Tag: ಭರತ ಬಾಹುಬಲಿ

  • ‘ಭರತ ಬಾಹುಬಲಿ’ಯಲ್ಲಿ ರಿಷಿಗೇನು ಕೆಲಸ?

    ‘ಭರತ ಬಾಹುಬಲಿ’ಯಲ್ಲಿ ರಿಷಿಗೇನು ಕೆಲಸ?

    ‘ಮಾಸ್ಟರ್ ಪೀಸ್’ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಮಂಜು ಮಾಂಡವ್ಯ ನಾಯಕರಾಗಿ ‘ಭರತ ಬಾಹುಬಲಿ’ಯಾಗಿ ತೆರೆಮೇಲೆ ಬರ್ತಿರೋದು ಗೊತ್ತಿರೋ ವಿಚಾರ. ಈಗಾಗಲೇ ಚಿತ್ರವು ಭರ್ಜರಿ ಮೇಕಿಂಗ್ ಸೆಟ್‍ನಿಂದ ಸೆಂಟರ್ ಆಫ್ ಅಟ್ಯ್ರಾಕ್ಷನ್ ಆಗ್ತಿದೆ. ರಿಲೀಸ್ ಆದ ಟ್ರೈಲರ್ ಹಾಗೂ ವೀಡಿಯೋ ಸಾಂಗ್ ನೋಡಿದ ಪ್ರೇಕ್ಷಕ ಸಿನೆಮಾ ನೋಡೋಕೆ ಕಾತುರನಾಗಿದ್ದಾನೆ.

    ಚಿತ್ರದಲ್ಲಿ ಹಲವು ವಿಶೇಷತೆಗಳಿದ್ದು, ‘ಆಪರೇಷನ್ ಅಲಮೇಲಮ್ಮ’ ಹಾಗೂ ಕವಲು ದಾರಿ ಚಿತ್ರ ಖ್ಯಾತಿಯ ರಿಷಿ ಸಹ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಹಾಗೂ ರಿಷಿ ನಡುವಿನ ಫ್ರೆಂಡ್ ಶಿಪ್ ಗಾಗಿ ವಿಶೇಷ ಪಾತ್ರವೊಂದನ್ನ ಮಾಡಿದ್ದಾರಂತೆ. ಇನ್ನುಳಿದಂತೆ ಮಂಜು ಅವರಿಗೆ ಸಾರಾ ಮಹೇಶ್ ನಾಯಕಿಯಾಗಿದ್ದು, ಚಿಕ್ಕಣ್ಣನ ಕಾಮಿಡಿ ತೆರೆಮೇಲೆ ಮೋಡಿ ಮಾಡೋದ್ರ ಜೊತೆ, ಶೃತಿ ಪ್ರಕಾಶ್ ಅವರ ಡ್ಯಾನ್ಸ್ ನಿದ್ದೆಕೆಡಿಸತ್ತೆ.

    ಇನ್ನು ಸದ್ಯ ಬ್ಯುಸಿಯಾಗಿರೋ ರಿಷಿ, ಭರತ ಬಾಹುಬಲಿಯಲ್ಲಿ ಏನ್ ಮಾಡಿದ್ದಾರೆ ಅನ್ನೋ ಪ್ರಶ್ನೆಗೆ 17 ರಂದು ಚಿತ್ರ ರಿಲೀಸ್ ಆದ್ಮೇಲೇನೇ ಉತ್ತರ ಸಿಗಲಿದೆ. ಇದನ್ನು ಓದಿ: ‘ಭರತ ಬಾಹುಬಲಿ’ ನೋಡಿದ್ರೆ ಒಂದು ಕೋಟಿ ರೂಪಾಯಿ ಸಿಗುತ್ತೆ!

  • ‘ಭರತ ಬಾಹುಬಲಿ’ ನೋಡಿದ್ರೆ ಒಂದು ಕೋಟಿ ರೂಪಾಯಿ ಸಿಗುತ್ತೆ!

    ‘ಭರತ ಬಾಹುಬಲಿ’ ನೋಡಿದ್ರೆ ಒಂದು ಕೋಟಿ ರೂಪಾಯಿ ಸಿಗುತ್ತೆ!

    ಮಾಸ್ಟರ್ ಪೀಸ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟ ಮಂಜು ಮಾಂಡವ್ಯ ನಟನಾಗಿ ಬರ್ತಾ ಇರೋದು ಎಲ್ಲರಿಗೂ ಗೊತ್ತೆ ಇದೆ. ನಿರ್ದೇಶನದಿಂದ ಬಡ್ತಿ ಪಡೆದು ‘ಶ್ರೀ ಭರತ ಬಾಹುಬಲಿ’ಯಾಗಿ ಕಂಗೊಳಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ತೆರೆಗೆ ಬರಲು ಸಿದ್ಧತೆ ನಡೆಸಿದೆ. ಇದೇ ತಿಂಗಳು 17ರಂದು ಚಿತ್ರಮಂದಿರಕ್ಕೆ ‘ಭರತ ಬಾಹುಬಲಿ’ ಅಬ್ಬರಿಸಲಿದ್ದಾನೆ.

    ಸಿನಿಮಾ ಮಾಡೋದು ಎಷ್ಟು ಕಷ್ಟನೋ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ಅಷ್ಟೇ ಕಷ್ಟ. ಹೀಗಾಗಿ ಎಲ್ಲಾ ಸಿನಿಮಾಗಳ ನಡುವೆ ‘ಭರತ ಬಾಹುಬಲಿ’ಯನ್ನು ನೋಡುವಂತೆ ಮಾಡಲು, ಚಿತ್ರತಂಡ ಹೊಸ ಪ್ಲಾನ್ ಒಂದನ್ನು ಹೆಣೆದಿದೆ. ಈ ಸಿನಿಮಾ ನೋಡುಗರಿಗೆ  ಒಂದು ಕೋಟಿ ರೂಪಾಯಿ ಮೊತ್ತದ ಬಹುಮಾನವನ್ನು ಘೋಷಿಸಿದೆ. ಬಹುಮಾನದಲ್ಲಿ 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳನ್ನು ಚಿತ್ರತಂಡ ಘೋಷಿಸಿದೆ. 20 ಜನ ಅದೃಷ್ಟವಂತ ಪ್ರೇಕ್ಷಕರಿಗೆ ಈ ಬಹುಮಾನ ಸಿಗಲಿದೆ.

    ಬಹುಮಾನ ಗೆಲ್ಲಬೇಕೆಂಬ ಪ್ರೇಕ್ಷಕರು ಮಾಡಬೇಕಾಗಿರುವುದು ಇಷ್ಟೇ, ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಾದರೂ ‘ಭರತ ಬಾಹುಬಲಿ’ ಚಿತ್ರವನ್ನು ನೋಡಿ. ಈ ವೇಳೆ ಚಿತ್ರತಂಡ ಸಿನಿಮಾ ಟಿಕೆಟ್ ಜೊತೆಗೆ ನೀಡಲಾಗುವ ಕೂಪನ್ ಜೊತೆಗಿಟ್ಟುಕೊಂಡರೆ ಸಾಕು. ಚಿತ್ರ ತಂಡವು ಲಕ್ಕಿ ಪಿಕ್ ನಲ್ಲಿ 20 ಜನ ಅದೃಷ್ಟವಂತರನ್ನು ಆಯ್ಕೆ ಮಾಡಿ ನಂಬರ್ ಘೋಷಿಸುತ್ತದೆ. ಬಳಿಕ ಕಾರು ಹಾಗೂ ಆಭರಣಗಳನ್ನು ಅದೃಷ್ಟವಂತ ಪ್ರೇಕ್ಷಕರಿಗೆ ನೀಡಲಾಗುತ್ತದೆ.

    ಭರತ ಬಾಹುಬಲಿಗಾಗಿ ಈಗಾಗಲೇ ಕೋಟಿ ಕೋಟಿ ಹಣ ಖರ್ಚಾಗಿದೆ. ಪ್ರೇಕ್ಷಕರನ್ನು ಕರೆತರಲು ಮತ್ತೆ ನಿರ್ಮಾಪಕರಾದ ಟಿ. ಶಿವಪ್ರಕಾಶ್ ಕೋಟಿ ಹಣ ಖರ್ಚು ಮಾಡಲು ಮುಂದಾಗಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು, ಇಂತದ್ದೊಂದು ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ, ಖುಷಿ ಪಡಲಿ ಅನ್ನೋದು ನನ್ನ ಉದ್ದೇಶ. ಒಳ್ಳೆ ಸಿನಿಮಾವನ್ನ ಜನ ಮಿಸ್ ಮಾಡಿಕೊಳ್ಳಬಾರದಲ್ವಾ ಅನ್ನೋದು ನಿರ್ಮಾಪಕರ ಮಾತು

    ಈಗಾಗಲೇ ಸಿನಿಮಾ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿರುವ ಹಾಡು, ಟ್ರೈಲರ್ ನೋಡಿದ್ರೇನೆ ಸಿನಿಮಾದ ಕ್ವಾಲಿಟಿ ಗೊತ್ತಾಗುತ್ತೆ. ಟ್ರೈಲರ್ ನೋಡಿದರವರಿಗೆ ಸಿನಿಮಾದ ಮೇಲೆ ಮತ್ತಷ್ಟು ಭರವಸೆ ಹೆಚ್ಚಾಗಿದೆ. ಜನವರಿ 17ರಂದು ಎಲ್ಲಾ ಥಿಯೇಟರ್ ಗೆ ಲಗ್ಗೆ ಇಡ್ತಾ ಇದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ, ನೀವೂ ಆ ಅದೃಷ್ಟವಂತರಲ್ಲಿ ಒಬ್ಬರಾದ್ರೂ ಆಗಬಹುದು.

  • ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

    ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕನಾಗಿ ನಟಿಸಿದ್ದ ರಿಶಿ ಆ ನಂತರದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದರು. ಆದರೆ ಶಶಾಂಕ್ ಬ್ಯಾನರಿನಲ್ಲಿನ ಚಿತ್ರವೂ ಸೇರಿದಂತೆ ರಿಶಿಯ ಸಿನಿ ಕೆರಿಯರ್ ಅದೇಕೋ ಥಂಡಾ ಹೊಡೆದಂತಿತ್ತು. ಹೀಗಿರುವಾಗಲೇ ಆತ ಹೊಸಾ ಚಿತ್ರವೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ!

    ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಅವರ ಹೊಸಾ ಚಿತ್ರಕ್ಕೆ ರಿಶಿ ನಾಯಕನಾಗಿ ಆಯ್ಕೆಯಾಗಿದ್ದಾನೆ. ಈ ಚಿತ್ರಕ್ಕೆ ಭರತ ಬಾಹುಬಲಿ ಎಂಬ ಟೈಟಲ್ ಅನ್ನೂ ಫೈನಲ್ ಮಾಡಲಾಗಿದೆ. ಇದರ ಜೊತೆಗೇ ಸಾರಾ ಹರೀಶ್ ರಿಶಿಗೆ ನಾಯಕಿಯಾಗಿಯೂ ಆಯ್ಕೆಯಾಗಿದ್ದಾಳೆ!

     

    ಶೀರ್ಷಿಕೆ, ನಾಯಕಿ ಸೇರಿದಂತೆ ಎಲ್ಲ ಆಯ್ಕೆಗಳೂ ಪೂರ್ಣಗೊಂಡಿರೋ ‘ಭರತ ಬಾಹುಬಲಿ’ ಮಂಜು ಮಾಂಡವ್ಯ ಸಾರಥ್ಯದಲ್ಲಿ ಇಷ್ಟರಲ್ಲಿಯೇ ಚಿತ್ರೀಕರಣಕ್ಕೆ ತೆರಳಲಿದ್ದಾನೆ. ಮಾಸ್ಟರ್ ಪೀಸ್ ನಂಥಾ ಹಿಟ್ ಚಿತ್ರ ಕೊಟ್ಟಿದ್ದ ಮಂಜು ಮಾಂಡವ್ಯ ಅವರ ಈ ಹೊಸ ಚಿತ್ರದ ಬಗ್ಗೆ ಪ್ರೇಕ್ಷಕರೂ ಕೂಡಾ ಕಣ್ಣಿಟ್ಟು ಕಾಯುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ತನ್ನ ವಿಶಿಷ್ಟವಾದ ನಟನೆಯ ಮೂಲಕ ಗಮನ ಸೆಳೆದಿದ್ದ ರಿಶಿ ಈ ಮೂಲಕ ಮತ್ತೊಂದು ಹಿಟ್ ಚಿತ್ರ ಕೊಡುವ ಹುಮ್ಮಸ್ಸಿನಿಂದ ರೆಡಿಯಾಗುತ್ತಿದ್ದಾನೆ.

    ಆದರೆ ಶಶಾಂಕ್ ಬ್ಯಾನರಿನ ಚಿತ್ರದ ಕಥೆ ಏನಾಯಿತೆಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿದೆ. ಹೊಸಬರಿಗೆ ಅವಕಾಶ ಕೊಡುವ ಸದುದ್ದೇಶದಿಂದ ಶಶಾಂಕ್ ಸ್ವಂತ ಬ್ಯಾನರ್ ತೆರೆದಿದ್ದರಲ್ಲಾ? ಅದರಲ್ಲಿ ರಿಶಿ ನಾಯಕನಾಗಿರೋ ಒಂದು ಚಿತ್ರವನ್ನೂ ಘೋಷಣೆ ಮಾಡಲಾಗಿತ್ತು. ಆ ಚಿತ್ರವೂ ಬಂದರೆ ರಿಶಿ ಪಾಲಿಗೆ ಈ ವರ್ಷ ಡಬಲ್ ಧಮಾಕಾ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ!