Tag: ಭರತ್ ಬೊಮ್ಮಾಯಿ

  • ನನ್ನಂಥ ಮುಸ್ಲಿಂ ಸಮುದಾಯದ ಬಡ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ: ಯಾಸಿರ್ ಪಠಾಣ್

    ನನ್ನಂಥ ಮುಸ್ಲಿಂ ಸಮುದಾಯದ ಬಡ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ: ಯಾಸಿರ್ ಪಠಾಣ್

    ಹಾವೇರಿ: ನಮ್ಮ ಸರ್ಕಾರದ ವಿರುದ್ಧ ಎಷ್ಟೇ ಆರೋಪ ಮಾಡಿದರೂ ಜನರು ಅದಕ್ಕೆ ಉತ್ತರ ನೀಡಿದ್ದಾರೆ. ಅಂತಹ ದೊಡ್ಡ ನಾಯಕರ ಮುಂದೆ ನನ್ನಂಥ ಸಾಮಾನ್ಯ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (Yasir Khan Pathan) ಹೇಳಿದ್ದಾರೆ.

    ಶಿಗ್ಗಾಂವಿ ಉಪಚುನಾವಣೆಯಲ್ಲಿ (Shiggaon By Election) ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಅವರನ್ನು ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಭರ್ಜರಿ ಜಯಗಳಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮದ ಎಲ್ಲಾ ಜಾತಿಯ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯವರು (BJP) ಎಷ್ಟೆಲ್ಲಾ ಆರೋಪ ಮಾಡಿದರೂ ಜನರು ಉತ್ತರ ನೀಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಸಾಹೇಬ್ರು ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಶ್ರಮ ಇದೆ. ನನ್ನಂಥ ಮುಸ್ಲಿಂ ಸಮುದಾಯದ ಬಡ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್‌ ಹೇಳಿದ್ದೇನು?

    ಬಿಜೆಪಿಯವರು ಸೋತ ಮೇಲೆ ಹಣದ ಹೊಳೆ ಹರಿಸಿದ್ದಾರೆ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಆದರೆ ಜನರಿಗೆ ಉತ್ತಮ ಆಡಳಿತ ಬೇಕಿದೆ. ಆದ್ದರಿಂದ ಈ ತೀರ್ಪು ನೀಡಿದ್ದಾರೆ ಎಂದರು.  ಇದನ್ನೂ ಓದಿ: ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ

    ಯಾಸಿರ್ ಪಠಾಣ್ ಗೆಲುವಿಗೆ ಕಾರಣಗಳು:
    *ಶಿಗ್ಗಾಂವಿ ಕ್ಷೇತ್ರದಲ್ಲಿ ರಾಜೀ ರಾಜಕೀಯಕ್ಕೆ ಮುಕ್ತಿ ಹಾಡಿ ಗಂಭೀರವಾಗಿ ಕಾಂಗ್ರೆಸ್ ಚುನಾವಣೆ ಎದುರಿಸಿದ ಹಿನ್ನೆಲೆ ಪೈಲ್ವಾನ್ ಗೆಲುವು.
    *ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾಂವಿಯಲ್ಲೇ ವಸತಿ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದ್ದರು.
    *ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರರಲ್ಲಿ ಸ್ವಲ್ಪ ಮತದಾರರು ‘ಕೈ’ ಪರ ಮತ ಚಲಾವಣೆ.
    *ಕಾಂಗ್ರೆಸ್ ಪಡೆ ಶಿಗ್ಗಾಂವಿಯಲ್ಲಿಯೇ ಬೀಡು ಬಿಟ್ಟು ಕ್ಯಾಂಪೇನ್ ಮಾಡಿದ್ದು ಪಠಾಣ್‌ಗೆ ವರವಾಯಿತು.
    *ಖಾದ್ರಿ ಮನವೊಲಿಸಿ ಪಠಾಣ್‌ಗೆ ಜೋಡು ಮಾಡಿ ಚುನಾವಣೆ ಎದುರಿಸಿದ ಹಿನ್ನೆಲೆ ಪಠಾಣ್ ಗೆಲುವು ಸುಲಭ.
    *ಬಿಜೆಪಿಯ ವಕ್ಫ್ ಅಸ್ತ್ರ ವಿಫಲ.
    *ಬಸವರಾಜ ಬೊಮ್ಮಾಯಿ ಮೊದಲ ಸಲ ಬಹಳ ಪ್ರಬಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲ.
    *ಪಂಚಮಸಾಲಿ ಮತದಾರರು ‘ಕೈ’ ಕಡೆ ವಾಲಿದರು.
    *ಪ್ರತಿ ಸಲ ಬೊಮ್ಮಾಯಿ ಪಾಲಾಗ್ತಿದ್ದ 10% ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದೆ.
    *ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುರುಬರು ‘ಕೈ’ ಬಲಪಡಿಸಲು ಮತ್ತೆ ಕೃಪೆ ತೋರಿದರು.

  • ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ: ಭರತ್ ಬೊಮ್ಮಾಯಿ

    ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ: ಭರತ್ ಬೊಮ್ಮಾಯಿ

    ಹಾವೇರಿ: ಕಾಂಗ್ರೆಸ್ (Congress) ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ ಎಂದು ಶಿಗ್ಗಾಂವಿ (Shiggaon) ಪರಾಜಿತ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಇಡೀ ಸರ್ಕಾರ ಬಂದು ಹಣದ ಹೊಳೆಯನ್ನೇ ಹರಿಸಿದೆ. ಹಾಗಾಗಿ ಇಂದು ಕಾಂಗ್ರೆಸ್ ಗೆದ್ದಿದೆ. ನಾನು ಯಾವತ್ತಿದ್ದರೂ ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರಿಗೆ ಒಳಿತು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕ್ಷೇತ್ರದ ಜನರ ಜೊತೆಗೆ ಎಂದೆಂದಿಗೂ ಇರುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಿಎಂಗೆ ಮುಹೂರ್ತ ಇಡ್ತಿದ್ರು, ಈಗ ಯಾರು ಬದಲಾಗ್ತಾರೆ ನೋಡೋಣ – ಬಿವೈವಿಗೆ ಮಧು ಬಂಗಾರಪ್ಪ ತಿರುಗೇಟು

    ನಮ್ಮ ಸೋಲಿಗೆ ಕಾರಣ ಏನೆಂಬುವುದನ್ನು ಪಕ್ಷದ ಹಿರಿಯರು ಹಾಗೂ ಯುವಕರೆಲ್ಲ ಸೇರಿ ಅವಲೋಕನ ಮಾಡುತ್ತೇವೆ. ಈ ಬಗ್ಗೆ ಎಲ್ಲರೂ ಒಟ್ಟು ಸೇರಿ ಚರ್ಚಿಸುತ್ತೇವೆ ಎಂದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಗೆದ್ದ ಸೈನಿಕ, ಸೋತ ಅಭಿಮನ್ಯು

  • ನಿಖಿಲ್‌ ಕುಮಾರಸ್ವಾಮಿ, ಭರತ್‌ ಬೊಮ್ಮಾಯಿ, ಅನ್ನಪೂರ್ಣ ತುಕಾರಾಂಗೆ ಮುನ್ನಡೆ

    ನಿಖಿಲ್‌ ಕುಮಾರಸ್ವಾಮಿ, ಭರತ್‌ ಬೊಮ್ಮಾಯಿ, ಅನ್ನಪೂರ್ಣ ತುಕಾರಾಂಗೆ ಮುನ್ನಡೆ

    ಬೆಂಗಳೂರು: ಶಿಗ್ಗಾಂವಿಯಲ್ಲಿ (Shiggaon) ಬಿಜೆಪಿಯ ಭರತ್‌ ಬೊಮ್ಮಾಯಿ, ಸಂಡೂರಿನಲ್ಲಿ (Sandur) ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಮುನ್ನಡೆ ಸಾಧಿಸಿದ್ದಾರೆ.

    ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 205 ಮತಗಳ ಮುನ್ನಡೆ ಸಾಧಿಸಿದರೆ ಭರತ್‌ ಬೊಮ್ಮಾಯಿಗೆ 1,567 ಮತಗಳ ಮುನ್ನಡೆ ಸಾಧಿಸಿದ್ದಾರೆ.

    ಚನ್ನಪಟ್ಟಣದಲ್ಲಿ (Channapatna) ನಿಖಿಲ್‌ ಕುಮಾರಸ್ವಾಮಿ ಅವರು 1,155ಮತಗಳ ಮುನ್ನಡೆ ಸಾಧಿಸಿದ್ದು, ಸಿಪಿ ಯೋಗೇಶ್ವರ್‌ ಹಿನ್ನಡೆ ಅನುಭವಿಸಿದ್ದಾರೆ.

    ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಮತಎಣಿಕೆ ನಡೆಯುತ್ತಿದ್ದರೆ ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಡೂರುಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ.

  • ಮೈಕೆಲ್ ಡಿ ಕುನ್ಹಾ ನೀವು ನ್ಯಾಯಾಧೀಶರು, ಏಜೆಂಟರಲ್ಲಾ: ಜೋಶಿ ಕಿಡಿ

    ಮೈಕೆಲ್ ಡಿ ಕುನ್ಹಾ ನೀವು ನ್ಯಾಯಾಧೀಶರು, ಏಜೆಂಟರಲ್ಲಾ: ಜೋಶಿ ಕಿಡಿ

    ಹಾವೇರಿ: ಪಿಪಿಇ ಕಿಟ್ (PPE Kit) ಖರೀದಿ ಕುರಿತು ತನಿಖೆ ಮಾಡುತ್ತಿರುವ ನ್ಯಾ.ಮೈಕೆಲ್ ಡಿ ಕುನ್ಹಾ (John Michael D’Cunha) ಅವರೇ ನೀವು ನ್ಯಾಯಮೂರ್ತಿ, ಏಜೆಂಟರಲ್ಲಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.

    ಶಿಗ್ಗಾಂವಿಯಲ್ಲಿ (Shiggaon) ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಯಾವಾಗಲೂ ನಮ್ಮ ವಿರುದ್ಧ ಇದ್ದವರು, ಈಗ ಚುನಾವಣೆ ನಡೆದ ಸಂದರ್ಭದಲ್ಲಿ ಯಾಕೆ ಮಧ್ಯಂತರ ವರದಿ ಕೊಡಬೇಕಿತ್ತು. ಒಂದೂವರೆ ವರ್ಷದಿಂದ ಈ ಸರ್ಕಾರ ಏನು ಮಾಡುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಜನರ ಮನಸನ್ನು ಬೇರೆ ಕಡೆ ತಿರುಗಿಸಲು ನಾಟಕ ಹೂಡಿದ್ದಾರೆ. ಇದರಲ್ಲಿ ಯಾವುದೇ ಧಮ್ಮಿಲ್ಲ, ಸಿದ್ದರಾಮಣ್ಣ ನೀವು ವಾಲ್ಮೀಕಿ ಹಗರಣದಲ್ಲಿ 190 ಕೋಟಿ ನುಂಗಿಲ್ಲ 90 ಕೋಟಿ ನುಂಗಿದ್ದೇನೆ ಅಂತ ಹೇಳಿದ್ದೀರಿ. ಸಗಣಿ ಎಷ್ಟು ತಿಂದರೂ ಸಗಣಿಯೇ, ನಿಮ್ಮ ಮೇಲಿನ ಆರೊಪ ಮರೆಮಾಚಲು ಈ ರೀತಿಯ ಧಮ್ಕಿ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೆಕ್ಕೆಜೋಳ ರಾಶಿ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ – ಕಾರ್ಮಿಕ ಸ್ಥಳದಲ್ಲೇ ಸಾವು

    ನಮ್ಮ ನಾಯಕ ಯಡಿಯೂರಪ್ಪನವರ ಬಗ್ಗೆ ಕುನ್ಹಾ ಕಮಿಷನ್ ರಚನೆ ಮಾಡಿದ್ದಾರೆ. ಕುನ್ಹಾ ಕಮಿಷನ್‌ನವರು ಯಡಿಯೂರಪ್ಪ ಹಾಗೂ ರಾಮುಲು ಅವರಿಗೆ ನೊಟಿಸ್ ನೀಡದೇ ತಾತ್ಕಾಲಿಕ ವರದಿ ನೀಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೀವು ತಪ್ಪಿತಸ್ಥರು ಎಂದು ಹೈಕೋರ್ಟ್ ಹೇಳಿದೆ. ಯಡಿಯೂರಪ್ಪ ಅವರಿಗೆ ಯಾವುದೆ ಕೋರ್ಟ್ ರಾಜಿನಾಮೆ ಕೊಡುವಂತೆ ಹೇಳಿರಲಿಲ್ಲ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿಯುವರು ಒಂದೂ ಮನೆ ಕೊಟ್ಟಿಲ್ಲ ಅಂತ ಕೇಳುತ್ತೀರಿ. ಶಿಗ್ಗಾಂವಿ ಸವಣೂರಿನಲ್ಲಿ ಊರಿಗೂರೆ ಹೊಸ ಮನೆ ಕಟ್ಟಿಸಿದ್ದೇವೆ. ನೀವು ಒಂದಾದರೂ ಮನೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಮ್ಮಪ್ಪನ ಆಣೆ ಸಿದ್ದರಾಮಯ್ಯ ಡಿಸೆಂಬರ್‌ವರೆಗೆ ಮಾತ್ರ ಸಿಎಂ ಆಗಿರ್ತಾರೆ: ಸೋಮಣ್ಣ ಭವಿಷ್ಯ

    ಈ ಸರ್ಕಾರ ಹಾಲಿನ ದರ, ಆಲ್ಕೊಹಾಲಿನ ದರ ಹೆಚ್ಚಳ ಮಾಡಿದ್ದಾರೆ. ವಕ್ಪ್ ನೋಟಿಸ್ ವಾಪಸ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ವಕ್ಫ್ಗೆ ಯಾವುದೇ ಆಸ್ತಿ ಆಗಬೇಕೆಂದರೆ ಅದು ದಾನವಾಗಿರಬೆಕು. ಇಲ್ಲ ಸರ್ಕಾರದಿಂದ ಬಂದಿರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿದೆ. ಆದರೆ ನೀವು ರೈತರ ಜಮಿನಿಗೂ ವಕ್ಫ್ ಎಂದು ನೋಟಿಸ್ ಕೊಡುತ್ತಿದ್ದೀರಿ. ಕೋರ್ಟ್ ಆದೇಶದ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳಿನ ಸರದಾರ – ಮಲ್ಲಿಕಾರ್ಜುನ ಖರ್ಗೆ ತೀವ್ರ ತರಾಟೆ

    ಶಿಗ್ಗಾಂವಿ ಸಂತೆ ಮೈದಾನದಲ್ಲಿ ಮುಸ್ಲಿಂ ಧ್ವಜ ಬಂದಿದೆ. ಇದುವರೆಗೂ ಈ ಧ್ವಜ ಇರಲಿಲ್ಲ. ಈ ಕ್ಷೇತ್ರದಲ್ಲಿ ಹೇಳೋರು ಕೇಳೋರು ಇಲ್ವಾ, ನಾವೂ ಸಂತೆ ಮೈದಾನದಲ್ಲಿ ಭಗವಾಧ್ವಜ ಹಾರಿಸುತ್ತೇವೆ. ಇದೆಲ್ಲ ನಿಲ್ಲಬೇಕೆಂದರೆ ಭರತ್ ಬೊಮ್ಮಾಯಿಯನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದರು. ಇದನ್ನೂ ಓದಿ: ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದಿದ್ದ ಸಚಿವರಿಗೆ ಸಂಕಷ್ಟ – ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ

    ಇದುವರೆಗೂ ಯಾವ ಯಾವ ಭೂಮಿಯನ್ನು ವಕ್ಪ್ ಹೆಸರಿನಲ್ಲಿ ಸೇಲ್ ಡೀಡ್, ದಾನ ಪತ್ರ ನೀಡಿರುವುದನ್ನು ಎಲ್ಲವನ್ನು ತನಿಖೆ ಮಾಡಬೇಕು. ನಿಮ್ಮ ಒಂದಿಂಚೂ ಜಾಗ ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಭಾರತೀಯ ಜನತಾ ಪಾರ್ಟಿ ಅಲ್ಲಾ, ಭಾರತೀಯ ಜೂಟಾ ಪಾರ್ಟಿ: ಸಚಿವ ಖಂಡ್ರೆ

  • ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ

    ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ

    ಹಾವೇರಿ: ಶಿಗ್ಗಾಂವಿ ಉಪಚುನಾವಣೆ (Shiggaon By Election) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇಂದು (ಸೋಮವಾರ) ಬಿಜೆಪಿ (BJP) ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಖುರ್ಸಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ಪ್ರಚಾರ ನಡೆಸಿದರು.

    ನಂತರ ಮಾತನಾಡಿದ ಅವರು ದಿನ ನಿತ್ಯ 10 ರಿಂದ 11 ಹಳ್ಳಿಗಳಿಗೆ ಓಡಾಡಿ ಮತಯಾಚನೆ ಮಾಡುತ್ತಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಓಡಾಡುತ್ತಿದ್ದೇನೆ. ನಮ್ಮ ಎಲ್ಲಾ ಕಾರ್ಯಕರ್ತರು, ಹಿರಿಯರು, ಮತದಾರರ ಮನೆಗಳಿಗೆ ಭೇಟಿ ನೀಡುತ್ತಿದ್ದೇನೆ. ಸಮಯ ಬಹಳ ಕಡಿಮೆ ಇದೆ. ನನ್ನ ಪರ ನಮ್ಮ ತಂದೆ ತಾಯಿ ಕೂಡಾ ಪ್ರಚಾರ ಮಾಡುತ್ತಿದ್ದಾರೆ. ಇಡೀ ಫ್ಯಾಮಿಲಿ ಪ್ರಚಾರ ಮಾಡುತ್ತಿದ್ದಾರೆ. ಶಾಶ್ವತ ಗ್ಯಾರಂಟಿ ಅಂದರೆ ಈ ಭಾಗಕ್ಕೆ ನೀರು ಕೊಟ್ಟಿದ್ದೇವೆ. 5 ಲಕ್ಷ ರೂ. ಮೌಲ್ಯದ 15,000 ಮನೆಗಳನ್ನು ಜನರಿಗೆ ನೀಡಿದ್ದೇವೆ. 5,000 ಉದ್ಯೋಗಾವಕಾಶ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ. ನೀರು, ಮನೆ, ಉದ್ಯೋಗ ಇವು ನಮ್ಮ ಶಾಶ್ವತ ಗ್ಯಾರಂಟಿ. ಈ ಗ್ಯಾರಂಟಿಗಳನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

    ಕಾರಡಗಿ ಸೇರಿದಂತೆ ಹಲವು ಕಡೆ ನಾನು ಮತಯಾಚನೆಗೆ ತೆರಳಿದ್ದೆ. ತಂದೆಯವರು ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಎಲ್ಲಾ ಸಮುದಾಯಗಳ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಪ್ರಧಾನಿ ಮೋದಿಯವರ (Narendra Modi)  ಜಲಜೀವನ ಮಿಷನ್ ಮೂಲಕ ಮನೆ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಒಂದು ಕೊಡ ನೀರಿಗೆ ತಾಯಂದಿರು 4-5 ಕಿ.ಮೀ ನಡೆಯುತ್ತಿದ್ದರು. ಆದರೆ ಈಗ ನಲ್ಲಿ ತಿರುಗಿಸಿದರೆ ನೀರು ಬರುತ್ತದೆ. ಕ್ಷೇತ್ರದಲ್ಲಿ ಎಕ್ಸ್‌ಪೋರ್ಟ್, ಶಾಹಿ ಕಂಪನಿಗಳು ಗಾರ್ಮೆಂಟ್ಸ್ ಪ್ರಾರಂಭ ಮಾಡಿವೆ. ಟೆಕ್ಸ್‌ಟೈಲ್ ಪಾರ್ಕ್ ಕೂಡಾ ಶುರುವಾಗಲಿದೆ. ನಾವು ಶಾಶ್ವತ ಪರಿಹಾರ ಕೊಟ್ಟಿದ್ದೇವೆ. ಇದೆಲ್ಲಾ ಹೆಣ್ಣು ಮಕ್ಕಳಿಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪರಿಣಾಮ ಏನೂ ಆಗುವುದಿಲ್ಲ ಎಂದರು. ಇದನ್ನೂ ಓದಿ: ಇದು ವಿಜಯೇಂದ್ರನ ಟೀಂ – ಬಿಜೆಪಿ ವಕ್ಫ್ ತಂಡಕ್ಕೆ ಯತ್ನಾಳ್ ಬಹಿಷ್ಕಾರ

    ನನ್ನ ನಾಮಿನೇಷನ್‌ಗೆ ಯಡಿಯೂರಪ್ಪ (B S Yediyurappa), ಪ್ರಹ್ಲಾದ್ ಜೋಶಿಯವರು (Pralhad Joshi), ಅರವಿಂದ್ ಬೆಲ್ಲದ್, ನಿರಾಣಿಯವರು ಛಲವಾದಿ ನಾರಾಯಣಸ್ವಾಮಿ ಬಂದಿದ್ದರು. ಎಲ್ಲಾ ನಾಯಕರ ಆಶೀರ್ವಾದ ನನ್ನ ಮೇಲಿದೆ. ಸರ್ಕಾರ ಇದ್ದಾಗ ಚುನಾವಣೆ ಮಾಡಲು ಸಚಿವರೆಲ್ಲಾ ಬಂದೇ ಬರುತ್ತಾರೆ. ನ.23 ರಂದು ಡಬ್ಬಿ ತೆರೆದು ನೋಡಿದಾಗ ಅವರಿಗೆ ಗೊತ್ತಾಗುತ್ತದೆ. ಜನ ಆಶೀರ್ವಾದ ಮಾಡುತ್ತಾರೆ. ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಳಿದ್ದು 18 ಕ್ಷೇತ್ರ, ಸಿಕ್ಕಿದ್ದು 10 – ಮುಂಬೈ ಕಾಂಗ್ರೆಸ್‌ನಲ್ಲಿ ಬಿರುಕು

  • ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ

    ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ

    ಹಾವೇರಿ: ಶಿಗ್ಗಾಂವಿ (Shiggaon) ಕ್ಷೇತ್ರದ ಉಪಚುನಾವಣೆ (By Election) ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಬಿಜೆಪಿ (BJP) ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ. ಭಾನುವಾರ ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಮನೆಮನೆಗೆ ತೆರಳಿ ಭರತ್ ಬೊಮ್ಮಾಯಿ ಮತಯಾಚನೆ ಮಾಡಿದರು. ಅಲ್ಲದೆ ತೆಗ್ಗಿಹಳ್ಳಿ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

    ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕೊಟ್ಟಿರೋದು ಟೆಂಪರರಿ ಗ್ಯಾರಂಟಿ. ನಾವು ಪರ್ಮನೆಂಟ್ ಗ್ಯಾರಂಟಿ ನೀಡಿದ್ದೇವೆ. ನಮ್ಮ ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ. ಇದು ಪರ್ಮನೆಂಟ್ ಗ್ಯಾರಂಟಿ. ಅದನ್ನ ಯಾರೂ ಕಿತ್ತುಕೊಳ್ಳೋಕೆ ಆಗಲ್ಲ. ಸರ್ಕಾರ ಅಧಿಕಾರಕ್ಕೆ ಬರಲು ಟೆಂಪರರಿ ಗ್ಯಾರಂಟಿ ನೀಡಿದೆ. ರೈತರಿಗೆ ನೀರಾವರಿ, ಕುಡಿಯಲು ನೀರು ಕೊಟ್ಟಿದ್ದೇವೆ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡೋದು ಎಂದರು. ಇದನ್ನೂ ಓದಿ: ಶಕ್ತಿ ಯೋಜನೆಯಲ್ಲೂ ದೋಖಾ? – ಮಹಿಳೆಯರ ಫ್ರೀ ಬಸ್ ಪ್ರಯಾಣ ಟಿಕೆಟ್ ಪುರುಷರಿಗೆ ವಿತರಣೆ

    ಹಿಂದೆ 2018, 2023ರಲ್ಲಿ ತಂದೆಯವರ ಪರ ಪ್ರಚಾರ ಮಾಡಿದ್ದೆ. ಎಲ್ಲಾ ಊರು, ಪಟ್ಟಣ ಓಡಾಡಿದ್ದೆ. ಈಗ ನನಗೆ ಆಶೀರ್ವಾದ ಮಾಡಿ ಎಂದು ಜನರನ್ನು ಕೇಳುತ್ತಿದ್ದೇನೆ. ತಂದೆಯವರ ಮೂರ್ನಾಲ್ಕು ಕನಸಿದೆ, ಅದನ್ನು ನನಸು ಮಾಡುವೆ. ಯುವಕನಾಗಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವೆ. ಇಲ್ಲಿ ಇನ್ನಷ್ಟು ಕೈಗಾರಿಕೆ ತರುವ ಉದ್ದೇಶ ಇದೆ. ಕಾರ್ಯಕರ್ತರು, ಎಲ್ಲಾ ಸಮುದಾಯದ ಜನರು ಉತ್ತಮವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ತಂದೆಯ ಕೆಲಸಗಳ ಬಗ್ಗೆ ಜನ ಹೇಳೋದು ಕೇಳಿ ಹೆಮ್ಮೆ ಆಗಿದೆ. ತಂದೆಯ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮದ್ಯ ಸೇವನೆಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕೊಲೆಗೈದ ಪುತ್ರ

  • ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

    ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

    ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್‌ ಬೊಮ್ಮಾಯಿ (Bharath Bommai) ಗುರುವಾರ ನಾಮಪತ್ರ ಸಲ್ಲಿಸಿದ್ದು, 16.17 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    ಶಿಗ್ಗಾಂವಿ (Shiggaon) ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಘೋಷಿಸಿಕೊಂಡಿದ್ದರು. ಭರತ್‌ 2.03 ಲಕ್ಷ ನಗದು ಹಣ ಹೊಂದಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 9 ಕೆಜಿಗೂ ಅಧಿಕ ಚಿನ್ನ ಜಪ್ತಿ – ಇಬ್ಬರು ಪ್ರಯಾಣಿಕರು ಅರೆಸ್ಟ್‌

    ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 1.19 ಕೋಟಿ ರೂ. ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ 1.74 ಲಕ್ಷ, ಖಾಸಗಿ ಕಂಪನಿಗಳಲ್ಲಿ 50,000, ಪಾಲುದಾರಿಕೆಯಲ್ಲಿ 1.23 ಕೋಟಿ ರೂ. ಬಂಡವಾಳ ತೊಡಗಿಸಿದ್ದಾರೆ. ಗೋಲ್ಡ್‌ ಚಿಟ್‌ ಫಂಡ್‌ನಲ್ಲಿ 70 ಸಾವಿರ, ಮ್ಯೂಚುವಲ್‌ ಫಂಡ್‌ನಲ್ಲಿ 10.20 ಲಕ್ಷ ಹೂಡಿಕೆ ಮಾಡಿದ್ದಾರೆ. 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಇವರ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು 3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

    ಇನ್ನು ಬೆಂಗಳೂರಿನ ಆರ್‌.ಟಿ ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 5.50 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದನ್ನೂ ಓದಿ: ಬೃಹತ್ ರೋಡ್ ಶೋ ನಡೆಸಿ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ನಾಮಪತ್ರ ಸಲ್ಲಿಕೆ

    ಪತ್ನಿ ಇಬ್ಬನಿ ಬಳಿ 1.43 ಲಕ್ಷ ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 56.32 ಲಕ್ಷ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 33.75 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ 31.12 ಲಕ್ಷ ತೊಡಗಿಸಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್‌ ಕಾರು ಇದ್ದು, 8.16 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್‌, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪುತ್ರನ ಬಳಿ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟು ಭರತ್‌ ಬೊಮ್ಮಾಯಿ ಅವರು 16.17 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

  • ಶಿಗ್ಗಾಂವಿ ಉಪಚುನಾವಣೆ- ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

    ಶಿಗ್ಗಾಂವಿ ಉಪಚುನಾವಣೆ- ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

    ಹಾವೇರಿ: ಶಿಗ್ಗಾಂವಿ ಉಪಚುನಾವಣೆ (Siggoan By Election) ಹಿನ್ನೆಲೆ ಬಿಜೆಪಿ (BJP) ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಪತ್ನಿ ಇಬ್ಬನಿ ಜೊತೆ ಹಾಗೂ ಕಾರ್ಯಕರ್ತರ ಸಮೇತ ಆಗಮಿಸಿ ನಾಮಪತ್ರ ಸಲ್ಲಿಸಿದರು. ಶಿಗ್ಗಾಂವಿ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಚುನಾವಣಾ ಅಧಿಕಾರಿ ಮಹಮ್ಮದ್ ಖಿಝರ್‌ಗೆ ನಾಮಪತ್ರವನ್ನ ಸಲ್ಲಿಸಿದರು.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಯಿ ಹೇಳಿದಂತೆ ಒಳ್ಳೆಯ ಮೂಹರ್ತ ನೋಡಿ ನಾಮಪತ್ರ ಸಲ್ಲಿಸಿದ್ದೇವೆ. ತಂದೆ-ತಾಯಿ ಗುರು ಹಿರಿಯ ಆರ್ಶೀವಾದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಳೆ ಬಹಿರಂಗವಾಗಿ, ಮೆರವಣಿಗೆ ಮೂಲಕ ಆಗಮಿಸಿ ಪಕ್ಷದ ವರಿಷ್ಠರು, ಹಾಗೂ ಯಡಿಯೂರಪ್ಪ ಜೊತೆಗೆ ಆಗಮಿಸಿ ನಾಮಪತ್ರ ಸಲ್ಲಿಸುತ್ತೇವೆ. ಈಗಾಗಲೇ ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ದೇವಸ್ಥಾನಕ್ಕೂ ಭೇಟಿ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ

    ಗುರು-ಹಿರಿಯರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದೇನೆ. ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸಿಕೊಂಡು ಹೋಗುತ್ತೇನೆ. 2023 ರಲ್ಲಿ ನಮ್ಮ ತಂದೆಯ ಪರವಾಗಿ ಮತಯಾಚನೆ ಮಾಡಿದ್ದೆ. ಈಗ ಪಕ್ಷ ನನಗೆ ಟಿಕೆಟ್ ನೀಡಿದೆ. ನಾನೇ ಮತಯಾಚನೆ ಮಾಡುತ್ತಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಣಾಳಿಕೆ ಸಹ ಬಿಡುಗಡೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು

    ಅಲ್ಲದೇ ಭರತ್ ಬೊಮ್ಮಾಯಿ ಲಕ್ಕಿ ವಾಹನ ಸ್ಕಾರ್ಪಿಯೋ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದು ವಿಶೇಷವಾಗಿದ್ದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಹ ಇದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದನ್ನೂ ಓದಿ: ಮೆಡಿಕಲ್‌ ರಿರ್ಪೋಟ್‌ನಲ್ಲಿ ದರ್ಶನ್‌ಗೆ L5 S1ನಲ್ಲಿ ಸಮಸ್ಯೆ ಇರುವುದು ದೃಢ- ನಾಳೆ ಜೈಲಿಗೆ ಪತ್ನಿ ಭೇಟಿ

  • ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ ಸಿಪಿವೈ – ಬೆಲ್ಲದ್ ಬ್ಯಾಟಿಂಗ್

    ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ ಸಿಪಿವೈ – ಬೆಲ್ಲದ್ ಬ್ಯಾಟಿಂಗ್

    – ಸಿಪಿವೈಗೆ ಚನ್ನಪಟ್ಟಣದಲ್ಲಿ ಗೆಲುವಿನ ವಾತಾವರಣವಿದೆ

    ಹುಬ್ಬಳ್ಳಿ: ಚುನಾವಣೆ ಸ್ಪರ್ಧೆ ಮುಖ್ಯವಲ್ಲ. ಗೆಲುವು ಮುಖ್ಯ. ಸಿ.ಪಿ ಯೋಗೇಶ್ವರ್ (C P Yogeshwar) ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ. ಚನ್ನಪಟ್ಟಣದಲ್ಲಿ ಅವರಿಗೆ ಗೆಲುವಿನ ವಾತಾವರಣವಿದೆ ಅವರೇ ಎನ್‌ಡಿಎ ಅಭ್ಯರ್ಥಿಯಾಗಬೇಕು ಎನ್ನುವ ಮೂಲಕ ಸಿಪಿವೈ ಪರ ವಿಧಾನಸಭಾ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯೋಗೇಶ್ವರ್ ಮೇಲೆ ಜನರ ಪ್ರೀತಿ, ಅನುಕಂಪವಿದೆ. ಕುಮಾರಸ್ವಾಮಿ ಅವರು ಅತ್ಯಂತ ಪ್ರಬುದ್ಧ ರಾಜಕಾರಣಿ. ಅವರು ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಬಳಿಕ ಅಲ್ಲಿ ಎನ್‌ಡಿಎಯಿಂದ ಹೊಸ ಅಭ್ಯರ್ಥಿ ಆಗಬೇಕು. ಈ ಹಿಂದೆ ಕುಮಾರಸ್ವಾಮಿ ಮತ್ತು ಡಾ. ಮಂಜುನಾಥ್ ಚುನಾವಣೆಯಲ್ಲಿ ಯೋಗೇಶ್ವರ್ ಒಳ್ಳೆಯ ಕಾರ್ಯ ಮಾಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಪಿವೈಗೆ ಟಿಕೇಟ್ ನೀಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ಸುದೀಪ್ ಸರ್‌ನ ನೋಡೋಕೆ ಆಗುತ್ತಿಲ್ಲ: ಲಹರಿ ವೇಲು

    ಮುಡಾ ವಿಚಾರವಾಗಿ ಸಿಎಂ ಕುಣಿಕೆ ಗಟ್ಟಿಯಾಗುತ್ತಿದೆ ಇನ್ನೂ ಕೆಲವೇ ದಿನದಲ್ಲಿ ಸಿಎಂ ರಾಜಿನಾಮೆ ನೀಡುತ್ತಾರೆ. ಜಿ ಪರಮೇಶ್ವರ್ (G Parameshwar) ಅವರು ಸಿಎಂ ಅವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಪರವಾಗಿ ಮಾತನಾಡಿ ಅವರ ಅನುಗ್ರಹದಿಂದ ಸಿಎಂ ಆಗುವ ಆಸೆಯಲ್ಲಿದ್ದಾರೆ. ಈಗಾಗಲೇ ಪರಮೇಶ್ವರ್ ಸಿಎಂ ಸೀಟ್‌ಗೆ ಟೆವಲ್ ಹಾಕಿದ್ದಾರೆ. ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂಬಿ ಪಾಟೀಲ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಜೆಡಿಎಸ್‌ ಕ್ಷೇತ್ರ.. ಅವರಿಗೆ ಯಾರು ಬೇಕೋ ಹೆಸರು ಘೋಷಣೆ ಮಾಡ್ತಾರೆ: ಬಿಎಸ್‌ವೈ

    ಭರತ್ ಬೊಮ್ಮಾಯಿ (Bharath Bommai) ಅವರಿಗೆ ಟಿಕೇಟ್ ನೀಡಿದ್ದು ಕುಟುಂಬ ರಾಜಕೀಯ ಅಲ್ಲಾ. ಸ್ಥಳೀಯ ಕಾರ್ಯಕರ್ತರೇ ಭರತ್ ಅವರನ್ನಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ರಾಜಾಭವನ ದಾಸ ಶಿಗ್ಗಾಂವಿಯಲ್ಲಿ ಪ್ರವಾಸ ಮಾಡಿ ಎಲ್ಲರ ಅಭಿಪ್ರಾಯ ಪಡೆದೇ ಭರತ್ ಹೆಸರು ಅಂತಿಮಗೊಳಿಸಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಅವಶ್ಯಕತೆ ಇದೆ. ಹೀಗಾಗಿ ಜನರ ಅಭಿಪ್ರಾಯದಿಂದ ಅಭ್ಯರ್ಥಿ ಆಯ್ಕೆ ಅಂತಿಮವಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ತಮ್ಮ ಕುಟುಂಬದಲ್ಲೆ ನಾಮಿನೇಟ್ ಮಾಡುತ್ತಾರೆ. ಅದು ಕುಟುಂಬ ರಾಜಕೀಯ. ನಮ್ಮ ಪಕ್ಷದಲ್ಲಿ ಜನರ ಅಭಿಪ್ರಾಯ ಪಡೆಯತ್ತಾರೆ. ನಮ್ಮದು ಪ್ರಜಾಪ್ರಭುತ್ವ ಪಕ್ಷ ಎಂದು ತಿಳಿಸಿದರು. ಇದನ್ನೂ ಓದಿ: ಮಂಗಳೂರಲ್ಲಿ ರೈಲು ಹಳಿ ತಪ್ಪಿಸಲು ಸಂಚು? – ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ದುಷ್ಕರ್ಮಿಗಳು ಪರಾರಿ

    ಹುಬ್ಬಳ್ಳಿ ಗಲಭೆ ಕೇಸ್‌ಗಳಲ್ಲಿ ವಿವಿಧ ನ್ಯಾಯಾಲಯದಲ್ಲಿ 17 ಬಾರಿ ಜಾಮೀನು ಅರ್ಜಿ ವಜಾ ಆಗಿತ್ತು. ಸಾಕಷ್ಟು ಬಾರಿ ಸುಪ್ರೀಂ ಕೋರ್ಟ್ನಲ್ಲಿ ಸಹ ಜಾಮೀನು ಅರ್ಜಿ ವಜಾ ಆಗಿತ್ತು. ಗಲಭೆಯಲ್ಲಿ ರಾಷ್ಟ್ರೀಯ ಭದ್ರತಾ ವಿಚಾರ ಸಹ ಕೇಳಿ ಬಂದಿತ್ತು. ಹೀಗಾಗಿ ಇದರಲ್ಲಿ ಎನ್‌ಐಎ ಪ್ರವೇಶ ಆಗಿತ್ತು. ಇಂತಹ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದು ಗಂಭೀರ ತಪ್ಪು ಮಾಡುತ್ತಿದೆ ಎಂದು ಹರಿಯಾಯ್ದರು. ಇದನ್ನೂ ಓದಿ: ಕಲಬುರಗಿ ಜೈಲಿನೊಳಗೆ ಗುಟ್ಕಾ, ಬೀಡಿ, ಪಾನ್ ಮಸಾಲಾ ಸಾಗಣೆ ಯತ್ನ

  • ಶಿಗ್ಗಾವಿ ಉಪಚುನಾವಣೆ| ಭರತ್‌ ಬೊಮ್ಮಾಯಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಯಾಕೆ?

    ಶಿಗ್ಗಾವಿ ಉಪಚುನಾವಣೆ| ಭರತ್‌ ಬೊಮ್ಮಾಯಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಯಾಕೆ?

    – ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಭರತ್‌ ಪರ ಒಲವು
    – ಅಮೆರಿಕದಲ್ಲಿ ಎಂಜಿನಿಯರ್‌, ಸಿಂಗಾಪುರದಲ್ಲಿ ಎಂಬಿಎ ಪದವಿ

    ಬೆಂಗಳೂರು/ಹಾವೇರಿ: ಶಿಗ್ಗಾವಿ ಕ್ಷೇತ್ರದಲ್ಲಿ (Shiggaon Bypolls) ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಪುತ್ರ ಭರತ್‌ ಬೊಮ್ಮಾಯಿ (Bharat Bommai) ಅವರಿಗೆ ಬಿಜೆಪಿ ನಾಯಕರು ಟಿಕೆಟ್‌ ನೀಡಿದೆ.

    ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಹಾಗೂ ಸರ್ವೆ ವರದಿಗಳಲ್ಲಿ ಭರತ್ ಪರ ಒಲವು ವ್ಯಕ್ತವಾಗಿತ್ತು. ರಾಜ್ಯ ನಾಯಕರಿಂದಲೂ, ಕೋರ್ ಕಮಿಟಿ ಪಟ್ಟಿಯಲ್ಲೂ ಭರತ್ ಮೊದಲ ಆದ್ಯತೆಯಾಗಿತ್ತು.

    ಕಾಂಗ್ರೆಸ್ ಸರ್ಕಾರ ಇರುವ ಕಾರಣ, ಬೇರೆಯವರಿಗೆ ಟಿಕೆಟ್ ನೀಡಿದರೆ ಸೋಲಿನ ಆತಂಕ ಇತ್ತು.ಈಗ ಪುತ್ರನಿಗೆ ಟಿಕೆಟ್‌ ನೀಡುವ ಮೂಲಕ ಬಸವರಾಜ ಬೊಮ್ಮಾಯಿಗೆ ಕ್ಷೇತ್ರ ಉಳಿಸಿಕೊಳ್ಳಲು ಹೈಕಮಾಂಡ್‌ ಟಾಸ್ಕ್ ನೀಡಿದೆ. ಇದನ್ನೂ ಓದಿ: ಶಿಗ್ಗಾವಿಯಲ್ಲಿ ಭರತ್‌ ಬೊಮ್ಮಾಯಿ, ಸಂಡೂರಿನಲ್ಲಿ ಹನುಮಂತುಗೆ ಬಿಜೆಪಿ ಟಿಕೆಟ್‌

    ಸತತವಾಗಿ 4 ಬಾರಿ ಶಿಗ್ಗಾವಿ ಕ್ಷೇತ್ರದಿಂದ ಗೆದ್ದ ಕಾರಣ ಬೊಮ್ಮಾಯಿ ಅವರು ಈ ಕ್ಷೇತ್ರದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿದ್ದಾರೆ. ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರೂ ಭರತ್ ಬೊಮ್ಮಾಯಿ ಸ್ಪರ್ಧೆಗೆ ಸಂಪೂರ್ಣ ಸಾಥ್ ನೀಡುವ ಭರವಸೆ ನೀಡಿದ್ದರು.

    ಮಾಜಿ ಸಚಿವ ಮುರುಗೇಶ್ ನಿರಾಣಿ ಶಿಗ್ಗಾವಿ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರದೆ ಹಿಂದೆ ಸರಿದಿದ್ದರಿಂದ ಭರತ್ ಟಿಕೆಟ್ ಹಾದಿ ಸುಲಭ ಆಯಿತು. ಲಿಂಗಾಯತರ ಪ್ರಾಬಲ್ಯ ಇರುವ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೇ ಇರಲಿಲ್ಲ. ಭರತ್ ಬೊಮ್ಮಾಯಿ 2023 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಂದೆ ಪರವಾಗಿ ಶಿಗ್ಗಾವಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಾಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವಂತೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿತ್ತು.  ಇದನ್ನೂ ಓದಿ: ಸಿಎಂ‌ ಬೊಮ್ಮಾಯಿ ಪುತ್ರನಿಗೆ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ

     

    2023ರ ವಿಧಾನಸಭಾ ಚುನಾವಣೆಯಲ್ಲಿ ತಂದೆ ಬಸವರಾಜ ಬೊಮ್ಮಾಯಿ ಪರ ಶಿಗ್ಗಾವಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದ ಇವರು 2024 ಲೋಕಸಭಾ ಚುನಾವಣೆ ತಂದೆಯ ಪರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಓಡಾಡಿದ್ದರು.

    ಮಾರ್ಚ್‌ 31, 1989 ರಂದು ಜನಿಸಿದ ಭರತ್‌ 2011ರಲ್ಲಿ ಅಮೆರಿಕದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಸಿಂಗಪುರದ ಮ್ಯಾನೇಜ್ಮೆಂಟ್ ಯುನಿವರ್ಸಿಟಿಯಿಂದ 2014 ರಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಎಂಬಿಎ ಪದವಿ ಬಳಿಕ ಕೆಲ ದಿನಗಳ ಕಾಲ ವಿದೇಶದಲ್ಲೇ ಇದ್ದು ನಂತರ ಭಾರತಕ್ಕೆ ಬಂದು ಭರತ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.