Tag: ಭದ್ರಾ ಮೇಲ್ಡಂಡೆ ಯೋಜನೆ

  • ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ

    ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ

    ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) ಅನುಮತಿ ಕೊಡಿ ಅಂತ ನಾನೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಅಂತ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದೇವೇಗೌಡ (HD Devegowda) ತಿರುಗೇಟು ನೀಡಿದ್ದಾರೆ.

    ಬಿಜೆಪಿ-ಜೆಡಿಎಸ್ (BJP-JDS) ಸಂಸದರು ರಾಜ್ಯದ ಪರವಾಗಿ, ಅನುದಾನ ಮತ್ತು ನೀರಾವರಿ ಯೋಜನೆ ಬಗ್ಗೆ ಮಾತಾಡ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದವರು ಅನೇಕ ಯೋಜನೆ ಮಾಡಿದ್ದೀರಿ. ನೀರಾವರಿಗೆ ಹಣ ಇಡಲಿಲ್ಲ. ಮಾಡಿದ ಯೋಜನೆಗೆ ಹಣ ಇಡಲಿಲ್ಲ. ಅದರ ಬಗ್ಗೆ ನಾನು ಯಾಕೆ ಚರ್ಚೆ ಮಾಡಲಿ. ಅವರು ಏನ್ ಮಾಡ್ತಾರೋ ಮಾಡಲಿ ಎಂದರು.

    ನಾನು ಭದ್ರಾ ಮೇಲ್ದಂಡೆಗೆ ಅನುಮತಿ ಕೊಡಿ ಅಂತ ನೀರಾವರಿ ಮಂತ್ರಿಗೆ ಪತ್ರ ಬರೆದಿದ್ದೇನೆ. ಭದ್ರಾ  ಯೋಜನೆ ಬಗ್ಗೆಯೂ ನಾನು ಕುಳಿತುಕೊಳ್ಳೊಲ್ಲ. ಅದರ ಬಗ್ಗೆ ಹೋರಾಟ ಮಾಡ್ತೀನಿ ಅಂತ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

    ಮಹದಾಯಿ ಯೋಜನೆ ವಿಚಾರ ಸುಪ್ರೀಂನಲ್ಲಿದ್ದು ಯೋಜನೆಗೆ ಗೋವಾ ವಿರೋಧ ಮಾಡಿದೆ. ಗೋವಾ ಸರ್ಕಾರ ಸುಪ್ರೀಂಕೋರ್ಟ್ ಅರ್ಜಿ ಹಾಕಿದೆ. ನಮ್ಮ ಸರ್ಕಾರ ಅವರು ಪ್ರತಿಯಾಗಿ ನೀರು ಬೇಕು ಅಂತ ಅರ್ಜಿ ಹಾಕಿದೆ. ಅದು ಸುಪ್ರೀಂಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಅದಕ್ಕೂ ನಾನು ಹೋರಾಟ ಮಾಡ್ತೀನಿ. ನೀರಾವರಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನೀರಾವರಿ ಯೋಜನೆಗಳಿಗಾಗಿ ನಾನು ಸದಾ ಹೋರಾಟ ಮಾಡೋಕೆ ಸಿದ್ದ ಅಂತ ಕಾಂಗ್ರೆಸ್ ನಾಯಕರಿಗೆ ದೇವೇಗೌಡರು ತಿರುಗೇಟು ನೀಡಿದರು.

     

  • ಕರ್ನಾಟಕಕ್ಕೆ ಗಿಫ್ಟ್‌ : ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ – 5,300 ಕೋಟಿ ರೂ. ಅನುದಾನ

    ಕರ್ನಾಟಕಕ್ಕೆ ಗಿಫ್ಟ್‌ : ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ – 5,300 ಕೋಟಿ ರೂ. ಅನುದಾನ

    ನವದೆಹಲಿ: ಬಜೆಟ್‌ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗಿಫ್ಟ್‌ ಸಿಕ್ಕಿದ್ದು ಭದ್ರಾ ಮೇಲ್ದಂಡೆ ಯೋಜನೆಯನ್ನು (Upper Bhadra Project) ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಹೊರಹೊಮ್ಮಿದೆ.

    ಬಜೆಟ್‌ ಭಾಷಣದಲ್ಲಿ (Union Budget 2023) ನಿರ್ಮಲಾ ಸೀತಾರಾಮನ್‌ (Nirmala Sitaraman) ಈ ಯೋಜನೆಗೆ 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಪ್ರಕಟಿಸಿದರು. ಇದನ್ನೂ ಓದಿ: 1 ವರ್ಷ ಉಚಿತ ಆಹಾರ, ಕೇಂದ್ರವೇ ಸಂಪೂರ್ಣ ವೆಚ್ಚ ಭರಿಸಲಿದೆ: ನಿರ್ಮಲಾ ಸೀತಾರಾಮನ್‌

    ಈ ಹಿಂದೆ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ‘‘ಯೋಜನೆಗೆ 23,000 ಕೋಟಿ ರೂ. ವೆಚ್ಚವಾಗಲಿದ್ದು, ಸದ್ಯ 16,000 ಕೋಟಿ ರೂ. ವೆಚ್ಚದ ಕೆಲಸ ಬಾಕಿ ಇದೆ. ರಾಷ್ಟ್ರೀಯ ಯೋಜನೆ ಘೋಷಣೆ ನಂತರ ಯೋಜನೆಯಡಿ ಬಾಕಿಯಿರುವ ಮೊತ್ತದಲ್ಲಿಶೇ. 60ರಷ್ಟನ್ನು ಕೇಂದ್ರ ಭರಿಸಲಿದೆ. ಅದರಂತೆ ಕೇಂದ್ರದಿಂದ ಯೋಜನೆಗೆ 5,300 ಕೋಟಿ ರೂ. ಸಿಗುವ ನಿರೀಕ್ಷೆ ಇದೆ,’’ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k