Tag: ಭಾರತೀಯ ಜನಶಕ್ತಿ ಕಾಂಗ್ರೆಸ್

  • ನಾನೀಗ ಯಾರಿಗೂ ಬೇಡವಾದ ಶಿಶು- ಕಣ್ಣೀರಿಟ್ಟ ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ

    ನಾನೀಗ ಯಾರಿಗೂ ಬೇಡವಾದ ಶಿಶು- ಕಣ್ಣೀರಿಟ್ಟ ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ

    ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ನನಗೆ ಆದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಿರುವೆ. ಈ ಕುರಿತು ತನಿಖೆ ನಡೆದು, ನನಗೆ ನ್ಯಾಯ ಸಿಗೋ ವಿಶ್ವಾಸವಿದೆ ಎಂದು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಭಾವುಕರಾಗಿ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಣೈ ಅವರು, ಕಾನೂನು ಬಾಹಿರವಾಗಿ ಮಾಡಿದ ವರ್ಗಾವಣೆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಅಲ್ಲದೇ ಕಾನೂನು ಹೋರಾಟ ಸಹ ಮುಂದುವರಿಸಿರುವೆ. ಸಂಪೂರ್ಣ ತನಿಖೆ ನಡೆದು ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲದೆ ಈ ಕುರಿತು ಮೋದಿ ಅವರಿಗೂ ಸಹ ಪತ್ರ ಬರೆದಿರುವೆ ಎಂದು ತಿಳಿಸಿದರು.

    ಸಾಮಾಜಿಕ ಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿರುವೆ. ಆದರೆ ದುಡ್ಡಿಲ್ಲದೆ ರಾಜಕೀಯ ಮಾಡುವುದು ಕಷ್ಟ ಎಂಬುದು ನನಗೆ ಅರಿವಾಗಿದೆ. ಆದರೆ ನಾನೀಗ ಯಾರಿಗೂ ಬೇಡವಾದ ಶಿಶು. ಹಾಗಂತ ನಾನು ಕೈಕಟ್ಟಿ  ಹಿಂದಿನ ಪರಿಸ್ಥಿತಿ ನೆನೆಸಿಕೊಂಡು ಕೂರುವುದಿಲ್ಲ. ಎಲ್ಲವನ್ನು ಮರೆತು ಮುನ್ನುಗ್ಗುವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಡಿವೈಎಸ್‍ಪಿ ಆಗಿ ಸೇವೆ ಸಲ್ಲಿಸುತ್ತಿದ್ದ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪನೆ ಮಾಡಿದ್ದರು.

  • ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

    ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

    ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಸ್ಟೇಟಸ್ ಮೂಲಕ ಬಳ್ಳಾರಿಯಲ್ಲಿ ಸಮರ ಸಾರಿ ಪರಮೇಶ್ವರ್ ನಾಯ್ಕ್ ಅವರ ಸಚಿವ ಸ್ಥಾನ ಕಿತ್ತುಕೊಂಡು ಕೊನೆಗೆ ಸೇವೆಗೆ ರಾಜೀನಾಮೆ ನೀಡಿದ ಮಾಜಿ ಡಿವೈ ಎಸ್ ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ ಬುಕ್ ವಾರ್ ಶುರು ಮಾಡಿದ್ದಾರೆ.

    ಮೋದಿ ಆಡಳಿತದ ಬಗ್ಗೆ ಈವರೆಗೆ ವಿಡಂಬನೆ ಮಾಡುತ್ತಿದ್ದ ಅನುಪಮಾ ಶೆಣೈ, ಈ ಬಾರಿ ಮೋದಿ ಪತ್ನಿ ಯಶೋಧ ಬೆನ್ ಬೆನ್ನು ಬಿದ್ದಿದ್ದಾರೆ. ಮೋದಿಯವರು ಪತ್ನಿಯನ್ನು ತೊರೆದಿದ್ದಾರೆ. ಅವರ ಪತ್ನಿ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರಾ? ಅವರಿಗೂ ಮೋದಿಯ ಭಯ ಇರಬೇಕು. ಹಾಗಾಗಿ ಜೀವನಾಂಶ ಕೇಳಲೂ ಕೋರ್ಟಿಗೆ ಹೋಗಿಲ್ಲ ಅಂತ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.

    ಇದಕ್ಕೂ ಮೊದಲು ಅನುಪಮಾ ಶೆಣೈ ಮತ್ತೊಂದು ಸ್ಟೇಟಸ್ ಹಾಕಿದ್ದು, ತ್ರಿವಳಿ ತಲಾಖ್ ರದ್ದುಗೊಳಿಸಲು ಹಗಲಿರುಳು ಶ್ರಮಿಸುವ ಮೋದಿಯವರು ತನ್ನ ಮಡದಿಯನ್ನು ದೂರ ಮಾಡಿದ್ದಾರೆ. ಈ ವಿಷಯವೂ ಸಂಸತ್ತಿನಲ್ಲಿ ಚರ್ಚೆಯಾಗಲಿ ಅಂತ ಸವಾಲು ಹಾಕಿದ್ದಾರೆ.

    ಶೆಣೈ ಹಾಕಿರುವ ಸ್ಟೇಟಸ್ ಗೆ ಪರ ಮತ್ತು ವಿರೋಧ ಕಮೆಂಟ್ ಗಳು ಬರುತ್ತಿದೆ. ಮೋದಿ ಅಭಿಮಾನಿಗಳು ಶೆಣೈ ವಿರುದ್ಧ ಫೇಸ್ ಬುಕ್ ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಖಾಸಗಿ ಜೀವನದ ಚರ್ಚೆ ಬೇಡ. ಅವರ ಸಂಸಾರದ ವಿಚಾರ ನಿಮಗೆ ಬೇಡ. ಮೊದಲು ನೀವು ನಿಮ್ಮ ಹೊಸ ಪಕ್ಷ ಕಟ್ಟಿ, ಪಕ್ಷ ಸಂಘಟನೆ ಬಗ್ಗೆ ಚಿಂತೆ ಮಾಡಿ. ಪ್ರಧಾನಿ ಕುಟುಂಬದ ಬಗ್ಗೆ ನಿಮಗ್ಯಾಕೆ ಚಿಂತೆ ಅಂತ ಪ್ರಶ್ನೆ ಮಾಡಿದ್ದಾರೆ.

    ಒಟ್ಟಿನಲ್ಲಿ ಮುಂದಿನ ವಾರ ಪ್ರಧಾನಿ ಮೋದಿ ರಾಜ್ಯ ರಾಜಧಾನಿಗೆ ಬರುತ್ತಿರುವುದರಿಂದ ಈ ಸ್ಟೇಟಸ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.