Tag: ಭಾರತೀಯ ರೈಲು

  • ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ

    ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ

    – ವಿಡಿಯೋ ಮೂಲಕ ಸ್ಲೀಪರ್ ಸೆಲ್‌ಗಳಿಗೆ ಕರೆ ನೀಡಿದ ಘೋರಿ
    – ಭಾರತ ಸರ್ಕಾರವನ್ನು ಅಲುಗಾಡಿಸಲು ದಾಳಿ ನಡೆಸಿ

    ನವದೆಹಲಿ: ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್‌ಗಳಿಗೆ ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast Case) ಪ್ರಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ (Farhatullah Ghori) ಕರೆ ನೀಡಿದ್ದಾನೆ.

    ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ. ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.ಇದನ್ನೂ ಓದಿ: ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲಿದ್ದಾರೆ ನಾಗಚೈತನ್ಯ ಭಾವಿ ಪತ್ನಿ

    ಭಾರತ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಗುಪ್ತಚರ ಸಂಸ್ಥೆ (National Intelligence Agency) ಮೂಲಕ ಸ್ಲೀಪರ್ ಸೆಲ್‌ಗಳ ಆಸ್ತಿಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೇ ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಹೇಳಿದ್ದಾನೆ.

    ಮೂರು ವಾರಗಳ ಹಿಂದೆ ಟೆಲಿಗ್ರಾಮ್‌ನಲ್ಲಿ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (INS) ಬೆಂಬಲದೊಂದಿಗೆ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು.ಇದನ್ನೂ ಓದಿ: ಸಮಂತಾ ನನ್ನ ಫ್ರೆಂಡ್ ಎಂದ ಉರ್ಫಿ ಜಾವೇದ್

    ಫರ್ಹತುಲ್ಲಾ ಘೋರಿ ಯಾರು?
    ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದೂ ಕರೆಯಲ್ಪಡುವ ಫರ್ಹತುಲ್ಲಾ ಘೋರಿ, 2002 ರಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಆ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 80 ಜನರು ಗಾಯಗೊಂಡಿದ್ದರು. ಜೊತೆಗೆ 2005 ರಲ್ಲಿ ಹೈದರಾಬಾದ್‌ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿಯೂ ಈತನ ಕೈವಾಡ ಇರುವುದು ದೃಢಪಟ್ಟಿತ್ತು.

    ಮಾ.1 ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಜನರು ಗಾಯಗೊಂಡಿದ್ದರು. ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ದಳ (NIA) ಒಂದು ತಿಂಗಳ ನಂತರ ಎಪ್ರಿಲ್ 12 ರಂದು ಇಬ್ಬರು ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್‌ಅನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿತ್ತು. ಫರ್ಹತುಲ್ಲಾ ಘೋರಿ ಮತ್ತು ಅವರ ಅಳಿಯ ಶಾಹಿದ್ ಫೈಸಲ್ ದಕ್ಷಿಣ ಭಾರತದಲ್ಲಿ ಸ್ಲೀಪರ್ ಸೆಲ್‌ಗಳ ಪ್ರಬಲ ಸಂಪರ್ಕ ಹೊಂದಿದ್ದಾರೆ.ಇದನ್ನೂ ಓದಿ: ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ

    ಕಳೆದ ವರ್ಷ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಮೂವರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದರು. ತನಿಖೆಯ ವೇಳೆ ಘೋರಿ ಭಯೋತ್ಪಾದಕರ ಹ್ಯಾಂಡ್ಲರ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು.

  • ರೈಲಿನಲ್ಲಿ ವಿಶ್ವದರ್ಜೆಯ ಸೇವೆ – ಮೇಕ್ ಇನ್ ಇಂಡಿಯಾ ಟ್ರೇನ್ 18ನಲ್ಲಿ ಇರೋ ವಿಶೇಷತೆಗಳೇನು?

    ರೈಲಿನಲ್ಲಿ ವಿಶ್ವದರ್ಜೆಯ ಸೇವೆ – ಮೇಕ್ ಇನ್ ಇಂಡಿಯಾ ಟ್ರೇನ್ 18ನಲ್ಲಿ ಇರೋ ವಿಶೇಷತೆಗಳೇನು?

    ನವದೆಹಲಿ: ವಿಶ್ವದರ್ಜೆಯ ಎಂಜಿನ್ ರಹಿತ “ಟ್ರೇನ್ 18” ಹೆಸರಿನ ರೈಲನ್ನು ಇದೇ ಜೂನ್ ನಲ್ಲಿ ಹಳಿಗಿಳಿಸಲು ಭಾರತೀಯ ರೈಲ್ವೇ ಮುಂದಾಗಿದೆ.

    ಎಂಜಿನ್ ರಹಿತ ರೈಲುಗಳು ಸದ್ಯ ಮೆಟ್ರೋ ನಗರಗಳಲ್ಲಿ ಮಾತ್ರ ಸಂಚರಿಸುತ್ತಿದೆ. ಆದರೆ ಈ ವರ್ಷದ ಜೂನ್ ನಲ್ಲಿ ಟ್ರೇನ್ 18 ಮತ್ತು 2020ರ ವೇಳೆಗೆ ಟ್ರೇನ್ 20 ಹೆಸರಿನ ರೈಲನ್ನು ಓಡಿಸಲು ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ.

    ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣದ ಅವಧಿಯು 20% ಕಡಿಮೆಯಾಗಲಿದೆ. ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಸ್ಥಾನವನ್ನು ಹೊಸ ಸೆಮಿ- ಹೈಸ್ಪೀಡ್ ರೈಲುಗಳು ತುಂಬಲಿದೆ. ಈ ಮೂಲಕ ಹಂತಹಂತವಾಗಿ ರಾಜಧಾನಿ, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ನಿಲ್ಲಿಸಲು ಸಚಿವಾಲಯ ಮುಂದಾಗಿದೆ.

     

    ಈ ಎರಡು ರೈಲುಗಳನ್ನು ಚೆನ್ನೈನಲ್ಲಿರುವ ರೈಲ್ವೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷ ಜೂನ್ ಒಳಗಾಗಿ 16 ಕೋಚ್‍ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆಯಿದೆ. ಇದೇ ರೈಲುಗಳನ್ನು ಆಮದು ಮಾಡಿಕೊಂಡಿದ್ದಲ್ಲಿ ನಿರ್ಮಾಣಕ್ಕೆ ತಗಲಿದ್ದ ಎರಡರಷ್ಟು ವೆಚ್ಚವಾಗುತಿತ್ತು ಎಂದು ಐಸಿಎಫ್ ಸ್ಪಷ್ಟಪಡಿಸಿದೆ.

    ಟ್ರೇನ್ 8 ಉಕ್ಕಿನಿಂದ ನಿರ್ಮಾಣವಾಗುತ್ತಿದ್ದು ಟ್ರೇನ್ 20 ಅಲ್ಯೂಮಿನಿಯಂ ನದ್ದಾಗಿರುತ್ತದೆ. ಈ ರೈಲುಗಳು ಘಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಘಂಟೆಗೆ 90 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿವೆ.

    ಹೊಸ ರೈಲುಗಳಲ್ಲಿ ಎಂಜಿನ್ ಹಿಂದೆ ಮುಂದೆ ಮಾಡುವ ಅವಶ್ಯಕತೆ ಇರುವುದಿಲ್ಲ. ರೈಲುಗಳು ಬೇಗನೆ ವೇಗವನ್ನು ಪಡೆದುಕೊಳ್ಳಲಿದೆ ಹಾಗೆ ಕಡಿಮೆ ಹೊಂದಲಿದೆ. ಹಾಗಾಗಿ ಪ್ರಯಾಣದ ಸಮಯವನ್ನು ತಗ್ಗಿಸಲಿದೆ.

    ಕಾರುಗಳಲ್ಲಿರುವಂತೆ ಬೋಗಿಗಳ ಒಳಗಿನ ಆವರಣವನ್ನು ವಿನ್ಯಾಸ ಮಾಡಲಾಗಿದ್ದು, ಗರಿಷ್ಟ 56 ಎಕ್ಸಿಕ್ಯೂಟಿವ್ ಮತ್ತು 78 ನಾನ್ ಎಕ್ಸಿಕ್ಯೂಟಿವ್ ಆಸನಗಳು ಇರಲಿದೆ. ರೈಲಿನ ಎರಡೂ ಬದಿಯಲ್ಲೂ ಅಂತರ ಇಲ್ಲದ ಒಂದೇ ನೇರ ಗ್ಲಾಸ್ ಕಿಟಕಿ ಇರುತ್ತದೆ.

    ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆಯನ್ನು ಳಗೊಂಡಿದ್ದು ವೈಫೈ ಸೌಲಭ್ಯ ಇರಲಿದೆ. ಜಿಪಿಎಸ್ ಆಧಾರಿತ ಗ್ರಾಹಕರ ಮಾಹಿತಿ ವ್ಯವಸ್ಥೆ, ಇನ್ಫೋಟೈನ್ ಮೆಂಟ್ ಸಿಸ್ಟಂ ಸಹ ಇರಲಿದೆ. ಸ್ವಯಂ ಚಾಲಿತ ರೈಲಿನ ಬಾಗಿಲು ಇರಲಿದ್ದು, ರೈಲ್ವೆ ನಿಲ್ದಾಣ ಬಂದಾಗ ತನಗೆ ತಾನೆ ತೆರೆದುಕೊಳ್ಳಲಿವೆ. ರಬ್ಬರ್ ಪ್ಲೋರಿಂಗ್ ಮತ್ತು ಎಲ್‍ಇಡಿ ದೀಪದ ವ್ಯವಸ್ಥೆ ಇರಲಿದೆ.

    ಬಯೋ-ವಾಕ್ಯೂಮ್ ಶೌಚಾಲಯಗಳ ಜೊತೆ ಸುಂದರವಾದ ಸ್ನಾನದ ಮನೆ ಇರಲಿದೆ. ಸಾಮಾನುಗಳ ಶೆಲ್ಫ್ ವಿಶಾಲವಾಗಿದ್ದು ಹೆಚ್ಚಿನ ಸಾಮಾನುಗಳನ್ನು ಇಡಬಹುದಾಗಿದೆ. ಅಂಗವಿಕಲರಿಗೆ ಸಹಾಯವಾಗಲೆಂದು ವೀಲ್ ಚೇರ್ ಗಳಿಗೆ ಜಾಗ ಕಲ್ಪಿಸಲಾಗಿದೆ. ಎರಡು ಬೋಗಿಗಳ ಮಧ್ಯೆ ಗಾಜಿನ ಬಾಗಿಲುಗಳು ಇರಲಿದೆ.