ನವದೆಹಲಿ: ಪಾಕ್ ವಿರುದ್ಧ 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯಕ್ಕಾಗಿ ಬಲಿದಾನಗೈದ ಹುತಾತ್ಮ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನಮನ ಸಲ್ಲಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ವಿಜಯದ ನೆನಪಿಗಾಗಿ ಈ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ (Kargil Vijay Diwas) ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್ ವಿಜಯ್ ದಿವಸದಂದು, ನಮ್ಮ ರಾಷ್ಟ್ರದ ಗೌರವವನ್ನು ರಕ್ಷಿಸುವಲ್ಲಿ ಅಸಾಧಾರಣ ಧೈರ್ಯ, ದೃಢನಿಶ್ಚಯ ಪ್ರದರ್ಶಿಸಿದ ನಮ್ಮ ಧೈರ್ಯಶಾಲಿಗಳಿಗೆ ಹೃತ್ಪೂರ್ವಕ ಗೌರವಗಳನ್ನು ಸಲ್ಲಿಸುತ್ತೇನೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಅತ್ಯುನ್ನತ ತ್ಯಾಗವು ನಮ್ಮ ಸಶಸ್ತ್ರ ಪಡೆಗಳ ಅಚಲವಾದ ದೃಢಸಂಕಲ್ಪದ ಶಾಶ್ವತ ಜ್ಞಾಪನೆಯಾಗಿದೆ. ಭಾರತವು ಅವರ ಸೇವೆಗೆ ಸದಾ ಋಣಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಇಟಾನಗರ: ಟ್ರಕ್ (Truck) ಸ್ಕಿಡ್ ಆಗಿ ಪ್ರಪಾತಕ್ಕೆ ಬಿದ್ದ ಪರಿಣಾಮ ಮೂವರು ಭಾರತೀಯ ಯೋಧರು (Indian Soldiers) ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಸೈನಿಕರನ್ನು ಸಾಗಿಸುತ್ತಿದ್ದ ಟ್ರಕ್ ಲೆಪರಾಡ ಜಿಲ್ಲೆಯ ಬಸರಾಗೆ ತೆರಳುತ್ತಿದ್ದ ವೇಳೆ ಸ್ಕಿಡ್ ಆಗಿ ಪ್ರಪಾತಕ್ಕೆ ಉರುಳಿದೆ. ಇದರಿಂದ ಮೂವರು ಯೋಧರು ಹುತಾತ್ಮರಾಗಿದ್ದು ಅನೇಕರಿಗೆ ಗಾಯಗಳಾಗಿವೆ. ಅರುಣಾಚಲ ಪ್ರದೇಶದ (Arunachal Pradesh) ಅಪ್ಪರ್ ಸುಭನ್ಸಿರಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಇದನ್ನೂ ಓದಿ: 2028ರ ವೇಳೆಗೆ 80 ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ – ಉತ್ತರ ಪ್ರದೇಶದಲ್ಲಿ ತಯಾರಿ ಹೇಗಿದೆ?
Lt Gen RC Tiwari, #ArmyCdrEC & All Ranks express deepest condolences on the sad demise of Bravehearts Hav Nakhat Singh, Nk Mukesh Kumar and Gdr Ashish who made the supreme sacrifice in the line of duty in… pic.twitter.com/LcRAdHKK5h
ಘಟನೆಯ ಕುರಿತು ಸೇನೆಯ ಪೂರ್ವ ಕಮಾಂಡ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಈಸ್ಟೆನ್ ಕಮಾಂಡ್ ಆರ್ಮಿ ಕೇಡರ್ ಮತ್ತು ಎಲ್ಲಾ ಶ್ರೇಣಿಯ ಲೆಫ್ಟಿನೆಂಟಲ್ ಜನರಲ್ ಆರ್ ಸಿ ತಿವಾರಿ, ಬ್ರೇವ್‌ಹಾರ್ಟ್ಸ ಹವ್ ನಖತ್ ಸಿಂಗ್, ಎನ್‌ಕೆ ಮುಖೇಶ್ ಕುಮಾರ್, ಮತ್ತು ಜಿಡಿಆರ್ ಆಶಿಶ್‌ರವರ ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ
ಅರುಣಾಚಲ ಪ್ರದೇಶದ ಸಿಎಂ ಪ್ರೇಮ ಖಂಡು (CM Prema Khundu) ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದು, ಹುತಾತ್ಮ ಯೋಧರನ್ನು ಗೌರವಪೂರ್ವಕವಾಗಿ ಸ್ಮರಿಸಲಾಗುವುದು, ಈ ದುಖಃವನ್ನು ಭರಿಸುವ ಶಕ್ತಿ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸಿಗಲಿ ಎಂದು ನಾನು ಬುದ್ಧನಲ್ಲಿ ಪ್ರಾರ್ಥನೆ ಮಾಡುತ್ತೆನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ದರ್ಶನ್ ವಿಶೇಷ ಆತಿಥ್ಯಕ್ಕೆ ಪ್ರಭಾವಿ ಸಚಿವರ ಆದೇಶ?
– ನದಿ ನೀರಿನ ಮಟ್ಟ ಏರಿಕೆಯಾಗಿ ಟ್ಯಾಂಕ್ ಸಮೇತ ಕೊಚ್ಚಿಹೋದ ಸೈನಿಕರು
ನವದೆಹಲಿ: ಲೇಹ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದ ಎಲ್‌ಎಸಿ (LAC) ಬಳಿ ನದಿ ದಾಟುವ ಅಭ್ಯಾಸದ ವೇಳೆ ಟ್ಯಾಂಕ್ ಅಪಘಾತದಲ್ಲಿ ಭಾರತೀಯ ಸೇನೆಯ (Indian Soldiers) ಐವರು ಯೋಧರು ಹುತಾತ್ಮರಾಗಿದ್ದಾರೆ.
ಸೈನಿಕರು ತರಬೇತಿ ಕಾರ್ಯಾಚರಣೆಯಲ್ಲಿದ್ದರು. ಲೇಹ್‌ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೋಧಿ ನದಿಯನ್ನು ತಮ್ಮ T-72 ಟ್ಯಾಂಕ್ ಮೂಲಕ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಲು ಪ್ರಾರಂಭಿಸಿತು. ತಕ್ಷಣವೇ ಟ್ಯಾಂಕ್‌ನೊಂದಿಗೆ ಸೈನಿಕರು ಉಬ್ಬುವ ನದಿಯಲ್ಲಿ ಮುಳುಗಿ ಹೋದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ. ‘ಲಡಾಖ್‌ನಲ್ಲಿ ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ ನಮ್ಮ ಐವರು ವೀರ ಭಾರತೀಯ ಸೇನೆಯ ಯೋಧರು ಪ್ರಾಣ ಕಳೆದುಕೊಂಡಿದ್ದಕ್ಕಾಗಿ ತೀವ್ರ ದುಃಖವಾಗಿದೆ. ನಾವು ಎಂದಿಗೂ ಆದರ್ಶಪ್ರಾಯವನ್ನು ಮರೆಯುವುದಿಲ್ಲ. ದೇಶಕ್ಕೆ ನಮ್ಮ ಧೀರ ಸೈನಿಕರ ಸೇವೆ ಅಪಾರ. ದುಃಖದ ಸಮಯದಲ್ಲಿ ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಎಕ್ಸ್‌ನಲ್ಲಿ ಸಚಿವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ
ನವದಹೆಲಿ: ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ (Colonel Manpreet Singh) ಪಾರ್ಥಿವ ಶರೀರಕ್ಕೆ ಅವರ 6 ವರ್ಷದ ಪುತ್ರ ಸೆಲ್ಯೂಟ್ ಮಾಡಿದ ಮನಕಲಕುವ ದೃಶ್ಯ ವೈರಲ್ ಆಗಿದೆ.
ಕಾಶ್ಮೀರದ (Jammu Kashmir) ಅನಂತ್‌ನಾಗ್‌ನಲ್ಲಿ (Anantnag Encounter) ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ಪೊಲೀಸ್ ಅಧಿಕಾರಿ ಹುತಾತ್ಮರಾದರು. ಅವರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ
ಮನ್‌ಪ್ರೀತ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಮನೆಗೆ ತರುವ ವೇಳೆ ಅವರ 6 ವರ್ಷದ ಪುತ್ರ ಮಿಲಿಟರಿ ಡ್ರೆಸ್‌ನಲ್ಲಿ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡಿದ. ಪುಟ್ಟ ಬಾಲಕನ ಪಕ್ಕದಲ್ಲಿ ಆತನಿಗಿಂತ 2 ವರ್ಷ ಚಿಕ್ಕವಳಾದ ಸಹೋದರಿ ಕೂಡ ನಿಂತಿದ್ದಳು. ಆಕೆಯೂ ಅಣ್ಣನಂತೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡಿದಳು.
ಇಬ್ಬರಿಗೂ ಕುಟುಂಬಕ್ಕೆ ಸಂಭವಿಸಿದ ದುರಂತದ ಬಗ್ಗೆ ತಿಳಿದಿರಲಿಲ್ಲ. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಈ ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿ ತಂದೆಯ ಪಾರ್ಥಿವ ಶರೀರ ದರ್ಶನ ಮಾಡಿಸಿದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ತೀವ್ರ ದುಃಖದಿಂದಾಗಿ ಬಳಲಿದ್ದರು.
ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಹಾಗೂ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಡಿಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರು.
ನವದೆಹಲಿ: ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಕಿಡಿಕಾರಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ (Jammu Kashmir) ಆರ್ಟಿಕಲ್ 370 ರದ್ದು ಮಾಡಿ ಇಲ್ಲಿಗೆ ನಾಲ್ಕು ವರ್ಷಗಳಾಗಿವೆ. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು (Terrorists) ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಂತಹ ದೇಶದ ಜೊತೆ ನೀವು ವಿಶ್ವಕಪ್ ಪಂದ್ಯ ಆಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ
ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ಕುರಿತು ಮಾತನಾಡಿ, ಎಎಸ್‌ಐ ವರದಿ ಬಂದಾಗ ಬಿಜೆಪಿ-ಆರ್‌ಎಸ್‌ಎಸ್ ಏನು ಮಾತನಾಡುತ್ತೋ ಎಂಬ ಆತಂಕ ನಮಗಿದೆ. ಅದು ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಡಿಸೆಂಬರ್ 23 ಅಥವಾ ಡಿಸೆಂಬರ್ 6 (ಬಾಬರಿ ಮಸೀದಿ ಧ್ವಂಸ) ರಂತಹ ಘಟನೆಯ ಬಗ್ಗೆ ನನಗೆ ಆತಂಕವಿದೆ. ಬಾಬರಿ ಮಸೀದಿಯಂತಹ ಸಮಸ್ಯೆಗಳು ಉದ್ಭವಿಸುವುದನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಮುಂಬೈ: ಲಡಾಖ್‍ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಜನ ಸೈನಿಕರು ಹುತಾತ್ಮರಾದ ಹಿನ್ನೆಲೆ ಚೀನಾ ವಸ್ತು, ಸೇವೆ ಕೈಬಿಡುವಂತೆ ಒತ್ತಾಯ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೂಡ ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಪ್ರಾಯೋಜಕತ್ವವನ್ನು ಪರಿಶೀಲಿಸಲು ನಿರ್ಧರಿಸಿದೆ. ಇಂಡೋ-ಚೀನಾ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್‍ನ ಆಡಳಿತ ಮಂಡಳಿ ಮುಂದಿನ ವಾರ ಸಭೆ ಕರೆದು ಲೀಗ್‍ನ ಪ್ರಾಯೋಜಕತ್ವದ ಒಪ್ಪಂದವನ್ನು ಪರಿಶೀಲಿಸಲಿದೆ. ಈ ವೇಳೆ ಚೀನಾದ ಕಂಪನಿ ವಿವೊ ಜೊತೆಗಿನ ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕರು ವಿವೋ ವಹಿಸಿದ್ದು, ಅದು ಪ್ರತಿವರ್ಷ 440 ಕೋಟಿ ರೂ.ನಂತೆ ಮಂಡಳಿಗೆ ನೀಡಿ ಐದು ವರ್ಷಗಳ ಕಾಲ ಒಪ್ಪಂದವು ಮಾಡಿಕೊಂಡಿದೆ. ಆದರೆ ಒಪ್ಪಂದವು 2022ರಲ್ಲಿ ಕೊನೆಗೊಳ್ಳುತ್ತದೆ.
ವಿವೊ ಜೊತೆಗೆ, ಮೊಬೈಲ್ ಪಾವತಿ ಸೇವೆ ಪೇಟಿಎಂ ಸಹ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿದೆ. ಚೀನಾದ ಕಂಪನಿ ಅಲಿಬಾಬಾ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಪೇಟಿಎಂನಲ್ಲಿ ಅಲಿಬಾಬಾ ಶೇ.37.15ರಷ್ಟು ಪಾಲನ್ನು ಹೊಂದಿದೆ. ಇದಲ್ಲದೆ ಚೀನಾದ ವಿಡಿಯೋ ಗೇಮ್ ಕಂಪನಿ ಟೆನ್ಸೆಂಟ್ ಸ್ವಿಗ್ಗಿ ಮತ್ತು ಡ್ರೀಮ್-11ನಲ್ಲಿ ಶೇ.5.27 ರಷ್ಟು ಪಾಲನ್ನು ಹೊಂದಿದೆ. ಈ ಎಲ್ಲಾ ಚೀನೀ ಕಂಪನಿಗಳು ಬಿಸಿಸಿಐ ಪ್ರಾಯೋಜಕತ್ವ ಹೊಂದಿವೆ.
ಟೀಂ ಇಂಡಿಯಾದ ಜರ್ಸಿ ಪ್ರಯೋಜಕತ್ವವನ್ನು ಬೈಜೂಸ್ (Byju’s) ಕಂಪನಿ ಪಡೆದುಕೊಂಡಿದೆ. ಬೈಜೂಸ್ ಕಂಪನಿಯಲ್ಲಿ ಚೀನಾ ಟೆನ್ಸೆಂಟ್ ಕಂಪನಿ ಹೂಡಿಕೆ ಮಾಡಿದೆ. ಕಳೆದ ವರ್ಷ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಬೈಜೂಸ್ ಸಹಿ ಹಾಕಿದೆ. ಈ ಮೂಲಕ ಬಿಸಿಸಿಐಗೆ 1,079 ಕೋಟಿ ರೂ. ನೀಡುತ್ತದೆ ಎಂದು ವರದಿಯಾಗಿದೆ. ಆದರೆ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ವಿವೊದೊಂದಿಗಿನ ಒಪ್ಪಂದವನ್ನು 2022ರವರೆಗೆ ಮುಂದುವರಿಸಬೇಕೆ ಅಥವಾ ರದ್ದುಗೊಳಿಸಬೇಕೆ ಎಂದು ನಿರ್ಧರಿಸಲಾಗುತ್ತದೆ.
ಚೀನಾದ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಬ್ರಾಂಡ್ ಪ್ರಚಾರದ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಗಳಿಸುವ ಬಹುಪಾಲು ಹಣವನ್ನು ಬಿಸಿಸಿಐ ಪಡೆಯುತ್ತದೆ. ಆ ಗಳಿಕೆಯ ಮೇಲೆ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಶೇ.42ರಷ್ಟು ತೆರಿಗೆಯನ್ನು ಪಾವತಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಒಪ್ಪಂದವು ಚೀನಾಕ್ಕೆ ಅಲ್ಲ ಆದರೆ ಭಾರತದ ಹಿತಕ್ಕಾಗಿ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬಂದಿವೆ.
ನವದೆಹಲಿ: ಲಡಾಖ್‍ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ತೀವ್ರ ಘರ್ಷಣೆಯ ನಂತರ ಚೀನಾ ಬಂಧಿಸಿದ್ದ ಒಬ್ಬರು ಮೇಜರ್ ಸೇರಿದಂತೆ 10 ಭಾರತೀಯ ಯೋಧರನ್ನು ಬಿಡುಗಡೆ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಸೇನೆ ವಿರುದ್ಧದ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಯಾವುದೇ ಸೈನಿಕರು ನಾಪತ್ತೆಯಾಗಿಲ್ಲ ಎಂದು ಭಾರತೀಯ ಸೇನೆ ಹೇಳಿತ್ತು. ಆದರೆ ಗುರುವಾರ ರಾತ್ರಿ ಬೆಳವಣಿಗೆಯ ಪ್ರಕಾರ ಉಭಯ ದೇಶಗಳ ನಡುವೆ ನಡೆದ ಮಾತುಕತೆಯಿಂದಾಗಿ ಚೀನಾ ಬಂಧಿಸಿದ್ದ ಇಬ್ಬರು ಮೇಜರ್ ಸೇರಿ 10 ಮಂದಿ ಯೋಧರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಆದರೆ ಈ ವಿಚಾರವಾಗಿ ಸೇನೆ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ.
ವರದಿಗಳ ಪ್ರಕಾರ, ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಡುವಿನ ಪ್ರಮುಖ ಸಾಮಾನ್ಯ ಮಟ್ಟದ ಮಾತುಕತೆಯಲ್ಲಿ ಯೋಧರ ಬಿಡುಗಡೆ ಒಪ್ಪಂದಕ್ಕೆ ಬಂದಿದೆ. ಗಲ್ವಾನ್ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವ ಬಗ್ಗೆ ಉಭಯ ದೇಶಗಳು ಸತತ ಮೂರನೇ ದಿನ ಮಾತುಕತೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ ಎಂದು ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ಮತ್ತೊಂದು ವರದಿಯ ಪ್ರಕಾರ ಸೋಮವಾರ ಒಟ್ಟು 76 ಮಂದಿ ಭಾರತೀಯ ಯೋಧರ ಮೇಲೆ ಚೀನಾದ ಸೇನೆಯು ಕ್ರೂರವಾಗಿ ಹಲ್ಲೆ ಮಾಡಿದೆ. ಅದರಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 58 ಮಂದಿ ಸಣ್ಣಪುಟ್ಟ ಗಾಯಗಳಾಗಿವೆ. ಲೇಹ್‍ನ ಆಸ್ಪತ್ರೆಯಲ್ಲಿ 18 ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 58 ಜನ ಯೋಧರು ಇತರ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಹೇಳಿತ್ತು.
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಇಂದು ಪಾಕ್ ನಲ್ಲಿರುವ ಉಗ್ರರ ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಗಡಿಭಾಗದ ಜನರು ರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ರಾತ್ರಿಯಿಡೀ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಅಲ್ಲದೇ ಒಂದು ಬಾರಿ ದೊಡ್ಡ ಶಬ್ದ ಕೇಳ್ಪಟ್ಟಿತ್ತು. ಆ ಬಳಿಕ ನಮಗೆ ಭಯವಾಗಲು ಆರಂಭವಾಯಿತು, ಯಾಕಂದ್ರೆ ನಾವು ಗಡಿಭಾಗದಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ಹೆದರಿ ನಿದೆಯಲ್ಲಿದ್ದ ನಾವು ಎದ್ದು ಕುಳಿತೆವು. ಮಧ್ಯರಾತ್ರಿ 3 ಗಂಟೆಯ ನಂತರ ನಾವು ನಿದ್ದೆಯೇ ಮಾಡಲಿಲ್ಲ. ಬಾಂಬ್ ದಾಳಿಯಾಗುತ್ತಿರುವುದು ನಮಗೆ ಕಾಣಿಸಿದ್ದು, ಶಬ್ಧವೂ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.
ನರೇಂದ್ರ ಕುಮಾರ್
ಪೂಂಛ್ ಜಿಲ್ಲೆಯ ಮೆಂಧಾರ್ ನಿವಾಸಿ ನರೇಂದ್ರ ಕುಮಾರ್ ಮಾತನಾಡಿ, ಮುಂಜಾನೆ 3 ಗಂಟೆಯ ಸುಮಾರಿಗೆ ವಿಮಾನಗಳು ಹಾರಾಡುತ್ತಿರುವ ಶಬ್ಧ ಕೇಳಿಸಿದೆ. ಈ ಶಬ್ಧ ಬೆಳಗ್ಗೆ 7 ಗಂಟೆಯವರೆಗೂ ನಮಗೆ ಕೇಳಿಸಿದೆ. ಆದ್ರೆ 8 ಗಂಟೆ ಸುಮಾರಿಗೆ ಭಾರತ ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸಿರುವ ಕುರಿತು ಮಾಹಿತಿ ಸಿಕ್ಕಿತು ಅಂದ್ರು. ಇನ್ನೂ ಓದಿ: ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ
ಇದೇ ಗ್ರಾಮದ ರಾಜಾ ಮೊಹಮ್ಮದ್ ಶರೀಫ್, ಮುಂಜಾನೆ 3.30ರ ಸುಮಾರಿಗೆ ವಿಮಾನಗಳು ಹಾರಾಟ ನಡೆಸುತ್ತಿರುವ ಶಬ್ಧ ಕೇಳಲ್ಪಟ್ಟೆ. ಅಲ್ಲದೇ ಬಾಂಬ್ ದಾಳಿಯಾಗಿರುವ ಸೌಂಡ್ ಕೂಡ ಕೇಳಿಸಿದೆ. ಭಾರತೀಯ ಸೇನೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ನಮಗೆ ಖುಷಿ ಇದೆ. ಈ ಮೂಲಕ ನಮ್ಮ ಯೋಧರ ಬಲಿದಾನ ವ್ಯರ್ಥವಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.
Key Jaish e Mohammed terrorists targeted in today’s air strikes: Mufti Azhar Khan Kashmiri, head of Kashmir operations(pic 1) and Ibrahim Azhar(pic 2), the elder brother of Masood Azhar who was also involved in the IC-814 hijacking pic.twitter.com/IUv1njNygA
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರ ನಡೆಸಿದ ಆತ್ಮಾಹುತಿ ದಾಳಿ ನಡೆಸಿ 40 ಯೋಧರನ್ನು ಬಲಿತೆಗೆದುಕೊಂಡ 12ನೇ ದಿನಕ್ಕೆ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಾಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.
Intel Sources: Picture of JeM facility destroyed by Indian Ar Force strikes in Balakot, Pakistan pic.twitter.com/th1JWbVrHw
ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡ್ ಬಾಂಬ್ ಹಾಕಬಹುದಾದ ಸಾಮಥ್ರ್ಯ ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ `ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ಗಡಿ ಭಾಗ, ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
Intel Sources: Ammunition dump blown up today in Balakot,Pakistan by IAF Mirages. The dump had more than 200 AK rifles, uncountable rounds hand grenades, explosives and detonators pic.twitter.com/b7ENbKgYaH