Tag: ಭರ್ಜರಿ

  • ಬೆಳ್ಳಂಬೆಳಗ್ಗೆ ನೆರವೇರಿತು ‘ಪೊಗರು’ ಚಿತ್ರದ ಮೂಹೂರ್ತ

    ಬೆಳ್ಳಂಬೆಳಗ್ಗೆ ನೆರವೇರಿತು ‘ಪೊಗರು’ ಚಿತ್ರದ ಮೂಹೂರ್ತ

    ಬೆಂಗಳೂರು: ಭರ್ಜರಿ ಖ್ಯಾತಿಯ ಧ್ರುವ ಸರ್ಜಾ ನಟಿಸಲು ಸಜ್ಜಾಗಿರುವ `ಪೊಗರು’ ಚಿತ್ರದ ಮುಹೂರ್ತ ಇಂದು ಬೆಳ್ಳಂಬೆಳಗ್ಗೆ ನೆರವೇರಿತು.

    ಬಸವೇಶ್ವರ ನಗರದ ಗಣಪತಿ ಸನ್ನಿಧಿಯಲ್ಲಿ ಚಿತ್ರದ ಮೂಹರ್ತ ಸಮಾರಂಭ ನಡೆದಿದ್ದು, ಚಿತ್ರದ ನಾಯಕ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಮತ್ತು ನಿರ್ಮಾಪಕ ಗಂಗಾಧರ್ ಉಪಸ್ಥಿತರಿದ್ದರು. ಧ್ರುವ ಸರ್ಜಾ ಮತ್ತು ನಂದಕಿಶೋರ್ ಸಾರಥ್ಯದ ಚೊಚ್ಚಲ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

    ಈ ಚಿತ್ರದಲ್ಲಿ ಮೂರು ಶೇಡ್‍ ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳುತ್ತಿದ್ದು, ಸ್ಕೂಲ್ ಲೈಫ್ ಕ್ಯಾರೆಕ್ಟರ್ ಗಾಗಿ ತಮ್ಮ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನೂ ಈ ಸಿನಿಮಾದ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದು ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆಗಳಿವೆ.

  • ಶಿವಣ್ಣ, ಧ್ರುವ ಸರ್ಜಾ ಒಟ್ಟಾಗಿ  ಮಫ್ತಿ ವೀಕ್ಷಿಸಿ, ಕೇಕ್ ಕಟ್ ಮಾಡಿದ್ರು

    ಶಿವಣ್ಣ, ಧ್ರುವ ಸರ್ಜಾ ಒಟ್ಟಾಗಿ ಮಫ್ತಿ ವೀಕ್ಷಿಸಿ, ಕೇಕ್ ಕಟ್ ಮಾಡಿದ್ರು

    ಬೆಂಗಳೂರು: ಮಫ್ತಿ ಸಿನಿಮಾವನ್ನು ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಶಿವರಾಜ್‍ಕುಮಾರ್ ಮತ್ತು ಧ್ರುವ ಸರ್ಜಾ ಒಟ್ಟಿಗೆ ನೋಡಿದ್ದಾರೆ. ಭರ್ಜರಿ ಸಿನಿಮಾದ 80ನೇ ದಿನದ ಸಂಭ್ರಮಕ್ಕಾಗಿ ಧ್ರುವ ಸರ್ಜಾ ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಶಿವರಾಜ್‍ಕುಮಾರ್ ಜೊತೆ ಸೇರಿ ಧ್ರುವ ಸರ್ಜಾ ಮಫ್ತಿ ಸಿನಿಮಾವನ್ನು ನೋಡಿದ್ದಾರೆ.

    ಅಭಿಮಾನಿಗಳು ತಂದ ಕೇಕ್ ಕಟ್ ಮಾಡಿ ಇಬ್ಬರೂ ನಟರು ಸಂಭ್ರಮಿಸಿದ್ದಾರೆ. ಈ ಎಂಗ್ ಆಂಡ್ ಎರ್ನಜಿಟಿಕ್ ಸ್ಟಾರ್ ಗಳನ್ನ ಒಟ್ಟಿಗೆ ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ.

    ಧ್ರುವ ಸರ್ಜಾ ನಟ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು ಹಾಗೂ ಧ್ರುವ ಸರ್ಜಾರ ಕೋರಿಕೆಗೆ ಶಿವಣ್ಣ ಓಗೊಟ್ಟು ಕೇಕ್ ಕಟ್ ಮಾಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳ ನಡುವೆ ನೂಕುನುಗ್ಗಲಾಯಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

     

  • ಭರ್ಜರಿಯಾಗಿ ಹೊಳೀತಿದೆ ಸಿಂಪಲ್ ಧ್ರುವ ನಕ್ಷತ್ರ- ಹೆಚ್ಚಾಯಿತು ಧ್ರುವ ಸರ್ಜಾ ಸಂಭಾವನೆ

    ಭರ್ಜರಿಯಾಗಿ ಹೊಳೀತಿದೆ ಸಿಂಪಲ್ ಧ್ರುವ ನಕ್ಷತ್ರ- ಹೆಚ್ಚಾಯಿತು ಧ್ರುವ ಸರ್ಜಾ ಸಂಭಾವನೆ

    ಬೆಂಗಳೂರು: ನಟ ಧ್ರುವ ಸರ್ಜಾ ಬಗ್ಗೆ ಗಾಂಧಿನಗರದಲ್ಲೊಂದು ಸುದ್ದಿ ಹಬ್ಬಿತ್ತು. ಧ್ರುವ ತಮ್ಮ ಮುಂದಿನ ಸಿನಿಮಾಕ್ಕೆ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಈ ಸುದ್ದಿಗೆ ನಟ ಧ್ರುವ ಉತ್ತರಿಸಿದ್ದು, ಹೌದು ನಾನು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ.

    ಅಂದಹಾಗೆ ಕಳೆದ ಕೆಲ ತಿಂಗಳಿಂದ ಧ್ರುವ ಸರ್ಜಾ ಸಂಭಾವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿತ್ತು. ಪೊಗರು ಚಿತ್ರಕ್ಕಾಗಿ ನಿರ್ಮಾಪಕ ಗಂಗಾಧರ್ ಅವರಿಗೆ, ಪೊಗರು ನಂತರದ ಚಿತ್ರಕ್ಕಾಗಿ ಉದಯ್ ಕೆ ಮೆಹ್ತಾರಿಗೆ ಹಾಗು ಜಗ್ಗುದಾದ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಡೇಟ್ಸ್ ಕೊಟ್ಟಿರುವ ಧ್ರುವ ಬರೋಬ್ಬರಿ 6 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಸುದ್ದಿ ಇತ್ತು. ಆ ವಿಷಯ ಗಾಸಿಪ್ ಅಲ್ಲ, ನಿಜ ಅನ್ನೋದು ಇದೀಗ ಪ್ರೂವ್ ಆಗಿದೆ.

    ಇದನ್ನೂ ಓದಿ: 50 ನೇ ದಿನ ಪೂರೈಸಿ ಸಾಗುತ್ತಿರುವ `ಭರ್ಜರಿ`ಯ ಕಲೆಕ್ಷನ್ ಎಷ್ಟು ಗೊತ್ತಾ?

    ಧ್ರುವ ಕ್ಟಾಂಟಿಟಿಗಿಂತ ಕ್ವಾಲಿಟಿ ಚಿತ್ರಕ್ಕೆ ಒತ್ತು ಕೊಡೊತ್ತಾರೆ. ಹೀಗಾಗಿಯೇ ಇದುವರೆಗೂ ಇಂಡಸ್ಟ್ರಿಯಲ್ಲಿ ಸ್ಟ್ಯಾಂಡ್ ಆಗೋದಕ್ಕಾಗಿ ಯೋಚನೆ ಮಾಡಿ ಸಿನಿಮಾ ಮಾಡಿದ್ದಾರೆ. ಆದರೆ ಈಗ ಇವರ ರೇಂಜ್ ಸಿಕ್ಕಾಪಟ್ಟೆ ಬದಲಾಗಿದೆ. ಟಾಪ್ ಸ್ಟಾರ್ ನಟರ ಲಿಸ್ಟ್ ಗೆ ಧ್ರುವ ಸೇರ್ಪಡೆಯಾಗಿದ್ದಾರೆ. ಇದುವರೆಗಿನ ಸ್ಯಾಂಡಲ್‍ವುಡ್ ಇತಿಹಾಸದಲ್ಲಿಯಲ್ಲಿ ನಾಲ್ಕನೇ ಸಿನಿಮಾಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆದಿರೋ ನಟ ಇನ್ನೊಬ್ಬರಿಲ್ಲ. ಆ ದಾಖಲೆಗೆ ಧ್ರುವ ಎಂಟ್ರಿಯಾಗಿದ್ದಾರೆ.

    ಚೇತನ್ ಕುಮಾರ್ ಅವರ ನಿರ್ದೇಶನ ಮಾಡಿದ್ದು, ನಟಿ ರಚಿತಾ ರಾಮ್, ಹರಿಪ್ರಿಯ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

     

    https://www.youtube.com/watch?v=6LgGIqjKHSg

    https://www.youtube.com/watch?v=NGmvPSFlobs

     

  • 50 ನೇ ದಿನ ಪೂರೈಸಿ ಸಾಗುತ್ತಿರುವ `ಭರ್ಜರಿ`ಯ ಕಲೆಕ್ಷನ್ ಎಷ್ಟು ಗೊತ್ತಾ?

    50 ನೇ ದಿನ ಪೂರೈಸಿ ಸಾಗುತ್ತಿರುವ `ಭರ್ಜರಿ`ಯ ಕಲೆಕ್ಷನ್ ಎಷ್ಟು ಗೊತ್ತಾ?

    ಬೆಂಗಳೂರು: ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಭರ್ಜರಿ ಸಿನಿಮಾ. ಆಕ್ಷನ್ ಪ್ರಿನ್ಸ್ ಧ್ರುವ ಅಭಿನಯಿಸಿರುವ ಈ ಸಿನಿಮಾ ಇವತ್ತಿಗೆ 50 ನೇ ದಿನವನ್ನು ಪೂರೈಸಿ ಮುನ್ನುಗ್ಗುತ್ತಿದೆ.

    ನಟ ಧ್ರುವ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಇವರು ಮಾಡಿದ ಮೊದಲನೇ ಸಿನಿಮಾ `ಅದ್ಧೂರಿ’ ಯಿಂದಲ್ಲಿಯೇ ಕನ್ನಡ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದು, ಭರ್ಜರಿ ಅವರ ಮೂರನೇ ಸಿನಿಮಾವಾಗಿದೆ. ಅವರ ಅಭಿಮಾನಿಗಳು ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸನ್ನೇ ತಂದುಕೊಟ್ಟಿದ್ದಾರೆ.

    ಮಲ್ಟಿಫ್ಲೆಕ್ಸ್ ನಲ್ಲಿ ಮಾತ್ರವಲ್ಲದೆ ಬಿ ಹಾಗೂ ಸಿ ಸೆಂಟರ್ ಗಳಲ್ಲಿ ಕೂಡ ಪ್ರೇಕ್ಷಕರಿಂದ ಚಿತ್ರಕ್ಕೆ ಸಖತ್ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ದಿನದಿಂದ ಇಂದಿನವರೆಗೂ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳವನ್ನು ವಾಪಸ್ ಪಡೆದುಕೊಂಡಿದ್ದು, ಐವತ್ತು ದಿನಗಳಿಗೆ 69 ಕೋಟಿ ಗಳಿಕೆ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಸಾಕಷ್ಟು ಕಾರಣಗಳಿಂದ ‘ಭರ್ಜರಿ’ ಸಿನಿಮಾ ತಡವಾಗಿ ಬಂದಿದ್ದರೂ ಈಗಿನ ಜನರೇಷನ್‍ಗೆ ತಕ್ಕಂತೆ ಸಿನಿಮಾ ಇರುವುದರಿಂದ ಪ್ರೇಕ್ಷಕರು ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ರಾಜ್ಯದ 129 ಸೆಂಟರ್ ನಲ್ಲಿ 50 ದಿನಗಳನ್ನು ಪೂರೈಸಿದೆ. ಸುಮಾರು ಹತ್ತು ವರ್ಷದ ನಂತರ ಇದೇ ಮೊದಲ ಬಾರಿಗೆ ಇಷ್ಟು ಸೆಂಟರ್ ನಲ್ಲಿ ಐವತ್ತು ದಿನಗಳು ಓಡಿರುವ ಸಿನಿಮಾಗಿದೆ.

    ಐವತ್ತು ದಿನಗಳನ್ನು ಪೂರೈಸಿರುವುದರಿಂದ ಸಿನಿಮಾ ತಂಡ ಇಂದು ಥಿಯೇಟರ್ ಬಳಿ ಹಬ್ಬದಂತೆ ಆಚರಣೆ ಮಾಡಿದೆ. ಮಧ್ಯಾಹ್ನದ ಶೋನಲ್ಲಿ ಧ್ರುವ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಿಹಿ ಹಂಚಿದ್ದಾರೆ. ಅಭಿಮಾನಿಗಳು ಖುಷಿಗಾಗಿ ರಕ್ತದಾನ, ಅನ್ನದಾನ ಮಾಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಾರೆ ‘ಭರ್ಜರಿ’ ಸಿನಿಮಾದ ಅದ್ದೂರಿ ಯಶಸ್ಸಿನಿಂದ ಧ್ರುವ ಸರ್ಜಾಗೆ ಮತ್ತಷ್ಟು ಬೇಡಿಕೆಯಾಗಿದೆ.

    ಚೇತನ್ ಕುಮಾರ್ ಅವರ ನಿರ್ದೇಶನ ಮಾಡಿದ್ದು, ನಟಿ ರಚಿತಾ ರಾಮ್, ಹರಿಪ್ರಿಯ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    https://www.youtube.com/watch?v=6LgGIqjKHSg

    https://www.youtube.com/watch?v=NGmvPSFlobs

     

  • ಧ್ರುವ ಸರ್ಜಾ ಸಿನಿಮಾಗಾಗಿ ಕಥೆ ಬರಯಲಿದ್ದಾರೆ ಬಾಲಿವುಡ್ ಕಥೆಗಾರ್ತಿ!

    ಧ್ರುವ ಸರ್ಜಾ ಸಿನಿಮಾಗಾಗಿ ಕಥೆ ಬರಯಲಿದ್ದಾರೆ ಬಾಲಿವುಡ್ ಕಥೆಗಾರ್ತಿ!

    ಬೆಂಗಳೂರು: ಧ್ರುವ ಸರ್ಜಾ ಅವರ ಭರ್ಜರಿ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಹೀಗಿರುವಾಗ ಬಾಲಿವುಡ್ ಸ್ಟಾರ್ ಚಿತ್ರ ಕಥೆಗಾರ್ತಿ ಶಗುಫ್ತಾ ರಫೀಕ್ ಅವರು ಧ್ರುವ ಸರ್ಜಾಗಾಗಿ ಒಂದು ಒಳ್ಳೆಯ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

    ಧ್ರುವ ಸಿನಿಮಾಕ್ಕಾಗಿ ಶಗುಫ್ತಾ ಅವರನ್ನು ಕರೆ ತರಲು ಚಿತ್ರತಂಡ ಯೋಚಿಸಿದ್ದು, ಜಗ್ಗುದಾದ ಖ್ಯಾತಿಯಾ ನಿರ್ದೇಶಕ ರಾಘವೇಂದ್ರ ಹೆಗ್ಡೆ ನಿರ್ದೇಶನ ಮಾಡಲಿದ್ದಾರೆ. ಶಗುಪ್ತಾ ಅವರು ಹಮಾರಿ ಅದೂರಿ ಕಹಾನಿ, ಜಿಸ್ಮ್-2, ಮರ್ಡರ್-2, ಆಶಿಕಿ-2 ರಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕಥೆ ಬರೆದಿದ್ದು, ಈಗ ಕನ್ನಡ ಚಿತ್ರಕ್ಕಾಗಿ ಕಥೆ ಬರೆಯಲಿದ್ದಾರಂತೆ.

    ಚಿತ್ರತಂಡ ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈಗ ಧ್ರುವ ಅವರು ಪೊಗರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಕನ್ನಡ ಸಿನಿ ಪ್ರಿಯರಿಗೆ ನಾಳೆ ಡಬಲ್ ಧಮಾಕ

    ಕನ್ನಡ ಸಿನಿ ಪ್ರಿಯರಿಗೆ ನಾಳೆ ಡಬಲ್ ಧಮಾಕ

    ಬೆಂಗಳೂರು: ಕನ್ನಡ ಸಿನಿ ಪ್ರಿಯರಿಗೆ ಈ ವಾರ ಡಬ್ಬಲ್ ಧಮಾಕ ಲಭಿಸಲಿದೆ. ಕನ್ನಡ ಬಹು ನಿರಿಕ್ಷೀತ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೊದಲ ಎರಡು ಸಿನಿಮಾಗಳಲ್ಲಿ ಭಾರಿ ಯಶ್ಸಸನ್ನು ಗಳಿಸಿರುವ ನಟ ದ್ರುವ ಸರ್ಜಾ ಅಭಿನಯದ `ಭರ್ಜರಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಇತ್ತ ಕನ್ನಡ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ `ಕ್ರ್ಯಾಕ್’ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುವ ನಿರಿಕ್ಷೇಯಲ್ಲಿದ್ದಾರೆ. ಈ ಎರಡು ಚಿತ್ರಗಳು ಮಾಸ್ ಹಾಗೂ ಕ್ಲಾಸ್ ಅಭಿಮಾನಿಗಳಲ್ಲಿ ಉತ್ತಮ ಭಾವನೆಯನ್ನು ಮೂಡಿಸಿವೆ.

    ಭರ್ಜರಿ:
    ಕನ್ನಡ ಚಿತ್ರ ರಂಗಕ್ಕೆ ಅದ್ದೂರಿಯಾಗಿ ಪ್ರವೇಶದ ಪಡೆದ ನಟ ಧ್ರುವ ಹಲವು ವರ್ಷಗಳ ನಂತರ ಮತ್ತೆ ಭರ್ಜರಿಯಾಗಿ ಬರುತ್ತಿದ್ದಾರೆ. ಈ ಚಿತ್ರವು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

    ಚಿತ್ರದಲ್ಲಿ ಧ್ರುವ ಸರ್ಜಾ ಮೂವರು ನಾಯಕಿಯರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಡಿಂಪಲ್ ಕ್ವಿನ್ ಖ್ಯಾತಿಯ ರಚಿತಾ ರಾಮ್, ಹರಿಪ್ರಿಯಾ ಮತ್ತು ವೈಶಾಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಬಹುದ್ದೂರ್ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನವಿದ್ದು, ವಿ. ಹರಿಕೃಷ್ಣ ಸಂಗೀತವನ್ನು ಸಂಯೋಜಿಸಿದ್ದಾರೆ.

    ಭರ್ಜರಿ ಸಿನಿಮಾ ಬಿಡುಗಡೆಯ ಮತ್ತೋಂದು ವಿಶೇಷವೆಂದರೆ ಬೆಂಗಳೂರಿನ ರೆಕ್ಸ್ ಮತ್ತು ಊರ್ವಶಿ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ಈ ಎರಡು ಚಿತ್ರ ಮಂದಿರಗಳಲ್ಲಿ ಕಳೆದ 20 ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾವು ಬಿಡುಗಡೆಗೊಂಡಿಲ್ಲ. ಚಿತ್ರವು ಆರ್.ಎಸ್. ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ.

    ಕ್ರ್ಯಾಕ್:
    ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ನಟ ವಿನೋದ್ ಪ್ರಭಾಕರ್ ನಟನೆಯ ಕ್ರ್ಯಾಕ್ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಈ ಸಿನಿಮಾ ಬೆಂಗಳೂರಿನ ಅನುಪಮ ಚಿತ್ರ ಮಂದಿರ ಸೇರಿದಂತೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ನಟ ವಿನೋದ್ ಈ ಚಿತ್ರದಲ್ಲಿ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರಕ್ಕೆ ರಾಮ್ ನಾರಾಯಣ್ ನಿರ್ದೇಶನವಿದ್ದು, ಶಮಿತಾ ಮಲ್ನಾಡ್ ಸಂಗೀತವನ್ನು ನೀಡಿದ್ದಾರೆ. ಚಿತ್ರದಲ್ಲಿ ವಿಶೇಷವಾಗಿ ಆರ್.ಎಕ್ಸ್.ಸೂರಿ ಖ್ಯಾತಿಯ ಆಕಾಂಕ್ಷಾ ನಾಯಕಿಯಾಗಿ ಅಭಿನಯಿಸಿದ್ದಾರೆ.