Tag: ಭಾರತದ ರಾಯಭಾರಿ

  • ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ ಅಧಿಕಾರ ಸ್ವೀಕಾರ

    ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ ಅಧಿಕಾರ ಸ್ವೀಕಾರ

    ವಾಷಿಂಗ್ಟನ್: ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ (Indian Ambassador) ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಅಧಿಕಾರ ಸ್ವೀಕರಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.

    61 ವರ್ಷ ವಯಸ್ಸಿನ ಕ್ವಾತ್ರಾ ಅವರು ಇತ್ತೀಚಿನವರೆಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ (Foreign Secretary) ಕೆಲಸ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಕ್ವಾತ್ರಾ ಅವರು ಫ್ರಾನ್ಸ್ ಮತ್ತು ನೇಪಾಳಕ್ಕೆ ಭಾರತದ ರಾಯಭಾರಿಯಾಗಿದ್ದರು, ನಂತರ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಕಳೆದ ಜುಲೈ 14 ರಂದು ವಿದೇಶಾಂಗ ಸೇವೆಯಿಂದ ನಿವೃತ್ತರಾಗಿದ್ದರು. ಇದನ್ನೂ ಓದಿ: Bengaluru | ಆಗಸ್ಟ್‌ 15ರ ವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ಕ್ವಾತ್ರಾ ಅವರು ತರಂಜಿತ್ ಸಿಂಗ್ ಸಂಧು ಅವರ ಉತ್ತರಾಧಿಕಾರಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ವಿದೇಶಿ ಸೇವೆಯಿಂದ ನಿವೃತ್ತರಾದ ಕ್ವಾತ್ರಾ 2020 ರಿಂದ 2024ರ ಅವಧಿಗೆ ಯುಎಸ್‌ನಲ್ಲಿ (US) ಭಾರತದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಈ ನಡುವೆ ಅಮೆರಿಕಗೆ ಭಾರತದ ಹೊಸ ರಾಯಭಾರಿಯಾಗಿ ಕ್ವಾತ್ರಾ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ. ನಾವೆಲ್ಲರೂ (ಭಾರತೀಯ ರಾಯಭಾರ ಕಚೇರಿಯಲ್ಲಿ) ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಚಾರ್ಜ್ ಡಿ ಅಫೇರ್ಸ್ ಶ್ರೀಪ್ರಿಯಾ ರಂಗನಾಥನ್ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ 2024: ಜಂಬೂಸವಾರಿ ಆನೆಗಳ ಪಟ್ಟಿ ರಿಲೀಸ್‌ – ಈ ಬಾರಿಯೂ ಅಭಿಮನ್ಯು ʻಕ್ಯಾಪ್ಟನ್‌ʼ

    ಹೊಸ ಭಾರತೀಯ ರಾಯಭಾರಿಯನ್ನು ಸ್ವಾಗತಿಸಲು ಗ್ರೇಟರ್ ವಾಷಿಂಗ್ಟನ್ ಡಿಸಿ ಪ್ರದೇಶದ ಪ್ರಖ್ಯಾತ ಭಾರತೀಯ ಅಮೆರಿಕನ್ನರ ಗುಂಪು ಡಲ್ಲೆಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿತ್ತು. ಆದರೆ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

  • ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

    ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

    ಅಬುಧಾಬಿ: ಭಾರೀ ಮನೆಯಿಂದಾಗಿ ಅನಾಹುತವಾಗಿರುವ ಹಿನ್ನೆಲೆಯಲ್ಲಿ ಸದ್ಯ ದುಬೈಗೆ ಬರುವ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ ಎಂದು ಭಾರತದ ರಾಯಭಾರಿ (Indian Embassy) ಸೂಚನೆ ಕೊಟ್ಟಿದೆ.

    ಹೌದು. ಈ ವಾರ ದುಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಆ ಮಾರ್ಗದಲ್ಲಿ ಹಾದುಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಅನಿವಾರ್ಯವಲ್ಲದ ಪ್ರಯಾಣವನ್ನು ಮರುಹೊಂದಿಸಲು ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.

    ಈ ವಾರದ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದ (Rain) ಚೇತರಿಸಿಕೊಳ್ಳಲು ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಪ್ರಯತ್ನಿಸುತ್ತಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಯುಎಇ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ವಿಮಾನಗಳ ನಿರ್ಗಮನ ದಿನಾಂಕ ಮತ್ತು ಸಮಯದ ಕುರಿತು ಆಯಾ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ನಂತರವೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ

    ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣದಿಂದ ಭಾರತ, ಪಾಕಿಸ್ತಾನ, ಸೌದಿ ಮತ್ತು ಯುನೈಟೆಡ್ ಕಿಂಗ್‍ಡಮ್ ಸೇರಿದಂತೆ ಹಲವು ದೇಶಗಳಿಗೆ ಏಪ್ರಿಲ್ 16 ರಂದು ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ದುಬೈನಲ್ಲಿನ ಪ್ರವಾಹ ದೃಶ್ಯದ ವೀಡಿಯೋ ಹಾಗೂ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು.

  • ಭಾರತ ರಾಯಭಾರಿಯಿಂದ ಇಮ್ರಾನ್ ಖಾನ್‍ಗೆ ಗಿಫ್ಟ್!

    ಭಾರತ ರಾಯಭಾರಿಯಿಂದ ಇಮ್ರಾನ್ ಖಾನ್‍ಗೆ ಗಿಫ್ಟ್!

    ಇಸ್ಲಾಮಾಬಾದ್: ಭಾರತದ ಪಾಕ್ ರಾಯಭಾರಿ ಅಜಯ್ ಬಿಸಾರಿಯಾ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಪಾಕಿಸ್ತಾನ್ ತೆಹ್ರೇಕ್ ಇ ಇಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿ ಟೀಂ ಇಂಡಿಯಾ ಆಟಗಾರರು ಸಹಿ ಮಾಡಿದ ಕ್ರಿಕೆಟ್ ಬ್ಯಾಟನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಭಾರತದ ಹೈ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿ ಎರಡು ದೇಶಗಳ ನಡುವಿನ ಸಹಕಾರ ವೃದ್ಧಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಭೇಟಿಯ ವೇಳೆ ನೆನಪಿನ ಕಾಣಿಕೆಯಾಗಿ ಬ್ಯಾಟ್ ನೀಡಿದ್ದಾರೆ.

    ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೇಕ್ ಇ ಇಸಾಫ್ ಪಕ್ಷ ಜುಲೈ 25 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗಸ್ಟ್ 18 ರಂದು ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಿಟಿಐ ಪಕ್ಷದ ಮೂಲಗಳು ಮಾಹಿತಿ ನೀಡಿದೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರರದ ಕಪಿಲ್ ದೇವ್, ನವಜೋಥ್ ಸಿಂಗ್ ಸಿಧು ಹಾಗೂ ಸುನೀಲ್ ಗವಾಸ್ಕರ್ ಅವರಿಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

    65 ವರ್ಷದ ಇಮ್ರಾನ್ ಖಾನ್ ಪಾಕ್ ಕ್ರಿಕೆಟ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು, ಬಳಿಕ ರಾಜಕೀಯಕ್ಕೆ ಪ್ರವೇಶ ನೀಡಿ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದರು. ಹಲವು ಏಳುಬೀಳುಗಳ ಬಳಿಕ ಈ ಬಾರಿಯ ಚುನಾವಣೆಯಲ್ಲಿ ಪಕ್ಷವೂ ಬಹುದೊಡ್ಡ ಸಂಖ್ಯೆಯಲ್ಲಿ ಸ್ಥಾನ ಗಳಿಸಿತ್ತು. ಈ ವೇಳೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಇಮ್ರಾನ್ ಖಾನ್ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಹಕಾರ ವೃದ್ಧಿ ಹೆಚ್ಚಿನಗೆ ಒತ್ತು ನೀಡಲಾಗವುದು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews