Tag: ಭಾರತೀಯ ಕ್ರಿಕೆಟ್ ತಂಡ

  • ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ದುಬೈ: ಟೀಂ ಇಂಡಿಯಾ ಆಟಗಾರ ಅರ್ಶ್‌ದೀಪ್‌ ಸಿಂಗ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಬೆಂಬಲಿಸಿದ್ದಾರೆ.

    ಏಷ್ಯಾಕಪ್‌ನ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ಹಣಾಹಣಿ ನಡೆಯಿತು. ಈ ಪಂದ್ಯದ 18ನೇ ಓವರ್‌ನಲ್ಲಿ ಎಡಗೈ ವೇಗಿ ಬೌಲರ್ ಅರ್ಶ್‌ದೀಪ್‌ ಸಿಂಗ್ ಒತ್ತಡದ ಸಮಯದಲ್ಲಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು.

    ಇದರಿಂದ ಭಾರೀ ಟಿಕೆಗಳು ವ್ಯಕ್ತವಾಯಿತು. ಅಲ್ಲದೇ ಅರ್ಶ್‌ದೀಪ್‌ ಅವರ ಪುಟದಲ್ಲಿ ಖಲಿಸ್ತಾನ ಆಟಗಾರ ಎಂದು ಎಡಿಟ್ ಮಾಡಲಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಅನೇಕ ಕಡೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಭಾರತೀಯ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅರ್ಶ್‌ದೀಪ್‌ ಸಿಂಗ್ ಬೆಂಬಲಕ್ಕೆ ನಿಂತರು. ಈ ಬೆನ್ನಲ್ಲೇ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಸಹ ಅರ್ಶ್‌ದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಅವಮಾನಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ಈ ಕುರಿತು ಟ್ವೀಟ್ ಮಾಡಿರುವ ಮೊಹಮ್ಮದ್ ಹಫೀಜ್, ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ ಏನೆಂದರೆ ನಾವು ಕ್ರೀಡೆಯಲ್ಲಿ ಮನುಷ್ಯರಾಗಿ ಸಹಜ ತಪ್ಪುಗಳನ್ನು ಮಾಡುತ್ತೇವೆ. ಆದರೆ ದಯವಿಟ್ಟು ಈ ತಪ್ಪುಗಳಿಂದ ಯಾರನ್ನೂ ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಲಂಡನ್: ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಗೆಲುವು ಸಾಧಿಸಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಸರಣಿ ಜಯಕ್ಕಾಗಿ ಸೆಣಸಲಿವೆ.

    ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3:30ರ ವೇಳೆಗೆ ಪಂದ್ಯ ಆರಂಭವಾಗಲಿದ್ದು, 2ನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ ಶಾಕ್‌ನಿಂದ ಕಂಗೆಟ್ಟಿರುವ ಭಾರತ ಅಂತಿಮ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಪ್ಲಾನ್ ಬದಲಿಸಿಕೊಂಡು ಸರಣಿ ಜಯದ ಎದುರು ನೋಡುತ್ತಿದೆ. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದ ಭಾರತ 2ನೇ ಪಂದ್ಯದಲ್ಲಿ ಸೋಲು ಕಂಡಿತು. 247 ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆ 100 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ, ಜಡೇಜಾ ಹೋರಾಡಿದರೂ ಅವರ ಬ್ಯಾಟಿಂಗ್ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಗಲಿಲ್ಲ. ಇದೀಗ ಅಂತಿಮ ಪಂದ್ಯದಲ್ಲಿ ಟಿ20 ಮಾದರಿಯಂತೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿ ಕೈವಶ ಮಾಡಿಕೊಳ್ಳಲು ಭಾರತ ಮುಂದಾಗಿದೆ.

    ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರೊಂದಿಗೆ ಉತ್ತಮ ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ 2ನೇ ಪಂದ್ಯದಲ್ಲಿ ನಿರೀಕ್ಷಿತ ಆಟವಾಡದೇ ಇರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಅಲ್ಲದೆ ವಿರಾಟ್ ಕೊಹ್ಲಿ ಸಹ ಅಲ್ಪಮೊತ್ತಕ್ಕೆ ನಿರ್ಗಮಿಸಿದ್ದರು. ಅಂತಿಮ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಿಂದ ಆಟಗಾರರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: 2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    ಜಸ್ಪ್ರಿತ್‌ ಬುಮ್ರಾ ನೇತೃತ್ವದ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆಯಾದರೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಇನ್ನಿಂಗ್ಸ್ ಮಧ್ಯದಲ್ಲಿ ಜೊತೆಯಾಟಗಳನ್ನು ಮುರಿಯುವುದರಲ್ಲಿ ಭಾರತ ಹಿಂದೆ ಬೀಳುತ್ತಿದೆ.

    ಮತ್ತೊಂದೆಡೆ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಟಿ20 ನಲ್ಲಿ ಭಾರತದ ವಿರುದ್ಧ ಸೋಲು ಕಂಡ ಇಂಗ್ಲೆಂಡ್ ಇದೀಗ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಸೇಡು ತೀರಿಕೊಳ್ಳಲು ಕಾತರವಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಭಾರತ – ವೆಸ್ಟ್ಇಂಡೀಸ್ ಏಕದಿನ ಕ್ರಿಕೆಟ್‌ ಸರಣಿಗೆ ಆಯ್ಕೆ ಪಟ್ಟಿ ಪ್ರಕಟ – ಶಿಖರ್ ಧವನ್ ಕ್ಯಾಪ್ಟನ್

    ಭಾರತ – ವೆಸ್ಟ್ಇಂಡೀಸ್ ಏಕದಿನ ಕ್ರಿಕೆಟ್‌ ಸರಣಿಗೆ ಆಯ್ಕೆ ಪಟ್ಟಿ ಪ್ರಕಟ – ಶಿಖರ್ ಧವನ್ ಕ್ಯಾಪ್ಟನ್

    ಮುಂಬೈ: ಜುಲೈ 29 ರಿಂದ ನಡೆಯಲಿರುವ ಭಾರತ – ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳ ಸರಣಿಗೆ 16 ಸದಸ್ಯರ ಭಾರತ ಏಕದಿನ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ.

    ಇತ್ತ ಜುಲೈ 7 ರಿಂದ 10ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ T20 ಹಾಗೂ ಜುಲೈ 12 ರಿಂದ 17ರ ವರೆಗೆ ನಡೆಯಲಿರುವ ಏಕದಿನ ಕ್ರಿಕೆಟ್‌ಗೆ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸಜ್ಜಾಗುತ್ತಿದೆ. ಈ ನಡುವೆ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಆಟಗಾರರನ್ನು ಆಯ್ಕೆ ಮಾಡಿದ್ದು ಇಂದು ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.

    ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ ಹಾಗೂ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಉಪ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

    ಟೀಂನಲ್ಲಿ ಯಾರೆಲ್ಲಾ ಇದ್ದಾರೆ?
    ಶಿಖರ್ ಧವನ್ (ನಾಯಕ), ರವೀಂದ್ರ ಜಡೇಜಾ (ಉಪ ನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಟೀಂ ನಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • IND Vs ENG T20 ಸರಣಿ: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ಭಾರತ

    IND Vs ENG T20 ಸರಣಿ: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ಭಾರತ

    ಬರ್ಮಿಂಗ್‌ಹ್ಯಾಂ: ಅಂತಿಮ ಪಂದ್ಯ ಗೆದ್ದು ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ಆಸೆಗೆ ತಣ್ಣೀರು ಎರಚಿದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.

    ಇದೇ ಜುಲೈ 7ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ T20 ಸರಣಿ ಆರಂಭವಾಗಲಿದೆ. ನಂತರ ಜುಲೈ 15ರಿಂದ ಏಕದಿನ ಕ್ರಿಕೆಟ್ ಸರಣಿ ನಡೆಯಲಿದೆ. ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ. ಜುಲೈ 7, 9 ಮತ್ತು 10 ರಂದು ಟಿ20 ಸರಣಿ ನಡೆಯಲಿದ್ದು, ಜುಲೈ 12, 14 ಹಾಗೂ 17ರಂದು ಏಕದಿನ ಸರಣಿ ನಡೆಯಲಿದೆ. ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಬರ್ಮಿಂಗ್‌ಹ್ಯಾಮ್‌ನ ಎಡ್ಜಾಬಸ್ಟನ್ ಸ್ಟೇಡಿಯಂನಲ್ಲಿ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‌ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್‌ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಟಿ20 ಸರಣಿ – ಯಾವಾಗ ಎಲ್ಲಿ?

    • 1ನೇ ಪಂದ್ಯ – ಜುಲೈ 07- ಸೌಥಂಪ್ಟನ್‌ನ ದಿ ರೋಸ್‌ಬೌಲ್ ಸ್ಟೇಡಿಯಂ
    • 2ನೇ ಪಂದ್ಯ – ಜುಲೈ 09- ಬರ್ಮಿಂಗ್‌ಹ್ಯಾಂನ ಎಡ್ಜಾಬಸ್ಟನ್ ಸ್ಟೇಡಿಯಂ
    • 3ನೇ ಪಂದ್ಯ – ಜುಲೈ 10- ನಾಟಿಂಗ್‌ಹ್ಯಾಂನ ಟ್ರೆಂಟ್‌ಬ್ರಿಡ್ಜ್ ಸ್ಟೇಡಿಯಂ

    ಏಕದಿನ ಸರಣಿ – ಯಾವಾಗ ಎಲ್ಲಿ?

    • ಮೊದಲ ಏಕದಿನ – ಜುಲೈ 12- ಲಂಡನ್‌ನ ದಿ ಓವಲ್ ಸ್ಟೇಡಿಯಂ
    • 2ನೇ ಏಕದಿನ – ಜುಲೈ 14- ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂ
    • 3ನೇ ಏಕದಿನ – ಜುಲೈ 17- ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಒಲ್ಡ್ ಟ್ರಾನ್ಸ್‌ಫರ್ಡ್‌ ಸ್ಟೇಡಿಯಂ

    Live Tv
    [brid partner=56869869 player=32851 video=960834 autoplay=true]

  • 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    ಬರ್ಮಿಂಗ್‌ಹ್ಯಾಮ್‌: ಎಡ್ಜಾಬಸ್ಟನ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನ ಮೊದಲ ದಿನವೇ ಅಮೋಘ ಶತಕ ಸಿಡಿಸಿದ ವಿಕೆಟ್ ಕೀಪರ್ ರಿಷಭ್ ಪಂತ್ 17 ವರ್ಷಗಳ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಟೆಸ್ಟ್ ಕ್ರಿಕೆಟ್‌ನಲ್ಲಿ 89 ಎಸೆತಗಳಲ್ಲಿ 5ನೇ ಬಾರಿಗೆ ಶತಕ ಸಿಡಿಸಿದ ಪಂತ್ ಅತಿ ವೇಗದ ಶತಕ ಬಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು 2005ರಲ್ಲಿ ಫೈಸಲಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ 93 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆ ಮಾಡಿದ್ದರು. ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದರು. ಇದರಲ್ಲಿ 4 ಸಿಕ್ಸರ್ ಹಾಗೂ 19 ಬೌಂಡರಿಗಳೂ ಒಳಗೊಂಡಿವೆ.

    89 ಎಸೆತಗಳಲ್ಲಿ ದಾಖಲಾದ ಪಂತ್ ಶತಕವು ಅತ್ಯಂತ ವೇಗದ ಶತಕ ಎನಿಸಿಕೊಳ್ಳುವ ಜೊತೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ದಾಖಲೆಯನ್ನೂ ಸೋಲಿಸಿದ್ದಾರೆ. ಇದನ್ನೂ ಓದಿ: ಕಪಿಲ್ ದೇವ್ ನಂತರ 35 ವರ್ಷಗಳ ಬಳಿಕ ಭಾರತದ ನಾಯಕತ್ವ ಪಡೆದ ವೇಗಿ – ಬುಮ್ರಾ ಕ್ಯಾಪ್ಟನ್, ಪಂತ್ ವೈಸ್ ಕ್ಯಾಪ್ಟನ್

    ಪಂಥ್ ಅಮೋಘ ಶತಕ: ಇಂಗ್ಲೆಂಡ್ ವಿರುದ್ಧದ ಎಡ್ಜಾಬಸ್ಟನ್‌ ಕ್ರೀಡಾಂಗಣದಲ್ಲಿ ಅಂತಿಮ ಟೆಸ್ಟ್ನ ಮೊದಲ ದಿನವಾದ ಶುಕ್ರವಾರ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಅದ್ಭುತ ಶತಕ ಮತ್ತು ರವೀಂದ್ರ ಜಡೇಜಾ ಅವರ 222 ರನ್‌ಗಳ ಅಮೋಘ ಜೊತೆಯಾಟದ ನೆರವಿನಿಂದ ಭಾರತ 7 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 100 ರನ್‌ಗಳ ಗಡಿ ದಾಟುವ ಮೊದಲೇ ಅಗ್ರ ಕ್ರಮಾಂಕದ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಪ್ರಮುಖ 3 ವಿಕೆಟ್ ಕಿತ್ತು ಭಾರತಕ್ಕೆ ಆಘಾತ ನೀಡಿದ್ದರು. ಇದನ್ನೂ ಓದಿ: ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್ – ತಂಡದಲ್ಲಿ ಯಾರೆಲ್ಲಾ ಇದ್ದಾರೆ?

    ನಂತರ 6ನೇ ವಿಕೆಟ್‌ಗೆ ಜೊತೆಯಾದ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಪ್ರತಿ ಹೋರಾಟ ನಡೆಸಿ ಅರ್ಧಶತಕದ ಜೊತೆಯಾಟ ಕಟ್ಟಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಇಂಗ್ಲೆಂಡ್ ನೆಲದಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಸದ್ಯ ಎಚ್ಚರಿಕೆಯಿಂದ ಬ್ಯಾಟ್ ಮಾಡುತ್ತಿರುವ ರವೀಂದ್ರ ಜಡೇಜಾ 163 ಎಸೆತಗಳನ್ನು ಎದುರಿಸಿ 10 ಬೌಂಡರಿಗಳೊಂದಿಗೆ 83 ರನ್‌ಗಳನ್ನು ಕಲೆಹಾಕಿದ್ದಾರೆ. ಇವರಿಗೆ ಜೊತೆಯಾಗಿ ಮೊಹಮ್ಮದ್ ಶಮಿ ಕ್ರೀಸ್‌ನಲ್ಲಿ ಇದ್ದಾರೆ.

    5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಮೇಲುಗೈ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಬುಮ್ರಾ ಪಡೆ ಸಜ್ಜಾಗಿದೆ.

    Live Tv

  • ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಬೇಸರವಾಗುತ್ತಿದೆ ಎಂದು ಹೇಳಿರುವ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹ್‌ಝಾದ್, ಭಾರತದಲ್ಲಿ ಆಟಗಾರರಿಗೆ ಸಿಗುವ ಬೆಂಬಲ ಹಾಗೂ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

    2019ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೆಹ್‌ಝಾದ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಅಗ್ರ ಕ್ರಮಾಂಕದ ಆಟಗಾರನಾಗಿ ಗಮನ ಸೆಳೆದಿದ್ದರು. ಆದರೆ ಕೆಲವೇ ಕೆಲವು ಕೆಟ್ಟ ಇನ್ನಿಂಗ್ಸ್ ಅವರನ್ನು ಟೆಸ್ಟ್ ಹಾಗೂ ಓಡಿಐ ತಂಡದಿಂದ ಕೈಬಿಡುವಂತೆ ಮಾಡಿತ್ತು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಟಿ20 ಕ್ರಿಕೆಟ್‌ಗೆ ಸೂಕ್ತರಾಗುವ ಅವರನ್ನು ಇನ್ನಷ್ಟು ದಿನಗಳ ಕಾಲ ಆಡಿಸಬಹುದಾಗಿತ್ತು. ಆದರೆ 2019ರಲ್ಲಿ ಮತ್ತೊಮ್ಮೆ ಅವರನ್ನು ತಂಡದಿಂದ ಹೊರದಬ್ಬಲಾಯಿತು. ಅಂದಿನಿಂದ ಬಲಗೈ ಬ್ಯಾಟ್ಸ್‌ಮನ್‌ ಪಾಕಿಸ್ತಾನ ತಂಡದಲ್ಲಿ ಕಾಣಿಸುತ್ತಿಲ್ಲ. ಕೇವಲ ದೇಶಿ ಕ್ರಿಕೆಟ್ ಆಡಿಕೊಂಡಿದ್ದಾರೆ.

    ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲಿ ನನ್ನ ಬ್ಯಾಟಿಂಗ್ ಅನ್ನು ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಹೋಲಿಸಿದ್ದರು ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಅವರು, ನನ್ನ ವೈಫಲ್ಯಗಳ ಬಗ್ಗೆ ಪಿಸಿಬಿ ಅಧಿಕಾರಿಗಳು ಮುಖಾಮುಖಿಯಾಗಿ ಕುಳಿತು ಚರ್ಚಿಸಬಹುದಿತ್ತು. ನಾನು ಸವಾಲುಗಳನ್ನು ಸ್ವೀಕರಿಸಲು ಸಿದ್ಧನಿದ್ದೆ. ತದನಂತರ ಯಾರದು ತಪ್ಪು? ಯಾರದು ಸರಿ ಎಂದು ತಿಳಿಯುತ್ತಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

    ಆದರೆ ವಖಾರ್ ಯೂನಿಸ್ ಅವರ ಮಾತುಗಳು ನನಗೆ ತಂಬಾ ನೋವು ಕೊಟ್ಟಿದ್ದವು. ವಿಶೇಷವಾಗಿ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾಗ ಇದು ಸಿಕ್ಕಾಪಟ್ಟೆ ಕಾಡಿತ್ತು. ನನ್ನನ್ನು ತಂಡದಿಂದ ಕೈಬಿಡಲು ಅವರು ಮೊದಲೇ ರೂಪಿಸಿದ್ದ ಯೋಜನೆ ಇದಾಗಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಒಂದೇ ಕಲ್ಲಿನಲ್ಲಿ ಎರಡು ಪಕ್ಷಿಗಳನ್ನು ಕೊಲ್ಲುವುದು ಅವರ ಉದ್ದೇಶವಾಗಿತ್ತು ಎಂದು ಅಹ್ಮದ್ ಶೆಹ್‌ಝಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv

  • ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಮುಂಬೈ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಜುಲೈ 1 ರಿಂದ 5ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯನ್ನಾಡಲು ಸಮರಾಭ್ಯಾಸದಲ್ಲಿ ತೊಡಗಿದೆ.

    ಅದಕ್ಕಾಗಿ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಲೈಸ್ಟರ್‌ಶೈರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಲೈಸ್ಟರ್‌ಶೈರ್ ತಂಡದ ಪರ ಆಡಿದ್ದ ಭಾರತ ತಂಡದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ಅವರನ್ನು ವೇಗಿಯ ಬೌಲರ್ ಮೊಹಮ್ಮದ್ ಶಮಿ ಶೂನ್ಯಕ್ಕೆ ಡಕ್‌ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಔಟಾದ ಬಳಿಕ ಪೂಜಾರಾ ಅವರನ್ನು ತಬ್ಬಿ ಕುಣಿದಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!

    ಅಭ್ಯಾಸ ಪಂದ್ಯದ 2ನೇ ದಿನವಾದ ಶುಕ್ರವಾರ ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 246/8 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶ್ರೀಕರ್ ಭರತ್ 111 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿ ತಂಡವನ್ನು 250ರ ಗಡಿ ತಲುಪುವಂತೆ ಮಾಡಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಲೈಸ್ಟರ್‌ಶೈರ್ ತಂಡ ಚಹಾ ವಿರಾಮಕ್ಕೆ 7 ವಿಕೆಟ್‌ಗಳ ನಷ್ಟದಲ್ಲಿ 213 ರನ್ ಗಳಿಸಿತ್ತು. ಲೈಸ್ಟರ್‌ಶೈರ್ ಪರ ಆಡಿದ್ದ ರಿಷಭ್ ಪಂತ್ 87 ಎಸೆತಗಳಲ್ಲಿ 76 ರನ್ ಗಳಿಸಿ ಔಟಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಇದಕ್ಕೂ ಮುನ್ನ ಕ್ರೀಸ್‌ನಲ್ಲಿದ್ದ ಪೂಜಾರಾ ಎಚ್ಚರಿಕೆ ಆಟವಾಡುವ ಸೂಚನೆ ನೀಡಿದ್ದರು. ಈ ವೇಳೆ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪೂಜಾರಾ ಅವರನ್ನು ಪೆವಿಲಿಯನ್ ಸೇರುವಂತೆ ಮಾಡಿದರು. 6 ಎಸೆತಗಳನ್ನು ಎದುರಿಸಿದ ಚೇತೇಶ್ವರ್ ಖಾತೆ ಕೂಡ ತೆರೆಯಲಾಗದೆ ಪೆವಿಲಿಯನ್ ಸೇರಿದರು.

    Live Tv

  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 15 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

    2007ರಲ್ಲಿ ಇದೇ ದಿನ (ಜೂನ್ 23), ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನು ಆಡಿರುವುದಾಗಿ ನೆನಪಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು ಎಂಬುದನ್ನೂ ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ 

    ROHITH SHARMA

    ಈ ಕುರಿತಾಗಿ ಟ್ವೀಟ್ ಮಾಡಿರುವ ರೋಹಿತ್, ಎಲ್ಲರಿಗೂ ನಮಸ್ಕಾರ. ನನ್ನ ನೆಚ್ಚಿನ ಜೆರ್ಸಿಯಲ್ಲಿ 15 ವರ್ಷಗಳು ಕಳೆದಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ನಾನು ಭಾರತಕ್ಕೆ ಪ್ರವೇಶಿಸಿ ಇಂದಿಗೆ 15 ವರ್ಷಗಳನ್ನು ಪೂರೈಸಿದ್ದೇನೆ. ಇದೊಂದು ಅದ್ಭುತ ಪ್ರಯಾಣವಾಗಿದೆ. ಖಂಡಿತವಾಗಿ ನಾನು ನನ್ನ ಜೀವನದುದ್ದಕ್ಕೂ ಕಾಪಾಡಿಕೊಳ್ಳುತ್ತೇನೆ ಎಂದು ರೋಹಿತ್ ಭಾವುಕರಾಗಿದ್ದಾರೆ.

    ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ಉತ್ತಮ ಆಟಗಾರನಾಗಿ ಇಲ್ಲಿಯವರೆಗೆ ಪ್ರಯಾಣಿಸಲು ನನಗೆ ಸಹಾಯ ಮಾಡಿದ ಜನರಿಗೆ ವಿಶೇಷ ಧನ್ಯವಾದಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ 

    ಮುಂದಿನ ತಿಂಗಳ ಜುಲೈ 1 ರಿಂದ 5ರ ವರೆಗೆ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನಾಡಲಿದೆ. ಅದಕ್ಕೂ ಮುನ್ನ ಲಿಸೆಸ್ಟರ್‌ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ.

    Live Tv

  • ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ?

    ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ?

    ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪದ್ಯದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ.

    namma metro

    ಜೂನ್ 19ರಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಕಡೆಯ ಟಿ20 ಪಂದ್ಯ ನಡೆಯಲಿದೆ. ಇದರಿಂದ ನಗರದ ವಿವಿಧೆಡೆ ವೀಕ್ಷಣೆಗೆ ಅವಕಾಶ ವಿರುತ್ತದೆ. ವೀಕ್ಷಣೆ ಮುಗಿದ ನಂತರ ಮನೆಗೆ ತೆರಳುವವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹೆಚ್ಚುವರಿ ಸಮಯ ನಿಗದಿಗೊಳಿಸಲಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಮನೆ ಬೇಕಿದ್ರೆ ಇಂದೇ ಅರ್ಜಿ ಸಲ್ಲಿಸಿ: ಡಿಕೆಶಿಗೆ ಬಿಜೆಪಿ ಟಾಂಗ್

    ಅಂದು ರಾತ್ರಿ 1.30ರ ವರೆಗೆ ಮೆಟ್ರೋ ಸಂಚಾರ ಇರಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಪೇಪರ್ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾತ್ರಿ 10 ಗಂಟೆಯ ನಂತರ ಪೇಪರ್ ಟಿಕೆಟ್‌ಗೆ ಮಾನ್ಯತೆ ನೀಡಲಾಗುತ್ತದೆ. ಎಲ್ಲ ನಿಲ್ದಾಣಗಳಿಂದ 50 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ರಾತ್ರಿ 1.30ರ ವರೆಗೆ ಮೆಟ್ರೋ ರೈಲು ಸಂಚರಿಸಲಿದೆ.

    Live Tv

  • ಅಭಿಮಾನಿಗಳ ಜೊತೆ ಟೀಂ ಇಂಡಿಯಾ ಆಟಗಾರರಿಂದ ಭಾಂಗ್ರ ಡ್ಯಾನ್ಸ್..!

    ಅಭಿಮಾನಿಗಳ ಜೊತೆ ಟೀಂ ಇಂಡಿಯಾ ಆಟಗಾರರಿಂದ ಭಾಂಗ್ರ ಡ್ಯಾನ್ಸ್..!

    ಸಿಡ್ನಿ: ಆಸೀಸ್ ವಿರುದ್ಧ ಸರಣಿ ಗೆದ್ದ ಖುಷಿಯಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರಾರು ಅಭಿಮಾನಿಗಳ ಜೊತೆ ಸೇರಿ ಸಖತ್ತಾಗಿ `ದೇಶ್ ಕಿ ಧರ್ತಿ’ ಹಾಡಿಗೆ ಭಾಂಗ್ರ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

    ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುತ್ತಿಟ್ಟಿತ್ತು. 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲುವನ್ನು ಸಾಧಿಸಿದೆ. ಈ ಗೆಲುವಿನ ಸಂಭ್ರಮದಲ್ಲಿರುವ ತಂಡದ ಆಟಗಾರರು ಅಭಿಮಾನಿಗಳ ಮಧ್ಯೆ ಮನಬಿಚ್ಚಿ ಕುಣಿದು ಕುಪ್ಪಳಿಸಿದ್ದಾರೆ.

    ಕ್ರೀಡಾಂಗಣದಲ್ಲಿ ಗೆಲುವನ್ನು ಸಂಭ್ರಮಿಸಿದ ಬಳಿಕ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಇನ್ನಿತರೇ ಆಟಗಾರರು ಅಭಿಮಾನಿಗಳ ಜೊತೆ ಕುಣಿದು ಸಂಭ್ರಮಿಸಿದ ವಿಡಿಯೋ ಎಲ್ಲರ ಗಮನ ಸೆಳೆದಿತ್ತು. ಅದರಲ್ಲೂ ಭಾರತೀಯ ಕ್ರಿಕೆಟ್ ತಂಡ ಎಲ್ಲೇ ಆಟವಾಡಲು ಹೋದರು ತಮ್ಮೊಡನೆ ಬರುವ ಭದ್ರತಾ ಸಿಬ್ಬಂದಿಗಳ ಜೊತೆ `ದೇಶ್ ಕಿ ಧರ್ತಿ’ ಹಾಡಿಗೆ ಭಾಂಗ್ರ ಶೈಲಿಯಲ್ಲಿ ಹೆಜ್ಜೆ ಹಾಕಿದ್ದು ಅಭಿಮಾನಿಗಳ ಮನ ಗೆದ್ದಿದೆ. ಈ ಸಿಹಿ ಸಂಭ್ರಮದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆಟಗಾರರ ಸಂಭ್ರಮ ಕಂಡು ಫುಲ್ ಖುಷ್ ಆಗಿದ್ದಾರೆ.

    https://www.instagram.com/p/BsUykeanQ1D/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv