Tag: ಭಾರತಿ ಶೆಟ್ಟಿ

  • ಕರ್ನಾಟಕದಲ್ಲಿ ಜಾರಿಯಾಗುತ್ತಾ ಯುಪಿ ಮಾದರಿ ಜನಸಂಖ್ಯಾ ನಿಯಂತ್ರಣ ಕಾನೂನು?

    ಕರ್ನಾಟಕದಲ್ಲಿ ಜಾರಿಯಾಗುತ್ತಾ ಯುಪಿ ಮಾದರಿ ಜನಸಂಖ್ಯಾ ನಿಯಂತ್ರಣ ಕಾನೂನು?

    – ಪರಿಷತ್‍ನಲ್ಲಿ ಶಾಸಕಿ ಭಾರತಿ ಶೆಟ್ಟಿ ಪ್ರಸ್ತಾಪ

    ಬೆಂಗಳೂರು: ಕರ್ನಾಟಕದಲ್ಲಿ ಹಿಜಬ್ ವಿವಾದ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ, ಮುಸ್ಲಿಂ ವರ್ತಕರಿಗೆ ನಿರ್ಬಂಧ ಬಳಿಕ ಇದೀಗ ಬಿಜೆಪಿ ಶಾಸಕರಿಂದ ಜನಸಂಖ್ಯಾ ನಿಯಂತ್ರಣದ ಬಗ್ಗೆ ಒತ್ತಡ ಕೇಳಿಬಂದಿದೆ.

    ಈಗಾಗಲೇ ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚಿದ್ರೆ ಸರ್ಕಾರಿ ಸೌಲಭ್ಯ ಕಡಿತ ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ಉತ್ತರಾಖಂಡದಲ್ಲಿ ಏಕರೂಪ ನಾಗರೀಕ ಸಂಹಿತೆಗೆ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದನ್ನೆಲ್ಲ ಗಮನಿಸಿದ ಬಳಿಕ ಇದೀಗ ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಒತ್ತಡ ಕೇಳಿ ಬರುತ್ತಿದೆ. ಈ ಮೂಲಕ ಮುಂದಿನ ಚುನಾವಣೆಗೆ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ಅಸ್ತ್ರ ಪ್ರಯೋಗಿಸುತ್ತಾ ಸರ್ಕಾರ ಕಣ್ಣಿಟ್ಟಿದೆ. ಇದನ್ನು ಗಮನಿಸಿದಾಗ ಕರ್ನಾಟಕದಲ್ಲಿ ಬಿಜೆಪಿ ಮುಂದಿನ ಅಸ್ತ್ರ ಜನಸಂಖ್ಯಾ ನಿಯಂತ್ರಣನಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಾರಾಮಾರಿ- ಐವರು ಬಿಜೆಪಿ ಶಾಸಕರು ಅಮಾನತು

    ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಬಿಜೆಪಿ ಎಮ್‍ಎಲ್‍ಸಿ ಭಾರತಿ ಶೆಟ್ಟಿ ಜನಸಂಖ್ಯಾ ನಿಯಂತ್ರಣದ ಪ್ರಸ್ತಾಪವನ್ನಿಟ್ಟಿದ್ದಾರೆ. ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ಜನಸಂಖ್ಯೆ ಏರಿಕೆ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತರಬೇಕು. ಉತ್ತರ ಪ್ರದೇಶದ ಸರ್ಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳು ಇದ್ದವರಿಗೆ ಸರ್ಕಾರಿ ಸೌಲಭ್ಯ ಇಲ್ಲ ಅಂತ ಹೇಳಿದೆ. ಅದನ್ನು ಪರಿಶೀಲಿಸಿ ನಮ್ಮ ರಾಜ್ಯದಲ್ಲಿಯೂ ಅಂಥ ಕ್ರಮ ಜಾರಿ ಮಾಡಿ. ಎರಡು ಮಕ್ಕಳನ್ನು ಹೊಂದಿದ ಕುಟುಂಬಕ್ಕೆ ಮಾತ್ರ ಸರ್ಕಾರಿ ಸೌಲಭ್ಯ ಕೊಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ:  ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತೆರಿಗೆ ಹಣ ಪೋಲಾಗುತ್ತಿದೆ. ಜನರ ತೆರಿಗೆ ಸರಿಯಾಗಿ ವಿನಿಯೋಗ ಆಗಬೇಕು. ತೆರಿಗೆ ಹಣ ಕೊಡುವವರು ಯಾರೋ, ಫಲಾನುಭವಿಗಳು ಇನ್ಯಾರೋ ಆಗಬಾರದು. ಮಧ್ಯಮ ವರ್ಗದವರಿಂದಲೂ ತೆರಿಗೆ ಸಂಗ್ರಹವಾಗುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ವರಿಗೂ ಸಮಪಾಲು ಅನ್ನೋದು ಅನ್ವಯ ಆಗಲ್ಲ. ಹೆಚ್ಚು ಮಕ್ಕಳಿದ್ದವರ ಮನೆಗೆ ಹೆಚ್ಚು ಅಕ್ಕಿ ಕೊಡುವಂಥ ಪರಿಸ್ಥಿತಿ ಇದೆ. ಒಂದು ಮನೆಗೆ ಒಂದು ಕ್ವಿಂಟಾಲ್ ಅಕ್ಕಿ ಸರ್ಕಾರ ಕೊಡುತ್ತಿದೆ. ಸಬ್ಸಿಡಿಯಲ್ಲಿ ಹೆಚ್ಚು ಮಕ್ಕಳಿರುವ ಮನೆಗೆ ಹೆಚ್ಚು ಅಕ್ಕಿ ಸರ್ಕಾರ ಕೊಡುತ್ತಿದೆ. ಜನಸಂಖ್ಯೆ ಹೆಚ್ಚಳ ಆರ್ಥಿಕ ಕುಸಿತಕ್ಕೂ ಕಾರಣವಾಗಿದೆ ಎಂದು ಹೇಳಿದರು.

    ನಾನು ಚುನಾವಣೆ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಿಲ್ಲ. ಇಂದಿರಾಗಾಂಧಿ ಕಾಲದಿಂದಲೂ ಜನಸಂಖ್ಯೆ ನಿಯಂತ್ರಣ ಕ್ರಮಗಳಿವೆ. ನಾವಿಬ್ಬರೂ ನಮಗಿಬ್ಬರು ಅನ್ನೋದು ಬಂತು. ಬಳಿಕ ನಾವಿಬ್ಬರು ನಮಗೊಬ್ಬರು ಅಂತನೂ ಬಂತು. ಕೆಲವರು ನಾವಿಬ್ಬರು ನಮ್ಮೊಂದಿಗೆ 28 ಜನ ಅಂತ ಬದುಕುತ್ತಿದ್ದಾರೆ ಇದು ನ್ಯಾಯವಲ್ಲ. ಮುಸ್ಲಿಂ ಸಮುದಾಯದವರನ್ನು ದೃಷ್ಟಿಯಲ್ಲಿಟ್ಕೊಂಡು ನಾನು ಈ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ಅವಕಾಶ ಕೊಡುವುದಿಲ್ಲ: ಅನಿಲ ಬೆನಕೆ

    ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಅನೇಕ ಉತ್ತಮ ಕೆಲಸ ಮಾಡಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕೊಡಲು ಬಂದವರು. ನಾವು ರಾಜ್ಯದಲ್ಲಿ ಯಾವತ್ತು ಕೂಡ ಒಂದೇ ಸಮುದಾಯವನ್ನು ಮೆಚ್ಚಿಸಲು ಹೊರಟಿಲ್ಲ. ಕಾಂಗ್ರೆಸ್ ಈ ಹಿಂದೆ ಶಾದಿ ಭಾಗ್ಯ ನೀಡಿ ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ಪ್ರಯತ್ನ ಪಟ್ಟಿತ್ತು. ನಾವು ಆ ರೀತಿ ಮಾಡಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಡ ಎಂದು ಮಾರ್ಮಿಕವಾಗಿ ನುಡಿದರು.

  • ತೃತೀಯ ಲಿಂಗಿಗಳಿಗೆ ಸೌಲಭ್ಯ ಕಲ್ಪಿಸಲು ಸಮಿತಿ ರಚನೆ: ಹಾಲಪ್ಪ ಆಚಾರ್

    ತೃತೀಯ ಲಿಂಗಿಗಳಿಗೆ ಸೌಲಭ್ಯ ಕಲ್ಪಿಸಲು ಸಮಿತಿ ರಚನೆ: ಹಾಲಪ್ಪ ಆಚಾರ್

    ಬೆಂಗಳೂರು: ತೃತೀಯ ಲಿಂಗಿಗಳಿಗೆ ಸಮರ್ಪಕ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ತೃತೀಯ ಲಿಂಗಿಗಳು ಒಳಗೊಂಡ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದರು.

    ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ತೃತೀಯ ಲಿಂಗಿಗಳಿಗೆ ಸೌಲಭ್ಯ ನೀಡುವ ವಿಚಾರವಾಗಿ ಸರ್ಕಾರದ ಗಮನ ಸೆಳೆದರು. ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ತೃತೀಯ ಲಿಂಗಿಗಳನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಒಂದು ಸಮಿತಿ ರಚನೆ ಮಾಡಬೇಕು. ಈ ಸಮಿತಿಯಲ್ಲಿ ತೃತೀಯ ಲಿಂಗಿಗಳು ಇರಬೇಕು. ತೃತೀಯ ಲಿಂಗಿಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಬೇಕು ಅಂತ ಭಾರತಿ ಶೆಟ್ಟಿ ಒತ್ತಾಯ ಮಾಡಿದರು. ಅಲ್ಲದೆ ಪೊಲೀಸ್ ಪೇದೆ, ಅಂಗನವಾಡಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಹಾಲಪ್ಪ ಆಚಾರ್ ಅವರು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 20266 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ತೃತೀಯ ಲಿಂಗಿಗಳ ಅಂಕಿ-ಅಂಶಗಳ ಸಂಗ್ರಹಕ್ಕೆ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮಂಗಳೂರಿನ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ

    ಎಲ್ಲಾ ಇಲಾಖೆಗಳಲ್ಲಿ ನೇಮಕಾತಿಯಲ್ಲಿ 1% ಹುದ್ದೆ ಮೀಸಲು ಇಡಲಾಗಿದೆ. ಆದರೆ ಎಲ್ಲಾ ಇಲಾಖೆಯಲ್ಲಿ ಇದು ಜಾರಿ ಆಗಿಲ್ಲ. ಎಲ್ಲಾ ಇಲಾಖೆಯಲ್ಲಿ 1% ಮೀಸಲಾತಿ ನಿಯಮ ಜಾರಿಗೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಈಗಾಗಲೇ ತೃತೀಯ ಲಿಂಗಿಗಳಿಗೆ ಮಾಶಾಸನ ನೀಡಲಾಗುತ್ತಿದೆ. ತೃತೀಯ ಲಿಂಗಿಗಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಒಂದು ಸಮಿತಿ ರಚನೆ ಮಾಡುತ್ತೇವೆ. ಸಮಿತಿಯಲ್ಲಿ ತೃತೀಯ ಲಿಂಗಗಳು ಇರಲಿದ್ದಾರೆ. ಸಮಿತಿ ವರದಿ ಆಧರಿಸಿ ತೃತೀಯ ಲಿಂಗಿಗಳಿಗೆ ಸೌಲಭ್ಯಗಳನ್ನ ನೀಡಲು ಅಗತ್ಯ ಕ್ರಮವಹಿಸುತ್ತೇವೆ ಎಂದರು.

  • ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ

    ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ

    ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು ಅಥವಾ ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರ ಹತ್ಯೆ ಆದ್ರೂ ಕೂಡ ಎಲ್ಲಾ ಪಕ್ಷ ಹೇಳೋದು ಒಂದೇ ಮಾತು ಕಠಿಣ ಶಿಕ್ಷೆ ಆಗಬೇಕು ಅಂತ. ಹರ್ಷನ ಜೀವನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಮೇಲೆ ಅನೇಕ ಕೇಸ್ ಇತ್ತು. ಹರ್ಷ ಮೇಲೆ ವೈಯಕ್ತಿಕ ಕೇಸ್ ಇಲ್ಲ. ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಗಣೇಶ ಮೂರ್ತಿ ಕೂರಿಸೋ ಸಂದರ್ಭದಲ್ಲಾದ ಸಂಘರ್ಷದ ಬಗ್ಗೆ ಮಾತ್ರ ಕೇಸ್ ಇರೋದು. ಮದುವೆ ಆಗು ಮಗನೆ ಅಂತ ಅವರ ತಾಯಿ ಹೇಳ್ತಿದ್ರು. ಆಗ ಅವನು ಎಲ್ಲರೂ ಮದುವೆ ಆದ್ರೆ ದೇಶಕ್ಕಾಗಿ ಕೆಲಸ ಮಾಡೋರು ಯಾರು ಅಂತ ಹೇಳುತ್ತಿದ್ದ. ಓಂ ಅನ್ನೋದ್ರ ಮೇಲೆ ಚುಚ್ಚಿ ಚುಚ್ಚಿ ಕೊಂದಿದ್ದಾರೆ ಪಾಪಿಗಳು. ಕೇಸರಿ ಶಾಲು ಅಲ್ಲಿಂದ, ಇಲ್ಲಿಂದ ತಂದ್ರು ಅನ್ನೋ ಮಾಹಿತಿ ಇರೋ ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ ಎಂದು ಪ್ರಶ್ನಿಸಿ ಭಾರತಿ ಶೆಟ್ಟಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂಸಾಚಾರ, ಶಾಲಾ- ಕಾಲೇಜುಗಳಿಗೆ ರಜೆ: ಸೋಮವಾರ ನಡೆದಿದ್ದು ಏನು?

    ಹರ್ಷಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಕಠಿಣ ಶಿಕ್ಷೆ ನೀಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.

  • ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ-ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

    ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ-ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

    ಮೈಸೂರು: ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೊಟೇಲ್, ಪಬ್ ಗಳಲ್ಲಿ ಗಂಡು ಮಕ್ಕಳು ಕುಡಿಯುತ್ತಾರೆ. ಹಾಗೆಯೇ ನಾನು ಕುಡಿಯುತ್ತೇನೆ ಎಂಬ ಈ ಸಮಾನತೆ ನಮಗೆ ಬೇಡ. ನಮಗೆ ಸ್ವತಂತ್ರ ಬೇಕು. ಸ್ವೇಚ್ಛಾಚಾರ ಬೇಡ. ಯಾವುದರಲ್ಲಿ ನಮಗೆ ಉಪಕಾರ ಇದೆಯೋ ಅದರಲ್ಲಿ ಮಾತ್ರ ಸಮಾನತೆ ಇದ್ದರೆ ಸಾಕು ಎಂದು ಅವರು ತಿಳಿಸಿದ್ರು.

    ಸಮಾನತೆ ಎಲ್ಲದರಲ್ಲೂ ಬೇಡ. ಪುರುಷರಿಗೂ ನಮ್ಮ ಜೊತೆ ಸಮಾನತೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ನಮಗೂ ಕೂಡ ಪುರುಷರ ಜೊತೆ ಸಮಾನತೆ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇವರ ಸೃಷ್ಟಿಯಲ್ಲಿ ಯಾರು ಯಾರಿಗೆ ಯಾವುದು ಬೇಕು ಎನ್ನುವುದನ್ನು ದೇವರು ತೀರ್ಮಾನ ಮಾಡಿರುತ್ತಾರೆ. ಅದೇ ರೀತಿ ಆಗುತ್ತದೆ ಎಂದು ಹೇಳಿದ್ರು.

    ಮಹಿಳೆಯರು ಪುರುಷರಿಗೆ ಸಮಾನರಲ್ಲ. ಪುರುಷರಿಗೆ ಇರುವ ಎಲ್ಲ ಸ್ವಾತಂತ್ರ್ಯವೂ ಮಹಿಳೆಯರಿಗೆ ಬೇಡ. ಮಹಿಳೆಯರ ವೈಯುಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆಯಾಗಿದೆ. ಪುರುಷರು ರಾತ್ರಿ ಪಬ್, ರೆಸ್ಟೋರೆಂಟ್‍ನಲ್ಲಿ ಕುಡಿಯುತ್ತಾರೆ. ಮಹಿಳೆಯರಿಗೂ ಅಂತಹ ಸ್ವಾತಂತ್ರ್ಯ ಬೇಕು ಎಂದು ನಾನು ಬಯಸುವುದಿಲ್ಲ ಎಂದರು.

    ಮಹಿಳೆಯರಿಗೆ ಸಾಂಪ್ರದಾಯಿಕ ಇತಿಮಿತಿಗಳಿವೆ. ಪ್ರತಿ ಧರ್ಮದಲ್ಲೂ ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿದೆ. ಆ ಚೌಕಟ್ಟನ್ನು ಮೀರಲು ನಾನು ಬಯಸುವುದಿಲ್ಲ. ಶಬರಿಮಲೆ ದೇವಾಲಯ ಪ್ರವೇಶಕ್ಕೂ ನಮ್ಮ ವಿರೋಧವಿದೆ. ಮುಸ್ಲಿಂ ಮಹಿಳೆಯರ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ತ್ರಿವಳಿ ತಲಾಕ್ ನಿಷೇಧ ಹೇರಲಾಗಿದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv