Tag: ಭವಿಷ್ ಅಗರ್ವಾಲ್

  • ಓಲಾದ 1 ಸಾವಿರ ಉದ್ಯೋಗಿಗಳು ಮನೆಗೆ

    ಓಲಾದ 1 ಸಾವಿರ ಉದ್ಯೋಗಿಗಳು ಮನೆಗೆ

    ನವದೆಹಲಿ: ನಷ್ಟದ ಕಾರಣದಿಂದಾಗಿ ಓಲಾ ಎಲೆಕ್ಟ್ರಿಕ್‌ (OLA Electric) ಮೊಬಿಲಿಟಿ ಲಿಮಿಟೆಡ್ ಕಂಪನಿ 1,000ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.

    ಗ್ರಾಹಕ ಸಂಬಂಧಗಳು, ಸಂಗ್ರಹಣೆ, ಪೂರೈಸುವಿಕೆ, ಮತ್ತು ಶುಲ್ಕ ಸೇರಿದಂತೆ ಅನೇಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ತೆಗೆಯಲಾಗಿದೆ. ಓಲಾ ಎಲೆಕ್ಟ್ರಿಕ್‌ ವೆಚ್ಚವನ್ನು ನಿಯಂತ್ರಿಸುವ ಪ್ರಯತ್ನದ ಸಲುವಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆ ಸಾಹೇಬ್ರು ಹೇಳಿರೋದ್ರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶ – ಸಾಧು ಕೋಕಿಲ

    ಉದ್ಯೋಗ ಕಡಿತದ ಬೆನ್ನಲ್ಲೇ ಸೋಮವಾರ ಓಲಾ ಎಲೆಕ್ಟ್ರಿಕ್‌ ಷೇರುಗಳ ಮೌಲ್ಯ ಇಂದು ಶೇ.2.94 ರಷ್ಟು ಕುಸಿದಿದ್ದು ಅಂತಿಮವಾಗಿ 55.18 ರೂ.ನಲ್ಲಿ ವ್ಯವಹಾರ ಕೊನೆಗೊಳಿಸಿತು.

    2022ರ ನವೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್‌ ಅಂದಾಜು 500 ಉದ್ಯೋಗಿಗಳನ್ನು ವಜಾ ಮಾಡಿತ್ತು. 2024ರ ಮಾರ್ಚ್‌ನಲ್ಲಿ 4,000 ಉದ್ಯೋಗಿಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನವರು ಕೆಲಸದಿಂದ ವಜಾಗೊಂಡಿದ್ದರು. ಆದರೆ ಗುತ್ತಿಗೆ ಆಧಾರಿತ ಕಾರ್ಮಿಕರ ಹೆಸರನ್ನು ಸೇರಿಸಿರದ ಕಾರಣ, ಎಷ್ಟು ಮಂದಿ ಉದ್ಯೋಗಿಗಳು ವಜಾ ಆಗಲಿದ್ದಾರೆ ಎನ್ನುವುದು ಮಾಹಿತಿಯಲ್ಲಿ ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಹಕ್ಕಿಜ್ವರ ಭೀತಿ – ಚಿತ್ರದುರ್ಗ ಜಿಲ್ಲಾಡಳಿತದಿಂದ ಕೋಳಿ ಫಾರಂಗಳಲ್ಲಿ ಜಾಗೃತಿ

    ಪುನರ್‌ರಚನೆಯ ಸಲುವಾಗಿ ಓಲಾ ಎಲೆಕ್ಟ್ರಿಕ್‌ ತನ್ನ ಗ್ರಾಹಕ ಸೇವಾ ಕಾರ್ಯಾಚರಣೆಗಳ ಕೆಲವು ಭಾಗಗಳನ್ನು ಸ್ವಯಂಚಾಲಿತಗೊಳಿಸುತ್ತಿದೆ. ಇದು ವೆಚ್ಚವನ್ನು ಕಡಿಮೆ ಮಾಡುವ ಮತ್ತು ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೊಡಗಿನಲ್ಲೂ ಹಕ್ಕಿ ಜ್ವರದ ಭೀತಿ – ಬಿರಿಯಾನಿ ಹೋಟೆಲ್‌ಗಳು ಖಾಲಿ ಖಾಲಿ!

    ವರದಿಗೆ ಪ್ರತಿಕ್ರಿಯಿಸಿದ ಓಲಾ ವಕ್ತಾರರೊಬ್ಬರು, ಲಾಭ, ಕಡಿಮೆ ವೆಚ್ಚ ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಭವಗಳನ್ನು ನೀಡುವ ಸಲುವಾಗಿ ನಾವು ಗ್ರಾಹಕ ಸೇವೆಯನ್ನು ಪುನರ್‌ರಚನೆ, ಸ್ವಯಂಚಾಲಿತಗೊಳಿಸುತ್ತಿದ್ದೇವೆ. ಅಲ್ಲದೇ ಉತ್ತಮ ಉತ್ಪಾದಕತೆಗಾಗಿ ಅನಗತ್ಯ ಹುದ್ದೆಗಳನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.

    ಕಂಪನಿಯು ತನ್ನ ಶೋ ರೂಂಗಳು ಮತ್ತು ಸೇವಾ ಕೇಂದ್ರಗಳಲ್ಲಿ ಮಾರಾಟ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – 10 ದಿನ ಕಳೆದ್ರೂ ಸಂಪರ್ಕಕ್ಕೆ ಸಿಗದ 8 ಕಾರ್ಮಿಕರು

  • ಓಲಾ, ಉಬರ್ ವಿಲೀನವಾಗುತ್ತಾ? ಊಹಾಪೋಹಗಳಿಗೆ ತೆರೆಯೆಳೆದ ಓಲಾ ಸಿಇಒ

    ಓಲಾ, ಉಬರ್ ವಿಲೀನವಾಗುತ್ತಾ? ಊಹಾಪೋಹಗಳಿಗೆ ತೆರೆಯೆಳೆದ ಓಲಾ ಸಿಇಒ

    ನವದೆಹಲಿ: ಓಲಾ ಹಾಗೂ ಉಬರ್ ಕಂಪನಿಗಳು ವಿಲೀನಗೊಳ್ಳುತ್ತವೆ ಎಂಬ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದ್ದು, ಇದೀಗ ಈ ಬಗ್ಗೆ ಓಲಾ ಸಿಇಒ ಸ್ಪಷ್ಟನೆ ನೀಡಿದ್ದಾರೆ. ಓಲಾ ಹಾಗೂ ಉಬರ್ ಎರಡೂ ವಿಲೀನವಾಗುತ್ತಾ ಎಂಬ ಊಹಾಪೋಹಗಳಿಗೆ ಓಲಾ ಸಿಇಒ ಭವಿಷ್ ಅಗರ್ವಾಲ್ ಇದೀಗ ತೆರೆ ಎಳೆದಿದ್ದಾರೆ.

    ಎರಡೂ ಕಂಪನಿಗಳು ವಿಲೀನಗೊಳ್ಳುತ್ತವೆ ಎಂಬ ಚರ್ಚೆಯ ನಡುವೆ ಮಾತನಾಡಿರುವ ಓಲಾ ಸಿಇಒ ಭವಿಷ್ ಅಗರ್ವಾಲ್, ಈ ಚರ್ಚೆ ಸಂಪೂರ್ಣ ಅರ್ಥಹೀನ. ನಾವು ತುಂಬಾ ಲಾಭದಾಯಕವಾಗಿ ಹಾಗೂ ಉತ್ತಮವಾಗಿ ಬೆಳೆಯುತ್ತಿದ್ದೇವೆ. ಕೆಲವು ಇತರ ಕಂಪನಿಗಳು ತಮ್ಮ ವ್ಯವಹಾರವನ್ನು ಭಾರತದಲ್ಲಿ ಸ್ಥಗಿತಗೊಳಿಸಲು ಬಯಸಿದರೆ ನಾವು ಈ ವಿಚಾರವನ್ನು ಸ್ವಾಗತಿಸುತ್ತೇವೆ. ಆದರೆ ಎಂದಿಗೂ ವಿಲೀನಗೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    OLA

    ಓಲಾ ಜೊತೆಗಿನ ವಿಲೀನದ ವಿಚಾರವನ್ನು ಉಬರ್ ಕೂಡ ನಿರಾಕರಿಸಿದೆ. ಈ ವರದಿ ತಪ್ಪಾಗಿದೆ, ನಾವು ಓಲಾ ಜೊತೆಗೆ ವಿಲೀನದ ಬಗ್ಗೆ ಮಾತುಕತೆ ನಡೆಸಿಲ್ಲ ಎಂದು ಉಬರ್ ಕಂಪನಿ ತಿಳಿಸಿದೆ. ಇದನ್ನೂ ಓದಿ: ದೇಶದ ಮೊದಲ ಮಂಕಿಪಾಕ್ಸ್ ರೋಗಿ ಸಂಪೂರ್ಣ ಗುಣಮುಖ

    ಒಂದಕ್ಕೊಂದು ಪೈಪೋಟಿ ನಡೆಸುತ್ತಿರು ಓಲಾ ಹಾಗೂ ಉಬರ್ ಕಂಪನಿಗಳಲ್ಲಿ ಹೂಡಿಕೆದಾರರಾಗಿರುವ ಅಮೆರಿಕ ಮೂಲದ ಮಸಯೋಶಿ ಸನ್ ನೇತೃತ್ವದ ಸಾಫ್ಟ್‌ಬ್ಯಾಂಕ್ ಅವೆರಡರ ವಿಲೀನಕ್ಕೆ ಒತ್ತಾಯಿಸಿತ್ತು. ಈ ಹಿನ್ನೆಲೆ ಪರಸ್ಪರ ತೀವ್ರವಾದ ಸ್ಪರ್ಧೆಯಲ್ಲಿರುವ ಕಂಪನಿಗಳು ಇತ್ತೀಚೆಗೆ ವಿಲೀನದ ಬಗ್ಗೆ ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ. ಆದರೆ ಅವೆರಡರ ಒಪ್ಪಂದ ಕಾರ್ಯರೂಪಕ್ಕೆ ಬಂದಿಲ್ಲ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]