Tag: ಭಾರತೀಯ ಕ್ರೀಡಾ ಪ್ರಾಧಿಕಾರ

  • 2018ರ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಆಯ್ಕೆ

    2018ರ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಆಯ್ಕೆ

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿದಂತೆ ಐವರು ಮಹಿಳಾ ಕುಸ್ತಿಪಟುಗಳು 2018ರ ಕಾಮನ್‍ವೆಲ್ತ್ ಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

    ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 2018ರಲ್ಲಿ ನಡೆಯಲಿರೋ ಕಾಮನ್‍ವೆಲ್ತ್ ಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲು ಶನಿವಾರ ಲಕ್ನೋ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

    62 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಆರ್ಹತೆ ಪಡೆಯುವುದರೊಂದಿಗೆ, ವಿನಿಶ್ ಫೊಗತ್ (50ಕೆ.ಜಿ), ಬಬಿತಾ ಕುಮಾರಿ (54ಕೆ.ಜಿ), ಪೂಜಾ ಧಂಡಾ(57ಕೆ.ಜಿ), ದಿವ್ಯ ಕರಣ್ (68 ಕೆ.ಜಿ) ಮತ್ತು ಕಿರಣ್ (76ಕೆ.ಜಿ) ವಿಭಾಗಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು.

    ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಒಟ್ಟು 6 ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೇ ನಡೆಯಿತು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ಕಿರ್ಗಿಸ್ತಾನದಲ್ಲಿ ನಡೆಯುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಸ್ಪರ್ಧಿಸಲಿರುವ ಭಾರತ 6 ಫ್ರೀಸ್ಟೈಲ್ ಕುಸ್ತಿಪಟುಗಳು ಆಯ್ಕೆಯಾಗಿದ್ದಾರೆ.

  • ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ಕೋಲ್ಕತ್ತಾ: ತರಬೇತಿ ವೇಳೆ 14 ವರ್ಷ ವಯಸ್ಸಿನ ಬಾಲಕಿಯ ಕುತ್ತಿಗೆಯ ಬಲಭಾಗದಲ್ಲಿ ಬಾಣವೊಂದು ಚುಚ್ಚಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿರೋ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದಿದೆ. ಬಾಲಕಿ ಫಝಿಲಾ ಖತುನ್‍ಗೆ ಬಾಣ ಚುಚ್ಚಿಕೊಂಡಿತ್ತು. ಸದ್ಯ ಶಸ್ತ್ರ ಚಿಕಿತ್ಸೆಯ ಮೂಲಕ ಬಾಲಕಿಯ ಕುತ್ತಿಗೆಯಲ್ಲಿ ಚುಚ್ಚಿಕೊಂಡಿದ್ದ ಬಾಣವನ್ನು ಹೊರತೆಗೆಯಲಾಗಿದೆ ಅಂತ ಬೊಲ್ಪುರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಏನಿದು ಘಟನೆ?: ನಾವು ನಾಲ್ಕು ಮಂದಿ ತರಬೇತಿ ಪಡೆಯುತ್ತಿದ್ದೆವು. ಇಬ್ಬರು ಅಭ್ಯಾಸ ಮುಗಿಸಿದ್ದರು. ನಾನು ಮತ್ತು ಫಝಿಲಾ ಅಭ್ಯಾಸ ಮಾಡುತ್ತಿದ್ದೆವು. ನಾನು ಬಾಣ ಬಿಟ್ಟ ವೇಳೆ ಫಝಿಲಾ ಅಚಾನಕ್ ಆಗಿ ಎದುರು ಬಂದಳು. ಪರಿಣಾಮ ಚೂಪಾದ ಬಾಣ ಆಕೆಯ ಕುತ್ತಿಗೆ ಹೊಕ್ಕಿತು ಅಂತ ಜ್ಯುವೆಲ್ ಶೇಕ್ ಮಾಧ್ಯಮಕ್ಕೆ ತಿಳಿಸಿದ್ದಾಳೆ.

    ಶಸ್ತ್ರ ಚಿಕಿತ್ಸೆ ಬಳಿಕ ಬಾಲಕಿ ಫಝಿಲಾ ಮಾತನಾಡಿದ್ದು, ಜ್ಯುವೆಲ್ ಅಭ್ಯಾಸ ಮಾಡುತ್ತಿದ್ದುದನ್ನು ನಾನು ಗಮನಿಸಲಿಲ್ಲ. ನಾನು ತುಂಬಾ ಹತ್ತಿರ ಹೋದ ಕಾರಣ ಬಾಣ ಚುಚ್ಚಿಕೊಳ್ತು. ಈ ವೇಳೆ ಸ್ಥಳದಲ್ಲಿ ಯಾವ ತರಬೇತುದಾರರೂ ಇರಲಿಲ್ಲ ಅಂತ ಹೇಳಿದ್ದಾಳೆ.

    ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.