Tag: ಭಾರತೀಯ ರಕ್ಷಣಾ ಸಚಿವಾಲಯ

  • ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ತನ್ನ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ (Windows) ಅನ್ನು ದೇಶದಲ್ಲೇ ಅಭಿವೃದ್ಧಿಪಡಿಸಿದ ಮಾಯಾ ಒಎಸ್‌ಗೆ (Maya OS) ಬದಲಾಯಿಸಲು ಭಾರತೀಯ ರಕ್ಷಣಾ ಸಚಿವಾಲಯ (Indian Defence Ministry) ನಿರ್ಧರಿಸಿದೆ.

    ಕಳೆದ ಕೆಲ ವರ್ಷಗಳಿಂದ ಕಂಪ್ಯೂಟರ್‌ಗಳಲ್ಲಿ (Computer) ಮಾಲ್‌ವೇರ್‌ಗಳು ಹೆಚ್ಚುತ್ತಿದ್ದು, ಈ ದಾಳಿಗಳ ವಿರುದ್ಧ ತಮ್ಮ ಸಿಸ್ಟಂಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಯಾ ಒಎಸ್ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಉಬುಂಟು ಆಧಾರಿತ ಸ್ವದೇಶಿ ಆಪರೇಟಿಂಗ್ ಸಿಸ್ಟಂ ಆಗಿದೆ. ಇದು ಮೈಕ್ರೋಸಾಫ್ಟ್‌ಗೆ ಹೋಲಿಸಿದರೆ ಕ್ರಿಯಾತ್ಮಕತೆ ಹಾಗೂ ಇಂಟರ್ಫೇಸ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಗುರಿ ಹೊಂದಿದೆ.

    ಏನಿದು ಮಾಯಾ ಒಎಸ್?
    ಮಾಯಾ ಒಎಸ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (C-DC) ಹಾಗೂ ನ್ಯಾಷನಲ್ ಇನ್‌ಫರ್ಮ್ಯಾಟಿಕ್ಸ್ ಸೆಂಟರ್‌ನ (NIC) ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಇದು ವಿಂಡೋಸ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದ್ದು, ರಕ್ಷಣಾ ಸಚಿವಾಲಯ ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸಹ ಬೆಂಬಲಿಸುತ್ತದೆ.

    ಮಾಯಾ ಒಎಸ್ ಬಳಸಲು ಮತ್ತು ನಿರ್ವಹಿಸಲು ಸುಲಭವಾಗಿದ್ದು, ವಿಂಡೋಸ್‌ಗೆ ಹೋಲುವ ಬಳಕೆದಾರ ಇಂಟರ್ಫೇಸ್ ಇದೆ. 2021ರಲ್ಲಿ ಸರ್ಕಾರ ಹಾಗೂ ರಕ್ಷಣಾ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿ ಪ್ರಕರಣಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಮಾಯಾ ಒಎಸ್ ಅಭಿವೃದ್ಧಿ ಪಡಿಸಲು ಮುಂದಾಯಿತು. ವರದಿಗಳ ಪ್ರಕಾರ ಇದನ್ನು ಕೇವಲ 6 ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.

    ಫೀಚರ್‌ಗಳೇನಿದೆ?
    ಮಾಯಾ ಒಎಸ್ ಕ್ಲೌಡ್ ಸ್ಟೋರೇಜ್ ಏಕೀಕರಣ, ಪೂರ್ಣ ಡಿಸ್ಕ್ ಎನ್‌ಕ್ರಿಪ್ಶನ್, ಡಿಜಿಟಲ್ ಸಿಗ್ನೇಚರ್, ಬಯೋಮೆಟ್ರಿಕ್ ದೃಢೀಕರಣ ಮತ್ತು ಚಕ್ರವ್ಯೂಹ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ನೀಡುತ್ತದೆ. ಚಕ್ರವ್ಯೂಹವು ಆ್ಯಂಟಿ-ಮಾಲ್‌ವೇರ್ ಮತ್ತು ಆಂಟಿವೈರಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    ಮಾಯಾ ಒಎಸ್ ಬಿಡುಗಡೆ ಯಾವಾಗ?
    ಮಾಯಾ ಒಎಸ್ ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ. ಆಗಸ್ಟ್ 15 ರೊಳಗೆ ಸೌತ್ ಬ್ಲಾಕ್‌ನಲ್ಲಿರುವ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಮಾಯಾವನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ಭಾರತೀಯ ರಕ್ಷಣಾ ಸಚಿವಾಲಯದ ಸಿಸ್ಟಂಗಳಲ್ಲಿ ವಿಂಡೋಸ್ ಬದಲು ಮಾಯಾ ಒಎಸ್ ಇನ್‌ಸ್ಟಾಲ್ ಮಾಡಲಾಗುತ್ತದೆ.

    ಮಾಯಾ ಒಎಸ್ ಕಂಪ್ಯೂಟರ್ ಸಿಸ್ಟಮ್‌ಗಳ ಸುರಕ್ಷತೆಯನ್ನು ಸುಧಾರಿಸುವುದಲ್ಲದೆ, ಸ್ಥಳೀಯ ಆವಿಷ್ಕಾರವನ್ನು ಉತ್ತೇಜಿಸುತ್ತದೆ ಮತ್ತು ವಿದೇಶಿ ಸಾಫ್ಟ್‌ವೇರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಾಯಾ ಒಎಸ್ ಅನ್ನು ಮುಂದಿನ ದಿನಗಳಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿಯೂ ಅಳವಡಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೇನಾ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ

    ಸೇನಾ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ

    ನವದೆಹಲಿ: ಭಾರತೀಯ ಮಿಲಿಟರಿ ಹಾರ್ಡ್ವೇರ್ ವಲಯದಲ್ಲಿ `ಆತ್ಮ ನಿರ್ಭರ ಭಾರತ್’ಗೆ ಉತ್ತೇನ ನೀಡಲು ರಕ್ಷಣಾ ಸಚಿವಾಲಯ ಮುಂದಾಗಿದ್ದು, ಅದಕ್ಕಾಗಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ (DAP) ಕೈಪಿಡಿಯನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಖಾಸಗಿ ವಲಯವು ಭಾರತೀಯ ರಕ್ಷಣಾ PSUಗಳೊಂದಿಗೆ (ಸಾರ್ವಜನಿಕ ವಲಯದ ಉದ್ಯಮ) ಅಗತ್ಯವಿರುದ್ಧ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿಯಾಗಿದೆ.

    ಅಧಿಕಾರಿಗಳ ಪ್ರಕಾರ, ಉದ್ಯಮದಲ್ಲಿನ ಈ ಸಹಯೋಗವನ್ನು ಭಾರತೀಯ ಮಲ್ಟಿ-ರೋಲ್ ಹೆಲಿಕಾಪ್ಟರ್ (IMRH) ತಯಾರಿಕೆ ಮತ್ತು ಅಭಿವೃದ್ಧಿಯಲ್ಲಿ ಪರೀಕ್ಷಿಸಲಾಗುತ್ತದೆ. ಅಂತಿಮವಾಗಿ ಭಾರತೀಯ ಮಿಲಿಟರಿಯ ಪ್ರಸ್ತುತ ದಾಸ್ತಾನುಗಳಲ್ಲಿ ರಷ್ಯಾದ ನಿರ್ಮಿತ ಎಲ್ಲಾ Mi-17 ಮತ್ತು Mi-8 ಹೆಲಿಕಾಪ್ಟರ್‌ಗಳನ್ನು ಬದಲಾಯಿಸುತ್ತದೆ. ಇದರೊಂದಿಗೆ ವಾಯು ದಾಳಿ, ಜಲಾಂತರ್ಗಾಮಿ ನೌಕೆಗಳು, ಮಿಲಿಟರಿ ಸಾರಿಗೆ ಹಾಗೂ ಮೊದಲಾದ ವಿಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದನ್ನೂ ಓದಿ: ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಖಾಸಗಿ ವಲಯದ ಕಂಪನಿಗಳು ಈಗಾಗಲೇ ಯೋಜನೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರಿದ್ದು, ಮುಂದಿನ 7 ವರ್ಷಗಳಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ ಪ್ರಾರಂಭಿಸಲು ರಕ್ಷಣಾ ಸಚಿವಾಲಯ ತಿಳಿಸಿದೆ. ಫ್ರೆಂಚ್ ಸಫ್ರಾನ್ ಕಂಪನಿಯು ಈಗಾಗಲೇ (ಜುಲೈ 8ರಂದು) ಭಾರತೀಯ HAL ಸಹಿಹಾಕಿದೆ. ಈ ಮೂಲಕ ನೌಕಾರೂಪ ಸೇರಿದಂತೆ IMRH ಎಂಜಿನ್ ಅನ್ನು ಉತ್ಪಾದಿಸಿ, ಅಭಿವೃದ್ಧಿಪಡಿಸಲು ಹಾಗೂ ಹೊಸದಾಗಿ ಜಂಟಿ ಉದ್ಯಮ ಸೃಷ್ಟಿಸಲು ಮುಂದಾಗಿವೆ ಎಂದು ಮಾಧ್ಯಮಗಳು ವರದಿಮಾಡಿವೆ.

    ಖಾಸಗಿ ವಲಯದ ಕಂಪೆನಿಗಳು ಉತ್ಪಾದನೆಯ ಶೇ.25 ಪ್ರತಿಶತವನ್ನು 3ನೇ ದೇಶಗಳಿಗೆ ರಫ್ತುಮಾಡಲು ಹಾಗೂ ವಿದೇಶಿ ವಿನಿಮಯವನ್ನೂ ಮಾಡಿಕೊಳ್ಳಲು ಅನುಮತಿಸಲಾಗುತ್ತದೆ. ಅಭಿವೃದ್ಧಿ ಹೊಂದಿದ IMRH ಅನ್ನು ಖರೀದಿಸಲು ಭಾರತೀಯ ಸಶಸ್ತ್ರ ಪಡೆಗಳಿಗೆ ತಿಳಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಹೆಲಿಕಾಪ್ಟರ್ ತಯಾರಿಸಿದರೆ, ಸಮಯಕ್ಕೆ ಮುಂಚಿತವಾಗಿ ಖರೀದಿಸುವಂತೆ ಖಾಸಗಿ ಕಂಪನಿಗಳು ಕೋರಿವೆ.

    ಖಾಸಗಿ ವಲಯವು ಶೇ.51 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಭಾರತೀಯ ಪಿಎಸ್‌ಯು ಗಳೊಂದಿಗೆ ಜಂಟಿ ಉದ್ಯಮ ರೂಪಿಸಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಮಾಂಸ ಎಸೆದ ದುಷ್ಕರ್ಮಿಗಳು- 3 ಮಾಂಸದ ಅಂಗಡಿಗಳಿಗೆ ಬೆಂಕಿ

    IMRH ಮುಂಬರುವ 5 ರಿಂದ 7 ವರ್ಷಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಹೊರತರುವ ನಿರೀಕ್ಷೆಯಿದೆ. ಭಾರತೀಯ ನೌಕಾಪಡೆಯು ತನ್ನ ಮೊದಲ ಜಲಾಂತರ್ಗಾಮಿ ವಿರೋಧಿ ಯುದ್ಧದ ಸಿರ್ಕೋರ್ಸ್ಕಿ MH-60R ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ವಿತರಿಸುವ ನಿರೀಕ್ಷೆಯಿದೆ. ಮೊದಲ 2-3 ಹೆಲಿಕಾಪ್ಟರ್‌ಗಳನ್ನು ಈಗಾಗಲೇ USನ  ಸ್ಯಾನ್ ಡಿಯಾಗೋ ನೌಕಾ ನಿಲ್ದಾಣದಿಂದ ತರಬೇತಿ ಉದ್ದೇಶಗಳಿಗಾಗಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಉಳಿದ 21 ಹೆಲಿಕಾಪ್ಟರ್‌ಗಳ ವಿತರಣೆಗಳು 2.3 ಶತಕೋಟಿ ಡಾಲರ್ ಫೆಬ್ರವರಿ 2020ರ ಒಪ್ಪಂದದಂತೆ ಆಗಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ

    ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ

    ಪಾಟ್ನಾ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಫಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹಿಂಸಾ ರೂಪ ಪ್ರತಿಭಟನೆಯಿಂದಾಗಿ ನಾಲ್ಕೇ ದಿನಗಳಲ್ಲಿ 200 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ.

    50 ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. 5 ರೈಲ್ವೆ ಇಂಜಿನ್‌ಗಳು ಸಂಪೂರ್ಣ ಕರಕಲಾಗಿವೆ. ಇನ್ನೂ ಅನೇಕ ತಾಂತ್ರಿಕ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. 200 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅದರಲ್ಲಿ 4 ಎಕ್ಸ್‌ಪ್ರೆಸ್‌‌ ರೈಲುಗಳು ಸೇರಿದಂತೆ ಪೂರ್ವ ಉತ್ತರ ರೈಲ್ವೆಯ 30 ರೈಲು ಸಂಚಾರ ರದ್ದಾಗಿದೆ ಎಂದು ದಾನಾಪುರ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಪ್ರಭಾತ್‌ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    12 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ: ಪ್ರತಿಭಟನಾ ಕಿಚ್ಚು ಹೆಚ್ಚಿದಂತೆ ಪ್ರತಿಭಟನಾಕಾರರ ನಡುವೆ ಸಂವಹನ ತಡೆಯಲು ಪೊಲೀಸ್ ಇಲಾಖೆ ಹಾಗೂ ಸರ್ಕಾರ ನಿರ್ಧರಿಸಿದ್ದು, 12 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. 170 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, 46 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ʼಅಗ್ನಿಪಥʼ ಹಿಂಸಾಚಾರ – ಪ್ರತಿಭಟನಾಕಾರರಿಗೆ ಆಸ್ಪತ್ರೆಯಿಂದಲೇ ಸೋನಿಯಾ ಗಾಂಧಿ ಮನವಿ

    ಏನಿದು ಅಗ್ನಿಪಥ್ ಯೋಜನೆ?: ಭಾರತೀಯ ಯುವಕರಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅಗ್ನಿಪಥ್ ಎಂಬ ಹೊಸ ಅಲ್ಪಾವಧಿಯ ನೇಮಕಾತಿ ಯೋಜನೆಯನ್ನು ಕೇಂದ್ರ ಪ್ರಾರಂಭಿಸಿದೆ. ಅಗ್ನಿಪಥ್ ಎಂದು ಕರೆಯಲ್ಪಡುವ ಯೋಜನೆ 17.5 ರಿಂದ 21 ವರ್ಷ ವಯಸ್ಸಿನ ಯುವಕರು 4 ವರ್ಷಗಳ ಅವಧಿಗೆ 3 ಸೇವೆಗಳಲ್ಲಿ ಯಾವುದಾದರೂ ಒಂದರಲ್ಲಿ ಸೇರಿಕೊಳ್ಳಬಹುದು.

    ಇದೀಗ ಪ್ರತಿಭಟನೆಯನ್ನು ತಗ್ಗಿಸಲು ಶೇ.10 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಅಗ್ನಿವೀರ್ ಮೊದಲ ಬ್ಯಾಚ್ ನೇಮಕಾತಿಗೆ 5 ವರ್ಷ ವಯೋಮಿಯಿ ಸಡಿಲಿಕೆ ನೀಡಲಾಗಿದೆ.

    Live Tv