Tag: ಭಾರತೀಯ ಮಹಿಳೆಯರು

  • ಗಾಳಿಯಲ್ಲಿ ಹಾರಿ ಮರಕ್ಕೆ ಅಪ್ಪಳಿಸಿದ ಕಾರು – ಅಮೆರಿಕದಲ್ಲಿ ಮೂವರು ಭಾರತದ ಮಹಿಳೆಯರು ಸಾವು

    ಗಾಳಿಯಲ್ಲಿ ಹಾರಿ ಮರಕ್ಕೆ ಅಪ್ಪಳಿಸಿದ ಕಾರು – ಅಮೆರಿಕದಲ್ಲಿ ಮೂವರು ಭಾರತದ ಮಹಿಳೆಯರು ಸಾವು

    ವಾಷಿಂಗ್ಟನ್‌: ಅಮೆರಿಕಾದಲ್ಲಿ (America) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗುಜರಾತ್‌ನ (Gujarat) ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

    ಗುಜರಾತಿನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ಎಸ್‌ಯುವಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತೈವಾನ್‌ನಲ್ಲಿ ಮತ್ತೆ ನಡುಗಿದ ಭೂಮಿ- ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು

    I-85 ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV ಕಾರು ಎಲ್ಲಾ ಲೇನ್‌ಗಳನ್ನು ದಾಟಿ ಒಡ್ಡುಗಳ ಮೇಲೇರಿದೆ. ಕೊನೆಗೆ ಸೇತುವೆಯ ಎದುರು ಭಾಗದಲ್ಲಿದ್ದ ಮರಗಳಿಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಕನಿಷ್ಠ 20 ಅಡಿಗಳಷ್ಟು ಗಾಳಿಯಲ್ಲಿ ಕಾರು ಹಾರಿತು.

    ಮಿತಿಗಿಂತ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ತಿಳಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಬೇರೆ ಯಾವುದೇ ವಾಹನಗಳು ಓಡಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭಾರತ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

    ಕಾರು ಮರದ ಮೇಲೆ ಸಿಲುಕಿಕೊಂಡಿತ್ತು. ಹಲವು ತುಂಡುಗಳಾಗಿ ಛಿದ್ರಗೊಂಡಿತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಕಾರು ಡಿಕ್ಕಿ ಹೊಡೆದ ಹೊಡೆದಿರುವ ಕುರುಹುಗಳೂ ಗೋಚರಿಸಿವೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದವು.

    ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ದಕ್ಷಿಣ ಕೆರೊಲಿನಾದ ಸ್ಥಳೀಯ ಅಧಿಕಾರಿಗಳು ಘಟನೆ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

  • ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

    ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

    ವಾಷಿಂಗ್ಟನ್: ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯೊಬ್ಬಳು ಹಲ್ಲೆ ಮಾಡಿರುವ ಘಟನೆ ಟೆಕ್ಸಾಸ್‍ನ ಪ್ಲಾನೊದಲ್ಲಿನ ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‍ನ ಹೊರಗೆ ನಡೆದಿದೆ. ಭಾರತೀಯ ಮಹಿಳೆಯರ ಮೇಲೆ ಜನಾಂಗೀಯ ಟೀಕೆಗಳನ್ನು ಮಾಡುತ್ತಿರುವ ಅಮೆರಿಕನ್ ಮಹಿಳೆಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಐದೂವರೆ ನಿಮಿಷವಿರುವ ವೀಡಿಯೋದಲ್ಲಿ, ಅಮೆರಿಕನ್ ಮಹಿಳೆ, ಭಾರತೀಯ ಮಹಿಳೆಯೊಬ್ಬರ ಮುಖಕ್ಕೆ ಹೊಡೆಯುತ್ತಿರುವ ದೃಶ್ಯ ಇದೆ. ಅಲ್ಲದೇ ಇನ್ನಿಬ್ಬರು ಭಾರತೀಯ ಮಹಿಳೆಯರ ಫೋನ್‍ಗಳನ್ನು ಕಸಿದುಕೊಂಡು, ನಿಮ್ಮನ್ನು ಶೂಟ್ ಮಾಡುವುದಾಗಿ ಬೆದರಿಕೆಯೊಡ್ಡಿಕೆಯೊಡ್ಡಿದ್ದಾಳೆ. ‘ಕಪ್ಪು ಜನರಾದ ನೀವು ನಮ್ಮ ದೇಶವನ್ನು ಹಾಳು ಮಾಡಿತ್ತಿದ್ದೀರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸಲ್ಮಾನ್ ನೆಚ್ಚಿನ ಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಬಿಟೌನ್ ಕಂಬನಿ

    ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದ್ದು, ಗುರುವಾರ ಪೊಲೀಸರು ಆಕೆಯನ್ನು ಬಂಧಿಸಿ, ಹಲ್ಲೆ ಮತ್ತು ಜೀವ ಬೆದರಿಕೆಗಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. 10,000 ಡಾಲರ್ (7,98 ಲಕ್ಷ ರೂಪಾಯಿ) ಮೌಲ್ಯದ ಬಾಂಡ್ ಇರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸ್ನೇಹಿತರೊಂದಿಗೆ ಡಿನ್ನರ್‍ಗಾಗಿ ಹೋಗಿದ್ದೆವು. ನಾವು ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‍ನಿಂದ ಕಾರು ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿರುವಾಗ ಕುಡಿದ ಅಮಲಿನಲ್ಲಿದ್ದ ಮಹಿಳೆ ದ್ವೇಷಪೂರಿತ ಜನಾಂಗೀಯ ನಿಂದನೆಯೊಂದಿಗೆ ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]