Tag: ಭಜರಂಗಿ

  • ಬಿಕಿನಿ ಫೋಟೋ ಹಂಚಿಕೊಂಡ ಐಂದ್ರಿತಾ ರೇ

    ಬಿಕಿನಿ ಫೋಟೋ ಹಂಚಿಕೊಂಡ ಐಂದ್ರಿತಾ ರೇ

    ನ್ನಡದ ‘ಮನಸಾರೆ’ ನಟಿ ಐಂದ್ರಿತಾ ರೇ (Aindrita Ray) ಇದೀಗ ಬಿಕಿನಿ (Bikini) ಫೋಟೋ ಹರಿಬಿಟ್ಟು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಕಿನಿಯಲ್ಲಿ ನಟಿ ಹಾಟ್ ಆಗಿ ಪೋಸ್ ನೀಡಿದ್ದಾರೆ.

    ಮತ್ತೊಮ್ಮೆ ಬಿಕಿನಿಯಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಮಳೆಗಾಲ ಬಹುತೇಕ ಮುಗಿದಿದೆ ಎಂದು ನೀವು ಭಾವಿಸಿದಾಗ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ನಟಿಯ ಲುಕ್‌ಗೆ ಸೋ ಬ್ಯೂಟಿಫುಲ್, ಯೂ ಲುಕ್ಕಿಂಗ್ ಲೈಕ್ ಎ ವಾವ್ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

    ಅಂದಹಾಗೆ, ಐಂದ್ರಿತಾ ರೇ ಇದೀಗ ಹೇಳಿಕೊಳ್ಳುವಂತಹ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮದುವೆಯಾದ್ಮೇಲೆ ನನಗೆ ಸಿನಿಮಾ ಆಫರ್ಸ್ ಕಮ್ಮಿಯಾಗಿದೆ. ನನಗೆ ಸಿನಿಮಾಗಳು ಸಿಕ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ‘ಮೆರವಣಿಗೆ’ (Meravanige) ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್‌ಗೆ (Prajwal Devaraj) ಬೆಂಗಾಳಿ ಬೆಡಗಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿದರು. ಬಳಿಕ ಸುದೀಪ್, ದುನಿಯಾ ವಿಜಯ್, ದಿಗಂತ್, ಪುನೀತ್ ರಾಜ್‌ಕುಮಾರ್ ಸಿನಿಮಾಗಳಿಗೂ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು.

    ಅದಷ್ಟೇ ಅಲ್ಲ, ಭಾವೈ, ಮೇ ಜರೂರ್ ಆವುಂಗಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ಮನಸಾರೆ ಬೆಡಗಿ ನಾಯಕಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ – ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್‌

    ಇನ್ನೂ ಬೇಡಿಕೆ ಇರುವಾಗಲೇ 2018ರಲ್ಲಿ ದಿಗಂತ್ (Diganth Manchale) ಜೊತೆ ನಟಿ ಹಸೆಮಣೆ ಏರಿದರು. ಮದುವೆಯಾದ್ಮೇಲೆ ಇಬ್ಬರೂ ಜೊತೆಯಾಗಿ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ ನಟಿಸಿರು. ಇದರ ಬಹುತೇಕ ಚಿತ್ರೀಕರಣ ಮಲೆನಾಡು ಶಿವಮೊಗ್ಗದಲ್ಲಿ ಶೂಟ್ ಮಾಡಲಾಗಿತ್ತು.

  • ಭಜರಂಗಿ ಪಕ್ಕದಲ್ಲಿ ಮೋದಿ – ‘ನಮೋ ನಮ್ಮ ದೇವರು’ ಎಂದ ಗ್ರಾಮಸ್ಥರು

    ಭಜರಂಗಿ ಪಕ್ಕದಲ್ಲಿ ಮೋದಿ – ‘ನಮೋ ನಮ್ಮ ದೇವರು’ ಎಂದ ಗ್ರಾಮಸ್ಥರು

    ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆ ಬಿಹಾರದ ಕಟಿಹಾರ್ ಜಿಲ್ಲೆಯ ಆನಂದಪುರದಲ್ಲಿ ಹನುಮಂತನ ದೇಗುಲದ ಪಕ್ಕದಲೇ ನಮೋ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರು ಅಭಿಮಾನ ಮೆರೆದಿದ್ದಾರೆ.

    ಹೌದು. ಹನುಮಂತ ದೇವರ ದೇವಾಲಯದ ಪಕ್ಕದಲ್ಲಿ ಮೋದಿ ಪ್ರತಿಮೆ ಪ್ರತಿಷ್ಠಾಪಿಸಿರುವ ಗ್ರಾಮಸ್ಥರು, ಮೋದಿ ನಮ್ಮ ದೇವರು ಎಂದು ಪ್ರಧಾನಿಗೆ ವಿಶೇಷ ಗೌರವ ನೀಡಿದ್ದಾರೆ. ಮೋದಿ ಅವರು ಪ್ರಧಾನಿಯಾದ ದಿನದಿಂದ ಅಂದರೆ 2014 ರಿಂದ ಇಲ್ಲಿಯವರೆಗೂ ತಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದ್ದರಿಂದ ನಮ್ಮ ಪಾಲಿಗೆ ಅವರು ದೇವರು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಮೋದಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಸಿಟ್ಟಿಗೆದ್ದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಮತಗಳನ್ನು ಸೆಳೆಯಲು ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರು ಈ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಆನಂದಪುರ ಗ್ರಾಮದಲ್ಲಿ ಬಹುತೇಕ ಮಂದಿ ಬೆಂಗಾಲಿ ಹಿಂದೂಗಳಾಗಿದ್ದು, ಸ್ವಾತಂತ್ರ್ಯ ಬಂದ ದಿನದಿಂದ ನಮ್ಮ ಗ್ರಾಮವನ್ನು ಅಧಿಕಾರಿಗಳು ಮತ್ತು ಸರ್ಕಾರಗಳು ನಿರ್ಲಕ್ಷಿಸಿಕೊಂಡು ಬಂದಿದ್ದರು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಗ್ರಾಮಸ್ಥರು ನಮೋ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿ ನಮ್ಮ ದೇವರು, ನಮ್ಮ ದೇವರನ್ನು ಕಣ್ಣಾರೆ ಕಾಣುವ ಆಸೆ ಇದೆ. ನಮ್ಮ ನೆಲದಲ್ಲಿ ಮೋದಿಜಿ ಓಡಾಡಬೇಕೆಂದು ಬಯಸಿದ್ದೇವೆ ಎಂದು ಗ್ರಾಮಸ್ಥರು ಆಸೆ ತಿಳಿಸಿದ್ದಾರೆ.