿವೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡಿಯಾ ಹೆಸರು ಬದಲಾವಣೆ ರಾಜಕೀಯಕ್ಕಾಗಿ ಮಾತ್ರ: ಪರಮೇಶ್ವರ್

    ಇಂಡಿಯಾ ಹೆಸರು ಬದಲಾವಣೆ ರಾಜಕೀಯಕ್ಕಾಗಿ ಮಾತ್ರ: ಪರಮೇಶ್ವರ್

    ಬೆಂಗಳೂರು: ಇಂಡಿಯಾ (INDIA) ಹೆಸರು ಭಾರತ್ (Bharat) ಎಂದು ಬದಲಾವಣೆ ಮಾಡುತ್ತಿರುವುದು ಕೇವಲ ರಾಜಕಾರಣಕ್ಕೆ (Politics) ಮಾತ್ರ ಎಂದು ಕೇಂದ್ರದ ನಡೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Prameshwar) ವಿರೋಧಿಸಿದ್ದಾರೆ.

    ಇಂಡಿಯಾ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯುನೈಟೆಡ್ ನೇಷನ್ಸ್ ಹೋಗಿ ಇವರೆಲ್ಲ ನೋಡಲಿ. ಪ್ರಧಾನಿಗಳು, ವಿದೇಶಾಂಗ ಮಂತ್ರಿಗಳು ಹೋಗುತ್ತಾರೆ ಅಲ್ಲವಾ, ಅಲ್ಲಿ ಮೊದಲು ನೋಡಲಿ. ಅಲ್ಲಿ ಬೋರ್ಡ್ ಇಟ್ಟಿದ್ದಾರೆ. ಅಲ್ಲಿ ಇಂಡಿಯಾ ಅಂತ ಹೆಸರು ಇಟ್ಟಿದ್ದಾರೆ. ಕಾನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ಅಂತ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಅಸಮಾನತೆ ಇರೋವರೆಗೂ ಮೀಸಲಾತಿ ಮುಂದುವರಿಯಬೇಕು, ಅದಕ್ಕೆ RSS ಸಹಕಾರವಿದೆ: ಮೋಹನ್‌ ಭಾಗವತ್‌

    ಇವರು ಮೇಕ್ ಇನ್ ಇಂಡಿಯಾ ಅಂತ ಮಾಡಿರಲಿಲ್ಲವಾ? ಯಾಕೆ ಅವರು ಆಗಲೇ ಮೇಕ್ ಇನ್ ಭಾರತ ಅಂತ ಹೇಳಬಹುದಿತ್ತು ಅಲ್ಲವಾ? ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು. ಇಂಡಿಯಾ ಹೆಸರಿನಲ್ಲಿ ಏನಾದರೂ ತಪ್ಪು ಇದ್ದರೆ, ಬಹಳ ಕೆಟ್ಟದಾಗಿ ಇದೆ ಅಂತಿದ್ದರೆ, ದೇಶಕ್ಕೆ ಕೆಟ್ಟದಾಗುತ್ತಿದೆ ಅಂತ ಇದ್ದರೆ ನಾವು ಅರ್ಥ ಮಾಡಿಕೊಳ್ಳೋಣ. ಈ ವಿಷಯ ಚರ್ಚೆ ಬೇಕಾಗಿದೆಯಾ? ಇಂಡಿಯಾ ಅಂತ ಒಕ್ಕೂಟ ರಚನೆ ಮಾಡಿದ್ದಕ್ಕೆ ಭಾರತ್ ಮಾಡಲು ಹೊರಟಿದ್ದಾರೆ ಅಂತ ನಾವು ಅರ್ಥೈಸಬೇಕಾಗುತ್ತದೆ. ಇದರಲ್ಲಿ ರಾಜಕಾರಣ ಅಷ್ಟೆ. ಬೇರೆ ಏನು ಇಲ್ಲ ಎಂದರು. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?

    ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?

    ಇಸ್ಲಾಮಾಬಾದ್‌/ ನವದೆಹಲಿ: ಸಂವಿಧಾನದ 1ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಇಂಡಿಯಾ (India) ಪದವನ್ನು ಅಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಈ ಹೊತ್ತಲ್ಲೇ ಇಂಡಿಯಾ ಹೆಸರಿನ ಮೇಲೆ ಹಕ್ಕನ್ನು ಪಾಕಿಸ್ತಾನ (Pakistan) ಪ್ರತಿಪಾದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಇಂಡಿಯಾ ಹೆಸರನ್ನು ವಿಶ್ವಸಂಸ್ಥೆ (UNO) ಮಟ್ಟದಲ್ಲಿ ಭಾರತ ಅಧಿಕೃತವಾಗಿ ಕೈಬಿಟ್ಟಲ್ಲಿ, ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸಲು ಯತ್ನಿಸಬಹುದು ಎನ್ನಲಾಗುತ್ತಿದೆ. ಇಂಡಿಯಾ ಎಂಬ ಪದ ಇಂಡಸ್ (Indus) ಪ್ರಾಂತ್ಯವನ್ನು ಸೂಚಿಸುತ್ತದೆ. ಪ್ರಸ್ತುತ ಈ ಪ್ರಾಂತ್ಯ ಪಾಕಿಸ್ತಾನದಲ್ಲಿದೆ.

    ಭಾರತ ದೇಶ ಸ್ವಾತಂತ್ರ್ಯಗೊಂಡಾಗ ಬ್ರಿಟೀಷರು (British) ಇಂಡಿಯಾ ಎಂದು ಕರೆದರು. ಅದಕ್ಕೆ ಆಗಲೇ ಮಹಮ್ಮದ್ ಅಲಿ ಜಿನ್ನಾ (Muhammad Ali Jinnah) ವಿರೋಧ ವ್ಯಕ್ತಪಡಿಸಿದ್ದರು. ಅದು ಇಂಡಿಯಾ ಆಗುವುದಿಲ್ಲ ಹಿಂದೂಸ್ತಾನ ಆಗುತ್ತದೆ. ಭಾರತ ಎಂದೇ ಕರೆಯಿರಿ ಎಂದು ಜಿನ್ನಾ ಆಗ್ರಹಿಸಿದರು ಎಂದು ಸೌತ್ ಏಷ್ಯಾ ಇಂಡೆಕ್ಸ್ ತಿಳಿಸಿದೆ.

    ಮೌಂಟ್‍ಬ್ಯಾಟನ್‍ಗೆ ಜಿನ್ನಾ ಬರೆದ ಪತ್ರದಲ್ಲಿ, ಹಿಂದೂಸ್ತಾನ ಕೆಲವೊಂದು ನಿಗೂಢ ಕಾರಣಗಳಿಂದ ಇಂಡಿಯಾವನ್ನು ಸ್ವೀಕರಿಸಿದೆ. ಇದು ಹಾದಿ ತಪ್ಪಿಸುವ ಕೆಲಸ. ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ಇಂಡಿಯಾ ಹೆಸರನ್ನು ಭಾರತ ಸ್ವೀಕರಿಸಿದೆ ಎಂದು ವ್ಯಾಖ್ಯಾನಿಸಿದ್ದರು ಅಂತಾ ಹೇಳಲಾಗಿದೆ.

    ಈ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಹೊಸ ವ್ಯಾಖ್ಯಾನ ಮಾಡಿ, ಅಂದು ಜಿನ್ನಾ ಇಂಡಿಯಾ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದು ಜಿನ್ನಾ ನಿಲುವನ್ನೇ ಬಿಜೆಪಿ ಹೊಂದಿದೆ ಎಂದು ಆಪಾದಿಸಿದ್ದಾರೆ. ಇಂಡಿಯಾವನ್ನು ಭಾರತ್ ಎಂದು ಕರೆಯಲು ಸಂವಿಧಾನದಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ. ಆದರೆ ಶತಮಾನಗಳಿಂದ ಸೃಷ್ಟಿಯಾಗಿರುವ ಇಂಡಿಯಾ ಎಂಬ ಹೆಸರಿನ ಬ್ರಾಂಡ್ ಮೌಲ್ಯವನ್ನು ಕಳೆದುಕೊಳ್ಳುವಷ್ಟು ಮೂರ್ಖತನ ನಿರ್ಧಾರವನ್ನು ಕೇಂದ್ರ ಮಾಡುವುದಿಲ್ಲ ಎಂಬ ನಂಬಿಕೆ ನನ್ನದು ಎಂದಿದ್ದಾರೆ.

    ಐಎನ್‍ಡಿಐಎ ಬದಲಾಗಿ ವಿಪಕ್ಷ ಭಾರತ್ ಎಂದು ಇಟ್ಟುಕೊಂಡರೆ ಬಿಜೆಪಿ ಆಗೇನು ಮಾಡಲಿದೆ ಎಂದು ತರೂರ್ ಪ್ರಶ್ನಿಸಿದ್ದಾರೆ. Bharat ಎಂದರೆ ಬೆAlliance for Betterment, Harmony And Responsible Advancement for Tomorrow ಎಂದು ಕೂಡ ಕರೆಯಬಹುದು ಎಂದಿದ್ದಾರೆ.  ಇದನ್ನೂ ಓದಿ: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮನೆಯಲ್ಲಿ ಡಿಕೆಶಿ ಭರ್ಜರಿ ಊಟ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡಿಯಾ ಬದಲು ‘ಭಾರತ್‌’ ಎಂದು ಹೆಸರಿಡಲು ಬಿಗ್ ಬಿ ಬೆಂಬಲ

    ಇಂಡಿಯಾ ಬದಲು ‘ಭಾರತ್‌’ ಎಂದು ಹೆಸರಿಡಲು ಬಿಗ್ ಬಿ ಬೆಂಬಲ

    ಇಂಡಿಯಾ (India) ಬದಲು ‘ರಿಪಬ್ಲಿಕ್ ಆಫ್ ಭಾರತ್’ (Republic Of Bharat) ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಡಿಯಾ ಮರುನಾಮಕರಣ ಮಾಡುವ ಬಗ್ಗೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ.

    ಕೇಂದ್ರ ಸರ್ಕಾರವು ದೇಶದ ಹೆಸರನ್ನು ಇಂಡಿಯಾ ಬದಲಿಗೆ ‘ರಿಪಬ್ಲಿಕ್ ಆಫ್ ಭಾರತ್’ ಎಂದು ನಾಮಕರಣ ಮಾಡುವ ಚಿಂತನೆಯಲ್ಲಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಇದೀಗ ನಟ ಅಮಿತಾಭ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಇಂಡಿಯಾಗೆ ಭಾರತ ಎಂದು ಹೆಸರಿಡಲು ನನ್ನ ಸಹಮತವಿದೆ ಎಂದು ಬೆಂಬಲಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಭಾರತ್‌ ಮಾತಾ ಕೀ ಜೈ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ:‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ಬಿಜೆಪಿ (BJP) ಕೇಂದ್ರ ಸರ್ಕಾರವು ದೇಶದ ಹೆಸರನ್ನು’ಇಂಡಿಯಾ’ ಬದಲಿಗೆ ‘ರಿಪಬ್ಲಿಕ್‌ ಆಫ್‌ ಭಾರತ್‌’ (Republic Of Bharat) ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ್‌ ಹೆಸರು ಅವಶ್ಯಕತೆ ಇಲ್ಲ: ಸಿದ್ದರಾಮಯ್ಯ

    ಭಾರತ್‌ ಹೆಸರು ಅವಶ್ಯಕತೆ ಇಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಭಾರತ್ (Bharat) ಎಂಬ ಹೊಸ ಹೆಸರು ಅವಶ್ಯಕತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಕೇಂದ್ರ ಸರ್ಕಾರ ಇಂಡಿಯಾ (India) ಬದಲು ಭಾರತ್‌ ಎಂಬ ಹೆಸರನ್ನು ಮರು ನಾಮಕರಣ ಮಾಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಿಪಬ್ಲಿಕ್ ಆಫ್ ಇಂಡಿಯಾ (Republic Of India) ಎಂಬ ಪದ ಸಂವಿಧಾನದಲ್ಲಿ (Constitution) ಹೇಳಲಾಗಿದೆ. ಇಂಡಿಯಾ ಎಂಬ ಪದವನ್ನು ನಮ್ಮ ದೇಶ ಒಪ್ಪಿಕೊಂಡಿದೆ. ಹೀಗಾಗಿ ಭಾರತ್ ಎಂಬ ಹೊಸ ಹೆಸರು ಅವಶ್ಯಕತೆ ಇಲ್ಲ ಎಂದು ಉತ್ತರಿಸಿದರು.  ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್‌ ಆಫ್‌ ಭಾರತ್‌’ ಅಂತ ಮರುನಾಮಕರಣ?

     

    ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆ ಸಂಬಂಧ ಪ್ರಶ್ನೆಗೆ ಸಿಎಂ ಉತ್ತರಿಸಲು ನಿರಾಕರಿಸಿದರು. ಪ್ರಶ್ನೆ ಕೇಳುತ್ತಲೇ ಪ್ರತಿಕ್ರಿಯೆ ನೀಡದೇ ತೆರಳಿದ ಸಿದ್ದರಾಮಯ್ಯ ತೆರಳಿದರು.

    ಬಿಜೆಪಿ (BJP) ಕೇಂದ್ರ ಸರ್ಕಾರವು ದೇಶದ ಹೆಸರನ್ನು`ಇಂಡಿಯಾ’ ಬದಲಿಗೆ `ರಿಪಬ್ಲಿಕ್‌ ಆಫ್‌ ಭಾರತ್‌’ (Republic Of Bharat) ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ್ ಬಯೋಟೆಕ್‌ ಕೊವ್ಯಾಕ್ಸಿನ್‍‌ ತುರ್ತು ಬಳಕೆಗೆ ಶಿಫಾರಸು

    ಭಾರತ್ ಬಯೋಟೆಕ್‌ ಕೊವ್ಯಾಕ್ಸಿನ್‍‌ ತುರ್ತು ಬಳಕೆಗೆ ಶಿಫಾರಸು

    ನವದೆಹಲಿ: ಲಸಿಕೆ ರಾಜಕೀಯದ ಮಧ್ಯೆ ಭಾರತಕ್ಕೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಕೋವಿಶೀಲ್ಡ್ ಬೆನ್ನಲ್ಲೇ ದೇಶಿಯ ಲಸಿಕೆ ಭಾರತ್‌ ಬಯೋಟೆಕ್‌ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೂ ಕೂಡ ವಿಷಯ ತಜ್ಞರ ಸಮಿತಿ(ಎಸ್ಇಸಿ)  ಷರತ್ತುಬದ್ಧ ಅನುಮತಿ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.

    ಒಂದೆರಡು ದಿನಗಳಲ್ಲಿ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ(ಡಿಸಿಜಿಐ) ಎರಡು ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಿದೆ. ನಿನ್ನೆ ನಡೆದ ಸಭೆಯಲ್ಲಿ ಹೈದರಾಬಾದ್‌ ಮೂಲದ ಭಾರತ್ ಬಯೋಟೆಕ್‍ನಿಂದ ಹೆಚ್ಚಿನ ಮಾಹಿತಿಯನ್ನು ವಿಷಯ ತಜ್ಞರ ಸಮಿತಿ ಕೇಳಿತ್ತು. ಇದನ್ನು ಭಾರತ್ ಬಯೋಟೆಕ್ ಕೂಡಲೇ ಒದಗಿಸಿದ ಹಿನ್ನೆಲೆಯಲ್ಲಿ ಇಂದು ತುರ್ತು ಸಭೆ ಸೇರಿದ ತಜ್ಞರು, ಕೊವ್ಯಾಕ್ಸಿನ್‍ಗೂ ಷರತ್ತುಬದ್ಧ ಹಸಿರುನಿಶಾನೆ ನೀಡಿದರು.

    ಒಂದು ವೇಳೆ ಡಿಸಿಜಿಐ ಅಂತಿಮ ಮುದರೆ ಹಾಕಿದರೆ ಲಸಿಕೆ ಉತ್ಪಾದಕ ಸಂಸ್ಥೆಗಳು ಮಾರ್ಕೆಟ್ ಆಥರೈಸೇಷನ್, ಉತ್ಪಾದನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿವೆ. ಸದ್ಯ ದೇಶದಲ್ಲಿ 3ನೇ ಹಂತದ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ ನಡೆಯುತ್ತಿವೆ.

    ಲಸಿಕೆ ಕಂಪನಿಗಳಿಗೆ ತಜ್ಞರ ಸಮಿತಿ ಷರತ್ತುಗಳೇನು?
    * 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು
    * ಇಂಜೆಕ್ಷನ್ ರೂಪದಲ್ಲಿ ಮಾನವನ ದೇಹಕ್ಕೆ ಔಷಧಿ ಸೇರಿಸಬೇಕು
    * ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಬಯಲಾಗುವ ಭದ್ರತೆ, ಸುರಕ್ಷತೆ,ಸಾಮರ್ಥ್ಯಕ್ಕೆ ಸಂಬಂಧಿಸಿದ ದತ್ತಾಂಶ ಸಲ್ಲಿಸಬೇಕು
    * ಲಸಿಕೆ ಹಾಕಿದ ಬಳಿಕ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ 15 ದಿನಕ್ಕೊಮ್ಮೆ ವರದಿ ನೀಡಬೇಕು

  • ‘ಇಂಡಿಯಾ’ವನ್ನು ‘ಭಾರತ್’ ಎಂದು ಬದಲಾಯಿಸಲು ನಮಗೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್

    ‘ಇಂಡಿಯಾ’ವನ್ನು ‘ಭಾರತ್’ ಎಂದು ಬದಲಾಯಿಸಲು ನಮಗೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್

    ನವದೆಹಲಿ: ‘ಇಂಡಿಯಾ’ ಹೆಸರನ್ನು ‘ಭಾರತ್’ ಎಂದು ಬದಲಾಯಿಸಲು ನಮಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

    ದೆಹಲಿ ಮೂಲದ ವಕೀಲ ಅಶ್ವಿನ್ ವೈಶ್ಯ ಎಂಬವರು ‘ಇಂಡಿಯಾ’ ಹೆಸರನ್ನು ‘ಭಾರತ್’ ಅಥವಾ ‘ಹಿಂದೂಸ್ತಾನ್’ ಎಂದು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

    ಈಗಾಗಲೇ ಭಾರತದ ಸಂವಿಧಾನದಲ್ಲಿ ‘ಭಾರತ್’ ಹೆಸರು ಉಲ್ಲೇಖವಾಗಿದೆ. ನಮಗೆ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬೇಕಾದರೆ ನೀವು ಸರ್ಕಾರದ ಸಂಬಂಧ ಪಟ್ಟ ಸಚಿವಾಲಯಯಕ್ಕೆ ಅರ್ಜಿಯನ್ನು ರವಾನಿಸಬಹುದು. ಸಚಿವಾಲಯವೇ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಅರ್ಜಿದಾರಿಗೆ ಸೂಚಿಸಿ ಮುಖ್ಯ ನ್ಯಾ. ಎಸ್.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಪಿಐಎಲ್ ಇತ್ಯರ್ಥ ಮಾಡಿದೆ.

    ಅರ್ಜಿಯಲ್ಲಿ ಏನಿತ್ತು?
    ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಎಂದು ಬದಲಾಯಿಸುವ ಸಲುವಾಗಿ ಸಂವಿಧಾನದ ಪರಿಚ್ಛೇದ 1ಕ್ಕೆ ತಿದ್ದುಪಡಿ ಮಾಡುವಂತೆ ವಕೀಲ ಅಶ್ವಿನ್ ಪಿಐಎಲ್ ಸಲ್ಲಿಸಿದ್ದರು.

    ಭಾರತ್ ಅಥವಾ ಹಿಂದೂಸ್ತಾನ್ ಬದಲು ಬ್ರಿಟಿಷರು ನೀಡಿದ ಇಂಡಿಯಾ ಎಂಬ ಹೆಸರನ್ನು ಈಗಲೂ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಬ್ರಿಟಿಷ್ ಗುಲಾಮಗಿರಿಯ ಸಂಕೇತವನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅಶ್ವಿನ್ ಪ್ರತಿಕ್ರಿಯಿಸಿದ್ದರು.

    ಬ್ರಿಟಿಷರು ನೀಡಿದ ಹೆಸರನ್ನು ತಗೆದು ಹಾಕಿ ದೇಶಕ್ಕೆ ಭಾರತ್ ಅಥವಾ ಹಿಂದೂಸ್ತಾನ್ ಎಂಬ ನಾಮಕರಣ ಮಾಡಬೇಕು. ಪ್ರಸ್ತುತ ದೇಶವನ್ನು ‘ಇಂಡಿಯಾ’, ‘ರಿಪಬ್ಲಿಕ್ ಆಫ್ ಇಂಡಿಯಾ’, ‘ಭಾರತ್ ಗಣರಾಜ್ಯ’ ಇತ್ಯಾದಿ ಹೆಸರುಗಳಿವೆ. ಈ ಹೆಸರುಗಳ ಬದಲಾಗಿ ‘ಭಾರತ್’ ಒಂದೇ ಹೆಸರನ್ನು ಎಲ್ಲ ಕಡೆ ಬಳಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

    ಆಧಾರ್ ಕಾರ್ಡ್‍ನಲ್ಲಿ ‘ಭಾರತ್ ಸರ್ಕಾರ್’, ಡ್ರೈವಿಂಗ್ ಲೈಸನ್ಸ್  ನಲ್ಲಿ ‘ಇಂಡಿಯನ್ ಯೂನಿಯನ್’ ಪಾಸ್‍ ಪೋರ್ಟ್ ನಲ್ಲಿ ‘ರಿಪಬ್ಲಿಕ್ ಆಫ್ ಇಂಡಿಯಾ’ ಎಂದು ನಮೂದಿಸಲಾಗಿದೆ. ಏಕರೂಪದ ಹೆಸರು ಇಲ್ಲದ ಕಾರಣ ಗೊಂದಲಗಳು ಜಾಸ್ತಿಯಾಗಿದೆ. ಹೀಗಾಗಿ ಏಕರೂಪದ ‘ಭಾರತ್’ ಹೆಸರನ್ನು ಜಾರಿ ಮಾಡಬೇಕೆಂದು ಕೇಳಿಕೊಂಡಿದ್ದರು.

    ಪಿಐಎಲ್ ಸಲ್ಲಿಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಹಲವರು ಆ ಅರ್ಜಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದರೆ ಕೆಲವರು ಹೆಸರು ಬದಲಾವಣೆಯಿಂದ ಲಾಭ ಏನು ಎಂದು ಪ್ರಶ್ನಿಸಿದ್ದರು.

    ವಜಾಗೊಂಡಿತ್ತು:
    2016ರಲ್ಲಿ ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡುವಂತೆ ಪಿಐಎಲ್ ಅರ್ಜಿ ಸಲ್ಲಿಕೆಯಾಗಿತ್ತು. ಈ ವೇಳೆ ಕೋರ್ಟ್, “ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವುದನ್ನು ಬಿಟ್ಟು ನಮಗೆ ಬೇರೆ ಕೆಲಸವಿಲ್ಲ ಎಂದು ಭಾವಿಸಿದ್ದೀರಾ? ಬಡವರಿಗೆ ಸಹಾಯ ಮಾಡಲು ಪಿಐಎಲ್ ಹಾಕಿ. ನೀವು ಭಾರತ್ ಎಂದು ಕರೆಯಲು ಬಯಸಿದರೆ ನೀವು ಕರೆಯಬಹುದು. ನಿಮ್ಮನ್ನು ಯಾರೂ ತಡೆಯುವುದಿಲ್ಲ” ಎಂದು ಹೇಳಿತ್ತು.

  • ಸೆಕ್ಯೂರಿಟಿ ಕಪಾಳಕ್ಕೆ ಬಾರಿಸಿದ ಸಲ್ಮಾನ್ ಖಾನ್: ವಿಡಿಯೋ ನೋಡಿ

    ಸೆಕ್ಯೂರಿಟಿ ಕಪಾಳಕ್ಕೆ ಬಾರಿಸಿದ ಸಲ್ಮಾನ್ ಖಾನ್: ವಿಡಿಯೋ ನೋಡಿ

    ಮುಂಬೈ: ಮಕ್ಕಳ ಜೊತೆ ಗರಂ ಆಗಿ ವರ್ತಿಸಿದ್ದಕ್ಕೆ ತನ್ನ ಸೆಕ್ಯೂರಿಟಿ ಕಪಾಳಕ್ಕೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಬಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಮಂಗಳವಾರ ರಾತ್ರಿ ಸಲ್ಮಾನ್ ತಾವು ನಟಿಸಿದ ‘ಭಾರತ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‍ಗೆ ಹೋಗಿದ್ದರು. ಹೀಗಾಗಿ ಸಲ್ಮಾನ್‍ಗಾಗಿ ಸೆಕ್ಯೂರಿಟಿ ಗಾರ್ಡ್ ದಾರಿ ಮಾಡಿಕೊಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆ ಖಾರವಾಗಿ ವರ್ತಿಸಿದ್ದಕ್ಕೆ ಸಲ್ಮಾನ್ ಖಾನ್ ಸೆಕ್ಯೂರಿಟಿಯ ಕಪಾಳಕ್ಕೆ ಹೊಡೆದಿದ್ದಾರೆ.

    ಸಲ್ಮಾನ್ ಖಾನ್ ಸೆಕ್ಯೂರಿಟಿಗೆ ಹೊಡೆದ ಫೋಟೋ ಮೊದಲು ಪೀಪಿಂಗ್ ಮೂನ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ಸಲ್ಮಾನ್ ಪರವಾಗಿ ಮಾತನಾಡಿದ್ದರೆ, ಮತ್ತೆ ಕೆಲಸವರು ಅವರ ವಿರುದ್ಧವಾಗಿ ಮಾತನಾಡಿದ್ದಾರೆ.

    ಮಕ್ಕಳು ಹಾಗೂ ಮಹಿಳೆಯರಿಗೆ ಯಾರಾದರೂ ಕಿರುಕುಳ ನೀಡಿದರೆ ಸಲ್ಮಾನ್ ಅವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಸೆಕ್ಯೂರಿಟಿ ತನ್ನ ಕೆಲಸವನ್ನು ಮಾಡುತ್ತಿದ್ದರು. ಅವರಿಗೆ ಹೊಡೆಯುವ ಬದಲು ಎಚ್ಚರಿಕೆ ನೀಡಬಹುದು ಎಂದು ಕಮೆಂಟ್ ಮಾಡಿದ್ದಾರೆ.

    ಸಲ್ಮಾನ್ ಈ ರೀತಿ ಕೋಪಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಸಲ್ಮಾನ್ ಮುಂಬೈನಲ್ಲಿ ಸೈಕಲ್‍ನಲ್ಲಿ ಹೋಗುತ್ತಿರುವಾಗ ಪತ್ರಕರ್ತನೊಬ್ಬ, ನಟ ನಿರಾಕರಿಸಿದರೂ ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಸಲ್ಮಾನ್ ಪತ್ರಕರ್ತನ ಮೊಬೈಲ್ ಕಸಿದಿದ್ದರು. ಈ ಕಾರಣಕ್ಕಾಗಿ ಪತ್ರಕರ್ತ ಸಲ್ಮಾನ್ ಅವರ ವಿರುದ್ಧ ದೂರು ದಾಖಲಿಸಿದ್ದರು.

  • ಸಲ್ಮಾನ್ ಖಾನ್ ‘ಭಾರತ್’ ಸಿನಿಮಾ ವಿರುದ್ಧ ದೂರು – ಟೈಟಲ್ ಬದಲಿಸುವಂತೆ ಮನವಿ

    ಸಲ್ಮಾನ್ ಖಾನ್ ‘ಭಾರತ್’ ಸಿನಿಮಾ ವಿರುದ್ಧ ದೂರು – ಟೈಟಲ್ ಬದಲಿಸುವಂತೆ ಮನವಿ

    ನವದೆಹಲಿ: ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅಭಿನಯಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಭಾರತ್’ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾದ ಶೀರ್ಷಿಕೆ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್ ತ್ಯಾಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ.

    ಈ ಅರ್ಜಿಯ ಪ್ರಕಾರ ಭಾರತ್ ಎಂಬ ಶೀರ್ಷಿಕೆ ಸಂವಿಧಾನದ ಸೆಕ್ಷನ್ 3ರ ಪ್ರಕಾರ ಕಾನೂನು ಬಾಹಿರವಾಗಿದೆ. ನಮ್ಮ ದೇಶದ ಲಾಂಛನಗಳನ್ನು ಮತ್ತು ಹೆಸರನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಅಸಮರ್ಪಕ ಬಳಕೆಗಳನ್ನು ತಡೆಗಟ್ಟುವ ಕಾಯಿದೆ ಪ್ರಕಾರ ‘ಭಾರತ್’ ಎಂಬ ಹೆಸರನ್ನು ಸಿನಿಮಾ ಟೈಟಲ್ ಆಗಿ ಬಳಸುವುದು ತಪ್ಪು ಎಂದು ಹೇಳಲಾಗಿದೆ.

    ‘ಭಾರತ್’ ಎಂಬ ಹೆಸರನ್ನು ಬಳಸಿರುವ ಕಾರಣ ಕೆಲವು ಸಂಭಾಷಣೆಗಳನ್ನು ಬದಲಾಯಿಸಬೇಕು. ‘ಭಾರತ್’ ಎಂಬ ಪಾತ್ರಧಾರಿಯನ್ನು ದೇಶಕ್ಕೆ ಹೋಲಿಕೆ ಮಾಡಿದಾಗ ಅದೂ ದೇಶದ ಜನರ ದೇಶಭಕ್ತಿಯ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತದೆ ಎಂದು ನಮೂದಿಸಲಾಗಿದೆ.

    ಈ ಚಿತ್ರ ಕೊರಿಯಾನ್ ಸಿನಿಮಾವಾದ “ಆನ್ ಓಡ್ ಟು ಮೈ ಫಾದರ್”ನ ರೂಪಾಂತರಾವಾಗಿದ್ದೂ ಇದರಲ್ಲಿ ಸಲ್ಮಾನ್ ಖಾನ್ ಅವರು 5 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶನ ಮಾಡಿದ್ದು ಜೂನ್ 5ಕ್ಕೆ ಬಿಡುಗಡೆಗೆ ಸಿದ್ಧವಾಗಿತ್ತು.

  • ನನಗೆ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಆಗಲ್ಲ: ದಿಶಾ ಪಠಾಣಿ

    ನನಗೆ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಆಗಲ್ಲ: ದಿಶಾ ಪಠಾಣಿ

    ಮುಂಬೈ: ನನಗೆ ಮತ್ತೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವುದಕ್ಕೆ ಆಗಲ್ಲ ಎಂದು ಬಾಲಿವುಡ್ ನಟಿ ದಿಶಾ ಪಠಾಣಿ ಹೇಳಿದ್ದಾರೆ.

    ಸಲ್ಮಾನ್ ಖಾನ್ ಅವರ ಮುಂಬರುವ ‘ಭಾರತ್’ ಚಿತ್ರದಲ್ಲಿ ದಿಶಾ ಪಠಾಣಿ ಟ್ರಾಪಿಜಿ ಕಲಾವಿದೆ (trapeze artist) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಶಾ ಮೊದಲ ಬಾರಿಗೆ ಸಲ್ಮಾನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಇಬ್ಬರ ಕೆಮೆಸ್ಟ್ರಿ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ದಿಶಾ ಪಠಾಣಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ದಿಶಾ, “ವಯಸ್ಸಿನ ಅಂತರ ಇರುವ ಕಾರಣ ನನಗೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಮತ್ತೆ ಅವಕಾಶ ಸಿಗುವುದಿಲ್ಲ” ಎಂದು ಹೇಳಿದ್ದಾರೆ.

    ನಿರ್ದೇಶಕ ಅಲಿ ಸರ್ ಈ ಚಿತ್ರದಲ್ಲಿ ನನಗೆ ಸಲ್ಮಾನ್ ಖಾನ್ ಅವರ ಜೊತೆ ಟ್ರಾಪಿಜಿ ಕಲಾವಿದೆ ಪಾತ್ರದಲ್ಲಿ ನಟಿಸಬೇಕು ಎಂದು ಹೇಳಿದ್ದರು. ಶೂಟಿಂಗ್‍ಗಾಗಿ ಸೆಟ್‍ಗೆ ತಲುಪಿದ್ದಾಗ ನನಗೆ ಸಲ್ಮಾನ್ ಸರ್ ಜೊತೆ ನಟಿಸಲು ಮತ್ತೆ ನಟಿಸಲು ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಯೋಚಿಸುತ್ತಿದೆ. ನಿರ್ದೇಶಕ ಅಲಿ ಅವರು ನನಗೆ ಸ್ಕ್ರಿಪ್ಟ್ ಬಗ್ಗೆ ಹೇಳುವಾಗ ಅವರು ಕೂಡ ಈ ಮಾತನ್ನು ಹೇಳುತ್ತಿದ್ದರು ಎಂದರು.

    ನನ್ನ ಹಾಗೂ ಸಲ್ಮಾನ್ ಅವರ ವಯಸ್ಸಿನ ಅಂತರದಿಂದ ನನಗೆ ಮತ್ತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದಿಲ್ಲ. ಭಾರತ್ ಚಿತ್ರದಲ್ಲಿ ಸಲ್ಮಾನ್ ಅವರನ್ನು 20-30 ವರ್ಷದವರಂತೆ ತೋರಿಸಲಾಗುತ್ತೆ ಎಂದು ಹೇಳಲಾಗಿತ್ತು. ಆಗ ನಾನು ನಮ್ಮಿಬ್ಬರ ಜೋಡಿ ಮ್ಯಾಚ್ ಆಗುತ್ತೆ ಎಂದು ತಕ್ಷಣ ಸಿನಿಮಾವನ್ನು ಒಪ್ಪಿಕೊಂಡೆ. ಸಲ್ಮಾನ್ ಹಾರ್ಡ್ ವರ್ಕರ್ ಆಗಿದ್ದು, ನಾನು ಅವರಿಂದ ಹೆಚ್ಚು ಕಲಿತ್ತಿದ್ದೇನೆ ಎಂದು ದಿಶಾ ಪಠಾಣಿ ತಿಳಿಸಿದ್ದಾರೆ.

    ನಾನು ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಹಾಗೂ ಸಲ್ಮಾನ್ ಖಾನ್ ಅವರ ಜೋಡಿ ಎಲ್ಲರಿಗೂ ಇಷ್ಟವಾಗಿದೆ. ನಮ್ಮಿಬ್ಬರ ನಡುವೆ ಒಳ್ಳೆಯ ಕೆಮೆಸ್ಟ್ರಿ ಇತ್ತು. ನಾನು ಅಭಿಮಾನಿಗಳ ಜೊತೆ ಕೋರಿಯೋಗ್ರಾಫರ್ ಹಾಗೂ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ದಿಶಾ ಸಂದರ್ಶನದಲ್ಲಿ ಹೇಳಿದ್ದಾರೆ.