Tag: ಭರತ್ ಶೆಟ್ಟಿ

  • ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

    ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

    – ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ ಎಂದ ಬಿಜೆಪಿ ಶಾಸಕ

    ಬೆಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆ ಆಗಿದೆ ಅನ್ನೋದು ನಮ್ಮ ಗುಮಾನಿ ಎಂದು ಶಾಸಕ ಡಾ.ಭರತ್ ಶೆಟ್ಟಿ (Bharath Shetty) ಹೇಳಿದ್ದಾರೆ.

    ವಿಧಾನಸೌಧ ಆವರಣದಲ್ಲಿ ʻಪಬ್ಲಿಕ್‌ ಟಿವಿʼ (Public TV- ಜೊತೆಗೆ ಮಾತನಾಡಿದ ಅವರು, ಇಡಿ ಅಥವಾ ಎನ್‌ಐಎ ತನಿಖೆಗೆ ಸಾಕಷ್ಟು ಒತ್ತಾಯ ಕೇಳಿಬರ್ತಿದೆ. ನಮ್ಮ ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ (Foreign Fund) ಬಳಕೆ ಆಗಿದೆ ಅನ್ನೋದು ನಮ್ಮ ಗುಮಾನಿ. ಕೆಲವು ನಂಬಲರ್ಹ ಮೂಲಗಳಿಂದ ಫಾರಿನ್ ಫಂಡ್ ಬಂದಿದೆ ಅಂತ ನಮಗೆ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    ಎನ್ಐಎ (NIA) ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ. ಈಗಾಗಲೇ ಷಡ್ಯಂತ್ರ ಇದೆ ಅಂತ ನಾವೂ ಹೇಳ್ತಿದೀವಿ, ಕಾಂಗ್ರೆಸ್‌ನವ್ರೂ ಹೇಳ್ತಿದ್ದಾರೆ. ಆದ್ದರಿಂದ ಇಡಿ ಅಥವಾ ಎನ್‌ಐಎ ತನಿಖೆಗೆ ಕೊಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್ಸು ಹತ್ತುವ ವೇಳೆ ಬಾಗಿಲು ಬಂದ್‌- ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು

    ಇನ್ನೂ ಸೌಜನ್ಯ ಪ್ರಕರಣದಲ್ಲೂ ನ್ಯಾಯ ಸಿಗಬೇಕು. ಕೆಲವರು ಸೌಜನ್ಯ ಹತ್ಯೆ ಬಗ್ಗೆ ದಾಖಲೆ ಇದೆ, ಅಂತಾರಲ್ಲ ಅವರು ಎಸ್ಐಟಿಗೆ ಅದನ್ನು ಕೊಡಲಿ. ಎಸ್ಐಟಿ ಅವರಿಗೆ ಸೌಜನ್ಯ ಕೇಸ್ ತನಿಖೆ ಮಾಡಲು ಅವಕಾಶ ಇದ್ರೆ ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್

    ನ್ನೂ ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಹೆಸರೂ ಇದರಲ್ಲಿ ಕೇಳಿಬರ್ತಿದೆ. ಸೆಂಥಿಲ್, ಸ್ಟಾಲಿನ್ ಅವರಿಗೆ ಮೆಸೇಂಜರ್ ಆಗಿದ್ದಾರೆ. ಅವರು ಹಿಂದೂ ಧರ್ಮದ ವಿರುದ್ಧ ಹಲವು ಕಡೆ ಭಾಷಣ ಮಾಡಿದ್ದಾರೆ. ಧರ್ಮಸ್ಥಳ ವಿಚಾರದಲ್ಲೂ ಅವರ ಪಾತ್ರ ಇರುವ ಅನುಮಾನ ಇದೆ. ಎನ್ಐಎ ತನಿಖೆ ನಡೆದರೆ ಈ ವಿಚಾರವನ್ನೂ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.   

  • ಅಡ್ಡೂರು ಆಂಗ್ಲ ಸರ್ಕಾರಿ ತರಗತಿ ಉದ್ಘಾಟನೆ – ಶಾಲೆಯ ನೆಲಮಹಡಿ ನಿರ್ಮಾಣದ ಕೊಡುಗೆ ನೀಡಿದ ಝಕಾರಿಯಾ ಜೋಕಟ್ಟೆ

    ಅಡ್ಡೂರು ಆಂಗ್ಲ ಸರ್ಕಾರಿ ತರಗತಿ ಉದ್ಘಾಟನೆ – ಶಾಲೆಯ ನೆಲಮಹಡಿ ನಿರ್ಮಾಣದ ಕೊಡುಗೆ ನೀಡಿದ ಝಕಾರಿಯಾ ಜೋಕಟ್ಟೆ

    – ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಇಲ್ಲ, ಅಡ್ಡೂರು ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಭರತ್ ಶೆಟ್ಟಿ

    ಅಡ್ಡೂರು: ಅಡ್ಡೂರಿನ (Addur) ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗೆ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಯನ್ನು ಸೇರ್ಪಡೆಗೊಳಿಸುವ ಉದ್ಘಾಟನಾ ಸಮಾರಂಭ ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ (Bharath Shetty) ಉಪಸ್ಥಿತಿಯಲ್ಲಿ ನೆರವೇರಿತು.

    ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಭರತ್ ಶೆಟ್ಟಿಯವರು, ಊರಿನ ಅಭಿವೃದ್ಧಿ ವಿದ್ಯೆಗೆ ನೀಡುವ ಮಹತ್ವದ ಮೇಲೆ ನಿರ್ಧಾರವಾಗುತ್ತದೆ. ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯ ನಾವು ಮಾಡಲ್ಲ. ಸರ್ಕಾರಿ ಶಾಲೆಯ ಉದ್ಧಾರಕ್ಕೆ ನನ್ನ ಕೈಲಾದ ಸಹಾಯ ಸಹಕಾರ ಖಂಡಿತವಾಗಿಯೂ ಮಾಡುವೆ. ರಾಜಕೀಯವನ್ನು ಶಾಲೆಯ ವಠಾರದಿಂದ ಹೊರಗಿಟ್ಟು ಬಂದರೆ ಖಂಡಿತ ಶಾಲೆ ಅಭಿವೃದ್ಧಿಯಾಗುತ್ತದೆ. ಅಡ್ಡೂರು ಶಾಲೆಯ ಹಳೆವಿದ್ಯಾರ್ಥಿಗಳು, ಕೊಡುಗೈ ದಾನಿಗಳ ಕಾಳಜಿ, ಮುತುವರ್ಜಿ ಶ್ಲಾಘನೀಯ ಎಂದರು. ಇದನ್ನೂ ಓದಿ: ಚಾ.ನಗರ ಜಿಲ್ಲೆಯಲ್ಲಿ ಇದೆಂಥಾ ಘಟನೆ?- ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕಕ್ಕೆ ಅಸಮಾಧಾನ

    ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ, ಶಿಕ್ಷಣ ಪೋಷಕ ಝಕಾರಿಯಾ ಜೋಕಟ್ಟೆ ಮಾತನಾಡಿ, ನಾನು ಅಡ್ಡೂರಿನ ಅಳಿಯ. ನನ್ನ ಪತ್ನಿ, ಮಾವ, ಅತ್ತೆ ಎಲ್ಲರೂ ಅಡ್ಡೂರಿನವರು. ನನ್ನ ಪತ್ನಿಯ ಆಶಯದಂತೆ ನನ್ನ ಮಾವ ಮತ್ತು ಅತ್ತೆಯ ನೆನಪಿಗಾಗಿ ಸುಸಜ್ಜಿತವಾದ ಐದು ತರಗತಿಗಳ ನೆಲಮಹಡಿ ಕಟ್ಟಡದ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು. ವಿದ್ಯೆಗೆ ಪೋಷಣೆ ನೀಡುವ ಹಲವು ಕಾರ್ಯಕ್ರಮಗಳನ್ನು ನಾವು ಅತ್ಯಂತ ಸಂತೋಷದಿಂದ ಮಾಡುತ್ತಾ ಬಂದಿದ್ದೇವೆ, ಇನ್ನೂ ಮುಂದುವರೆಸುತ್ತೇವೆ. ಅಡ್ಡೂರಿನ ಈ ಶಾಲೆಯಲ್ಲಿ ಉತ್ತಮ ಶಿಕ್ಷಕರ ನೇಮಕವಾಗಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್ ಓಪನ್ – ವಿಜಯೇಂದ್ರ

    ಅಡ್ಡೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರು ಮಾತನಾಡಿ, 1967ರಲ್ಲಿ ಕಡಂಬಾರು ಕುಟುಂಬದವರು ದಾನವಾಗಿ ನೀಡಿದ ಜಾಗದಲ್ಲಿ ಪ್ರಾರಂಭವಾದ ಅಡ್ಡೂರು ಸರ್ಕಾರಿ ಶಾಲೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ನೀಡಿದೆ. ನಾನೂ ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿ. ನಮ್ಮ ನೆಚ್ಚಿನ ಸರ್ಕಾರಿ ಶಾಲೆ ಮುಚ್ಚಿ ಹೋಗದಂತೆ ನೋಡಿಕೊಂಡು, ಆಂಗ್ಲ ಮಾಧ್ಯಮ ಅನುಮತಿಗಾಗಿ ಜಾತಿ ಧರ್ಮ ಭೇದಭಾವವಿಲ್ಲದೆ ಶ್ರಮವಹಿಸಿದ ಅಡ್ಡೂರಿನ ಎಲ್ಲಾ ನಾಗರಿಕರು, ಸ್ಥಳೀಯ ಸಂಘ ಸಂಸ್ಥೆಗಳು, ಅಡ್ಡೂರು ಸೆಂಟ್ರಲ್ ಕಮಿಟಿ, ನಮ್ಮ ಶಾಸಕರಾದ ಭರತ್ ಶೆಟ್ಟಿ, ಶಿಕ್ಷಣ ಸಚಿವ ಮಧುಬಂಗಾರಪ್ಪ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು. ಅಲ್ಲದೇ ಆಂಗ್ಲ ಮಾಧ್ಯಮದ ಕಟ್ಟಡದ ನೆಲ ಮಹಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತ ಕೊಡುಗೈ ದಾನಿ ಝಕಾರಿಯ ಜೋಕಟ್ಟೆಯವರಿಗೆ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ, ನಿಮ್ಮ ಈ ಕೊಡುಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿ ಆಗಲಿದೆ ಎಂದರು. ಇದನ್ನೂ ಓದಿ: ಡಿಕೆ ಶಿವಕುಮಾರ್, ಡಿಕೆ ಸುರೇಶ್ ಆಶೀರ್ವಾದ ಇರೋದಕ್ಕೆ ನನಗೆ ಅನುದಾನ ಸಿಗ್ತಿದೆ: ಹೆಚ್‌ಸಿ ಬಾಲಕೃಷ್ಣ

    ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್ ಆರ್, ಬಡವರ ಮನೆಗೆ ಭಗವಂತ ಬಂದAತೆ ಝಕಾರಿಯಾ ಜೋಕಟ್ಟೆಯವರು ಆಂಗ್ಲ ಮಾಧ್ಯಮ ಶಾಲೆಯ ನೆಲಮಹಡಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು. ಅಲ್ಲದೇ ಹಿದಾಯತ್ ಅಡ್ಡೂರು ಮತ್ತು ತಂಡದವರು ನಿರಂತರ, ನಿಸ್ವಾರ್ಥ ಪ್ರಯತ್ನದಿಂದ ಮಾತ್ರವೇ ಇಂದು ಈ ತರಗತಿ ಉದ್ಘಾಟನೆ ಸಾಧ್ಯವಾಗಿದೆ. ವಿದೇಶದಲ್ಲಿದ್ದುಕೊಂಡೇ ಶಿಕ್ಷಣ ಸಚಿವರಿಗೆ, ಸ್ಪೀಕರ್ ಅವರಿಗೆ, ಶಾಸಕರಿಗೆ ಕರೆ ಮಾಡಿ ಅನುಮತಿ ಪತ್ರ ಸಿಗುವವರೆಗೂ ಅಹರ್ನಿಶಿ ಪ್ರಯತ್ನ ಮಾಡಿದ್ದಾರೆ. ಹಾಗೂ ಸ್ಥಳೀಯ ಯುವಕರ ಸಂಸ್ಥೆಗಳಂತೂ ಒಗ್ಗಟ್ಟಾಗಿ ಕೆಲಸ ಮಾಡಿದೆ, ದುಡಿದಿದ್ದಾರೆ. ಇಂತಹ ಉತ್ತಮ ಪೋಷಕರಿರುವ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    ಅಡ್ಡೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎಂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ಉದ್ಯಮಿ ಶೌಕತ್ ಅಲಿ, ಮಹಮ್ಮದ್ ಅಶ್ರಫ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲೀಲಾವತಿ, ಅಡ್ಡೂರು ಸೆಂಟ್ರಲ್ ಕಮಿಟಿಯ ಅಬ್ದುಲ್ ರಝಾಕ್, ಬಾಲಕೃಷ್ಣ ರಾವ್ ನೂಯಿ, ಶಿಕ್ಷಕಿ ಅಸುರ ಸ್ವಾಗತಿಸಿದರು, ಮುಖ್ಯೋಪಾಧ್ಯಾಯಿ ದೇವಕಿ ಧನ್ಯವಾದ ಸಲ್ಲಿಸಿದರು, ಶಿಕ್ಷಕಿ ನಮೃತಾ ಕಾರ್ಯಕ್ರಮ ನಿರೂಪಿಸಿದರು. ಇದನ್ನೂ ಓದಿ: `ಕೈ’ ಕಂಪನ ಸಂಕಟ: 2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್!

  • ಹಿಂದೂ ಕಾರ್ಯಕರ್ತರ ಮನೆಗೆ ಭೇಟಿ – ದ.ಕ. ಪೊಲೀಸರ ವಿರುದ್ಧವೇ ತನಿಖೆಗೆ NHRC ಆದೇಶ

    ಹಿಂದೂ ಕಾರ್ಯಕರ್ತರ ಮನೆಗೆ ಭೇಟಿ – ದ.ಕ. ಪೊಲೀಸರ ವಿರುದ್ಧವೇ ತನಿಖೆಗೆ NHRC ಆದೇಶ

    ಮಂಗಳೂರು: ಹಿಂದೂ (Hindu) ಕಾರ್ಯಕರ್ತರ ಮನೆಗೆ ನಿರಂತರ ಪೊಲೀಸರ (Police) ಭೇಟಿ ಪ್ರಕರಣಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ಎಂಟ್ರಿಕೊಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ (Dakshina Kannada District Police) ವಿರುದ್ದ ತನಿಖೆಗೆ ಆದೇಶಿಸಿದೆ.

    ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ದೂರು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತನಿಖಾ ವಿಭಾಗದ ಡಿಜಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಇದನ್ನೂ ಓದಿ: ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್ – ಪ್ರಿಯಾಂಕ್ ಖರ್ಗೆಗೆ ಬಿಗ್‌ ಶಾಕ್‌

     

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ, ಪೊಲೀಸರ ದಾಖಲೆ ಪರಿಶೀಲನೆ ಮತ್ತು ಎಲ್ಲಾ ಸಂತ್ರಸ್ತರ ಹೇಳಿಕೆಗಳನ್ನು ಆಧರಿಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಎನ್‌ಹೆಚ್‌ಆರ್‌ಸಿ ಸೂಚಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸಾರ್ವಜನಿಕರು, ಸಮಾಜ ಸೇವಕರು ಒಂದು ಸಮುದಾಯದ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಕಾನೂನು ಬಾಹಿರ ನಿಗಾ ಮತ್ತು ತಡರಾತ್ರಿ ಪೊಲೀಸ್ ಭೇಟಿ‌ಗೆ ಒಳಗಾಗುತ್ತಿದ್ದಾರೆ. ರಾತ್ರಿ 11 ಗಂಟೆ ನಂತರ ಕಾನೂನುಬದ್ಧ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ದೂರು ನೀಡಿದ್ದರು. ಇದನ್ನೂ ಓದಿ: ಇರಾನ್‌ ವಾರ್‌ ಟೈಂ ಕಮಾಂಡರ್‌ ಹತ್ಯೆ – ಖಮೇನಿ ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಎಂದ ಇಸ್ರೇಲ್‌

    ಯಾವುದೇ ಅಪರಾಧದ ಹಿನ್ನೆಲೆ, ಎಫ್‌ಐಆರ್‌ ಅಥವಾ ತನಿಖೆ ಇಲ್ಲದೇ ಪೊಲೀಸರ ಭೇಟಿ ನೀಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಯಾವುದೇ ವಾರೆಂಟ್ ಅಥವಾ ಕಾನೂನು ದಾಖಲೆ ನೀಡದೆ ಮನೆಗಳಿಗೆ ಹೋಗಿ ಛಾಯಾಚಿತ್ರ ತೆಗೆದು ಜಿಪಿಎಸ್‌ ಸ್ಥಳ ಮಾಹಿತಿ ಸಂಗ್ರಹಿಸಿ ಪ್ರಶ್ನೆ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ದಕ್ಷಿಣ ಕನ್ನಡ ಪೊಲೀಸರ ವಿರುದ್ಧ ಭರತ್‌ ಶೆಟ್ಟಿ ದೂರು ನೀಡಿದ್ದರು.

     

  • ಕುಡುಪು ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ: ಭರತ್ ಶೆಟ್ಟಿ

    ಕುಡುಪು ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ: ಭರತ್ ಶೆಟ್ಟಿ

    -ಈ ಪ್ರಕರಣವನ್ನು ಧರ್ಮ ಎತ್ತಿ ಯಾಕೆ ನೋಡಬೇಕು; ಬಿಜೆಪಿ ಶಾಸಕ ಪ್ರಶ್ನೆ

    ಮಂಗಳೂರು: ಕುಡುಪು (Kudupu) ಗುಂಪು ಹತ್ಯೆ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ ಎಂದು ಮಂಗಳೂರು ಉತ್ತರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ (Dr.Y Bharath Shetty) ಆರೋಪಿಸಿದ್ದಾರೆ.

    ಮಂಗಳೂರಿನಲ್ಲಿ (Mangaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡುಪಿನಲ್ಲಿ ದುರಾದೃಷ್ಟಕರ ಘಟನೆ ನಡೆದಿದೆ. ಆದರೆ ಅಲ್ಲಿ ನಡೆದ ಕ್ರೈಂನ್ನು ಕ್ರೈಂ ದೃಷ್ಟಿಕೋನದಲ್ಲೇ ನೋಡಬೇಕು. ಕೆಲವರು ಮೃತಪಟ್ಟ ವ್ಯಕ್ತಿಯ ಜಾತಿ, ಧರ್ಮ ನೋಡುತ್ತಿದ್ದಾರೆ. ಅಲ್ಲದೇ ಘಟನೆಗೆ ರಾಜಕೀಯ ಬಣ್ಣ ನೀಡಲಾಗುತ್ತಿದ್ದು, ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ

    ದೇಶದಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಪ್ರತೀಕಾರದ ಭಾವನೆ ಎದ್ದಿದೆ. ಇಂತಹ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಹಾಕಿದರೆ ಯಾರೂ ಬಿಡಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಆದರೆ ಇದರಲ್ಲಿ ಘಟನೆಯನ್ನು ಜಾತಿ ಎತ್ತಿ ಯಾಕೆ ನೋಡಬೇಕು. ಇಸ್ರೇಲ್ ಯುದ್ಧ ವೇಳೆ ಎಷ್ಟು ಜನ ಕಾಂಗ್ರೆಸಿಗರು ಇಸ್ರೇಲ್ ಬಾವುಟ ಸುಡುವ ಕೆಲಸ ಮಾಡಿದ್ದಾರೆ. ಈಗ ಯಾಕೆ ಪಾಕಿಸ್ತಾನ ಧ್ವಜ ಸುಟ್ಟಿಲ್ಲ. ಯಾರೋ ಸುಟ್ಟಾಗ ಇವರಿಗೇಕೆ ಸಿಟ್ಟು. ವೈದ್ಯೆಯೊಬ್ಬಳು ಪಾಕ್ ಪರ ಕಮೆಂಟ್ ಹಾಕಿದಾಗ ಯಾಕೆ ಇವರು ಪ್ರತಿಕ್ರಿಯೆ ಕೊಟ್ಟಿಲ್ಲ. ಯುದ್ಧ ಸನ್ನಿವೇಶ ಎದುರಾಗಿರುವ ಹೊತ್ತಲ್ಲಿ ಕಾಂಗ್ರೆಸಿಗರು ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಪಣ – ಸೈಲೆಂಟ್ ಪ್ಲ್ಯಾನಿಂಗ್, ಮೋದಿ ನಿಗೂಢ ನಡೆ

    ಬೆಂಗಳೂರಿನಲ್ಲಿ (Bengaluru) ಗೋವಿನ ಕೆಚ್ಚಲು ಕೊಯ್ದವನೂ ಅರೆಸ್ಟ್ ಆದಾಗ ಮಾನಸಿಕ ಅಸ್ವಸ್ಥ ಎಂದಾಗಿತ್ತು. ಈಗ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದಾಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ಪಾಕ್ ಪರ ಮನಸ್ಥಿತಿ ಇದ್ದವರು, ಅಂಥ ಘೋಷಣೆ ಹಾಕೋರೆಲ್ಲ ಮಾನಸಿಕ ಅಸ್ವಸ್ಥರೇ ಆಗಿದ್ದಾರೆ. ದೇಶದಲ್ಲಿ ಇಂತಹ ಮಾನಸಿಕ ಅಸ್ವಸ್ಥರ ಗುಂಪು ಹೆಚ್ಚಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದವನ ಹತ್ಯೆ ಕೇಸ್ – ಮೂವರು ಪೊಲೀಸರು ಸಸ್ಪೆಂಡ್

    ಈ ಪ್ರಕರಣದಲ್ಲಿ ಪೊಲೀಸರು (Police) ಕೆಲವು ಅಮಾಯಕರನ್ನು ಫಿಕ್ಸ್ ಮಾಡಲು ಹೊರಟಿದ್ದಾರೆ. ಯಾರನ್ನೋ ಫಿಕ್ಸ್ ಮಾಡಲು ಹೋದರೆ ನಾವು ಸುಮ್ಮನಿರಲು ಆಗುವುದಿಲ್ಲ. ಪೊಲೀಸರ ಮೇಲೆ ರಾಜಕೀಯ ಒತ್ತಡ ಹಾಕಿ ಕೆಲವರನ್ನು ಬಂಧಿಸಲಾಗುತ್ತಿದೆ. ಈ ಘಟನೆಯಲ್ಲಿ ಪೊಲೀಸರ ಮೇಲೆ ಒತ್ತಡ ಹಾಕದೇ ಕೆಲಸ ಮಾಡಲು ಬಿಡಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ, ಅವರ ಕೆಲಸ ಮಾಡಲಿ. ಮೃತಪಟ್ಟ ವ್ಯಕ್ತಿ ಮುಸ್ಲಿಂ ಎಂಬುದು 2 ದಿನಗಳ ನಂತರವೇ ಗೊತ್ತಾಗಿದ್ದು, ಮುಸ್ಲಿಂ ಅಂತಾ ಕೊಂದರು ಎನ್ನುವುದು ವೈಷಮ್ಯ ಬಿತ್ತುವ ಕೆಲಸ ಎಂದರು

  • ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

    ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

    – ನಟಿಯನ್ನ ಬಚಾವ್ ಮಾಡಲು ಸಚಿವರು ಪ್ರಭಾವ ಬೀರಿದ್ದಾರೆ ಎಂದು ಆರೋಪ

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸಲ್ಲಿ ರನ್ಯಾ ರಾವ್ (Ranya Rao) ಕೆಲವು ಕಾಂಗ್ರೆಸ್ ಸಚಿವರಿಗೆ ಕರೆ ಮಾಡಿ ಬಚಾವ್ ಆಗಲು ಯತ್ನಿಸಿದ್ದಾಳೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ (Bharath Shetty) ಹೊಸ ಬಾಂಬ್ ಸಿಡಿಸಿದ್ದಾರೆ.

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಕೂಡ ಆಕೆಯನ್ನು ರಕ್ಷಿಸಲು ಕರೆ ಮಾಡಿ ಪ್ರಭಾವ ಬೀರುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ. ಈಗ ಸಿಬಿಐ ಈ ಪ್ರಕರಣವನ್ನು ತೆಗೆದುಕೊಂಡ ಕಾರಣ ಇದರ ಹಿಂದೆ ಯಾರೆಲ್ಲಾ ಇದ್ದಾರೆ, ಯಾರ ಕೈವಾಡವಿದೆ ಎಂಬುದು ಖಂಡಿತ ಮುನ್ನಲೆಗೆ ಬರುತ್ತದೆ. ಸಿಬಿಐ ತನಿಖಾ ವರದಿಗೋಸ್ಕರ ನಾವೆಲ್ಲಾ ಕಾಯುತ್ತಿದ್ದೇವೆ ಎಂದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಅಕ್ರಮ ಆರೋಪ – ಛತ್ತೀಸ್‌ಗಢ ಮಾಜಿ ಸಿಎಂ, ಪುತ್ರನ ಮನೆ ಮೇಲೆ ED ದಾಳಿ

    ರನ್ಯಾ ರಾವ್ ಒಡೆತನದ ಕಂಪನಿಗೆ ಸರ್ಕಾರ ಜಮೀನು ಮಂಜೂರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಕ್ರಿಮಿನಲ್ ಕೇಸ್ ಆಗಿದೆ. ಜಮೀನು ಮಂಜೂರಾತಿ ಪ್ರಕ್ರಿಯೆಯಲ್ಲಿ ತಪ್ಪಿದ್ದರೆ ಹೇಳಲಿ. ಈ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾಗಿಲ್ಲ. ಜಮೀನು ಮಂಜೂರಾತಿ ಪ್ರಕ್ರಿಯೆ ಬೇಗ ಆಗಿದೆ ಎಂಬುದು ಇವರ ಆರೋಪ. ನಿಮ್ಮದೇ ಸರ್ಕಾರ ಇದೆ. ಜಾಗ ಮಂಜೂರಾತಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ತನಿಖೆ ಮಾಡಿಸಿ ಎಂದು ಹೇಳಿದರು. ಇದನ್ನೂ ಓದಿ: ಹಾವೇರಿ| 33 ಸೆಕೆಂಡ್ ನಲ್ಲಿ 33 ಲಕ್ಷ ಹಣ ಕಳ್ಳತನ – ಓರ್ವ ಆರೋಪಿ ಅರೆಸ್ಟ್

  • ರಾಹುಲ್‌ ವಿರುದ್ಧ ಹೇಳಿಕೆ – ಭರತ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌, ವಿಚಾರಣೆಗೆ ಬರುವಂತೆ ನೋಟಿಸ್‌

    ರಾಹುಲ್‌ ವಿರುದ್ಧ ಹೇಳಿಕೆ – ಭರತ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌, ವಿಚಾರಣೆಗೆ ಬರುವಂತೆ ನೋಟಿಸ್‌

    ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಮಂಗಳೂರು (Mangaluru) ಉತ್ತರ ಕ್ಷೇತ್ರದ ಬಿಜೆಪಿ ಶಾಸಕ (BJP MLA) ಡಾ.ವೈ.ಭರತ್ ಶೆಟ್ಟಿ (Bharat Shetty) ವಿವಾದಾತ್ಮಕ ಹೇಳಿಕೆಗೆ ಎಫ್‌ಐಆರ್‌ ದಾಖಲಾಗಿದ್ದು, ಈಗ ವಿಚಾರಣೆಗ ಬರುವಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

    ಮೂರು ದಿನಗಳ ಒಳಗೆ ತನಿಖಾಧಿಕಾರಿ ಎದುರು ಹಾಜರಾಗಿ ವಿಚಾರಣೆ ಎದುರಿಸುವಂತೆ ಕಾವೂರು ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಬೈಂದೂರು ನೋಟಿಸ್‌ ಜಾರಿ ಮಾಡಿದ್ದಾರೆ.

    ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಅನಿಲ್ ಕುಮಾರ್ ದೂರಿನ ಮೇಲೆ ಭರತ್‌ ಶೆಟ್ಟಿ ಮೇಲೆ ಭಾರತೀಯ ನ್ಯಾಯ ಸಂಹಿತೆಯ 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಇದನ್ನೂ ಓದಿ: ಆದಾಯಕ್ಕಿಂತ ಹೆಚ್ಚು ಆಸ್ತಿ – ನಿವೃತ್ತ ಎಂಜಿನಿಯರ್‌ ಸೇರಿದಂತೆ 13 ಅಧಿಕಾರಿಗಳಿಗೆ ಲೋಕಾ ಶಾಕ್‌

    ಮಂಗಳೂರಿನ ಕಾವೂರಿನಲ್ಲಿ ಸೋಮವಾರ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಭರತ್‌ ಶೆಟ್ಟಿ ರಾಹುಲ್‌ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು.

     

    ಭರತ್‌ ಶೆಟ್ಟಿ ಹೇಳಿದ್ದೇನು?
    ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿಗೆ ಪಾರ್ಲಿಮೆಂಟ್‌ ಒಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಬೇಕು. ಆಗ ಎಲ್ಲವೂ ಸರಿಹೋಗುತ್ತೆ. ಆಗ ಇದಕ್ಕೆ ಏಳೆಂಟು ಎಫ್‌ಐಆರ್ ದಾಖಲಾಗ್ತಿತ್ತು ಅಷ್ಟೇ. ಮಂಗಳೂರಿಗೆ ಬಂದ್ರೆ ನಾವೇ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ.

    ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದರು. ಆ ಹುಚ್ಚನಿಗೆ ಶಿವ 3ನೇ ಕಣ್ಣು ಬಿಟ್ಟರೇ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ. ಅವರು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾರೆ. ನಾವು ಅವನಿರಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತ ನೋಡಿ? ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ. ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅಲ್ಲಿ ಅವರು ಬೊಗಳಿದರೆ ಇಲ್ಲಿನ ನಾಯಕರು ಬಾಲ ಬಿಚ್ಚಲು ಶುರು ಮಾಡ್ತಾರೆ.

    ರಾಹುಲ್‌ ಗಾಂಧಿ ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾರೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾರೆ. ಅಂತಹ ದೊಡ್ಡ ಹುಚ್ಚರು ಅವರು. 99 ಸೀಟು ಗೆದ್ದು ಏನೋ ಸಾಧನೆ ಮಾಡಿದ್ದೇವೆ ಅನ್ನೋ ತರ ಅವರು ಮಾತಾಡ್ತಾರೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು. ಎಲ್ಲಿ ಶಸ್ತ್ರಾಸ್ತ್ರ ತೆಗೆಯಬೇಕೋ ಅಲ್ಲಿ ತೆಗೆಯುತ್ತೇವೆ. ಶಸ್ತ್ರಾಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಪಾರ್ಲಿಮೆಂಟ್‌ಗೆ ಹೋಗಿ ಅವನ ಕೆನ್ನೆಗೆ ಕೊಟ್ಟರೇ ಆಗ ಅವರು ಸರಿಯಾಬಹುದು ಎಂದು ಎಚ್ಚರಿಕೆ ನೀಡಿದರು.

  • ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಕೆನ್ನೆಗೆ ಬಾರಿಸಬೇಕು: ಭರತ್‌ ಶೆಟ್ಟಿ ಕೆಂಡಾಮಂಡಲ

    ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಕೆನ್ನೆಗೆ ಬಾರಿಸಬೇಕು: ಭರತ್‌ ಶೆಟ್ಟಿ ಕೆಂಡಾಮಂಡಲ

    – ಎಲ್ಲಿ ಶಸ್ತ್ರಾಸ್ತ್ರ ತೆಗಿಬೇಕೊ ಅಲ್ಲಿ ತೆಗೆಯುತ್ತೇವೆ ಎಂದು ಶಾಸಕ ಎಚ್ಚರಿಕೆ

    ಮಂಗಳೂರು: ರಾಹುಲ್‌ ಗಾಂಧಿಗೆ (Rahul Gandhi) ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಶಾಸಕ ಭರತ್ ಶೆಟ್ಟಿ (Bharat Shetty) ಕೆಂಡಾಮಂಡಲವಾಗಿದ್ದಾರೆ.

    ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂ ವಿರೋಧಿ (Anti Hindu) ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಮಂಗಳೂರಿನಲ್ಲಿಂದು (Mangaluru) ಬಿಜೆಪಿ ಯುವಮೋರ್ಚಾ ಘಟಕ ಪ್ರತಿಭಟನೆ ನಡೆಸಿತು. ಮಳೆಯನ್ನೂ ಲೆಕ್ಕಿಸದೇ ರಾಹುಲ್‌ ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆ (BJP Protest) ವೇಳೆ ಬಂದ ಶ್ವಾನವನ್ನು ತೋರಿಸಿ ರಾಹುಲ್‌ ಗಾಂಧಿಗೆ ಹೋಲಿಸಿ ಲೇವಡಿ ಮಾಡಿದರು. ಅಲ್ಲದೇ ರಾಹುಲ್ ಗಾಂಧಿ ಪ್ರತಿಕೃತಿ ಧಹಿಸಿ ಆಕ್ರೋಶ ಹೊರಹಾಕಿದರು.

    ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿಗೆ ಪಾರ್ಲಿಮೆಂಟ್‌ ಒಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಬೇಕು, ಆಗ ಎಲ್ಲವೂ ಸರಿಹೋಗುತ್ತೆ. ಆಗ ಇದಕ್ಕೆ ಏಳೆಂಟು ಎಫ್‌ಐಆರ್ ದಾಖಲಾಗ್ತಿತ್ತು ಅಷ್ಟೇ ಎಂದರಲ್ಲದೇ ಮಂಗಳೂರಿಗೆ ಬಂದ್ರೆ ನಾವೇ ಅದಕ್ಕೆ ವ್ಯವಸ್ಥೆ ಮಾಡ್ತೀವಿ ಎಂದು ನುಡಿದಿದ್ದಾರೆ.

    ಶಿವ 3ನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾರೆ:
    ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದರು. ಆ ಹುಚ್ಚನಿಗೆ ಶಿವ 3ನೇ ಕಣ್ಣು ಬಿಟ್ಟರೇ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ. ಅವರು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾರೆ. ನಾವು ಅವನಿರಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತ ನೋಡಿ? ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ. ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅಲ್ಲಿ ಅವರು ಬೊಗಳಿದರೆ ಇಲ್ಲಿನ ನಾಯಕರು ಬಾಲ ಬಿಚ್ಚಲು ಶುರು ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಹಿಂದೂಗಳು ಮನೆಯಿಂದಾಚೆ ಕಾಲಿಡಲು ಆಗಲ್ಲ:
    ಹಿಂದೂ ಧರ್ಮ ರಕ್ಷಿಸೋದು, ಮಠ, ಮಂದಿರ ಕಾಪಾಡೋದು ನಮ್ಮ ಕರ್ತವ್ಯ. ಹಿಂದೂ ಮತ್ತು ಹಿಂದುತ್ವ ಬೇರೆ ಎಂಬ ಥಿಯರಿ ಹೇಳೋದಕ್ಕೆ ಕಾಂಗ್ರೆಸ್‌ನವರು ಶುರು ಮಾಡಿದ್ದಾರೆ. ಇಂತಹ‌ ನಾಯಕರನ್ನ ಸಾಕಿದ್ರೆ ಹಿಂದೂಗಳಿಗೆ ಮುಂದೆ ಅಪಾಯವಿದೆ. ಮುಂದಿನ 10, 15 ವರ್ಷಗಳಲ್ಲೇ ಕಾಂಗ್ರೆಸ್‌ ನಾಯಕರು ಹಿಂದೂಗಳು ಮನೆಯಿಂದ ಹೊರಗೆ ಕಾಲಿಡಲು ಆಗದಂತ ಸ್ಥಿತಿ ನಿರ್ಮಾಣ ಮಾಡ್ತಾರೆ. ಆಗ ಕಾಂಗ್ರೆಸ್‌ನಲ್ಲಿರುವ ಹಿಂದೂ ನಾಯಕರಿಗೆ ಬಜರಂಗದಳ, ಆರ್‌ಎಸ್‌ಎಸ್‌ ಬೇಕು ಅನ್ನಿಸುತ್ತೆ. ಆದ್ದರಿಂದ ಇಂತಹ ವ್ಯಕ್ತಿಗಳಿಗೆ ಮಣೆಹಾಕಬೇಡಿ ಎಂದು ಕರೆ ನೀಡಿದ್ದಾರೆ.

    ಎಲ್ಲಿ ಶಸ್ತ್ರಾಸ್ತ್ರ ತೆಗಿಬೇಕೊ ಅಲ್ಲಿ ತೆಗೆಯುತ್ತೇವೆ:
    ರಾಹುಲ್‌ ಗಾಂಧಿ ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾರೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾರೆ. ಅಂತಹ ದೊಡ್ಡ ಹುಚ್ಚರು ಅವರು. 99 ಸೀಟು ಗೆದ್ದು ಏನೋ ಸಾಧನೆ ಮಾಡಿದ್ದೇವೆ ಅನ್ನೋ ತರ ಅವರು ಮಾತಾಡ್ತಾರೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು. ಎಲ್ಲಿ ಶಸ್ತ್ರಾಸ್ತ್ರ ತೆಗಿಬೇಕೊ ಅಲ್ಲಿ ತೆಗೆಯುತ್ತೇವೆ. ಶಸ್ತ್ರಾಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಪಾರ್ಲಿಮೆಂಟ್‌ಗೆ ಹೋಗಿ ಅವನ ಕೆನ್ನೆಗೆ ಕೊಟ್ಟರೇ ಆಗ ಅವರು ಸರಿಯಾಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

  • ದೂರು ಕೊಟ್ಟು ಶಿಕ್ಷಕಿ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ: ಸಿ.ಟಿ.ರವಿ

    ದೂರು ಕೊಟ್ಟು ಶಿಕ್ಷಕಿ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ: ಸಿ.ಟಿ.ರವಿ

    ನವದೆಹಲಿ: ಶಾಸಕ ವೇದವ್ಯಾಸ ಕಾಮತ್ (Vedavyas Kamath) ಹಾಗೂ ಭರತ್ ಶೆಟ್ಟಿ (Bharath Shetty) ವಿರುದ್ಧ ಎಫ್‌ಐಆರ್ (FIR) ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದಾರೆ. ಯಾರು ಯಾರ ಮೇಲೆ ದೂರು ನೀಡಿದರೂ ಎಫ್‌ಐಆರ್ ಹಾಕುವುದು ನಿಯಮ. ತನಿಖೆ ನಡೆದ ಮೇಲೆ ಯಾರ ತಪ್ಪು ಗೊತ್ತಾಗಲಿದೆ. ದೂರು ಕೊಟ್ಟು ಶಿಕ್ಷಕಿ ತಮ್ಮ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.

    ಈ ಕುರಿತು ನವದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ದಾಖಲಿಸಲು ಶಿಕ್ಷಕಿ ಸ್ವತಂತ್ರರು. ಆದರೆ ಶಿಕ್ಷಕಿ ಹಿಂದೂ ಧರ್ಮದ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ನಿರಂತರವಾಗಿ ಇದು ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಂತಹ ಆರೋಪಗಳು ಬಂದಾಗ ಜನಪ್ರತಿನಿಧಿಗಳು ಅಲ್ಲಿಗೆ ಹೋಗಬೇಕಾಗುತ್ತದೆ. ಶಿಕ್ಷಕಿ ದೂರು ನೀಡಿದ ತಕ್ಷಣ ತಾನು ಮಾಡಿದ ತಪ್ಪು ಮುಚ್ಚಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರಲಿ ಎಂದರು. ಇದನ್ನೂ ಓದಿ: ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಸರ್ಕಾರ ಬ್ರೇಕ್

    ಇನ್ನು ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಒಂದು ಸ್ಥಾನ ಗೆದ್ದ ಬಳಿಕ 39 ಮತಗಳು ಉಳಿಯಲಿದೆ. ಎರಡನೇ ಅಭ್ಯರ್ಥಿಗೆ ಆರು ಮತಗಳ ಕೊರತೆ ಇದೆ. ಹಲವು ಕಾರಣಕ್ಕೆ ಹಲವು ಪಕ್ಷದ ನಾಯಕರು ಸ್ನೇಹಿತರಾಗುತ್ತಾರೆ. ಹಾಗಾಗಿ ಆರು ಮತ ಪಡೆಯುವ ವಿಶ್ವಾಸ ಇರಬಹುದು. ಆ ಮತಗಳು ಬಂದ್ರೆ ಗೆಲುವು ಕಷ್ಟ ಅಲ್ಲ. ಈ ಹಿಂದೆ 10-12 ಮತಗಳು ಕೊರತೆ ಇದ್ದಾಗಲೂ ಗೆದ್ದು ಬಂದ ಉದಾಹರಣೆ ಇದೆ. ಈಗ ಆರು ಮತಗಳು ಮಾತ್ರ ಕೊರತೆ ಇದೆ. ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ನಲ್ಲಿ ಬಹಳ ಜನ ಸ್ನೇಹಿತರು ಇದ್ದಾರೆ. ಅವರು ಸಹಾಯ ಮಾಡಿದರೆ ಗೆಲ್ಲಬಹುದು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

    ಲೋಕಸಭೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 1995ರ ಬಳಿಕ ನಾನು ಪಕ್ಷದಲ್ಲಿ ಏನೂ ಕೇಳಿ ಪಡೆದುಕೊಂಡಿಲ್ಲ. ಪಕ್ಷದ ತೀರ್ಮಾನ ಕಾರ್ಯಕರ್ತನಾಗಿ ಪಾಲಿಸುತ್ತೇನೆ. ಬಿಜೆಪಿ (BJP) ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ

  • ನ್ಯಾಷನಲ್ ಲಾ ಸ್ಕೂಲ್‌ನಲ್ಲೂ ನಾನು ಪಾಸಾಗಿದ್ದೇನೆ – ಪ್ರಿಯಾಂಕ್ ಖರ್ಗೆ ತಿರುಗೇಟು

    ನ್ಯಾಷನಲ್ ಲಾ ಸ್ಕೂಲ್‌ನಲ್ಲೂ ನಾನು ಪಾಸಾಗಿದ್ದೇನೆ – ಪ್ರಿಯಾಂಕ್ ಖರ್ಗೆ ತಿರುಗೇಟು

    ಕಲಬುರಗಿ: ನನ್ನ ವಿದ್ಯಾರ್ಹತೆ ನನ್ನ ಅಫಿಡವಿಟ್‌ನಲ್ಲೇ ಇದೆ, ಅದನ್ನ ನೋಡಿಕೊಳ್ಳಲಿ. ನ್ಯಾಷನಲ್ ಲಾ ಸ್ಕೂಲ್‌ನಲ್ಲೂ (National Law School) ನಾನು ಪಾಸಾಗಿದ್ದೇನೆ. ಬೇಕಿದ್ರೆ ಹೋಗಿ ನೋಡಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿರುಗೇಟು ನೀಡಿದ್ದಾರೆ.

    ʻʻಪಿಯುಸಿ ಫೇಲ್ ಆದ ಪ್ರಿಯಾಂಕ್ ಖರ್ಗೆ ಎಂಜಿನಿಯರ್ ಸೂಲಿಬೆಲೆ ಪದವಿ ಬಗ್ಗೆ ಕೇಳ್ತಾರೆʼʼ ಎಂಬ ಶಾಸಕ ಭರತ್ ಶೆಟ್ಟಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ವಿದ್ಯಾರ್ಹತೆ ನನ್ನ ಅಫಿಡವಿಟ್‌ನಲ್ಲೇ ಇದೆ, ಅದನ್ನ ನೋಡಿಕೊಳ್ಳೋಕೆ ಹೇಳಿ. ನಾನು ಮಾಡಿದ ವಿದ್ಯಾಭ್ಯಾಸ ಇವ್ರಿಗೆ ತಿಳಿಯದೇ ಇರಬಹುದು. ಅದಕ್ಕೆಲ್ಲ ಉತ್ತರ ಕೊಡೋದಕ್ಕೆ ಆಗಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೂ ವಿದ್ಯುತ್ ಬಿಲ್ ನಾವೇ ಕಟ್ಟುತ್ತೇವೆ: ಬೈರತಿ ಸುರೇಶ್

    ಅವರಿಗೆಲ್ಲಾ ನನ್ನ ಬಗ್ಗೆ ತುಂಬಾ ಕಾಳಜಿಯಿದೆ. ಮೊದಲು ತಮ್ಮ ಪಕ್ಷದ ಸುಪ್ರೀಂ ಲೀಡರ್ ಇದ್ದಾರಲ್ಲ ಅವರ ಅರ್ಹತೆ ಏನಿದೆ? ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಹೇಳಿ. ಯಾರಾದ್ರೂ ಪ್ರಧಾನ ಮಂತ್ರಿಗಳ ಡಿಗ್ರಿ ತಿಳಿದುಕೊಳ್ಳೋಕೆ ಹೋದ್ರೆ, ಆರ್‌ಟಿಐ ನಲ್ಲಿ ಮಾಹಿತಿ ಕೊಡಬೇಡಿ ಅಂತಾ ಹೇಳಿಬಿಟ್ಟಿದ್ದಾರೆ ಎಂದು ಹೆಸರು ಹೇಳದೆ ಪ್ರಧಾನಿ ಮೋದಿ (Narendra Modi) ಅವರನ್ನು ಟೀಕಿಸಿದ ಪ್ರಿಯಾಂಕ್ ಖರ್ಗೆ, ಅದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಫಸ್ಟ್ ಅದಕ್ಕೆಲ್ಲಾ ಉತ್ತರ ಕೊಡಲಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಉಚಿತ ಬಸ್‌ ಪ್ರಯಾಣದ ಮೊದಲ ಟಿಕೆಟ್‌ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..! 

  • ಪಿಯುಸಿ ಫೇಲ್ ಆದ ಪ್ರಿಯಾಂಕ್ ಖರ್ಗೆ ಎಂಜಿನಿಯರ್ ಸೂಲಿಬೆಲೆ ಪದವಿ ಕೇಳ್ತಾರೆ: ಭರತ್ ಶೆಟ್ಟಿ ವ್ಯಂಗ್ಯ

    ಪಿಯುಸಿ ಫೇಲ್ ಆದ ಪ್ರಿಯಾಂಕ್ ಖರ್ಗೆ ಎಂಜಿನಿಯರ್ ಸೂಲಿಬೆಲೆ ಪದವಿ ಕೇಳ್ತಾರೆ: ಭರತ್ ಶೆಟ್ಟಿ ವ್ಯಂಗ್ಯ

    ಮಂಗಳೂರು: ಎಂಜಿನಿಯರಿಂಗ್ ಮುಗಿಸಿ ಕೈ ತುಂಬಾ ವೇತನವಿದ್ದರೂ ಕೆಲಸ ತ್ಯಜಿಸಿ, ದೇಶದ ಭವಿಷ್ಯಕ್ಕಾಗಿ ಯುವ ಸಮೂಹದಲ್ಲಿ ರಾಷ್ಟ್ರೀಯತೆ, ದೇಶ ಭಕ್ತಿ ಉದ್ದೀಪನ ಗೊಳಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯ (Chakravarti Sulibele) ವಿದ್ಯಾರ್ಹತೆಯನ್ನು ಪ್ರಥಮ ಪಿಯುಸಿ ಫೇಲ್ ಆದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಮಂಗಳೂರು (Mangaluru) ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ (Bharath Shetty) ವ್ಯಂಗ್ಯವಾಡಿದ್ದಾರೆ.

    ಸೂಲಿಬೆಲೆ ಯಾವ ಪಿಹೆಚ್‌ಡಿ ಪದವಿ ಗಳಿಸಿದ್ದಾನೆ? ಬಾಡಿಗೆ ಭಾಷಣಕಾರರನ್ನು ಲೇಖಕರು ಮಾಡಿ, ಅವನ ಪಾಠ ಮಕ್ಕಳು ಏಕೆ ಓದಬೇಕು ಎಂದು ಏಕವಚನದಲ್ಲಿ ಮಾತನಾಡಿರುವ ಪ್ರಿಯಾಂಕ್ ಖರ್ಗೆ ಬಗ್ಗೆ ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ನಿಮ್ಮ ವಿದ್ಯಾರ್ಹತೆ ನೋಡಿಕೊಂಡು ಸೂಲಿಬೆಲೆ ಬಗ್ಗೆ ಮಾತನಾಡಿ. ನಿಮಗೆ ಪ್ರಶ್ನಿಸುವ ನೈತಿಕ ಹಕ್ಕು ಇಲ್ಲ ಎಂದು ಖರ್ಗೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹೊಸ ಬಾಂಬ್

    ದೇಶದಲ್ಲಿ ರಾಷ್ಟ್ರೀಯತೆಯನ್ನು, ದೇಶ ಪ್ರೇಮವನ್ನು ಜಾಗೃತಿ ಮಾಡುವುದೇ ಅಪರಾಧವೆಂದು ಪ್ರಿಯಾಂಕ್ ಖರ್ಗೆ ತಿಳಿದಂತಿದೆ. ದೇಶ ಭಕ್ತಿ, ನಮ್ಮ ರಾಷ್ಟ್ರ ಎಂಬ ಭಾವನೆಯನ್ನು ನಮ್ಮ ಭವಿಷ್ಯದ ಮಕ್ಕಳಿಗೆ ಯಾವತ್ತೂ ತಿಳಿಸುವ ಗೋಜಿಗೆ ಹೋಗದ ಕಾಂಗ್ರೆಸ್ ಪಕ್ಷ ದೇಶದೊಳಗೆ ಭಯೋತ್ಪಾದಕನಿಗೆ ಏನಾದಾರೂ ಆದರೆ ಕಣ್ಣೀರಿಡುವ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ರಾಷ್ಟ್ರೀಯತೆಯ ಭಾವನೆಯಿಲ್ಲದೆ ಸೊರಗಿರುವ ಮಕ್ಕಳು ಇಂದು ರೈಲು ಓಡಾಡುವ ಹಳಿಗಳ ಮೇಲೆ ಕಲ್ಲಿಟ್ಟು, ಕಲ್ಲು ತೂರಾಟ ನಡೆಸಿ ಹಿಂಸಾ ಪ್ರವೃತ್ತಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಪಟ ಜಾತ್ಯತೀತತೆಯ ಕಾರಣದಿಂದಾಗಿ ದೇಶ ಸೊರಗುತ್ತಿದೆಯೇ ಹೊರತು, ಸೂಲಿಬೆಲೆಯಂತಹ ದೇಶ ಭಕ್ತರಿಂದಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!