Tag: ಭವಿಷ್ಯವಾಣಿ

  • ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಸೋಫಿಯಾ: 2023ರ ಅವಧಿಯಲ್ಲಿ ಅನ್ಯಗ್ರಹ ಜೀವಿಗಳ ದಾಳಿ (Alien Attack), ಸೋಲರ್ ಸುನಾಮಿಯಂತಹ (Solar Storm) ಅನೇಕ ಗಂಡಾ ತರಗಳಿಂದ ವಿಶ್ವ ನಾನಾ ರೀತಿಯ ತೊಂದರೆಗಳನ್ನು ಎದುರಿಸಲಿದೆ ಎಂದು ನಾಸ್ಟ್ರಾಡಾಮಸ್‌ (Nostradamus) ಮಹಿಳೆ ಎಂದೇ ಹೆಸರಾಗಿರುವ ಬಾಬಾ ವಂಗಾ (Baba Vanga) ಭವಿಷ್ಯವಾಣಿ ನುಡಿದಿದ್ದಾರೆ. ವಿಶ್ವದ ಅಂತ್ಯದ ಬಗ್ಗೆಯೂ ಇದೇ ವೇಳೆ ಸುಳಿವು ಕೊಟ್ಟಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಭವಿಷ್ಯ ನುಡಿದು ಆತಂಕ ಸೃಷ್ಟಿಸಿದ್ದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ, ಇದೀಗ ವಿಶ್ವದ ಭವಿಷ್ಯ ನುಡಿದು ಮತ್ತೊಮ್ಮೆ ಆತಂಕ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದ ನಾಯಕ-ಭಾರತದ ಬೌಲರ್ – ಏಕದಿನ ಸರಣಿ ಆರಂಭಕ್ಕೂ ಮುನ್ನ ಔಟ್

    ಬಾಬಾ ವಂಗಾರ 2023ರ ಭವಿಷ್ಯವಾಣಿ ಏನು?
    2023ರಲ್ಲಿ ಸೋಲಾರ್ ಸುನಾಮಿ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಭೂಮಿಯ ಕಾಂತೀಯ ಕವಚವು ನಾಶವಾಗುತ್ತದೆ. ಭೂಮಿಯ ಮೇಲೆ ಏಲಿಯನ್‌ಗಳ (ಅನ್ಯಗ್ರಹ ಜೀವಿ) ದಾಳಿಯಿಂದ ಲಕ್ಷಾಂತರ ನಿವಾಸಿಗಳು ಸಾಯುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ

    ಬಾಬಾ ವಂಗಾ (Baba Vanga) ಅವರ 2023ರ ಭಯಾನಕ ಭವಿಷ್ಯವಾಣಿಗಳು, ಭೂಮಿಯು ಈಗ ಬ್ರಹ್ಮಾಂಡದಲ್ಲಿ ಅನಿಶ್ಚಿತ ಸಮತೋಲನದಲ್ಲಿ ಉಳಿದಿದೆ. ನಂತರ ಅದು ತನ್ನ ಕಕ್ಷೆಯನ್ನು ಬದಲಿಸುತ್ತದೆ. ಇದರಲ್ಲಿನ ಸಣ್ಣ ಬದಲಾವಣೆಯೂ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟುಮಾಡಬಹುದು. ಆಗ ಪರಿಸ್ಥಿತಿ ನಿಜಕ್ಕೂ ಭೀರಕವಾಗಿರುತ್ತದೆ ಎಂದು ಹೇಳಲಾಗಿದೆ.

    2023ರ ವೇಳೆಗೆ ಪ್ರಯೋಗಾಲಯಗಳಲ್ಲಿ ಮಾನವರನ್ನು ಉತ್ಪಾದಿಸಲಾಗುತ್ತದೆ (Humans Produce Laboratories). ಹುಟ್ಟದ ಮಗುವಿಗೆ ತಮ್ಮ ಆಯ್ಕೆಯ ಬಣ್ಣ ಮತ್ತು ಗುಣಲಕ್ಷಣಗಳನ್ನು ಆಯ್ಕೆ ಮಾಡುವ ಸಂದರ್ಭ ಬರುತ್ತದೆ. ಈ ಜನನದ ಪ್ರಕ್ರಿಯೆಯು ಮಾನವನ ನಿಯಂತ್ರಣದಲ್ಲಿರುತ್ತದೆ ಮತ್ತು ಬಾಡಿಗೆ ತಾಯ್ತನದ ಸಮಸ್ಯೆಯು ಅದರ ಆವಿಷ್ಕಾರದೊಂದಿಗೆ ಕೊನೆಗೊಳ್ಳುತ್ತದೆ. ವಿದ್ಯುತ್ ಸ್ಥಾವರದಲ್ಲಿನ ಸ್ಫೋಟವು ವಿಷಕಾರಿ ಮೋಡಗಳ ರಚನೆಗೆ ಕಾರಣವಾಗಬಹುದು. ಇದು ಇಡೀ ಏಷ್ಯಾ ಖಂಡವೇ ಮಂಜು ಕವಿಯುವಂತೆ ಮಾಡುತ್ತದೆ. ಈ ಬದಲಾವಣೆಯಿಂದಾಗಿ ಇತರ ದೇಶಗಳು ಸಹ ಗಂಭೀರ ಕಾಯಿಲೆಗಳಿಂದ ಬಾಧಿಸತೊಡಗುತ್ತವೆ.

    Live Tv

    [brid partner=56869869 player=32851 video=960834 autoplay=true]

  • ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಹಾವೇರಿ: ಮಾಲತೇಶ ದೇವರ (Malatesh Temple) ಕಾರ್ಣಿಕ ಎಂದರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ದಸರಾ (Dasara) ಹಬ್ಬದ ಸಮಯದಲ್ಲಿ ನಡೆಯುವ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ, ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ಕಾರ್ಣಿಕವನ್ನು ವಿಶ್ಲೇಷಿಸಲಾಗುತ್ತದೆ. ಈ ವರ್ಷದ ಭವಿಷ್ಯವಾಣಿ ಕೇಳಿ, ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಖುಷಿ ಖುಷಿಯಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

    ಹೌದು, ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಇಂದು ಕಂಡುಬಂದ ದೃಶ್ಯಗಳಿವು. ಈ ಬಾರಿ ಸಣ್ಣ ಸಣ್ಣ ರೈತರಿಗೂ ಒಳ್ಳೆಯದಾಗಲಿದೆ, ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿಸ್ಥಾನ ದೊರೆಯಲಿದೆ ಎಂದು ಗೊರವಯ್ಯ (Goravayya) ಕಾರ್ಣಿಕ ನುಡಿದಿದ್ದಾರೆ.

    ದೇವರಗುಡ್ಡದ ಮಾಲತೇಶ ದೇವಸ್ಥಾನ ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕ ಕೇಳಲು ಜನರ ದಂಡೆ ನೆರೆದಿರುತ್ತೆ. 9 ದಿನಗಳ ಕಾಲ ಕಠಿಣ ಉಪವಾಸ ವೃತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಇದನ್ನೂ ಓದಿ: ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ಪ್ರತಿ ಬಾರಿ ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಾರೆ. ಸರಿಯಾಗಿ 6 ಗಂಟೆ ಆಗುತ್ತಿದ್ದಂತೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಎನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾರೆ. ವರ್ಷದ ಭವಿಷ್ಯವಾಣಿ ನುಡಿದ ಬಳಿಕ ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ.

    ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ “ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಸಣ್ಣಸಣ್ಣ ರೈತರಿಗೂ ಈ ವರ್ಷ ಉತ್ತಮ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಮಾಲತೇಶ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಎಂತಲೇ ಪ್ರಸಿದ್ಧಿ ಪಡೆದಿದೆ. ಸಾಕ್ಷಾತ್ ಮಾಲತೇಶ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ, ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಎನ್ನುವುದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ಸಣ್ಣ ಸಣ್ಣ ರೈತರಿಗೆ ಉತ್ತಮವಾಗಲಿದೆ ಎನ್ನುವ ಸಂದೇಶ ಕೇಳಿ ತಮ್ಮ ತಮ್ಮ ಊರುಗಳತ್ತ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]