Tag: ಭಯೋತ್ಪಾಧನೆ

  • ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪುತ್ರ ಭಯೋತ್ಪಾದಕ – ಸರ್ಕಾರ ಘೋಷಣೆ

    ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪುತ್ರ ಭಯೋತ್ಪಾದಕ – ಸರ್ಕಾರ ಘೋಷಣೆ

    ನವದೆಹಲಿ: 2008ರಲ್ಲಿ ನಡೆದ ಮುಂಬೈ ಭಯೋತ್ಪಾಧಕರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಎ-ತೈಬಾ(ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಸಯೀದ್‌ನನ್ನು ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ.

    ಹಫೀಸ್ ತಲ್ಹಾ ಸಯೀದ್ ಭಾರತದಲ್ಲಿ ಲಷ್ಕರ್-ಎ-ತೈಬಾ ಹಾಗೂ ಭಯೋತ್ಪಾದನೆಗೆ ನೇಮಕಾತಿ, ನಿಧಿ ಸಂಗ್ರಹ ಹಾಗೂ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.

    ತಲ್ಹಾ ಸಯೀದ್ ಪಾಕಿಸ್ತಾನದಾದ್ಯಂತ ವಿವಿಧ ಎಲ್‌ಇಟಿ ಕೇಂದ್ರಗಳಿಗೆ ಆಗಾಗ ಭೇಟಿ ನೀಡುತ್ತಿದ್ದು, ಭಾರತ, ಇಸ್ರೇಲ್, ಅಮೇರಿಕಾ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಹಿತಾಸಕ್ತಿಗಳ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಎಂದು ಹೇಳಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ

    ಹಫೀಜ್ ಸಯೀದ್ ನೇತೃತ್ವದಲ್ಲಿ 2008ರ ನವೆಂಬರ್ 26 ರಂದು ನಡೆದ ಮುಂಬೈನ ಭೀಕರ ಭಯೋತ್ಪಾದನಾ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಕೆಲವು ವರ್ಷಗಳ ಹಿಂದೆಯೇ ಆತನನ್ನು ಭಯೋತ್ಪಾದಕ ಎಂದು ಸರ್ಕಾರ ಘೋಷಿಸಿದ್ದು, ಈ ಆರೋಪದ ಮೇಲೆ ಆತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಭಾರತ ಸತತವಾಗಿ ಹಫೀಜ್ ಸಯೀದ್‌ನನ್ನು ಕಸ್ಟಡಿಗೆ ಕೋರುತ್ತಿದೆ. ಆದರೆ ಪಾಕಿಸ್ತಾನ ಅದನ್ನು ನಿರಾಕರಿಸಿದೆ.

  • ಉಗ್ರರ ದಾಳಿ ಸಂದೇಶ: ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ

    ಉಗ್ರರ ದಾಳಿ ಸಂದೇಶ: ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ

    ನವದೆಹಲಿ: ಉಗ್ರರು ದಾಳಿಯ ಸಂದೇಶ ಬಂದ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ.

    ಭಯೋತ್ಪಾದಕ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ (ಭಾರತೀಯ ಸೆಲ್) ಕಳುಹಿಸಿರುವ ಅನಾಮಧೇಯ ಇಮೇಲ್ ಕುರಿತು ಉತ್ತರ ಪ್ರದೇಶ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಎಚ್ಚರಿಕೆ ನೀಡಲಾಗಿದೆ.

    ತೆಹ್ರಿಕ್-ಎ-ತಾಲಿಬಾನ್‌ನಿಂದ ಅನಾಮಧೇಯ ಇಮೇಲ್‌ಗಳು ಬಂದಿರುವ ಬಗ್ಗೆ ಕೆಲವರು ಉತ್ತರ ಪ್ರದೇಶ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಲೇ ಯುಪಿ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನಿಡಿ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಕಂದರಾಬಾದ್‍ನಲ್ಲಿ ಟಿಂಬರ್ ಗೋಡಾನ್‍ಗೆ ಬೆಂಕಿ- 11 ಮಂದಿ ಸಜೀವ ದಹನ

    ಮಾರುಕಟ್ಟೆಯನ್ನು ಮುಚ್ಚಲು ಹಾಗೂ ಎಚ್ಚರವಾಗಿರಲು ಪೊಲೀಸರಿಗೆ ತಾಲಿಬಾನ್ ಕಡೆಯಿಂದ ಬೆದರಿಕೆ ಸಂದೇಶ ಬಂದಿರುವುದಾಗಿ ಸರೋಜಿನಿ ನಗರ ಮಿನಿ ಮಾರುಕಟ್ಟೆ ವರ್ತಕ ಸಂಘದ ಅಧ್ಯಕ್ಷ ಅಶೋಕ್ ರಾಂಧವ್ ತಿಳಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಮಾರುಕಟ್ಟೆಯನ್ನು ಮುಚ್ಚುವ ಕುರಿತು ಯಾವುದೇ ಅಧಿಕೃತ ಆದೇಶ ನೀಡಿಲ್ಲ. ಇದನ್ನೂ ಓದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

    ಈ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಸರೋಜಿನಿ ನಗರ ಮಾರುಕಟ್ಟೆಯನ್ನು ಮುಚ್ಚಿಸುವ ಅಗತ್ಯವಿಲ್ಲ. ಇಮೇಲ್ ಕಳುಹಿಸಿರುವ ವ್ಯಕ್ತಿಯನ್ನು ಹುಡುಕಲಾಗುತ್ತಿದೆ. ಹಾಗೂ ಇಮೇಲ್ ಬಗೆಗಿನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

  • ನೋಟ್ ಬ್ಯಾನ್ ನಂತರ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಕಡಿಮೆಯಾಗಿದೆ: ಅರುಣ್ ಜೇಟ್ಲಿ

    ನೋಟ್ ಬ್ಯಾನ್ ನಂತರ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಕಡಿಮೆಯಾಗಿದೆ: ಅರುಣ್ ಜೇಟ್ಲಿ

    ಕ್ಯಾಲಿಫೋರ್ನಿಯಾ: ನೋಟ್ ಬ್ಯಾನ್ ಆದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಶನಿವಾರ ಬರ್ಕೇಲಿಯಾದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ಸ್ವಚ್ಛ ಭಾರತ್, ಜಿಎಸ್‍ಟಿ ಮತ್ತು ನೋಟ್‍ಬ್ಯಾನ್ ಅಂತಹ ಕ್ರಮಗಳಿಂದ ದೇಶದಲ್ಲಿ ಯಾವುದೇ ಪರಿವರ್ತನೆ ಆಗಿಲ್ಲ ಎನ್ನುವ ಮಾತನ್ನು ನಾನು ನಿರಾಕರಿಸುತ್ತೇನೆ ಎಂದರು.

    ಭಯೋತ್ಪಾದಕರು ನೀಡುತ್ತಿದ್ದ ಹಣಕ್ಕಾಗಿ ಬಂಡಾಯಕಾರರು ಕಲ್ಲು ಎಸೆದಾಡುವಂತಹ ಚಟುವಟಿಕೆಗಳು ಕಳೆದ 7-8 ತಿಂಗಳಿನಿಂದ ಬಹಳಷ್ಟು ಕಡಿಮೆಯಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.

    ನೋಟ್ ಬ್ಯಾನ್ ಆದ ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಛತ್ತೀಸ್‍ಗಢ ದಂತಹ ರಾಜ್ಯಗಳಲ್ಲಿ ಬಂಡಾಯಗಾರರು ಮತ್ತು ಭಯೋತ್ಪಾದಕ ಚಟುವಟಿಕೆಗಳು ಕಳೆದ 7-8 ತಿಂಗಳಿಂದ ಏಕೆ ಹೆಚ್ಚು ಸಂಭವಿಸುತಿಲ್ಲ ಎಂದು ಇದೇ ವೇಳೆ ಸಂದರ್ಭದಲ್ಲಿ ಪ್ರಶ್ನಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8 ರಂದು 1000 ಮತ್ತು 500 ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದರು. ದೇಶದಲ್ಲಿ ಕಪ್ಪು ಹಣ, ನಕಲಿ ನೋಟು, ಭಯೋತ್ಪಾದನೆ ಹಣ ಹಾಗೂ ಭ್ರಷ್ಟಾಚಾರ ಇವುಗಳೆಲ್ಲವನ್ನು ನಿಯಂತ್ರಿಸುವ ಸಲುವಾಗಿ ನೋಟ್ ಬ್ಯಾನ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾಷಣದಲ್ಲಿ ತಿಳಿಸಿದ್ದರು.