Tag: ಭಾರತೀಯ ಆಹಾರ ನಿಗಮ

  • ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು

    ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು

    ಬೆಂಗಳೂರು: ರಾಜ್ಯದಲ್ಲಿ 1 ಅನ್ನಭಾಗ್ಯ ಯೋಜನೆಯ ಚರ್ಚೆ ತಾರಕಕ್ಕೇರಿದ್ದು, ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾಕ್ಷಿ ಸಮೇತ ತಿರುಗೇಟು ಕೊಟ್ಟಿದ್ದಾರೆ.

    ಎಫ್‍ಸಿಐ (FCI) ಪತ್ರ ಹಾಕಿ ಟ್ವೀಟ್ ಮಾಡಿರುವ ಅವರು, ಸಿ.ಟಿ ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಬಿಜೆಪಿಗರು ಆಗ್ರಹಿಸಬೇಕು. ಅದನ್ನು ಬಿಟ್ಟು ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ ಎಂದು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿವಕುಮಾರ್ ಅಣ್ಣ.. ಭರವಸೆ ಕೊಟ್ಟಿರೋದು ನೀವು, ಮೋದಿ ಅಲ್ಲ: ಅಶೋಕ್ ಕಿಡಿ

    ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿದ್ದಾರೆ ಎಂದು ಟ್ವೀಟ್‍ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

    ಜುಲೈ ತಿಂಗಳಿಂದ ರಾಜ್ಯ ಸರ್ಕಾರ ಅನ್ನಭಾಗ್ಯ (Anna Bhagya) ಯೋಜನೆಯ ಅಕ್ಕಿಯನ್ನು ಕೊಡುಲು ನಿರ್ಧರಿಸಿತ್ತು. ಈ ಬಗ್ಗೆ ಎಫ್‍ಸಿಐನೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈಗ ಎಫ್‍ಸಿಐ ಅಕ್ಕಿಯನ್ನು ನೀಡಲು ನಿರಾಕರಿಸಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಭಾರತೀಯ ಆಹಾರ ನಿಗಮ (FCI) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕರಾರು ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಸವಾಲು ಹಾಕಿದ್ದರು. ಇದನ್ನೂ ಓದಿ: ಬೃಹತ್‌ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್‌ – ವಿಕೃತ ಕಾಮಿ ಅರೆಸ್ಟ್‌

  • ಆಹಾರ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡಿ: ಉಮೇಶ್ ಕತ್ತಿ

    ಆಹಾರ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡಿ: ಉಮೇಶ್ ಕತ್ತಿ

    ಬೆಂಗಳೂರು: ವೈಟ್ ಫೀಲ್ಡ್ ನಲ್ಲಿರುವ ಭಾರತೀಯ ಆಹಾರ ನಿಗಮದ ಮುಖ್ಯ ಆಹಾರ ಸಂಗ್ರಹಣಾಗಾರಕ್ಕೆ ಬೇಟಿ ನೀಡಿದ್ದ ವೇಳೆ, ಆಹಾರ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡಿ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ್ ಕತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಭಾರತೀಯ ಆಹಾರ ನಿಗಮದ ಮುಖ್ಯ ಆಹಾರ ಸಂಗ್ರಹಣಾಗಾರಕ್ಕೆ ಇಂದು ದಿಢೀರ್ ಭೇಟಿ ನೀಡಿದ ಅವರು, ಆಹಾರ ನಿರ್ವಹಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ ಧಾನ್ಯಗಳನ್ನು ಮಾತ್ರ ಜನರಿಗೆ ಬಿಡುಗಡೆ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  ನಾಳೆಯಿಂದ ಪಿಯುಸಿ ಕಾಲೇಜುಗಳು ಪ್ರಾರಂಭ- ಆನ್‍ಲೈನ್ ಮೂಲಕ ಪಠ್ಯ ಬೋಧನೆ

    ಈ ಸಂಗ್ರಹಣಾಗಾರವು ರಾಜ್ಯದಲ್ಲೇ ಅತಿ ದೊಡ್ಡ ಸಂಗ್ರಹಣಾಗಾರಗಳಲ್ಲಿ ಒಂದಾಗಿದೆ. ಇಲ್ಲಿ 1.05 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಂಗ್ರಹಿಸಬಹುದು. ಈ ಸಂಕೀರ್ಣದಲ್ಲಿ 17 ಉಗ್ರಾಣಗಳಿದ್ದು, ಪ್ರತಿ ಉಗ್ರಾಣದಲ್ಲಿ 5000 ಮೆಟ್ರಿಕ್ ಟನ್ ಆಹಾರ ದಾಸ್ತಾನು ಮಾಡಬಹುದಾಗಿದೆ. ಸಂಗ್ರಹಣಾಗಾರಕ್ಕೆ ರೈಲು ಕಂಟೇನರ್ ಮೂಲಕ ಆಹಾರ ಧಾನ್ಯಗಳ ಆಗಮನ, ಧಾನ್ಯಗಳ ವೈಜ್ಞಾನಿಕ ಸಂಗ್ರಹಣೆ ಹಾಗೂ ವಿತರಣೆ ಪ್ರಕ್ರಿಯೆಗಳನ್ನು ಸಚಿವರು ಪರಿಶೀಲಿಸಿದರು.

    ನಂತರ ನಿಗಮದ ಆಹಾರ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಧಾನ್ಯ ವಿಶ್ಲೇಷಣಾ ವಿಧಾನಗಳನ್ನು ವೀಕ್ಷಿಸಿದರು. ನಿಗಮದ ಕಾರ್ಯವಿಧಾನಗಳ ಬಗ್ಗೆ ರಾಜ್ಯದ ಪ್ರಧಾನ ವ್ಯವಸ್ಥಾಪಕರಾದ ರಾಜು ವಿವರಿಸಿದರು. ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ಕಮಲಾಕರ್, ಜಿಲ್ಲಾ ವ್ಯವಸ್ಥಾಪಕ ಭಾಸ್ಕರ್, ಗುಣಮಟ್ಟ ವಿಶ್ಲೇಷಕರಾದ ಜನಾರ್ಧನ ಹಾಗೂ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ, ಮತ್ತಿತರರು ಉಪಸ್ಥಿತರಿದ್ದರು.