Tag: ಭಯೋತ್ಪಾಕ

  • ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನ ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ

    ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನ ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ

    ನವದೆಹಲಿ: ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನ (Goldy Brar) ಭಯೋತ್ಪಾದಕ ಎಂದು ಸೋಮವಾರ ಕೇಂದ್ರ ಸರ್ಕಾರ ಘೋಷಿಸಿದೆ.

    ದರೋಡೆಕೋರ ಗೋಲ್ಡಿ ಬ್ರಾರ್‌ನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಭಯೋತ್ಪಾದಕ ಎಂದು ಘೋಷಿಸಿದೆ. ಈತ ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ (Babbar Khalsa International) ಜೊತೆಗೆ ಸಂಬಂಧ ಹೊಂದಿದ್ದಾನೆ ಎಂದು ಗೃಹ ಸಚಿವಾಲಯ (Home Ministry) ಪ್ರಕಟಣೆಯಲ್ಲಿ ತಿಳಿಸಿದೆ.

    ಗೋಲ್ಡಿ ಬ್ರಾರ್ ಗಡಿಯಾಚೆಗಿನ ಏಜೆನ್ಸಿಗಳಿಂದ ಬೆಂಬಲಿತನಾಗಿ ಅನೇಕ ಹತ್ಯೆಗಳಲ್ಲಿ ತೊಡಗಿಸಿಕೊಂಡಿದ್ದು ಉಗ್ರವಾದದ ಆಮೂಲಾಗ್ರ ಸಿದ್ಧಾಂತ ಪ್ರತಿಪಾದಿಸಿದ್ದಾನೆ. ರಾಷ್ಟ್ರವಾದದ ಪರ ನಾಯಕರಿಗೆ ಬೆದರಿಕೆ ಕರೆಗಳನ್ನ ಹಾಕಿದ್ದಾನೆ. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾನೆ ಎಂದು ಗೃಹ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಮತ್ತು ಸ್ಫೋಟಕಗಳನ್ನ ಕಳ್ಳಸಾಗಣಿಕೆಯಲ್ಲೂ ತೊಡಗಿಸಿಕೊಂಡಿದ್ದು, ಹತ್ಯೆಗಳನ್ನು ನಡೆಸಲು ಶಾರ್ಪ್ ಶೂಟರ್‌ಗಳಿಗೆ ಸರಬರಾಜು ಮಾಡುತ್ತಿದ್ದ. ಆತನ ಸಹಚರರು ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಘಟಕಗಳನ್ನು ಹೆಚ್ಚಿಸುವುದು, ಉದ್ದೇಶಿತ ಹತ್ಯೆಗಳನ್ನು ನಡೆಸುವುದು ಮತ್ತು ಇತರ ದೇಶ ವಿರೋಧಿ ಯೋಜನೆಗಳ ಮೂಲಕ ಪಂಜಾಬ್ ರಾಜ್ಯದಲ್ಲಿ ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹಾಳುಮಾಡಲು ಪಿತೂರಿ ನಡೆಸಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.

    ಸಿಧು ಮೂಸೆವಾಲಾ ಹತ್ಯೆಯ ದಿನಗಳ ನಂತರ, 2022ರ ಜೂನ್‌ನಲ್ಲಿ ಗೋಲ್ಡಿ ಬ್ರಾರ್ ಅವರ ಹಸ್ತಾಂತರಕ್ಕಾಗಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಆ ನಂತರ ಕ್ಯಾಲಿಫೋರ್ನಿಯಾದಲ್ಲಿ ಆತನನ್ನ ಬಂಧಿಸಲಾಗಿತ್ತು ಎಂದು ಭಾರತದ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: ರಾಮಜನ್ಮಭೂಮಿ ನಮಗೆ ಮತ ಪಡೆಯುವ ರಾಜಕೀಯ ವಿಚಾರವಲ್ಲ: ರಾಜನಾಥ್ ಸಿಂಗ್

  • ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ ಅಂತ ಘೋಷಣೆ – ಕೇಂದ್ರ ಅಧಿಕೃತ ಪ್ರಕಟ

    ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ ಅಂತ ಘೋಷಣೆ – ಕೇಂದ್ರ ಅಧಿಕೃತ ಪ್ರಕಟ

    ನವದೆಹಲಿ: ಕೆನಡಾ ಮೂಲದ ದರೋಡೆಕೋರ (Canada-Based Gangster) ಲಖ್ಬೀರ್ ಸಿಂಗ್ ಲಾಂಡಾನನ್ನ ಭಯೋತ್ಪಾದಕ ಎಂದು ಭಾರತದ ಕೇಂದ್ರ ಗೃಹ ಸಚಿವಾಲಯ (MHA) ಘೋಷಿಸಿದ್ದು, ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

    ಮಾಹಿತಿ ಪ್ರಕಾರ, 1989ರಲ್ಲಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ (Lakhbir Singh Land) 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ. ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದು, ಖಲಿಸ್ತಾನಿ ಗ್ರೂಪ್ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಗೆ ಸೇರಿದ್ದಾನೆ. 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ (Punjab Police) ಇಂಟೆಲಿಜೆನ್ಸ್ ಮುಖ್ಯಕಚೇರಿ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಈತ ಭಾಗಿಯಾಗಿದ್ದನು ಎಂದು ವಿವರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ: ಪ್ರಧಾನಿ ಘೋಷಣೆ 

    ಅಲ್ಲದೇ ಈತ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್‌ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಫೋಟಕ ಸಾಧನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಪೂರೈಕೆ ಮಾಡುತ್ತಿದ್ದ. ಪಂಜಾಬ್‌ನಲ್ಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಹಣ ಪೂರೈಕೆ ಮಾಡುತ್ತಿದ್ದ. ಹೀಗೆ ಸಾಕಷ್ಟು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಲಾಂಡಾ, ಕೆನಡಾ ಮೂಲದ ಹಲವಾರು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಸಿಖ್ಸ್ ಫಾರ್ ಜಸ್ಟಿಸ್‌ನ ಗುರುಪತ್‌ವಂತ್ ಸಿಂಗ್ ಪನ್ನುನ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್)ನ ಮೃತ ಹರ್ದೀಪ್ ಸಿಂಗ್ ನಿಜ್ಜರ್ ಜೊತೆಗೂ ಸಂಪರ್ಕ ಬೆಳೆಸಿದ್ದ ಎಂದು ಗೃಹ ಸಚಿವಾಲಯ ತಿಳಿಸಿದೆ.

    2022ರ ಡಿಸೆಂಬರ್‌ನಲ್ಲಿ ತರ್ನ್ ತರನ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ಆರ್‌ಪಿಜಿ ದಾಳಿ ಹಾಗೂ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದಾನೆ. ಜೊತೆಗೆ ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುವಲ್ಲಿಯೂ ತೊಡಗಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ