Tag: ಭರ್ಜರಿ ಬ್ಯಾಚುಲರ್ಸ್

  • ಭರ್ಜರಿ ಬ್ಯಾಚುಲರ‍್ಸ್ ರಮೋಲಾ ವಿರುದ್ಧ ದೂರು

    ಭರ್ಜರಿ ಬ್ಯಾಚುಲರ‍್ಸ್ ರಮೋಲಾ ವಿರುದ್ಧ ದೂರು

    ಕಿರುತೆರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ರಮೋಲಾ (Ramola) ವಿರುದ್ಧ ಫಿಲ್ಮ್ ಚೇಂಬರ್‌ಗೆ (Film Chamber) ದೂರು ನೀಡಿದೆ ಚಿತ್ರತಂಡ. ಭರ್ಜರಿ ಬ್ಯಾಚುಲರ್ಸ್‌ (Bharjari Bachelors) ರಿಯಾಲಿಟಿ ಶೋನಲ್ಲಿ ರಕ್ಷಕ್‌ಗೆ ಜೋಡಿಯಾಗಿದ್ದ ರಮೋಲಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ ರಿಚ್ಚಿ ಚಿತ್ರತಂಡ.

    ನಟಿ ರಮೋಲಾ ಅವರು `ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈಗ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಿಚ್ಚಿ ಅವರು ಈ ಬಗ್ಗೆ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ಸಿನಿಮಾದ ಪ್ರಮೋಷನ್‌ಗೆ ರಮೋಲಾ ಬರುತ್ತಿಲ್ಲ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ?

     

    ಅಂದಹಾಗೆ ರಿಚ್ಚಿ ಸಿನಿಮಾದಲ್ಲಿ ರಮೋಲಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಮೋಷನ್ಸ್ ಬನ್ನಿ ಎಂದರೆ ಬರುತ್ತಿಲ್ಲ ಎಂದು ನಿರ್ಮಾಪಕ ಹೇಮಂತ್ ರಿಚ್ಚಿ ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿಯ ಪಾತ್ರದಿಂದ ಜನಪ್ರಿಯತೆ ಗಳಿಸಿರುವ ರಮೋಲಾ ರಿಚ್ಚಿ ಸಿನಿಮಾ ಶೂಟಿಂಗ್ ಬಳಿಕ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಿನಿಮಾ ತಂಡ ಪ್ರಮೋಷನ್‌ಗೆ ಕರೆಯುತ್ತಿದೆ. ಆದರೆ  ಕರೆ ಸ್ವೀಕರಿಸದೇ ಚಿತ್ರತಂಡಕ್ಕೆ ಸಹಕಾರ ನೀಡ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಫಿಲ್ಮ್ ಚೇಂಬರ್‌ಗೆ ಇಡೀ ಚಿತ್ರತಂಡ ದೂರು ನೀಡಿದೆ.

  • ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

    ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

    ರುನಾಡಿನ ಎಲ್ಲರ ನೆಚ್ಚಿನ ವಾಹಿನಿ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಡ್ರಾಮಾ ಜೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ಸೇರಿ ಹಲವಾರು ಶೋಗಳ ಮೂಲಕ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಈ ಪಟ್ಟಿಗೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಸೀಸನ್ 2 ಸೇರ್ಪಡೆಯಾಗಿದ್ದು, ಇದು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾದ ಮದುವೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಕೇಂದ್ರೀಕರಿಸುವ ರಿಯಾಲಿಟಿ ಶೋ ಆಗಿದೆ.

    ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ಯಶಸ್ಸಿನ ಬಳಿಕ ಎರಡನೇ ಸೀಸನ್ ಕೂಡ ಕರ್ನಾಟಕದಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೀಸನ್‌ನಲ್ಲಿ ಹೊಸ ಬ್ಯಾಚುಲರ್‌ಗಳನ್ನು ಪರಿಚಯಿಸಲಾಯಿತು. ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸ್ವಾಭಾವಿಕತೆ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಸುತ್ತುಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ.

    ಸೀಸನ್ ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಡೆಡಿಕೇಶನ್ ರೌಂಡ್, ಕಂಪ್ಯಾಟಿಬಿಲಿಟಿ ರೌಂಡ್, ಪ್ರೊಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಹೀಗೆ ವಿಭಿನ್ನ ಸುತ್ತುಗಳು ಇದ್ದು ಇದರಲ್ಲಿ ಏಂಜೆಲ್ಸ್ ಮತ್ತು ಬ್ಯಾಚುಲರ್ಸ್ ಸಕ್ಕತಾಗಿ ಭಾಗವಹಿಸಿ ಎಲ್ಲರನ್ನೂ ಮನರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶೋ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಅದ್ಬುತ ನಿರೂಪಣೆಯ ಮೂಲಕ ನಿರಂಜನ್ ದೇಶಪಾಂಡೆ (Niranjan Deshpande) ಈ ಶೋನ ನಡೆಸಿಕೊಟ್ಟಿದ್ದು, ಜಡ್ಜ್‌ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಶೋನ ಮತ್ತೊಂದು ಕೇಂದ್ರ ಬಿಂದುವಾಗಿದ್ದರು. ಹಾಗೆಯೇ ಶೋನಲ್ಲಿ ಭಾಗವಹಿಸಿದ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ಗಳು ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕರನ್ನು ಮನರಂಜಿಸಿದ್ದಾರೆ.  ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ಅಂತಿಮ ಸುತ್ತಿನಲ್ಲಿ ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲ, ಹುಲಿ ಕಾರ್ತಿಕ್- ಧನ್ಯ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನುವುದಕ್ಕೆ ಈ ವಾರಾಂತ್ಯದಲ್ಲಿ ಸಿಗಲಿದೆ ಉತ್ತರ.

    ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನ ವಿಜೇತರು ಯಾರಾಗ್ತಾರೆ? ತಿಳ್ಕೊಳೋಕೆ ಮಿಸ್ ಮಾಡದೇ ನೋಡಿ ಜೀ಼ ಕನ್ನಡ ಇದೇ ಭಾನುವಾರ ಸಂಜೆ 6 ಗಂಟೆಗೆ.

  • ಶಿವಣ್ಣ ಗೆಟಪ್‌ನಲ್ಲಿ ಆಸಿಯಾಗೆ ಜನುಮದ ಜೋಡಿಯಾಗಿ ಹನುಮಂತ ಮೋಡಿ

    ಶಿವಣ್ಣ ಗೆಟಪ್‌ನಲ್ಲಿ ಆಸಿಯಾಗೆ ಜನುಮದ ಜೋಡಿಯಾಗಿ ಹನುಮಂತ ಮೋಡಿ

    ರ್ಜರಿ ಬ್ಯಾಚುಲರ್ಸ್‌ನಲ್ಲಿ (Bharjari Bachelors) ಕುರಿಗಾಹಿ ಹನುಮಂತ (Hanumantha) ಈ ವಾರ ಸೂಪರ್ ಡೂಪರ್ ಎಂಟರ್‌ಟೈನ್ಮೆಂಟ್ ಕೊಟ್ಟಿದ್ದಾನೆ. ಇಡೀ ಜನುಮದ ಜೋಡಿ ಸಿನಿಮಾವನ್ನೇ ರೀಕ್ರಿಯೇಟ್ ಮಾಡಿದ್ದಾನೆ. ಶಿವರಾಜ್‌ಕುಮಾರ್ (Shivarajkumar) ಗೆಟಪ್‌ನಲ್ಲಿ ಕುರಿಗಾಹಿ ಹೇಗೆ ಕಾಣ್ತಾನೆ..? ಶಿವಣ್ಣರ ಸ್ಟೈಲ್ ಫಾಲೋ ಮಾಡೋದ್ರಲ್ಲಿ ಯಶಸ್ವಿಯಾದ್ರಾ..?

    ವಾರಕ್ಕೊಂದು ಟಾಸ್ಕ್, ವಾರಕ್ಕೊಂದು ರಿಸ್ಕ್ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಸ್ಪರ್ಧಿಗಳು ತೆಗೆದುಕೊಳ್ಳಬೇಕಾಗುತ್ತೆ. ಅದೇ ರೀತಿ ಈ ವಾರದ ಟಾಸ್ಕ್‌ನಲ್ಲಿ ಕಂಟೆಸ್ಟಂಟ್ಸ್ ಇನ್ನೊಬ್ಬರ ಪಾತ್ರವನ್ನ ಇಮಿಟೇಟ್ ಮಾಡ್ಬೇಕು. ಹನುಮಂತ ಚಾಲೆಂಜ್ ಸ್ವೀಕರಿಸಿದ್ದು ಜನುಮದ ಜೋಡಿಯ (Janumada Jodi Film) ಕೃಷ್ಣ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದ ಪಾತ್ರ. ಶಿವರಾಜ್‌ಕುಮಾರ್ ಬ್ಲಾಕ್‌ಬಸ್ಟರ್ ಸಿನಿಮಾ ಜನುಮದ ಜೋಡಿ. ಮ್ಯೂಸಿಕಲ್ ಹಿಟ್..ಪ್ರತಿ ಹಾಡುಗಳ ಜೋಡಿಸಿದ್ರೆ ಇಡೀ ಸಿನಿಮಾವೇ ಕಣ್ಮುಂದೆ ಬರುತ್ತೆ…ಅದನ್ನೇ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದಾರೆ ಹನುಮಂತ ಹಾಗೂ ಆತನ ಜೋಡಿ ಆಸಿಯಾ ಬೇಗಂ. ಇದನ್ನೂ ಓದಿ:ಹಾಟ್ ಆಗಿ ಕಾಣಿಸಿಕೊಂಡ ‘ಕಾಂಚನ 3’ ನಟಿ ನಿಕ್ಕಿ

    ಕೃಷ್ಣನ ಪಾತ್ರದಲ್ಲಿ ಕುರಿಮ್ಯಾನ್ ಹನುಮಂತ…ಕನಕ ಪಾತ್ರದಲ್ಲಿ ಆಸಿಯಾ ಮಿಂಚಿದ್ದಾರೆ. ಹಳ್ಳಿ ಸೊಗಡಿನ ಸೆಟ್‌ನಲ್ಲಿ ಹನುಮಂತ ಆಸಿಯಾ(Asiya) ನೃತ್ಯ ನೋಡ್ತಿದ್ರೆ ರಿಯಲ್ ಕೃಷ್ಣ ಹಾಗೂ ಕನಕ ಕಣ್ಮುಂದೆ ಬರ್ತಾರೆ. ಶಿವಣ್ಣರ ಗೆಟಪ್ ಹಾಗೂ ಸ್ಟೆಪ್‌ನ ಹನುಮಂತ ಇಮಿಟೇಟ್ ಮಾಡಲು ಪ್ರಯತ್ನ ಪಟ್ಟ. ಕಾಸ್ಟ್ಯೂಮ್ ಕೂಡ ಮ್ಯಾಚ್ ಆಗುವಂತಿತ್ತು.. ಟೋಟಲಿ ಜಬರ್ದಸ್ತಾಗಿತ್ತು.

    ಹನುಮಂತ ಓರ್ವ ಜವಾರಿ ಗಾಯಕ. ಡಿಕೆಡಿಯಲ್ಲೂ ಸ್ಪರ್ಧಿಸಿದ್ದ. ಹೀಗಾಗಿ ಹಾಡು ಡ್ಯಾನ್ಸು ಎರಡೂ ಗೊತ್ತು. ಆ್ಯಕ್ಟಿಂಗ್ ಹೊಸದು, ಆದರೂ ಪ್ರಯತ್ನ ಪಡ್ತಾನೆ. ಹೇಳಿಕೊಟ್ಟರೆ ಶೃದ್ದೆಯಿಂದ ಕಲಿತು ಪ್ರದರ್ಶಿಸುತ್ತಾನೆ. ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಪ್ರತಿ ವಾರವೂ ಒಂದೊಂದು ವಿಧದ ಟಾಸ್ಕ್‌ನಲ್ಲಿ ಮಿಂಚಿದ್ದಾನೆ. ಹನುಮಂತನಲ್ಲಿ ಇನ್ನೂ ಏನೆಲ್ಲಾ ಟ್ಯಾಲೆಂಟ್ ಇದ್ಯೋ ನೋಡ್ಬೇಕು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಸಿಂಗರ್ ಹನುಮಂತ ಸರ್ಪ್ರೈಸ್

    ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಸಿಂಗರ್ ಹನುಮಂತ ಸರ್ಪ್ರೈಸ್

    ಹುಡುಗಿಗೋಸ್ಕರ ಯರ‍್ಯಾರೋ ಬದಲಾಗೋದನ್ನ ನೋಡಿರ್ತೀವಿ, ಈಗ ಜವಾರಿ ಸಿಂಗರ್ ಹನುಮಂತನ (Singer Hanumantha) ಸರದಿ, ಬ್ಯಾಚುಲರ್ ಬೇಡಿಯಿಂದ ಹೊರಬಂದು ಜಂಟಿಯಾಗಿರೋ ಕುರಿಗಾಹಿ ಈಗ ಆಸಿಯಾ ಬೇಗಂಗೆ ಜೋಡಿ. ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಹನುಮಂತ ಕೊರಿಯನ್ ಡ್ಯಾನ್ಸ್ ಮಾಡಿದ್ದಾನೆ.

    ಕಿರುತೆರೆಯ ಸರಿಗಮಪ ರಿಯಾಲಿಟಿ ಶೋನಲ್ಲಿ ತನ್ನ ಗಾಯನದ ಮೂಲಕ ಮನೆ ಮಾತಾದ ಹನುಮಂತ ಈಗ ಬದಲಾಗಿದ್ದಾರೆ. ಸಿಂಗರ್ ಟು ಭರ್ಜರಿ ಬ್ಯಾಚುಲರ್ಸ್ ಅಡ್ದಾಗೆ ಹನುಮ ಲಗ್ಗೆ ಇಟ್ಟಿದ್ದಾರೆ. ಇದೇ ನೋಡಿ ಹನುಮಂತನ ಚೇಂಜ್‌ಓವರ್…ಸಂತ ಶಿಶುನಾಳ ಶರೀಫರ ಹಾಡು ಹೇಳೋಕೂ ಸೈ ಕೊರಿಯನ್ ಹಾಡಿಗೆ ಡಾನ್ಸ್ ಮಾಡೋಕೂ ಸೈ ಅನ್ನೋದನ್ನ ಸಾಬೀತು ಮಾಡಿದ್ದಾನೆ. ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ಸಿಂಗರ್ ಹನುಮಂತನ ಬದಲಾದ ಝಲಕ್ ನೋಡುಗರನ್ನ ಮೋಡಿ ಮಾಡ್ತಿದೆ.

    ಕಳೆದ ವಾರದ ಸಂಚಿಕೆಯಲ್ಲಿ ಹನುಮಂತ ರ‍್ಯಾಂಪ್‌ವಾಕ್ ಮಾಡಿ ಸೈ ಎನ್ನಿಸಿಕೊಂಡಿದ್ದ. ಅಷ್ಟಕ್ಕೂ ಕೊರಿಯನ್ ಲುಕ್ ಕೊರಿಯನ್ ಹಾಡು…ಕೊರಿಯನ್ ಡ್ಯಾನ್ಸ್ ಹಿಂದ್ಯಾಕೆ ಹನುಮಂತ ಬಿದ್ದ ಅನ್ನೋದಾದ್ರೆ ಅದು ಹುಡುಗಿಗಾಗಿ. ಭರ್ಜರಿ ಬ್ಯಾಚುಲರ್ಸ್‌ ಜೋಡಿಯಾಗಿರುವ ಆಸಿಯಾ ಬೇಗಂಗೆ (Asiya Begum) ಕೊರಿಯನ್ ಬಾಯ್ ಅಂದ್ರೆ ಇಷ್ಟವಂತೆ, ಆಸಿಯಾಳನ್ನ ಇಂಪ್ರೆಸ್ ಮಾಡೋಕೆ ಹನುಮಂತ ಈ ಅವತಾರ ಎತ್ತಿದ್ದಾನೆ.

    ಹಾಡೋಕೂ ಸೈ ಕುಣಿಯೋಕೂ ಸೈ ಎನ್ನುತ್ತಿದ್ದಾನೆ ಹನುಮಂತ, ಐದನೇ ಕ್ಲಾಸ್ ಓದಿರೋ ಬಡ್ನಿ ಹೈದನಿಗೆ ಇಂಗ್ಲೀಷ್ ಹಾಡು ಹಾಡೋಕೆ ಬರೋಲ್ಲ. ಆದರೂ ಜೋಡಿ ಆಸಿಯಾಯಾಗಿ ತಾನೇ ಪದಕಟ್ಟಿ ಹಾಡು ಹಾಡಿ ಒಲಿಸಿಕೊಂಡಿದ್ದಾನೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಸುಂದರ ಹುಡುಗಿಯರ ಜೊತೆ ಹನುಮಂತ ವೇದಿಕೆಗೆ ಜಬರ್ದಸ್ತ್ ಎಂಟ್ರಿ ಕೊಟ್ರು ಆಸಿಯಾಳ ಮನ ಗೆದ್ದಿದ್ದಾನೆ. ಹೂಗಳನ್ನ ನೀಡಿ ಪ್ರೇಮನಿವೇದನೆ ಮಾಡಿದ್ದಾನೆ. ಆಸಿಯಾ ಕೂಡ ಹನುಮಂತನ ಹೊಸ ಬದಲಾವಣೆ ಕಂಡು ಫುಲ್ ಖುಷ್. ಕೊರಿಯನ್ ಬಾಯ್ ಥರ ಹುಡುಗ ಬೇಕು ಎಂದಿದ್ದ ಆಸಿಯಾಗೆ ಅಪ್ಪಟ ಕನ್ನಡಿಗ ಸಿಕ್ಕಿದ್ದಾನೆ. ಹೀಗಾಗೇ ತಾಂಡಾದ ಈ ಹೈದನನ್ನ ತಿದ್ದಿ ತಿದ್ದಿ ಬದಲಾಯಿಸುತ್ತಿರೋದು ಆಸಿಯಾ ಬೇಗಂ. ಇದೊಂದು ಟಾಸ್ಕೇ ಆಗಿದ್ದರೂ ಪಂಚೆ ಮೇಲಿನ ಪ್ರೀತಿ ತೊರೆದು ಹನುಮಂತ ಬದಲಾಗಿರೋದನ್ನ ನೋಡೋದೇ ಚೆಂದ ಏನಂತೀರಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಡೆಲ್‌ ಜೊತೆ ಸಿಂಗರ್‌ ಹನುಮಂತ ರ‍್ಯಾಂಪ್‌ವಾಕ್- ಬ್ಯಾಚುಲರ್‌ ಹುಡುಗನ ನಯಾ ಸ್ಟೈಲ್

    ಮಾಡೆಲ್‌ ಜೊತೆ ಸಿಂಗರ್‌ ಹನುಮಂತ ರ‍್ಯಾಂಪ್‌ವಾಕ್- ಬ್ಯಾಚುಲರ್‌ ಹುಡುಗನ ನಯಾ ಸ್ಟೈಲ್

    ಕುರಿಗಾಹಿ ಸಿಂಗರ್ ಹನುಮಂತ (Singer Hanumantha) ಈತನದ್ದು ಒಂಥರಾ ಡಿಫರೆಂಟ್ ವ್ಯಕ್ತಿತ್ವ, ಹೀಗಾಗೇ ಈತ ಎಲ್ಲರಿಗಿಂತ ವಿಭಿನ್ನ ಅನ್ನಿಸೋದು, ತಾಂಡಾದಿಂದ ಬಂದು ಪಟ್ಟಣ ಸುತ್ತಾಡಿದ್ರೂ ಈತನ ನಡೆ ನುಡಿ ಬದಲಾಗಿಲ್ಲ. ಆದರೆ ಈಗ ಹುಡ್ಗಿಗಾಗಿ ಕೊನೆಗೂ ಬದಲಾದ ಹನುಮಂತ. ಲುಂಗಿ ಬದಲು ಸೂಟುಬೂಟು, ಮಾಡರ್ನ್ ಹೇರ್‌ಸ್ಟೈಲ್ ಟ್ರೆಂಡಿಬಿಯರ್ಡ್ ಲುಕ್‌ನಲ್ಲಿ ರ‍್ಯಾಂಪ್‌ವಾಕ್ ಮಾಡಿದ್ದಾನೆ, ಮಗನ ಬದಲಾವಣೆಗೆ ಅಮ್ಮನೇ ಕಂಗಾಲಾಗಿದ್ದಾರೆ. ಹನುಮಂತನ ಹೊಸ ಇನ್ನಿಂಗ್ಸ್ ಅಂತೂ ಭರ್ಜರಿಯಾಗಿದೆ.ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಐದನೇ ಕ್ಲಾಸ್ ಓದ್ಕೊಂಡು ಗುರುವಿಲ್ಲದೇ ಸಂಗೀತ ಕಲಿತು ಸರಿಗಮಪ ವೇದಿಕೆ ಏರಿದ್ದವ ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರ ಬಡ್ನಿ ತಾಂಡಾದ ಕುರಿಗಾಹಿ ಹನುಮಂತ. ಭರ್ತಿ 5 ವರ್ಷಗಳಿಂದ ಕರುನಾಡಿಗೆ ಪರಿಚಿತವಾಗಿರುವ ಈತ ತನ್ನದೇ ಜವಾರಿ ಸ್ಟೈಲ್‌ನಿಂದಲೇ ಜನಮನಗೆದ್ದ ಗಾಯಕ, ಸರಿಗಮಪ ಸೀಸನ್ 15ರ ಫಸ್ಟ್‌ ರನ್ನರ್‌ ಅಪ್. ಫಿಲ್ಟರ್ ಇಲ್ಲದ ಮಾತು ಬಣ್ಣವಿಲ್ಲದ ಬದುಕಿನಿಂದ ಕುರಿಗಾಹಿ ಹನುಮಂತ ಎಲ್ಲರಿಗಿಂತ ಭಿನ್ನ ಸಾಲಿನಲ್ಲಿ ನಿಲ್ತಾನೆ, ಕಂಠದಿಂದಲೇ ಖ್ಯಾತಿಗಳಿಸಿದ ಹಳ್ಳಿ ಹೈದ ಮತ್ತೀಗ ಹೊಸ ರೂಪದಲ್ಲಿ ಕಿರುತೆರೆಗೆ ರೀ ಎಂಟ್ರಿಕೊಟ್ಟಿದ್ದಾನೆ, ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಸುದ್ದಿಯಾಗ.. ಬಳಿಕ ಡಿಕೆಡಿಯಲ್ಲಿ ಕುಣಿದು ಖ್ಯಾತಿಗಳಿಸಿದ ಈಗ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಕಾರ್ಯಕ್ರಮದ ಮೂಲಕ ಕರುನಾಡಲ್ಲಿ ಹಂಗಾಮಾ ಸೃಷ್ಟಿಸಿದ್ದಾನೆ.

    ‌’ಭರ್ಜರಿ ಬ್ಯಾಚುಲರ್ಸ್’ ಕಾರ್ಯಕ್ರಮಕ್ಕೆ ಕುರಿಗಾಹಿ ಹನುಮಂತ ಓರ್ವ ಸ್ಪರ್ಧಿ, ಎಂದಿನಂತೆ ಮುಗ್ಧತೆಯಿಂದ ಹನುಮಂತ ಎಂಟ್ರಿ ಕೊಟ್ಟಿದ್ದಾನೆ, 10 ಹುಡುಗರಿಗೆ 10 ಹುಡುಗಿಯರನ್ನ ಜೋಡಿ ಮಾಡುವ ವಿಭಿನ್ನ ಕಾರ್ಯಕ್ರಮ. ಆರಂಭದಲ್ಲಿ ಎಂದಿನಂತೆ ಲುಂಗಿ ಶರ್ಟ್‌ನಲ್ಲೇ ಎಂಟ್ರಿ ಕೊಟ್ಟ ಹನುಮ ಜಂಟಿಯಾದ ಬಳಿಕ ಹಳೆಯ ಜಂಜಾಟಕ್ಕೆ ಜೂಟ್ ಅಂದಿದ್ದಾನೆ. ಹನುಮಂತನ ಬಾಳಲ್ಲಿ ಮಾಡೆಲ್/ನಟಿ ಆಸಿಯಾ ಬೇಗಂ ಎಂಟ್ರಿಯಾಗಿದೆ, ಟಾಸ್ಕ್ ಪ್ರಕಾರ ಹನುಮಂತನನ್ನ ಮಾಡರ್ನ್ ಹುಡುಗನನ್ನಾಗಿ ಮಾಡಬೇಕು. ಈ ಟಾಸ್ಕ್‌ನಲ್ಲಿ ಆಸಿಯಾ ಯಶಸ್ವಿಯಾಗಿದ್ದಾರೆ, ಆದರೆ ಈ ದಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಹನುಮಂತ ಅಷ್ಟು ಬೇಗ ಆಸಿಯಾ ಮಾತಿಗೆ ಮಣಿಯಲಿಲ್ಲ.

    ಮನೆಯಿಂದ ಮಾಲ್‌ಗೂ ಲುಂಗಿಯಲ್ಲೇ ಕಾಣಿಸ್ಕೊಳ್ಳುವ ಹನುಮಂತನನ್ನ ಬದಲಾಯಿಸೋದು ಸುಲಭದ ಮಾತಲ್ಲ. ಪ್ಯಾಂಟ್ ಅಂದ್ರೇನೇ ಅಸಡ್ಡೆ ಮಾಡುವ ಕುರಿಬಾಯ್‌ನ್ನು ಆಸಿಯಾ ಬೇಗಂ (Asiya Begham) ಕೊರಿಯನ್ ಬಾಯ್ ಮಾಡಿದ್ದಾರೆ. ಯಾಕಂದ್ರೆ ಆಸಿಯಾ ಕನಸಿನ ಹುಡುಗ ಕೊರಿಯನ್ ಬಾಯ್ ರೀತಿಯಲ್ಲಿ ಇರಬೇಕೆಂದು ಆಸೆಪಟ್ಟಿದ್ದರು. ಆದರೆ ಆಸಿಯಾಗೆ ಕುರಿಬಾಯ್ ಸಿಕ್ಕಿದ್ದಾನೆ. ಮೊದಲ ಟಾಸ್ಕ್‌ನಲ್ಲೇ ಹನುಮನ ಜೋಡಿ ಯಶಸ್ವಿ.

    ಹನುಮಂತನ ಹೊಸ ಅವತಾರ ನೋಡೋಕೆ ತಾಯಿ ಕೂಡ ರ‍್ಯಾಂಪ್ ಮೇಲೆ ಪ್ರತ್ಯಕ್ಷರಾಗಿದ್ದಾರೆ. ಹಲವು ವರ್ಷಗಳಿಂದ ಮಗನಿಗೆ ಮದುವೆ ಮಾಡಬೇಕನ್ನೋದು ತಾಯಿಯ ಕನಸು, ಈಗ ಬದಲಾದ ಮಗನನ್ನ ಕಣ್ಣೆದುರೇ ನೋಡಿ ಖುಷಿ ಪಟ್ಟಿದ್ದಾರೆ ಹನುಮನ ಹಡೆದವ್ವ, ವೇದಿಕೆಯಲ್ಲಿ ಅಮ್ಮ ಬಂದ ಖುಷಿಯಲ್ಲಿ ಅಮ್ಮನ ಕೈಹಿಡಿದು ರ‍್ಯಾಂಪ್‌ವಾಕ್ ಮಾಡಿದ್ದಾನೆ ಹನುಮ. ಒಟ್ನಲ್ಲಿ ಕುರಿಗಾಹಿ ಹನುಮಂತನ ಎರಾ ಮುಗಿದಿಲ್ಲ. ಒಂದಿಲ್ಲೊಂದು ರೂಪದಲ್ಲಿ ಕನ್ನಡಿಗರೆದುರು ಪ್ರತ್ಯಕ್ಷವಾಗುತ್ತಲೆ ಇದ್ದಾನೆ ಹನುಮಂತ. ಹಳ್ಳಿಯವನೇ ಆದ್ರೂ ಓದು ಬರಹ ಬರದೇ ಇದ್ರೂ ಹನುಮ ದುಡುಕದ ಬುದ್ಧಿವಂತ, ಈಗಷ್ಟೇ ಹನುಮನ ಹೊಸ ಚರಿತ್ರೆ ಆರಂಭವಾಗಿದೆ, ಇನ್ಮೇಲೆ ಏನೆಲ್ಲಾ ಸರ್‌ರ್ಪೈಸ್‌ಗಳು ಎದುರಾಗುತ್ತದೋ ನೋಡಬೇಕು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]