Tag: ಭಾರತೀಯ ರಿಸರ್ವ್ ಬ್ಯಾಂಕ್

  • ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ಎಷ್ಟು ಮುಖ್ಯವೋ ಅದೇ ರೀತಿ ಇಂಟರ್ನೆಟ್ ಎನ್ನುವುದು ಕೂಡ ತುಂಬಾ ಮುಖ್ಯ. ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಇಲ್ಲದೇ ಎಲ್ಲವೂ ಅಸಾಧ್ಯ ಎನ್ನುವಂತಾಗಿದೆ. ಆನ್ಲೈನ್ ಆರ್ಡರ್ ಮಾಡುವುದು, ಹಣ ವರ್ಗಾವಣೆ, ಊಟ, ಕೆಲವು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ    ಇನ್ನಿತರವುಗಳನ್ನು ನಾವು ಇಂಟರ್ನೆಟ್ ಮೂಲಕ ಮಾಡುತ್ತೇವೆ. ಅದರಲ್ಲಿ ಮುಖ್ಯವಾಗಿ ಹಣ ವರ್ಗಾವಣೆ. ಆದರೆ ಇದೀಗ ಆರ್‌ಬಿಐ ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆ ಮಾಡುವ ಡಿಜಿ ರುಪಿ  ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಏನಿದು? ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

    ಇಂಟರ್ನೆಟ್ ಇಲ್ಲದೆ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ. ಇಂಟರ್ನೆಟ್ ಅಥವಾ ದೂರವಾಣಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಈ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯಮಾಡುತ್ತದೆ. ಇಂತಹ ಒಂದು ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿದೆ. ಇದು ದೇಶದ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಿದೆ. 

    ಇತ್ತೀಚಿಗೆ ಮುಂಬೈನಲ್ಲಿ ನಡೆದ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಈ ಡಿಜಿ ರುಪಾಯಿ ವ್ಯವಸ್ಥೆಯನ್ನು ಘೋಷಿಸಲಾಯಿತು. ಮೂಲಕ ಭಾರತ ಹಾಗೂ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.

    ಏನಿದು ಡಿಜಿ ರೂಪಾಯಿ?

    ಡಿಜಿ ರೂಪಾಯಿ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕಿನ ಕರೆನ್ಸಿ ಆಗಿದೆ. ಭೌತಿಕ ಹಣದ ಡಿಜಿಟಲ್ ರೂಪ ಇದಾಗಿದೆ. ಈ ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು, ಭೌತಿಕ ಹಣಕ್ಕೆ ಇರುವ ಮೌಲ್ಯ ಈ ಡಿಜಿಟಲ್ ರೂಪಾಯಿಗೆ ಇರಲಿದೆ. ಈ ಹಣ ಬ್ಯಾಂಕುಗಳ ವ್ಯಾಲೆಟ್ ನಲ್ಲಿ ಇರಲಿದೆ. ಯುಪಿಐ ವ್ಯವಸ್ಥೆಯಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆಯಾಗುತ್ತದೆ. ಆದರೆ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಇದು ಯುಪಿಐ ಕಾರ್ಯನಿರ್ವಹಿಸುವ ವಿಧಾನಕ್ಕಿಂತ ವಿಭಿನ್ನವಾಗಿ ಕೆಲಸ ನಿರ್ವಹಿಸುತ್ತದೆ. ಡಿಜಿಟಲ್ ರೂಪಾಯಿ  ಇರುವ ವ್ಯಾಲೆಟ್ ಗಳು ಯುಪಿಐ ಶುಗರ್ ಗಳನ್ನ ಸ್ಕ್ಯಾನ್ ಮಾಡಿ ಕೆಲಸ ನಿರ್ವಹಿಸುತ್ತದೆ.

    ಡಿಜಿಟಲ್ ರೂಪಾಯಿ ಹೇಗೆ ಕಾರ್ಯನಿರ್ವಹಿಸುತ್ತದೆ?

    ಈ ಡಿಜಿಟಲ್ ರೂಪಾಯಿಯು ಟೆಲಿಕಾಂ ನೆರವಿನ ಆಫ್ಲೈನ್ ಪೇಮೆಂಟ್ ಮತ್ತು NFC (Near Field communication) ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತದೆ. ಟೆಲಿಕಾಂ ನೆರವಿನ ಪೇಮೆಂಟ್ ವ್ಯವಸ್ಥೆಗೆ ಕನಿಷ್ಠ ನೆಟ್ವರ್ಕ್ ಸಿಗ್ನಲ್ ಇದ್ದರೆ ಕಾರ್ಯನಿರ್ವಹಿಸುತ್ತದೆ. ಎನ್ ಎಫ್ ಸಿ ವ್ಯವಸ್ಥೆಯು ಇಂಟರ್ನೆಟ್ ಹಾಗೂ ಟೆಲಿಕಾಂ ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ. 

    ಇದನ್ನ ಬಳಸೋದು ಹೇಗೆ? 

    ಹಣ ವರ್ಗಾಯಿಸುವವರು ತಮ್ಮ ಮೊಬೈಲನ್ನು ಟ್ಯಾಪ್ ಮಾಡುವ ಮೂಲಕ ಹಣ ವರ್ಗಾವಣೆಯಾಗುತ್ತದೆ. ಈ ಮೂಲಕ ಹಣ ಯುಪಿಐ ರೀತಿ ವ್ಯಕ್ತಿಯಿಂದ ವ್ಯಾಪಾರಗಳಿಗೆ ಹಣ ವರ್ಗಾವಣೆ ಆಗುತ್ತದೆ. 

    ಸದ್ಯ ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳು: 

    1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 
    2. ಐಸಿಐಸಿಐ ಬ್ಯಾಂಕ್ 
    3. ಐಡಿಎಫ್‍ಸಿ ಫಸ್ಟ್ ಬ್ಯಾಂಕ್ 
    4. ಯೆಸ್ ಬ್ಯಾಂಕ್ 
    5. ಎಚ್ ಡಿ ಎಫ್ ಸಿ ಬ್ಯಾಂಕ್ 
    6. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 
    7. ಬ್ಯಾಂಕ್ ಆಫ್ ಬರೋಡಾ 
    8. ಕೋಟಕ್ ಮಹೀಂದ್ರಾ ಬ್ಯಾಂಕ್ 
    9. ಕೆನರಾ ಬ್ಯಾಂಕ್ 
    10. ಆಕ್ಸಿಸ್ ಬ್ಯಾಂಕ್ 
    11. ಇಂಡಸ್ ಇಂಡ್ ಬ್ಯಾಂಕ್ 
    12. ಪಂಜಾಬ್ ನ್ಯಾಷನಲ್ ಬ್ಯಾಂಕ್ 
    13. ಫೆಡರಲ್ ಬ್ಯಾಂಕ್ 
    14. ಕರ್ನಾಟಕ ಬ್ಯಾಂಕ್ 
    15. ಇಂಡಿಯನ್ ಬ್ಯಾಂಕ್ 

    ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳ ಹೆಸರುಗಳೊಂದಿಗೆ ಆಪ್ ಗಳು ಲಭ್ಯವಿದ್ದು, ಬಳಕೆದಾರರು ಈ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಿಕ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾಯಿಸುವವರು ಆಪ್ ಮೂಲಕ ವ್ಯಾಲೆಟ್ ಗಳನ್ನು ಬಳಸಬಹುದು. ಕನಿಷ್ಠ ಬ್ಯಾಲೆನ್ಸ್, ಬ್ಯಾಲೆನ್ಸ್ಗಳ ಮೇಲೆ ಪಾವತಿಸಬೇಕಾದ ಬಡ್ಡಿ ಹಾಗೂ ಮೊಬೈಲ್ ಕಳೆದುಹೋದರೂ ಕೂಡ ಈ ಬ್ಯಾಲೆಟ್ ಗಳನ್ನು ಮರಳಿ ಪಡೆಯಬಹುದು.

    ಪ್ರಯೋಜನಗಳೇನು? 

    ಈ ಡಿಜಿಟಲ್ ರುಪಾಯಿ ಮೂಲಕ ನೆಟ್ವರ್ಕ್ ಸಮಸ್ಯೆಗಳಿಂದ ಆಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಕಡಿಮೆ ನೆಟ್ವರ್ಕ್ ಇರುವ ಸಮಸ್ಯೆಗಳಲ್ಲಿ ಹಣ ವರ್ಗಾವಣೆಗೆ ಇದು ಸಹಾಯ ಮಾಡುತ್ತದೆ. ಸಂಪರ್ಕವಿಲ್ಲದಿದ್ದರೂ ಕೂಡ ಹಣ ವರ್ಗಾವಣೆ ಮಾಡಬಹುದು. ಇದು ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ವೈಯಕ್ತಿಕ ಹಣ ವರ್ಗಾವಣೆಯಿಂದ ಹಿಡಿದು ವ್ಯಾಪಾರ ವಹಿವಾಟುಗಳಿಗೂ ಇದನ್ನು ಬಳಸಬಹುದು.

  • ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

    ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

    ನವದೆಹಲಿ: ಎಟಿಎಂಗಳಿಂದ ಹಣ ವಿತ್ ಡ್ರಾ (ATM Money Withdraw) ಮಾಡುವುದರ ಮೇಲೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮೇ.1 ರಿಂದ 2 ರೂ. ದುಬಾರಿಯಾಗಲಿದೆ.

    ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಅನುಮತಿ ನೀಡಿದ್ದು, ಇದೇ ಮೇ. 1ರಿಂದ ಹೊಸ ಶುಲ್ಕಗಳು ಅನ್ವಯಿಸಲಿವೆ.ಇದನ್ನೂ ಓದಿ:ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್

    ಒಂದು ತಿಂಗಳಿಗೆ ಎಟಿಎಂನಿಂದ 5 ಬಾರಿ ಉಚಿತವಾಗಿ ಹಣವನ್ನು ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಲು ಹೋದರೆ 31 ರೂ.ಗಳನ್ನು ಕಡಿತಗೊಳಿಸುತ್ತಿತ್ತು. ಆದರೆ ಇದೀಗ ಈ ಶುಲ್ಕವನ್ನು 2ರೂ.ಗೆ ಏರಿಕೆ ಮಾಡಿದ್ದು, ಗರಿಷ್ಠ ಮಿತಿ ಮೀರಿ ಡ್ರಾ ಮಾಡಿದ್ರೆ 23 ರೂ. ಕಡಿತಗೊಳ್ಳಲಿವೆ. ಈ ಮೂಲಕ 21 ರೂ.ಯಿಂದ 23 ರೂ.ಗೆ ಏರಿಕೆಯಾಗಿದೆ.

    ಪ್ರಸ್ತುತ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಖಾತೆ ಹೊಂದಿರುವವರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ ಐದು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರ ಪ್ರಮಾಣದಲ್ಲಿ ಹೆಚ್ಚಳವಾದಾಗ ಆಗ ಈ 2ರೂ. ಏರಿಕೆಯ ಇಂಟರ್‌ಚೇಂಜ್ ಶುಲ್ಕವು (Interchange Cost)  ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.

    ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸ್ಥಿರವಾಗಿ ಕುಸಿತ ಕಂಡಿದೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2023ರ ಜನವರಿಯಲ್ಲಿ 57 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿತ್ತು. ಇನ್ನೂ 2024ರ ಜನವರಿಯಲ್ಲಿ 52.72 ಕೋಟಿ ರೂ.ಗೆ ಇಳಿಕೆ ಕಂಡುಬಂದಿತ್ತು. ಈ ವರ್ಷ ಜನವರಿಯಲ್ಲಿ ಇದು 48.83 ಕೋಟಿ ರೂ.ಗೆ ಇಳಿಕೆಯಾಗಿದೆ.ಇದನ್ನೂ ಓದಿ:ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ- ರಜತ್, ವಿನಯ್ ಗೌಡ ಜೈಲಿನಿಂದ ರಿಲೀಸ್

  • ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಹೆಚ್ಚುತ್ತಿರುವ ಹಣಕಾಸಿನ ವಂಚನೆ (Financial Fraud) ವಿರುದ್ಧದ ಹೋರಾಟ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಅಂಗವಾಗಿರುವ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ (Reserve Bank Innovation Hub) ಹೊಸ ಎಐ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದು, ಮ್ಯೂಲ್ ಹಂಟರ್ ಎಂದು ಕರೆಯಲಾಗುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಕ್ರಮ ಹಣ ವರ್ಗಾವಣೆಯ ಟ್ರ‍್ಯಾಕ್ ಹೇಗೆ ಮಾಡುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗವಾಗಿರುವ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ `Mule Hunter AI’ ಎಂಬ ಸುಧಾರಿತ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಎಐ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಮೂಲಕ ಹಣಕಾಸಿನ ವಂಚನೆಯ ವಿರುದ್ಧದ ಹೋರಾಡಬೇಕು ಎನ್ನುವ ಮೂಲ ಉದ್ದೇಶವನ್ನು ಹೊಂದಿದೆ. ಸಾಮಾನ್ಯವಾಗಿ ಮನಿ ಲಾಂಡರಿಂಗ್‌ ಯೋಜನೆಗಳಲ್ಲಿ ಬಳಸುವ ಮ್ಯೂಲ್ ಖಾತೆಗಳನ್ನು ಗುರುತಿಸಿ, ಫ್ಲ್ಯಾಗ್ ಮಾಡುವ ಮೂಲಕ ಈ ರೀತಿಯ ಖಾತೆಗಳನ್ನು ಪತ್ತೆಹಚ್ಚುತ್ತದೆ.

    ಈಗಾಗಲೇ ಈ ತಂತ್ರಜ್ಞಾನವನ್ನೊಳಗೊಂಡ ಅಪ್ಲಿಕೇಶನ್‌ಅನ್ನು ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳ ಪೈಕಿ 67.8% ರಷ್ಟು ಆನ್‌ಲೈನ್ ಹಣಕಾಸು ವಂಚನೆಗಳಾಗಿವೆ. ಹೀಗಾಗಿ ಈ ರೀತಿಯ ವಂಚನೆ ತಡಗಟ್ಟಲು ಎಐ ಪ್ರಮುಖ ಪಾತ್ರವಹಿಸುತ್ತದೆ.

    ಹಣಕಾಸಿನ ವಂಚನೆಯ ವಿರುದ್ಧ ಹೋರಾಡುವ ದೊಡ್ಡ ಸಮಸ್ಯೆಯೆಂದರೆ ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚುವುದು. ಅಕ್ರಮ ಹಣಕಾಸು ಚಟುವಟಿಕೆಗಳ ಪ್ರಮುಖ ಸಕ್ರಿಯ ಕೇಂದ್ರವಾಗಿ ಮ್ಯೂಲ್ ಖಾತೆಗಳು ಕಾರ್ಯನಿರ್ವಹಿಸುತ್ತವೆ. `ಮ್ಯೂಲ್ ಹಂಟರ್ ಎಐ’ ನಂತಹ ತಂತ್ರಜ್ಞಾನಗಳು ಹಣಕಾಸಿನ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸೈಬರ್ ಅಪರಾಧವನ್ನು ನಿಗ್ರಹಿಸಲು ಪ್ರಾಮುಖ್ಯತೆಯನ್ನು ಹೊಂದಿವೆ.

    ಮ್ಯೂಲ್ ಖಾತೆ ಎಂದರೇನು?
    ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಪ್ರಕಾರ, ಅಕ್ರಮ ಹಣವನ್ನು ವರ್ಗಾವಣೆ ಮಾಡಲು ಬಳಸುವ ಬ್ಯಾಂಕ್ ಖಾತೆಯನ್ನು ಮ್ಯೂಲ್ ಖಾತೆ (Mule Accounts) ಎನ್ನುವರು. ಸುಲಭವಾಗಿ ಹಣದ ಭರವಸೆಯ ಆಮಿಷಕ್ಕೆ ಒಳಗಾಗಲು ಬಲವಂತಪಡಿಸುವ ಅನುಮಾನಾಸ್ಪದ ವ್ಯಕ್ತಿಗಳು ಇದನ್ನು ಬಳಸುತ್ತಾರೆ. ಈ ರೀತಿಯ ಖಾತೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡುವುದರಿಂದ ಹಣವನ್ನು ಪತ್ತೆಹಚ್ಚಲು ಮತ್ತು ಮರುಪಡೆಯಲು ಕಷ್ಟವಾಗುತ್ತದೆ.

    ಮ್ಯೂಲ್ ಹಂಟರ್ ಎಐನ ಅಭಿವೃದ್ಧಿ:
    ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಪ್ರಕಾರ, ಇದು ಮ್ಯೂಲ್ ಖಾತೆಗಳನ್ನು ಗುರುತಿಸಲು ಮತ್ತು ವರದಿ ಮಾಡುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಇಲಾಖೆಯು ಬ್ಯಾಂಕುಗಳೊಂದಿಗೆ ವ್ಯಾಪಕವಾದ ಸಮಾಲೋಚನೆ ನಡೆಸಿದೆ.

    ಈ ತಂತ್ರಜ್ಞಾನವು ಈಗಾಗಲೇ ಹಲವಾರು ಬ್ಯಾಂಕ್‌ಗಳೊಂದಿಗೆ ಕೆಲಸ ನಿರ್ವಹಿಸಿದ್ದು, ಮ್ಯೂಲ್ ಖಾತೆಯ ಹತ್ತೊಂಬತ್ತು ವಿಭಿನ್ನ ಮಾದರಿಯ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಹೀಗಾಗಿ ತಂತ್ರಜ್ಞಾನದ ಆರಂಭಿಕ ಫಲಿತಾಂಶದಲ್ಲಿ ದಕ್ಷತೆ ಮತ್ತು ನಿಖರತೆಯನ್ನು ಎತ್ತಿ ತೋರಿಸಿದೆ.

    ಮ್ಯೂಲ್ ಹಂಟರ್ ಎಐ ಹೇಗೆ ಕೆಲಸ ಮಾಡುತ್ತದೆ?
    ಶಂಕಿತ ಮ್ಯೂಲ್ ಖಾತೆಗಳನ್ನು ಗುರುತಿಸಲು ನಿಯಮ-ಆಧಾರಿತ ವ್ಯವಸ್ಥೆಗಿಂತ ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಮಷಿನ್ ಲರ್ನಿಂಗ್ ಆಧಾರಿತ ಪರಿಹಾರವು ಸೂಕ್ತವಾಗಿರುತ್ತದೆ. ಈ ಮೂಲಕ ಹೆಚ್ಚಿನ ನಿಖರತೆ ಹಾಗೂ ಹೆಚ್ಚಿನ ವೇಗದೊಂದಿಗೆ ಮ್ಯೂಲ್ ಖಾತೆಗಳ ವಹಿವಾಟು ಮತ್ತು ಖಾತೆ ವಿವರ-ಸಂಬಂಧಿತ ಡೇಟಾಸೆಟ್‌ಗಳನ್ನು ವಿಶ್ಲೇಷಿಸಬಹುದು.

    ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ ಎಐನಿಂದ ಹಣಕಾಸು ವಂಚನೆಯ ಖಾತೆಗಳನ್ನು ವೇಗವಾಗಿ ಗುರುತಿಸುವ ಉದ್ದೇಶವನ್ನು ಹೊಂದಿದೆ. ವಂಚನೆಗಳು ವಿವಿಧ ಮಾರ್ಗಗಳ ಮೂಲಕ ಸಂಭವಿಸಬಹುದು. ಈ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಹಣವು ಅಂತಿಮವಾಗಿ ಯಾವ ಮ್ಯೂಲ್ ಖಾತೆಗಳಿಗೆ ಹೋಗುತ್ತದೆ ಎಂಬುದನ್ನು ಇದು ತಿಳಿಸುತ್ತದೆ. ಹೀಗಾಗಿ ಈ ತಂತ್ರಜ್ಞಾನ ಮಷಿನ್ ಲರ್ನಿಂಗ್ (Machine Learning) ಆಧಾರಿತ ವಿಧಾನದ ಮೂಲಕ ಬ್ಯಾಂಕಿನ ವ್ಯವಸ್ಥೆಯಲ್ಲಿ ಹೆಚ್ಚಿನ ಮ್ಯೂಲ್ ಕಾತೆಗಳನ್ನು ಪತ್ತೆಹಚ್ಚಲು ಸಹಕಾರಿಯಗುತ್ತದೆ.

  • ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

    ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

    ಮುಂಬೈ: ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಇದು 2ನೇ ಬೆದರಿಕೆಯಾಗಿದೆ.

    ಡಿ.12 ರಂದು ಆರ್‌ಬಿಐ ಇಮೇಲ್‌ಗೆ ದುಷ್ಕರ್ಮಿಗಳು ರಷ್ಯನ್ ಭಾಷೆಯಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ತಿಂಗಳ ಹಿಂದೆಯಷ್ಟೇ ಆರ್‌ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೆ ಬೆದರಿಕೆ ಕರೆ ಬಂದಿತ್ತು.ಇದನ್ನೂ ಓದಿ: ದೆಹಲಿಯಲ್ಲಿನ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    ಸದ್ಯ ಮುಂಬೈನ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮೇಲ್ ಕಳುಹಿಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬೆದರಿಕೆ ಇಮೇಲ್ ಕುರಿತು ಮಾತನಾಡಿರುವ ಮುಂಬೈ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ರಷ್ಯನ್ ಭಾಷೆಯಲ್ಲಿದೆ ಮತ್ತು ಬ್ಯಾಂಕ್ಅನ್ನು ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ. ಮೇಲ್ ಕಳುಹಿಸಲು VPN ಅನ್ನು ಬಳಸಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ಇಮೇಲ್ ಕಳುಹಿಸಿದವರ IP ವಿಳಾಸವನ್ನು ಸಹ ಪತ್ತೆಹಚ್ಚುತ್ತಿದ್ದಾರೆ ಎಂದು ಹೇಳಿದರು.

    ಇದಕ್ಕೂ ಮುನ್ನ ನ.16 ರಂದು, ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಲಕ್ಷರ್ ಇ ತೊಯ್ಬಾ ಗುಂಪಿನ ಸಿಇಓ ಎಂದು ಹೇಳಿ, ಹಾಡನ್ನು ಹಾಡಿದ್ದರು. ಬಳಿಕ ಬಾಂಬ್ ಬೆದರಿಕೆ ಹಾಕಿದ್ದರು. ಜೊತೆಗೆ 2008ರಲ್ಲಿ ಇದೇ ಗುಂಪು ಮುಂಬೈನಲ್ಲಿ ದಾಳಿ ನಡೆಸಿತ್ತು.

    ಇತ್ತೀಚಿಗಷ್ಟೇ ಶಕ್ತಿಕಾಂತ ದಾಸ್ ಅವರು ಆರು ವರ್ಷಗಳ ನಂತರ ಅಧಿಕಾರದಿಂದ ನಿವೃತ್ತಿಯಾದರು. ಇದೀಗ ಅವರ ಬದಲಿಗೆ ಆರ್‌ಬಿಐನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ವಹಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಬಾಂಬ್ ಬೆದರಿಕೆ ಬಂದಿದೆ.ಇದನ್ನೂ ಓದಿ:ಬಿಜೆಪಿ ಸರ್ಕಾರ ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ – ಸಿದ್ದರಾಮಯ್ಯ

  • ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ

    ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ

    ಮುಂಬೈ: ಮಹಾರಾಷ್ಟ್ರ (Maharashtra) ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ನ.16 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆರ್‌ಬಿಐನ (RBI) ಗ್ರಾಹಕ ಸೇವಾ ಕೇಂದ್ರದ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿದ್ದು, ಸೆಂಟ್ರಲ್ ಬ್ಯಾಂಕನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಇದನ್ನೂ ಓದಿ: IPL Mega Auction 2025: ಹರಾಜಲ್ಲಿ 13ರ ಬಾಲಕ!

    ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಲಕ್ಷರ್ ಇ ತೊಯ್ಬಾ ಗುಂಪಿನ ಸಿಇಓ ಎಂದು ಹೇಳಿ, ಹಾಡನ್ನು ಹಾಡಿದ್ದಾರೆ. ಬಳಿಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಜೊತೆಗೆ 2008ರಲ್ಲಿ ಇದೇ ಗುಂಪು ಮುಂಬೈನಲ್ಲಿ ದಾಳಿ ನಡೆಸಿತ್ತು. ಸದ್ಯ ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಕುರಿತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಇಂತಹ ಬಾಂಬ್ ಬೆದರಿಕೆಗಳು ನಾಗರಿಕರ ಮೇಲೆ ಪರಿಣಾಮ ಬೀರುವುದಲ್ಲದೆ ದೇಶದ ಆರ್ಥಿಕ ಭದ್ರತೆಯನ್ನು ಅಸ್ಥಿರಗೊಳಿಸುತ್ತವೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರವು ಹೆಚ್ಚಿನ ಕಾಳಜಿಯೊಂದಿಗೆ ಕೈಗೆತ್ತಿಕೊಂಡಿದೆ. ಇಂತಹ ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಕೆ ನೀಡಿದೆ.

    ಇತ್ತೀಚಿನ ದಿನಗಳಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಕಂಡುಬರುತ್ತಿರುವ ಹೊತ್ತಿನಲ್ಲೇ ಆರ್‌ಬಿಐಗೆ ಬಾಂಬ್ ಬೆದರಿಕೆ ಬಂದಿದೆ.ಇದನ್ನೂ ಓದಿ: ಗುಡ್​ನ್ಯೂಸ್​​ – ʻಕಾಂತಾರ ಚಾಪ್ಟರ್-1ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

  • ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

    ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

    ಮುಂಬೈ: ಅಂತರ್ಜಾಲ ಸಂಪರ್ಕ ಇಲ್ಲದೆಡೆ ಫೀಚರ್ ಫೋನ್‍ಗಳ ಮೂಲಕವೇ, ಆನ್‍ಲೈನ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಆಫ್‍ಲೈನ್ ಟಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ಅನುಮೋದನೆ ನೀಡಿದೆ.

    ಈಗಿರುವ ಯುಪಿಐ, ಆರ್‌ಟಿಜಿಸಿ, ನೆಫ್ಟ್ ಸೇರಿದಂತೆ ಇನ್ನಿತರೆ ಮಾರ್ಗಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಮೊಬೈಲ್ ಬಳಸಿ ಆನ್‍ಲೈನ್ ಮೂಲಕ ಹಣವರ್ಗಾವಣೆ ಮಾಡಲು ಇಂಟರ್​ನೆಟ್ ಸಂಪರ್ಕ ಅವಶ್ಯಕವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸಂಪರ್ಕ ಇಲ್ಲದ ಕಾರಣ, ಆ ಭಾಗದ ಜನತೆ ಡಿಜಿಟಲ್ ಪಾವತಿಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮೀಣ ಜನರನ್ನೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಈ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು

    ಇಂಟರ್​ನೆಟ್ ಬೇಕಿಲ್ಲ: ಈ ಯೋಜನೆಯಡಿ ಅಗ್ಗದ ಮೊಬೈಲ್ ಅಂದರೆ ಫೀಚರ್ ಫೋನ್, ಕಾರ್ಡ್, ವ್ಯಾಲೆಟ್ ಬಳಸಿ ಒಂದು ಬಾರಿಗೆ ಗರಿಷ್ಟ 200 ರೂಪಾಯಿನಂತೆ ಒಂದು ದಿನಕ್ಕೆ ಗರಿಷ್ಟ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡಬಹದು. ಎಸ್‍ಎಂಎಸ್, ಕ್ಯು ಆರ್ ಕೋಡ್ ಬಳಸಿ ಈ ರೀತಿ ಹಣ ವರ್ಗಾವಣೆ ಮಾಡಬಹದು. ಹೆಚ್ಚುವರಿ ಖಾತ್ರಿಯ ಅವಶ್ಯಕತೆಯೂ ಇರುವುದಿಲ್ಲ.

  • ಮಾರ್ಚ್‍ನಿಂದ ಹಳೆಯ 100 ರೂ. ನೋಟುಗಳ ಚಲಾವಣೆ ಸ್ಥಗಿತ

    ಮಾರ್ಚ್‍ನಿಂದ ಹಳೆಯ 100 ರೂ. ನೋಟುಗಳ ಚಲಾವಣೆ ಸ್ಥಗಿತ

    – ಇದು ನೋಟು ಬ್ಯಾನ್ ಅಲ್ಲ
    – 6 ವರ್ಷದಿಂದ ಮುದ್ರಣವಾಗುತ್ತಿಲ್ಲ ಹಳೆಯ ನೋಟುಗಳು

    ಮಂಗಳೂರು: ದೇಶದಲ್ಲಿ ಈಗ ಚಲಾವಣೆಯಾಗುತ್ತಿರುವ 100 ರೂಪಾಯಿಯ ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆದು ಹೊಸ ಸೀರಿಸ್‍ನ ನೋಟುಗಳನ್ನು ಚಲಾವಣೆಮಾಡುವ ಕಾರ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಈ ವರ್ಷದ ಮಾರ್ಚ್ ನಂತರ ಹಳೆಯ ನೋಟುಗಳು ಜನರಲ್ಲಿ ಚಲಾವಣೆ ಆಗದಿರುವಂತ ಮಹತ್ವದ ಕಾರ್ಯಕ್ಕೆ ಆರ್ ಬಿ ಐ ಕೈಹಾಕಿದೆ.

    ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣೆ ಸಮಿತಿ ಸಭೆಯಲ್ಲಿ ಆರ್‍ ಬಿ ಐ ಸಹಾಯಕ ಮಹಾಪ್ರಬಂಧಕ ಬಿ.ಎಂ. ಮಹೇಶ್ ಅವರು ಮಾತನಾಡಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಹಳೆಯ ಮುಖಬೆಲೆಯ ನೋಟುಗಳು ಈಗ ಚಲಾವಣೆಯಾಗುತ್ತಿದೆ. ಇದರಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗಿರುವರಿಂದ ಹಳೆಯ ಸೀರಿಸ್‍ನ ನೋಟುಗಳನ್ನು ಸ್ಥಗಿತಕ್ಕೆ ಆರ್ ಬಿ ಐ ಚಿಂತಿಸಿದೆ. ಈ ಮೂಲಕ ಹೊಸ ಸೀರಿಸ್ ನೋಟುಗಳಿಗೆ ಮಣೆಹಾಕಲು ಹೊರಟಿದ್ದೇವೆ. ಹೀಗಾಗಿ ಕಳೆದ 6 ವರ್ಷಗಳಿಂದ ಹಳೆಯ ನೋಟುಗಳನ್ನು ಮುದ್ರಣ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಳೆಯ ನೋಟುಗಳನ್ನು ಹಿಂಪಡೆದು, ಮಾರ್ಚ್ ಅಂತ್ಯಕ್ಕೆ ಪೂರ್ಣಪ್ರಮಾಣದಲ್ಲಿ ಹಳೆಯ ನೋಟುಗಳ ಚಲಾವಣೆ ಆಗದಂತೆ ನೋಡಿಕೊಳ್ಳುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದು ಮಹೇಶ್ ಮಾಹಿತಿ ನೀಡಿದರು.

    ಇದು ನೋಟ್ ಬ್ಯಾನ್ ಅಲ್ಲ. ಕೂಡಲೇ ಜಾರಿಗೆ ತಂದು ಸ್ಥಗಿತಗೊಳಿಸುತ್ತೇವೆ ಎಂಬ ಭಯ ಬೇಡ. ಜನರಿಗೆ ಹೊಸ ಸ್ವಚ್ಛವಾದ ನೋಟಗಳು ಕೈಗೆ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

    10 ರೂಪಾಯಿಯ ನಾಣ್ಯ ಸರಿಯಾಗಿ ಚಲಾವಣೆಯಾಗುತ್ತಿಲ್ಲ ಎಂದು ಆರ್‍ಬಿಐ ಗಮನಕ್ಕೆ ಬಂದಿದ್ದು ಈ ನಾಣ್ಯಗಳನ್ನು ಸರಿಯಾಗಿ ಚಲಾವಣೆ ಗೊಳಿಸುವ ಉಪಾಯವನ್ನು ಹುಡುಕುವಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ. 10 ರೂಪಾಯಿ ನೋಟಾದರೂ ನಕಲು ಮಾಡಿ ಚಲಾವಣೆ ಮಾಡಬಹುದು. ಆದರೆ 10 ರೂಪಾಯಿ ನಾಣ್ಯ ಯಾವತ್ತು ನಕಲಿಯಾಗಲು ಸಾಧ್ಯವಿಲ್ಲ. ಇನ್ನು ಮುಂದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಈ ನಾಣ್ಯ ಸ್ವೀಕರಿಸಿ ಚಲಾವಣೆಗೆ ಬರುವಂತೆ ಮಾಡಬೇಕು ಎಂದು ತಿಳಿಸಿದರು.

  • ಸದ್ಯದಲ್ಲಿಯೇ ಬರಲಿದೆ 20 ರೂ. ಮುಖಬೆಲೆಯ ಹೊಸ ನೋಟು

    ಸದ್ಯದಲ್ಲಿಯೇ ಬರಲಿದೆ 20 ರೂ. ಮುಖಬೆಲೆಯ ಹೊಸ ನೋಟು

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸದ್ಯದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.

    2016ರ ಮಾರ್ಚ್ 31ರ ವೇಳೆ ಸುಮಾರು 492 ಕೋಟಿ 20 ರೂ. ನೋಟುಗಳ ಚಲಾವಣೆಯಲ್ಲಿದ್ದರೆ, ಇದು 2018ರ ಮಾರ್ಚ್ ವೇಳೆ ದ್ವಿಗುಣಕ್ಕೂ ಅಧಿವಾಗಿದ್ದು, 1 ಸಾವಿರ ಕೋಟಿ ನೋಟುಗಳು ಚಲಾವಣೆಯಲ್ಲಿದೆ. ಈ ಮೂಲಕ ಒಟ್ಟಾರೆ ನೋಟುಗಳ ಪೈಕಿ ಶೇ 9.8ರಷ್ಟು 20 ರೂ. ನೋಟುಗಳು ಚಲಾವಣೆಯಲ್ಲಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರಲ್ಲಿ 500 ರೂ. ಹಾಗೂ 1 ಸಾವಿರ ರೂ. ನೋಟುಗಳನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ 500 ಹಾಗೂ 2,000 ರೂ. ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.

    ನಂತರದ ದಿನಗಳಲ್ಲಿ ಆರ್‌ಬಿಐ ಹೊಸ ಮಾದರಿಯಲ್ಲಿ 10 ರೂ, 50 ರೂ, 100 ನೋಟುಗಳ ವಿನ್ಯಾಸವನ್ನು ಬದಲಿಸಿತು. ಅಷ್ಟೇ ಅಲ್ಲದೆ 200 ರೂ. ನೋಟನ್ನು ಮುದ್ರಿಸಿ ಚಾಲನೆಗೆ ತಂದಿತ್ತು. 2016ರ ನವೆಂಬರ್‌ನಿಂದ ಈ ಹೊಸ ರೂಪದ ನೋಟುಗಳು ಚಾಲ್ತಿಯಲ್ಲಿ ಬಂದಿವೆ.

    ಹಳೇ ನೋಟುಗಳಿಗಿಂತ ಹೊಸ ನೋಟುಗಳು ಚಿಕ್ಕದಾಗಿವೆ. ಬಣ್ಣ, ವಿನ್ಯಾಸದಲ್ಲಿ ವಿಭಿನ್ನವಾಗಿರುವ ಹೊಸ ನೋಟುಗಳು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. 500, 1 ಸಾವಿರ ರೂ. ಬೆಲೆಯ ನೋಟು ಹೊರತು ಪಡಿಸಿ ಉಳಿದ ಎಲ್ಲ ಮೌಲ್ಯದ ಹಳೆಯ ನೋಟುಗಳು ಈಗಲೂ ಚಲಾವಣೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv