Tag: ಭದ್ರತಾ ಪಡೆ

  • ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

    ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

    -10 ಲಕ್ಷ ರೂ. ರಿವಾರ್ಡ್‌ ಹೊಂದಿದ್ದ ಮಾವೋವಾದಿಯ ಹತ್ಯೆ 

    ರಾಂಚಿ: ಭದ್ರತಾ ಪಡೆ ಹಾಗೂ ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿಯನ್ನು ಭದ್ರತಾ ಪಡೆಗಳು (Security Forces) ಹತ್ಯೆಗೈದಿದ್ದಾರೆ.

    ಜಾರ್ಖಂಡ್‌ನ (Jharkhand) ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗೋಯಿಲ್‌ಕೇರಾ ಪೊಲೀಸ್ ಠಾಣಾ (Goilkera Police Station) ವ್ಯಾಪ್ತಿಯಲ್ಲಿ ಬರುವ ಬುರ್ಜುವಾ ಬೆಟ್ಟದಲ್ಲಿ ಭಾನುವಾರ (ಸೆ.7) ಬೆಳಗ್ಗೆ ಎನ್‌ಕೌಂಟರ್ ನಡೆದಿದೆ.

    ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಎನ್‌ಕೌಂಟರ್ ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸಿಪಿಐನ (ಮಾವೋವಾದಿ) ಸ್ವಯಂ ಘೋಷಿತ ವಲಯ ಕಮಾಂಡರ್ ಅಮಿತ್ ಹನ್ಸ್ದಾ ಅಲಿಯಾಸ್ ಆಪ್ತಾನ್ ಎಂದು ಗುರುತಿಸಲಾಗಿದೆ. ಈ ಮೊದಲು ಈ ವ್ಯಕ್ತಿಯನ್ನು ಪತ್ತೆಹಚ್ಚಿದರೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಸದ್ಯ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಗೋಯಿಲ್‌ಕೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದಕ್ಕೆ ಮಾವೋವಾದಿಗಳು ಬರುವ ಬಗ್ಗೆ ಚೈಬಾಸಾ ಪೊಲೀಸ್ ವರಿಷ್ಠಾಧಿಕಾರಿಗೆ ಸುಳಿವು ಸಿಕ್ಕಿತ್ತು. ಅವರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಭಾನುವಾರ (ಸೆ.7) ಬೆಳಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮಾವೋವಾದಿಗಳು ದಟ್ಟಾರಣ್ಯದೊಳಗೆ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ವೇಳೆ ಓರ್ವನ ಮೃತದೇಹ ಪತ್ತೆಯಾಗಿದೆ ಎಂದಿದ್ದಾರೆ.

  • ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿ ಪಡೆದಿದ್ದ ಬಾಗು ಖಾನ್ ಹತ್ಯೆ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿ ಪಡೆದಿದ್ದ ಬಾಗು ಖಾನ್ ಹತ್ಯೆ

    ಶ್ರೀನಗರ: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಮೃತ ಇಬ್ಬರ ಪೈಕಿ ‘ಮಾನವ ಜಿಪಿಎಸ್’ (Human GPS)ಎಂದೇ ಕುಖ್ಯಾತಿ ಪಡೆದಿರುವ ಬಾಗು ಖಾನ್ (Bagu Khan) ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಸಮಂದರ್ ಚಾಚಾ’ ಎಂದೂ ಕರೆಯಲ್ಪಡುವ ಬಾಗು ಖಾನ್, 1995ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ. ಭಾರತದ ಒಳಗೆ ಉಗ್ರರನ್ನು ಕಳುಹಿಸಲು ಸಹಾಯ ಮಾಡುವ ಅತ್ಯಂತ ಹಳೇ ಹಾಗೂ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ. ಭದ್ರತಾ ಮೂಲಗಳ ಪ್ರಕಾರ, ಗುರೇಜ್ ವಲಯದ ವಿವಿಧ ಪ್ರದೇಶಗಳಿಂದ 100ಕ್ಕೂ ಹೆಚ್ಚು ನುಸುಳುಕೋರತನದ ಯತ್ನಗಳಿಗೆ ಬಾಗು ಖಾನ್ ಕಾರಣನಾಗಿದ್ದ. ಇಲ್ಲಿನ ಕಠಿಣ ಭೂಪ್ರದೇಶ ಮತ್ತು ರಹಸ್ಯ ಮಾರ್ಗಗಳ ಬಗ್ಗೆ ಆತನಿಗೆ ಇದ್ದ ಆಳವಾದ ಜ್ಞಾನದಿಂದ ಹೆಚ್ಚಿನ ಉಗ್ರರನ್ನು ಭಾರತಕ್ಕೆ ಕಳುಹಿಸಲು ಯಶಸ್ವಿಯಾಗಿದ್ದ. ಇದೇ ಕಾರಣಕ್ಕೆ ಆತ ಎಲ್ಲಾ ಉಗ್ರಗಾಮಿ ಗುಂಪುಗಳಿಗೂ ವಿಶೇಷ ವ್ಯಕ್ತಿಯಾಗಿದ್ದ. ಇದನ್ನೂ ಓದಿ: ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

    ಬಾಗು ಖಾನ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದರೂ, ನಿಯಂತ್ರಣ ರೇಖೆಯುದ್ದಕ್ಕೂ ಇರುವ ಗುರೇಜ್ ಮತ್ತು ಅದರ ನೆರೆಯ ವಲಯಗಳಿಂದ ಉಗ್ರರ ಒಳನುಸುಳಿವಿಕೆ ಯಶಸ್ವಿಯಾಗಲು ಪ್ರತಿಯೊಂದು ಉಗ್ರ ಸಂಘಟನೆಗೂ ಸಹಾಯ ಮಾಡುತ್ತಿದ್ದ. ಬಾಗು ಖಾನ್ ಭಯೋತ್ಪಾದಕ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸಹ ಸಂಬಂಧ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ

    ಒಳನುಸುಳುವಿಕೆ ಪ್ರಯತ್ನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರೆಜ್ ಸೆಕ್ಟರ್‌ನಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿಯಾಗಿ ಭದ್ರತಾ ಪಡೆ ಕೂಡ ಗುಂಡಿನ ದಾಳಿ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಚಿನಾರ್ ಕಾರ್ಪ್ಸ್ ಎಕ್ಸ್ನಲ್ಲಿ ತಿಳಿಸಿದೆ. ಬಾಗು ಖಾನ್ ಜೊತೆ ಹತ್ಯೆಯಾದ ಇನ್ನೊಬ್ಬ ಭಯೋತ್ಪಾದಕ ಕೂಡ ಪಾಕಿಸ್ತಾನಿ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85%ಗೆ ಏರಿಕೆ: ತೇಜಸ್ವಿ ಯಾದವ್

  • Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ –  ಇಬ್ಬರು ಉಗ್ರರ ಎನ್‌ಕೌಂಟರ್

    Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

    ಶ್ರೀನಗರ: ಜಮ್ಮು ಕಾಶ್ಮೀರದ (Jammu and Kashmir) ಬಂಡಿಪೋರಾ (Bandipora) ಜಿಲ್ಲೆಯ ಗುರೆಜ್ ಸೆಕ್ಟರ್‌ನ ಗಡಿ ನಿಯಂತ್ರಣಾ ರೇಖೆಯಲ್ಲಿ (LoC) ಅಕ್ರಮವಾಗಿ ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು (Terrorists) ಭದ್ರತಾ ಪಡೆ ಹೊಡೆದುರುಳಿಸಿದೆ.

    ಉಗ್ರರ ಒಳನುಸುಳುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಸೇನಾ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಭದ್ರತಾ ಪಡೆ ಕೂಡ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ

    ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಭಯೋತ್ಪಾದನಾ ನಿಗ್ರಹ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಶಾಕ್ – ಸ್ಮೋಕಿಂಗ್ ಝೋನ್ ಇರದಿದ್ರೆ ಲೈಸನ್ಸ್ ರದ್ದು

  • ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪಾರಿವಾಳ ಸೆರೆ

    ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪಾರಿವಾಳ ಸೆರೆ

    ನವದೆಹಲಿ: ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪಾರಿವಾಳವನ್ನು ಭದ್ರತಾ ಪಡೆಗಳು ಸೆರೆಹಿಡಿದಿದ್ದಾರೆ.

    ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಚೀಟಿಯನ್ನು ಪಾರಿವಾಳ ಉಗುರುಗಳಿಗೆ ಕಟ್ಟಲಾಗಿತ್ತು. ಪತ್ರದಲ್ಲಿ ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶವಿತ್ತು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

    ಪಾಕಿಸ್ತಾನವು ಭಾರತ ಗಡಿಭಾಗಕ್ಕೆ ವಿವಿಧ ಸಂದೇಶಗಳನ್ನು ಹೊತ್ತ ಬಲೂನ್, ಧ್ವಜಗಳು ಮತ್ತು ಪಾರಿವಾಳಗಳನ್ನು ಕಳುಹಿಸುತ್ತಿದೆ. ಆದರೆ ಬೆದರಿಕೆ ಪತ್ರವನ್ನು ಹೊತ್ತ ಪಾರಿವಾಳವನ್ನು ಸೆರೆಹಿಡಿಯುತ್ತಿರುವುದು ಇದೇ ಮೊದಲು ಎಂದಿದ್ದಾರೆ. ಹೀಗಾಗಿ ಭದ್ರತಾ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿವೆ.

    ಆ.18ರಂದು ಪಾಕಿಸ್ತಾನದಿಂದ ಬರುತ್ತಿದ್ದ ಪಾರಿವಾಳವನ್ನು ಅಂತಾರಾಷ್ಟ್ರೀಯ ಗಡಿಯ ಕಟ್ಮರಿಯಾ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ.ಇದನ್ನೂ ಓದಿ: ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

  • ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಎನ್‌ಕೌಂಟರ್ – ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

    ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಎನ್‌ಕೌಂಟರ್ – ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಉಧಂಪುರ (Udhampur) ಜಿಲ್ಲೆಯ ಬಸಂತಗಢದಲ್ಲಿ (Basantgarh) ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಓರ್ವ ಉಗ್ರನನ್ನು ಹೊಡೆದುರುಳಿಸಿದೆ.

    ‘ಆಪರೇಷನ್ ಬಿಹಾಲಿ’ (Operation Bihali) ಹೆಸರಿನಲ್ಲಿ ಬಸಂತಗಢ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರ ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್

    ಅಮರನಾಥ ಯಾತ್ರೆ ಆರಂಭಗೊಳ್ಳುವ ಒಂದು ವಾರ ಮೊದಲೇ ಈ ಪ್ರದೇಶದಲ್ಲಿ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಮ್ಮು ವಲಯದ ಪೊಲೀಸ್ ಮಹಾನಿರ್ದೇಶಕ ಭೀಮ್ ಸೇನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

  • ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    – ಐತಿಹಾಸಿಕ  ಸಾಧನೆ ಎಂದು ಬಣ್ಣಿಸಿದ ಅಮಿತ್ ಶಾ

    ರಾಯ್ಪುರ: ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ 21 ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 31 ಉಗ್ರರನ್ನು ಭದ್ರತಾ ಪಡೆ (Security Forces) ಹೊಡೆದುರುಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಕ್ಸಲ್ ಮುಕ್ತ ಭಾರತ ಕಾರ್ಯಾಚರಣೆಯಲ್ಲಿ ಇದು ಐತಿಹಾಸಿಕ ಸಾಧನೆ ಎಂದು ಕರೆದಿದ್ದಾರೆ. ಅಲ್ಲದೇ ಒಂದು ಕಾಲದಲ್ಲಿ ಕೆಂಪು ಉಗ್ರರಿಂದ ಆಳಲ್ಪಟ್ಟಿದ್ದ ಕರೆಗುಟ್ಟಾದಲ್ಲಿ (Karregutta Hill) ಭದ್ರತಾ ಪಡೆ ಅತಿದೊಡ್ಡ ಕಾರ್ಯಾಚರಣೆ ನಡೆಸಿದ್ದು, ಈಗ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಇದನ್ನೂ ಓದಿ: ಪಾಕ್‌ಗೆ ಮತ್ತೆ ಶಾಕ್ – ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

    ಕರೆಗುಟ್ಟಾ ಬೆಟ್ಟವು PLGA ಬೆಟಾಲಿಯನ್ 1, DKSZC, TSC ಮತ್ತು CRC ನಂತಹ ಪ್ರಮುಖ ನಕ್ಸಲ್ ಸಂಘಟನೆಗಳ ಪ್ರಧಾನ ಕಚೇರಿಯಾಗಿತ್ತು. ಅಲ್ಲಿ ನಕ್ಸಲ್ ತರಬೇತಿ, ತಂತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಕೇವಲ 21 ದಿನಗಳಲ್ಲಿ ಪೂರ್ಣಗೊಂಡ ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದರು.   ಇದನ್ನೂ ಓದಿ: ಸೋಫಿಯಾ‌ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

    ಎಕ್ಸ್‌ನಲ್ಲಿ ಏನಿದೆ?
    ಪ್ರತಿಕೂಲ ಹವಾಮಾನ ಮತ್ತು ಸವಾಲಿನ ಗುಡ್ಡಗಾಡು ಪ್ರದೇಶದ ಹೊರತಾಗಿಯೂ ಧೈರ್ಯ ಮತ್ತು ಶೌರ್ಯದಿಂದ ನಕ್ಸಲರನ್ನು ಎದುರಿಸಿದ ಧೈರ್ಯಶಾಲಿ  CRPF, STF, and DRG ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ಇಡೀ ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಮುಂದಿನ ವರ್ಷ ಮಾರ್ಚ್ 31ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ನಕ್ಸಲ್ ಮುಕ್ತವಾಗಲಿದೆ.   ಇದನ್ನೂ ಓದಿ: ರಾಯಚೂರಿನಲ್ಲಿ ವರುಣನ ಆರ್ಭಟ – ಲಕ್ಷಾಂತರ ರೂ.ಮೌಲ್ಯದ ಭತ್ತ ನಾಶ

    ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಭಯೋತ್ಪಾದನೆಯನ್ನು ಅದರ ಬೇರು ಸಮೇತ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ. 2026ರ ಮಾರ್ಚ್ 31ರ ವೇಳೆಗೆ ನಕ್ಸಲ್ ಮುಕ್ತ ಭಾರತ ಖಚಿತ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.   ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಡಿಟೋನೇಟರ್‌ಗಳು ಮತ್ತು ಸ್ಫೋಟಕ ಸಾಧನಗಳು, ಔಷಧ ಮತ್ತು ವಿದ್ಯುತ್ ಉಪಕರಣಗಳಂತಹ 12,000 ಕೆಜಿ ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 450 ಐಇಡಿಗಳು ಮತ್ತು 40 ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೈದ 31 ಉಗ್ರರ ಪೈಕಿ 28 ಮಂದಿಯನ್ನು ಗುರುತಿಸಲಾಗಿದೆ ಎಂದು  ಸಿಆರ್‌ಪಿಎಫ್ ಮುಖ್ಯಸ್ಥ ಜನರಲ್ ಜಿಪಿ ಸಿಂಗ್ ತಿಳಿಸಿದ್ದಾರೆ.  ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

  • Chhattisgarh | 31 ನಕ್ಸಲರ ಎನ್‌ಕೌಂಟರ್ – ಇಬ್ಬರು ಭದ್ರತಾ ಸಿಬ್ಬಂದಿ ಸಾವು

    Chhattisgarh | 31 ನಕ್ಸಲರ ಎನ್‌ಕೌಂಟರ್ – ಇಬ್ಬರು ಭದ್ರತಾ ಸಿಬ್ಬಂದಿ ಸಾವು

    ರಾಯ್ಪುರ: ಭದ್ರತಾ ಸಿಬ್ಬಂದಿ (Security Personnel) ಹಾಗೂ ನಕ್ಸಲರ (Maoists) ನಡುವೆ ನಡೆದ ಎನ್‌ಕೌಂಟರ್‌ನಲ್ಲಿ (Encounter) 31 ನಕ್ಸಲರು ಬಲಿಯಾಗಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಭದ್ರತಾ ತಂಡ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ಪ್ರಾರಂಭವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಂಡಿನ ಚಕಮಕಿಯಲ್ಲಿ 31 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಎನ್‌ಕೌಂಟರ್‌ನಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ನಕ್ಸಲರ ಗುರುತನ್ನು ಪತ್ತೆಹಚ್ಚಲಾಗುತ್ತಿದೆ. ಘಟನಾ ಸ್ಥಳದಿಂದ ಭದ್ರತಾ ಪಡೆ ಸಿಬ್ಬಂದಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ಘಟನೆ ಸಂಬಂಧ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಎನ್‌ಕೌಂಟರ್ ಸ್ಥಳಕ್ಕೆ ಹೆಚ್ಚಿನ ಪಡೆಗಳನ್ನು ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಡಿಬಾಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಫೆ.16ರಂದು ರಿಲೀಸ್ ಆಗಲಿದೆ ‘ಡೆವಿಲ್’ ಚಿತ್ರದ ಟೀಸರ್

  • ಛತ್ತೀಸ್‌ಗಢದಲ್ಲಿ 8 ನಕ್ಸಲರ ಎನ್‌ಕೌಂಟರ್

    ಛತ್ತೀಸ್‌ಗಢದಲ್ಲಿ 8 ನಕ್ಸಲರ ಎನ್‌ಕೌಂಟರ್

    ರಾಯ್ಪುರ: ಭದ್ರತಾ ಪಡೆ (Security Force) ನಡೆಸಿದ ಗುಂಡಿನ ಚಕಮಕಿಯಲ್ಲಿ ಎಂಟು ನಕ್ಸಲರು ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಬಿಜಾಪುರದಲ್ಲಿ (Bijapur) ನಡೆದಿದೆ.

    ಶನಿವಾರ ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಲೂರ್ ಪೊಲೀಸ್ ಠಾಣೆ ಪ್ರದೇಶದ ಅರಣ್ಯದಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ಪ್ರಾರಂಭವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸಚಿವರ ವೇತನಕ್ಕೆ ಬಜೆಟ್‌ನಲ್ಲಿ 1,024 ಕೋಟಿ ರೂ. ಹಂಚಿಕೆ

    ಈ ಪ್ರದೇಶದಲ್ಲಿ ಪಶ್ಚಿಮ ಬಸ್ತಾರ್ ವಿಭಾಗದ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಶುಕ್ರವಾರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

    ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಅದರ ಗಣ್ಯ ಘಟಕ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ರಕ್ತಾಭಿಷೇಕ ನಡೆದಿದ್ದು ಬಲಪಡಿಸೋದಕ್ಕಲ್ಲ, ನನ್ನ ವಶೀಕರಣಕ್ಕೆ – ಸ್ನೇಹಮಯಿ ಕೃಷ್ಣ ದೂರು

    ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಪ್ರದೇಶದಲ್ಲಿ ಗಸ್ತು ಮತ್ತು ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬುವ ಐತಿಹಾಸಿಕ ಬಜೆಟ್: ನಿಖಿಲ್

  • Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ

    Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ

    ರಾಯ್ಪುರ: ಭದ್ರತಾ ಪಡೆಗಳು (Security Force) ಹಾಗೂ ಮಾವೋವಾದಿಗಳ (Maoists) ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳು ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ (Chhattisgarh) ಬಿಜಾಪುರ (Bijapur) ಜಿಲ್ಲೆಯಲ್ಲಿ ನಡೆದಿದೆ.

    ದಕ್ಷಿಣ ಬಿಜಾಪುರದ ಕಾಡಿನಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ಮಾವೋವಾದಿ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ. ಮೂರು ಜಿಲ್ಲೆಗಳಿಂದ ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಗಾರ್ಡ್‌ಗೆ (ಡಿಆರ್‌ಜಿ) ಸೇರಿದ ಸಿಬ್ಬಂದಿ, ಕೋಬ್ರಾದ ಐದು ಬೆಟಾಲಿಯನ್‌ಗಳು ಮತ್ತು ಸಿಆರ್‌ಪಿಎಫ್‌ನ 229ನೇ ಬೆಟಾಲಿಯನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ – ದೆಹಲಿ ಚುನಾವಣೆಗೆ `ಕೈ’ ಗ್ಯಾರಂಟಿ

    ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಸಾವನ್ನಪ್ಪಿದ್ದಾರೆ. ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಪೊಲಿಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್

    ಜನವರಿ ತಿಂಗಳಿನಲ್ಲಿ ಇಲ್ಲಿಯವರೆಗೆ ಛತ್ತೀಸ್‌ಗಢದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು 26 ಮಾವೋವಾದಿಗಳು ಮೃತಪಟ್ಟಿದ್ದಾರೆ. ಜ.12ರಂದು ಬಿಜಾಪುರ ಜಿಲ್ಲೆಯ ಮದ್ದೇಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 5 ಮಾವೋವಾದಿಗಳು ಸಾವನ್ನಪ್ಪಿದ್ದರು. ಇದನ್ನೂ ಓದಿ: ಯಕ್ಷಗಾನದ ಟೆಂಟ್‌ಗೆ ನುಗ್ಗಿದ ಪೊಲೀಸರು – ಈಗ ಕಾಂಗ್ರೆಸ್ Vs ಬಿಜೆಪಿ ಜಟಾಪಟಿ

     

  • ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಐವರು ಉಗ್ರರು ಬಲಿ, ಇಬ್ಬರು ಸೈನಿಕರಿಗೆ ಗಾಯ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಐವರು ಉಗ್ರರು ಬಲಿ, ಇಬ್ಬರು ಸೈನಿಕರಿಗೆ ಗಾಯ

    ಶ್ರೀನಗರ: ಭದ್ರತಾ ಪಡೆ (Security Force) ಮತ್ತು ಭಯೋತ್ಪಾದಕರ (Terrorits) ನಡುವೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಐವರು ಉಗ್ರರು ಬಲಿಯಾಗಿದ್ದು, ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ನಡೆದಿದೆ.

    ಬುಧವಾರ ರಾತ್ರಿ, ಜಿಲ್ಲೆಯ ಬೆಹಿಬಾಗ್ ಪ್ರದೇಶದ ಕಡ್ಡರ್‌ನಲ್ಲಿ ಶಂಕಿತ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ತಕ್ಷಣ ಭದ್ರತಾ ಪಡೆ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಇದನ್ನೂ ಓದಿ: Mumbai Boat Accident | ಸ್ಪೀಡ್‌ ಬೋಟ್‌ ಫೆರ್ರಿಗೆ ಡಿಕ್ಕಿ ಹೊಡೆಯಲು ಕಾರಣ ಏನು? ದುರಂತ ಹೇಗಾಯ್ತು?

    ಗುರುವಾರ ಮುಂಜಾನೆ ಭಯೋತ್ಪಾದಕರು ಏಕಾಏಕಿ ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ಚಕಮಕಿ ನಡೆಸಿ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ – ಬೀದರ್‌ನಲ್ಲಿ ರೆಡ್ ಅಲರ್ಟ್ ಘೋಷಣೆ