Tag: ಭದ್ರತಾ ಲೋಪ

  • ಸಂಸತ್‌ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ

    ಸಂಸತ್‌ ಭವನದಲ್ಲಿ ಮತ್ತೆ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ

    ನವದೆಹಲಿ: ದೆಹಲಿಯಲ್ಲಿರುವ ಸಂಸತ್‌ ಭವನದಲ್ಲಿ (Parliament) ಮತ್ತೊಮ್ಮೆ ಭದ್ರತಾ ಉಲ್ಲಂಘನೆಯಾಗಿದೆ. ಶುಕ್ರವಾರ ಬೆಳಗ್ಗೆ ವ್ಯಕ್ತಿಯೊಬ್ಬ ಮರವನ್ನು ಹತ್ತಿ ಗೋಡೆ ಏರುವ ಮೂಲಕ ಸಂಸತ್ತಿನ ಭವನದ ಆವರಣವನ್ನು (Security Breach) ಪ್ರವೇಶಿಸಿದ್ದಾನೆ.

    ಈ ಘಟನೆ ಬೆಳಿಗ್ಗೆ 6:30 ರ ಸುಮಾರಿಗೆ ನಡೆದಿದೆ. ರೈಲ್ ಭವನದ ಕಡೆಯಿಂದ ಗೋಡೆ ಮೇಲೆ ಹಾರಿದ್ದ ವ್ಯಕ್ತಿ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್ ಅನ್ನು ತಲುಪಿದ್ದ.

    ಒಳನುಗ್ಗಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಆತನನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

     

    ಸಂಸತ್ತಿನ ಮಳೆಗಾಲದ ಅಧಿವೇಶನ ಗುರುವಾರ ಮುಕ್ತಾಯವಾಗಿತ್ತು. ಅಧಿವೇಶನ ಮುಕ್ತಾಯವಾದ ಒಂದು ದಿನದ ನಂತರ ಭದ್ರತಾ ಉಲ್ಲಂಘನೆಯಾಗಿದೆ. ಆಗಾಗ್ಗೆ ಅಡ್ಡಿಪಡಿಸುವಿಕೆಗಳೊಂದಿಗೆ ಮುಕ್ತಾಯಗೊಂಡ ಒಂದು ದಿನದ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ: ನನ್ನ ಬಾಹ್ಯಾಕಾಶ ಯಾತ್ರೆಯೂ ಇಡೀ ದೇಶದ ಧ್ಯೇಯವಾಗಿತ್ತು ಧನ್ಯವಾದ ತಿಳಿಸಿದ ಶುಭಾಂಶು ಶುಕ್ಲಾ

    ಕಳೆದ ವರ್ಷ 20 ರ ಹರೆಯದ ವ್ಯಕ್ತಿಯೊಬ್ಬ ಸಂಸತ್ತಿನ ಗೋಡೆಯನ್ನು ಹತ್ತಿ ಅನೆಕ್ಸ್ ಕಟ್ಟಡದ ಆವರಣದೊಳಗೆ ಹಾರಿದಾಗ ಇದೇ ರೀತಿಯ ಭದ್ರತಾ ಉಲ್ಲಂಘನೆಯ ಘಟನೆ ಸಂಭವಿಸಿತ್ತು.

    2023 ರಲ್ಲಿ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗಲೇ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಸಾರ್ವಜನಿಕ ಗ್ಯಾಲರಿಯಿಂದ ಕೆಳಗೆ ಧುಮುಕಿದ್ದರು. ಇನ್ನಿಬ್ಬರು ಸಂಸತಿನ ಹೊರಗಿನ ಆವರಣದಲ್ಲಿ ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ನಾಲ್ವರನ್ನೂ ನಂತರ ಭದ್ರತಾ ಸಿಬ್ಬಂದಿ ಬಂಧಿಸಿದ್ದರು.

  • Video | ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ – ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ?

    Video | ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ – ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ?

    ಬೆಂಗಳೂರು: ವಿಧಾನಸೌಧದಲ್ಲಿಂದು ನಡೆದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ (Democracy Day karnataka 2024) ಸಿಎಂ ಸಮ್ಮುಖದಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕಿದ್ದಂತೆ ಎಡವಟ್ಟಿನ ಕೆಲಸ ಮಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಒಂದು ಕ್ಷಣ ಏನೋ ಆಯ್ತು ಅಂತ ಅನ್ಕೊಂಡು ಅಲ್ಲಿದ್ದವರು ಗಾಬರಿಯಾಗಿದ್ರು. ಆದ್ರೆ ಅಸಲಿ ವಿಷ್ಯ ಗೊತ್ತಾದ ಮೇಲೆ ಸಿಎಂ, ಸಚಿವರಾದಿಯಾಗಿ ಎಲ್ರೂ ನಿಟ್ಟುಸಿರು ಬಿಟ್ರು.

    ಅಷ್ಟಕ್ಕೂ ವಿಧಾನಸೌಧಲ್ಲಿ (Vidhana Soudha) ಇಂದು (ಭಾನುವಾರ) ನಡೆದಿದ್ದಿಷ್ಟು. ಕಡು ಬಿಸಿಲಿನ ನಡುವೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ ಬಳಿ ಸರ್ಕಾರದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಯೋಜಿಸಲಾಗಿತ್ತು. ಸಿಎಂ, ಸಚಿವರು, ಶಾಸಕರು ವಿವಿಧ ಇಲಾಖೆಗಳ ಅಧಿಕಾರಿಗಳು, ನೂರಾರು ಜನ ಜಮಾಯಿಸಿದ್ರು. ಆದರೆ ಇದ್ದಕಿದ್ದಂತೆ ಅನಾಮಿಕ ವ್ಯಕ್ತಿಯೊಬ್ಬನಿಂದ ಕಾರ್ಯಕ್ರಮದಲ್ಲಿ ಗೊಂದಲ, ಆತಂಕ ಸೃಷ್ಟಿಯಾದ ಪ್ರಸಂಗ ನಡೆದುಹೋಯ್ತು.

    ಕಾರ್ಯಕ್ರಮದಲ್ಲಿ ದಿಢೀರನೇ ಸಿಎಂ ಕೂತಿದ್ದ ವೇದಿಕೆಯತ್ತ ಆ ಅಪರಿಚಿತ ವ್ಯಕ್ತಿ‌ ನುಗ್ಗಿದ್ದ. ಕೈಯಲ್ಲಿ ರೇಷ್ಮೆ ಶಾಲು ಹಿಡಿದು ಜನರ ಗುಂಪಿಂದ ವೇದಿಕೆ ಜಿಗಿದು ಸಿಎಂ ಕಡೆ ಧಾವಿಸಿದ್ದ. ಈ ಅನಿರೀಕ್ಷಿತ ಘಟನೆಯಿಂದ ವೆರದಿಕೆಯಲ್ಲಿದ್ದ ಸಿಎಂ (Chief Minister), ಸಚಿವರು ಒಂದು ಕ್ಷಣ ಗಾಬರಿಯಿಂದ ಆತಂಕಗೊಂಡರು. ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಏನಾಗ್ತಿದೆ ಅಂತ ತಿಳಿಯುವಷ್ಟರಲ್ಲಿ ತಕ್ಷಣ ಭದ್ರತಾ ಸಿಬ್ಬಂದಿ, ವೇದಿಕೆಗೆ ಹಾರಿದ್ದ ಆ ವ್ಯಕ್ತಿಯನ್ನು ತಡೆದು ಕೆಳಗೆ ಉರುಳಿಸಿ ದರದರನೆ ಎಳೆದೋಯ್ದ ಪೊಲೀಸರ ವಶಕ್ಕೆ ಕೊಟ್ರು. ಇದೇ ವೇಳೆ ಆ ವ್ಯಕ್ತಿ ತಾನು ಹಿಡಿದಿದ್ದ ಶಾಲನ್ನು ಸಿಎಂ ಅವರತ್ತ ಎಸೆದ, ಆದರೆ ಅದು ಸಚಿವ ಕೆ.ಜೆ ಜಾರ್ಜ್ ಬಳಿ ಹೋಗಿ ಬಿತ್ತು. ಕೊನೆಗೆ ಆತ ಬಂದಿದ್ದು ಸಿಎಂಗೆ ಶಾಲು ಹಾಕಲು ಅಂತ ಗೊತ್ತಾಗಿ ಸಿಎಂ, ಸಚಿವರು ನಿಟ್ಟುಸಿರು ಬಿಟ್ರು…

    ಈ ಘಟನೆ ಪೊಲೀಸರ ಭದ್ರತಾ ವೈಫಲ್ಯದಿಂದ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಸಿಎಂ ಕಾರ್ಯಕ್ರಮದಲ್ಲಿ ಯುವಕ ವಿವಿಐಪಿ ಭದ್ರತೆ ಭೇದಿಸಿ ನುಗ್ಗಿ ಬಂದಿದ್ದು, ಭದ್ರತಾ ವೈಫಲ್ಯ (Security Breach) ಆಗಿದೆ. ಗುಪ್ತಚರ ಇಲಾಖೆ ಏನ್ ಮಾಡ್ತಿದೆ ಎಂದು ಪರಿಷತದ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.

    ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಶಾಲು ಹಾಕಲು ಬಂದ ವ್ಯಕ್ತಿ ಬನಶಂಕರಿ ಮೂಲದ ಮಹಾದೇವ ನಾಯಕ್ ಎಂದು ಗುರುತಿಸಲಾಗಿದ್ದು, ಕಳೆದ ಒಂದು ವಾರದ ಹಿಂದೆ ಸಿಎಂಗೆ ಶಾಲು ಹಾಕಲು ಮುಂದಾಗಿದ್ದ ಆದರೆ ಆಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಇಂದು ಕೂಡ ಶಾಲು ಹಾಕಲು ಯತ್ನಿಸಿದ್ದಾನೆ. ಉತ್ತರ ಕರ್ನಾಟಕ ಮೂಲಕ ಮಹದೇವ ನಾಯಕ್ ಸಿದ್ದರಾಮಯ್ಯ ಅಭಿಮಾನಿ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನು ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ಆಗಿರುವ ಬಗ್ಗೆಯೂ ತನಿಖೆ ನಡೆಯಲಿದೆ ಎನ್ನಲಾಗಿದೆ.

  • ಲೋಕಸಭೆಯಲ್ಲಿ ಹೊಗೆ ಬಾಂಬ್‌ – ಬಾಗಲಕೋಟೆಯ ಟೆಕ್ಕಿ ವಶಕ್ಕೆ

    ಲೋಕಸಭೆಯಲ್ಲಿ ಹೊಗೆ ಬಾಂಬ್‌ – ಬಾಗಲಕೋಟೆಯ ಟೆಕ್ಕಿ ವಶಕ್ಕೆ

    ಬಾಗಲಕೋಟೆ: ಲೋಕಸಭೆಯಲ್ಲಿ ಭದ್ರತಾ ಲೋಪ (Parliament Security Breach) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಬಾಗಲಕೋಟೆ ನಿವೃತ್ತ ಡಿವೈಎಸ್‌ಪಿ ಅವರ ಮಗ ಸಾಯಿ ಕೃಷ್ಣನನ್ನು (Sai Krishna)  ದೆಹಲಿ ಪೊಲೀಸರು (Delhi Police) ವಶಕ್ಕೆ ಪಡೆದಿದ್ದಾರೆ.

    ಮನೋರಂಜನ್ (Manoranjan) ಸ್ನೇಹಿತನಾಗಿರುವ ಸಾಯಿ ಕೃಷ್ಣ ಬೆಂಗಳೂರು ಬಿಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ನೇಹಿತನಾಗಿದ್ದ. 2008-9ರಲ್ಲಿ ಇಬ್ಬರೂ ರೂಮ್‌ಮೇಟ್‌ ಆಗಿದ್ದರು.  ಇದನ್ನೂ ಓದಿ: ಲೋಕಸಭೆಯಲ್ಲಿ ಮೂರು ಕ್ರಿಮಿನಲ್ ಮಸೂದೆ ಅಂಗೀಕಾರ

     

    ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರನ್ನು ಮನೋರಂಜನ್ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಾಯಿಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ನವನಗರ ಠಾಣೆಯಲ್ಲಿ ಕೆಲ ಕಾಲ ವಿಚಾರಣೆ ನಡೆಸಿ ತಡರಾತ್ರಿ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.

    ಈ ಮಧ್ಯೆ ಸಾಯಿಕೃಷ್ಣಾ ಆರೋಪಿ ಅಲ್ಲ, ನಮ್ಮ ತಮ್ಮ ತುಂಬಾ ಮುಗ್ದ ಎಂದು ಸಾಯಿಕೃಷ್ಣ ಸಹೋದರಿ ಸ್ಪಂದನಾ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಸ್ಪಂದನಾ ನನ್ನ ತಮ್ಮ ನಿರ್ದೋಷಿಯಾಗಿ ಹೊರ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಾಯಿಕೃಷ್ಣ ಯಾರು?
    ವಿದ್ಯಾಗಿರಿಯ 11ನೇ ಕ್ರಾಸ್ ನಿವಾಸಿಯಾಗಿರುವ ಸಾಯಿಕೃಷ್ಣ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಸೀನಿಯರ್‌ ಎಂಜಿನಿಯರ್‌ ಆಗಿದ್ದಾನೆ. ವರ್ಕ್ ಫ್ರಂ ಹೋಂ ಮಾಡುತ್ತಿದ್ದರಿಂದ ಮನೆಯಿಂದಕೆಲಸ ಮಾಡುತ್ತಿದ್ದ.

  • ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ: 141 ಸಂಸದರ ಅಮಾನತಿಗೆ ಸೋನಿಯಾ ಗಾಂಧಿ ಕಿಡಿ

    ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ: 141 ಸಂಸದರ ಅಮಾನತಿಗೆ ಸೋನಿಯಾ ಗಾಂಧಿ ಕಿಡಿ

    ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Parliament Session) ಅಶಿಸ್ತಿನ ನಡವಳಿಕೆ ಹಿನ್ನೆಲೆ 141 ಸಂಸದರನ್ನು (MP) ಅಮಾನತುಗೊಳಿಸಿದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಪ್ರತಿಕ್ರಿಯಿಸಿದ್ದು, ನರೇಂದ್ರ ಮೋದಿ (Narendra Modi) ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿರೋಧ ಪಕ್ಷದ 141 ಸಂಸದರನ್ನು ಸರ್ಕಾರ ಅಮಾನತುಗೊಳಿಸಿರುವುದನ್ನು ಖಂಡಿಸಿದ ಅವರು, ಸಂಪೂರ್ಣವಾಗಿ ಸಮಂಜಸವಾದ ಮತ್ತು ನ್ಯಾಯಸಮ್ಮತವಾದ ಬೇಡಿಕೆಗೆ ಒತ್ತಾಯಿಸಿದ್ದಕ್ಕಾಗಿ ಹಿಂದೆಂದೂ ಇಷ್ಟು ವಿರೋಧ ಪಕ್ಷದ ಸಂಸದರನ್ನು ಸದನದಿಂದ ಅಮಾನತುಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ಉಪರಾಷ್ಟ್ರಪತಿಗೆ ಅವಮಾನಿಸಿದ್ದನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ: ಮುರ್ಮು ಬೇಸರ

    ಡಿಸೆಂಬರ್ 13ರಂದು ಸಂಸತ್ ಭವನದಲ್ಲಿ ನಡೆದ ಭದ್ರತಾ ಉಲ್ಲಂಘನೆ (Security Breach) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಅವರಿಂದ ಹೇಳಿಕೆ ನೀಡುವಂತೆ ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ಭದ್ರತಾ ಲೋಪದ ಕುರಿತು ಅಮಿತ್ ಶಾ ಹೇಳಿಕೆ ಕೊಡಬೇಕಾಗಿತ್ತು ಎಂದು ಸಂಸದರನ್ನು ಬೆಂಬಲಿಸಿದರು. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

  • ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

    ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

    ನವದೆಹಲಿ: ಸಂಸತ್ (Parliament) ಭವನದಲ್ಲಿ ವೀಕ್ಷಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ 6ನೇ ಆರೋಪಿ ಮಹೇಶ್ ಕುಮಾವತ್ (Mahesh Kumawat) ಅನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಪ್ರಕರಣದಲ್ಲಿ ಮಾಸ್ಟರ್‌ಮೈಂಡ್ ಆಗಿರುವ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳವಲ್ಲಿ ಮಹೇಶ್ ಕುಮಾವತ್ ಸಹಾಯ ಮಾಡಿದ ಆರೋಪದ ಮೇರೆಗೆ ಆತನನ್ನು ಇಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 13ರಂದು ದೆಹಲಿಯ ಸಂಸತ್ ಭವನದಲ್ಲಿ ನಡೆದ ಘಟನೆಯನ್ನು ಮರುಸೃಷ್ಟಿಸಲು ಪೊಲೀಸರು ಸಂಸತ್ತಿನ ಅನುಮತಿಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!

    ಪ್ರಕರಣದ ಪ್ರಮುಖ ಪಾತ್ರಧಾರಿ ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸುವ ಸಂಚು ರೂಪಿಸಲು ಎಲ್ಲಾ ಆರೋಪಿಗಳು ಹಲವು ಬಾರಿ ಭೇಟಿಯಾಗಿದ್ದರು ಎಂದು ಸ್ವತಃ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ಅಲ್ಲದೇ ಆರೋಪಿಯು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಗಂಡ-ಹೆಂಡತಿ ಹನಿಟ್ರ್ಯಾಪ್; ಕೋಟ್ಯಧಿಪತಿ ಉದ್ಯಮಿಗೆ ವಂಚನೆ – 6 ಮಂದಿ ಬಂಧನ

    ಪ್ರಕರಣದಲ್ಲಿ ವಿವಿಧ ರಾಜ್ಯಗಳ 6 ಮಂದಿ ಆರೋಪಿಗಳು ಭಾಗಿಯಾಗಿದ್ದು, ಇಬ್ಬರು ಸಂಸತ್‌ನ ಒಳಗಡೆ ಸ್ಮೋಕ್ ಬಾಂಬ್ ಸಿಡಿಸಿದರೆ ಇನ್ನಿಬ್ಬರು ಸಂಸತ್ ಭವನದ ಹೊರಗಡೆ ಸ್ಮೋಕ್ ಬಾಂಬ್ ಸಿಡಿಸಿ ಘೋಷಣೆ ಕೂಗಿದ್ದರು. ಇನ್ನೋರ್ವ ಆರೋಪಿ ಸ್ಮೋಕ್ ಬಾಂಬ್ ದಾಳಿಯ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಪರಾರಿಯಾಗಿದ್ದ. ಇದೀಗ ಆರೋಪಿಗಳ ಪೈಕಿ ಎಲ್ಲರನ್ನೂ ಬಂಧಿಸಿದ್ದು, ಘಟನೆಯ ಹಿಂದಿನ ಉದ್ದೇಶವನ್ನು ಅರಿಯುವ ಸಲುವಾಗಿ ತೀವ್ರ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

  • ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್‌

    ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್‌

    ನವದೆಹಲಿ: ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ರಾಜ್ಯಸಭೆಯ ಒಬ್ಬರು ಹಾಗೂ ಲೋಕಸಭೆಯ (Lok Sabha) 14 ಸಂಸದರನ್ನು ಅಮಾನತುಗೊಳಿಸಲಾಗಿದೆ.

    ಮಾಣಿಕಂ ಠಾಗೋರ್ (Manickam Tagore), ಕನಿಮೋಳಿ, ಪಿ.ಆರ್ ನಟರಾಜನ್, ವಿ.ಕೆ ಶ್ರೀಕಾಂತಂ, ಬೇನಿ ಬಹನ್, ಕೆ ಸುಬ್ರಹ್ಮಣ್ಯಂ, ಎಸ್‌.ಆರ್ ಪ್ರತಿಬನ್, ಎಸ್ ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್, ಟಿ.ಎನ್ ಪ್ರತಾಪನ್ (TN Prathapan), ಹೈಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಾಕಸ್ ಅಮಾನತುಗೊಂಡ ಸಂಸದರು.

    ಇದಕ್ಕೂ ಮುನ್ನವೇ ಲೋಕಸಭೆಯು ಐವರು ಕಾಂಗ್ರೆಸ್‌ ಸಂಸದರನ್ನು (Congress MPs) ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯ ಅಂಗೀಕರಿಸಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಐವರನ್ನು ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು. ಇದನ್ನೂ ಓದಿ: ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಸದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಪ್ರತಿಪಕ್ಷಗಳ 15 ಸದಸ್ಯರನ್ನು ಅಧಿವೇಶನದ ಉಳಿದ ಅವಧಿಯಿಂದ ಅಮಾನತುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. 15 ಸದಸ್ಯರ ಪೈಕಿ ಐವರು ಕಾಂಗ್ರೆಸ್‌ ಸಂಸದರಾಗಿದ್ದಾರೆ.

    ಸಂಸತ್ತಿನಲ್ಲಿ ಆದ ಭದ್ರತಾ ಲೋಪವನ್ನು (Security Breach in LokSabha) ಖಂಡಿಸಿ ಪ್ರತಿಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರು. ಇದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

  • ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

    ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

    ನವದೆಹಲಿ: ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಜಿಗಿದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣದ ಕುರಿತು ಭದ್ರತಾ ಲೋಪಕ್ಕೆ (Security Breach) ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು (Lok Sabha Personnel) ಅಮಾನತುಗೊಳಿಸಲಾಗಿದೆ.

    ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ (Parliament) ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಂದರ್ಶಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

    ಬಂಧಿತ ಆರೋಪಿಗಳನ್ನು ಸಾಗರ್ ಶರ್ಮಾ, ಮನೋರಂಜನ್, ನೀಲಂ ಆಜಾದ್, ವಿಕ್ಕಿ ಶರ್ಮಾ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೋರ್ವ ಆರೋಪಿ ಲಲಿತ್ ಝಾ ನೀಲಂ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ ವೀಡಿಯೊಗಳನ್ನು ಚಿತ್ರೀಕರಿಸಿದ್ದು, ಮೊಬೈಲ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೋರ್ವ ಆರೋಪಿಯಾಗಿರುವ ವಿಕ್ಕಿ ಶರ್ಮಾ ಎಲ್ಲಾ ಆರೋಪಿಗಳಿಗೆ ಗುರ್ಗೋನ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

    ಘಟನೆಯ ಬಳಿಕ ಸಂಸತ್ತಿನ ಒಳಗೆ ಸಂಸದರು ಸ್ಮೋಕ್ ಬಾಂಬ್ ದಾಳಿ ಮಾಡಿದ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಇನ್ನು ಈ ಎಲ್ಲಾ ಆರೋಪಿಗಳು ವಿವಿಧ ರಾಜ್ಯದವರಾಗಿದ್ದು, ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಹೆಸರಿನ ಗ್ರೂಪ್‌ನಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅಲ್ಲದೇ ಒಂದೂವರೆ ವರ್ಷದ ಹಿಂದೆಯೇ ಮೈಸೂರಿನಲ್ಲಿ ಭೇಟಿಯಾಗಿ ಕೃತ್ಯದ ಬಗ್ಗೆ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ

  • 45 ನಿಮಿಷಗಳ ಪಾಸ್‌ ಪಡೆದು 2 ಗಂಟೆ ಗ್ಯಾಲರಿಯಲ್ಲಿ ಕುಳಿತಿದ್ರು!

    45 ನಿಮಿಷಗಳ ಪಾಸ್‌ ಪಡೆದು 2 ಗಂಟೆ ಗ್ಯಾಲರಿಯಲ್ಲಿ ಕುಳಿತಿದ್ರು!

    ನವದೆಹಲಿ: ಲೋಕಸಭೆಯ (Lok Sabha) ಒಳಗೆ ಸ್ಮೋಕ್‌ ಬಾಂಬ್‌ (Smoke Bomb) ಸಿಡಿಸಿದ ಮನೋರಂಜನ್‌ (Manoranjan) ಮತ್ತು ಸಾಗರ್‌ ಶರ್ಮಾ (Sagar Sharma) 45 ನಿಮಿಷಗಳ ಕಾಲ ಪಾಸ್‌ ಪಡೆದು 2 ಗಂಟೆಗಳ ಕಾಲ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

    ಹೌದು. ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:15 ರವರೆಗೆ ಕಲಾಪ ವೀಕ್ಷಣೆಗೆ ಸಮಯ ನೀಡಲಾಗಿತ್ತು. 45 ನಿಮಿಷಗಳವರೆಗೆ ಪಾಸ್‌ ಪಡೆದ ಇವರು ಸುಮಾರು 2 ಗಂಟೆಗಳ ಕಾಲ ಕಲಾಪ ವೀಕ್ಷಣೆ ಮಾಡಿದ್ದರು.   ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

     

    ಸಂಸತ್‌ನಲ್ಲಿ ಕಲಾಪ ನಡೆಯಲಿ, ನಡೆಯದೇ ಇರಲಿ 45 ನಿಮಿಷಗಳ ಅವಧಿ ಮುಗಿದ ಕೂಡಲೇ ವೀಕ್ಷಕರ ಗ್ಯಾಲರಿಯಿಂದ ತೆರಳಬೇಕಾಗುತ್ತದೆ. ಈ ನಿರ್ದೇಶನವಿದ್ದರೂ ಇಬ್ಬರನ್ನು 2 ಗಂಟೆಗಳ ಕಾಲ ಕಲಾಪ ವೀಕ್ಷಣೆಗೆ ಅನುಮತಿ ನೀಡಿದ್ದೇ ಅತಿದೊಡ್ಡ ಭದ್ರತಾಲೋಪ. ವೀಕ್ಷಕರ ಜಾಗ ಖಾಲಿ ಇದ್ದ ಕಾರಣ ಭದ್ರತಾ ಸಿಬ್ಬಂದಿ  ಈ ವಿಷಯವನ್ನು ಗಮನಿಸದ ಕಾರಣ ಈ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

    ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರ ಗ್ಯಾಲರಿಯಲ್ಲಿ ಇದ್ದ ಇವರು ಮಧ್ಯಾಹ್ನ 1:01ರ ವೇಳೆಗೆ ಗ್ಯಾಲರಿಯಿಂದ ಕೆಳಗಡೆ ಜಿಗಿದು ಹಳದಿ ಬಣ್ಣದ ಸ್ಮೋಕ್‌ ಬಾಂಬ್‌ ಸಿಡಿಸಿದ್ದಾರೆ. ಕೆಳಗಡೆ ಜಿಗಿದ ಬಳಿಕ ಮೂರು ಸಾಲುಗಳನ್ನು ದಾಟಿ ಸೀಟಿನ ಕಡೆಗೆ ತಲುಪಿ ಶೂ ಒಳಗಿದ್ದ ವಸ್ತುವನ್ನು ಹೊರತೆಗೆದಿದ್ದಾನೆ. ನಂತರ ಸದನದಲ್ಲಿ ಹಳದಿ ಬಣ್ಣದ ಹೊಗೆ ಏಳಲಾರಂಭಿಸಿದೆ.

    ನಾಲ್ವರು ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಹೊಂದಿದ್ದು ಗುರುಗ್ರಾಮ ಸೆಕ್ಟರ್ 7 ರಲ್ಲಿ ದಾಳಿ ನಡೆಸುವ ಬಗ್ಗೆ ಸಂಪೂರ್ಣ ಪ್ಲ್ಯಾನ್‌ ಮಾಡಿದ್ದರು. ಈ ಆರೋಪಿಗಳು ಲಲಿತ್ ಝಾ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದಲ್ಲಿ ಒಟ್ಟಿಗೆ ತಂಗಿದ್ದರು. ಈಗ ಪೊಲೀಸರು ಲಲಿತ್‌ ಝಾಗೆ ಮನೆಯನ್ನು ಬಾಡಿಗೆ ನೀಡಿದ ವಿಶಾಲ್‌ ಶರ್ಮಾ ಅಲಿಯಾಸ್‌ ವಿಕ್ಕಿ ಶರ್ಮಾ ಅವರ ಪತ್ನಿ ವೃಂದಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು

  • ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

    ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

    ಮೈಸೂರ: ಲೋಕಸಭೆಯ ಕಲಾಪದ ನಡೆಯುವಾಗಲೇ ಸ್ಮೋಕ್ ಬಾಂಬ್ (Smoke Bomb) ಎಸೆದಿದ್ದ ಮನೋರಂಜನ್ (Manoranjan) ಮೈಸೂರು (Mysuru)  ಮೂಲದವನಾಗಿದ್ದರೂ ಹಲವು ವರ್ಷಗಳಿಂದ ಮೈಸೂರಿನಲ್ಲಿ ತನ್ನ ಸ್ನೇಹಿತರ ಸಂಪರ್ಕವನ್ನೇ ಕಳೆದುಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.

    ಮನೋರಂಜನ್ ಮೈಸೂರಿನ ಎಲ್ಲಾ ಸ್ನೇಹಿತರ ಸಂಪರ್ಕ ಕಳೆದುಕೊಂಡಿದ್ದ. ಬೆಂಗಳೂರಿನಲ್ಲೇ (Bengaluru) ತನ್ನ ಸ್ನೇಹಿತರ ನೆಟ್‌ವರ್ಕ್ ಇಟ್ಟುಕೊಂಡಿದ್ದ. ಮೈಸೂರಿನಲ್ಲಿ ಕಳೆದ 5-6 ವರ್ಷಗಳಿಂದ ಯಾವುದೇ ಸ್ನೇಹಿತರ ಸಂಪರ್ಕದಲ್ಲಿ ಇರಲಿಲ್ಲ. ಈ ಹಿನ್ನೆಲೆ ಪೊಲೀಸರು ಬೆಂಗಳೂರಿನಲ್ಲಿ ಅವನ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದಾರೆ. ಜೊತೆಗೆ ಮನೋರಂಜನ್‌ನ ಬೆಂಗಳೂರಿನಲ್ಲಿರುವ ಸ್ನೇಹಿತರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

    ಇಷ್ಟು ಮಾತ್ರವಲ್ಲದೇ ಮನೋರಂಜನ್ ಹೆಸರಿನಲ್ಲಿ ಯಾವುದೇ ಅಧಿಕೃತವಾಧ ಸೋಷಿಯಲ್ ಮೀಡಿಯಾ ಖಾತೆ ಇಲ್ಲ ಎಂಬುದು ತಿಳಿದು ಬಂದಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇರದ ಮನೋರಂಜನ್‌ಗೆ ಉತ್ತರ ಭಾರತದವರ ಪರಿಚಯ ಹೇಗಾಯಿತು ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಆದರೆ ಆತ ನಕಲಿ ಅಕೌಂಟ್ ಹೊಂದಿರುವ ಸಾಧ್ಯತೆ ಇದ್ದು, ವ್ಯವಸ್ಥಿತ ಪ್ಲ್ಯಾನ್ ಮಾಡಿಯೇ ಸಂಸತ್ ಭವನಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

  • ವಾಕಿಂಗ್ ಹೋಗಿದ್ದಾಗ ಭದ್ರತಾ ಲೋಪ – ಬೈಕ್ ಡಿಕ್ಕಿಯಿಂದ ಸ್ವಲ್ಪದರಲ್ಲೇ ಪಾರಾದ ನಿತೀಶ್ ಕುಮಾರ್

    ವಾಕಿಂಗ್ ಹೋಗಿದ್ದಾಗ ಭದ್ರತಾ ಲೋಪ – ಬೈಕ್ ಡಿಕ್ಕಿಯಿಂದ ಸ್ವಲ್ಪದರಲ್ಲೇ ಪಾರಾದ ನಿತೀಶ್ ಕುಮಾರ್

    – ಅಪಘಾತದಿಂದ ತಪ್ಪಿಸಿಕೊಳ್ಳಲು ಫುಟ್‌ಪಾತ್‌ಗೆ ಜಿಗಿದ ಬಿಹಾರ ಸಿಎಂ

    ಪಾಟ್ನಾ: ಬಿಹಾರದ ಮುಖ್ಯಮಂತ್ರಿ (Bihar CM) ನಿತೀಶ್ ಕುಮಾರ್ (Nitish Kumar) ಅವರು ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ಭದ್ರತಾ ಲೋಪ (Security Breach) ಸಂಭವಿಸಿದೆ. ವೇಗವಾಗಿ ಬಂದ ಬೈಕ್‌ಗೆ (Bike) ಡಿಕ್ಕಿ ಹೊಡೆಯುವುದರಿಂದ ಬಿಹಾರದ ಸಿಎಂ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.

    ನಿತೀಶ್ ಕುಮಾರ್ ಅವರು ಪಾಟ್ನಾದ ತಮ್ಮ ನಿವಾಸದ ಬಳಿ ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ಬೈಕ್ ಸವಾರನೊಬ್ಬ ಅವರ ಭದ್ರತಾ ಕವಚವನ್ನು ಬೇಧಿಸಿದ್ದಾನೆ. ಮಾತ್ರವಲ್ಲದೇ ನಿತೀಶ್ ಕುಮಾರ್ ಇದ್ದೆಡೆಗೆ ಬೈಕ್ ಅನ್ನು ನುಗ್ಗಿಸಿದ್ದಾನೆ. ಈ ವೇಳೆ ನಿತೀಶ್ ಕುಮಾರ್ ಅವರು ಬೈಕ್ ಡಿಕ್ಕಿಯಿಂದ ತಪ್ಪಿಸಿಕೊಳ್ಳಲು ಫುಟ್‌ಪಾತ್‌ಗೆ ಜಿಗಿದಿದ್ದಾರೆ. ಇದನ್ನೂ ಓದಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

    ಘಟನೆ ನಡೆದ ತಕ್ಷಣ ಸ್ಪೆಷಲ್ ಸೆಕ್ಯುರಿಟಿ ಗ್ರೂಪ್ (SSG) ಕಮಾಂಡೋಗಳು ಹಾಗೂ ಪಾಟ್ನಾ ಪೊಲೀಸರು ಸೇರಿದಂತೆ ಭದ್ರತಾ ಅಧಿಕಾರಿಗಳು ಬೈಕ್ ಸವಾರನನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೈಕ್ ಸವಾರನ ಅನುಮಾನಾಸ್ಪದ ವರ್ತನೆಗೆ ಆತನ ಹಿಂದಿನ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

    2018ರಲ್ಲಿ ನಿತೀಶ್ ಕುಮಾರ್ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಯಿತು. ಘಟನೆಯ ಬಳಿಕ ಎಸ್‌ಎಸ್‌ಜಿ ಕಮಾಂಡೆಂಟ್ ಹಾಗೂ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅವರನ್ನು ಮುಖ್ಯಮಂತ್ರಿ ನಿವಾಸಕ್ಕೆ ಕರೆಸಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು