Tag: ಭವನೇಶ್ವರ

  • ದೊಣ್ಣೆಯಿಂದ ಹೊಡೆದು ಪತ್ನಿಯ ಹತ್ಯೆ

    ದೊಣ್ಣೆಯಿಂದ ಹೊಡೆದು ಪತ್ನಿಯ ಹತ್ಯೆ

    ಭುವನೇಶ್ವರ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಓಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.

    ರಾಣಿ ಸೊರೆನ್ ಮೃತ ಮಹಿಳೆ. ಈ ಘಟನೆ ಶುಕ್ರವಾರ ರಾತ್ರಿ ಮಾಧವ್‍ಪುರ್ ಗ್ರಾಮದಲ್ಲಿ ನಡೆದಿದೆ. ಆರೋಪಿ ಖೇಲಾ ಸೊರೆನ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೊಣ್ಣೆಯಿಂದ ಪತ್ನಿ ರಾಣಿ ಸೊರೆನ್‍ಳನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಅದೇ ರೀತಿ ಶುಕ್ರವಾರ ರಾತ್ರಿವೂ ಜಗಳ ನಡೆದಿದೆ. ನಂತರ ಆರೋಪಿ ಖೇಲಾ ಕುಡಿದು ಬಂದು ದೊಣ್ಣೆಯಿಂದ ಪತ್ನಿಯ ತಲೆ, ಕಾಲು ಮತ್ತು ಬೆನ್ನಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿ ರಾಣಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಮೃತರ ಸಹೋದರ ನಮಗೆ ಮಾಹಿತಿ ತಿಳಿಸಿದ್ದು, ತಕ್ಷಣ ನಾವು ಘಟನೆ ನಡೆದ ಸ್ಥಳಕ್ಕೆ ಹೋದೆವು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರಗೆ ರವಾನೆ ಮಾಡಿ ಈ ಕುರಿತು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

  • ರಾಡ್‍ಗೆ ಕಟ್ಟಿ ಏಕಾಏಕಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ

    ರಾಡ್‍ಗೆ ಕಟ್ಟಿ ಏಕಾಏಕಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ

    ಭುವನೇಶ್ವರ: ಎರಡನೇ ಮಗುವೂ ಹೆಣ್ಣಾಗಿದ್ದಕ್ಕೆ ಪತಿ, ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಹಿಂಸೆ ಕೊಟ್ಟು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಹಿರಾಕುಡ್ ಪ್ರದೇಶದಲ್ಲಿ ವಿಎಸ್‍ಎಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಜ್ಯೋತಿರ್ಮಯಿ ನಾಯಕ್ (27) ಎಂದು ಗುರುತಿಸಲಾಗಿದೆ. ಜ್ಯೋತಿರ್ಮಯಿಗೆ ಈಗಾಗಲೇ ಒಂದು ಹೆಣ್ಣು ಮಗು ಇತ್ತು. ಇತ್ತೀಚೆಗೆ ಎರಡನೇ ಮಗು ಸಹ ಹೆಣ್ಣಾಗಿದೆ. ಇತ್ತ ಅವರ ಪತಿಯ ಮನೆಯವರಿಗೆ ಗಂಡು ಮಗು ಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಗಂಡು ಮಗುವಾಗಿಲ್ಲ ಎಂದು ಪ್ರತಿದಿನ ಪತಿಯ ಮನೆಯವರು ಹಿಂಸೆ ಕೊಡುತ್ತಿದ್ದರು. ಫೆಬ್ರವರಿ 13ರಂದು ಜ್ಯೋತಿರ್ಮಯಿಯ ಪತಿ ಸ್ಮೃತಿ ರಂಜನ್, ಮಾವ ರಘುನಾಥ್ ನಾಯಕ್ ಮತ್ತು ಅತ್ತೆ ಬಸಂತಿ ನಾಯಕ್ ಸೇರಿಕೊಂಡು ತಮ್ಮ ಮನೆಯ ಛಾವಣಿಯ ಮೇಲೆ ಬಲವಂತವಾಗಿ ಕರೆದುಕೊಂಡು ಹೋಗಿ ರಾಡ್‍ಗೆ ಕಟ್ಟಿದ್ದಾರೆ. ಬಳಿಕ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

    ನೆರೆಹೊರೆಯವರು ಬಂದು ಆಕೆಯನ್ನು ಬುರ್ಲಾದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಹಿಳೆಯ ದೇಹ 90% ರಷ್ಟು ಸುಟ್ಟು ಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿರ್ಮಯಿ ಮೃತಪಟ್ಟಿದ್ದಾರೆ.

    ಮೃತ ಜ್ಯೋತಿರ್ಮಯಿಯ ತಂದೆ ಕೃಷ್ಣಾ ಚಂದ್ರ ಸತ್ಪತಿ ಅವರು ಹಿರಾಕುಡ್ ಪೊಲೀಸರಿಗೆ ಈ ಕುರಿತು ದೂರು ಸಲ್ಲಿಸಿದ್ದಾರೆ. ಮೃತ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಪತಿ ಮತ್ತು ಅತ್ತೆ-ಮಾವನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಣ್ಮನವನ್ನ ಸೆಳೆಯುತ್ತಿವೆ ಹೂಗಳಿಂದ ಅರಳಿದ ರಂಗೋಲಿ!

    ಕಣ್ಮನವನ್ನ ಸೆಳೆಯುತ್ತಿವೆ ಹೂಗಳಿಂದ ಅರಳಿದ ರಂಗೋಲಿ!

    ಭುವನೇಶ್ವರ: ಸಾಮಾನ್ಯವಾಗಿ ಎಲ್ಲರೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮನೆಗಳಲ್ಲಿ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ಆದರೆ ಒಡಿಶಾದಲ್ಲಿ ಪುಷ್ಪಾಲಂಕರಗಳ ಮೂಲಕ ವಿವಿಧ ರೀತಿಯ ವಿನ್ಯಾಸಗಳಲ್ಲಿ ರಂಗೋಲಿಯನ್ನು ಬಿಡಿಸಲಾಗಿದೆ. ಅವು ನೋಡುಗರ ಗಮನವನ್ನು ಸೆಳೆಯುತ್ತಿದೆ.

    ಲಲಿತ್ ಕಲಾ ಅಕಾಡೆಮಿ (ಆರ್ಟ್ ಗ್ಯಾಲರಿ) ಕಳೆದ ವಾರ ನಗರದ ಪ್ರಸಿದ್ಧ ಒಡಿಸ್ಸಿ ನರ್ತಕಿ ಜನ್ಹಾಬಿ ಬೆಹೆರಾರಿಂದ ಹೂವುಗಳಿಂದ ಮಾಡಿದ ರಂಗೋಲಿಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಪ್ರದರ್ಶನ ಕಂಡ ಹೂ ರಂಗೋಲಿಗಳು ತುಂಬಾ ಆಕರ್ಷಕವಾಗಿದ್ದವು.

    ಲಿಲ್ಲಿಗಳು, ಜಾಸ್ಮಿನ್, ಗುಲಾಬಿ ದಳಗಳು, ಚೆಂಡು ಹೂ (ಮಾರಿಗೋಲ್ಡ್) ಸುಗಂಧರಾಜ ಮತ್ತು ಒಣಗಿದ ಎಲೆಗಳನ್ನು ಈ ಚಿತ್ತಾರವಾದ ರಂಗೋಲಿಗಳಿಗಾಗಿ ಬಳಸಿಕೊಳ್ಳಲಾಗಿದೆ. ಇವುಗಳೆಲ್ಲವನ್ನು ಬಳಸಿಕೊಂಡು ವರ್ಣರಂಜಿತವಾದ ಮಾದರಿಗಳಲ್ಲಿ ರಂಗೋಲಿ ಬಿಡಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದೆ, “ನಾನು ಯಾವಾಗಲೂ ಹೂವುಗಳಿಗೆ ಆಕರ್ಷಿತನಾಗಿದ್ದೇನೆ. ಅವು ಪ್ರಕೃತಿಯ ಸೌಂದರ್ಯದ ಅಭಿವ್ಯಕ್ತಿಗಳು. ನಾನು ಗಿಡದಿಂದ ಹೂವುಗಳನ್ನು ಕೀಳುವುದನ್ನು ಇಷ್ಟ ಪಡುವುದಿಲ್ಲ. ಆದರೂ ನಮಗೆ ಯಾವಾಗಲೂ ಪ್ರದರ್ಶನದ ನಂತರ ಹೂವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ನಾನು ಈ ಹೂವುಗಳನ್ನು ಮನೆಗೆ ತರುತ್ತೇನೆ. ಬಳಿಕ ಆ ಹೂವುಗಳಿಂದಲೇ ರಂಗೋಲಿ ಬಿಡಿಸುತ್ತೇನೆ. ಆದ್ದರಿಂದ ಹೂ ವ್ಯರ್ಥವಾಗಲ್ಲ ಎಂದು ಹೇಳಿದ್ದಾರೆ.

    ಈ ರೀತಿ ಉಡುಗೊರೆಯಾಗಿ ಬಂದಂತ ಹೂಗಳಿಂದ ರಂಗೋಲಿ ಬಿಡಿಸುತ್ತಿದ್ದರು. ಬಳಿಕ ಜನರು ಕೂಡ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದು, ಕಾಲಕ್ರಮೇಣ ಸಾಮಾಜಿಕ ಜಾಲತಾಣಗಲ್ಲಿ ಸರಳವಾದ ಹೂವಿನ ರಂಗೋಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಆರಂಭಿಸಿದರು. ನಂತರ ವಿಡಿಯೋ ನೋಡಿ ಅವರ ಸ್ನೇಹಿತರು ಮತ್ತು ಹಲವಾರು ಪ್ರೋತ್ಸಾಹಿಸಿದರು. ಜನರ ಪ್ರೋತ್ಸಾಹದಿಂದ  ಜನ್ಹಾಬಿ ಬೆಹೆರಾ ಅವರು ” Phula Re Phula Re: A Story in Flowers”ಎಂಬ ಶೀರ್ಷಿಕೆಯಡಿಯಲ್ಲಿ ಹೂ ರಂಗೋಲಿ ಪ್ರದರ್ಶನಗಳನ್ನು ಪ್ರದರ್ಶಿಸಲು ನಿರ್ಧರಿಸಿದ್ದರು.

    ಹೀಗೆ ಅಭಿವೃದ್ಧಿ ಪಡೆದ ಹೂ ರಂಗೋಲಿ ಒಡಿಶಾದ ಕೆಲವು ಶ್ರೇಷ್ಠ ಕೈಮಗ್ಗದಿಂದ ಸ್ಫೂರ್ತಿ ಪಡೆದ ಪ್ರಸಿದ್ಧ ಪಸಾಪಾಲಿ ಮಾದರಿಯನ್ನು ಬಿಡಿಸುತ್ತಿದ್ದರು. ಸಾಮಾನ್ಯವಾಗಿ ಒಂದು ವಿನ್ಯಾಸವನ್ನು ಪೂರ್ಣಗೊಳಿಸಲು ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ನಾನು ಪ್ರಮುಖವಾಗಿ ಮಾರಿಗೋಲ್ಡ್ ಹೂವುಗಳ ಮೂಲಕ ಅಧಿಕವಾಗಿ ರಂಗೋಲಿಯನ್ನು ಬಿಡಿಸುತ್ತಿದ್ದೇನೆ ಎಂದು ಜನ್ಹಾಬಿ ಬೆಹೆರಾ ಹೇಳಿದ್ದಾರೆ.