– ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆ – 18 ವರ್ಷ ಪೂರ್ಣಗೊಂಡ ಭಾಗ್ಯಲಕ್ಷ್ಮಿ ಬಾಂಡ್ ಹಣ
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಗೆ ಈಗ 18 ವರ್ಷದ ತುಂಬಿದ್ದು, ಫಲಾನುಭವಿಗಳಿಗೆ ಮೊತ್ತ ಮಂಜೂರಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.
ರಾಜ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ನೇ ಸಾಲಿನಲ್ಲಿ ನೋಂದಣಿಯಾಗಿತ್ತು. ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್‌ಐಸಿ ಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ.
ಒಟ್ಟು ಒಂದು ಲಕ್ಷ ರೂಪಾಯಿ ಫಲಾನುಭವಿಗಳಿಗೆ ಸಿಗಲಿದೆ. ರಾಜ್ಯದಲ್ಲಿ ಒಟ್ಟು 34.50 ಲಕ್ಷ ಭಾಗ್ಯಲಕ್ಷ್ಮಿ ಫಲಾನುಭವಿಗಳಿದ್ದಾರೆ. ಹೆಣ್ಣುಮಕ್ಕಳ ಉನ್ನತ ವ್ಯಾಸಂಗ ಸೇರಿದಂತೆ ಇತರೆ ಕಾರ್ಯಗಳಿಗೆ ಆ ಹಣ ನೆರವಾಗುವ ಉದ್ದೇಶದಿಂದ ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿದೆ.
ಕಿರುತೆರೆಯ ಜನಪ್ರಿಯ ಅಮೃತಧಾರೆ (Amruthadaare) ಮತ್ತು ಭಾಗ್ಯಲಕ್ಷಿ (Bhagyalakshmi) ಸೀರಿಯಲ್ ನಟಿಯರು ಸಾರಾ ಅಣ್ಣಯ್ಯ- ಕಾವ್ಯಾ ಗೌಡ ಅವರು ಒಟ್ಟಿಗೆ ಗೋವಾಗೆ ಜಾಲಿ ಟ್ರಿಪ್ ಮಾಡ್ತಿದ್ದಾರೆ. ಶ್ರೇಷ್ಠಾ ಮತ್ತು ಮಹಿಮಾ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ
ಕನ್ನಡತಿ, ನಮ್ಮ ಲಚ್ಚಿ ಸೀರಿಯಲ್ ಮೂಲಕ ಗಮನ ಸೆಳೆದ ಕೂರ್ಗ್ ಬ್ಯೂಟಿ ಸಾರಾ ಅಣ್ಣಯ್ಯ (Sara Annaiah) ಅವರು ಸದ್ಯ ಅಮೃತಧಾರೆ ಸೀರಿಯಲ್‌ನ ಮಹಿಮಾ ರೋಲ್‌ನಲ್ಲಿ ಮಿಂಚಿದ್ದಾರೆ. ಉದ್ಯಮಿ ಗೌತಮ್ ದಿವಾನ್ ಸಹೋದರಿ ಪಾತ್ರಕ್ಕೆ ಸಾರಾ ಜೀವ ತುಂಬುತ್ತಿದ್ದಾರೆ. ಜೀವಾ ಎಂಬ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸೋ ಹುಡುಗಿಯಾಗಿ ಸಾರಾ ಕಾಣಿಸಿಕೊಂಡಿದ್ದಾರೆ. ಸದ್ಯ ಅಮೃತಧಾರೆ ಸೀರಿಯಲ್ ಒಳ್ಳೆಯ ಟಾಕ್‌ನಲ್ಲಿದೆ. ಸಖತ್ ಹೈಪ್ ಕ್ರಿಯೆಟ್ ಮಾಡಿದೆ.
ಸಾರಾ ಅವರ ಫ್ರೆಂಡ್ ಕಾವ್ಯಾ ಗೌಡ (Kavya Gowda) , ಕೂಡ ಶ್ರೇಷ್ಠಾ ಎಂಬ ಪಾತ್ರದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮಿಂಚ್ತಿದ್ದಾರೆ. ಮದುವೆಯಾಗಿರುವ ಹೀರೋ ತಾಂಡವ್ ಹಿಂದೆ ಬೀಳುವ ಯುವತಿಯಾಗಿ ಕಾವ್ಯಾ ಕಾಣಿಸಿಕೊಂಡಿದ್ದಾರೆ.
ಬಡವ ರಾಸ್ಕಲ್ (Badava Rascal) ನಟಿ ಅಮೃತಾ ಐಯ್ಯಂಗಾರ್ ಅವರ ಸ್ನೇಹಿತೆ ಈ ಕಾವ್ಯಾ ಗೌಡ. ಅಲ್ಲದೇ ರಿಂಗಾ ರಿಂಗಾ ರೋಸಸ್ ಸಿನಿಮಾದಲ್ಲೂ ಕಾವ್ಯ ನಟಿಸಿದ್ದಾರೆ. ಮತ್ತಷ್ಟು ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದಾರೆ. ಕಾವ್ಯಾ ಗೌಡ ಅವರು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಾರಾ ಅಣ್ಣಯ್ಯ- ಕಾವ್ಯಾ ಗೌಡ ಅವರು ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರು ಸೀರಿಯಲ್, ಸಿನಿಮಾ ಅಂತಾ ಬ್ಯುಸಿಯಿದ್ದರು. ಈಗ ಶೂಟಿಂಗ್ ಬ್ರೇಕ್ ಹಾಕಿ ಗೋವಾಗೆ ಹಾರಿದ್ದಾರೆ. ಅಲ್ಲಿ ಬೋಲ್ಡ್ ಲುಕ್‌ನಲ್ಲಿ ಸಾರಾ- ಕಾವ್ಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ಫೋಟೋ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದೆ.
ಸ್ಯಾಂಡಲ್‌ವುಡ್ (Sandalwood) ನಟಿ ಸಂಗೀತಾ ಭಟ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಸಲ (Eradane Sala Actress) ನಾಯಕಿ ಸಂಗೀತಾ ಈಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪತ್ನಿಯ ಹೊಸ ಲುಕ್ ನಟ ಸುದರ್ಶನ್ ಅಲಿಯಾಸ್ ತಾಂಡವ್ ಸೂರ್ಯವಂಶಿ ಏನಂದ್ರು ಗೊತ್ತಾ.?
ಚಂದ್ರಚಕೋರಿ, ಭಾಗ್ಯವಂತರು, ಚಂದ್ರಮುಖಿ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಸಂಗೀತಾ ಭಟ್ ತಮಿಳಿನ ಸಿನಿಮಾವೊಂದರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ರು. ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಸೇರಿದಂತೆ ಹಲವು ಚಿತ್ರಗಳಲ್ಲಿ ಸಂಗೀತಾ ಲೀಡ್ ನಾಯಕಿಯಾಗಿ ನಟಿಸಿದ್ದಾರೆ. ಅದರಲ್ಲೂ ಡಾಲಿಗೆ ನಾಯಕಿಯಾದ ಎರಡನೇ ಸಲ ಚಿತ್ರದಲ್ಲಿನ ಸಂಗೀತಾ ನಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್ ಮಮ್ಮಿ ಪ್ರಣಿತಾ ಸುಭಾಷ್
ಸುದರ್ಶನ್ ಜೊತೆ ಸಂಗೀತಾ ಭಟ್ (Sangeetha Bhat) ಮದುವೆಯ (Wedding) ಬಳಿಕ ನಟನೆಯಿಂದ ದೂರ ಸರಿದರು. ಈಗ ಮತ್ತೆ ‘ಕ್ಲಾಂತ’ (Klaantha) ಸಿನಿಮಾದ ಮೂಲಕ ನಟಿ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ.
ಪತಿ ಸುದರ್ಶನ್ ಅವರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದರು. ಈಗ ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್ ಮೂಲಕ ಸುದರ್ಶನ್ ನಾಯಕನಾಗಿ ಶೈನ್ ಆಗ್ತಿದ್ದಾರೆ. ಭಾಗ್ಯಗೆ ಕಾಟ ಕೊಡುವ ಪತಿಯಾಗಿ ತಾಂಡವ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇಬ್ಬರು ಚಿತ್ರರಂಗದಲ್ಲಿ ಇರುವ ಕಾರಣ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡ್ತಿದ್ದಾರೆ.
ಸದ್ಯ ನಟಿ ಸಂಗೀತಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಕೊನೆಗೂ ಮೂಗು ಚುಚ್ಚಿಸಿಕೊಂಡೇ ಅಂತಾ ಪೋಸ್ಟ್ ಮಾಡಿದ್ದಾರೆ. ಮೂಗು ಚುಚ್ಚಿಸಿದ ಬಳಿಕ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ನಯಾ ಲುಕ್ ನೋಡಿ ಪತಿ ಸುದರ್ಶನ್ ಕೂಡ ಖುಷಿಪಟ್ಟಿದ್ದಾರೆ. ನನ್ನ ಹೆಂಡ್ತಿ ಮುದ್ದಾಗಿ ಕಾಣಿಸುತ್ತಿದ್ದಾಳೆ ಅಂತಾ ನಟ ಸುದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಸೀರಿಯಲ್ (Serial) ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಚ್ಚ ಹೊಸ ಧಾರಾವಾಹಿಯೊಂದು ಹೊಸ ಕಥೆಯೊಂದಿಗೆ ಮನೆ ಮಂದಿಗೆಲ್ಲ ಮನರಂಜನೆ ನೀಡಲು ರೆಡಿಯಾಗಿದೆ. ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ (Bhagyalakshmi) ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 10ರಿಂದ ಪ್ರತಿದಿನ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳ ಜೊತೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಸೇಪರ್ಡೆಗೊಳ್ಳಲಿದೆ. ಅಕ್ಟೋಬರ್ 10ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ದೊಡ್ಡ ತಾರಾಬಳಗವನ್ನು ಹೊಂದಿದ್ದು, ಇಡೀ ತಂಡ ಇಂದು ಮಾಧ್ಯಮದೆದುರು ಹಾಜರಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.
ಅಕ್ಕತಂಗಿಯ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ (Sushma) ಕಥಾ ನಾಯಕಿಯಾಗಿ ನಟಿಸುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ (Shamanth Gowda)(ಬ್ರೋ ಗೌಡ), ಸುದರ್ಶನ್, ಪದ್ಮಜಾ ರಾವ್ (Padmaja Rao), ಭೂಮಿಕ, ತಾಂಡವ ಸೂರ್ಯವಂಶಿ ತಾರಾಬಳಗದಲ್ಲಿದ್ದಾರೆ. ಈ ಧಾರಾವಾಹಿ ಮೂಲಕ ಬಿಗ್ ಬಾಸ್ ಬ್ರೋ ಗೌಡ ಇದೇ ಮೊದಲ ಬಾರಿಗೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಜೈ ಮಾತಾ ಕಂಬೈನ್ಸ್ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಸುಷ್ಮಾ ಮಾತನಾಡಿ ಭಾಗ್ಯಲಕ್ಷ್ಮೀ ಮೂಲಕ ಹತ್ತು ವರ್ಷದ ನಂತರ ಮತ್ತೆ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ. ಜೀವನದಲ್ಲಿ ಏನೇ ಬಂದರು ಅದನ್ನು ಖುಷಿಯಿಂದ ಸ್ವಾಗತಿಸಿ ಸುತ್ತಮುತ್ತಲಿನವರನ್ನು ಖುಷಿಯಿಂದ ಇಡುವುದು, ಮನೆಯ ಜವಾಬ್ದಾರಿಯನ್ನು ಹೊತ್ತು ಇಡೀ ಜೀವನವನ್ನೇ ಸಂಸಾರಕ್ಕಾಗಿ ಮುಡಿಪಾಗಿಟ್ಟಿರೋ ಹೆಣ್ಣು ಮಗಳ ಪಾತ್ರ. ತನ್ನ ಪ್ರೀತಿಯ ತಂಗಿಗೆ ಒಳ್ಳೆಯ ವರನನ್ನು ನೋಡಿ ಆಕೆಯನ್ನು ಮದುವೆ ಮಾಡಬೇಕು ಆಕೆ ಖುಷಿಯಿಂದ ಇರಬೇಕು ಎಂಬ ಉದ್ದೇಶ ಇರುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ತಿಳಿಸಿಕೊಟ್ರು.
ಹಿರಿಯ ಕಲಾವಿದೆ ಪದ್ಮಜಾ ರಾವ್ ಮಾತನಾಡಿ ಈ ಧಾರಾವಾಹಿಯಲ್ಲಿ ನನ್ನದು ಅತ್ತೆ ಪಾತ್ರ. ಇಲ್ಲಿ ನಾನು ಗಟ್ಟಿಗಿತ್ತಿಯಾದ ಅತ್ತೆ ಪಾತ್ರ ನಿರ್ವಹಿಸುತ್ತಿದ್ದೇನೆ. ಜೋರು ಮಾಡುವ, ಗದರುವ ಪಾತ್ರ ನನ್ನದು. ಇಲ್ಲಿವರೆಗೂ ಸಾಪ್ಟ್ ಕ್ಯಾರೆಕ್ಟರ್ ಮಾಡಿದ್ದ ನನಗೂ ಬದಲಾವಣೆ ಬೇಕಿತ್ತು ಈ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ. ಆರಂಭದಲ್ಲಿ ಪಾತ್ರಕ್ಕೆ ಒಗ್ಗಿಕೊಳ್ಳಲು ಮುರ್ನಾಲ್ಕು ದಿನ ಬೇಕಾಯಿತು ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದ್ರು. ಕಲರ್ಸ್ ಫಿಕ್ಷನ್ ಹೆಡ್ ಜೆಡಿ ಮಾತನಾಡಿ ಭಾಗ್ಯಲಕ್ಷ್ಮೀ ಸಂಬಂಧಗಳ ಬೆಲೆಯನ್ನು ಸಾರುವ ಧಾರಾವಾಹಿ. ನಾವು ಯಾವಾಗಲೂ ಒಂದೇ ಜಾನರ್ ಧಾರಾವಾಹಿ ಮಾಡೋದಿಲ್ಲ. ಪ್ರತಿ ಭಾರೀ ಹೊಸತನ್ನು ಕೊಡಲು ನಮ್ಮ ತಂಡ ಪ್ರಯತ್ನಿಸುತ್ತಿರುತ್ತೇವೆ. ಸಂಬಂಧಗಳ ಮೇಲೆ ಬರೆದಿರುವ ಅಕ್ಕತಂಗಿಯರ ಕಥೆ ಇದು. ವಿಭಿನ್ನ ಕಥಾಹಂದರವಿದೆ. ಖಂಡಿತ ಒಂದು ಹೊಸ ಅನುಭವವನ್ನು ವೀಕ್ಷಕರಿಗೆ ಇದು ನೀಡಲಿದೆ ಎಂದು ಸೀರಿಯಲ್ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡ್ರು.
Live Tv
[brid partner=56869869 player=32851 video=960834 autoplay=true]