Tag: ಭಜರಂಗದಳ ಕಾರ್ಯಕರ್ತ

  • ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!

    ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!

    ಮಂಗಳೂರು: ಕರಾವಳಿಯಲ್ಲಿ ಅನ್ಯಕೋಮಿನ ಯುವಕ-ಯುವತಿ ಪ್ರೀತಿಸಿ ಮದುವೆಯಾಗಿದ್ದಾರೆ. ಭಜರಂಗದಳ ಕಾರ್ಯಕರ್ತನನ್ನು ಮುಸ್ಲಿಂ ಯುವತಿ ವರಿಸಿದ್ದಾಳೆ.

    ಇದು ಮಂಗಳೂರಿನ ಸುರತ್ಕಲ್‍ನಲ್ಲಿ (Surathkal) ನಡೆದ ಹಿಂದೂ-ಮುಸ್ಲಿಂ ಲವ್ ಸ್ಟೋರಿಯಾಗಿದೆ (Hindu- Muslim Love Story). ಮುಸ್ಲಿಂ ಯುವತಿಯೊಬ್ಬಳು ಭಜರಂಗದಳದ (Bhajarangdal) ಕಾರ್ಯಕರ್ತನನ್ನ ಮದುವೆಯಾಗಿದ್ದಾಳೆ.

    ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರೋ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಂತೆಯೇ ನ.30ರಂದು ಸುರತ್ಕಲ್‍ನ ಆಯೇಷಾ ಜೊತೆ ಪ್ರಶಾಂತ್ ಪರಾರಿಯಾಗಿದ್ದ. ಇದನ್ನೂ ಓದಿ: ಯತ್ನಾಳ್ ನಿಜವಾದ ಗುರಿ ಮೋದಿ ಅನ್ನೋದು ನಿಧಾನವಾಗಿ ಬಯಲಾಗಿದೆ: ಸಿದ್ದರಾಮಯ್ಯ

    ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿರೋ ಪ್ರಶಾಂತ್, ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ. ಇದೀಗ ಸುರತ್ಕಲ್ ನ ಮುಸ್ಲಿಂ ಯುವತಿಯ ಪ್ರೀತಿಸಿ ವರಿಸಿ ಸುದ್ದಿಯಾಗಿದ್ದಾನೆ.

    ಇತ್ತ ಆಯೇಷಾ ಪೋಷಕರು ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

  • ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಜಿಲ್ಲೆ ಹಲವೆಡೆ ಕ್ಷಿಪ್ರ ದಾಳಿ ನಡೆಸಿದ್ದಾರೆ.

    ಶಿವಮೊಗ್ಗಕ್ಕೆ ಎನ್‌ಐಎ ಅಧಿಕಾರಿಗಳು ನಿನ್ನೆ ರಾತ್ರಿ ಬಂದಿಳಿದಿದ್ದರು. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳಿಂದ ದಾಳಿ ನಡೆದಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್

    ಇಂದು ಬೆಳಗ್ಗೆ ಐದು ಗಂಟೆಗೆ ದಾಳಿ ಆರಂಭವಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆ ದಾಳಿ ನಡೆಸಿ ವಿಚಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್ ಆಗಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಆರೋಪಿಗಳು ಹಾಗೂ ಅವರ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಇದುವರೆಗೆ ಒಟ್ಟು 450 ಮಂದಿಯನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ

    Live Tv

  • ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಎಫ್‍ಐಆರ್ ದಾಖಲಾಗಿದ್ದು, 7 ಮಂದಿ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಅಧಿಕಾರಿಗಳು ತಿಳಿಸಿದ್ದಾರೆ.

    ಎ1 – ಕಾಸಿಫ್:
    32 ವರ್ಷದ ಕಾಸಿಫ್ ಶಿವಮೊಗ್ಗದ ಕ್ಲಾಕ್ರ್ಸ್ ಪೇಟೆ ನಿವಾಸಿ. ಕಾಸಿಫ್ ಗ್ಯಾಂಗ್ ಹಾಗೂ ಹರ್ಷನ ಗ್ಯಾಂಗ್‍ಗೆ 2020ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಕಾಸಿಫ್ ಹುಡುಗರನ್ನು ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಕೊಲೆ ನಡೆದಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ. ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

    ಎ2 – ನದೀಮ್:
    23 ವರ್ಷದ ನದೀಮ್ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದ್ದು, ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನು ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

    ಎ3 – ಆಸಿಫ್ ಖಾನ್:
    21 ವರ್ಷದ ಆಸಿಫ್ ಖಾನ್ ಕೊಲೆ ಮಾಡುವ ಉದ್ದೇಶದಿಂದ ಕಾಸಿಫ್‍ನ ಮಾತಿನಂತೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಅಸಿಫ್ ಖಾನ್ ಎರಡನೇಯವ.

    ಎ4 – ರಿಯಾನ್ ಶರೀಫ್ ಅಲಿಯಾಸ್ ಖಸಿ:
    22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆಗೂ ಮೊದಲು ಕಾಸಿಫ್‍ನ ಪ್ಲಾನಿಂಗ್ ಮೀಟಿಂಗ್‍ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ. ಇದನ್ನೂ ಓದಿ: ಮತಾಂಧ ಮುಸ್ಲಿಂ ಯುವಕರನ್ನು ಗಲ್ಲಿಗೇರಿಸಿ: ಟೆಂಗಳಿ

    ಎ5 – ನಿಹಾನ್ ಅಲಿಯಾಸ್ ಮುಜಾಹಿದ್:
    23 ವರ್ಷದ ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ. ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದು, ಸ್ನೇಹಿತರ ಗ್ಯಾಂಗ್ ಜೊತೆ ಮೀಟಿಂಗ್ ಮಾಡುತ್ತಿದ್ದ. ಖಾಸಿಫ್‍ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಚಿಕ್ಕಮಗಳೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಎ6 – ಅಬ್ದುಲ್ ಅಪ್ನಾನ್:
    ಅಬ್ದುಲ್ ಅಪ್ನಾನ್ ವಯಸ್ಸು ಈಗಿನ್ನು 21. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ ಇನ್ ಡೈರೆಕ್ಟ್ ಆಗಿ ಭಾಗಿಯಾಗಿದ್ದಾನೆ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನೋ ಅಥವಾ ಇಲ್ಲವೋ ಹೀಗೆ ಪ್ರತಿಯೊಂದು ಮಾಹಿತಿಯನ್ನು ಖಾಸಿಫ್‍ಗೆ ಈತ ನೀಡುತ್ತಿದ್ದ. ಕೊಲೆ ಬಳಿಕ ಈತ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ. ಇದನ್ನೂ ಓದಿ: ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸಿಎಂ ಕಿಡಿ

    ಎ7 – ಜಿಲಾನ್:
    ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನು ಕಾರ್‍ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಸ್ವಿಫ್ಟ್ ಕಾರ್‍ನಲ್ಲಿ ಭದ್ರಾವತಿ ಕಡೆ ತೆರಳಿದ್ದು, ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದ.

  • ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

    ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಬಳಿಕ ದಕ್ಷಿಣಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕಲ್ಲು ತೂರಾಟದ ನಡುವೆಯೇ ಶನಿವಾರ ಶರತ್ ಅಂತಿಮಯಾತ್ರೆ ಕೂಡಾ ನಡೆಯಿತು. ಇತ್ತ ಪ್ರಕ್ಷುಬ್ಧಗೊಂಡಿರುವ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಮತ್ತೊಂದು ಕೊಲೆ ಯತ್ನ ನಡೆದಿದೆ.

    ಮಂಗಳೂರು ಹೊರವಲಯದ ಕುತ್ತಾರು ರಾಣಿಪುರದಲ್ಲಿ ಯುವಕನ ಮೇಲೆ ತಲವಾರಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಂಬ್ಲಮೊಗರು ನಿವಾಸಿಯಾಗಿರುವ ಚಿರಂಜೀವಿ ಮೇಲೆ ನಿನ್ನೆ ಬೈಕಿನಲ್ಲಿ ಚಲಿಸುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಏಕಾಏಕಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಜರಂಗದಳದ ಕಾರ್ಯಕರ್ತ ಚಿರಂಜೀವಿ ಸದ್ಯ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆಗೆ ಹೋರಾಡುತ್ತಿದ್ದಾರೆ.

    ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣ ಭೇಧಿಸುವ ಮುನ್ನವೇ ಇದೀಗ ಮತ್ತೊಂದು ಪ್ರಕರಣ ನಡೆದಿರುವುದು ಪೊಲೀಸರ ತಲೆನೋವು ಜಾಸ್ತಿಮಾಡಿದೆ.

    https://www.youtube.com/watch?v=o40hIeKFh8E

    https://www.youtube.com/watch?v=1DwTIz6sVmQ

    https://www.youtube.com/watch?v=bHr6olvlgmU