ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಹೊಸ ಧಾರಾವಾಹಿ (Serial) ʼಮೈನಾʼ (Maina) ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಫೆಬ್ರುವರಿ 19 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ʻಮೈನಾʼ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ, ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ, ಸೀತೆಯಂಥ ಅಕ್ಕ ರಾಧೆ, ಕಾಲೇಜಿಗೆ ಹೋಗುತ್ತಿರುವ ಅಣ್ಣ.. ಮೈನಾಳ ಪುಟ್ಟ ಗೂಡಲ್ಲಿ ದುಡ್ಡಿಗೆ ಕೊರತೆ; ಪ್ರೀತಿ ವಾತ್ಸಲ್ಯಕ್ಕಲ್ಲ.
ಅಕ್ಕ ರಾಧೆಗೆ ಮದುವೆ ವಯಸ್ಸು ಮೀರುತ್ತಿದೆ; ಸಂಬಂಧ ಕೂಡಿ ಬರುತ್ತಿಲ್ಲ. ಒಂದೊಂದು ಸಲವೂ ಒಂದೊಂದು ಕಾರಣಕ್ಕೆ ಮದುವೆ ಮುರಿದುಹೋಗುತ್ತಿದೆ. ಕೆಲವೊಂದು ಸಂಬಂಧ ಮುರಿಯಲು ಮೈನಾ ನೆಪವಾಗುತ್ತಾಳೆ. ಕಟ್ಟಕಡೆಯದಾಗಿ, ಜವಾಬ್ದಾರಿ ಹೊರಬೇಕಾದ ಅಣ್ಣನೇ ಕೈ ಕೊಟ್ಟು ಹೋದಾಗ ಕಿರಿಮಗಳಾದ ಮೈನಾ ಅಕ್ಕನ ಮದುವೆಯ ಹಿರಿಯ ಜವಾಬ್ದಾರಿ ಹೊತ್ತು ಪಟ್ಟಣಕ್ಕೆ ಹೊರಡುತ್ತಾಳೆ. ಅಲ್ಲಿಂದ ಅವಳ ಪ್ರಯಾಣ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ಮೈನಾ ಪಾತ್ರದಲ್ಲಿ ಜನಪ್ರಿಯ ಕಲಾವಿದೆ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ. ನಾಗಾಭರಣ (Nagabharana), ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ, ಕು.ತಿಶ್ಯ, ಮಾ.ಅರುಣ್, ಮಾ.ರಣವೀರ್ ಮುಂತಾದವರ ತಾರಾಗಣವಿದೆ. ಚಿತ್ರತಾರೆ ಭವ್ಯ ಅಪರೂಪದ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯ ನಿರ್ದೇಶಕರು ಸಂತೋಷ್ ಗೌಡ ಹಾಸನ, ಛಾಯಾಗ್ರಹಣ ಜಗದೀಶ್ ವಾಲಿ ಹಾಗೂ ದಯಾಕರ್, ಸಂಗೀತ ಮಣಿಕಾಂತ ಕದ್ರಿ, ಸಾಹಿತ್ಯ ಕೆ. ಕಲ್ಯಾಣ್, ಸಂಕಲನ ಪ್ರಕಾಶ ಕಾರಿಂಜ ಅವರದ್ದು.
ಆನಂದ್ ಆಡಿಯೋ ಕಂಪನಿಯ ಸಹಸಂಸ್ಥೆ ʻಕೋಮಲ್ ಎಂಟರ್ಪ್ರೈಸಸ್ʼ ಬ್ಯಾನರ್ ಅಡಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಮಹಿಳೆಯರ ಆತ್ಮಬಲದ ಪ್ರತೀಕವಾಗಿ ʻಮೈನಾʼ ಮೂಡಿಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಉದಯ ಟಿವಿ ಕಾರ್ಯಕ್ರಮ ಮುಖ್ಯಸ್ಥರು. ʻಮೈನಾʼ ಧಾರಾವಾಹಿ ಫೆಬ್ರುವರಿ 19 ರಿಂದ ಪ್ರತಿದಿನ (ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಲೀಲಾವತಿ (Leelavathi) ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ನಟಿ ತಾರಾ (Tara), ಸುಧಾರಾಣಿ, ಶ್ರುತಿ (Shruthi), ಮಾಳವಿಕಾ, ಭವ್ಯ (Bhavya) ಅವರು ಲೀಲಾವತಿ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ನಟಿಯರು ಮಾತನಾಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಿಂದ ಹೊರಟ ಲೀಲಾವತಿ ಪಾರ್ಥೀವ ಶರೀರ
ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಾನು ಹೆಚ್ಚು ಒಡನಾಟ ಇಲ್ಲ. ಅವರ ಜೊತೆ ಹೆಚ್ಚು ಆಕ್ಟ್ ಮಾಡೋದಕ್ಕೆ ನನಗೆ ಸನ್ನಿವೇಶ ಇರಲಿಲ್ಲ. ಆದರೆ ವಿನೋದ್ ರಾಜ್ ಜೊತೆ ನಾನು ಆಕ್ಟ್ ಮಾಡಿದ್ದೇನೆ ಎಂದು ತಾರಾ ಮಾತನಾಡಿದ್ದಾರೆ. ವಿನೋದ್ ರಾಜ್ ಮಾತ್ರ ತಾಯಿ ಬಿಟ್ಟು ಬಂದಿರೋದನ್ನು ಎಲ್ಲೂ ನೋಡಿಲ್ಲ. ಹೀಗಾಗಿ ಅವರ ಬಗ್ಗೆ ನನಗೆ ನೋವು ಆಗುತ್ತಿದೆ. ಲೀಲಾವತಿ ಅವರು ಆದರ್ಶ ಜೀವನ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಮುಖ್ಯವಾಗಿ ವಿನೋದ್ ರಾಜ್‌ಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಾರಾ (Tara) ಮಾತನಾಡಿದ್ದಾರೆ.
ನಾನು ನಟಿಸಿದ ಮೊದಲ ಚಿತ್ರದಲ್ಲೇ ಲೀಲಾವತಿ ಅವರ ಜೊತೆ ನಟಿಸುವ ಚಾನ್ಸ್ ಸಿಕ್ಕಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರನ್ನ ಭೇಟಿಯಾಗಿದ್ದೆ, ಇದೀಗ ನಾನು ನಟಿಸುತ್ತಿರೋ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನಗೆ ವೈಯಕ್ತಿಕವಾಗಿ ಲೀಲಾವತಿ ಅವರು ರೋಲ್ ಮಾಡೆಲ್ ಆಗಿದ್ದರು. ನಟಿ, ತಾಯಿಯಾಗಿ ಮಾತ್ರವಲ್ಲ ಪರಿಸರ ಪ್ರೇಮಿಯಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ಲೀಲಾವತಿ ಆದರ್ಶ ವ್ಯಕ್ತಿಯಾಗಿದ್ದರು. ಲೀಲಾವತಿ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ ಎಂದು ಸುಧಾರಾಣಿ (Sudharani) ಮಾತನಾಡಿದ್ದಾರೆ.
ಅಭಿನಯ, ಹಲವು ದಶಕಗಳ ಪಯಣ ಎಲ್ಲವೂ ನಮಗೆ ಪ್ರೇರಣೆ. ಕಲಾವಿದೆಯಾಗಿ ಅವರಿಗೆ ಅವರೇ ಸಾಟಿ ಎಂದು ಲೀಲಾವತಿ ಅವರನ್ನ ಬಣ್ಣಿಸಿದ್ದಾರೆ ನಟಿ ಮಾಳವಿಕಾ. ಹಿರಿಯ ಕಲಾವಿದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸಾರ್ಥಕ ಬದುಕನ್ನು ಲೀಲಾವತಿ ಅಮ್ಮ ಕಟ್ಟಿಕೊಂಡಿದ್ದಾರೆ. ಎಲ್ಲರಿಗೂ ಕಷ್ಟ ಬರುತ್ತೆ, ಆದರೆ ತುಂಬಾ ಧೈರ್ಯದಿಂದ ದಿಟ್ಟ ಮಹಿಳೆಯಾಗಿ ನಿಭಾಯಿಸಿದ್ದಾರೆ. ಅಮ್ಮ ಸಿಂಗಲ್ ಪೇರೆಂಟ್ ಆಗಿ ಒಳ್ಳೆಯ ವ್ಯಕ್ತಿಯನ್ನಾಗಿ ಮಗನನ್ನು ಬೆಳೆಸಿದ್ದರು. ಭಗವಂತ ಕೊಟ್ಟ ಆಯಸ್ಸಿನಲ್ಲಿ ಆದರ್ಶವಾಗಿ ಬೆಳೆದಿದ್ದರು. ನಮ್ಮಂತಹ ಅನೇಕ ಕಲಾವಿದರಿಗೆ ಆದರ್ಶರಾಗಿದ್ದಾರೆ. ಅಮ್ಮ, ಮಗ ಬೆಳೆದ ರೀತಿ ಆಶ್ಚರ್ಯ ಆಗುತ್ತಿದೆ. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಹೇಗಿರ್ತಾರೋ ಅನಿಸುತ್ತಿದೆ. ಎಲ್ಲರ ಆಶೀರ್ವಾದದಿಂದ ವಿನೋದ್ ರಾಜ್ ಚೆನ್ನಾಗಿರಲಿ ಎಂದು ನಟಿ ಶ್ರುತಿ (Shruthi) ಮಾತನಾಡಿದ್ದಾರೆ.
ಚಿತ್ರರಂಗದಲ್ಲಿ ಲೀಲಾವತಿ ಅಮ್ಮನ ಸಾಧನೆ ಅಪಾರವಾದದ್ದು, ಪ್ರೀತಿಯ ಅಮ್ಮ ನಮ್ಮನ್ನೆಲ್ಲ ಅಗಲಿದ್ದಾರೆ. ಲೀಲಾವತಿ ಅವರ ತಾಳ್ಮೆಯ ಮೂರ್ತಿಯಾಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿ ಜೀವನ ಮಾಡುತ್ತಿದ್ದರು. ವಿನೋದ್, ಲೀಲಾವತಿ ಬಾಂಧವ್ಯ ಅಪರೂಪದ್ದು ಎಂದು ಹಿರಿಯ ನಟಿ ಭವ್ಯ ಹೇಳಿದ್ದಾರೆ. ‘ಹೊಸಬಾಳು’ ಸಿನಿಮಾದಲ್ಲಿ ಲೀಲಾವತಿ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಭವ್ಯ ಸ್ಮರಿಸಿದ್ದಾರೆ.
ದಶಕಗಳ ಕಾಲ ಕನ್ನಡ ಸಿನಿಮಾದಲ್ಲಿ ನಟಿಸಿ ಕೋಟಿ ಕೋಟಿ ಅಭಿಮಾನಿಗಳಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಲೀಲಕ್ಕ ಮಾತೃ ಸ್ಥಾನದಲ್ಲಿದ್ದಾರೆ. ಕನ್ನಡ ಚಿತ್ರರಂಗ ಪ್ರಖ್ಯಾತಿ ಹೊಂದಲು ಅವರ ಕೊಡುಗೆ ಅಪಾರ. ನಮ್ಮ ಕುಟುಂಬದಲ್ಲಿ ಹಿರಿಯರನ್ನ ಕಳೆದುಕೊಳ್ಳುತ್ತಲೇ ಇದ್ದೇವೆ. ಅದಕ್ಕಿಂತಲೂ ಹೆಚ್ಚಾಗಿ ತಾಯಿಗೆ ಮಗ – ಮಗನಿಗೆ ತಾಯಿ ಹೀಗೆ ಅವರಿಬ್ಬರ ಬಾಂಧವ್ಯ ಬಹಳ ವಿಶೇಷ. ಕಷ್ಟಕೋಟಲೆಗಳ ಮಧ್ಯೆ ದೃತಿಗೆಡದೆ ಎದ್ದು ನಿಂತ ಮಹಿಳೆ. ಬಡವರಿಗೆ ಸಹಾಯ ಮಾಡುತ್ತಿದ್ದರು. ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹೀಗೆ ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಮಗನಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಹಿರಿಯ ನಟ ರಮೇಶ್ ಭಟ್ ಕಂಬನಿ ಮಿಡಿದಿದ್ದಾರೆ.
ಅವರ ಜೊತೆಗೆ ಕಾಲ ಕಳೆಯುವ ಅದ್ಭುತ ಅವಕಾಶ ಸಿಕ್ಕಿತು. ಅವರು ಕೊಟ್ಟ ಊಟ ಮಾಡಿದ್ದೆ. ನಾನು ಸಹ ನಿರ್ದೇಶಕನಿದ್ದಾಗಿನಿಂದಲೂ ಲೀಲಾವತಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಅವರ ಸಂಸ್ಥೆಯ 2 ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ವಿನೋದ್ ರಾಜ್ ಅವರ 4 ಚಿತ್ರಗಳಿಗೆ ನಿರ್ದೇಶನ ಮಾಡಿದ್ದೇನೆ. ನಮ್ಮ ಒಡನಾಟ ಹೇಳಿಕೊಳ್ಳಲಾಗದು. ಬಹಳ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ನನ್ನ ತಾಯಿ ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ಇನ್ನೂ ವಿಶೇಷವಾಗಿ ನಮಗೆ ಕಾಣುವುದು ತಾಯಿ-ಮಗನ ಬಾಂಧವ್ಯ. ಮಗನನ್ನು ಬೆಳೆಸಿದ ರೀತಿ, ಕಲಿಸಿದ ಸಂಸ್ಕೃತಿಯಲ್ಲಿ ತಾಯಿ ಮಾರ್ಗದರ್ಶಕರಾದರೆ, ಕೆಲವೊಂದು ಸಂದರ್ಭದಲ್ಲಿ ಮಗನೇ ತಾಯಿಗೇ ಗುರುವಾಗಿದ್ದರು. ವಿನೋದ್ ರಾಜ್ ಅವರಂತಹ ಮಗನಿಗೆ ಜನ್ಮ ಕೊಡದೇ ಇದ್ದಿದ್ದರೆ 30 ವರ್ಷಗಳ ಮುಂಚೆಯೇ ನಮ್ಮನ್ನು ಬಿಟ್ಟು ಹೋಗಿಬಿಡುತ್ತಿದ್ದರು. ಏಕೆಂದರೆ ವಿನೋದ್ ತಾಯಿಗೆ ಆಕ್ಸಿಜನ್ ಆಗಿದ್ದರು. ಒಬ್ಬರಿಗೊಬ್ಬರು ಗುರುವಾಗಿ ಬದುಕಿದ್ದಾರೆ. ಈಗ ತಾಯಿ ಇಲ್ಲದ ಪ್ರಪಂಚವನ್ನು ವಿನೋದ್ ರಾಜ್ ಹೇಗೆ ನೋಡುತ್ತಾರೆ ಅನ್ನೋದು ಚಿಂತೆಯಾಗಿದೆ ಎಂದು ಎಸ್. ನಾರಾಯಣ್ ಭಾವುಕ ನುಡಿಗಳನ್ನಾಡಿದ್ದಾರೆ.
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.
‘ಕಾಂತಾರ’ (Kantara) ಸಿನಿಮಾದ ಸಕ್ಸಸ್ ನಂತರ ಮತ್ತೆ ದೈವದ ಕಥೆಯೊಂದು ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡದ ಸಿನಿಮಾಗಳು ವಿಶ್ವದೆಲ್ಲೆಡೆ ಸದ್ದು ಮಾಡ್ತಿರೋದನ್ನ ನೋಡಿ, ಪರಭಾಷಿಕರು ಕನ್ನಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಕಬೀರ್ ಬೇಡಿ ಒಂದು ಹೆಜ್ಜೆ ಹೋಗಿ, ಕನ್ನಡದ ‘ಕೊರಗಜ್ಜ’ (Koragajja) ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.
ಸುಧೀರ್ ಅತ್ತಾವರ್ (Sudhir Attavar) ನಿರ್ದೇಶನದ ‘ಕೊರಗಜ್ಜ’ ಸಿನಿಮಾದಲ್ಲಿ ಬರುವ ಉದ್ಯಾವರ ಅರಸರ ಪಾತ್ರವನ್ನು ಕಬೀರ್ ಬೇಡಿ (Kabir Bedi) ನಟಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕರ ಕೆಲಸವನ್ನು ಅವರು ನಟ ಕಬೀರ್ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ
ಕಬೀರ್ ಬೇಡಿ ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡುತ್ತೇನೆ ಎಂದು ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕರಿಗೆ ಹೇಳಿದ್ದರು. ಆದರೆ ಅವರ ಮಾತನ್ನು ಒಪ್ಪುವುದು ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಯಾಕೆಂದರೆ, ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದ ಅದರಲ್ಲೂ ಕನ್ನಡ, ತುಳು, ಸೊಗಡನ್ನು ಅರಿತು ಕೊರಗಜ್ಜ ಸಿನಿಮಾಗೆ ಡಬ್ಬಿಂಗ್ ಸಿನಿಮಾಗೆ ಸಾಥ್ ನೀಡಿದ್ದಾರೆ. ಮುಂಬೈ ಸ್ಟುಡಿಯೋದಲ್ಲಿ 2-3 ಬಾರಿ ಸಂಭಾಷನೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ.
ಸುಧೀರ್ ನಿರ್ದೇಶನದ ಸಿನಿಮಾ ನಟಿ ಭವ್ಯ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಲ್ಕೈದು ಕ್ಯಾಮೆರಾಗಳನ್ನ ಇಟ್ಟುಕೊಂಡು ಸಿನಿಮಾವನ್ನು ಶೂಟ್ ಮಾಡಿದ್ದಾರೆ. ಭಿನ್ನ ಕಥೆಯನ್ನ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದ್ದಾರೆ. ಸದ್ಯದಲ್ಲೇ ಈ ಕುರಿತ ಅಪ್‌ಡೇಟ್ ಸಿಗಲಿದೆ.
ದುನಿಯಾ ರಶ್ಮಿ ಸಿನಿಮಾ ರಂಗದಿಂದ ದೂರವಾದರಾ ಅನ್ನುವ ಹೊತ್ತಿನಲ್ಲಿ ಮತ್ತೆ ಧೂತ್ತೆಂದು ಪ್ರತ್ಯಕ್ಷವಾಗಿದ್ದಾರೆ. ಆರ್ಮುಗಂ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ರಂಗಿನ ರಾಟೆ’ ಸಿನಿಮಾದಲ್ಲಿ ಅವರು ನಟಿಸಿದ್ದು, ನಿನ್ನೆಯಷ್ಟೇ ಆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ” ರಂಗಿನ ರಾಟೆ” ಚಿತ್ರ ಸಿದ್ದವಾಗಿದೆ. ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.
ಈ ಕುರಿತು ಮಾತನಾಡಿದ ನಿರ್ದೇಶಕ ಆರ್ಮುಗಂ “ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟಿದ್ದೀನಿ. ಚಿತ್ರೀಕರಣ ಮುಕ್ತಾಯವಾಗಿದೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ಅವರ ಪರಿಚಯವಾಯಿತು. ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ’ ಎಂದರು. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್
“ಯವರಾಜ” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು ರಾಜೀವ್ ರಾಥೋಡ್.
ನನಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಸಂತೋಷ್ ಅವರು ನಿರ್ದೇಶಕರ ಪರಿಚಯ ಮಾಡಿಸಿದರು. ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದೆ. ಮೊದಲ ಪ್ರಯತ್ನ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.ಇದು ನನ್ನ ಮೊದಲ ಚಿತ್ರ. ಮೊದಲ ಪತ್ರಿಕಾಗೋಷ್ಠಿ. ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಈಡೇರಿದೆ. ಕಥೆಯೇ ಈ ಚಿತ್ರದ ನಾಯಕ, ನಾಯಕಿ. ರಾಜೀವ್ ರಾಥೋಡ್, ದುನಿಯಾ ರಶ್ಮಿ ಹಾಗೂ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದೇವೆ. ನಮ್ಮ ಚೊಚ್ಚಲ ಪ್ರಯತ್ನಕ್ಕೆ ನಿಮ್ಮ ಹಾರೈಕೆಯಿರಲಿ ಎಂದರು ನಟಿ ಭವ್ಯ.
ಬೆಂಗಳೂರು: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜಾ ನಾ.. ಎಂದು ಎನ್‍ಎಸ್‍ಯುಐ ಉಪಾಧ್ಯಕ್ಷೆ ಭವ್ಯ ಪ್ರಶ್ನೆ ಮಾಡಿದ್ದಾರೆ.
ಪಠ್ಯಪುಸ್ತಕ ಪರಿಶೀಲನಾ ಸಮಿತಿ ನಿರ್ಧಾರ ವಿರೋಧಿಸಿ ತುಮಕೂರಿನಲ್ಲಿ ಪ್ರತಿಭಟನೆ ಮಾಡಿದಕ್ಕೆ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರನ್ನು ಬಂಧಿಸಲಾಗಿದೆ. ಇದನ್ನು ವಿರೋಧಿಸಿ ಇಂದು ಪ್ರತಿಭಟನಾ ಸಭೆಯನ್ನು ಯುವ ಕಾಂಗ್ರೆಸ್ ಆಯೋಜಿಸಿತ್ತು. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ದಾಳಿ – 177 ಶಿಕ್ಷಕರ ವರ್ಗಾವಣೆ
ಪಠ್ಯ ಪರಿಷ್ಕರಣೆ ವೇಳೆ ಬಸವಣ್ಣ, ಕುವೆಂಪು, ನಾರಾಯಣಗುರು ಮತ್ತು ಟಿಪ್ಪು ಸುಲ್ತಾನ್ ಅವರ ವಿಷಯವನ್ನು ಬಿಟ್ಟು, ಕೆಲಸಕ್ಕೆ ಬಾರದೆ ಇರುವ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಮೂಲಕ ಯುವಕರ ಭವಿಷ್ಯ ಹಾಳು ಮಾಡಲಾಗುತ್ತಿದೆ. ಆ ರೀತಿ ನಡೆಯಬಾರದು ಎಂದು ಕೀರ್ತಿ ಗಣೇಶ್ ಅವರು ತಮ್ಮ ಎನ್‍ಎಸ್‍ಯುಐ ಪದಾಧಿಕಾರಿಗಳ ಜೊತೆ ಪ್ರತಿಭಟನೆ ಮಾಡುವುದಕ್ಕೆ ಹೋದ್ರೆ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆರ್‍ಎಸ್‍ಎಸ್ ಚಡ್ಡಿಯನ್ನು ಸುಟ್ಟಿದ್ದಕ್ಕೆ ಕೀರ್ತಿ ಗಣೇಶ್ ಅವರನ್ನು ಜೈಲಿಗೆ ಹಾಕಿದ್ದಾರೆ. ಇವತ್ತು ಕೇವಲ ತುಮಕೂರಿನಲ್ಲಿ ಸುಟ್ಟಿದ್ದಾರೆ. ಆದರೆ ಮುಂದೆ ಯುವ ಕಾಂಗ್ರೆಸಿಗರು ಪ್ರತಿಯೊಂದು ಜಿಲ್ಲೆಯಲ್ಲಿಯೂ ಆರ್‌ಎಸ್‍ಎಸ್ ಚಡ್ಡಿಯನ್ನು ಸುಡುತ್ತಾರೆ ನೋಡುತ್ತೀರಿ. ಎಷ್ಟು ಜನಗಳನ್ನು ಬಂಧಿಸುತ್ತೀರಾ ಬಂಧಿಸಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ: ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿದ್ದರು. ಆದರೆ ಮುಂದಿನ ದಿನಗಳಲ್ಲಿ ಚಡ್ಡಿ ಹಾರಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಆದರೆ ಇದೇ ರೀತಿ ಬೇರೆ ಯಾರೇ ಮಾತನಾಡಿದ್ರೂ ಅವರಿಗೆ ರಾಷ್ಟ್ರದ್ರೋಹಿ ಎಂದು ಪಟ್ಟಕಟ್ಟಿ ಜೈಲಿಗೆ ಕಳುಹಿಸುತ್ತಿದ್ದರು ಎಂದು ಟೀಕಿಸಿದ್ದಾರೆ.
ಬೆಂಗಳೂರು: ಡಿಬಾರ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಭವ್ಯ(21) ಎಂದು ಗುರುತಿಸಲಾಗಿದೆ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಭವ್ಯ ಮೊದಲ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಆದರೆ ನಿನ್ನೆ ನಡೆದ ಎಕ್ಸಾಂನಲ್ಲಿ ಕಾಪಿ ಮಾಡುತ್ತಿದ್ದಾಳೆಂದು ಆರೋಪಿಸಿ ಡಿಬಾರ್ ಮಾಡಿದ್ದರು. ಈ ವಿಚಾರವನ್ನು ಭವ್ಯ ಸೋದರಿ ದಿವ್ಯಾಗೆ ಕರೆ ಮಾಡಿ ನನ್ನನ್ನು ಡಿಬಾರ್ ಮಾಡಿದ್ದಾರೆ ಹಾಗಾಗಿ ನಾನು ಬದುಕುವುದಿಲ್ಲ ಎಂದು ನೋವು ಹಂಚಿಕೊಂಡಿದ್ದರು. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು