Tag: ಭಾರತದ ಸಂವಿಧಾನ

  • ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ಸಂಸದರಾಗಿ ರಾಹುಲ್‌ ಗಾಂಧಿ ಪ್ರಮಾಣ ವಚನ ಸ್ವೀಕಾರ

    ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ಸಂಸದರಾಗಿ ರಾಹುಲ್‌ ಗಾಂಧಿ ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು, ಭಾರತ್‌ ಜೋಡೋ ಘೋಷಣೆ ಕೂಗಿ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಲೋಕಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ರಾಹುಲ್‌ ಗಾಂಧಿ ಅವರು ವಯನಾಡ್ ಮತ್ತು ರಾಯ್‌ಬರೇಲಿ ಎರಡು ಕ್ಷೇತ್ರಗಳಿಂದಲೂ ಆಯ್ಕೆಯಾಗಿದ್ದರು. ಈಗ ಅವರ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ ಓವೈಸಿ

    ಇಂಡಿಯಾ ಒಕ್ಕೂಟದ ಸಂಸದರು ಸೋಮವಾರ ಸಂಸತ್ತಿನ ಅಧಿವೇಶದಲ್ಲಿ ಸಂವಿಧಾನದ ಕಿರುಪುಸ್ತಕ ಪ್ರದರ್ಶಿಸಿದರು. ಪಕ್ಷದ ಹಲವಾರು ಸಂಸದರು ಈ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ಸಂವಿಧಾನ ಕೈಪಿಡಿ ಹಿಡಿದು ರಾಹುಲ್‌ ಗಾಂಧಿ, ಸಂವಿಧಾನದ ಮೇಲೆ ದಾಳಿ ಮಾಡಲು ಪ್ರತಿಪಕ್ಷಗಳು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

    ತುರ್ತು ಪರಿಸ್ಥಿತಿ ಘೋಷಿಸಿ ಇಂದಿಗೆ 50 ವರ್ಷ ತುಂಬಿದ್ದು, ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ‘ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಮನಸ್ಥಿತಿಯು, ಅದನ್ನು ಹೇರಿದ ಅದೇ ಪಕ್ಷದಲ್ಲಿ ಹೆಚ್ಚು ಜೀವಂತವಾಗಿದೆ’ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಸೋರಿದ ರಾಮಮಂದಿರ ಗರ್ಭಗುಡಿ; ನಿರ್ಮಾಣ ಕಾರ್ಯದಲ್ಲಿ ಲೋಪ – ಪ್ರಧಾನ ಅರ್ಚಕ ಆರೋಪ

  • ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ಹೈದರಾಬಾದ್:‌ ತೆಲಂಗಾಣ ರಾಜ್ಯ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ (Akbaruddin Owaisi) ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಹೊಸ ಸರ್ಕಾರ ಸ್ಥಾಪನೆಯಾದ ಬಳಿಕ ಶನಿವಾರ ಆರಂಭವಾಗಿರುವ ರಾಜ್ಯ ವಿಧಾನಸಭೆಯ (Telangana Legislative Assembly) ಮೊದಲ ಅಧಿವೇಶನಕ್ಕೆ ಹಂಗಾಮಿ ಸ್ಪೀಕರ್‌ ಆಗಿ ಅಕ್ಬರುದ್ದೀನ್ ಓವೈಸಿ ಅವರನ್ನು ನೇಮಕ ಮಾಡಲಾಗಿದ್ದು, ರಾಜ್ಯಪಾಲ ತಮಿಳಿಸೈ ಸೌಂದರರಾಜನ್ (Tamilisai Soundararajan) ಪ್ರಮಾಣ ವಚನ ಬೋಧಿಸಿದ್ದಾರೆ. ಇದನ್ನೂ ಓದಿ: ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ಭಾರತದ ಸಂವಿಧಾನದ 180ನೇ ವಿಧಿಯ ಷರತ್ತು (1) ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ತೆಲಂಗಾಣ ರಾಜ್ಯಪಾಲರು ಅಕ್ಬರುದ್ದೀನ್ ಓವೈಸಿ ಅವರನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ (Telangana Assembly Speaker), ಆಗಿ ನೇಮಿಸಿದ್ದಾರೆ. ಚುನಾಯಿತ ಸದಸ್ಯರಲ್ಲಿ ಒಬ್ಬರನ್ನು ಸ್ಪೀಕರ್‌ ಆಗಿ‌ ನೇಮಿಸುವವರೆಗೆ ಅಕ್ಬರುದ್ದೀನ್‌ ಸ್ಪೀಕರ್‌ ಆಗಿ ಅಧಿವೇಶನ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಐಸಿಸ್‌ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ ಕಾಂಗ್ರೆಸ್‌ 64 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢವಾಗಿದ್ದ ಭಾರತ್‌ ರಾಷ್ಟ್ರ ಸಮಿತಿ 39 ಹಾಗೂ ಬಿಜೆಪಿ 8 ಸ್ಥಾನಗಳನ್ನ ಪಡೆದುಕೊಂಡಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ ಅವರು ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಸಿಎಂ ಹುದ್ದೆ ಅಲಂಕರಿಸಿದ ಖ್ಯಾತಿ ಗಳಿಸಿದ್ದಾರೆ.