Tag: ಭಾರತೀಯ ಸೈನಿಕರು

  • ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ – ಸೈನಿಕರನ್ನು ಭೇಟಿಯಾದ ಮೋದಿ

    ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ – ಸೈನಿಕರನ್ನು ಭೇಟಿಯಾದ ಮೋದಿ

    – ಯೋಧರ ಗುಣಗಾನ ಮಾಡಿದ ಪಿಎಂ; ಸೈನಿಕರೊಟ್ಟಿಗೆ ಫೋಟೊಗೆ ಪೋಸ್‌

    ಛತ್ತೀಸಗಢ: ಭಾರತ ಮತ್ತು ಪಾಕಿಸ್ತಾನ ನಡುವೆ (India Pakistan War) ಕದನ ವಿರಾಮ ಘೋಷಣೆಯಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ (PM Modi) ಮಂಗಳವಾರ ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ (Adampur Air Base) ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ.

    ಭಾರತದ ‘ಆಪರೇಷನ್ ಸಿಂಧೂರ’ ನಂತರ, ಮೇ 9 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಂಪುರವೂ ಸೇರಿತ್ತು. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್‌

    ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ. ನಿಮ್ಮ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಸೈನಿಕರ ಗುಣಗಾನ ಮಾಡಿದರು.

    ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಪ್ರಾರಂಭಿಸಲಾದ ಯಶಸ್ವಿ ‘ಆಪರೇಷನ್ ಸಿಂಧೂರ’ ನಂತರ ದೇಶದ ಬಲಿಷ್ಠ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದ ಒಂದು ದಿನದ ನಂತರ ಪ್ರಧಾನಿಯವರು ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ 3 ಉಗ್ರರ ಫೋಟೋ ರಿಲೀಸ್ – ಸುಳಿವು ಕೊಟ್ಟವರಿಗೆ 20 ಲಕ್ಷ ಬಹುಮಾನ

    ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ ಉದ್ದೇಶಗಳನ್ನು ಸಾಧಿಸುವಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಅಚಲ ಧೈರ್ಯವನ್ನು ಪ್ರದರ್ಶಿಸಿದವು ಎಂದು ಬಣ್ಣಿಸಿದ್ದರು.

  • ಫ್ರಾನ್ಸ್‌ನ ಮಾರ್ಸಿಲ್ಲೆಸ್‌ಗೆ ಪ್ರಧಾನಿ ಮೋದಿ ಭೇಟಿ – ಬಲಿದಾನಗೈದ ಭಾರತೀಯ ಯೋಧರಿಗೆ ಗೌರವ ನಮನ

    ಫ್ರಾನ್ಸ್‌ನ ಮಾರ್ಸಿಲ್ಲೆಸ್‌ಗೆ ಪ್ರಧಾನಿ ಮೋದಿ ಭೇಟಿ – ಬಲಿದಾನಗೈದ ಭಾರತೀಯ ಯೋಧರಿಗೆ ಗೌರವ ನಮನ

    ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಫೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾರ್ಸಿಲ್ಲೆಸ್‌ನಲ್ಲಿರುವ ಮಜಾರ್ಗ್ಸ್ ಯುದ್ಧ ಸ್ಮಶಾನಕ್ಕೆ ಭೇಟಿ ನೀಡಿ ವಿಶ್ವ ಯುದ್ಧಗಳಲ್ಲಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಮೋದಿ ಅವರು ಸ್ಮಾರಕದಲ್ಲಿ ಪುಷ್ಪಗುಚ್ಛ ಇಟ್ಟು ನಮಿಸಿದರು.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಧಾನಿ ಮೋದಿ, ‘ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಮಾರ್ಸಿಲ್ಲೆಗೆ ಬಂದಿದ್ದೇನೆ. ಭಾರತದ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ಈ ನಗರವು ವಿಶೇಷ ಮಹತ್ವ ಹೊಂದಿದೆ. ಮಹಾನ್‌ ವೀರ್‌ ಸಾವರ್ಕರ್‌ ಧೈರ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಇಲ್ಲಿಯೇ. ಅವರನ್ನು ಬ್ರಿಟಿಷ್‌ ಕಸ್ಟಡಿಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿದ್ದ ಮಾರ್ಸೆಲ್ಲೆಯ ಜನರು ಮತ್ತು ಆ ಕಾಲದ ಫ್ರೆಂಚ್‌ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವೀರ್‌ ಸಾವರ್ಕರ್‌ ಅವರ ಶೌರ್ಯವು ಪೀಳಿಗೆಗೆ ಸ್ಫೂರ್ತಿಯಾಗಿದೆ’ ಎಂದು ತಿಳಿಸಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದ ಮಾರ್ಸಿಲ್ಲೆಯಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಸದಸ್ಯ ಅನುಪ್ ಗುಪ್ತಾ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರನ್ನು ಪ್ರತಿನಿಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ಯಾರಿಸ್‌ನಲ್ಲಿರುವ ರಾಯಭಾರ ಕಚೇರಿಯ ನಂತರ ಫ್ರಾನ್ಸ್‌ನಲ್ಲಿರುವ ಮೊದಲ ಕಾನ್ಸುಲೇಟ್ ಇದಾಗಿದೆ. ಇದು ಭಾರತೀಯ ಸಮುದಾಯ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಫೆ.10 ರಿಂದ 12 ರ ವರೆಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ. ಮಂಗಳವಾರ ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ಇದರ ನಂತರ, ಪ್ರಧಾನಿ ಮೋದಿ ಫೆ.12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಆಡಳಿತದ ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

  • Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

    Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

    ನವದೆಹಲಿ: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ತಂದುಕೊಟ್ಟ ವೀರಯೋಧರಿಗೆ ‘ವಿಜಯ್ ದಿವಸ್’ (Vijay Diwas) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಮನ ಸಲ್ಲಿಸಿದ್ದಾರೆ.

    ವೀರಯೋಧರ ಶೌರ್ಯ ಮತ್ತು ಸಮರ್ಪಣೆ ರಾಷ್ಟ್ರಕ್ಕೆ ಅಪಾರವಾದ ಹೆಮ್ಮೆಯ ಮೂಲವಾಗಿ ಉಳಿದಿದೆ. ಅವರ ತ್ಯಾಗ ಮತ್ತು ಅಚಲವಾದ ಮನೋಭಾವವು ಜನರ ಹೃದಯದಲ್ಲಿ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಘಂಟೆ, ಪೂಜಾ ಸಾಮಾಗ್ರಿ ಸಮರ್ಪಣೆ

    ಯೋಧರ ಧೈರ್ಯಕ್ಕೆ ಭಾರತ ವಂದಿಸುತ್ತದೆ. ಅವರ ಅದಮ್ಯ ಮನೋಭಾವವನ್ನು ಸ್ಮರಿಸುತ್ತದೆ. ಭಾರತವು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು, ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾಯಿತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

    ವಿಜಯ್ ದಿವಸ್ ಅನ್ನು ವಿಜಯದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಪಾಕಿಸ್ತಾನದ ಮಿಲಿಟರಿ ಭಾರತೀಯ ಪಡೆಗಳಿಗೆ ಶರಣಾದ ದಿನ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟಿಸಲು ಬಯಸಿದ 6 ಜನರ ಬಗೆಗಿನ ನಿರೂಪಣೆ ನೋಡುತ್ತಿದ್ದೇವೆ: ಸಂಸತ್‌ ದಾಳಿ ಬಗ್ಗೆ ಪ್ರಕಾಶ್‌ ರಾಜ್‌ ಮಾತು

  • ರಾಹುಲ್ ಗಾಂಧಿಗೆ ಭಾರತೀಯ ಸೈನಿಕರ ಪರಾಕ್ರಮಕ್ಕಿಂತ ಚೀನಾದ ಮೇಲೆ ನಂಬಿಕೆ ಹೆಚ್ಚು: ರಾಜನಾಥ್ ಸಿಂಗ್

    ರಾಹುಲ್ ಗಾಂಧಿಗೆ ಭಾರತೀಯ ಸೈನಿಕರ ಪರಾಕ್ರಮಕ್ಕಿಂತ ಚೀನಾದ ಮೇಲೆ ನಂಬಿಕೆ ಹೆಚ್ಚು: ರಾಜನಾಥ್ ಸಿಂಗ್

    ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಭಾರತದ ಸೈನ್ಯ ಮತ್ತು ಸೈನಿಕರ ಪರಾಕ್ರಮಕ್ಕಿಂತ ಚೀನಾ ಮೇಲಿನ ನಂಬಿಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟೀಕಿಸಿದರು.

    ಗಲ್ವಾನ್ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ನಡೆದ ಗುದ್ದಾಟದಲ್ಲಿ ಚೀನಾದ 38-50 ಯೋಧರು ಬಲಿ ಆಗಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮವೇ ಹೇಳುತ್ತದೆ. ಆದರೆ ರಾಹುಲ್ ಗಾಂಧಿ ಅವರು ತಮ್ಮ ಯೋಧರ ಸಾವಿನ ಬಗ್ಗೆ ಸುಳ್ಳು ಮಾಹಿತಿ ಹೇಳುವ ಚೀನಾದ ಮಾಧ್ಯಮ ವರದಿಯನ್ನು ನಂಬುವುದರ ಜೊತೆಗ ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದು ಕಿಡಿಕಾರಿದರು.

    ಬಿಜೆಪಿ ಆಡಳಿತದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚಿತ್ರಣವೇ ಬದಲಾಗಿದೆ. 2014ರವರೆಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ನಾಯಕರನ್ನು ಯಾವ ದೇಶವೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಭಾರತ ಏನನ್ನಾದರೂ ಹೇಳಿದಾಗ ಇಡೀ ಜಗತ್ತು ಕೇಳುತ್ತದೆ ಎಂದರು. ಇದನ್ನೂ ಓದಿ:  ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ

    ಭಾರತವು ಇನ್ನು ಮುಂದೆ ದುರ್ಬಲವಾಗಿಲ್ಲ ಎಂದು ನಾವು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಗಡಿಯೊಳಗೆ ಅಥವಾ ಹೊರಗಿನ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಅದು ಈಗ ಸಮರ್ಥವಾಗಿದೆ. ಉರಿ ಮತ್ತು ಪುಲ್ವಾಮಾ ದಾಳಿಯ ನಂತರ ನಮ್ಮ ಸೈನಿಕರು ಪಾಕಿಸ್ತಾನದ ಭೂಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಪಕ್ಷಗಳು ಅಧಿಕಾರಕ್ಕಾಗಿ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಿವೆ. ಆದರೆ ಬಿಜೆಪಿಯ ಗುರಿ ರಾಷ್ಟ್ರ ನಿರ್ಮಾಣವಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಆಡಳಿತದಲ್ಲಿ ಗೂಂಡಾಗಳ ಚೈತನ್ಯ ಹೆಚ್ಚಿತ್ತು ಮತ್ತು ರಾಜಕೀಯ ವಲಯಗಳಲ್ಲಿಯೂ ಅವರ ಪ್ರಾಬಲ್ಯ ಇತ್ತು. ಬಿಜೆಪಿ ಆಡಳಿತದಲ್ಲಿ ಅದು ಸಂಪೂರ್ಣವಾಗಿ ಬದಲಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

  • ಆಸ್ಪತ್ರೆಗೆ ತಲುಪಲು ಗರ್ಭಿಣಿ ಮಹಿಳೆಗೆ ಸಹಾಯ ಮಾಡಿದ ಭಾರತೀಯ ಸೈನಿಕರು

    ಆಸ್ಪತ್ರೆಗೆ ತಲುಪಲು ಗರ್ಭಿಣಿ ಮಹಿಳೆಗೆ ಸಹಾಯ ಮಾಡಿದ ಭಾರತೀಯ ಸೈನಿಕರು

    ಶ್ರೀನಗರ: ಜಮ್ಮು-ಕಾಶ್ಮೀರದ ಭಾರೀ ಹಿಮಪಾತದ ನಡುವೆ ತುಂಬು ಗರ್ಭಿಣಿಯನ್ನು ಸ್ಟ್ರೇಚರ್ ಮೂಲಕ ಆಸ್ಪತ್ರೆಗೆ ಸೇರಿಸಲು ಭಾರತೀಯ ಸೈನಿಕರು ಸಹಾಯ ಮಾಡಿದ್ದಾರೆ.

    ಭಾರೀ ಹಿಮಪಾತದಿಂದ ಜಮ್ಮುಕಾಶ್ಮೀರ ತತ್ತರಿಸಿಹೋಗಿದೆ. ಈ ನಡುವೆ ಜಮ್ಮು-ಕಾಶ್ಮೀರದ ಘಗ್ಗರ್ ಬೆಟ್ಟದ ಗ್ರಾಮದಿಂದ ಗರ್ಭಿಣಿಯನ್ನು ಬೋನಿಯಾರ್ ತಹಸಿಲ್‍ನ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಬೋನಿಯಾರ್‍ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾರೀ ಹಿಮಾಪಾತದ ನಡುವೆಯೂ ಆಕೆಯನ್ನು ಸ್ಟ್ರೇಚರ್ ಮೂಲಕ ಸಾಗಿಸಿದ್ದಾರೆ.

    ಬೋನಿಯಾರ್ ತೆಹಸಿಲ್‍ನ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಘಗ್ಗರ್ ಹಿಲ್‍ನಲ್ಲಿರುವ ಭಾರತೀಯ ಸೇನಾ ಪೋಸ್ಟ್‌ಗೆ ಜನವರಿ 8 ರಂದು ಬೆಳಿಗ್ಗೆ 10.30ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿ ಮಹಿಳೆಯನ್ನು ತುರ್ತು ವೈದ್ಯಕೀಯ ನೆರವು ಕೋರಿ ಸ್ಥಳೀಯರಿಂದ ಕರೆ ಬಂದಿದೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ಕೂಡಲೇ ಸ್ಥಳಕ್ಕೆ ಆಗಮಿಸಿದ ಸೇನಾ ವೈದ್ಯಕೀಯ ತಂಡ ಗರ್ಭಿಣಿಯ ಆರೋಗ್ಯವನ್ನು ಪರಿಶೀಲಿಸಿದ ಬಳಿಕ ಸಂಕಷ್ಟದ ಸಮಯದಲ್ಲಿಯೂ ಗರ್ಭಿಣಿಯನ್ನು ಸ್ಥಳಾಂತರಿಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

  • ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದ ಭದ್ರತಾ ಪಡೆ

    ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದ ಭದ್ರತಾ ಪಡೆ

    ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

    ಇಂದು ಮುಂಜಾನೆ ನಗ್ನಾಡ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಅರಿತ ಭದ್ರತಾ ಪಡೆ ಕೂಡಲೇ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಹೀಗೆ ಕಾರ್ಯಾಚರಣೆ ಚುರುಕುಗೊಳಿಸುತ್ತಿದ್ದ ಸಂದರ್ಭದಲ್ಲಿ ಭದ್ರತಾ ಪಡೆಯನ್ನು ಕಂಡ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆ ಕೂಡ ಪ್ರತಿ ದಾಲಿ ನಡೆಸಿದ್ದು, ಇಬ್ಬರು ಉಗ್ರರು ಮಟಾಷ್ ಆಗಿದ್ದಾರೆ.

    ಸದ್ಯ ಸ್ಥಳದಲ್ಲಿ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿದೆ. ಜುಲೈ 5 ರಂದು ಕೂಡ ಭಾರತೀಯ ಸೈನಿಕರು ಇಬ್ಬರು ಉಗ್ರರನ್ನು ಸದೆಬಡಿದಿದ್ದರು. ಇದಕ್ಕೂ ಮೊದಲು ಬೆಳೂೀಪುರದ ರೆಬ್ಬಾನ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಉಗ್ರರು ಗುಂಡಿನ ಮಳೆಗೈದಿದ್ದರು. ಪರಿಣಾಮ ಉಗ್ರರು ಅವಿತಿದ್ದ ಜಾಗದ ಕಡೆ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದು, ಓರ್ವ ಮೃತಪಟ್ಟಿದ್ದ.

  • ಗಸ್ತಿನಲ್ಲಿದ್ದ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ – ಓರ್ವ ಸೈನಿಕ ಹುತಾತ್ಮ

    ಗಸ್ತಿನಲ್ಲಿದ್ದ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ – ಓರ್ವ ಸೈನಿಕ ಹುತಾತ್ಮ

    – ಮೂವರು ಸೈನಿಕರು ಗಂಭೀರ, ಓರ್ವ ನಾಗರಿಕ ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗಸ್ತು ತೀರುಗುತ್ತಿದ್ದ ಯೋಧರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಜವಾನ್ ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ. ಜೊತೆಗೆ ಮೂವರು ಸಿ.ಆರ್.ಪಿ.ಎಫ್ ಸೈನಿಕರು ಗಾಯಗೊಂಡಿದ್ದಾರೆ.

    ಶ್ರೀನಗರದಿಂದ 50 ಕಿ.ಮೀ ದೂರದಲ್ಲಿರುವ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದಲ್ಲಿ ಸಿ.ಆರ್.ಪಿ.ಎಫ್ ಯೋಧರು ಗಸ್ತಿನಲ್ಲಿದ್ದರು. ಈ ವೇಳೆ ಯೋಧರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಯೋಧರು ಪ್ರತಿ ದಾಳಿ ಮಾಡಿದ್ದಾರೆ. ಆದರೆ ಉಗ್ರರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ದಾಳಿಯಲ್ಲಿ ನಾಲ್ಕು ಸಿ.ಆರ್.ಪಿ.ಎಫ್ ಸೈನಿಕರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಆದರೆ ಅವರಲ್ಲಿ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಕಾರಿನಲ್ಲಿ ಕುಳಿತ್ತಿದ್ದ ಓರ್ವ ಹಿರಿಯ ನಾಗರಿಕ ಸಾವನ್ನಪ್ಪಿದ್ದಾರೆ. ಇವರ ಜೊತೆ ಕಾರಿನಲ್ಲಿ ಅವರ ಮೊಮ್ಮಗನು ಇದ್ದು ಆತನಿಗೆ ಚಿಕ್ಕಪುಟ್ಟ ಗಾಯಗಳಾಗಿ ಬದುಕುಳಿದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಕಾಶ್ಮೀರದ ಡಿಜಿಪಿ ದಿಲ್ಭಾಗ್ ಸಿಂಗ್ ಇಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೂರು ವರ್ಷದ ಓರ್ವ ಬಾಲಕನನ್ನು ಕಾಪಾಡಲಾಗಿದೆ. ಆದರೆ ನಮ್ಮ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಈಗ ಸ್ಥಳಕ್ಕೆ ಹೆಚ್ಚಿನ ಸೈನಿಕರು ಮತ್ತು ಪೊಲೀಸರನ್ನು ಕಳುಹಿಸಲಾಗಿದೆ. ಭಯೋತ್ಪಾದಕರು ತಪ್ಪಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

  • ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

    ನಾವು ಪಾತ್ರಧಾರಿಗಳಷ್ಟೇ, ನಿಜವಾದ ಹೀರೋಗಳು ನೀವು: ಸೈನಿಕರಿಗೆ ಶ್ವೇತಾ ನಮನ

    ಬೆಂಗಳೂರು: ಪ್ರಾಣಕ್ಕೆ ಅಂಜದೇ ನಮ್ಮೆಲ್ಲರಿಗೋಸ್ಕರ ಹೋರಾಡುತ್ತಿರುವ ಯೋಧರೇ ನಿಜವಾದ ಹೀರೋಗಳು ಎಂದು ನಟಿ ಮತ್ತು ನಿರೂಪಕಿ ಶ್ವೇತಾ ಚಂಗಪ್ಪ ಅವರು ಹೇಳಿದ್ದಾರೆ.

    ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕುತಂತ್ರಿ ಚೀನಾ ತನ್ನ ನರಿ ಬುದ್ಧಿಯನ್ನು ತೋರುತ್ತಿದೆ. ಕಳೆದ ಸೋಮವಾರ ರಾತ್ರಿ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಚೀನಾದ ಸೈನಿಕರ ಜೊತೆ ಕೆಚ್ಚೆದೆಯಿಂದ ಹೋರಾಡಿದ ನಮ್ಮ ಭಾರತೀಯ ಸೇನೆಯ 20 ಜನರ ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಹುತಾತ್ಮರಾಗಿದ್ದಕ್ಕೆ ಇಡೀ ದೇಶವವೇ ಕಂಬನಿ ಮಿಡಿದಿದೆ.

    https://www.instagram.com/p/CBkRRKEjoUU/

    ಈಗ ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಶ್ವೇತಾ ಚಂಗಪ್ಪ. ದೇಶ ಕಾಯುವ ಯೋಧರೇ, ನೀವು ನಮ್ಮೆಲ್ಲರ ಜೀವನದ ನಿಜವಾದ ಹೀರೋಗಳು. ನಿಮ್ಮನ್ನು ಬಣ್ಣಿಸಲು ಪದಗಳು ಸಿಗುವುದಿಲ್ಲ. ಪರದೆಯ ಮೇಲೆ ಪಾತ್ರ ಮಾಡುವ ನಾವು ನಟ ನಟಿಯರು ಹಾಗೂ ಕೇವಲ ಪಾತ್ರಧಾರಿಗಳು ಅಷ್ಟೇ. ಆದರೆ ನೀವು ನಿಜವಾದ ಹೀರೋಗಳು ಎಂದು ಯೋಧರನ್ನು ಹಾಡಿಹೊಗಳಿದ್ದಾರೆ.

    ಜೊತೆಗೆ ನಿಮ್ಮ ಪ್ರಾಣಕ್ಕೆ ಅಂಜದೆ ನಮ್ಮ ದೇಶಕ್ಕಾಗಿ, ನಮ್ಮೆಲ್ಲರಿಗೋಸ್ಕರ ಹೋರಾಟ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ. ಯುದ್ಧದಲ್ಲಿ ಅಮರರಾಗಿರುವ ಎಲ್ಲಾ ಯೋಧರ ಕುಟುಬದವರಿಗೆ ಆ ಭಗವಂತ ಹೆಚ್ಚಿನ ಶಕ್ತಿಯನ್ನೂ ಕೊಡಲಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಡಿರುವ ಶ್ವೇತಾ ಭಾರತೀಯ ಸೇನೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

    ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿತ್ತು.

  • ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಬಳಸಿ ಕೃಷಿ ಚಟುವಟಿಕೆ

    ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಬಳಸಿ ಕೃಷಿ ಚಟುವಟಿಕೆ

    ಶ್ರೀನಗರ: ಪಾಕಿಸ್ತಾನದ ಗಡಿ ಭಾಗದ ಭಾರತೀಯ ರೈತರು ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಬಳಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

    ನೆರೆಯ ಪಾಕಿಸ್ತಾನ ಪದೇ ಪದೇ ಕದಲ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊಂಡಂತೆ ಜಮೀನಿಗೆ ತೆರಳಲು ರೈತರು ಭಯಪಡುವಂತಾಗಿತ್ತು. ಹಾಗಾಗಿ ಸಾಂಬಾ ಸೆಕ್ಟರ್ ವ್ಯಾಪ್ತಿಯಲ್ಲಿ ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಬಳಸಲಾಗುತ್ತಿದೆ.

    ರೈತರು ಕೃಷಿ ಚಟುವಟಿಕೆ ನಡೆಸುವ ವೇಳೆ ಬಿಎಸ್‍ಎಫ್ ಯೋಧರು ಸಹ ರಕ್ಷಣೆ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬುಲೆಟ್ ಪ್ರೂಫ್ ಟ್ರ್ಯಾಕ್ಟರ್ ಫೋಟೋಗಳು ಹರಿದಾಡುತ್ತಿವೆ. ರಕ್ಷಣೆ ನೀಡಿರುವ ಯೋಧರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

  • ಪಾಕ್ ಮಹಿಳಾ ಅಧಿಕಾರಿಯಿಂದ ಹನಿಟ್ರ್ಯಾಪ್ – ಇಬ್ಬರು ಯೋಧರು ಅರೆಸ್ಟ್

    ಪಾಕ್ ಮಹಿಳಾ ಅಧಿಕಾರಿಯಿಂದ ಹನಿಟ್ರ್ಯಾಪ್ – ಇಬ್ಬರು ಯೋಧರು ಅರೆಸ್ಟ್

    ಜೈಪುರ: ಪಾಕಿಸ್ತಾನದ ಐಎಸ್‌ಐ ಮಹಿಳಾ ಅಧಿಕಾರಿಯೊಬ್ಬಳ ಹನಿಟ್ರ್ಯಾಪ್ ಗೆ ಒಳಗಾಗಿ ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಇಬ್ಬರು ಸೈನಿಕರನ್ನು ರಾಜಸ್ಥಾನದಲ್ಲಿ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಈ ಇಬ್ಬರು ಸೈನಿಕರನ್ನು ಮಧ್ಯಪ್ರದೇಶದ ಲ್ಯಾನ್ಸ್ ನಾಯಕ್ ರವಿವರ್ಮಾ ಮತ್ತು ಇನ್ನೊಬ್ಬರನ್ನು ಅಸ್ಸಾಂ ಮೂಲದ ವಿಚಿತಾ ಬೊಹ್ರಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸೈನಿಕರು ಪಾಕಿಸ್ತಾನಿ ಐಎಸ್‌ಐ ಅಧಿಕಾರಿಯನ್ನು ಭಾರತೀಯ ಮಹಿಳೆ ಎಂದು ತಿಳಿದು ಭಾರತೀಯ ಸೇನೆಯ ಪ್ರಮುಖ ಮಾಹಿತಿ ಮತ್ತು ಫೋಟೋಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಪಾಕ್‌ನ ಐಎಸ್‌ಐ ಅಧಿಕಾರಿಯೊಬ್ಬಳು ನಾನು ಪಂಜಾಬ್ ಮೂಲದ ಮಹಿಳೆ ಎಂದು ಹೇಳಿಕೊಂಡು ಪಾಕ್ ನಂಬರಿನಿಂದ ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಮೂಲಕ ಈ ಇಬ್ಬರು ಸೈನಿಕರಿಗೆ ಕರೆ ಮಾಡಿದ್ದಾಳೆ. ಪ್ರೋಟೋಕಾಲ್ ಮೂಲಕ ಕರೆ ಮಾಡಿದ ಕಾರಣ ಅದು ಇಂಡಿಯಾ ನಂಬರ್ ರೀತಿ ಕಾಣಿಸಿದೆ. ಇದನ್ನು ನಂಬಿದ ಸೈನಿಕರು ನಮ್ಮ ದೇಶದ ಸೇನೆಯ ಕೆಲ ಪ್ರಮುಖ ಮಾಹಿತಿ ಮತ್ತು ಕೆಲ ಗನ್‌ಗಳ ಫೋಟೋ ಗಳನ್ನು ವಾಟ್ಸಪ್ ಮತ್ತು ಫೇಸ್‌ಬುಕ್ ಮೂಲಕ ಕಳುಹಿಸಿದ್ದಾರೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

    ಸೈನಿಕರು ರಾಜಸ್ಥಾನದ ಪೋಖ್ರಾನ್ ಅಲ್ಲಿ ಕೆಲಸ ಮಾಡುತ್ತಿದ್ದು, ಈ ಜಾಗದಿಂದ ಸೇನಾ ಮಾಹಿತಿಗಳು ಸೋರಿಕೆ ಆಗುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಬೆನ್ನತ್ತಿದ ಸಿಬಿಐ ಮತ್ತು ಐಬಿ ತಂಡದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಜೋಧಪುರದ ರೈಲು ನಿಲ್ದಾಣದಲ್ಲಿ ಈ ಇಬ್ಬರು ಸೈನಿಕರನ್ನು ಬಂಧಿಸಿದ್ದಾರೆ.

    ಈ ಇಬ್ಬರು ಅಧಿಕಾರಿಗಳು ಹನಿಟ್ರ್ಯಾಪ್ ಗೆ ಒಳಗಾಗಿದ್ದು, ಪಾಕ್ ಅಧಿಕಾರಿಯನ್ನು ಭಾರತೀಯ ಮಹಿಳೆ ಎಂದು ತಿಳಿದು ಮಾಹಿತಿಯನ್ನು ಶೇರ್ ಮಾಡಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜೋಧಪುರದ ರೈಲ್ವೇ ನಿಲ್ದಾಣದಲ್ಲಿ ಊರಿಗೆ ಹೋಗುತ್ತಿದ್ದ ಸೈನಿಕರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಜೈಪುರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.