Tag: ಭಾರತೀಯ ಸೈನ್ಯ

  • ಮದುವೆಗೆ ಯೋಧರನ್ನು ಆಹ್ವಾನಿಸಿದ ಜೋಡಿ – ಕರೆಯೋಲೆ ಕಂಡು ಖುಷಿ ಪಟ್ಟ ಇಂಡಿಯನ್ ಆರ್ಮಿ

    ಮದುವೆಗೆ ಯೋಧರನ್ನು ಆಹ್ವಾನಿಸಿದ ಜೋಡಿ – ಕರೆಯೋಲೆ ಕಂಡು ಖುಷಿ ಪಟ್ಟ ಇಂಡಿಯನ್ ಆರ್ಮಿ

    ತಿರುವನಂತಪುರಂ: ಕೇರಳದ (Kerala) ಯುವ ಜೋಡಿಯೊಂದು (Couple) ತಮ್ಮ ಮದುವೆ ಆಮಂತ್ರಣ ಪತ್ರವನ್ನು ಭಾರತೀಯ ಸೈನ್ಯಕ್ಕೆ ಕಳುಹಿಸಿ ಮದುವೆಗೆ ಬರುವಂತೆ ಆಮಂತ್ರಣ ನೀಡಿದ ಆಮಂತ್ರಣ ಪತ್ರಿಕೆಯೊಂದು (Invitation) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೇರಳ ಮೂಲದ ರಾಹುಲ್ ಮತ್ತು ಕಾರ್ತಿಕಾ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಶೇಷ ಬರಹಗಳೊಂದಿಗೆ ಭಾರತೀಯ ಸೈನ್ಯಕ್ಕೆ (Indian Army) ಕಳುಹಿಸಿತ್ತು. ಆತ್ಮೀಯ ವೀರ ಸೈನಿಕರೇ ನಾವು ನ.10 ರಂದು ಮದುವೆಯಾಗುತ್ತಿದ್ದೇವೆ. ನಮ್ಮ ದೇಶದ ಮೇಲಿನ ಪ್ರೀತಿ, ದೇಶಭಕ್ತಿಗೆ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ನಮ್ಮನ್ನು ಪ್ರತಿ ನಿಮಿಷ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವುದಕ್ಕಾಗಿ ನಾವು ನಿಮಗೆ ಋಣಿಯಾಗಿದ್ದೇವೆ. ನಿಮ್ಮಿಂದಾಗಿ ನಾವು ನೆಮ್ಮದಿಯಿಂದ ಮಲಗಿದ್ದೇವೆ. ನಮ್ಮ ಆತ್ಮೀಯರೊಡನೆ ನಮಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ಈ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ತುಂಬಾ ಸಂತೋಷವಾಗುತ್ತಿದೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ಬೇಕೆಂದು ಈ ಆಮಂತ್ರಣ ಪತ್ರಿಕೆ ಕಳುಹಿಸುತ್ತಿದ್ದೇವೆ ಎಂದು ಪೋಸ್ಟ್ ಮಾಡಿ ಮದುವೆಗೆ ಬರುವಂತೆ ಕರೆದಿದ್ದರು. ಇದನ್ನೂ ಓದಿ: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಹೊತ್ತಿ ಉರಿದ ಆಟೋ – ಚಾಲಕ, ಸವಾರನಿಗೆ ಗಾಯ

     

    View this post on Instagram

     

    A post shared by Indian Army (@indianarmy.adgpi)

    ಈ ಪತ್ರವನ್ನು ಓದಿದ ಬಳಿಕ ಇಂಡಿಯನ್ ಆರ್ಮಿ ರಾಹುಲ್ ಮತ್ತು ಕಾರ್ತಿಕಾಗೆ ಶುಭ ಹಾರೈಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿ ನಮ್ಮನ್ನು ಮದುವೆಗೆ ಆಮಂತ್ರಿಸಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ನೂತನ ಜೀವನ ಸುಖಕರವಾಗಿರಲಿ ಜೊತೆಯಾಗಿರಿ ಎಂದು ಶುಭ ಹಾರೈಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಂತ್ಯಸಂಸ್ಕಾರದ ವೇಳೆ ಮೃತದೇಹಕ್ಕೆ ತಾಳಿ ಕಟ್ಟಿ ಗೆಳತಿಯ ಕೊನೆ ಆಸೆ ಈಡೇರಿಸಿದ ಪ್ರೇಮಿ

    Live Tv
    [brid partner=56869869 player=32851 video=960834 autoplay=true]

  • ಸೇನಾ ಪ್ರಧಾನ ದಂಡ ನಾಯಕನ ಹುದ್ದೆಗೆ ಭದ್ರತಾ ಸಮಿತಿ ಒಪ್ಪಿಗೆ – ಹೇಗಿರಲಿದೆ ಸಿಡಿಎಸ್ ಪವರ್?

    ಸೇನಾ ಪ್ರಧಾನ ದಂಡ ನಾಯಕನ ಹುದ್ದೆಗೆ ಭದ್ರತಾ ಸಮಿತಿ ಒಪ್ಪಿಗೆ – ಹೇಗಿರಲಿದೆ ಸಿಡಿಎಸ್ ಪವರ್?

    ನವದೆಹಲಿ: ಭೂ, ವಾಯು ಮತ್ತು ನೌಕಾ ಸೇನೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸೇನಾ ಪ್ರಧಾನ ದಂಡ ನಾಯಕನ(ಸಿಡಿಎಸ್) ಹುದ್ದೆ ಸೃಷ್ಟಿಗೆ ಕೇಂದ್ರ ಭದ್ರತಾ ಸಂಪುಟ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಸಚಿವ ಸಂಪುಟ ಸಭೆ ಬಳಿಕ ನಡೆದ ಭದ್ರತಾ ಸಮಿತಿ ಸಭೆಯಲ್ಲಿ ಪ್ರಧಾನಿ ಈ ನರೇಂದ್ರ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

    ಕಳೆದ ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ಬಗ್ಗೆ ಸುಳಿವು ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಚೀಫ್ ಡಿಫೆನ್ಸ್ ಸ್ಟಾಫ್ ಸೃಷ್ಟಿಗೆ ಅನುಮೋದನೆ ನೀಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಆರ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

    ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ ಆಗಲಿರುವ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮೊದಲ ಸಿಡಿಎಸ್ ಆಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಶೀಘ್ರದಲ್ಲೇ ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸಿಡಿಎಸ್ ವಿಶೇಷತೆ ಏನು?:
    ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

    ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.

    ಕೆಲಸ ಏನು?
    ಮೂರು ಸೇನೆಗಳ ನಡುವೆ ಉತ್ತಮ ಸಂವಹನ ಸಮನ್ವಯ ಸಾಧಿಸುವುದು ಮುಖ್ಯ ಉದ್ದೇಶ. ಸೇನೆಗೆ ಹಂಚಿಯಾಗುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಮೂರು ಸೇನೆಗಳ ಸಂಬಂಧ ಏಕ ವ್ಯಕ್ತಿಯಾಗಿ ಪ್ರಧಾನಿಗಳಿಗೆ ಸಲಹೆ ನೀಡುವುದು. ಮೂರು ಸೇನೆಗಳ ಸಂಬಂಧ ಆಡಳಿತ್ಮಾಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ತ್ರಿಸೇನೆಗಳ ಜಂಟಿ ನಿರ್ವಹಣೆ ಹಾಗೂ ತರಬೇತಿ ಕೂಡಾ ಈ ಮಹಾದಂಡನಾಯಕ ವ್ಯಾಪ್ತಿಯಲ್ಲಿ ಬರಲಿದೆ. ಸೈಬರ್, ಬಾಹ್ಯಾಕಾಶ, ವಿಶೇಷ ಭದ್ರತಾ ದಳಗಳು ಕೂಡಾ ಮಹಾ ದಂಡನಾಯಕ ಕಚೇರಿ ವ್ಯಾಪ್ತಿಗೆ ಬರಲಿದೆ.

    ಈ ವರ್ಷದ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಅವರು, ಭೂ, ವಾಯು ಹಾಗೂ ನೌಕಾ ಪಡೆಗಳು ನಮ್ಮ ಹೆಮ್ಮೆ. ಈ ಮೂರೂ ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನೇಮಕ ಮಾಡಲಾಗುತ್ತದೆ ಎಂದು ಐತಿಹಾಸಿಕ ಘೋಷಣೆ ಮಾಡಿದ್ದರು.

    ಸಿಡಿಎಸ್ ನೇಮಕಕ್ಕಾಗಿ ದೀರ್ಘಕಾಲದಿಂದ ಸೇನಾ ಅಧಿಕಾರಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಸದ್ಯ ನಾವು ಅದನ್ನು ಕಾರ್ಯಗತಕ್ಕೆ ತರಲು ನಿರ್ಧಸಿದ್ದೇವೆ. ಈ ನೇಮಕವು ಮೂರು ಪಡೆಗಳ ಉನ್ನತ ಮಟ್ಟದಲ್ಲಿ ಪರಿಣಾಮಕಾರಿ ನಾಯಕತ್ವವನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.

    ಮುಖ್ಯ ಸೇನಾಧಿಕಾರಿ ನೇಮಕವು ಈಗಿನ ಮಾತಲ್ಲ. 20 ವರ್ಷಗಳ ಹಿಂದೆಯೇ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಕಾರ್ಯರೂಪಕ್ಕೆ ಬಾರದೇ ಹಾಗೆ ಉಳಿದಿತ್ತು. ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 1999ರಲ್ಲಿ ಸಂಸತ್ತಿನ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೇತೃತ್ವವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ವಹಿಸಿಕೊಂಡಿದ್ದರು. ಸುದೀರ್ಘ ಅಧ್ಯಯನ ನಡೆಸಿದ ಸಮಿತಿಯು, ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಹೀಗಾಗಿ ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಆದರೆ ಬದಲಾದ ರಾಜಕೀಯ ಹಾಗೂ ಅಧಿಕಾರಿಗಳ ಆಕ್ಷೇಪದಿಂದಾಗಿ ಸಮಿತಿಯ ಶಿಫಾರಸು ಕಾರ್ಯರೂಪಕ್ಕೆ ಬಂದಿರಲಿಲ್ಲ.

    2012 ರಲ್ಲಿ ನರೇಶ್ ಚಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್, 2016 ರಲ್ಲಿ ಲೆಫ್ಟಿನೆಂಟ್ ಜನರಲ್ ಡಿಬಿ ಶೇಕ್ತ್‍ಕಾರ್ ಸಮಿತಿ ಸಿಡಿಎಸ್ ನೇಮಕವಾಗಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಮೂರು ಸೇನೆಯ ಪ್ಲಾನಿಂಗ್, ಬಜೆಟ್, ಸಂಗ್ರಹಣೆ, ಶಸ್ತ್ರಾಸ್ತ್ರ ಖರೀದಿ, ತರಬೇತಿ ವಿಚಾರದ ಬಗ್ಗೆ ಸಿಡಿಎಸ್ ಗಮನ ಹರಿಸಿ ಕೇಂದ್ರ ರಕ್ಷಣಾ ಇಲಾಖೆಯ ಜೊತೆ ಸೇತುವೆಯಾಗಿ ಕೆಲಸ ಮಾಡಲಿದೆ.

  • ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

    ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

    ಬೆಂಗಳೂರು: ಇಂದು ಭಾರತೀಯ ವಾಯು ಪಡೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ನುಗ್ಗಿ ಉಗ್ರ ತರಬೇತಿ ಕ್ಯಾಂಪ್‍ಗಳ ಮೇಲೆ ದಾಳಿ ಮಾಡಿ ಪುಲ್ವಾಮ ಉಗ್ರರು ದಾಳಿಗೆ ಪ್ರತ್ಯುತ್ತರ ನೀಡಿದೆ. ಈ ದಾಳಿಯಲ್ಲಿ ಕೇಂದ್ರ ಬಿಂದುವಾಗಿದ್ದು ಮಿರಾಜ್ ಯುದ್ಧವಿಮಾನ. ಈ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಿ ಜೈಷ್ ಸಂಘಟನೆಯ ಮೂರು ಪ್ರಮುಖ ಕೇಂದ್ರಗಳನ್ನು ಧ್ವಂಸ ಮಾಡಿದೆ.

    ಮಿರಾಜ್-2000 ಯಾಕೆ ಬಳಸಲಾಯ್ತು?
    ಮಿರಾಜ್-2000 ಜೆಟ್ ಹಾರಾಡುವಾಗ ಅದರಿಂದ ಹೊರಬರುವ ಇಂಧನದ ಹೊಗೆ ಕಡಿಮೆ ಇರುತ್ತದೆ. ಆದರಿಂದ ನೆಲದ ಮೇಲಿರುವ ಸೈನ್ಯಕ್ಕೆ ಇದನ್ನ ಪತ್ತೆ ಮಾಡಲು ಕಷ್ಟವಾಗುತ್ತೆ. ಅದರ ಡೆಲ್ಟಾ ಪ್ಲಾನ್ ಅತೀ ಕಡಿಮೆ ಹೊಗೆಯನ್ನು ಹೊರಹಾಕುತ್ತದೆ. ಈ ವಿಶೇಷತೆ ಇರುವುದರಿಂದಲೇ ಮಿರಾಜ್-2000 ಜೆಟ್ ಅನ್ನು ಭಾರತೀಯ ಸೇನೆ ಉಗ್ರರನ್ನು ಮಟ್ಟ ಹಾಕಲು ಬಳಸಿಕೊಂಡಿದೆ. ಈ ವಿಮಾನ ಪ್ರತಿ ಗಂಟೆಗೆ 900 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮಥ್ರ್ಯವನ್ನು ಹೊಂದಿದೆ. ಮಿರಾಜ್ ಹೆಚ್ಚು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಸಾಮಥ್ರ್ಯವಿದೆ. ಈ ಕಾರಣಕ್ಕಾಗಿಯೇ ಮಿರಾಜ್-2000 ಭಾರತೀಯ ವಾಯ ಸೇನೆಯಲ್ಲಿರುವ ಅತ್ಯತ್ತಮ ಬಲಿಷ್ಠವಾದ ಯುದ್ಧವಿಮಾನವಾಗಿದೆ.

    ಮಿರಾಜ್-2000 ಎಂದರೇನು?
    ಫ್ರಾನ್ಸಿನ ಡಸಾಲ್ಟ್ ಕಂಪನಿ ನಿರ್ಮಿಸಿದ ಮಿರಾಜ್ 2000 ಬಹು-ಕಾರ್ಯ ನಿರ್ವಹಿಸುವ ಯುದ್ಧ ಫೈಟರ್ ಜೆಟ್. ಇದು 1984ರಿಂದ ಫ್ರೆಂಚ್ ವಾಯುಪಡೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತವಾಗಿ ಈ ವಿಶೇಷ ಜೆಟ್ ಭಾರತ, ಈಜಿಪ್ಟ್, ಗ್ರೀಸ್, ಪೆರು, ಕತಾರ್, ತೈವಾನ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ ಭದ್ರತಾ ಪಡೆಯ ಭಾಗವಾಗಿದೆ.

    ಇತಿಹಾಸವೇನು?
    ಏಕ ವ್ಯಕ್ತಿ ಅಥವಾ ಇಬ್ಬರು ಪೈಲಟ್‍ಗಳು ಕೂರುವ ಸಾಮಥ್ರ್ಯ ಹೊಂದಿರುವ ಮಿರಾಜ್ ವಿಮಾನವನ್ನು ಮೊದಲ ಬಾರಿಗೆ 1984ರಲ್ಲಿ ಸೇರ್ಪಡೆಯಾಯಿತು. ಬಳಿಕ ಈ ಯುದ್ಧ ವಿಮಾನದಲ್ಲಿ ಇನ್ನೆರಡು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಮಿರಾಜ್ 2000ಎನ್ ಹಾಗೂ ಮಿರಾಜ್ 2000ಡಿ ಯುದ್ಧ ವಿಮಾನವನ್ನು ತಯಾರಿಸಲಾಯಿತು. ಮಿರಾಜ್ 2000ಎನ್ ಅತ್ಯಂತ ವೇಗ ಹೊಂದಿರುವ ಹಾಗೂ ಎಲ್ಲಾ ಹವಾಮಾನದಲ್ಲೂ ಕಾರ್ಯ ನಿರ್ವಹಿಸುತ್ತದೆ. ಅಟೋಮ್ಯಟಿಕ್ ಆಗಿ ಲೇಸರ್ ಬಾಂಬ್ ಗಳನ್ನು ಟಾರ್ಗೆಟ್ ಸ್ಥಳಕ್ಕೆ ಹಾಕುವ ಸಾಮರ್ಥ್ಯ ಈ ವಿಮಾನಕ್ಕಿದೆ.

    ಕಮಾಂಡರ್ ಮುರಳಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈ ವಿಮಾನದ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ನನ್ನ ಪೂರ್ತಿ ವೃತ್ತಿ ಜೀವನವನ್ನು ಮಿರಾಜ್-2000ನಲ್ಲಿ ಕಳೆದಿದ್ದೇನೆ. 1984ರಿಂದ ನಾನು ನಿವೃತ್ತಿಯಾಗುವವರೆಗೂ ಮಿರಾಜ್-2000 ಜೆಟ್ ಚಲಾಯಿಸಿದ್ದೇನೆ. 1999ರ ಜೂನ್‍ನಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ನಾವು ಮಿರಾಜ್-ಜೆಟ್ ಬಳಸಿಕೊಂಡಿದ್ದೇವು. ಮಿರಾಜ್-2000 ಅತ್ಯಾಂತ ಬಲಿಷ್ಠವಾದ ಯುದ್ಧ ವಿಮಾನ. ಇಂದು ಬೆಳಗ್ಗೆ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ಮಾಡಿರುವುದು ಕೇವಲ ಲೇಸರ್ ಗೈಡೆಡ್ ಬಾಂಬ್ ಸ್ಟ್ರೈಕ್ಸ್ ಮಾತ್ರ ಮಾಡಿಲ್ಲ. ಮೊದಲು ಹೆರಾನ್(ಇಸ್ರೇಲ್ ನಿರ್ಮಿತ ಮಾನವ ರಹಿತ ಸರ್ವೇಕ್ಷಣಾ ವಾಹನ) ಬಿಟ್ಟು ಯಾವ ಸ್ಥಳವನ್ನು ಟಾರ್ಗೆಟ್‍ಗೆ ಮಾಡಬೇಕು ಅಂತ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಪ್ಲಾನ್ ಪ್ರಕಾರ ಇಂದು ಬೆಳಗ್ಗೆ ದೂರದಿಂದಲೇ ಟಾರ್ಗೆಟ್‍ಗೆ ಗುರಿ ಮಾಡಿ ಲೇಸರ್ ಗೈಡೆಡ್ ಬಾಂಬ್ ಹಾಕಿದ್ದೇವೆ ಎಂದು ತಿಳಿಸಿದರು.

    ಸಾಮಾನ್ಯವಾಗಿ ಲೇಸರ್ ಬಾಂಬ್‍ಗಳು ಸುಮಾರು 500 ಕೆಜಿಕ್ಕಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ. ಇದು ಕೆಳಗೆ ಬಿದ್ದರೇ ಆ ಸ್ಥಳದಲ್ಲಿ ಬೂದಿ ಬಿಟ್ಟರೇ ಬೇರೇನೂ ಉಳಿಯುವುದಿಲ್ಲ. ಈ ದಾಳಿ ವೇಳೆ ಏರ್‍ಬಾರ್ನ್ ಅರ್ಲಿ ವಾರ್ನಿಂಗ್(ಎಇಡಬ್ಲ್ಯೂ) ಏರ್‌ಕ್ರಾಫ್ಟ್‌ ಬಳಕೆ ಮಾಡಿದ್ದೇವೆ. ಮುಜಫರಾಬಾದ್ ಬಳಿ ಗಿಲ್ಗಿಟ್ ಇದೆ. ಅಲ್ಲಿ ಪಾಕಿಸ್ತಾನ ಸೈನ್ಯದ ಕಚೇರಿಗಳು ಇವೆ. ನಾವು ನಡೆಸುತ್ತಿರುವ ದಾಳಿ ಪಾಕಿಸ್ತಾನಕ್ಕೆ ತಿಳಿಯದೇ ಇರಲು ಎಇಡಬ್ಲ್ಯೂ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್ ವಾಪಸ್ ತಂದ ಯೋಧರು!

    17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್ ವಾಪಸ್ ತಂದ ಯೋಧರು!

    ನವದೆಹಲಿ: 17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್ ರಿಪೇರಿ ಮಾಡಿ ನಮ್ಮ ಯೋಧರು ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಸಿಯಾಚಿನ್ ಖಾಂದ ಗ್ಲೇಸಿಯರ್ ಪ್ರದೇಶದಲ್ಲಿ ಕೆಟ್ಟು ನಿಂತಿದ್ದ ಯುದ್ಧ ಹೆಲಿಕಾಪ್ಟರನ್ನು ರಿಪೇರಿ ಮಾಡಿ ಬೇಸ್ ಕ್ಯಾಂಪ್ ಗೆ ವಾಪಸ್ ತಂದು ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ಜನವರಿಯಲ್ಲಿ ಎಎಲ್‍ಎಚ್ ಧ್ರುವ ಹೆಲಿಕಾಪ್ಟರ್ ಸೈನಿಕರಿಗೆ ನಿತ್ಯ ಬಳಕೆಯ ವಸ್ತುಗಳನ್ನು ಪೂರೈಸಲು ಗ್ಲೇಸಿಯರ್ ಗೆ ತೆರಳಿತ್ತು.

    ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ಅನ್ನು ಮಂಜಿನ ಮೇಲೆ ಇಳಿಸಲಾಗಿತ್ತು. ಮೈನಸ್ 25 ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಈ ಪ್ರದೇಶದಲ್ಲಿ ರಿಪೇರಿ ಮಾಡೋದು ಕಷ್ಟವಾಗಿತ್ತು. ಛಲ ಬಿಡದ ಎಎಲ್‍ಎಚ್ ಸ್ಕ್ವಾಡ್ರನ್ 203ನ ಪೈಲಟ್‍ಗಳು ಮತ್ತು ತಂತ್ರಜ್ಞರು ಜುಲೈನಲ್ಲಿ ಎಂಜಿನ್ ಮತ್ತು ಬ್ಲೇಡ್‍ಗಳ ರಿಪೇರಿ ಮಾಡಿ ಯಶಸ್ವಿಯಾಗಿದ್ದರು.

    ಕಳೆದ ಹಲವು ವರ್ಷಗಳಿಂದ 40ಕ್ಕೂ ಹೆಚ್ಚು ಕಾಪ್ಟರ್ ಗಳು ಹೀಗೆ ಮಂಜಿನಲ್ಲಿ ಕಣ್ಮರೆಯಾಗಿದ್ದು, ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಆಪರೇಷನ್ ಮೇಘದೂತ್ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಗ್ಲೇಸಿಯರ್ ನಲ್ಲಿ ಕೆಟ್ಟು ನಿಂತಿದ್ದ ಹೆಲಿಕಾಪ್ಟರನ್ನು ರಿಪೇರಿ ಮಾಡಿ ತರಲಾಗಿದೆ. ಇದುವರೆಗೆ ಸುಮಾರು 40 ಹೆಲಿಕಾಪ್ಟರ್ ಗಳು ಗ್ಲೇಸಿಯರ್ ನಲ್ಲಿ ಕೆಟ್ಟು ನಿಂತಿವೆ ಅಥವಾ ಅಪಘಾತಕ್ಕೀಡಾಗಿವೆ. ಈ ಹೆಲಿಕಾಪ್ಟರ್ ಗಳನ್ನು ವಾಪಸ್ ತರಲು ಸಾಧ್ಯವಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೃತ ಯೋಧನ ಅಂತ್ಯಕ್ರಿಯೆಗೂ ಮುನ್ನ ಮಗುವಿಗೆ ಜನ್ಮ ನೀಡಿದ ಪತ್ನಿ – ಮನಕಲಕುವ ಸ್ಟೋರಿ

    ಮೃತ ಯೋಧನ ಅಂತ್ಯಕ್ರಿಯೆಗೂ ಮುನ್ನ ಮಗುವಿಗೆ ಜನ್ಮ ನೀಡಿದ ಪತ್ನಿ – ಮನಕಲಕುವ ಸ್ಟೋರಿ

    ಶ್ರೀನಗರ: ಉಗ್ರರ ನಡುವಿನ ಕಾದಾಟದಲ್ಲಿ ಹುತಾತ್ಮರಾದ ಸೈನಿಕನ ಮೃತದೇಹದ ಅಂತ್ಯಕ್ರಿಯೆಗೂ ಮುನ್ನವೇ ಯೋಧನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ನಡೆದಿದೆ.

    ಭಾರತೀಯ ಸೇನಾ ಪಡೆಯ ಯೋಧ ಲ್ಯಾನ್ಸ್ ನಾಯಕ್ ರಂಜಿತ್ ಸಿಂಗ್ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಮಂಗಳವಾರ ಸಿದ್ಧತೆ ನಡೆಸಲಾಗಿತ್ತು. ಆದರೆ ಸೋಮವಾರ ರಾತ್ರಿಯೇ ತುಂಬು ಗರ್ಭಿಣಿಯಾಗಿದ್ದ ರಂಜಿತ್ ಸಿಂಗ್ ಅವರ ಪತ್ನಿ ಹೆರಿಗೆ ನೋವಿನಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಪತಿಯ ಅಂತ್ಯಕ್ರಿಯೆ ವೇಳೆ ಕಿಕ್ಕಿರಿದು ಸೇರಿದ್ದ ಜನರ ನಡುವೆ ಆಗತಾನೇ ಜನಿಸಿದ ಮಗುವಿನೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಪತ್ನಿ ಸ್ಥಳಕ್ಕೆ ಆಗಮಿಸಿದ್ದರು. ಇದನ್ನು ಕಂಡ ಎಲ್ಲರ ಕಣ್ಣಲ್ಲಿ ನೀರು ಜಿನುಗಿತ್ತು. ಸರ್ಕಾರಿ ಗೌರವಗಳೊಂದಿಗೆ ರಂಜಿತ್ ಸಿಂಗ್ ರ ಅಂತ್ಯಕ್ರಿಯೆ ನಡೆಸಲಾಯಿತು.

    ಯೋಧ ರಂಜಿತ್ ಸಿಂಗ್ ಸೇರಿ ಜಮ್ಮು ಕಾಶ್ಮೀರ ಮೂವರು ಯೋಧರು ಜಮ್ಮುವಿನ ರಜೌರಿ ಜಿಲ್ಲೆಯ ಸುಂದರ್ ಬಿನಿ ಸೆಕ್ಟರ್ ನ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು. ಅಲ್ಲದೇ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ಇಬ್ಬರು ಪಾಕ್ ನುಸುಳುಕೋರರನನ್ನು ಭಾನುವಾರ ಹತ್ಯೆ ಮಾಡಲಾಗಿತ್ತು.

    ಅಂದಹಾಗೇ ಹುತಾತ್ಮ ಯೋಧ ರಂಜಿತ್ ಸಿಂಗ್ ಅವರಿಗೆ ಮದುವೆಯಾದ 10 ವರ್ಷಗಳ ಬಳಿಕ ಮಗು ಜನಿಸಿದೆ. ಆದರೆ ವಿಧಿಯ ನಿಯಮವೇ ಬೇರೆಯಾಗಿದೆ ಎಂದು ಸ್ಥಳೀಯರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. 2003 ರಲ್ಲಿ ರಂಜಿತ್ ಸಿಂಗ್ ಸೈನ್ಯಕ್ಕೆ ಸೇರಿದ್ದರು. ಅಲ್ಲದೇ ಮಗುವಿನ ನಿರೀಕ್ಷೆಯಲ್ಲಿದ್ದ ರಂಜಿತ್ ಕೆಲವೇ ದಿನಗಳಲ್ಲಿ ರಜೆ ಪಡೆದು ಊರಿಗೆ ಆಗಮಿಸುವ ಸಿದ್ಧತೆಯಲ್ಲಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಿದ್ದಾರೆ ಸುಧಾಮೂರ್ತಿ

    ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಿದ್ದಾರೆ ಸುಧಾಮೂರ್ತಿ

    ಬೆಂಗಳೂರು: ದೇಶದ ಸೇವೆ ಮಾಡುವ ವೇಳೆ ತಮ್ಮ ಪ್ರಾಣ ಪಣಕ್ಕಿಟ್ಟು ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗಲು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರು ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದ್ದಾರೆ.

    ಅ.15 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗಧಿಯಾಗಿರುವ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಯೋಧರ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಲಾಗುತ್ತದೆ.

    ಈ ಕುರಿತು ಸಂಸದ ಪ್ರತಾಪ್ ಸಿಂಹ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸುಧಾ ಮೂರ್ತಿ ಅವರೊಂದಿನ ಮಾತುಕತೆಯ ಬಗ್ಗೆ ಬರೆದುಕೊಂಡಿದ್ದಾರೆ. ಒಮ್ಮೆ ಅವರೊಂದಿಗೆ ಫೋನಿನಲ್ಲಿ ಮಾತನಾಡುವ ವೇಳೆ ನಿನ್ನ ಕ್ಷೇತ್ರಕ್ಕೆ ನನ್ನಿಂದ ಯಾವ ಸಹಾಯ ಬೇಕು ಎಂದು ಕೇಳಿದ್ದರು. ಅದಕ್ಕೆ ನಾನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮನೆ, ಶಾಲೆಗಳಿಗೆ ಕಂಪ್ಯೂಟರ್ ಬೇಕು ಎಂದು ಹೇಳಿದ್ದೆ. ಅವರು ತಕ್ಷಣವೇ ಸಮ್ಮತಿ ಸೂಚಿಸಿದರು. ಅಲ್ಲದೇ ನಿಮ್ಮ ಕ್ಷೇತ್ರದ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ರೂ. ನೀಡುವುದಾಗಿಯೂ ತಿಳಿಸಿದರು. ಇದಕ್ಕೆ ನನ್ನ ಕೇತ್ರದ ಆಚೆಗೂ ಹುತಾತ್ಮರಾಗಿರುವ ಯೋಧರ ಮಾಹಿತಿ ನೀಡುವುದಾಗಿ ತಿಳಿಸಿದ್ದೆ. ಅದಕ್ಕೂ ಸುಧಾ ಮೂರ್ತಿ ಒಪ್ಪಿಕೊಂಡರು ಅವರ ಈ ಕಾರ್ಯಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

    ಈಗಾಗಲೇ ಹುತಾತ್ಮ ಯೋಧರ ಮಾಹಿತಿ ಪಡೆದಿದ್ದು, ಅವರಿಗೆ ಸುಧಾಮೂರ್ತಿ ಅವರಿಂದ ಹಣದ ನೆರವು ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಹಾರ ಮೊತ್ತ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ದಸರಾ ವೇಳೆ ಮಾರುಕಟ್ಟೆಗೆ ಭೇಟಿ ನೀಡಿ ಸರಳತೆ ಮೆರೆದ ಸುಧಾಮೂರ್ತಿ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಚ್ಚಿಹೋದ ಸೇತುವೆಗಳಿಗೆ ಕೆಲವೇ ನಿಮಿಷಗಳಲ್ಲಿ ತಾತ್ಕಾಲಿಕ ಮರದ ಸೇತುವೆ ನಿರ್ಮಾಣ – ಯೋಧರ ಕಾರ್ಯಕ್ಕೆ ಶ್ಲಾಘನೆ

    ಕೊಚ್ಚಿಹೋದ ಸೇತುವೆಗಳಿಗೆ ಕೆಲವೇ ನಿಮಿಷಗಳಲ್ಲಿ ತಾತ್ಕಾಲಿಕ ಮರದ ಸೇತುವೆ ನಿರ್ಮಾಣ – ಯೋಧರ ಕಾರ್ಯಕ್ಕೆ ಶ್ಲಾಘನೆ

    ತಿರುವನಂತಪುರಂ: ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ದೇವರ ನಾಡು ಕೇರಳದಲ್ಲಿ ಭಾರತೀಯ ಯೋಧರು ಹಾಗೂ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಸದ್ಯ ಹಲವು ಪ್ರದೇಶಗಳಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಸೇತುವೆಗಳಿಗೆ ತಾತ್ಕಾಲಿಕ ಮರದ ಸೇತುವೆಗಳನ್ನು ನಿರ್ಮಾಣ ಮಾಡಿದ್ದಾರೆ.

    ಯೋಧರು ನಿರ್ಮಾಣ ಮಾಡಿರುವ ಹಲವು ತಾತ್ಕಾಲಿಕ ಸೇತುವೆಗಳ ಫೋಟೋಗಳನ್ನ ಎಡಿಜಿ ಪಿಐ-ಇಂಡಿಯನ್ ಆರ್ಮಿ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಯೋಧರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೇರಳ ರಕ್ಷಣಾ ಕಾರ್ಯಾಚರಣೆಗೆ ಅಪರೇಷನ್ ಸಹಯೋಗ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಭಾರತೀಯ ವಾಯುಪಡೆ, ನೌಕಾಪಡೆ ಹಾಗೂ ಕರಾವಳಿ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

    ಸ್ಥಳೀಯ ಸಂಪನ್ಮೂಲಗಳನ್ನೇ ಬಳಕೆ ಮಾಡಿಕೊಳ್ಳುತ್ತಿರುವ ಯೋಧರು, ಉರುಳಿಬಿದ್ದ ಬೃಹತ್ ಮರಗಳನ್ನು ಬಳಕೆ ಮಾಡಿಕೊಂಡು ಸೇತುವೆ ನಿರ್ಮಾಣ ಮಾಡಿ ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ಇದನ್ನೂ ಓದಿ: ಕೇರಳ ನಿರಾಶ್ರಿತರಿಗೆ ಹೊದಿಕೆ ಕೊಟ್ಟು ಹೀರೋ ಆದ ಮಧ್ಯಪ್ರದೇಶದ ಬಡವ್ಯಾಪಾರಿ

    ಕೇರಳ ಪ್ರವಾಹಕ್ಕೆ ದೇಶದ ಹಲವು ಭಾಗಗಳಿಂದ ನೆರವಿನ ಸಹಾಯ ನೀಡಲಾಗಿದ್ದು, ಸಿನಿಮಾ ಸ್ಟಾರ್ ಗಳು ಸೇರಿದಂತೆ ಸಾಮಾನ್ಯ ಜನರು ಸಹ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಕ್ಯಾಂಪ್‍ಗಳನ್ನು ನಿರ್ಮಾಣ ಮಾಡಿ ಆಹಾರ ಹಾಗೂ ವಸತಿ ನೀಡಲಾಗುತ್ತಿದೆ. ಅಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ ಹಲವರಿಗೆ ವೈದ್ಯಕೀಯ ಸೇವೆ ನೀಡುವ ಕಾರ್ಯವೂ ನಡೆಯುತ್ತಿದೆ.

    ಭಾರತೀಯ ಸೈನ್ಯದ ಕರ್ನಾಟಕ ಹಾಗೂ ಕೇರಳ ಭಾಗದ ತುಕಡಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರಲ್ಲಿ ಪ್ರಮುಖವಾಗಿ ಬೆಂಗಳೂರಿನ ಮಿಲಿಟರಿ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ನ ಎರಡು ಪಡೆಗಳು ಸಹ ಭಾಗವಹಿಸಿದೆ. ಕಳೆದ ಎರಡು ದಿನಗಳ ಹಿಂದೆ ಎನ್‌ಡಿಆರ್‌ಎಫ್ ಯೋಧ ಕನ್ಹಾಯ್ ಕುಮಾರ್ ತಮ್ಮ ಜೀವವನ್ನು ಲೆಕ್ಕಿಸದೆ ಮಗುವನ್ನು ರಕ್ಷಣೆ ಮಾಡಿ ಹೀರೋ ಆಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಇದನ್ನೂ ಓದಿ: ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 19ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    19ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    ಬೆಂಗಳೂರು: ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾರತೀಯರು ಗೌರವ ಸಲ್ಲಿಸುತ್ತಿದ್ದಾರೆ.

    ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ `ಕಾರ್ಗಿಲ್ ವಿಜಯ್ ದಿವಸ್’ ಆಚರಣೆಮಾಡಲಾಗುತ್ತಿದೆ.

    ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

    ಭಾರತ ಸರ್ಕಾರ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ, ಧೈರ್ಯ ಮತ್ತು ಸಾಹಸಗಳಿಂದ `ಆಪರೇಷನ್ ವಿಜಯ್’ಗೆ ಯಶಸ್ವಿಗೊಳಿಸಿದ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ನಯಿಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮತ್ತು ವಿಕ್ರಮ್ ಬಾತ್ರಾರವರಿಗೆ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ಪುರಸ್ಕಾರವನ್ನು ನೀಡಿ ಗೌರವಿಸಿತ್ತು.

    ಏನಿದು ಕಾರ್ಗಿಲ್ ವಿಜಯ್ ದಿವಸ್?
    1999ರ ಮೇ ಮತ್ತು ಜುಲೈನ 2 ತಿಂಗಳುಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು.

    ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ `ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಸೈನಿಕರು ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡಿಕೊಳ್ಳುತ್ತಾ ಸೇನೆ ಬರುತ್ತಿದೆ.

    ಇಂದು ಜಮ್ಮು-ಕಾಶ್ಮೀರದ ದ್ರಾಸ್‍ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕದಲ್ಲಿ ಅಂದು ಭಾರತೀಯ ಸೈನಿಕರು ಯುದ್ಧಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.

  • ರಂಜಾನ್ ಯುದ್ಧ ವಿರಾಮ ಬಳಿಕ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ರಂಜಾನ್ ಯುದ್ಧ ವಿರಾಮ ಬಳಿಕ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಶ್ರೀನಗರ: ರಂಜಾನ್ ಹಬ್ಬರ ಕದನ ವಿರಾಮ ಹಿಂತೆಗೆದುಕೊಂಡ ಬಳಿಕ ನಡೆದ ಭಾರತೀಯ ಸೇನೆಯ ಮೊದಲ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.

    ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಭಾರತೀಯ ಸೈನಿಕರು ಹಾಗೂ ಉಗ್ರರ ನಡುವಿನ ಎನ್‍ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

    ಕಳೆದ ಜೂನ್ 14 ರಂದು ಬಂಡಿಪೊರಾ ಜಿಲ್ಲೆಯಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 2 ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ಭಾರತ ಸರ್ಕಾರ ರಂಜಾನ್ ಕದನ ವಿರಾಮ ಒಪ್ಪಂದವನ್ನು ಹಿಂಪಡೆಯುತ್ತಿದ್ದಾಗಿ ತಿಳಿಸಿ ಸೈನಿಕರಿಗೆ ಕಾರ್ಯಾರಚಣೆ ನಡೆಸಲು ಸೂಚನೆ ನೀಡಿತ್ತು. ಸದ್ಯ ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರರ ಗುರುತು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಉಗ್ರರು ಅಡಗಿರುವ ಶಂಕೆ ಮೇಲೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

    ಸತತ 1,220 ಗಂಟೆಗಳ ರಂಜಾನ್ ಕದನ ವಿರಾಮದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಶ್ಮೀರಿ ಕಣಿವೆಯಲ್ಲಿ ಶಾಂತಿಯನ್ನು ಕದಡಲು ಯತ್ನಿಸುವವರ ವಿರುದ್ಧ ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೂಚನೆ ನೀಡಿದ್ದಾಗಿ ತಿಳಿಸಿದ್ದರು.

  • ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಲಕ್ನೋ: ಇತ್ತೀಚೆಗೆ ಸಿಆರ್‍ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಬಗ್ಗೆ ಉತ್ತರ ಪ್ರದೇಶ ರಾಜ್ಯದ ರಾಮ್‍ಪುರ ಕ್ಷೇತ್ರದ ಬಿಜೆಪಿ ಸಂಸದ ನೇಪಾಳ ಸಿಂಗ್ ಪ್ರತಿಕ್ರಿಯಿಸುವ ವೇಳೆ ಭಾರತೀಯ ಸೈನಿಕರಿಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.

    ಸೈನಿಕರು ಪ್ರತಿದಿನ ಸಾಯ್ತಾರೆ. ಎಲ್ಲಿಯಾದ್ರೂ ಯುದ್ಧದಲ್ಲಿ ಸೈನಿಕರು ಸಾಯದೇ ಇರುವ ದೇಶವಿದ್ಯಾ? ಗ್ರಾಮಗಳಲ್ಲಿ ಗಲಾಟೆ ಆದಾಗ ಯಾರಿಗಾದ್ರೂ ಗಾಯ ಆಗೇ ಆಗುತ್ತದೆ. ಜೀವವನ್ನು ಉಳಿಸಬಲ್ಲ ಸಾಧನ ಏನಾದ್ರೂ ಇದ್ರೆ ಹೇಳಿ. ಬುಲೆಟ್ ವಿಫಲಗೊಳಿಸುವ ಯಾವುದಾದ್ರೂ ಸಾಧನ ಇದ್ರೆ ಹೇಳಿ. ಅದನ್ನ ಜಾರಿಗೆ ತರೋಣ ಎಂದು ಹೇಳಿದ್ದಾರೆ.

    ಇತ್ತ ಸಂಸದರ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಕೂಡಲೇ ನಾನು ಸೇನೆಗೆ ಅವಮಾನಿಸುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಒಂದು ವೇಳೆ ನನ್ನ ಮಾತುಗಳಿಂದ ಯಾರಿಗಾದ್ರೂ ದುಃಖವಾದ್ರೆ ನಾನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ ಅಂತಾ ನೇಪಾಳ ಸಿಂಗ್ ಪ್ರತಿಕ್ರಿಯಿಸಿದ್ದಾರೆ.