Tag: ಭವ್ಯಾ ಗೌಡ

  • BBK 11: ಟಾಸ್ಕ್ ವೇಳೆ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿಗೆ ಪೆಟ್ಟು

    BBK 11: ಟಾಸ್ಕ್ ವೇಳೆ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿಗೆ ಪೆಟ್ಟು

    ದೊಡ್ಮನೆಯಲ್ಲಿ (BBK 11) ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಮೇಲೆ ಉಳಿವಿಕೆಗಾಗಿ ಸ್ಪರ್ಧಿಗಳ ಸೆಣಸಾಟ ಜೋರಾಗಿದೆ. ಇನ್ನೂ ಬಿಗ್ ಬಾಸ್ ಕೊಟ್ಟ ಟಾಸ್ಕ್‌ವೊಂದರಲ್ಲಿ ಎತ್ತರದಿಂದ ಶೋಭಾ ಶೆಟ್ಟಿ ಬಿದ್ದಿದ್ದಾರೆ. ಪೆಟ್ಟು ಮಾಡಿಕೊಂಡ ಶೋಭಾರನ್ನು ನೋಡಿ ಸ್ಪರ್ಧಿಗಳು ಗಾಬರಿಯಾಗಿದ್ದಾರೆ. ಇದನ್ನೂ ಓದಿ:‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

    ‘ಬಿಗ್ ಬಾಸ್’ ಮನೆಯ ಆಟಕ್ಕೆ 50 ದಿನ ಪೂರೈಸಿದೆ. ರೋಚಕ ತಿರುವು ಪಡೆದು ಮುನ್ನುಗ್ಗತ್ತಿದೆ. ಇನ್ನೂ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಅವರು ಉಗ್ರಂ ಮಂಜುಗೆ ತಿರುಗೇಟು ಕೊಟ್ಟಿರುವ ರೀತಿ ನೋಡಿ ಅವರು ಎಂತಹ ಗಟ್ಟಿ ಸ್ಪರ್ಧಿ ಎಂಬುದು ಮನೆ ಮಂದಿ ಗೊತ್ತಾಗಿದೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ಬಂದ ಕೀರ್ತಿ

    ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ಟೀಮ್‌ಗಳಾಗಿ ವಿಂಗಡಿಸಿದ್ದಾರೆ. ಎದುರಾಳಿ ತಂಡ ಭವ್ಯಾಗಿಂತ (Bhavya Gowda) ವೇಗವಾಗಿ ಟಾಸ್ಕ್ ಪೂರ್ಣಗೊಳಿಸಬೇಕು ಎಂಬ ಆತುರದಲ್ಲಿ ಶೋಭಾ ಆಟ ಆಡುವಾಗ ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಸಹಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.

    ಶೋಭಾಗೆ ತೀವ್ರವಾಗಿ ಪೆಟ್ಟು ಆಗಿದ್ಯಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ನಟಿಗೆ ಏನಾಗಿದೆ ಎಂಬುದನ್ನು ಕಾದುನೋಡಬೇಕಿದೆ.

  • BBK 11: ‘ಪಾರು’ನ ಕೆಣಕಿದ ಭವ್ಯಾ- ದೊಡ್ಮನೆಯಲ್ಲಿ ನಾಮಿನೇಷನ್‌ ಬಿಸಿ

    BBK 11: ‘ಪಾರು’ನ ಕೆಣಕಿದ ಭವ್ಯಾ- ದೊಡ್ಮನೆಯಲ್ಲಿ ನಾಮಿನೇಷನ್‌ ಬಿಸಿ

    ಅಂತೂ ಇಂತೂ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಭುಡಕ್ಕೆ ಬೆಂಕಿ ಬಿದ್ದಾಗಲೇ ಅಲ್ವಾ? ಎಚ್ಚೆತ್ತಿಕೊಳ್ಳೋದು. ಹಾಗೆಯೇ ನಾಮಿನೇಷನ್ ಪ್ರಕ್ರಿಯೆ ಬಂದಾಗಲೇ ತಾವು ಸೇಫ್ ಆಗೋಕೆ ಸ್ಪರ್ಧಿಗಳ ಮೈಂಡ್‌ ಗೇಮ್‌ ಶುರುವಾಗೋದು. ಇಲ್ಲೂ ಹಾಗೇ ಆಗಿದೆ. ಸೈಲೆಂಟ್ ಆಗಿರೋ ‘ಪಾರು’ ಮೋಕ್ಷಿತಾರನ್ನು (Mokshitha Pai) ಭವ್ಯಾ ಗೌಡ ಕೆಣಸಿದ್ದಾರೆ.

    ದೊಡ್ಮನೆಯಲ್ಲಿ (Bigg Boss Kannada 11) ಮೊದಲ ಎಲಿಮಿನೇಷನ್‌ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇಡೀ ಮನೆ ಚೈತ್ರಾ ಕುಂದಾಪುರ ಅನ್ನ ನಾಮಿನೇಟ್ ಮಾಡಿದ್ರೆ, ಇತ್ತ ಭವ್ಯ ಗೌಡ ಅದ್ಯಾಕೋ ಏನೋ? ಮೋಕ್ಷಿತಾ ಪೈ ಹಿಂದೆ ಬಿದ್ದಿದ್ದಾರೆ. ಆದರೆ, ನಾಮಿನೇಟ್ ಮಾಡಿರೋದಕ್ಕೆ ಕೊಟ್ಟ ಕಾರಣ ಏನು ಗೊತ್ತಾ? ಮೋಕ್ಷಿತಾ ಪೈ ಮಾತು ಆಡೋದಿಲ್ಲ. ತುಂಬಾನೆ ಸೈಲೆಂಟ್ ಆಗಿದ್ದಾರೆ ಅನ್ನೋದೇ ಭವ್ಯಾರ ವಾದ. ಅದನ್ನೇ ಗುರಿಯಾಸಿಕೊಂಡು ಮೋಕ್ಷಿತಾರನ್ನು ನಾಮಿನೇಟ್‌ ಮಾಡಿದ್ದಾರೆ ಭವ್ಯಾ. ಇದನ್ನೂ ಓದಿ:4ನೇ ಮದುವೆಗೆ ಸಜ್ಜಾದ ತಮಿಳು ನಟಿ ವನಿತಾ ವಿಜಯ್ ಕುಮಾರ್

    ಮೋಕ್ಷಿತಾ ನೀವು ತುಂಬಾನೇ ಸೈಲೆಂಟ್ ಆಗಿದ್ದೀರಿ. ಯಾರ ಜೊತೆಗೂ ನೀವು ಇನ್ನೂ ಬರೆಯುತ್ತಿಲ್ಲ. ನಾನು ನೋಡ್ತಾನೇ ಇದ್ದೇನೆ. ನನ್ನ ಜೊತೆಗೆ ಕೂಡ ಮಾತನಾಡುತ್ತಿಲ್ಲ. ನೀವು ಸೈಲೆಂಟ್ ಆಗಿರೋದ್ದಕ್ಕೆ ನಾನು ನಿಮ್ಮ ಹೆಸರು ನಾಮಿನೇಟ್ ಮಾಡುತ್ತಿದ್ದೇನೆ ಅಂತಲೇ ಭವ್ಯಾ ನೇರವಾಗಿ ಹೇಳಿದ್ದಾರೆ.

    ಭವ್ಯಾ (Bhavya Gowda) ಮಾತಿಗೆ ಮೋಕ್ಷಿತಾ ಕೂಡ ಪ್ರತಿಯುತ್ತರ ನೀಡಿದ್ದಾರೆ. ನಾನು ಎಲ್ಲರ ಜೊತೆಗೆ ಮಾತನಾಡುತ್ತೇನೆ. ಸ್ವರ್ಗದಲ್ಲಿರೋರ ಜೊತೆಗೂ ಮಾತನಾಡಿದ್ದೇನೆ. ಆದರೆ, ನೀವೇ ನನ್ನ ಎದುರು ಬಂದಿಲ್ಲ. ಬರದೇ ಹೇಗೆ ಮಾತನಾಡೋಕೆ ಸಾಧ್ಯ ಆಗುತ್ತದೆ ಹೇಳಿ? ಹೀಗೆ ಪ್ರಶ್ನೆ ಮಾಡಿರೋ ಮೋಕ್ಷಿತಾ ನಾಮಿನೇಷನ್ ಮಾಡಿದಕ್ಕೆ ಬೇಸರ ಏನೂ ಇಲ್ಲ. ಅದು ನಿಮ್ಮ ಅಭಿಪ್ರಾಯವೇ ಆಗಿದೆ. ಅದನ್ನು ನಾನು ಗೌರವಿಸುತ್ತೇನೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದ್ರೆ, ಈ ಸ್ಪರ್ಧಿಗಳು ಒಳ್ಳೆಯ ಫ್ರೆಂಡ್ಸ್ ಆಗುತ್ತಾರಾ? ದೊಡ್ಮನೆ ಕಿಚ್ಚು ಹೆಚ್ಚಾಗುತ್ತಾ? ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಮೋಕ್ಷಿತಾ ಪೈ ಅವರು ‘ಪಾರು’ ಸೀರಿಯಲ್‌ (Paaru Serial) ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಭವ್ಯಾ ಗೌಡ ಅವರು ‘ಗೀತಾ’ (Geetha Serial) ಸೀರಿಯಲ್‌ನಲ್ಲಿ ನಟಿಸಿದ್ದರು.

  • BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ

    BBK 11: ವಿಶೇಷ ಅಧಿಕಾರದೊಂದಿಗೆ ಸ್ವರ್ಗದ ಮನೆಗೆ ಕಾಲಿಟ್ಟ ಭವ್ಯಾ, ಯಮುನಾ

    ಬಿಗ್ ಬಾಸ್ ಮನೆಗೆ ಭವ್ಯಾ (Bhavya Gowda) ಮತ್ತು ಯಮುನಾ (Yamuna Srinidhi) ಕಾಲಿಟ್ಟಿದ್ದಾರೆ. ಮೊದಲ ಇಬ್ಬರೂ ಸ್ವರ್ಧಿಗಳಾಗಿರುವ ಭವ್ಯಾ ಮತ್ತು ಯಮುನಾಗೆ ದೊಡ್ಮನೆಯ ಸ್ವರ್ಗಕ್ಕೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್

    ಭವ್ಯಾ ಮೊದಲ ಸ್ವರ್ಧಿಯಾಗಿದ್ರೆ, ಎರಡನೇ ಸ್ವರ್ಧಿಯಾಗಿ ಬಿಗ್ ಬಾಸ್‌ಗೆ (Bigg Boss Kannada 11) ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ಸ್ಪರ್ಧಿಗಳಾಗಿರುವ ಕಾರಣ ಇಬ್ಬರೂ ಸೀದಾ ದೊಡ್ಮನೆಯ ಸ್ವರ್ಗಕ್ಕೆ ಕಾಲಿಡಲು ಅವಕಾಶ ನೀಡಲಾಗಿದೆ. ಭವ್ಯಾ ಮತ್ತು ಯಮುನಾ ಅವರು ಬಿಗ್ ಬಾಸ್ ಮನೆಯ ಅದ್ಧೂರಿತನ ನೋಡಿ ಸಂಭ್ರಮಿಸಿದ್ದಾರೆ.

    ಜೊತೆಗೆ ಇಬ್ಬರಿಗೂ ವಿಶೇಷ ಅಧಿಕಾರವನ್ನು ಕೊಟ್ಟಿದ್ದಾರೆ. ಬರುವ ಸ್ಪರ್ಧಿಗಳು ನಡೆ, ನುಡಿ ನೋಡಿ ಅವರು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಎಂದು ಅಭಿಪ್ರಾಯ ತಿಳಿಸಬೇಕು. ಇನ್ನೂ ಇಬ್ಬರೂ ಕೂಡ ಗಟ್ಟಿ ಸ್ಪರ್ಧಿಗಳಾಗಿದ್ದು, ದೊಡ್ಮನೆಯ ಆಟ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಅಂದಹಾಗೆ, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಅಧಿಕೃತವಾಗಿ ಇನ್ನೂ ಅನಾವರಣ ಆಗಬೇಕಿದೆ.

  • Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

    Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

    ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸುದೀಪ್ (Sudeep) ನಿರೂಪಣೆಯ ಪವರ್‌ಫುಲ್ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಬೆನ್ನಲ್ಲೇ, ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ವೈರಲ್ ಆಗ್ತಿದೆ. ಇದನ್ನೂ ಓದಿ:ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

    ಇದೇ ಸೆ.29ಕ್ಕೆ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಹೊಸ ಸೀಸನ್‌ನಲ್ಲಿ ಯಾರೆಲ್ಲಾ ದೊಡ್ಮನೆಗೆ ಬರಬಹುದು ಎಂದು ಒಂದಿಷ್ಟು ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ‘ಗಿಚ್ಚಿ ಗಿಲಿಗಿಲಿ 3’ ವಿನ್ನರ್ ಆದ ಹುಲಿ ಕಾರ್ತಿಕ್ (Huli Karthik) ಹೆಸರು ಸದ್ದು ಮಾಡುತ್ತಿದೆ. ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.

    ‘ಬೃಂದಾವನ’ ಸೀರಿಯಲ್ ನಟಿ ಅಮೂಲ್ಯ ಭಾರದ್ವಾಜ್ (Amulya Bharadwaj) ನಟನೆ ಮೂಲಕ ಮನಗೆದ್ದಿದ್ದಾರೆ. ಅವರು ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕದ್ದಿದ್ದಾರೆ. ಅವರು ಬಿಗ್‌ ಬಾಸ್‌ ಶೋಗೆ ಬರಲಿದ್ದಾರೆ ಎನ್ನಲಾಗಿದೆ.

    ‘ಒಲವಿನ ನಿಲ್ದಾಣ’ ಸೀರಿಯಲ್‌ನ ಹೀರೋ ಅಕ್ಷಯ್ ಕುಮಾರ್ ‘ಬಿಗ್’ ಮನೆಗೆ ಬರುವ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಲವರ್ ಬಾಯ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ:ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

    ಕಿರುತೆರೆ ನಟಿ ಭವ್ಯಾ ಗೌಡ (Bhavya Gowda) ಅವರು `ಗೀತಾ’ ಸೀರಿಯಲ್ ಮುಗಿದ ಮೇಲೆ ಬ್ರೇಕ್ ತೆಗೆದುಕೊಂಡಿದ್ದಾರೆ. ಫೋಟೋಶೂಟ್, ಬ್ರ್ಯಾಂಡ್ ಪ್ರಮೋಷನ್ ಅಂತ ಬ್ಯುಸಿಯಾಗಿದ್ದಾರೆ. ಇವರು ಬಿಗ್ ಬಾಸ್ ಬರುವ ಬಗ್ಗೆ ಗುಮಾನಿ ಹಬ್ಬಿದೆ. ಇನ್ನೊಂದು ಇವರು ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Amulya) ಅವರ ಸಂಬಂಧಿಯಾಗಿದ್ದಾರೆ.

    ಇನ್ನೂ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿ ಸೈ ಎನಿಸಿಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ ಬರಲಿದ್ದಾರೆ ಎನ್ನಲಾಗಿದೆ. ಗೌರವ್ ಶೆಟ್ಟಿ, ದೀಪಕ್ ಗೌಡ, ತುಕಾಲಿ ಮಾನಸ, ವರುಣ್ ಆರಾಧ್ಯ ಸೇರಿದಂತೆ ಅನೇಕರ ಹೆಸರು ಚಾಲ್ತಿಯಲ್ಲಿದೆ. ಆದರೆ ಎಲ್ಲದಕ್ಕೂ ಶೋ ಶುರುವಾಗುವವರೆಗೂ ಕಾದುನೋಡಬೇಕಿದೆ.

  • ದೊಡ್ಮನೆ ಆಟಕ್ಕೆ ವೇದಿಕೆ ಸಜ್ಜು- ಸ್ಪರ್ಧಿಗಳಾಗಿ ಬರುವವರು ಇವರೇನಾ?

    ದೊಡ್ಮನೆ ಆಟಕ್ಕೆ ವೇದಿಕೆ ಸಜ್ಜು- ಸ್ಪರ್ಧಿಗಳಾಗಿ ಬರುವವರು ಇವರೇನಾ?

    ಟಿವಿ ಪರದೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ವೇದಿಕೆ ಸಿದ್ಧವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ (Bigg Boss Kannada 11) ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ರಾಮ್ ಪೋತಿನೇನಿ ಜೊತೆ ಕುಣಿದು ಕುಪ್ಪಳಿಸಿದ ಹಾಟ್ ಬೆಡಗಿ ಕಾವ್ಯಾ ಥಾಪರ್

    ಸುದೀಪ್‌ (Sudeep) ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಶೋ ಅದ್ಧೂರಿಯಾಗಿ ಮುಗಿದಿದೆ. ಮುಂದಿನ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಇದೇ ಅಕ್ಟೋಬರ್‌ನಿಂದ ಬಿಗ್ ಬಾಸ್ ಮುಂದಿನ ಸೀಸನ್‌ಗೆ ಶುರುವಾಗಲಿದೆ ಎಂಬ ಸುದ್ದಿ ಈಗ ಸೋಷಿಯಲ್‌ ಮೀಡಿಯಾ ತುಂಬೆಲ್ಲಾ ಸದ್ದು ಮಾಡುತ್ತಿದೆ.

    https://twitter.com/Riskyprince17/status/1813805677086949777?ref_src=twsrc%5Etfw%7Ctwcamp%5Etweetembed%7Ctwterm%5E1813805677086949777%7Ctwgr%5E8cdc83b1c0f082aca9955abc6cb097d866706c42%7Ctwcon%5Es1_c10&ref_url=https%3A%2F%2Fvistaranews.com%2Fbigg-boss-kannada%2Fbigg-boss-kannada-11-starting-date-and-contestants-list%2F696964.html

    ಕನ್ನಡದ ‘ಬಿಗ್ ಬಾಸ್’ 11ಕ್ಕೆ ಅಕ್ಟೋಬರ್‌ 3ನೇ ವಾರದಲ್ಲಿ ಆರಂಭವಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ಒಟಿಟಿ 2 ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ.

    ಈ ಮನೆಗೋಸ್ಕರ ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಲು ತಿಂಗಳಾನುಗಟ್ಟಲೇ ಸಮಯ ಕೂಡ ಬೇಕಾಗಿದೆ. ಹಾಗಾಗಿ ಕೂಡ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೂ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಗಳ ಆಯ್ಕೆ ಮಾಡಲಾಗತ್ತದೆ. ಪ್ರತಿ ಸೀಸನ್ ಅಂತೆಯೇ ಈ ಬಾರಿಯೂ ಕೂಡ ಹಲವರ ಹೆಸರು ಸದ್ದು ಮಾಡುತ್ತಿದೆ.

    ‘ಬೃಂದಾವನ’ ನಟ ವರುಣ್ ಆರಾಧ್ಯ (Varun Aradhya), ಯೂಟ್ಯೂಬರ್ ವರ್ಷಾ ಕಾವೇರಿ (Varsha Kaveri), ನಟ ತ್ರಿವಿಕ್ರಮ್, ತುಕಾಲಿ ಸಂತು ಪತ್ನಿ ಮಾನಸಾ, ‘ಪಾರು’ ಖ್ಯಾತಿಯ ಮೋಕ್ಷಿತಾ ಪೈ, ಭವ್ಯಾ ಗೌಡ (Bhavya Gowda), ರೀಲ್ಸ್ ರೇಷ್ಮಾ, ‘ಮಜಾಭಾರತ’ ರಾಘವೇಂದ್ರ ಸೇರಿದಂತೆ ಅನೇಕರ ಹೆಸರು ಕೇಳಿ ಬಂದಿದೆ. ಇನ್ನೂ ದೊಡ್ಮನೆಗೆ ಕಾಲಿಡುವ ಮುನ್ನ ನಾವು ಹೋಗ್ತೀವಿ ಎಂದು ಯಾರು ಹೇಳಲ್ಲ. ಅದು ವಾಹಿನಿಯ ನಿಯಮವಾಗಿದೆ. ದೊಡ್ಮನೆ ಆಟ ಶುರುವಾದ್ಮೇಲೆ ಯಾರು ಸ್ಪರ್ಧಿಗಳು ಎಂಬುದು ಖಚಿತವಾಗಲಿದೆ.

  • ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ರೆಡಿ ಎಂದ ಕ್ವೀನ್ಸ್

    ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ರೆಡಿ ಎಂದ ಕ್ವೀನ್ಸ್

    ನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳಿಗಾಗಿ ಹಲವರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್‌ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ‘ಕ್ವೀನ್ ಪ್ರೀಮಿಯರ್ ಲೀಗ್’ (Queens Premiere League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಮಾಡೆಲ್ ಭಾಗವಹಿಸಲು ವೇದಿಕೆ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ ತಂಡದ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್‌ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಲೋಗೋ ಬಿಡುಗಡೆ ಮಾಡಿದ ಪುಷ್ಪಕುಮಾರಿ, ಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿ ಎಂದರು. ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಜೂನ್ ತಿಂಗಳಲ್ಲಿ ಈ ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜೊತೆಗೆ ಆ್ಯಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ. ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ ಈ ಕ್ರಿಕೆಟ್ ತಂಡದಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿಯರು ಹೆಚ್ಚಾಗಿ ಕೈ ಜೋಡಿಸಬೇಕು ಎಂದರು.

    ನಟಿ ಭವ್ಯಾ ಗೌಡ (Bhavya Gowda) ಮಾತನಾಡಿ, ಈ ಕಾನ್ಸೆಪ್ಟ್ ನನ್ನ ಮೈಂಡ್‌ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್‌ಸಿಬಿ ಹುಡುಗಿಯರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿ ಎಂದರು.

    ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ಕ್ವೀನ್ ಪ್ರೀಮಿಯರ್ ಲೀಗ್ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ ತಂಡದ ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.

  • ಟಿಪಿಎಲ್ ಆಯ್ತು ಈಗ IPT12ಗೆ ಚಾಲನೆ ಕೊಟ್ಟ ಎನ್ 1 ಕ್ರಿಕೆಟ್ ಅಕಾಡೆಮಿ

    ಟಿಪಿಎಲ್ ಆಯ್ತು ಈಗ IPT12ಗೆ ಚಾಲನೆ ಕೊಟ್ಟ ಎನ್ 1 ಕ್ರಿಕೆಟ್ ಅಕಾಡೆಮಿ

    ಕಿರುತೆರೆ ಕಲಾವಿದರಿಗಾಗಿ ಟಿಪಿಎಲ್-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನ್‌ಮೆಂಟ್ ನಡೆಸಿಕೊಂಡು ಬರುತ್ತಿರುವ ಎನ್ 1 ಕ್ರಿಕೆಟ್ ಅಕಾಡೆಮಿ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು ಟಿಪಿಎಲ್ ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ.ಆರ್ ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ಕೊಟ್ಟಿದ್ದಾರೆ. ಇದನ್ನೂ ಓದಿ:ಫಹಾದ್ ಫಾಸಿಲ್ ಸಿನಿಮಾ ನೋಡಿ ಹೊಗಳಿದ ಸಮಂತಾ

    ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್. ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ಲೋಗೋ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಈ ಕಾರ್ಯಕ್ರಮ ನೆರವೇರಿದೆ. ನಟಿಯರಾದ ತನಿಷಾ ಕುಪ್ಪಂಡ, ಭವ್ಯಾ ಗೌಡ, ಎನ್ 1 ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸುನಿಲ್ ಕುಮಾರ್, ಶೈಲೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಬಳಿಕ ನಟಿ ತನಿಷಾ ಕುಪ್ಪಂಡ (Tanisha Kuppanda) ಮಾತನಾಡಿ, ಎನ್ 1 ಕ್ರಿಕೆಟ್ ಅಕಾಡೆಮಿ ಮೂಲಕ ಹಲವು ಟೂರ್ನಮೆಂಟ್ ಮಾಡುವ ಮೂಲಕ ಸುನಿಲ್ ಅವರು ಖ್ಯಾತಿ ಪಡೆದಿದ್ದಾರೆ. ನಾನು ಇದಕ್ಕೂ ಮುನ್ನ ಟಿಪಿಎಲ್ ಸೀಸನ್ ಒಂದರಲ್ಲಿ ಟೀಂ ಒಂದಕ್ಕೆ ಬ್ರ‍್ಯಾಂಡ್ ಅಂಬಾಸಿಡರ್ ಆಗಿದ್ದೆ. ಯಾವುದೇ ಪ್ರೊಫೆಷನ್ ಆಗಲಿ ಕ್ರಿಕೆಟ್ ಅಂದರೆ ಪ್ರಾಣ ಕೊಡುವವರು ಬಹಳಷ್ಟು ಜನ ಇದ್ದಾರೆ. ಈ ಟೂರ್ನಮೆಂಟ್ ವಿಶೇಷತೆ ಏನೆಂದರೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಇದರಲ್ಲಿ ಭಾಗಿಯಾಗಬಹುದು. ಎನ್ 1 ಕ್ರಿಕೆಟ್ ಅಕಾಡೆಮಿ ಅಂದರೆ ಹೊಸ ಪ್ರಯತ್ನ. ಈ ಮೂಲಕ ಮಾಧ್ಯಮದವರು, ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರಿಗೆ ಏರ್ಪಡಿಸಲಾಗಿದೆ ಎಂದರು.

    ಶೈಲೇಶ್ ಅವರು ಮಾತನಾಡಿ, ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚೆನ್ನಾಗಿ ಆಡುವ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ತಂಡಗಳು, ಸೇರಿದಂತೆ ಮತ್ತಿತರ ಅಪ್ ಡೇಟ್ ನೀಡಲಾಗುತ್ತದೆ.

  • ‘ಗೀತಾ’ ಸೀರಿಯಲ್‌ಗೆ ಬ್ರೇಕ್ ಬೀಳುತ್ತಿದ್ದಂತೆ ಭವ್ಯಾ ಗೌಡ ಟೆಂಪಲ್ ರನ್

    ‘ಗೀತಾ’ ಸೀರಿಯಲ್‌ಗೆ ಬ್ರೇಕ್ ಬೀಳುತ್ತಿದ್ದಂತೆ ಭವ್ಯಾ ಗೌಡ ಟೆಂಪಲ್ ರನ್

    ಕಿರುತೆರೆ ನಟಿ ಭವ್ಯಾ ಗೌಡ (Bhavya Gowda) ಅವರು ‘ಗೀತಾ’ ಸೀರಿಯಲ್ (Geetha Serial) ಮೂಲಕ ಮನೆ ಮಾತಾಗಿದ್ದರು. ಈ ಸೀರಿಯಲ್‌ನಿಂದ ಅಪಾರ ಅಭಿಮಾನಿಗಳ ಬಳಗ ಕೂಡ ನಟಿ ಹೊಂದಿದ್ದರು. ಇದೀಗ ಜನಪ್ರಿಯ ಗೀತಾ ಧಾರಾವಾಹಿ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ನಟಿ ಭವ್ಯಾ ಧರ್ಮಸ್ಥಳ, ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

    ‘ಗೀತಾ’ ಸೀರಿಯಲ್ 4 ವರ್ಷಗಳ ಕಾಲ ಟಿವಿ ಪ್ರೇಕ್ಷಕರನ್ನು ರಂಜಿಸಿತ್ತು. ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಭವ್ಯಾ ಗಮನ ಸೆಳೆದಿದ್ದರು. ಟಿಕ್ ಟಾಕ್ ಸ್ಟಾರ್ ಆಗಿದ್ದ ಭವ್ಯಾ ಕಿರುತೆರೆ ನಟಿಯಾಗಿ ಗೆದ್ದಿದ್ದರು. ಧನುಷ್ ಗೌಡ-ಭವ್ಯಾ ಜೋಡಿ ಪ್ರೇಕ್ಷಕರಿಗೆ ಹಿಡಿಸಿತ್ತು. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಗೂಗ್ಲಿ ಬೆಡಗಿ

     

    View this post on Instagram

     

    A post shared by Bhavya Gowda (@bhavyagowda670)

    ಈಗ ಸತತ 4 ವರ್ಷಗಳು ರಂಜಿಸಿದ್ದ ‘ಗೀತಾ’ ಧಾರಾವಾಹಿ ಜರ್ನಿ ಅಂತ್ಯವಾಗಿದೆ. ಹೊಸ ಜರ್ನಿಗೆ ಮುನ್ನುಡಿ ಬರೆಯುವ ಮೊದಲು ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ. ಧರ್ಮಸ್ಥಳ ಮಂಜುನಾಥ ಮತ್ತು ಕಟೀಲು ದುರ್ಗಾಪರವೇಶ್ವರಿ ದೇವಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಐರೆನ್ ಲೆಗ್ ಎಂದು ಕೆಣಕುವವರಿಗೆ ಕೆಲಸದ ಮೂಲಕ ಉತ್ತರ ಕೊಟ್ರು ಪೂಜಾ ಹೆಗ್ಡೆ

    ‘ಗೀತಾ’ ಸೀರಿಯಲ್ ನಂತರ ಮುಂದೇನು? ಎಂಬ ಪ್ರಶ್ನೆ ಭವ್ಯಾ ಅಭಿಮಾನಿಗಳಲ್ಲಿ ಕಾಡ್ತಿದೆ. ಮತ್ತೆ ಕಿರುತೆರೆಗೆ ಎಂಟ್ರಿ ಕೊಡ್ತಾರಾ? ಅಥವಾ ಬೆಳ್ಳಿಪರದೆಯಲ್ಲಿ ಮಿಂಚುತ್ತಾರಾ ಕಾದುನೋಡಬೇಕಿದೆ.

  • ಅದ್ದೂರಿಯಾಗಿ ನಡೆಯಿತು ‘ಗೀತಾ’ ಸೀರಿಯಲ್ ಹೀರೋ ಧನುಷ್ ಎಂಗೇಜ್‌ಮೆಂಟ್

    ಅದ್ದೂರಿಯಾಗಿ ನಡೆಯಿತು ‘ಗೀತಾ’ ಸೀರಿಯಲ್ ಹೀರೋ ಧನುಷ್ ಎಂಗೇಜ್‌ಮೆಂಟ್

    ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha) ಹೀರೋ ಧನುಷ್ ಗೌಡ್ (Dhanush Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಜೊತೆ ಅದ್ದೂರಿಯಾಗಿ ಧನುಷ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ‘ಗೀತಾ’ ಸೀರಿಯಲ್ ಮೂಲಕ ಮನೆಮಾತಾದ ವಿಜಯ್ ಅಲಿಯಾಸ್ ಧನುಷ್ ಗೌಡ ಅವರು ಗ್ರ್ಯಾಂಡ್‌ ಆಗಿ ಸಂಜನಾ (Sanjana Prabhu) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ.

    ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಧನುಷ್-ಸಂಜನಾ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿದೆ. ‘ಗೀತಾ’ ಸಹನಟಿ ಭವ್ಯಾ ಗೌಡ ಮತ್ತು ಕುಟುಂಬಸ್ಥರು, ಆಪ್ತರು ಅಷ್ಟೇ ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಾರ್ಕ್ ಆ್ಯಂಟನಿ’ ಚಿತ್ರ ನಿರ್ದೇಶಕ ಅಧಿಕ್

    ಸೋಷಿಯಲ್ ಮೀಡಿಯಾದಲ್ಲಿ ನಟಿ ಭವ್ಯಾ ಗೌಡ (Bhavya Gowda) ಅವರು ಧನುಷ್-ಸಂಜನಾ ಜೊತೆಗಿನ ಫೋಟೋ ಹಂಚಿಕೊಂಡು ಹೊಸ ಬಾಳಿಗೆ ಶುಭಕೋರಿದ್ದಾರೆ. ಧನುಷ್ ಎಂಗೇಜ್‌ಮೆಂಟ್ ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಂದಹಾಗೆ ಧನುಷ್‌ ನಿಶ್ಚಿತಾರ್ಥದ ಸುಂದರ ಫೋಟೋಗಳು ಸುಜಯ್‌ ನಾಯ್ಡು ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಇನ್ನೂ ‘ಗೀತಾ’ (Geetha) ಧಾರಾವಾಹಿಯ ಭವ್ಯಾ- ಧನುಷ್ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಲವ್‌ನಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಇಬ್ಬರೂ ಈ ವಿಚಾರವನ್ನು ತಳ್ಳಿಹಾಕಿದ್ದರು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದರು ಈ ಜೋಡಿ. ಸಂಜನಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲಾ ಅಂತೆ ಕಂತೆ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ ನಟ ಧನುಷ್.

  • Bigg Boss Kannada 10: ದೊಡ್ಮನೆಗೆ ಬರಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ

    Bigg Boss Kannada 10: ದೊಡ್ಮನೆಗೆ ಬರಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ

    ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ಆಟ ಶುರುವಾಗಲು ನಾಲ್ಕು ದಿನ ಬಾಕಿಯಿದ್ದು, ಈ ಬಾರಿ ದೊಡ್ಮನೆ ಆಟದಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬುದರ ಮತ್ತೊಂದು ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಹರಿದಾಡುತ್ತಿದೆ. ಅಕ್ಟೋಬರ್ 8ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪ್‌ನಿಂಗ್‌ಗೆ ಸಾಕಷ್ಟು ತಯಾರಿ ನಡೆಯುತ್ತಿದ್ದು, ಈಗ ಮತ್ತೆ ಒಂದಿಷ್ಟು ಹೊಸ ಸ್ಪರ್ಧಿಗಳ ಹೆಸರು ವೈರಲ್ ಆಗುತ್ತಿದೆ. ಇದನ್ನೂ ಓದಿ:ನಟ ರಣಬೀರ್ ಕಪೂರ್ ಗೆ ‘ಇಡಿ’ ಶಾಕ್: ವಿಚಾರಣೆಗಾಗಿ ನೋಟಿಸ್

    ದೊಡ್ಮನೆಗೆ ಆಟಕ್ಕೆ ಮೊದಲ ಸ್ಪರ್ಧಿಯಾಗಿ ‘777 ಚಾರ್ಲಿ’ ಎಂಟ್ರಿ ಕೊಡುವ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ. ನಟ ಸುನೀಲ್ ರಾವ್, ಭವ್ಯಾ ಗೌಡ(Bhavya Gowda), ರಘು ಮುಖರ್ಜಿ, ಸಮಾಜ ಸೇವಕಿ ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ‘ಕೆಜಿಎಫ್’ ನಟಿ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ರಕ್ಷಕ್ ಬುಲೆಟ್ ಪ್ರಕಾಶ್, ರ‍್ಯಾಪರ್ ಇಶಾನಿ ಸೇರಿದಂತೆ ಹಲವರು ಬಿಗ್ ಬಾಸ್ ಸ್ಪರ್ಧಿಸುವ ಸ್ಯಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ಯಾವಾಗಿಂದ ಶುರುವಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರಸಾರದ ವೇಳೆಯನ್ನೂ ಅದು ಹೇಳಿಕೊಂಡಿದೆ.

    ಅಕ್ಟೋಬರ್ 8ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ, ಮೊದಲ ದಿನ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಮರುದಿನದಿಂದ ಪ್ರತಿ ರಾತ್ರಿ 9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಪ್ರೋಮೋ ಕೂಡ ಮಾಡಿದೆ.

    ಬಿಗ್ ಬಾಸ್‌ಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ. ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ಚಾರ್ಲಿ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.

    ಸದ್ಯ ವೈರಲ್ ಆಗಿರುವ ಸ್ಪರ್ಧಿಗಳ ಹೆಸರು ಕೇಳಿ ಫ್ಯಾನ್ಸ್ ಖುಷಿ ಪಡ್ತಿದ್ದಾರೆ. ಆದರೆ ಇವರೆಲ್ಲರೂ ದೊಡ್ಮನೆ ಆಟದಲ್ಲಿ ಇರುತ್ತಾರಾ? ಅಕ್ಟೋಬರ್ 8ರವರೆಗೆ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]