Tag: ಭಾರತೀಯ ಕೋಸ್ಟ್ ಗಾರ್ಡ್

  • ಭಾರತಕ್ಕೆ 600 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಪಾಕ್ ಬೋಟ್ ವಶಕ್ಕೆ

    ಭಾರತಕ್ಕೆ 600 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಪಾಕ್ ಬೋಟ್ ವಶಕ್ಕೆ

    ನವದೆಹಲಿ: ಬರೋಬ್ಬರಿ 600 ಕೋಟಿ ರೂ. ಮೌಲ್ಯದ 86 ಕೆಜಿ ಮಾದಕ ದ್ರವ್ಯಗಳನ್ನು ಹೊಂದಿದ್ದ ಶಂಕಿತ ಪಾಕಿಸ್ತಾನಿ ಬೋಟ್‌ (Pakistani Boat), ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಕೈಗೆ ಸಿಕ್ಕಿಬಿದ್ದಿದೆ.

    ಗುಪ್ತಚರ ಮಾಹಿತಿಯ ಮೇರೆಗೆ, ಕೋಸ್ಟ್ ಗಾರ್ಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಾರ್ಯಾಚರಣೆ ನಡೆಸಿ, ಮಾದಕವಸ್ತು ಕಳ್ಳಸಾಗಣೆ ತಡೆಹಿಡಿದಿದೆ. ಇದನ್ನೂ ಓದಿ: ಆಪ್‌ ಮೈತ್ರಿಗೆ ವಿರೋಧ – ದೆಹಲಿಯ ಕಾಂಗ್ರೆಸ್‌ ಅಧ್ಯಕ್ಷ ರಾಜೀನಾಮೆ

    ಡ್ರಗ್ಸ್ ಜೊತೆಗೆ ಪಾಕಿಸ್ತಾನಿ ಹಡಗಿನ 14 ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ. ರಾತ್ರಿ ಸಮಯದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನದ ಬೋಟ್‌ನಿಂದ 14 ಸಿಬ್ಬಂದಿಯೊಂದಿಗೆ 600 ಕೋಟಿ ಮೌಲ್ಯದ ಸುಮಾರು 86 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಾರ್ಯಾಚರಣೆ ವೇಳೆ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆಯ ಪ್ರಮುಖ ಹಡಗುಗಳಲ್ಲಿ ಒಂದಾದ ಕೋಸ್ಟ್‌ ಗಾರ್ಡ್‌ ಹಡಗು ರಾಜರತನ್‌ ಕೂಡ ಇತ್ತು. ಇದರಲ್ಲಿ ಎನ್‌ಸಿಬಿ ಮತ್ತು ಎಟಿಎಸ್‌ ಅಧಿಕಾರಿಗಳು ಇದ್ದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಮುಸ್ಲಿಮರ ಮತ ಬೇಕು, ಅಭ್ಯರ್ಥಿ ಬೇಡ – ಪ್ರಚಾರದಿಂದ ದೂರ ಸರಿದ ನಸೀಮ್‌ ಖಾನ್‌

    ಶಂಕಿತ ಬೋಟ್‌ನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಮಾದಕವಸ್ತು ಇರುವುದು ದೃಢಪಟ್ಟಿದೆ. ವಶಪಡಿಸಿಕೊಂಡ ಪಾಕಿಸ್ತಾನಿ ಬೋಟನ್ನು ಅದರ ಸಿಬ್ಬಂದಿಯೊಂದಿಗೆ ಹೆಚ್ಚಿನ ತನಿಖೆಗಾಗಿ ಪೋರಬಂದರ್‌ಗೆ ತರಲಾಗುತ್ತಿದೆ.

  • 34 ಧ್ರುವ್‌ ಹೆಲಿಕಾಪ್ಟರ್‌ಗಳ ಖರೀದಿಗೆ ಸಂಪುಟ ಅಸ್ತು – ಭಾರತೀಯ ಸೇನೆಗೆ ಮತ್ತಷ್ಟು ಬಲ

    34 ಧ್ರುವ್‌ ಹೆಲಿಕಾಪ್ಟರ್‌ಗಳ ಖರೀದಿಗೆ ಸಂಪುಟ ಅಸ್ತು – ಭಾರತೀಯ ಸೇನೆಗೆ ಮತ್ತಷ್ಟು ಬಲ

    ನವದೆಹಲಿ: ಇತ್ತೀಚೆಗೆ ಭಾರತೀಯ ಸೇನೆಗೆ ಎಂಹೆಚ್ 60ಆರ್ ಸೀಹಾಕ್ (MH 60R Seahawk) ಹೆಲಿಕಾಪ್ಟರ್‌ ಸೇರ್ಪಡೆಗೊಂಡಿದ್ದು, ಕೊಚ್ಚಿಯ ನೌಕಾ ನೆಲೆಯಲ್ಲಿ ನಿಯೋಜಿಸಲು ಸಿದ್ಧತೆ ನಡೆದಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದ್ದು, ಭಾರತೀಯ ಸೇನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

    ಭಾರತೀಯ ಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ 34 ಹೊಸ ಸುಧಾರಿತ ಲಘು ಹೆಲಿಕಾಪ್ಟರ್ (ALH) ಧ್ರುವ್ ಹೆಲಿಕಾಪ್ಟರ್‌ಗಳನ್ನು (ALH Dhruv Helicopters) ಖರೀದಿಸುವ ಪ್ರಸ್ತಾವನೆಗೆ ಕ್ಯಾಬಿನೆಟ್‌ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಪದಾತಿ ದಳದ ಯುದ್ಧ ವಾಹನಗಳನ್ನು (ಟ್ಯಾಂಕರ್‌ ವಾಹನ) ಮೇಲ್ದರ್ಜೆಗೇರಿಸುವ ಯೋಜನೆಗಳಿಗೂ ಸರ್ಕಾರ ಅನುಮತಿ ನೀಡಿದೆ.

    34 ಹೆಲಿಕಾಪ್ಟರ್‌ಗಳ ಪೈಕಿ ಭಾರತೀಯ ಸೇನೆಯು (Indian Army) 25 ಹೆಲಿಕಾಪ್ಟರ್‌ಗಳನ್ನು ಪಡೆಯಲಿದ್ದು, 9 ಹೆಲಿಕಾಪ್ಟರ್‌ಗಳನ್ನು ಭಾರತೀಯ ಕೋಸ್ಟ್ ಗಾರ್ಡ್‌ಗೆ ನೀಡಲಾಗುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ಸಂಸ್ಥೆ (HAL) ಸ್ಥಳೀಯವಾಗಿ ಉತ್ಪಾದಿಸಲಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ಭಾರತೀಯ ಕೋಸ್ಟ್‌ಗಾರ್ಡ್‌ನಲ್ಲಿರುವ (Indian Coast Guard) ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಹಳೆಯದ್ದಾದ ಕಾರಣ ಅವುಗಳನ್ನು ಬದಲಾಯಿಸಲು ಇಲಾಖೆ ಮುಂದಾಗಿದೆ. ಅಲ್ಲದೇ ಬಹುನಿಯೋಜಿತ ಕಾರ್ಯಗಳಿಗೆ ಭಾರತೀಯ ಸೇನೆಗೆ ಹೆಲಿಕಾಪ್ಟರ್‌ಗಳ ಅಗತ್ಯವಿದೆ. ಆದ್ದರಿಂದ ಸರ್ಕಾರ 34 ಹೆಲಿಕಾಪ್ಟರ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನರೇಂದ್ರ ಮೋದಿ ಮುಂದಿನ 10 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ಮಾಡ್ತಾರೆ: ಅಮಿತ್‌ ಶಾ

    ಈ ಯೋಜನೆಗೆ ಸುಮಾರು 8,000 ಕೋಟಿ ರೂ. ವೆಚ್ಚ ತಗುಲಲಿದೆ. ಸ್ಥಳಿಯವಾಗಿಯೇ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವುದರಿಂದ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನವೂ ಸಿಗಲಿದೆ. ಸುಧಾರಿತ ಲಘು ಹೆಲಿಕಾಪ್ಟರ್ (ಧ್ರುವ್) 5.5 ಟನ್‌ಗಳಷ್ಟು ತೂಕ ಹೊಂದಿದೆ. ಸ್ಥಳೀಯವಾಗಿ ಈಗಿನ ಸೇನಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸಮುದ್ರದ ಮಧ್ಯದಲ್ಲಿ ಚೀನಾ ಪ್ರಜೆ ರಕ್ಷಿಸಿದ ಭಾರತೀಯ ಕೋಸ್ಟ್‌ ಗಾರ್ಡ್‌ – ಧನ್ಯವಾದ ತಿಳಿಸಿದ ಚೀನಾ

    ಸಮುದ್ರದ ಮಧ್ಯದಲ್ಲಿ ಚೀನಾ ಪ್ರಜೆ ರಕ್ಷಿಸಿದ ಭಾರತೀಯ ಕೋಸ್ಟ್‌ ಗಾರ್ಡ್‌ – ಧನ್ಯವಾದ ತಿಳಿಸಿದ ಚೀನಾ

    ನವದೆಹಲಿ: ಮುಂಬೈನ ಅರೇಬಿಯನ್‌ ಸಮುದ್ರದಲ್ಲಿ ಚೀನಾ ಪ್ರಜೆಯನ್ನು (Chines Citizen) ಭಾರತೀಯ ಕೋಸ್ಟ್‌ ಗಾರ್ಡ್‌ (Indian Coast Guard) ಸಿಬ್ಬಂದಿ ರಕ್ಷಿಸಿದ್ದಾರೆ. ಭಾರತೀಯ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಕಾರ್ಯಕ್ಕೆ ಚೀನಾ ಧನ್ಯವಾದ ತಿಳಿಸಿದೆ.

    ಮುಂಬೈನ ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರಕ್ಕೆ ಸದಸ್ಯ ಯಿನ್ ವೈಗ್ಯಾಂಗ್ ಅವರಿಗೆ ಹೃದಯಾಘಾತವಾಗಿದೆ ಮತ್ತು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಮಾಹಿತಿ ಲಭಿಸಿತ್ತು. ಚೀನಾದಿಂದ ಯುಎಇಗೆ ತೆರಳುತ್ತಿದ್ದ ಹಡಗಿನೊಂದಿಗೆ ತ್ವರಿತವಾಗಿ ಸಂವಹನ ನಡೆಸಲಾಯಿತು. ಇದನ್ನೂ ಓದಿ: ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

    ತ್ವರಿತ ಸ್ಥಳಾಂತರಿಸುವಿಕೆ ಮತ್ತು ವೈದ್ಯಕೀಯ ನಿರ್ವಹಣೆಗಾಗಿ ಕ್ರಮಕೈಗೊಳ್ಳಲಾಯಿತು. ನಂತರ ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ರೋಗಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹಡಗಿನ ಏಜೆಂಟ್‌ಗೆ ಸ್ಥಳಾಂತರಿಸಲಾಯಿತು.

    ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದ ಚೀನಾದ ಪ್ರಜೆಯನ್ನು ರಕ್ಷಿಸಿದ ಭಾರತೀಯ ಕೋಸ್ಟ್‌ ಗಾರ್ಡ್‌ ಕಾರ್ಯಕ್ಕೆ ಚೀನಾ ರಾಯಭಾರ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು: ಗುಲಾಂ ನಬಿ ಆಜಾದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಿನ ಆಳದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಭಾರತೀಯ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ

    ನೀರಿನ ಆಳದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಭಾರತೀಯ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ

    ಚೆನ್ನೈ: ದೇಶವು 77ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2023) ಸಡಗರದಲ್ಲಿದೆ. ಭಾರತೀಯ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ನೀರಿನೊಳಗೆ ರಾಷ್ಟ್ರಧ್ವಜಾರೋಹಣ ಮಾಡಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ.

    ತಮಿಳುನಾಡಿನ ರಾಮೇಶ್ವರಂನಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ (Indian Coast Guard), ನೀರಿನ ಒಳಗೆ ರಾಷ್ಟ್ರಧ್ವಜವನ್ನು ಹಾರಿಸುವ ದೃಶ್ಯದ ವೀಡಿಯೋವನ್ನು ಹಂಚಿಕೊಂಡಿದೆ. ಇದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರೆ, ಮತ್ತೊಂದಷ್ಟು ಮಂದಿ ಪ್ರತಿಯಾಗಿ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ

    ಈ ವೀಡಿಯೋ ಪೋಸ್ಟ್ ಮಾಡಿದ ಕೇವಲ ಒಂದು ಗಂಟೆಯಲ್ಲಿ ಸುಮಾರು 37,000 ವೀಕ್ಷಿಸಿದ್ದಾರೆ. 2,700 ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದರು. ಅನೇಕರು ವೀಡಿಯೋಗೆ ಬಗೆಬಗೆಯ ಕಾಮೆಂಟ್‌ ಕೂಡ ಮಾಡಿದ್ದಾರೆ.

    ‘ಇದು ನಮಗೆ ಹೆಮ್ಮೆಯ ಕ್ಷಣ’.. ‘ಜೈ ಹಿಂದ್’..‌ ‘ನಮ್ಮ ಸೇನೆ ಮತ್ತು ರಾಷ್ಟ್ರದ ಬಗೆಗೆ ಹೆಮ್ಮೆ ಇದೆ’.. ‘ಭಾರತ್‌ ಮತಾ ಕಿ ಜೈ’ ಹೀಗೆ ಹಲವಾರು ಕಾಮೆಂಟ್‌ಗಳು ಬಂದಿವೆ.

    ದೆಹಲಿಯ ಕೆಂಪು ಕೋಟೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಧ್ವಜಾರೋಹಣ ನೆರವೇರಿಸಿದರು. ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿ, ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 20ಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

    ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 20ಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆಗೆ ತೆರಳಿ ಅಪಾಯಕ್ಕೆ ಸಿಲುಕಿದ್ದ 20ಕ್ಕೂ ಹೆಚ್ಚು ಮೀನುಗಾರರನ್ನು ಭಾರತೀಯ ತಟರಕ್ಷಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಕಾರವಾರದಿಂದ ಸುಮಾರು 10 ನಾಟಿಕಲ್ ಮೈಲು ದೂರದ ಕರ್ನಾಟಕ ಗೋವಾದ ಪೊಳೆಂ ಗಡಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಯಶ್ವರ್ಧನ್ ಎಂಬ ಬೋಟ್ ತಾಂತ್ರೀಕ ದೋಷದಿಂದ ಅಪಾಯಕ್ಕೆ ಸಿಲುಕಿತ್ತು. ಸ್ಥಳೀಯ ಮೀನುಗಾರರಾದ ಘನಾಶ್ಯಾಮ್ ಎನ್ನುವವರು ಕೋಸ್ಟ್ ಗಾರ್ಡ್ ಕಚೇರಿಗೆ ಮಾಹಿತಿ ನೀಡಿ ತಕ್ಷಣ ಸಹಾಯಕ್ಕೆ ಆಗಮಿಸುವಂತೆ ಕೋರಿದ್ದರು.

    ಅದರಂತೆ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ)ನ ಐಸಿಜಿಎಸ್ ಸಿ -155 ಗಸ್ತು ಬೋಟ್ ಮೂಲಕ ಕಾರ್ಯಾಚರಣೆಗೆ ಇಳಿದ ಸಿಬ್ಬಂದ ಬೋಟ್ ನಲ್ಲಿದ್ದ 20ಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಹಾನಿಗೊಳಗಾದ ಮೀನುಗಾರಿಕಾ ಬೋಟ್ ನ್ನು ದಡಕ್ಕೆ ತರಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv