Tag: ಭಾರತೀಯ ರೆಸ್ಟೋರೆಂಟ್

  • ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಕೀವ್: ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ಪ್ರಾರಂಭಿಸಿ ವಾರವೇ ಕಳೆದಿದೆ. ಸಾವಿರಾರು ಸೈನಿಕರು ಹಾಗೂ ನಿವಾಸಿಗಳ ಮಾರಣ ಹೋಮದ ಬಳಿಕವೂ ರಷ್ಯಾದ ರುದ್ರತಾಂಡವ ಇನ್ನೂ ನಿಂತಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಜನರು ಊಟ ವಸತಿಯಿಲ್ಲದೇ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.

    ರಷ್ಯಾದಿಂದ ಮಾರಣಾಂತಿ ಶೆಲ್ ದಾಳಿಯ ನಡುವೆಯೂ ಕೀವ್‍ನಲ್ಲಿ ಭಾರತೀಯ ವ್ಯಕ್ತಿಯೊಬ್ಬ ತನ್ನ ರೆಸ್ಟೋರೆಂಟ್‍ನಲ್ಲಿ ನೂರಾರು ಜನರಿಗೆ ಊಟ ವಸತಿ ನೀಡಿ ಆಶ್ರಯದಾತನಾಗಿದ್ದಾನೆ.

    ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ಸಾಥಿಯಾ ರೆಸ್ಟೋರೆಂಟ್‍ನ ಮಾಲೀಕ ಮನೀಶ್ ಡೇವ್ ಯುದ್ಧ ಪ್ರಾರಂಭವಾದಾಗಿನಿಂದ ಅನೇಕರಿಗೆ ಆಹಾರ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾನೆ. ನನ್ನಿಂದ ಸಾಧ್ಯವಾದಷ್ಟು ದಿನ ಇಲ್ಲಿ ಕಷ್ಟದಲಿರುವ ಜನರಿಗೆ ಆಹಾರ ಹಾಗೂ ಆಶ್ರಯ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳುತ್ತಾರೆ ಮನೀಶ್. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಗುಜರಾತ್‍ನ ವಡೋದರಾ ಮೂಲದ ಮನೀಶ್ 2021ರಲ್ಲಿ ಕೀವ್‍ಗೆ ಬಂದಿದ್ದರು. ಕೀವ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಮನೀಶ್ ರೆಸ್ಟೋರೆಂಟ್ ತೆರೆದಿದ್ದರು. ಇದೀಗ ಇವರ ರೆಸ್ಟೋರೆಂಟ್ ಯುದ್ಧದ ಪರಿಸ್ಥಿತಿಯಲ್ಲಿ ಜನರಿಗೆ ಆಶ್ರಯತಾಣವಾಗಿದೆ.

    ಮನೀಶ್ ಅವರ ರೆಸ್ಟೋರೆಂಟ್‍ನಲ್ಲಿ ಇದೀಗ ಮಕ್ಕಳು, ಗರ್ಭಿಣಿಯರು, ವಿದ್ಯಾರ್ಥಿಗಳು, ಮನೆ ಕಳೆದುಕೊಂಡಿರುವವರು ಹಾಗೂ ಹಿರಿಯ ನಾಗರಿಕರು ಸೇರಿದಂತೆ 130ಕ್ಕೂ ಹೆಚ್ಚು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ ಮೋದಿಯಿಂದ 4ನೇ ಬಾರಿಗೆ ಉನ್ನತ ಸಭೆ

    ಕೀವ್‍ನ ಬೊಗೊಮೆಲೆಟ್ಸ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ ಇರುವ ಸಾಥಿಯಾ ರೆಸ್ಟೋರೆಂಟ್‍ನಲ್ಲಿ ಯಾವುದೇ ದೇಶದ ಜನರು ಬಂದು ಆಶ್ರಯ ಪಡೆಯಬಹುದು ಎಂದು ಮನೀಶ್ ತಿಳಿಸಿದ್ದಾರೆ.