Tag: ಭಾರತೀಯ ಸೇನಾ ಪಡೆ

  • ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

    ಪುಲ್ವಾಮಾದಲ್ಲಿ ಎನ್‍ಕೌಂಟರ್ – ಮೂವರು ಲಷ್ಕರ್ ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಯುವ ಎನ್‍ಕೌಂಟರ್ ನಡೆಸಿದ್ದು, ಮೂವರು ಭಯೋತ್ಪಾದಕರು ಮೃತಪಟ್ಟಿದ್ದಾರೆ.

    ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನೂ ಅನೇಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಹತ್ಯೆಗೀಡಾದ ಮೂವರು ಭಯೋತ್ಪಾದಕರು ಸ್ಥಳೀಯರಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್‍ಇಟಿ ಜೊತೆ ನಂಟು ಹೊಂದಿದ್ದರು. ಅವರಲ್ಲಿ ಓರ್ವನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದೆ. ಮೇ 13 ರಂದು ನಮ್ಮ ಸಹೋದ್ಯೋಗಿ ಹುತಾತ್ಮ ರೆಯಾಜ್ ಅಹ್ಮದ್ ಹತ್ಯೆಯಲ್ಲಿ  ಭಾಗಿಯಾಗಿದ್ದಾನೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹೇಳಿದ್ದಾರೆ.

    ಇದಕ್ಕೂ ಮುನ್ನ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎನ್‍ಕೌಂಟರ್ ನಡೆಸಿ ಓರ್ವ ಭಯೋತ್ಪಾದಕನನ್ನು ಕೊಂದಿದ್ದರು. ಶನಿವಾರ ಸಂಜೆಯಿಂದಲೇ ಎನ್‍ಕೌಂಟರ್ ನಡೆಸಲು ಆರಂಭಿಸಲಾಗಿತ್ತು ಎಂದು ಕಾಶ್ಮೀರ್ ವಲಯ ಪೊಲೀಸರು ಟ್ವೀಟ್‍ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

  • ಹಿಮಪಾತದಿಂದ 140 ಮಂದಿಯನ್ನು ರಕ್ಷಿಸಿದ ಸೇನೆ

    ಹಿಮಪಾತದಿಂದ 140 ಮಂದಿಯನ್ನು ರಕ್ಷಿಸಿದ ಸೇನೆ

    ಶ್ರೀನಗರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುತ್ತಿದ್ದು, ಸೇನೆ ಮತ್ತು ಪೊಲೀಸರು ಸುಮಾರು 140 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

    ಭಾರೀ ಹಿಮಪಾತದಿಂದಾಗಿ ಪೂಂಚ್ ಜಿಲ್ಲೆಯ ಮುಘಲ್ ರಸ್ತೆಯ ಬಳಿ ಸಿಲುಕಿಕೊಂಡಿದ್ದ 140 ಮಂದಿಯನ್ನು ಪೊಲೀಸರು ಮತ್ತು ಸೈನಿಕರು ಶುಕ್ರವಾರ ರಾತ್ರಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ ರಕ್ಷಿಸಿದ ಜನರನ್ನು ಸುರಣ್‍ಕೋಟ್‍ನಲ್ಲಿರುವ ಸೇನಾ ಶಿಬಿರಕ್ಕೆ ಕರೆತಂದಿದ್ದಾರೆ. ಅಲ್ಲಿಯೇ ಸಂತ್ರಸ್ತರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ.

    ಶುಕ್ರವಾರದಿಂದಲೂ ಜಮ್ಮು ಮತ್ತು ಕಾಶ್ಮೀರದ ಅನೇಕ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಹಿಮ ಸುತ್ತಲೂ ಆವರಿಸಿಕೊಂಡಿವೆ. ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಶುಕ್ರವಾರದಿಂದಲೇ ಭಾರೀ ಮಳೆಯಾಗುತ್ತಿದ್ದು, ಹಿಮಾಚಲ ಪ್ರದೇಶದ ಅನೇಕ ಜಿಲ್ಲೆಗಳಲ್ಲೂ ಹಿಮಾಪಾತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿಢೀರ್ ಕೋಟ್ಯಧಿಪತಿಗಳಾದ್ರು ಅರುಣಾಚಲಪ್ರದೇಶದ ಗ್ರಾಮಸ್ಥರು!

    ದಿಢೀರ್ ಕೋಟ್ಯಧಿಪತಿಗಳಾದ್ರು ಅರುಣಾಚಲಪ್ರದೇಶದ ಗ್ರಾಮಸ್ಥರು!

    ಗುವಾಹಟಿ: ಅಕ್ಟೋಬರ್ 20ಕ್ಕೂ ಮುನ್ನ ಸಾಮಾನ್ಯ ಪ್ರಜೆಗಳಾಗಿದ್ದ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತುಕ್ಬೆನ್ ಗ್ರಾಮದ ಜನರು ಕೋಟ್ಯಧಿಪತಿಗಳಾಗಿದ್ದಾರೆ.

    ಹೌದು, ಈ ಸುದ್ದಿ ಕೇಳಿ ನೀವು ಅಶ್ಚರ್ಯಗೊಂಡರೂ ನಿಜ. ಐದು ದಶಕದ ಹಿಂದೆ ಗ್ರಾಮದ ಕೆಲ ನಿವಾಸಿಗಳ ಭೂ ಪ್ರದೇಶವನ್ನು ಭಾರತೀಯ ಸೇನೆ ತನ್ನ ವಶಕ್ಕೆ ಪಡೆದಿತ್ತು. ಈ ಭೂಮಿಗೆ ಸದ್ಯ ಸರ್ಕಾರ ಪರಿಹಾರ ಹಣ ನೀಡಿದ್ದು, ಗ್ರಾಮಸ್ಥರು ಕೋಟಿ ಕೋಟಿ ಹಣ ಪಡೆದಿದ್ದಾರೆ.

    ಪಶ್ಚಿಮ ಕಮೆಂಗ್ ಜಿಲ್ಲೆಯ ತುಕ್ಪೆನ್, ಸಿಂಗ್ಚುಂಗ್ ಸೇರಿ ವಿವಿಧ ಹಳ್ಳಿಯ ಜನರಿಗೆ ಪರಿಹಾರ ಮೊತ್ತವನ್ನು ಅಲ್ಲಿನ ಸರ್ಕಾರ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಸ್ತಾಂತರಿಸಿದೆ. ಪ್ರಮುಖವಾಗಿ ಗ್ರಾಮದ ಪ್ರೇಮ್ ದೊರ್ಜಿ ಎಂಬವರಿಗೆ 6.31 ಕೋಟಿ ರೂ. ಫನ್ಟೋ ಎಂಬವರು 6.21 ಕೋಟಿ ರೂ, ಹಾಗೂ ಖಂಡು ಅವರಿಗೆ 5.98 ಕೋಟಿ ರೂ. ಸಿಕ್ಕಿದೆ.

    ಅರುಣಾಚಲ ಪ್ರದೇಶ ಸಿಎಂ ಪ್ರೇಮಾ ಖಾಂಡು, ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜೂಜು ಅವರು ಕಾರ್ಯಕ್ರದಲ್ಲಿ ಭಾಗವಹಿಸಿ ಪರಿಹಾರ ಮೊತ್ತವನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ಪ್ರೀತಿಯಿಂದ ಅರುಣಾಚಲಕ್ಕೆ ಹಲವು ವರ್ಷದ ಬಳಿಕ ಪರಿಹಾರ ಸಿಗಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

    ಗ್ರಾಮದ ಹಲವು ಮಂದಿಗೆ ಸರ್ಕಾರದ ಪರಿಹಾರ ಮೊತ್ತ ಸಿಕ್ಕಿದ್ದು, ಸಿಂಚಂಗ್‍ನಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು ಐದು ಗ್ರಾಮಸ್ಥರಿಗೆ 24.56 ಕೋಟಿ ರೂ. ನೀಡಲಾಗಿದೆ. ಅಲ್ಲದೇ ತುಕ್ಬೆನ್ ಗ್ರಾಮದ ಏಳು ನಿವಾಸಿಗಳಿಗೆ 13.17 ಕೋಟಿ ರೂ. ನೀಡಲಾಗಿದೆ ಎಂದು ಉಪ ಕಮಿಷನರ್ ಸೋನಾಲ್ ಸ್ವರೂಪ್ ತಿಳಿಸಿದ್ದಾರೆ.

    1962 ರ ಭಾರತದ ಹಾಗೂ ಚೀನಾ ನಡುವೆ ಗಡಿ ವಿಚಾರವಾಗಿ ನಡೆದ ಯುದ್ಧದ ನಂತರ ಭಾರತೀಯ ಸೇನೆಯೂ ಅಲ್ಲಿನ ಪ್ರದೇಶಗಳ ಭೂಮಿಯನ್ನು ವಶಕ್ಕೆ ಪಡೆದು ಸೇನಾ ನೆಲೆ ನಿರ್ಮಾಣ ಮಾಡಿತ್ತು. ಆದರೆ ಅಲ್ಲಿನ ನಿವಾಸಿಗಳಿಗೆ ಅಂದು ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿರಲಿಲ್ಲ. ಹೀಗಾಗಿ 2017 ರ ಏಪ್ರಿಲ್‍ನಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ಮೂರು ಗ್ರಾಮಗಳ 152 ಕುಟುಂಬಗಳು ಕೇಂದ್ರಕ್ಕೆ ಮನವಿ ಸಲ್ಲಿದ್ದವು. ಇದರ ಪರಿಣಾಮವಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಗ್ರಾಮಗಳಿಗೆ 54 ಕೋಟಿ ರೂ. ಹಾಗೂ ಸೆಪ್ಟಂಬರ್ ನಲ್ಲಿ ಅರುಣಾಚಲ ಪ್ರದೇಶದ ಖಾಸಗಿ ಭೂಮಿ ಸ್ವಾಧೀನಕ್ಕೆ 158 ಕೋಟಿ ರೂ. ಅನ್ನು ನೀಡಿತ್ತು.

    ಈ ವರ್ಷ ಫೆಬ್ರವರಿಯಲ್ಲಿ ತವಾಂಗ್ ಜಿಲ್ಲೆಯ ಬಾಮ್ಜಾ ಗ್ರಾಮದ 31 ಕುಟುಂಬಗಳಿಗೆ 40.80 ಕೋಟಿ ರೂ., 29 ಕುಟುಂಬಗಳಿಗೆ 1.09 ಕೋಟಿ ರೂ. ನೀಡಿದ್ದು, ಒಂದು ಕುಟುಂಬಕ್ಕೆ 6.73 ಕೋಟಿ ರೂ. ಮತ್ತು ಇನ್ನೊಬ್ಬರಿಗೆ 2.45 ಕೋಟಿ ರೂ. ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನಾ ಪಡೆ!

    ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನಾ ಪಡೆ!

    ಶ್ರೀನಗರ: ಶುಕ್ರವಾರ ಮೂವರು ಪೊಲೀಸ್ ಪೇದೆಯನ್ನು ಅಪಹರಿಸಿ ಹತ್ಯೆ ಮಾಡಿದ್ದ ಪಾಕ್ ವಿರುದ್ಧ ಭಾರತೀಯ ಸೇನಾ ಪಡೆ 5 ಮಂದಿ ಉಗ್ರರನ್ನು ಸೆದೆಬಡಿಯುವ ಮೂಲಕ ತನ್ನ ಸೇಡು ತೀರಿಸಿಕೊಂಡಿದೆ.

    ಶುಕ್ರವಾರ ಮುಂಜಾನೆ ಮೂವರು ಪೊಲೀಸರ ಮನೆಗೆ ನುಗ್ಗಿ ಅವರನ್ನು ಅಪಹರಿಸಿ ಉಗ್ರರು ಹತ್ಯೆ ಮಾಡಿದರು. ಈ ಘಟನೆ ನಸುಕಿನಲ್ಲೇ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಗಡಿ ದಾಟುತ್ತಿದ್ದ ಐವರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ.

    ಭಾರತೀಯ ಸೇನೆಯ ಸಿಬ್ಬಂದಿಗಳ ಒಂದು ತಂಡ, ಕೇಂದ್ರ ರಿಸರ್ವ್ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಗುರುವಾರ ಕಾರ್ಡಿನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು. ಶುಕ್ರವಾರದ ತನಕ ಗುಂಡಿನ ಚಕಮಕಿ ಕೊನೆಗೆ ಒಂದು ಎನ್‍ಕೌಂಟರ್ ಆಗಿ ತಿರುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.

    ಗುರುವಾರ ಇಬ್ಬರು ಉಗ್ರರನ್ನು ಕೊಲ್ಲಲಾಗಿದ್ದು, ಇನ್ನುಳಿದ ಮೂವರು ಮಂದಿ ಉಗ್ರರನ್ನು ಶುಕ್ರವಾರ ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾದವರೆಲ್ಲರೂ ಉಗ್ರರು ಎಂದು ಗುರುತಿಸಲಾಗಿದೆ ಅಂತಾ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ಹಿನ್ನೆಲೆ ಇತ್ತೀಚೆಗೆ ಹಿಜ್ಬುಲ್ ಮುಜಾಹಿದೀನ್ ತಂಡದಿಂದ ಮುಸ್ಲಿಂ ಪೊಲೀಸ್ ಅಧಿಕಾರಿಗಳು ರಾಜಿನಾಮೆ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಬಂದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ 6 ಎಸ್‍ಪಿಓ ಅಧಿಕಾರಿಗಳು ರಾಜಿನಾಮೆ ನೀಡಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿತ್ತು. ಆದ್ರೆ ಈ ವದಂತಿಯನ್ನು ಕೇಂದ್ರ ಗೃಹ ಇಲಾಖೆ ನಿರಾಕರಿಸಿದೆ.

    ಉಗ್ರರಿಂದ ಹತ್ಯೆಗೊಳಗಾದ ಮೂವರು ಪೊಲೀಸ್ ಅಧಿಕಾರಿಗಳಾದ ಜವಾನ್ಸ್ ನಿಸಾರ್ ಅಹಮ್ಮದ್, ಫಿರ್ದೋಸ್ಸ್ ಕುಚಾಯ್ ಹಾಗೂ ಕುಲ್ವಾನ್ಟ್ ಸಿಂಗ್ ಅವರಿಗೆ ಗೌರವವನ್ನು ಸಲ್ಲಿಸುತ್ತೇವೆ. ಇನ್ನೂ ಮುಂದೆ ಈ ಅಮಾನವೀಯ ಕೃತ್ಯವನ್ನು ಖಂಡಿಸಿ ಅಪರಾಧಿಗಳನ್ನು ಕಾನೂನಿನ ಪ್ರಕಾರ ಸೆದೆಬಡಿಯುತ್ತೇವೆ ಎಂದು ಕಾಶ್ಮೀರದ ಪೊಲೀಸ್ ಪಡೆ ಟ್ವೀಟ್ ಮಾಡಿದೆ.

    ಬಹುಕಾಲದ ನಂತರ ಪಾಕ್-ಭಾರತದ ಚರ್ಚಿಗೆ ಅವಕಾಶ ಸಿಕ್ಕಿತ್ತು. ಆದರೆ ಇದೀಗ ಈ ನೀಚ ಕೃತ್ಯವೆಸಗಿದ್ದರಿಂದ ಪಾಕ್‍ನೊಂದಿಗೆ ದೀರ್ಘ ಗಂಟೆಯ ಚರ್ಚೆಯನ್ನು ಭಾರತ ರದ್ದು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv