Tag: ಭಯೋತ್ಪಾದಕರ ದಾಳಿ

  • ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    – ಉಗ್ರರ ವಿರುದ್ಧ ಹೋರಾಟದಲ್ಲಿ ಕೇಂದ್ರದ ಪರ ಇರುತ್ತೇವೆ; ಎಐಸಿಸಿ ಅಧ್ಯಕ್ಷ

    ನವದೆಹಲಿ: ಇದು ರಾಜಕೀಯ ಮಾಡುವ ಸಮಯವಲ್ಲ. ಮೃತಪಟ್ಟ ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಹೇಳಿದ್ದಾರೆ.

    ಪಹಲ್ಗಾಮ್‌ನಲ್ಲಿ (Pahalgam) ನಡೆದ ದಾಳಿಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ್ದಾರೆ. ಉಗ್ರರು ಪ್ರವಾಸಿಗರನ್ನು ಹತ್ಯೆ ಮಾಡಿರುವ ದುರದೃಷ್ಟಕರ ಘಟನೆ ನಡೆದಿದೆ. ಉಗ್ರರು ಅಮಾಯಕರನ್ನ ಕೊಂದಿದ್ದಾರೆ. ಇದು ತುಂಬಾ ದುಃಖಕರ ಸಂಗತಿ, ಕಾಂಗ್ರೆಸ್ (Congress) ಪಕ್ಷ ಉಗ್ರರ ಈ ಕೃತ್ಯವನ್ನ ಉಗ್ರವಾಗಿ ಖಂಡಿಸುತ್ತದೆ. ಈ ಘಟನೆ ದೇಶದ ಒಗ್ಗಟ್ಟು, ಐಕ್ಯತೆ ಮೇಲಿನ ದಾಳಿ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    ಬುಧವಾರ ರಾತ್ರಿ ನಾನು ಅಮಿತ್ ಶಾ (Amit Shah) ಜೊತೆ ಹಾಗೂ ಒಮರ್ ಅಬ್ದುಲ್ಲಾರೊಂದಿಗೆ ಮಾತನಾಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ನಾಯಕರ ಜೊತೆಯೂ ಮಾತಾಡಿದ್ದೇನೆ. ಯಾರು ಈ ಕೃತ್ಯದ ಹಿಂದಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅಮಿತ್ ಶಾ ನನಗೆ ಹೇಳಿದ್ದಾರೆ. ಇದು ರಾಜಕೀಯ ಮಾಡುವ ಸಮಯ ಅಲ್ಲ. ಮೃತರಾದ ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ. ಹಾಗಾಗಿ ಈ ವಿಚಾರದಲ್ಲಿ ಒಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

    ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಮೃತರಾಗಿದ್ದಾರೆ. ಅವರ ಪತ್ನಿಯರಾದ ಪಲ್ಲವಿ, ಸುಜಾತ ಅವರೊಂದಿಗೆ ಮಾತನಾಡಿದ್ದೇನೆ. ಘಟನಾ ಸ್ಥಳಕ್ಕೆ ಸಂತೋಷ್ ಲಾಡ್ ಕೂಡ ಹೋಗಿದ್ದಾರೆ. ಅವರ ಜೊತೆಯೂ ಮಾತನಾಡಿದ್ದೇನೆ. ಕರ್ನಾಟಕದಿಂದ 200 ಟೂರಿಸ್ಟ್ ಹೋಗಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.

    ಘಟನೆಯ ಬಗ್ಗೆ ಓಮರ್ ಅಬ್ದುಲ್ಲಾ ಅವರ ಜೊತೆಯೂ ಮಾತಾಡಿದ್ದೇನೆ. ಕೇಂದ್ರ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದೆ. ಉಗ್ರರನ್ನ ಬಗ್ಗುಬಡಿಯಬೇಕು. ಮೃತರಿಗೆ ಸಂತಾಪ ಸೂಚಿಸುತ್ತೇವೆ. ಕಾಂಗ್ರೆಸ್ ಪಕ್ಷ ಕುಟುಂಬದವರ ಜೊತೆ ಇದೆ. ಇದು ಭಾರತದ ಮೇಲಿನ ನೇರ ದಾಳಿಯಾಗಿದೆ. ಪಾಕಿಸ್ತಾನಿ ಪ್ರಾಯೋಜಿತ ಉಗ್ರ ಚಟುವಟಿಕೆಗಳನ್ನ ಬಗ್ಗು ಬಡಿಯಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಮಾಹಿತಿ ಕೊರತೆ, ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ: ಸಿಎಂ

    ಕಾಶ್ಮೀರದಲ್ಲಿ ಟೂರಿಸ್ಟ್‌ಗಳಿಗೆ ರಕ್ಷಣೆ ಒದಗಿಸಬೇಕು. ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಮರನಾಥ ಯಾತ್ರೆಯ ಸೆಕ್ಯೂರಿಟಿ ಕೂಡಾ ಟೈಟ್ ಮಾಡಬೇಕು. ಉಗ್ರರ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆ ನಾವು ಇರುತ್ತೇವೆ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಲಿ. ಇದು ರಾಜಕೀಯ ಮಾಡಲು ಅಲ್ಲ. ಆದರೆ ಎಲ್ಲರಿಂದಲೂ ಸಲಹೆ ಪಡೆಯಿರಿ. ಎಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಎಂದಿದ್ದಾರೆ. ಇದನ್ನೂ ಓದಿ: Pahalgam Terror Attack | ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

    ಸಂಪುಟದಲ್ಲಿ ನಾವು ಒಟ್ಟಾಗಿದ್ದೇವೆ. ನಾಳೆ ಕಾಂಗ್ರೆಸ್ ವಿಶೇಷ ಸಿಡಬ್ಲೂಸಿ ಸಭೆ ನಡೆಸಲಿದೆ. ನಾಳೆ 11ಗಂಟೆಗೆ ದೆಹಲಿಯಲ್ಲಿ ಕಾಂಗ್ರೆಸ್ ಸಿಡಬ್ಲೂಸಿ ಸಭೆ ನಡೆಯಲಿದ್ದು, ಉಗ್ರರ ಕೃತ್ಯ, ಭದ್ರತೆ ಸೇರಿದಂತೆ ಅನೇಕ ವಿಚಾರಗಳು ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.

  • ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಮಂಜುನಾಥ್‌ ರಾವ್‌ ಯಾರು?

    ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಮಂಜುನಾಥ್‌ ರಾವ್‌ ಯಾರು?

    ಚಿಕ್ಕಮಗಳೂರು/ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ (47) ಮೃತಪಟ್ಟಿದ್ದಾರೆ. ಮಂಜುನಾಥ್‌ ರಾವ್‌ (Manjunath Rao) ಯಾರು ಅಂತ ನೋಡೊದಾದ್ರೆ…

    ಮಂಜುನಾಥ್‌ ರಾವ್‌ ಚಿಕ್ಕಮಗಳೂರಿನ (Chikkamagaluru) ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರು. ಅವರ ತಂದೆ ಶಿವಮೊಗ್ಗದ ಮ್ಯಾಮ್ ಕೋಸ್‌ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಹಾಗಾಗಿ 20 ವರ್ಷಗಳ ಹಿಂದೆಯೇ ಕುಟುಂಬಸ್ಥರೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದ ಮಂಜುನಾಥ್‌ ತಂದೆ ನಿವೃತ್ತಿ ಬಳಿಕ ಅಲ್ಲೇ ಸೆಟಲ್‌ ಆಗಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರು. ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ – ಶಿವಮೊಗ್ಗದ ಉದ್ಯಮಿ ಸಾವು, 12 ಮಂದಿಗೆ ಗಾಯ

    ಇದೇ ಏಪ್ರಿಲ್‌ 19ರಂದು ಅಂದ್ರೆ ಮೂರು ದಿನಗಳ ಹಿಂದೆ ಮಂಜುನಾಥ್‌ ರಾವ್‌ ಪತ್ನಿ, ಮಗನನ್ನು ಕರೆದುಕೊಂಡು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಮಗನ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ 6 ದಿನಗಳ ಪ್ಯಾಕೇಜ್‌ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್‌ಗೆ ಕರೆ ಮಾಡಿದ್ದ ಮಂಜುನಾಥ್‌ ಏ.24ರಂದು ವಾಪಸ್‌ ಬರುವುದಾಗಿ ಹೇಳಿದ್ದರು. ಆದ್ರೆ ದುರದೃಷ್ಟವಶಾತ್‌ ಇಂದು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಬೇಲ್ಪುರಿ ತಿನ್ನುವಾಗ ನೀನು ಮುಸಲ್ಮಾನನಾ ಅಂತ ಕೇಳಿ ಗುಂಡು ಹಾರಿಸಿದ ಉಗ್ರ – ದಾಳಿ ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

    ದಾಳಿ ಬಳಿಕ ಏನಾಯ್ತು?
    ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಹಿನ್ನೆಲೆ ಅಮಿತ್‌ ಶಾ ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಐಬಿ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು.

    ಸದ್ಯ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ದಾಳಿಯನ್ನು ಖಂಡಿಸಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸುವುದು ಅತ್ಯಂತ ಹೇಯ ಕೃತ್ಯ ಎಂದು ಎಂದು ಕಿಡಿ ಕಾರಿದ್ದಾರೆ. ಈ ನಡುವೆ ಭಯೋತ್ಪಾದಕರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾ ಪ್ರಾರಂಭಿಸಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ | ಸೌದಿಯಿಂದಲೇ ಮೋದಿ ಕರೆ, ಸ್ಥಳಕ್ಕೆ ಹೊರಟ ಅಮಿತ್‌ ಶಾ

  • Viral Video | ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸೇನೆ ನಡುವೆ ಗುಂಡಿನ ಚಕಮಕಿ – ರಕ್ಷಣೆಗಾಗಿ ಓಡಿದ ಭಯೋತ್ಪಾದಕ!

    Viral Video | ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸೇನೆ ನಡುವೆ ಗುಂಡಿನ ಚಕಮಕಿ – ರಕ್ಷಣೆಗಾಗಿ ಓಡಿದ ಭಯೋತ್ಪಾದಕ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾದಲ್ಲಿ (Baramulla) ಭದ್ರತಾ ಪಡೆಗಳು ಬಂಧಿಸಿದ್ದ ಭಯೋತ್ಪಾದಕ ತನ್ನ ಆಕ್ರಮಣಕಾರಿ ರೈಫಲ್‌ನಿಂದ ಗುಂಡು ಹಾರಿಸಿ, ಕಟ್ಟದಿಂದ ಎಸ್ಕೇಪ್‌ ಆದ ಆಗಿರುವ ಡ್ರೋನ್‌ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ (Socail Media) ಸದ್ದು ಮಾಡುತ್ತಿದೆ.

    ಬಾರಾಮುಲ್ಲಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿರುವುದಾಗಿ ಸೇನಾಧಿಕಾರಿಗಳು ತಿಳಿಸಿದ್ದು, ಇದು ಗಮನಾರ್ಹ ಯಶಸ್ಸು ಎಂದೇ ಬಣ್ಣಿಸಿದ್ದಾರೆ.ಇದನ್ನೂ ಓದಿ: ಮಂಗಳೂರಿನ ಕಾಟಿಪಳ್ಳದ ಬದ್ರಿಯಾ ಮಸೀದಿ ಮೇಲೆ ಕಲ್ಲು ತೂರಾಟ!

    ಇನ್ನೂ ಈ ಬಗ್ಗೆ ಸೇನೆಯ ಸೆಕ್ಟರ್-10 ರಾಷ್ಟ್ರೀಯ ರೈಫಲ್ಸ್ ಬ್ರಿಗೇಡಿಯರ್ (Rashtriya Rifles Brigadier) ಸಂಜಯ್ ಕನ್ನೋತ್ ಮಾತನಾಡಿ, ಬಾರಾಮುಲ್ಲಾದ ಚಕ್ ಟಪ್ಪರ್ ಕ್ರೀರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

    ಡ್ರೋನ್‌ ವೀಡಿಯೋ ವೈರಲ್‌:
    ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಡ್ರೋನ್‌ ವೀಡಿಯೋದಲ್ಲಿ ಭಯೋತ್ಪಾದಕನು ಕಟ್ಟಡವೊಂದರಿಂದ ಹೊರನುಸುಳಿ ಅಲ್ಲಿಂದ ಹತ್ತಿರದಲ್ಲಿರುವ ಮರಗಳ ಕಡೆಗೆ ತಲುಪುತ್ತಾನೆ. ಆಗ ಗುಂಡಿನ ಚಕಮಕಿ ಶುರುವಾಗಿದ್ದು, ಸ್ಪಷ್ಟವಾಗಿ ಸೆರೆಯಾಗಿದೆ. ಈ ವೇಳೆ ಸೈನಿಕರು ಹಾರಿಸಿದ ಗುಂಡುಗಳು ಕಾಂಕ್ರೀಟ್‌ ಗೋಡೆಗಳಿಗೆ ತಾಕಿ ಧೂಳು ಆವರಿಸುತ್ತದೆ. ಈ ಸಮಯದಲ್ಲಿ ಮತ್ತಷ್ಟು ಗುಂಡಿನ ಚಕಮಕಿ ನಡೆದು, ಮೂವರು ಭಯೋತ್ಪಾದರನ್ನು ಸೇನೆ ಹೊಡೆದುರುಳಿಸುತ್ತದೆ.

    ಇತ್ತೀಚೆಗೆ ಕುಪ್ವಾರದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ಸೇನಾ ಯೋಧರು ಹುತಾತ್ಮರಾಗಿದ್ದರು.ಇದನ್ನೂ ಓದಿ: Mandya | ನಾಗಮಂಗಲದಲ್ಲಿ ಖಾಕಿ ಹೈ ಅಲರ್ಟ್ – ಈದ್ ಮಿಲಾದ್ ಹಿನ್ನೆಲೆ ಪೊಲೀಸ್ ಸರ್ಪಗಾವಲು

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18 ರಿಂದ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಡುವೆ ಭಯೋತ್ಪಾದನಾ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ.