Tag: ಭಾರತಿ

  • ವಿಷ್ಣು ಸ್ಮಾರಕ ಲೋಕಾರ್ಪಣೆ : ಶುಭ ಕೋರಿದ ಕಿಚ್ಚ, ಸುಮಲತಾ ಅಂಬರೀಶ್

    ವಿಷ್ಣು ಸ್ಮಾರಕ ಲೋಕಾರ್ಪಣೆ : ಶುಭ ಕೋರಿದ ಕಿಚ್ಚ, ಸುಮಲತಾ ಅಂಬರೀಶ್

    ಇಂದು ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ ಲೋಕಾರ್ಪಣೆ (Memorial, Inauguration) ಆಗುತ್ತಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ಇಂದು ಉದ್ಘಾಟನೆ ಆಗುತ್ತಿರುವ ಸ್ಮಾರಕದ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಕೆಲವೇ ಕೆಲವು ಗಣ್ಯರು ಶುಭ ಕೋರಿದ್ದಾರೆ. ಉಳಿದವರ ದಿವ್ಯ ಮೌನ ತಾಳಿದ್ದಾರೆ. ಸಂಸದೆ ಹಾಗೂ ವಿಷ್ಣು ಕುಟುಂಬಕ್ಕೆ ತೀರಾ ಹತ್ತಿರವಿರುವ ಸುಮಲತಾ ಅಂಬರೀಶ್ (Sumalatha) ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆ. ಸಂಸತ್ ಅಧಿವೇಶನದ ಸಲುವಾಗಿ ದೆಹಲಿಯಲ್ಲಿರುವ ಅವರು ಶೀಘ್ರದಲ್ಲೇ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

    ಕಿಚ್ಚ ಸುದೀಪ್ (Sudeep) ಕೂಡ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದು, ‘ಕಾಯುತ್ತಿದ್ದರು ಕರುನಾಡ ಜನತೆ ಇಂಥದ್ದೊಂದು ಅದ್ಭುತ ಕ್ಷಣಕ್ಕೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. ಒಳ್ಳೆಯದೇ ಆಗುತ್ತಿದೆ. ಯಜಮಾನ್ರ ಸ್ಮಾರಕ ಲೋಕಾರ್ಪಣೆ ಸಮಾರಂಭಕ್ಕೆ ಶುಭ ಕೋರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಮೈಸೂರಿನ ಹೆಚ್.ಡಿ. ಕೋಟೆ ರಸ್ತೆಯ, ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾದ  ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುವೆಲ್ ಆಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಪೊಲೀಸ್ ವಸತಿ ನಿಗಮವು ಇದರ ಉಸ್ತುವಾರಿ ವಹಿಸಿಕೊಂಡಿತ್ತು.  5 ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ.

    ಸ್ಮಾರಕ ಕಟ್ಟದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಹಾಗೂ ವಿಷ್ಣುವರ್ಧನ್ ನಿಂತಿರುವ ಭಂಗಿಯ ಪ್ರತಿಮೆ, ಸಭಾಂಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿಗಳು ಹೀಗೆ ನಾನಾ ಕಟ್ಟಡಗಳನ್ನು ಅದು ಒಳಗೊಂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಷ್ಣು ಪ್ರತಿಮೆಯು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ, ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇಲ್ಲಿಯೇ ತಂದಿಡಲಾಗುತ್ತದೆ.

    ಇಂಥದ್ದೊಂದು ಸ್ಮಾರಕಕ್ಕಾಗಿ ವಿಷ್ಣುವರ್ಧನ್ ಕುಟುಂಬ ಮತ್ತು ವಿಷ್ಣು ಅಭಿಮಾನಿಗಳು ಸತತ ಹೋರಾಟ ಮಾಡುತ್ತಲೇ ಬಂದರು. ವಿಷ್ಣುವರ್ಧನ್ ಅವರ ಸಮಾಧಿಯ ಜಾಗದಲ್ಲೇ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಸ್ಮಾರಕ ನಿರ್ಮಾಣಕ್ಕಾಗಿ 2010-11ರ ಬಜೆಟ್ ನಲ್ಲಿ 11 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಆದರೆ, ಅಭಿಮಾನ ಸ್ಟುಡಿಯೋ ಜಾಗ ಕೋರ್ಟ್ ನಲ್ಲಿ ಇರುವ ಕಾರಣದಿಂದಾಗಿ ಅಲ್ಲಿ ಸಾಧ್ಯವಾಗಲಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Special -ಯಜಮಾನನ ಸ್ಮಾರಕದಲ್ಲಿ ತಲೆಯೆತ್ತಿ ನಿಂತ ಡಾ.ವಿಷ್ಣು ಪ್ರತಿಮೆ : ನಾಳೆ ಲೋಕಾರ್ಪಣೆ

    Special -ಯಜಮಾನನ ಸ್ಮಾರಕದಲ್ಲಿ ತಲೆಯೆತ್ತಿ ನಿಂತ ಡಾ.ವಿಷ್ಣು ಪ್ರತಿಮೆ : ನಾಳೆ ಲೋಕಾರ್ಪಣೆ

    ಮೈಸೂರಿನ (Mysore) ಎಚ್.ಡಿ. ಕೋಟೆ ರಸ್ತೆಯ, ಉದ್ಭರ್ ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾದ ಡಾ.ವಿಷ್ಣುವರ್ಧನ್ (Vishnuvardhan) ಸ್ಮಾರಕ (Memorial) ಉದ್ಘಾಟನೆಯನ್ನು (Inauguration) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ನಾಳೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಲೋಕಾರ್ಪಣೆ ಆಗಲಿರುವ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಕೂಡ ಇದ್ದು, ಅದರೊಂದಿಗೆ ವಿಷ್ಣು ಪತ್ನಿ ಭಾರತಿ ಅವರು ಫೋಟೋಗೆ ಪೋಸ್ ನೀಡಿದ್ದಾರೆ.

    2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುವೆಲ್ ಆಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಪೊಲೀಸ್ ವಸತಿ ನಿಗಮವು ಇದರ ಉಸ್ತುವಾರಿ ವಹಿಸಿಕೊಂಡಿತ್ತು.  5 ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    ಸ್ಮಾರಕ ಕಟ್ಟಡದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಹಾಗೂ ವಿಷ್ಣುವರ್ಧನ್ ನಿಂತಿರುವ ಭಂಗಿಯ ಪ್ರತಿಮೆ, ಸಭಾಂಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿಗಳು ಹೀಗೆ ನಾನಾ ಕಟ್ಟಡಗಳನ್ನು ಅದು ಒಳಗೊಂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಷ್ಣು ಪ್ರತಿಮೆಯು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ, ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇಲ್ಲಿಯೇ ತಂದಿಡಲಾಗುತ್ತದೆ.

    ಇಂಥದ್ದೊಂದು ಸ್ಮಾರಕಕ್ಕಾಗಿ ವಿಷ್ಣುವರ್ಧನ್ ಕುಟುಂಬ ಮತ್ತು ವಿಷ್ಣು ಅಭಿಮಾನಿಗಳು ಸತತ ಹೋರಾಟ ಮಾಡುತ್ತಲೇ ಬಂದರು. ವಿಷ್ಣುವರ್ಧನ್ ಅವರ ಸಮಾಧಿಯ ಜಾಗದಲ್ಲೇ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಸ್ಮಾರಕ ನಿರ್ಮಾಣಕ್ಕಾಗಿ 2010-11ರ ಬಜೆಟ್ ನಲ್ಲಿ 11 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಆದರೆ, ಅಭಿಮಾನ ಸ್ಟುಡಿಯೋ ಜಾಗ ಕೋರ್ಟ್ ನಲ್ಲಿ ಇರುವ ಕಾರಣದಿಂದಾಗಿ ಅಲ್ಲಿ ಸಾಧ್ಯವಾಗಲಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧವೆಯೆಂದು ದೂರ ಉಳಿಯಲಿಲ್ಲ – ತಳ್ಳೋಗಾಡಿ ಹೋಟೆಲ್‍ನಲ್ಲಿ ಜೀವನ ನಡೆಸ್ತಿದ್ದಾರೆ ಭಾರತಿ

    ವಿಧವೆಯೆಂದು ದೂರ ಉಳಿಯಲಿಲ್ಲ – ತಳ್ಳೋಗಾಡಿ ಹೋಟೆಲ್‍ನಲ್ಲಿ ಜೀವನ ನಡೆಸ್ತಿದ್ದಾರೆ ಭಾರತಿ

    ವಿಜಯಪುರ: ವಿಧವೆ ಅಂದ್ರೆ ಸಾಕು ಒಂಥರ ನೋಡ್ತಾರೆ. ಅಪಶಕುನ ಅಂತಾರೆ. ಹೊರಗೆ ಬರಬಾರದು ಅಂತಾರೆ. ಆದರೆ, ಇದೆಲ್ಲವನ್ನೂ ಎಡಗಾಲಿನಲ್ಲಿ ಒದ್ದಂತೆ, ಹೀಗಳೆದವರು ನಾಚಿಕೆ ಪಡುವಂತೆ ಬದುಕ್ತಿದ್ದಾರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಭಾರತಿ.

    ಹೌದು. ವಿಜಯಪುರದ ಭಾರತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪತಿ ಮದ್ಯ ಸೇವಿಸಿ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ರು. ಕುಟುಂಬದ ಭಾರವೆಲ್ಲ ಭಾರತಿ ಅವರ ಮೇಲೆ ಬಿತ್ತು. ಈ ವೇಳೆ, ವಿಧವೆ ಅಂತ ಧೃತಿಗೆಡದ ಭಾರತಿ ಅವರು ತಳ್ಳೋಗಾಡಿಯಲ್ಲಿ ಹೋಟೆಲ್‍ ಪ್ರಾರಂಭಿಸಿದ್ರು. ವಿಜಯಪುರದ ಯೋಧರ ವೃತ್ತದಲ್ಲಿ ಇವರ ಅನುಗ್ರಹ ಹೋಟೆಲ್‍ನಲ್ಲಿ ನಿತ್ಯ ನೂರಾರು ಗ್ರಾಹಕರು ತಿಂತಿದ್ದಾರೆ. ಬಿಸಿನೆಸ್ ಕೂಡ ಚೆನ್ನಾಗಿಯೇ ನಡೆಯುತ್ತಿದೆ ಎಂದು ಭಾರತಿ ಹೇಳುತ್ತಾರೆ.

    ಅನುಗ್ರಹ ಹೋಟೆಲ್‍ ನಲ್ಲಿ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟ ಸಿಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಬರುವ ಕಾರಣ 10, 15 ರೂ.ಗೆ ಉಪಾಹಾರ ಕೇವಲ 30 ರೂ.ಗೆ ಊಟ ನಿಗದಿಪಡಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಹೋಟೆಲ್‍ ನಲ್ಲಿ ಭಾರತಿ ಅವರ ಜೊತೆ ಕೆಲಸ ಮಾಡುವ ಹೆಚ್ಚಿನವರು ಕೂಡ ವಿಧವೆಯರು ಆಗಿದ್ದಾರೆ.

    ಭಾರತಿ ಅವರಿಗೆ ಇಬ್ಬರು ಮಕ್ಕಳು ಇದ್ದು, ಇಬ್ಬರನ್ನು ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳೋ ಮಹಿಳೆಯರಿಗೆ ಭಾರತಿ ಅವರು ಮಾದರಿಯಾಗಿದ್ದಾರೆ.

    https://www.youtube.com/watch?v=2zDG4R07LrA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಬೆಂಗಳೂರು: ನಗರದ ಜಾಲಹಳ್ಳಿಯ ಭಾರತಿ ಚಿತ್ರಮಂದಿರದಲ್ಲಿ ಕಾಳಾ ಸಿನಿಮಾ ನೋಡಿದ ಕೆಲವರಿಗೆ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕು ಪ್ರದರ್ಶನ ಮಾಡಿದ್ದಾರೆ.

    ಕನ್ನಡಪರ ಸಂಘಟನೆಗಳ ಸಾಕಷ್ಟು ವಿರೋಧದ ನಡುವೆಯು ಕೆಲವು ಚಿತ್ರ ಮಂದಿರಗಳಲ್ಲಿ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಪ್ರದರ್ಶನಗೊಂಡಿದೆ. ಪ್ರತಿಭಟನೆ ಮಾಡಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಚಿತ್ರ ನೋಡಿ ಹೊರ ಬಂದ ಕೆಲವರಿಗೆ ಮೈಸೂರು ಪೇಟಾ, ಶಾಲು, ಹೂವಿನ ಹಾರ ಹಾಕಿ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕವಾಡಿದ್ದಾರೆ.

    ಸನ್ಮಾನ ಮಾಡಿದ ನಂತರ ಮಾತನಾಡಿದ ಹೋರಾಟಗಾರರು, ಕನ್ನಡ ದ್ರೋಹಿಗಳನ್ನು ಹುಡುಕುತ್ತಾ ಇದ್ದೀವಿ, ಅದು ನೀವೆ ಅಂತಾ ಸನ್ಮಾನ ಮಾಡಿದ್ದೇವೆ, ಸ್ವಾಭಿಮಾನಕ್ಕಿಂತ ಸಿನಿಮಾನೇ ಜಾಸ್ತಿ ಆಯಿತಾ ಅಂತಾ ಪ್ರಶ್ನಿಸಿದ್ದೇವೆ. ಸನ್ಮಾನ ಸ್ವೀಕರಿಸಿದ ಕೆಲ ಪ್ರೇಕ್ಷಕರು ಕ್ಷಮೆಯಾಚಿಸಿದರು. ಪೊಲೀಸರು ಸನ್ಮಾನ ಮಾಡುತ್ತಾರೆ ಎಂದು ಹೋರಾಟಗಾರರಿಗೆ ಅನುವು ಮಾಡಿಕೊಟ್ಟರು ಅಂತಾ ಹೇಳಿದರು.

    ಜ್ಯುರಾಸಿಕ್ ವಲ್ರ್ಡ್ ಹಾಲಿವುಡ್ ಸಿನಿಮಾ ಟಿಕೆಟ್ ನೀಡಿ ಕಾಳಾ ಚಿತ್ರವನ್ನು ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಿನ್ನೆ ಪ್ರದರ್ಶನ ಮಾಡಿದ್ದು ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನೂ ಓದಿ:ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

  • ಮಳೆಗೆ ಕಾರಿನ ಮೇಲೆ ಬಿದ್ದ ಮರ- ಕ್ಯಾನ್ಸರ್ ಗೆದ್ದಿದ್ದ ಮಹಿಳೆ ಸಾವು

    ಮಳೆಗೆ ಕಾರಿನ ಮೇಲೆ ಬಿದ್ದ ಮರ- ಕ್ಯಾನ್ಸರ್ ಗೆದ್ದಿದ್ದ ಮಹಿಳೆ ಸಾವು

    ಬೆಂಗಳೂರು: ಶುಕ್ರವಾರ ಸುರಿದ ಧಾರಾಕಾರ ಮಳೆ ಹಿನ್ನಲೆಯಲ್ಲಿ ಕಾರಿನ ಮೇಲೆ ಮರ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ನಗರದ ಮಿನರ್ವ ಸರ್ಕಲ್ ನಲ್ಲಿ ನಡೆದಿದೆ.

    ಹೋಂ ಗಾರ್ಡ್ ಆಗಿದ್ದ ಭಾರತಿ ಕಾರು ಕೆಟ್ಟೋಗಿದೆ ಎಂದು ಹೋಗಿದ್ದರು. ಭಾರತಿಯವರಿಗೆ ಕ್ಯಾನ್ಸರ್ ಇತ್ತು ಹಾಗೂ ಅವರು ಕ್ಯಾನ್ಸರ್ ಗೆದ್ದು ಬಂದಿದ್ದರು. ರಾಚೇನಹಳ್ಳಿಯ ಕೆರೆ ಬಳಿ ಹೋಂ ಗಾರ್ಡ್ ಡ್ಯೂಟಿ ಮಾಡುತ್ತಿದ್ದರು. ಮೂಲತಃ ತುಮಕೂರಿನವರಾಗಿರುವ ಇವರು ಹತ್ತು ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದರು.

    ನನ್ನ ಸೊಸೆ ಕಾರು ರಿಪೇರಿಗೆ ಬಿಟ್ಟಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದು ಹೋಗಿದೆ. ಮೊದಲನೇ ಮಗ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾನೆ. ಎರಡನೇ ಮಗ ಸುಂಕದಕಟ್ಟೆಯಲ್ಲಿ ಓದುತ್ತಿದ್ದಾನೆ. ನಮ್ಮವರ ಸಾವಿಗೆ ಬಿಬಿಎಂಪಿಯವರೇ ಕಾರಣ. ಐದು ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡರೆ ಹೇಗೆ? ಬಿಬಿಎಂಪಿ ಮೊದಲೇ ಮರಗಳ ಬಗ್ಗೆ ಗಮನ ಕೊಡಬೇಕಿತ್ತು. ಕುಟುಂಬದ ಉದ್ಧಾರಕ್ಕಾಗಿ ಹೋಂ ಗಾರ್ಡ್ ಕೆಲಸ ಮಾಡುತ್ತಿದ್ದರು. ಸರ್ಕಾರ ದೊಡ್ಡ ಮಗನಿಗೆ ಸರ್ಕಾರಿ ಕೆಲಸ ಕೊಡಬೇಕು ಮತ್ತು ಚಿಕ್ಕ ಮಗನಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಮೃತರ ಸಂಬಂಧಿ ರಾಧಾ ಹೇಳಿದ್ರು.