Tag: ಭದ್ರತಾ ವ್ಯವಸ್ಥೆ

  • ರೇವಾ ವಿಶ್ವ ವಿದ್ಯಾಲಯದಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ

    ರೇವಾ ವಿಶ್ವ ವಿದ್ಯಾಲಯದಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ

    ಬೆಂಗಳೂರು: ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ನಗರದ ಯಲಹಂಕದಲ್ಲಿರುವ ರೇವಾ ವಿಶ್ವವಿದ್ಯಾನಿಲಯದಲ್ಲಿ ಸ್ಟೇಟ್ ಆಫ್ ದಿ ಆರ್ಟ್ ಸೆಕ್ಯೂರಿಟಿ ಸರ್ವೀಸ್ ಸಿಸ್ಟಂ ನೂತನವಾಗಿ ನಿರ್ಮಿಸಿದ್ದು, ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಇಂದು ಚಾಲನೆ ನೀಡಿದರು.

    ಅಲರ್ಟ್ ಐ ಪ್ರೀಕ್ವೆನ್ಸಿ ಡಿಟೆಕ್ಟರ್ ಎಂದು ಕರೆಯಲ್ಪಡುವ ಈ ರಕ್ಷಣೆ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವವರ ಮಾಹಿತಿಯನ್ನು ವಿಡಿಯೋ ಸಮೇತ ಸಹಿತ ಸ್ವಯಂ ಚಾಲಿತವಾಗಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡುತ್ತದೆ. ಇನ್ನುಳಿದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ನೌಕರರು ಬಾರ್ ಕೋಡ್ ನೀಡಿದ್ದು, ಕಾಲೇಜಿಗೆ ಭೇಟಿ ನೀಡಿದ್ದ ಸಮಯ ಹಾಗೂ ಸಮಗ್ರ ಮಾಹಿತಿ ಕೂಡ ದಾಖಲಾಗುತ್ತದೆ. ಇನ್ನುಳಿದಂತೆ ವಾಹನಗಳ ಮಾಹಿತಿಗಳು ಸಂಗ್ರಹವಾಗುತ್ತದೆ.

    ಉದ್ಘಾಟಣೆ ನಂತರ ಮಾತನಾಡಿದ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು, ನಮ್ಮ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರಿಗೆ ಸೂಕ್ತಭದ್ರತೆ ಹಾಗೂ ಅವರ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿಯು ಎಚ್ಎಫ್‍ಡಿ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಗೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಚಲನ – ವಲನಗಳನ್ನು ವೀಕ್ಷಿಸುವುದರ ಜೊತೆಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ರೇವಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವೈ.ಕುಲಕರ್ಣಿ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

  • ಲೋಕಾಯುಕ್ತರ ಮೇಲೆ ಚೂರಿ ಇರಿತದ ಬಳಿಕ ಎಚ್ಚೆತ್ತು ಭದ್ರತೆ ಬಿಗಿಗೊಳಿಸಿದ ಸರ್ಕಾರ

    ಲೋಕಾಯುಕ್ತರ ಮೇಲೆ ಚೂರಿ ಇರಿತದ ಬಳಿಕ ಎಚ್ಚೆತ್ತು ಭದ್ರತೆ ಬಿಗಿಗೊಳಿಸಿದ ಸರ್ಕಾರ

    ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಮೇಲಿನ ಇರಿತ ಪ್ರಕರಣದವಾದ ಬಳಿಕ ಎಚ್ಚೆತ್ತು ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಈ ಸಂಬಂಧ ಭದ್ರತೆಯನ್ನು ಬಿಗಿಗೊಳಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ

    ಸುತ್ತೋಲೆಯಲ್ಲಿ ಏನಿದೆ?
    ಪ್ರಸ್ತುತ ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳಿಗೆ ಪ್ರವೇಶ ಬಯಸುವ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿ ಅವರುಗಳ ಬ್ಯಾಗ್ ಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತಿದೆ. ಮಾರ್ಚ್ 7ರಂದು ಲೋಕಾಯುಕ್ತರ ಕಛೇರಿಯಲ್ಲಿ ನಡೆದ ಘಟನೆಯಿಂದಾಗಿ ಭದ್ರತಾ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಇರುತ್ತದೆ. ಆದ್ದರಿಂದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿನ ಸಚಿವಾಲಯದ ಎಲ್ಲ ಕಛೇರಿಗಳೂ ಸೇರಿದಂತೆ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಗಧಿತ ಸಂದರ್ಶಕರ ಭೇಟಿ ಸಮಯಕ್ಕೆ ಮಿತಿಗೊಳಿಸತಕ್ಕದ್ದು. ಅಷ್ಟೇ ಅಲ್ಲದೇ ಭೇಟಿ ಪಡೆಯುವ ಪ್ರತಿಯೊಬ್ಬ ಸಾರ್ವಜನಿಕರನ್ನು ಕೂಲಂಕುಷ ತಪಾಸಣೆಗೊಳಪಡಿಸಿ ಹಾಗೂ ಅವರುಗಳ ಬ್ಯಾಗೇಜ್ ಗಳನ್ನು ಕಡ್ಡಾಯವಾಗಿ ಸ್ಕ್ಯಾನ್ ಮಾಡಿದ ನಂತರ ಲೋಹ ತಪಾಸಣಾ ಯಂತ್ರದ ಮೂಲಕ ಹಾದು ಹೋಗಲೇಬೇಕೆಂಬ ಪದ್ಧತಿಯನ್ನು ಅನುಸರಿಸಬೇಕು. ಈ ಬಗ್ಗೆ ಯಾವುದೇ ಲೋಪವಾದಲ್ಲಿ ಪೊಲೀಸ್ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಲಾಗುವುದು ಎಂದು ಈ ಮೂಲಕ ಸೂಚನೆಗಳಮನ್ನು ನೀಡಲಾಗಿದೆ. ಇದನ್ನೂ ಓದಿ: ದೂರುಗಳ ಮೇಲೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ- ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡ ತೇಜರಾಜ್