Tag: ‘ಭರ್ಜರಿ ಬ್ಯಾಚುಲರ್ಸ್‌ʼ

  • ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

    ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

    ಸಿಂಗರ್, ಡ್ಯಾನ್ಸರ್ ಈಗ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಹನುಮಂತ (Hanumantha) ಮತ್ತೆ ಹಂಗಾಮಾ ಮಾಡ್ತಿದ್ದಾರೆ. ಅಕುಲ್ ಮಾತು ಹನುಮಂತನ ಡ್ಯಾನ್ಸ್ ನೋಡಿ ಕ್ರೇಜಿ ಸ್ಟಾರ್ ನಕ್ಕರು, ರಚಿತಾ ಒನ್ಸಮೋರ್ ಅಂದ್ರು. ಇದು ಹನುಮಂತನ ಡ್ಯಾನ್ಸ್ ಜೊತೆಗೆ ರಾಕಿಭಾಯ್ ಅವತಾರದಲ್ಲಿ ನೋಡಿ ಖುಷಿ ಪಡುವ ಟೈಮ್. ರಚಿತಾ ರಾಮ್ (Rachita Ram) ತರ ಹುಡುಗಿ ಸಿಗಬೇಕು ಅಂತ ಹನುಮ ಅನೌನ್ಸ್ ಮಾಡಿದ್ದಾನೆ.

    ಸಿಂಗರ್ ಆಗಿ ವಾಹಿನಿ ವೇದಿಕೆಗೆ ಎಂಟ್ರಿ ಕೊಟ್ಟ ಹನುಮಂತ ಈಗ ಭರ್ಜರಿ ಬ್ಯಾಚುಲರ್ ಆಗಿ ಮಿಂಚ್ತಿದ್ದಾನೆ. ಹಳ್ಳಿ ಹುಡುಗನ ಮುಗ್ಧತೆಗೆ, ಹಾವೇರಿ ಸೊಗಡಿನ ಮಾತುಗಳಿಗೆ ಕನ್ನಡ ಹೃದಯಗಳು ಮನಸೋತು ಬಹಳ ವರ್ಷಗಳಾಗಿದೆ. ಹನುಮಂತ ಏನು ಮಾಡಿದ್ರು ಚಂದ ಅನ್ನೋ ವಾತಾವರಣ ಈಗ. ಸದ್ಯ ಹನುಮಂತ ವಿಕೇಂಡ್‌ನಲ್ಲಿ ಆಡಿಯನ್ಸ್‌ಗೆ ಕಿಕ್ ಕೊಡಲು ರಾಕಿಭಾಯ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಕೆಜಿಎಫ್ ಹಾಡಿಗೆ ಪಾಟ್ನರ್ ಜೊತೆ ಹೆಜ್ಜೆ ಹಾಕಿದ್ದಾನೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ

    ಹನುಮಂತನ ಹಾಡು ಕೇಳಿದ ಜನಕ್ಕೆ ಇವನ ಡ್ಯಾನ್ಸ್ ಕೂಡ ಬಹಳ ಇಷ್ಟ ಆಗಿತು. ಈಗ ಭರ್ಜರಿ ಬ್ಯಾಚುಲರ್ಸ್ ಮೂಲಕ ಮತ್ತಷ್ಟು ಕಮಾಲ್ ಮಾಡ್ತಿದ್ದಾನೆ. ಹನುಮಂತನ ಡ್ಯಾನ್ಸ್ ನೋಡಿದ ಬ್ಯಾಚುಲರ್ ಸದಸ್ಯರು ಸಖತ್ ಎಂಜಾಯ್ ಮಾಡಿದ್ದರು. ರಚಿತಾ ರಾಮ್ ಚಪ್ಪಾಳೆ ತಟ್ಟಿ ನಕ್ಕು ನಲಿದ್ರು. ಹನುಮಂತ ಸದ್ಯ ಡ್ಯಾನ್ಸ್‌ನಲ್ಲೂ ಸೈ ಅನಿಸಿಕೊಂಡಿದ್ದಾನೆ. ಹೈದನ ಜೊತೆ ಮಾತುಗಾರ ಮಲ್ಲ ಅಕುಲ್ (Akul) ಸೇರಿ ಶೋನ ಕಿಕ್ ಮತ್ತಷ್ಟು ಹೆಚ್ಚಿಸಿದ್ದರು. ರಾಕಿಭಾಯ್ ಲುಕ್‌ನಲ್ಲಿದ್ದ ಹನುಮಂತ ರಾಕಿಂಗ್ ಸ್ಟಾರ್ (Yash) ಡೈಲಾಗ್ ಹೇಳಿದ. ಆ ಡೈಲಾಗ್ ಸ್ಟೈಲ್ ನೋಡಿ ತುಂಬಾ ಜನ ಎಂಜಾಯ್ ಮಾಡಿದ್ದರು. ಮತ್ತಷ್ಟು ಜನ ಒಳ್ಳೆಯ ಪ್ರಯತ್ನ ಕಣೋ ಹನುಮಂತ ಮಾಡು ಮುಂದೆ ಇನ್ನೂ ಚೆನ್ನಾಗಿ ಮಾಡ್ತೀಯಾ ಅಂತಾ ಜೋಶ್ ತುಂಬಿದ್ದರು.

    ರಚಿತಾ ರಾಮ್ (Rachita Ram) ಕೇಳಿದ ಮದುವೆ (Wedding) ಸಮಾಚಾರಕ್ಕೆ ಹನುಮಂತ ಥಟ್ ಅಂತ ಉತ್ತರ ಕೊಟ್ಟ. ಹನುಮನ ಉತ್ತರ ಕೇಳಿ ಖುದ್ದು ರಚಿತಾ ರಾಮ್ ಶಾಕ್ ಆಗಿ ಒಂದು ಸೆಕೆಂಡ್ ಸೈಲೆಂಟ್ ಆದ್ರು. ನಿಮ್ಮ ತರ ಹುಡುಗಿ ಸಿಕ್ಕಿರೆ ಸಾಕು ಅಂತ ಹನುಮಂತ ಹೇಳಿದ್ದು ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿತ್ತು. ಈ ಉತ್ತರ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಒಟ್ನಲ್ಲಿ ವಿಕೇಂಡ್‌ನಲ್ಲಿ ಭರ್ಜರಿ ಬ್ಯಾಚುಲರ್ಸ್ ಮೂಲಕ ಒಳ್ಳೆಯ ಮನರಂಜನೆ ಕೊಟ್ಟಿದ್ದಾರೆ. ಹನುಮಂತ ಮತ್ತಷ್ಟು ವಿಭಿನ್ನ ಪ್ರಯತ್ನಗಳಿಗೆ ಸಜ್ಜಾಗ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 40 ವರ್ಷದ ಸ್ನೇಹದ ಬಗ್ಗೆ ಮೆಲುಕು ಹಾಕಿದ ಶಿವಣ್ಣ- ರವಿಚಂದ್ರನ್

    40 ವರ್ಷದ ಸ್ನೇಹದ ಬಗ್ಗೆ ಮೆಲುಕು ಹಾಕಿದ ಶಿವಣ್ಣ- ರವಿಚಂದ್ರನ್

    ಕ್ರೇಜಿ ಸ್ಟಾರ್- ಸೆಂಚುರಿ ಸ್ಟಾರ್ ಒಟ್ಟಿಗೆ ಒಂದು ಕಡೆ ಸೇರಿದ್ರೆ ಮಾತಿಗೆ-ಮನರಂಜನೆಗೆ-ಸ್ನೇಹಕ್ಕೆ ಮಿತಿ ಇರಲ್ಲ. ಈ ಇಬ್ಬರು ಸ್ಟಾರ್‌ಗಳು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟ ಬೇಕು ಅಂತ ಒಂದೇ ಹಾಡಿಗೆ ಹೆಜ್ಜೆ ಹಾಕಿದ್ರೆ ಅದ್ರ ಕಿಕ್ಕೆ ಬೇರೆ. ಜಗಮಗಿಸುವ ವೇದಿಕೆಯಲ್ಲಿ ತಮ್ಮ 40 ವರ್ಷದ ಸ್ನೇಹದ ಬಗ್ಗೆ ಮಾತನಾಡಿದ್ದಾರೆ ರವಿ ಮತ್ತು ಶಿವು. ಬಾಲ್ಯದಿಂದ ಇಲ್ಲಿವರೆಗೆ ನಡೆದು ಬಂದ ಹಾದಿಯನ್ನ ಮೆಲುಕು ಹಾಕಿದ್ದಾರೆ.

    ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಲೈಫ್‌ನಲ್ಲಿ ಸೋಲು-ಗೆಲುವು, ಅವಮಾನ-ಸನ್ಮಾನ ಎಲ್ಲವನ್ನೂ ನೋಡಿ ಪರಿಪಕ್ವತೆ ಕಂಡಿರುವ ವ್ಯಕ್ತಿ ಮತ್ತು ವ್ಯಕ್ತಿತ್ವ. ಈ ಕನಸುಗಾರನ ಜೊತೆ ದೊಡ್ಮನೆ ಸರದಾರ ಸೇರಿ ಬಿಟ್ರೆ ಆ ದಿನ ಆ ಕ್ಷಣ ಮರೆಯಲಾಗದ ಅದೆಷ್ಟೋ ವಿಷ್ಯಗಳನ್ನ ಹಂಚಿ ಬಿಡ್ತಾರೆ. ಶಿವರಾಜ್ ಕುಮಾರ್ ಅಂದ್ರೆ ಏನು? ಸಿಂಪಲ್ಲಾಗಿ ಬದುಕೋದು ಎಷ್ಟು ಕಷ್ಟ? ವರನಟ ಡಾಕ್ಟರ್ ರಾಜ್ ಕುಮಾರ್ ಪುತ್ರನಾದ್ರು ಇಷ್ಟು ಸಿಂಪಲಾಗಿ ಶಿವಣ್ಣ (Shivarajukumar) ಇರೋದ್ರ ಬಗ್ಗೆ ರವಿಚಂದ್ರನ್ (Ravichandran) ಹೇಳಿದ ಬೆಂಕಿ ಮಾತುಗಳು ಇನ್ನೂ ಕನ್ನಡಿಗರ ಮನದಲ್ಲಿ ಹಸಿರಾಗಿದೆ.

    ಈ ಮಾತುಗಳು ಸತ್ಯ ಸತ್ಯ. ಜನ ಮೆಚ್ಚಿಕೊಂಡು ಒಪ್ಪಿಕೊಳ್ಳುವ ಹೊತ್ತಿಗೆ ಮತ್ತೊಮ್ಮೆ ಈ ಸ್ಟಾರ್‌ಗಳು ಒಟ್ಟಿಗೆ ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ವಿಕೇಂಡ್‌ನಲ್ಲಿ ಕನ್ನಡಿಗರ ದಿನವನ್ನ ಇನ್ನಷ್ಟು ಸ್ಪೆಷಲ್ ಮಾಡಲು ವಾಹಿನಿ ಮತ್ತೆ ಇಬ್ಬರು ಆಪ್ತಮಿತ್ರರನ್ನ ಒಟ್ಟಿಗೆ ಒಂದೇ ವೇದಿಕೆಗೆ ಕರೆಸಿದೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟ ಬೇಕು ಹಾಡಿಗೆ ಇವರಿಬ್ಬರೂ ಕೈ ಕೈ ಹಿಡಿದು ಎಂಟ್ರಿ ಕೊಡೋದನ್ನ ನೋಡೋದೆ ಒಂದು ಹಬ್ಬದ ಫಿಲ್. ಅಪ್ಪಾಜೀ ಹಾಡು ಜೊತೆಗೆ ಜೀವದ ಗೆಳೆಯರು ಸೂಪರ್ ಬಿಡ್ರಿ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ಈ ವಾರ ನೋಡುಗರಿಗೆ ಮತ್ತಷ್ಟು ಮನರಂಜನೆ ಕೊಡಲು ಮಹಾಸಂಗಮ ಮಾಡಿತ್ತು ಖಾಸಗಿ ವಾಹಿನಿ. ಭರ್ಜರಿ ಬ್ಯಾಚುಲರ್ಸ್‌ (Bharjari Bachelors) ಜೊತೆಗೆ ಡಿಕೆಡಿ ಕಿಲಾಗಳನ್ನ ಒಂದೇ ವೇದಿಕೆಯಲ್ಲಿ ನಿಲ್ಲಿಸಿ ಮನರಂಜನೆಯ ಮಹಾಪೂರವನ್ನ ಹರಿಸಿತ್ತು ಮಹಾಸಂಗಮ ಟೀಮ್. ಅನುಶ್ರೀ (Anushree) ಜೊತೆಗೆ ಅಕುಲ್ (Akul) ಸೇರಿ ಮಾತಿನಿಂದ ಮತ್ತಷ್ಟು ಕಿಕ್ ಕೊಟ್ರು. ಇವರಿಬ್ಬರ ಮಾತಿನ ಮೋಡಿಗೆ ನಕ್ಕು ನಕ್ಕು ಸುಸ್ತಾದ್ರು ಆಡಿಯನ್ಸ್.

    ಇನ್ನು ವೇದಿಕೆ ಮೇಲೆ ಎಂಟ್ರಿ ಕೊಟ್ಟ ಎರಡೂ ಶೋನ ಸ್ಪರ್ಧಿಗಳು ಕೂಡ ಒಳ್ಳೆ ಮಸಾಲೆ ಹಾಕಿದ್ರು. ಅಂಗಿ-ಲುಂಗಿಯಲ್ಲಿ ಎಂಟ್ರಿ ಕೊಟ್ಟು ಹನುಮಂತನ ಕಾಮಿಡಿ ಬೇರೆ ಲೆವೆಲ್‌ನಲ್ಲಿ ಕಿಕ್ ಕೊಡ್ತು. ಅಕ್ಕನ ಮಾತಿಗೆ ವೇದಿಕೆ ಮಧ್ಯಕ್ಕೆ ಬಂದ ಹನುಮಂತ ಜೊತೆಗೆ ತನ್ನ ಪಾರ್ಟ್‌ನರ್ಸ್ ಕೂಡ ಕರಕೊಂಡು ಬಂದಿದ್ದು ಸ್ಪೆಷಲ್ ಆಗಿತ್ತು.

    ಹನುಮಂತ ಭರ್ಜರಿ ಬ್ಯಾಚುಲರ್ಸ್‌ಗೆ ಬಂದ್ಮೇಲೆ ಅಪ್‌ಡೇಟ್ ಆಗಿದ್ದಾನೆ ಅನ್ನೊದು ಅರ್ಥ ಆಗುತ್ತೆ. ಇನ್ನು ಸೂರಜ್ ತೂಕ ಇಳಿಸ್ತಿರುವ ಸಮಾಚಾರಕ್ಕೆ ರೆಬೆಲ್ ಸ್ಟಾರ್ ವಾಯ್ಸ್ ಸಖತ್ ನಗಿಸ್ತು. ಸೂರಜ್‌ನ ಸೂರ್ಯ ನಮಸ್ಕಾರಕ್ಕೆ ಸೆಂಚುರಿ ಸ್ಟಾರ್ ನಾನ್‌ಸ್ಟಾಪ್ ಸ್ಮೇಲ್ ಕೊಟ್ರು. ದರ್ಶನ್ ಹಾಗೂ ಪ್ರೀತಿ, ಜಗಪ್ಪ ಮತ್ತು ಲಾಸ್ಯ ತುಂಟ ತುಂಟ ಅಂತ ಎಂಟರ್‌ಟೈನ್ ಮಾಡಿದ್ರು. ಜಗಪ್ಪನ ಜಗಮಗಿಸುವ ಡ್ಯಾನ್ಸ್ ನೋಡಿ ಕಂಪ್ಲೀಟ್ ಮಹಾಸಂಗಮ ಟೀಮ್ ಶಾಕ್ ಆಗಿತ್ತು. ಸಖತ್ ಡ್ಯಾನ್ಸ್ ಮಾಡ್ದೆ ಜಗಪ್ಪ ಅಂತ ಚಪ್ಪಾಳೆಗಳ ಸುರಿಮಳೆ ಸುರಿಸಲಾಯ್ತು. ಜಗಪ್ಪನ ಜೊತೆ ಶಿವಣ್ಣ ಹೆಜ್ಜೆ ಹಾಕಿದ್ದು ಮತ್ತಷ್ಟು ಕಳೆ ಕೊಟ್ಟಿತ್ತು. ತುಮಕೂರಿನ ಯುವನ್ ಮತ್ತು ಲೇಖನ ಪುಟಾಣಿಗಳ ಎವಿ ನೋಡಿ ಎಂಜಾಯ್ ಮಾಡೋದ್ರ ಜೊತೆಗೆ ಡ್ಯಾನ್ಸ್ ನೋಡಿ ಖುಷಿ ಪಟ್ರು. ಪುಟ್ಟಮಕ್ಕಳ ಮಾತು-ಡ್ಯಾನ್ಸು ಎಲ್ಲವೂ ಬಹಳ ಇಷ್ಟ ಆಗುತ್ತೆ ಅಲ್ವಾ?

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಕಿರುತೆರೆಯಲ್ಲೂ ಸ್ಟಾರ್‌ಗಳನ್ನು ಹುಟ್ಟುಹಾಕಬಹುದು ಎಂದು ತೋರಿಸಿಕೊಟ್ಟ ಕರುನಾಡಿನ ಹೆಮ್ಮೆಯ ವಾಹಿನಿ ಝೀ ಕನ್ನಡ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸದಾ ತಾನು ತರುವ ಸದಭಿರುಚಿಯ ಕಾರ್ಯಕ್ರಮಗಳ ಮುಖಾಂತರ ಕನ್ನಡಿಗರನ್ನ ಸತತ 17 ವರ್ಷಗಳಿಂದ ಮನೋರಂಜಿಸುತ್ತ ಬಂದಿರುವ ಈ ವಾಹಿನಿಯ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಈಗ ಕನ್ನಡಿಗರ ಮುಂದೆ ಬರಲು ಸಕಲ ತಯಾರಿಯೊಂದಿಗೆ ಸಿದ್ಧವಾಗಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ನಿಜ ತೊಂದರೆಗಳನ್ನ ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಿರುತೆರೆಯ ಆಯ್ದ ಬ್ಯಾಚುಲರ್ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಕಾರ್ಯಕ್ರಮವಾಗಿದೆ. ಹತ್ತು ಎಲಿಜಬಲ್ ಬ್ಯಾಚುಲರ್‌ಗಳ ಕನಸುಗಳನ್ನ ನಿಜರೂಪಕ್ಕೆ ತರುತ್ತಾ ಅವರ ಆಸೆಗಳ ಅಖಾಡದಲ್ಲಿ ಅವರ ಗಟ್ಟಿತನವನ್ನ ಕರುನಾಡಿಗೆ ತೋರಿಸುತ್ತಾ ಒಬ್ಬ ಬ್ಯಾಚುಲರ್ ಮದುವೆಗೆ ಎಲಿಜಬಲ್ ಆಗಲು ಏನೆಲ್ಲ ಮಾಡಬೇಕು ಅನ್ನೋದನ್ನ ಕರುನಾಡಿಗೆ ಸಾರುವ ಈ ರಿಯಾಲಿಟಿ ಶೋನ ನಿರೂಪಣೆಯ ಜವಾಬ್ದಾರಿಯನ್ನ ಹೊತ್ತಿರೋದು ನಿರೂಪಕ ಅಕುಲ್ ಬಾಲಾಜಿ (Akul Balaji) ವಿಭಿನ್ನ ಮ್ಯಾನರೀಸಂ ಜೊತೆ ಸಖತ್ ಮಾತುಗಳ ಮೂಲಕ ಮನೋರಂಜನೆ ನೀಡೋಕೆ ರೆಡಿಯಾಗಿರುವ ಅಕುಲ್ ಬಾಲಾಜಿ ಬಹಳ ದಿನಗಳ ನಂತರ ಮತ್ತೆ ವಾಹಿನಿಗೆ ವಾಪಸ್ಸಾಗುತ್ತಿರೋದು ಮತ್ತೊಂದು ಹೈಲೈಟ್.

    ಕರ್ನಾಟಕಕ್ಕೆ ಪ್ರೇಮ ಪಾಠ ಹೇಳಿದ, ಪ್ರೇಮಲೋಕ ಸೃಷ್ಟಿಸಿದ ಕರುನಾಡಿನ ರಣಧೀರ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಿದ್ರೆ, ಡಿಂಪಲ್ ಕ್ವೀನ್ ರಚಿತಾರಾಮ್ (Rachitha Ram) ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರು ಖುರ್ಚಿಯ ಗತ್ತನ್ನ ಹೆಚ್ಚುಮಾಡಿದ್ದಾರೆ. ಹತ್ತು ಬ್ಯಾಚುಲರ್‌ಗಳ ಇಷ್ಟ ಕಷ್ಟಗಳ ನಡುವೆ ಹೆಣೆದಿರುವ ಈ ರಿಯಾಲಿಟಿ ಶೋಗೆ ರಾಗ ಸಂಯೋಜನೆ ಮಾಡಿರೋದು ಕರುನಾಡಿನ ರಾಕ್ ಸ್ಟಾರ್ ಚಂದನ್ ಶೆಟ್ಟಿ. ಟೀನೇಜ್ ಹುಡುಗರ ಪಲ್ಸ್ ರೇಟ್‌ ಯಾವಾಗಲು ಜಾಸ್ತಿ ಮಾಡೋ ಹಾಡುಗಳನ್ನ ಕೊಟ್ಟು ಕನ್ನಡಿಗರು ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಚಂದನ್ ಶೆಟ್ಟಿಯವರ ರಾಗ ಸಂಯೋಜನೆಗೆ ರಾಕೇಶ್ ಸಿ.ಎ ಸಾಹಿತ್ಯದ ಈ ಸಾಂಗಿನಲ್ಲಿ ಬ್ಯಾಚುಲರ್‌ಗಳ ಆಸೆ, ಕನಸುಇಷ್ಟ, ಕಷ್ಟ, ತುಮುಲ ಮತ್ತು ತೊಳಲಾಟ ಎಲ್ಲವು ಎದ್ದು ಕಾಣುತ್ತದೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿರುವ ಈ ಟೈಟಲ್ ಸಾಂಗಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ನಮ್ಮ ಬ್ಯಾಚುಲರ್‌ಗಳ ಬಯೋಡೇಟಾ ಕನ್ನಡಿಗರ ಮುಂದೆ ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ನಿಮ್ಮ ಮನೆಗೆ ಬರಲಿದೆ.

    ಸತತ 4 ವರ್ಷಗಳಿಂದ ನಮ್ಮನ್ನ ನಂ.1 ಸ್ಥಾನದಲ್ಲಿ ಇಟ್ಟಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 4ರ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಂದು ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್‌ನ ನಿಮ್ಮ ಮುಂದೆ ತರುವ ತಯಾರಿ ಮಾಡಿದ್ದೇವೆ. ಸಮಾಜದಲ್ಲಿ ಬ್ಯಾಚುಲರ್‌ಗಳು ಅನುಭವಿಸೋ ತೊಂದರೆಗಳನ್ನ ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನೋರಂಜನೆ ಸೇರಿಸುತ್ತಾ ಬ್ಯಾಚುಲರ್‌ಗಳ ಸಮಸ್ಯೆಗಳನ್ನ ನಿಮ್ಮ ಮುಂದೆ ಇಡೋ ಪ್ರಯತ್ನವೇ ಈ ಭರ್ಜರಿ ಬ್ಯಾಚುರಲ್ಸ್.

  • ವಧು ಅನ್ವೇಷಣೆಗಾಗಿ ‘ಭರ್ಜರಿ ಬ್ಯಾಚುಲರ್ಸ್‌ʼ ಅಡ್ಡಾಗೆ ಕಾಲಿಟ್ಟ ಹನುಮಂತ

    ವಧು ಅನ್ವೇಷಣೆಗಾಗಿ ‘ಭರ್ಜರಿ ಬ್ಯಾಚುಲರ್ಸ್‌ʼ ಅಡ್ಡಾಗೆ ಕಾಲಿಟ್ಟ ಹನುಮಂತ

    ಹಾವೇರಿಯ ಹೈದ, ಚಿಲ್ಲೂರು ಚಿಂಗಾರಿ ಮತ್ತೆ ಕ್ಯಾಮೆರಾ ಮುಂದೆ ಕಂಗೊಳಿಸ್ತಿದ್ದಾನೆ. ಸೂಟು-ಬೂಟು ಹಾಕ್ಕೊಂಡು ಟೀಮ್ ಜೊತೆ ಈ ಸಲ ಕಮ್ ನಮ್ದೆ ಅಂತ ಬೆನ್ಜ್ ಕಾರ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾನೆ. ಅಂಗಿ-ಲುಂಗಿ ಜೊತೆ ಕಾಮಾಗಿದ್ದ ಹನುಮಂತನ (Hanumantha) ನಯಾ ಅವತಾರ ನೋಡಿ ಕನ್ನಡಿಗರು ಕೇಕೆ ಹಾಕಿದ್ದಾರೆ. ಕುರಿಮ್ಯಾನ್ ಮಾಡ್ತಿರುವ ನಯಾ ಪ್ರಾಜೆಕ್ಟ್ ಜೊತೆಗೆ ಹನುಮನ ಮದುವೆಗೆ ಮ್ಯಾಚ್ ಆಗುವ ರಿಯಾಲಿಟಿ ಶೋನ ಕಂಪ್ಲೀಟ್ ಡಿಟೈಲ್ಸ್ ನಿಮ್ಮ‌ ಮುಂದೆ ಬರ್ತಿದೆ ನೋಡಿ.

    ಖಾಸಗಿ ವಾಹಿನಿಯಲ್ಲಿ ಗಾಯಕ ಹನುಮಂತ ಹೊಸ ಅವತಾರದಲ್ಲಿ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ ಪ್ರೋಮೋ ಮೂಲಕ ‘ಭರ್ಜರಿ ಬ್ಯಾಚುಲರ್ಸ್‌ʼ ಒಳ್ಳೆ ಹೈಪ್ ಕ್ರಿಯೇಟ್ ಮಾಡಿದೆ. ಸುಂದರವಾದ ಹುಡುಗಿಯರನ್ನ ರ‍್ಯಾಂಪ್ ಮೇಲೆ ವಾಕ್ ಮಾಡಿಸಿ ಶೋಗೆ ಗ್ಲಾಮರ್ ಸೇರಿಸಿದೆ ‘ಭರ್ಜರಿ ಬ್ಯಾಚುಲರ್ಸ್‌ʼ (Bharjari Bachelors) ಟೀಮ್. ನೀವು ಮದುವೆ ಆಗೋ ಹುಡುಗ ಹೇಗಿರಬೇಕು ಅನ್ನೋ ಪ್ರಶ್ನೆ ಮೂಲಕ ಹುಡುಗಿಯರ ಅಂತರಾಳವನ್ನ ಪ್ರೋಮೋದಲ್ಲಿ ಅನಾವರಣ ಮಾಡಲಾಗಿದೆ. ಸುಂದರಿಯರ ಕಲ್ಪನೆಗೆ ವಿರುದ್ಧವಾದ ಹುಡುಗರನ್ನ ಅಖಾಡಕ್ಕೆ ಇಳಿಸಿ ನೋಡುಗರಿಗೆ ಭರವಸೆ ಮೂಡಿಸಿದೆ. ಈ ಶೋನಲ್ಲಿ ಸಮ್‌ಥಿಂಗ್ ಸ್ಪೆಷಲ್ ಇದೆ ಅಂತ ಸಣ್ಣ ತುಣುಕು ಗ್ಯಾರೆಂಟಿ ಕೊಟ್ಟಿದೆ. ಇದನ್ನೂ ಓದಿ:ಚೆಕ್‌ ಬೌನ್ಸ್‌ ಕೇಸ್:‌ ಕೋರ್ಟ್‌ಗೆ ಶರಣಾದ ಬಾಲಿವುಡ್‌ ನಟಿ ಅಮೀಷಾ ಪಟೇಲ್

    ಮಾಡೆಲ್‌ಗಳ ಮಾತು ಕೇಳಿದ್ಮೇಲೆ ಬಾಯ್ಸ್ ಎಂಟ್ರಿ ಕೊಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ಡಿಫರೆಂಟ್ ಎಂಟ್ರಿ. ಪಂಚ್ ಲೈನ್‌ಗಳು, ಭರ್ಜರಿ ಕಾಸ್ಟ್ಯೂಮ್‌ಗಳು ಜೊತೆಗೆ ರಿಚ್ ಹೋಟೆಲ್ ಕಾಸ್ಟ್ಲಿ ಕಾರು.. ಬಟ್ ಹುಡುಗರು ಮಾತ್ರ ಪಕ್ಕಾ ಲೋಕಲ್. ಈ ಸೂಪರ್ ಮಾಡೆಲ್‌ಗಳ ಜೊತೆ ಸೂಪರ್ ಟ್ಯಾಲೆಂಟ್ ಹುಡುಗರು ಏನು ಮಾಡ್ತಾರೆ ಹೇಗೆ ವರ್ಕ್ಔಟ್ ಮಾಡಿಕೊಳ್ತಾರೆ ಅನ್ನೋದು ಶೋನ ಹೂರಣ. ಹೆಗಲ ಮೇಲೆ ಟವೆಲ್ ಹಾಕ್ಕೊಂಡು, ಹಳೆ ಲುಂಗಿ ಕಾಮನ್ ಅಂಗಿ ಜೊತೆ ಸ್ಟೇಜ್ ಹತ್ತಿದ ಹನುಮಂತ ಪಕ್ಕದ ಮನೆ ಹುಡುಗನ ಹಾಗೇ ಕನ್ನಡಿಗರ ಮನದಲ್ಲಿ ಜಾಗ ಗಿಟ್ಟಿಸಿ ಬಿಟ್ಟ. ಜವಾರಿ ಹುಡುಗನ ಕಂಠಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ರು. ಹಳ್ಳಿ ಹುಡುಗ ಕಿರುತೆರೆಯಲ್ಲಿ ಹೊಸದೊಂದು ಪುಟವನ್ನ ತನಗಾಗಿ ಬರೆದುಕೊಂಡ. ಹಾಡಿಗೆ ಮಾತ್ರವಲ್ಲ ಡ್ಯಾನ್ಸ್‌ಗೂ ಸೈ ಅಂತ ಡಿಕೆಡಿ ವೇದಿಕೆಯಲ್ಲಿ ಕುಣಿದು ಜನರನ್ನ ಕುಣಿಸಿದ. ಹಾಡು ಮಾತು ಜೊತೆಗೆ ಒಂದಿಷ್ಟು ಡ್ಯಾನ್ಸ್ ಮಾಡಿ ಬಪ್ಪರೆ ಮಗ ಅಂತ ಅನಿಸಿಕೊಂಡ.

    ಜುಲೈ ಅಂತ್ಯಕ್ಕೆ ‘ಭರ್ಜರಿ ಬ್ಯಾಚುಲರ್ಸ್‌ʼ ನಿಮ್ಮ ಮನೆಯಂಗಳಕ್ಕೆ ಬರೋ ಸಾಧ್ಯತೆಯಿದೆ. ಮತ್ತೆ ಕಿರುತೆರೆಯಲ್ಲಿ ಹನುಮನ ಪಯಣ ಶುರುವಾಗಿದೆ. ಪಯಣ ಸುಂದರ ಮನರಂಜನೆಯ ತಾಣಕ್ಕೆ ಸೇರಲಿದೆ ಅನ್ನೊದು ಕೂಡ ಖಾತ್ರಿಯಾಗಿದೆ. ಹನುಮಂತ ದ್ಯಾವರಿಗೆ ಕೈ ಮುಗಿದು ನಮ್ಮ ಹನುಮಂತನಿಗೆ ಒಳ್ಳೆ ಹುಡುಗಿ ಸಿಗ್ಲಿ ಅಂತ ನೀವು ಹರಸಿ. ಮುಂದೆ ಹನುಮನ ಪಾಡು ಹೇಗಿರುತ್ತೆ ಅನ್ನೋದನ್ನ ನೋಡುವ.