-ವಿಷ್ಣುವರ್ಧನ್ ಅವ್ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಸಿನಿಗಣ್ಯರಿಂದ ಮನವಿ
ಬೆಂಗಳೂರು: ಡಾ.ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಬುಧವಾರ (ಸೆ.3) ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharati Vishnuvardhan) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಲಿದ್ದಾರೆ.
ಸಿಎಂ ಕಾವೇರಿ ನಿವಾಸದಲ್ಲಿ ನಾಳೆ (ಸೆ.3) 10:30ಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಭೇಟಿಯಾಗಲಿದ್ದಾರೆ. ಈ ವೇಳೆ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕನಿಷ್ಠ 10 ಗುಂಟೆ ಜಮೀನನ್ನು ಮೀಸಲಿಡಬೇಕು ಹಾಗೂ ಅಭಿಮಾನಿಗಳು ಗೌರವ ಸಮರ್ಪಿಸಲು ಮೀಸಲಿಡುವಂತೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್
ಇನ್ನೂ ಮಂಗಳವಾರ (ಸೆ.2) ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು. ಜೊತೆಗೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರದ ಮನೆಗೂ ನಾಮಕರಣ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ವಿಷ್ಣುವರ್ಧನ್ (Vishnuvardhan) 15ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಣುವರ್ಧನ್ ಪ್ರತಿಮೆಗೆ ಕುಟುಂಬಸ್ಥರು ನಮನ ಸಲ್ಲಿಸಿದರು. ಈ ವೇಳೆ, ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿ, ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ ಎಂದು ಭಾರತಿ ವಿಷ್ಣುವರ್ಧನ್ ಮಾತನಾಡಿದರು. ಇದನ್ನೂ ಓದಿ:ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ
ಸಾಹಸಸಿಂಹ ವಿಷ್ಣುವರ್ಧನ್ ವಿಧಿವಶರಾಗಿ ಇಂದಿಗೆ 15 ವರ್ಷ ಕಳೆದಿದೆ. ಆದರೆ ಇನ್ನೂ ಕೂಡ ಸ್ಮಾರಕ ವಿವಾದ ಮುಗಿದಿಲ್ಲ. ಅಭಿಮಾನಿ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಇದ್ದರೂ, ಕೋರ್ಟ್‌ನಲ್ಲಿ ತಡೆ ಇರೋದ್ರಿಂದ ಅಭಿಮಾನಿಗಳಿಗೆ ಪೊಲೀಸರು ಪೂಜೆಗೆ ಅವಕಾಶ ಕೊಡಲಿಲ್ಲ. ಸಮಾಧಿ ಸ್ಥಳದಿಂದ ದೂರದಿಂದಲೇ ಪೂಜೆ ಸಲ್ಲಿಸಲು ಅವಕಾಶ ಕೊಟ್ಟಿದ್ದರಿಂದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಸಮಾಧಿಗೆ ಪೂರ್ತಿ ಹೂವು ಅಲಂಕರಿಸಲು ಅವಕಾಶ ಕೊಟ್ಟಿಲ್ಲ. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಕಲು ಬಿಟ್ಟಿಲ್ಲ. ದೂರದ ಊರಿನಿಂದ ಬಂದಿದ್ದೇವೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ, ಪ್ರತಿಬಾರಿಯಂತೆ ಈ ಬಾರಿಯೂ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಯಾವುದೇ ಕಾರಣಕ್ಕೂ ನಮಗೆ ಸ್ಮಾರಕ ಬೇಡ. ಅಂತ್ಯಕ್ರಿಯೆ ನಡೆದ ಈ ಜಾಗವೇ ನಮಗೆ ಪುಣ್ಯಸ್ಥಳ. ಅಂತ್ಯಕ್ರಿಯೆ ನಡೆದ ಈ ಜಾಗವನ್ನು ನಮಗೆ ಬಿಟ್ಟುಕೊಡಿ ಅಂತ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇವೆಲ್ಲದರ ಮಧ್ಯೆ, ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಯುವರ್ಧನ್‌ಗೆ ನಮನ ಸಲ್ಲಿಸಲಾಗಿದೆ. ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ್ ವಿಷುವರ್ಧನ್ ಪ್ರತಿಮೆಗೆ ನಮನ ಸಲ್ಲಿಸಿದ್ದರು. ಬಳಿಕ ಮಾಧ್ಯಮಕ್ಕೆ ಭಾರತಿ ಪ್ರತಿಕ್ರಿಯಿಸಿ, ಭವಿಷ್ಯದಲ್ಲಿ ವಿಷ್ಣು ಅವರ ಒಳ್ಳೆಯ ಸ್ಮಾರಕ ತಲೆ ಎತ್ತಲಿದೆ. ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ದೇವರು ನಡೆಸಿದಂತೆ ಆಗುತ್ತದೆ ಅಂತ ಸ್ಮಾರಕ ನಿರ್ಮಾಣವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ನಲ್ಲಿ ವಿಷ್ಣು ವಿಧಿವಶರಾಗಿ 15 ವರ್ಷ ಕಳೆದಿದ್ದರೂ, ಸ್ಮಾರಕ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿರೋದು ದುರಂತವೇ ಸರಿ.
ಇಂದು ಅಪ್ಪಾಜಿ ಅವರ 15ನೇ ವರ್ಷದ ಪುಣ್ಯ ಸ್ಮರಣೆಯಾಗಿದ್ದು, ನಮ್ಮ ಕುಟುಂಬದ ಪರವಾಗಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ನನ್ನ ಪಾಲಿಗೆ ಮಾಸ್ ಹೀರೋ ಒಬ್ಬರೆ, ಅದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಎಂದರು. ಈ ರೀತಿ ಯಾವುದೇ ಯುದ್ಧಗಳು ಆಗಬಾರದು. ನಾವೆಲ್ಲ ಒಂದೇ ಕುಟುಂಬವಿದ್ದಂತೆ. ಈ ರೀತಿ ಯುದ್ಧಕ್ಕೆ ಅವಕಾಶ ಕೊಡಬಾರದು. ಆದರೆ ಅಭಿಮಾನಿಗಳು ಅವರ ಅಭಿಮಾನವನ್ನ ಬೇರೆ ಬೇರೆ ರೀತಿ ತೋರಿಸಿಕೊಳ್ಳುತ್ತಾರೆ. ಕಲಾವಿದರು ನಾವೆಲ್ಲ ಒಂದೇ ಕುಟುಂಬ ಇದ್ದಹಾಗೆ. ಆದಷ್ಟು ಯುದ್ಧ ಹೋರಾಟ ಕಮ್ಮಿ ಮಾಡಿ, ಜೊತೆಗೆ ಪ್ರೀತಿಯನ್ನ ಎಲ್ಲರೂ ಹಿಂಚಿಕೆ ಮಾಡಿ ಎಂದು ಅನಿರುದ್ಧ್ ಮನವಿ ಮಾಡಿದರು. ಅದರಿಂದ ನಮ್ಮ ಚಿತ್ರರಂಗ ಬೆಳೆಯುತ್ತದೆ. ಬೇರೆ ರಾಜ್ಯಗಳಿಗೂ ನಾವು ಮಾದರಿ ಆಗುತ್ತೇವೆ ಎಂದರು.
ನಟ ಅನಿರುದ್ಧ (Aniruddha) ನಾಯಕರಾಗಿ ನಟಿಸುತ್ತಿರುವ, ಎಂ.ಆನಂದರಾಜ್ ನಿರ್ದೇಶನದ ‘chef ಚಿದಂಬರ’ (chef Chidambara) ಚಿತ್ರದ ಮುಹೂರ್ತ (Muhurta)ಸಮಾರಂಭ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ (Upendra) ಆರಂಭ ಫಲಕ ತೋರಿದರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharti Vishnuvardhan) ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಆನಂದರಾಜ್, ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಅನಿರುದ್ಧ್ ಅವರು ಐದು ವರ್ಷಗಳ ನಂತರ ನಟಿಸುತ್ತಿರುವ ಚಿತ್ರವಿದು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆರಂಭವಾಗಲಿದೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ರಘು ರಮಣಕೊಪ್ಪ, ಶಿವಮಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಬಿ.ಆರ್ ನವೀನ್ ಕುಮಾರ್ ಸೌಂಡ್ ಡಿಸೈನ್ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ ಎಂದು ವಿವರಣೆ ನೀಡಿದರು. ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ
ನಿರ್ದೇಶಕರು ಹೇಳಿದ ಹಾಗೆ ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಕಾಮಿಡಿಯೊಂದಿಗೆ ಕೌತುಕವು ಇದೆ. ಒಂದು ಕೊಲೆಯ ಸುತ್ತ ಕಥೆ ನಡೆಯುತ್ತದೆ. ನಾನು ಶಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ . ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಕಳೆದ ತಿಂಗಳು ಮೈಸೂರಿನ ವಿಷ್ಣುವರ್ಧನ್ ಸಮಾಧಿ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಅಂದು ಕೂಡ ಭಾರತಿ ಅಮ್ಮ ಅವರು ಆಗಮಿಸಿದ್ದರು. ಚಿತ್ರದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ನಿಮ್ಮ ಜೊತೆ ನಾನು ಇದ್ದೀನಿ ಎಂದು ಭರವಸೆ ನೀಡಿದರು. ಮುಹೂರ್ತ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಮಿಸಿ ಶುಭ ಕೋರಿದರು. ಎಲ್ಲರಿಗೂ ನನ್ನ ಧನ್ಯವಾದ. ನಿರ್ಮಾಪಕಿ ರೂಪ ಅವರ ಪತಿ ಸರ್ವೋತ್ತಮ ಅವರು ನನ್ನ ಸ್ನೇಹಿತರು. ಅವರಿಗೆ ಕಥೆ ಇಷ್ಟವಾಗಿ , ನಿರ್ಮಾಣ ಮಾಡುತ್ತಿದ್ದಾರೆ ಎಂದು ನಟ ಅನಿರುದ್ಧ ತಿಳಿಸಿದರು.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ರೂಪ. ನಾಯಕಿಯರಾದ ನಿಧಿ ಸುಬ್ಬಯ್ಯ, ರೆಚೆಲ್ ಡೇವಿಡ್, ನಟ ರಘು ರಮಣ ಕೊಪ್ಪ ಹಾಗೂ ಛಾಯಾಗ್ರಹಕ ಉದಯ್ ಲೀಲ ಚಿತ್ರದ ಕುರಿತು ಮಾತನಾಡಿದರು.
ಈ ಸ್ಥಳಕ್ಕೆ ಬಂದಾಗ ನಮ್ಮ ಯಜಮಾನರ ‘ಯಜಮಾನ ಚಿತ್ರದ ಮುಹೂರ್ತ ಸಮಾರಂಭ ನೆನಪಾಯಿತು. ಆ ಚಿತ್ರದ ಮುಹೂರ್ತ ಕೂಡ ಇಲ್ಲೇ ನಡೆದಿತ್ತು. ಈ ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಭಾರತಿ ವಿಷ್ಣುವರ್ಧನ್ ಹಾರೈಸಿದರು. ಚಿತ್ರದ ಕ್ಯಾರೆಕ್ಟರ್ ಟೀಸರ್ ಉಪೇಂದ್ರ ಬಿಡುಗಡೆ ಮಾಡಿದರು. ಅನಿರುದ್ದ್ ಅವರ ಪತ್ನಿ ಕೀರ್ತಿ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದ ನಂತರ ಮತ್ತೊಂದು ಸೀರಿಯಲ್ ಮಾಡಲು ಹೊರಟಿದ್ದರು ನಟ ಅನಿರುದ್ಧ (Aniruddha). ಸೂರ್ಯವಂಶ ಹೆಸರಿನ ಆ ಧಾರಾವಾಹಿ ಕೆಲವು ಕಂತುಗಳ ಶೂಟಿಂಗ್ ಕೂಡ ಮಾಡಲಾಗಿತ್ತು. ಆದರೆ, ಏಕಾಏಕಿ ಧಾರಾವಾಹಿ ನಿಂತೇ ಹೋಯಿತು. ಎಸ್.ನಾರಾಯಣ್ ನಿರ್ದೇಶನದಲ್ಲಿ ಅದು ಮೂಡಿ ಬಂದಿತ್ತು. ಆನಂತರ ಮೊನ್ನೆಯಷ್ಟೇ ಹೊಸ ಸುದ್ದಿಯೊಂದನ್ನು ನೀಡುವುದಾಗಿ ಅನಿರುದ್ಧ ಹೇಳಿದ್ದರು.
ಹೊಸ ಸುದ್ದಿ ಅಂದಾಕ್ಷಣ ಮತ್ತೊಂದು ಧಾರಾವಾಹಿ ಅಥವಾ ಸೂರ್ಯವಂಶದ ಬಗ್ಗೆಯೇ ಏನಾದರೂ ಅಪ್ ಡೇಟ್ ನೀಡಬಹುದಾ ಎಂದು ಅಂದಾಜಿಸಲಾಗಿತ್ತು. ಕಿರುತೆರೆಯಲ್ಲಿ ಸಾಕಷ್ಟು ಫೇಮಸ್ ಆಗಿರುವ ಅನಿರುದ್ಧ ಮತ್ತೆ ಬಹುಶಃ ಸಿನಿಮಾ ರಂಗದತ್ತ ಹೆಜ್ಜೆ ಹಾಕದೇ ಇರಬಹುದು ಎಂದು ಊಹಿಸಲಾಗಿತ್ತು. ಆದರೆ, ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಅನಿರುದ್ಧ. ಈ ಕುರಿತು ಅವರು ಕೆಲ ಮಾಹಿತಿಗಳನ್ನು ನೀಡಿದ್ದಾರೆ.
‘ನೆನ್ನೆ ನಮ್ಮ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಿತು. ನಾನು ನಾಯಕ ನಟನಾಗಿ ಪಾತ್ರವಹಿಸುತ್ತಿದ್ದೇನೆ. ರಾಚೆಲ್ ಡೇವಿಡ್ (Rachel David) ಹಾಗೂ ನಿಧಿ ಸುಬ್ಬಯ್ಯ (Nidhi Subbaiah) ಅವರು ಈ ಚಿತ್ರದ ನಾಯಕಿಯರು. ಆನಂದ್ ರಾಜ್ ಅವರು ಈ ನೂತನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೆೇ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆಯುತ್ತಿದ್ದಾರೆ ಎಂದಿದ್ದಾರೆ ಅನಿರುದ್ಧ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?
ಈ ಸಿನಿಮಾಗೆ ಉದಯಲೀಲಾ ಅವರ ಛಾಯಾಗ್ರಹಣ, ವಿಜೇತ್ ಚಂದ್ರ ಅವರ ಸಂಕಲನ, ರಿತ್ವಿಕ್ ಮುರಳಿಧರ್ ಅವರ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ಅವರ ಡಿ.ಐ. (ವಿಕ್ರಾಂತ್ ರೋಣ ಖ್ಯಾತಿ), ನರಸಿಂಹಮೂರ್ತಿ ಅವರ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನವಿರಲಿದೆ.
ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಪೂಜೆ ಸಮಾರಂಭ ನಡೆದಿದ್ದು, ಅನಿರುದ್ಧ ಪತ್ನಿ ಕೀರ್ತಿ, ಭಾರತಿ ವಿಷ್ಣುವರ್ಧನ್ (Bharti Vishnuvardhan), ನಟಿಯರಾದ ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿರಿಯ ನಟ ಬಾಲಣ್ಣ ಅವರ ಕುಟುಂಬ ಡಾ.ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್ ಅವರನ್ನು ಅವಮಾನಿಸಿತಾ? ಹೌದು ಎನ್ನುತ್ತಾರೆ ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ. ಈ ಕುರಿತು ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗುತ್ತಿರುವ ಈ ಹೊತ್ತಿನಲ್ಲಿ ಅವರು ಹಾಕಿದ ಪೋಸ್ಟ್ ಸಂಚಲನ ಮೂಡಿಸಿದೆ. ಪರ ವಿರೋಧಕ್ಕೂ ಕಾರಣವಾಗಿದೆ.
ಅನಿರುದ್ಧ ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆಯುತ್ತಾ, ‘ಅಭಿಮಾನ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಇತ್ಯಾದಿ ಮಾಡಿಕೊಂಡು ಬರಲಿ, ನಮಗೆ ಯಾವತ್ತೂ ಅಭ್ಯಂತರ ಇರಲಿಲ್ಲ, ಇರೋದೂ ಇಲ್ಲ. ಇದ್ದಿದ್ದಿರೆ ಅಭಿಮಾನಿಗಳಿಗೆ ಇಷ್ಟು ವರ್ಷ ಪೂಜೆ ಇತ್ಯಾದಿ ಮಾಡಿಕೊಂಡು ಬರೋದಕ್ಕೆ ಅವಕಾಶಾನೇ ಸಿಗುತ್ತಿರಲಿಲ್ಲ, ಹಾಗೇನೆ ನಾವು ಯಾವತ್ತೂ ಕೂಡ ಸಮಾಧಿ ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸೋದೂ ಇಲ್ಲ. ಆದರೆ ಬಾಲಣ್ಣರವರ ಕುಟುಂಬದವರ ಅಪೇಕ್ಷೆ ಈಗ ಏನು? 10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ? ಆರೂವರೆ ವರ್ಷಗಳು ಕೇಳಿ, ಕೇಳಿ, ಎಷ್ಟೇ, ಹೇಗೆೇ ಪ್ರಯತ್ನ ಪಟ್ಟರೂ, ಆಗ ಅವರು ಮನಸ್ಸು ಮಾಡಲಿಲ್ಲ, ಅಪ್ಪಾವರನ್ನ, ಅಮ್ಮಾವರನ್ನ ಅವಮಾನ ಮಾಡಿದ್ದಾರೆ. ಕೊನೆಗೆ ಸರಕಾರನೇ ಬೇರೆ ಕಡೆ ಮಾಡಿ ಅಂತ ಹೇಳಿದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಯಿತು. ತುಂಬಾ ನೊಂದುಕೊಂಡಿದ್ದೇವೆ, ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದೇವೆ, ಹೋರಾಡಿದ್ದೇವೆ. ನಮ್ಮ ಪ್ರಯತ್ನಗಳ ಬಗ್ಗೆ, ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮಕ್ಕಾಗಿ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು
ಮುಂದುವರೆದು ಬರೆಯುತ್ತಾ, ‘ಸರಕಾರ ಈಗಾಗಲೆ ಮೈಸೂರಲ್ಲಿ ಸ್ಮಾರಕ ಮಾಡಾಗಿದೆ…ಅಲ್ಲಿ ಅಪ್ಪಾವರ ಅಸ್ಥಿಯನ್ನು ಪೂಜಾವಿಧಿಯಿಂದ ಇಟ್ಟು ಅದರ ಮೇಲೆ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ…ಇದೇ ತಿಂಗಳು 29ಕ್ಕೆ, ಭಾನುವಾರ ಲೋಕಾರ್ಪಣೆ ಆಗಲಿದೆ. ನಾವೂ ಅಲ್ಲಿ ಅತ್ಯಂತ ಶ್ರದ್ಧೆಯಿಂದ ನಮ್ಮ ನಮನಗಳನ್ನು ಸಲ್ಲಿಸುತ್ತೆವೆ. ಅಭಿಮಾನಿಗಳೇ! ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ, ಯಾವುದೇ ಕಹಿ ಭಾವನೆಗಳು ಇಟ್ಟುಕೊಳ್ಳದೇ, ಬಂದು ಸಂಭ್ರಮಿಸಿ, ಅಪ್ಪಾವರಗೆ ತಮ್ಮ ನಮನಗಳನ್ನು , ಶ್ರದ್ಧಾಂಜಲಿಯನ್ನು ಸಲ್ಲಿಸಿ’ ಎಂದು ಅವರು ಹೇಳಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಸ್ಮಾರಕವೂ ಅಭಿಮಾನಿ ಸ್ಟುಡಿಯೋದಲ್ಲಿಯೇ ಆಗಬೇಕು ಎನ್ನುವುದು ಅಸಂಖ್ಯಾತ ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಮೈಸೂರಿಗೆ ಅದು ಸ್ಥಳಾಂತರಗೊಂಡಿದೆ. ಈ ಸಂದರ್ಭದಲ್ಲಿ ಸಮಾಧಿಯನ್ನೇ ಕಿತ್ತಹಾಕಬೇಕು ಎಂದು ಬಾಲಣ್ಣ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಮಾಧಿ ಆ ಸ್ಥಳದಲ್ಲಿ ಇರಬೇಕಾ? ಅಥವಾ ಬೇಡವಾ ಎನ್ನುವುದು ನಿರ್ಧಾರವಾಗಲಿದೆ.
Live Tv
[brid partner=56869869 player=32851 video=960834 autoplay=true]
ವಿಷ್ಣುವರ್ಧನ್ (Vishnuvardhan) ಕನಸಿನ ಮನೆಗೆ ಭಾರತಿ ವಿಷ್ಣುವರ್ಧನ್ ಕುಟುಂಬ ಕಾಲಿಟ್ಟಿದ್ದಾರೆ. ನೂತನ ಮನೆಗೆ ಶುಭಹಾರೈಸಲು ಇದೀಗ ಯಶ್ ದಂಪತಿ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಕೂಡ ಭೇಟಿ ಕೊಟ್ಟಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆ ಗೃಹಪ್ರವೇಶ(House Warming) ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಜಯನಗರದಲ್ಲಿನ ಹಳೆಯ ಮನೆಗೆ ಹೊಸ ರೂಪ ಕೊಟ್ಟು, ವಿಷ್ಣು ಕುಟುಂಬ ಎಂಟ್ರಿ ಕೊಟ್ಟಿತ್ತು. `ವಲ್ಮೀಕ’ (Valmika) ಎಂದು ಮನೆಗೆ ಹೆಸರಿಡಲಾಗಿತ್ತು. ಈಗ ಹಿರಿಯ ನಟಿ ಭಾರತಿ ಕುಟುಂಬಕ್ಕೆ ಯಶ್, ರಾಧಿಕಾ ಪಂಡಿತ್ ದಂಪತಿ, ಸುದೀಪ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್
ಬೆಂಗಳೂರು: ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್ ಸ್ಮಾರಕವನ್ನು (Vishnu Memorial) ಡಿಸೆಂಬರ್ ಒಳಗೆ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಈ ಹಿಂದೆ ವಿಷ್ಣುವರ್ಧನ್ (Vishnuvardhan) ಅವರಿದ್ದ ಜಯನಗರದ ಮನೆಯ ಸ್ಥಳದಲ್ಲಿಯೇ ನೂತನವಾಗಿ ನಿರ್ಮಾಣವಾಗಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ
ಭಾರತಿಯವರು ಖುದ್ದಾಗಿ ಬಂದು ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಇನ್ನಷ್ಟು ಚಂದ ಮಾಡಿದ್ದಾರೆ. ನವೀಕರಣಗೊಂಡಿರುವ ವಿಷ್ಣುವರ್ಧನ್ ಅವರ ಮನೆಯ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದು ಕಾಣುತ್ತಿದೆ. ವಿಷ್ಣುವರ್ಧನ್ ಅವರ ತ್ಯಾಗವನ್ನು ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಅವರಿಗೆ ಶುಭ ಕೋರಲು ಬಂದಿದ್ದೇನೆ ಎಂದರು.
ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳುತ್ತಾ ಬಂದಿದೆ. ಡಿಸೆಂಬರ್ ಒಳಗೆ ಸ್ಮಾರಕದ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ಅವರ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ವಿಷ್ಣುವರ್ಧನ್ ಅವರ ಮೇರು ವ್ಯಕ್ತಿತ್ವ ಹಾಗೂ ಘನತೆಗೆ ತಕ್ಕ ಹಾಗೆ ಕಾರ್ಯಕ್ರಮವನ್ನು ವೈಭವಯುತವಾಗಿ ಆಯೋಜಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನಟ ಡಾ. ವಿಷ್ಣುವರ್ಧನ್ ಮನೆ ಹೇಗಿದೆ? ‘ವಲ್ಮೀಕ’ ವಿಶೇಷ
ಚುಕ್ಕಿ ರೋಗ ತಡೆಗೆ ಕ್ರಮ
ಚಿಕ್ಕಮಗಳೂರಿನಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಬಂದಿದ್ದು, ವಿಜ್ಞಾನಿಗಳ ಸಂಶೋಧನೆ ಒಂದು ಹಂತಕ್ಕೆ ಬಂದಿದೆ. ಅದಕ್ಕೆ ಪರಿಹಾರ ನೀಡುವ ಹಾಗೂ ರೋಗ ಹರಡದಂತೆ ಅನುದಾನ ಬಿಡುಗಡೆಯಾಗಿದೆ. ಮಲೆನಾಡ ಭಾಗದಲ್ಲಿ ಆನೆ ಹಾವಳಿ ಹೆಚ್ವಿದ್ದು, ನಾಲ್ಕು ಜಿಲ್ಲೆಗಳಲ್ಲಿ ಅರಣ್ಯ ಪಡೆಗಳನ್ನು ರಚಿಸಿ, ವಾಹನ ಸಲಕರಣೆಗೆ ಅನುದಾನ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಶೃಂಗೇರಿಯಲ್ಲಿ ಆಸ್ಪತ್ರೆ
ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಸ್ಥಳದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.
Live Tv
[brid partner=56869869 player=32851 video=960834 autoplay=true]
ಡಾ.ವಿಷ್ಣುವರ್ಧನ್ ಅವರ ಕನಸಿನ ಮನೆಗೆ ಇಂದು ಗೃಹಪ್ರವೇಶ. ಜಯನಗರದಲ್ಲಿ ನಿರ್ಮಾಣವಾಗಿರುವ ಆ ಭವ್ಯ ಮನೆಯಲ್ಲಿ ಹಳೆಯ ನೆನಪುಗಳನ್ನೇ ಉಳಿಸಿಕೊಂಡು ಹೊಸ ಮನೆಯನ್ನು ನಿರ್ಮಾಣ ಮಾಡಿದ್ದಾರೆ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್. ಸಿಂಹ ನೆಲೆಸಿದ್ದ ಆ ಮನೆಯನ್ನು ಅವರ ಕುಟುಂಬ ಇದೀಗ ಹೊಸ ರೀತಿಯಲ್ಲಿ ಕಟ್ಟಿಸಲಾಗಿದೆ.
ನವ ಗೃಹಕ್ಕೆ ಪ್ರವೇಶಿಸುವುದು ಹಲವರ ಕನಸು. ಇಂದು ಚಂದನವನದ ಮೇರುನಟ ದಿ. ವಿಷ್ಣುವರ್ಧನ್ ಅವರ ಕುಟುಂಬ ಇಂತಹದ್ದೇ ಸಂತಸದಲ್ಲಿದೆ. ಈ ಶುಭ ದಿನದಂದು ವಿಷ್ಣು ಅವರ ನೂತನ ನಿವಾಸದ ಗೃಹಪ್ರವೇಶಕ್ಕೆ ಸಜ್ಜಾಗಿದ್ದು, ವಿಷ್ಣು ಅವರು ಆಸೆ ಪಟ್ಟಂತೆಯೇ ಪತ್ನಿ ಭಾರತಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ನಡೆದಿದೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
ಸಾಹಸಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ, ಗೇಟ ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಂತಹ ಮನೆಗೆ ಇಂದು ವಿಷ್ಣು ಕುಟುಂಬ ಗೃಹ ಪ್ರವೇಶ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
ವಲ್ಮೀಕ ಎಂದರೆ ಹಾವಿನ ಹುತ್ತ ಎಂದರ್ಥ. ನಾಗರಹಾವು ಚಿತ್ರದ ಯಶಸ್ಸಿನ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ವಿಷ್ಣುವರ್ಧನ್ ಈ ಜಾಗ ಖರೀದಿ ಮಾಡಿದ್ದರಂತೆ. ಆದರೆ, ಇದು ನಮ್ಮ ಜಾಗ ಅಂತ ಅದರ ಮಾಲಿಕರು ಆಗ ಬಂದಿದ್ದರು. ವಿಷ್ಣುವರ್ಧನ್ ಇದನ್ನು ಇಷ್ಟ ಪಟ್ಟಿದ್ದಾರೆ ಅಂತ ಆ ಜಾಗದಲ್ಲಿ ಅರ್ಧ ಜಾಗ ಹಾಗೆಯೇ ಕೊಟ್ಟಿದ್ದರಂತೆ ಮಾಲೀಕರು. 6 ಬೆಡ್ ರೂಂನ ಈ ಮನೆ ಮುಂಭಾಗ ಒಂದು ಕೃಷ್ಣನ ವಿಗ್ರಹವಿದೆ. ಅದನ್ನ ವಿಷ್ಣು ಅವ್ರೆ ಇಲ್ಲಿ ಸ್ಥಾಪಿಸಿದ್ದರಂತೆ. ಅದನ್ನ ಹಾಗೆಯೆ ಇಟ್ಟು ಕಲ್ಲಿನ ಮಂಟಪ ಮಾಡಿ ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಹೆಸರಾಂತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆ ಗೃಹ ಪ್ರವೇಶ ಇಂದು ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್, ನಟ ಜಗ್ಗೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗೃಹ ಪ್ರವೇಶದ ಪೂಜೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಸಾಹಸಸಿಂಹ ನಮ್ಮ ಅಚ್ಚುಮೆಚ್ಚಿನ ನಟ. ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸಗಳು ನಡೀತಿವೆ. ಸದ್ಯದಲ್ಲೇ ವಿಷ್ಣು ಸ್ಮಾರಕದ ಉದ್ಘಾಟನೆ ಸಮಾರಂಭವಾಗುತ್ತೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ. ವಿಷ್ಣು ಘನತೆಯನ್ನ ಎತ್ತಿಹಿಡಿಯೋ ಮ್ಯೂಸಿಯಂ ಮಾಡ್ತೀವಿ’ ಎಂದರು. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
ಜಗ್ಗೇಶ್ ಕೂಡ ಮಾತನಾಡಿ, ‘ವಿಷ್ಣುಮನೆಗೆ ಒಂದು ಬ್ಯುಟಿಫುಲ್ ಕಥೆಯಿದೆ. ವಿಷ್ಣು ಅವರಿಗೆ ಮೊದಲು ಯಾರೋ ಭಯ ಹುಟ್ಟಿಸಿದ್ರು. ಜಯನಗರದ ಮನೆ ವಿಷ್ಣು ಸರ್ ಗೆ ಪ್ರಿಯವಾದ ಜಾಗ. ಮನೆಯಲ್ಲಿ ಒಂದೊಂದು ಜಾಗವು ಕಾಡುತ್ತೆ. ಭಾವನೆಗಳನ್ನ ಕೆದಕುತ್ತೆ. ಇದು ಮನೆಯಲ್ಲ, ನಮ್ಮ ಪಾಲಿಗೆ ದೇವಸ್ಥಾನ. ಅನಿರುದ್ದ್ ವಿಷ್ಣುವರ್ಧನ್ ಮಗನ ಸಮಾನ. ಅನಿರುದ್ದ್ ಪರವಾಗಿ ಈಗಲೂ ನಿಲ್ಲಬೇಕು’ ಎಂದರು.
ಗೃಹ ಪ್ರವೇಶದ ಸಮಾರಂಭಕ್ಕೆ ಸಿನಿಮಾ ರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಅನೇಕರು ಹಾಜರಿದ್ದರು. ಬೆಳಗ್ಗೆಯಿಂದಲೇ ಪೂಜೆ, ಹೋಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ನಡೆದಿವೆ. ಮುಂದಿನ ತಿಂಗಳು ವಿಷ್ಣು ಸ್ಮಾರಕ ಕೂಡ ಉದ್ಘಾಟನೆ ಆಗಲಿದೆ.
Live Tv
[brid partner=56869869 player=32851 video=960834 autoplay=true]
ಅಮ್ಮಾ, ಈ ಎರಡು ಅಕ್ಷರವೇ ಒಂದು ತಾದಾತ್ಮ್ಯ. ಅವಳೇ ಸಾಟಿ. ಮಮತೆಯ ಮಡಿಲು, ಕರುಣೆಯ ಕಡಲು, ಬದುಕ ಪರಿಚಯಿಸಿದವಳು. ನೋವು ನಲಿವಿಗೂ ಜೊತೆಯಾಗುವಳು. ಅಂಥ ಮಹಾನ್ ದೈವ ಸ್ವರೂಪಿ ಅಮ್ಮಂದಿರು, ತೆರೆಯ ಮೇಲೆ ವಿಜೃಂಭಿಸುವ ತಾರೆಯರ ಬದುಕಲ್ಲೂ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರ ಏಳು ಬೀಳುಗಳಿಗೆ ಜೊತೆಯಾಗಿದ್ದಾರೆ. ಜನಪ್ರಿಯ ತಾರೆಯರು ಅಮ್ಮನ ಜೊತೆಗೆ ಇರುವ ಅಪರೂಪದ ಚಿತ್ರಗಳು ಇಲ್ಲಿವೆ.
ಅಮ್ಮಾ ಅವಳೆಂದರೆ ಶಕ್ತಿ, ಅವಳೆಂದರೆ ಧೈರ್ಯ ಬದುಕಿನ ಪ್ರತಿ ಹಂತದಲ್ಲೂ ಜೊತೆಯಾಗುವ ತಾಯಿಯ ಕುರಿತು ಅದೆಷ್ಟು ಹೇಳಿದ್ರೂ ಕಮ್ಮಿನೇ ಹೀಗೆ ತಾರೆಯರ ಬದುಕಿನಲ್ಲೂ ಶಕ್ತಿಯಾದವರ ಅಪರೂಪದ ಚಿತ್ರಣಗಳ ಜತೆ ಒಂದು ಚೆಂದದ ಕಹಾನಿ ಇಲ್ಲಿದೆ.
ಇಡೀ ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರು ತಾಯಿಯಾಗಿದ್ದರು ಕಷ್ಟ ಎಂದು ಬಂದವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಚಿತ್ರರಂಗದ ಸ್ಪೂರ್ತಿಯ ಚಿಲುಮೆಯಾಗಿದ್ದರು. ಇನ್ನು ಮುದ್ದಿನ ಮಕ್ಕಳಾದ ಪೂರ್ಣಿಮಾ ಮತ್ತು ಲಕ್ಷ್ಮಿ ಅವರೊಂದಿಗೆ ವಿಶೇಷ ಬಾಂಧವ್ಯವಿತ್ತು. ಅವರೊಂದಿಗಿನ ಅಪರೂಪದ ಚಿತ್ರಣ ಇಲ್ಲಿದೆ.
ಚಂದನವನದ ಚೆಂದದ ನಟಿಯರಾದ ಮೋಹಕ ತಾರೆ ರಮ್ಯಾ ಮತ್ತು ರಕ್ಷಿತಾ ಪ್ರೇಮ್ ಅದರ ಹೊರತಾಗಿಲ್ಲ. ನಟಿ ರಮ್ಯಾ ಇಂದಿಗೂ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಸಿನಿಮಾ ಜತೆಗೆ ರಾಜಕೀಯದಲ್ಲಿಯೂ ಗಮನ ಸೆಳೆದಿರೋದಕ್ಕೆ ರಮ್ಯಾ ತಾಯಿ ರಂಜಿತಾ ಅವರ ಬೆಂಬಲ ಬಹಳಷ್ಟಿದೆ. ಹಾಗೆಯೇ ಚಂದನವನದ ಕ್ರೇಜಿ ಕ್ವೀನ್ ಆಗಿ ಮಿಂಚಿರೋ ನಟಿ ರಕ್ಷಿತಾ ಅವರಿಗೂ ಕೂಡ ಅಮ್ಮನೇ ಶಕ್ತಿ.
ಸ್ಯಾಂಡಲ್‌ವುಡ್ ಸ್ಟಾರ್‌ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಈ ನಟಿಯ ಯಶಸ್ಸಿಗೆ ತಾಯಿ ಮಂಗಳಾ ಪಂಡಿತ್ ಅವರ ಶ್ರಮವಿದೆ. ತಾಯಿಯ ಸಾಥ್‌ನಿಂದ ಗಾಂಧಿನಗರದಲ್ಲಿ ಗಟ್ಟಿ ಸ್ಥಾನ ಪಡೆದವರಲ್ಲಿ ಮೊಗ್ಗಿನ ಮನಸ್ಸಿನ ನಟಿ ರಾಧಿಕಾ ಕೂಡ ಒಬ್ಬರು.
ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್ ನಟಿಯರು ಅವರ ತಾಯಿಯ ಜತೆ ಹರ್ಷಿಕಾ ಪೂಣಚ್ಚ, ಐಂದ್ರಿತಾ ರೇ, ಜಯಮಾಲಾ ಮತ್ತು ಐಶ್ವರ್ಯ, ವಿನಯಾ ಪ್ರಸಾದ್ ಮತ್ತು ಸುಧಾರಾಣಿ, ಕೀರ್ತಿ ಮತ್ತು ಭಾರತಿ ವಿಷ್ಣುವರ್ಧನ್, ಪಾರ್ವತಿ ಮೆನನ್, ಪೂಜಾ ಗಾಂಧಿ, ರಾಧಿಕಾ, ರೇಖಾದಾಸ್, ಸಂಜನಾ ಗಲ್ರಾನಿ, ನಟಿ ಶ್ರುತಿ ಸೇರಿದಂತೆ ಹಲವು ಸೆಲೆಬ್ರೆಟಿಗಳ ಫೋಟೋಗಳು ಜತೆ ಆ ಫೋಟೋಗಳ ಜತೆ ಒಂದೊಳ್ಳೆ ಖುಷಿಯ ಕ್ಷಣವಿದೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ
ಸ್ಯಾಂಡಲ್‌ವುಡ್ ನಟಿಯರ ಅಪರೂಪ ಚಿತ್ರಣಗಳೊಂದಿಗೆ ತಾಯಿ ಜತೆಗಿನ ಬಾಂಧವ್ಯದ ಕಥೆ ಸಾರುತ್ತದೆ. ಅಮ್ಮಂದಿನ ದಿನಾಚರಣೆ ಸಿನಿತಾರೆಯರ ಅಪರೂಪದ ಚಿತ್ರಣಗಳು ಇಲ್ಲಿದೆ.