Tag: ಭಜನೆ

  • ಹರ್ ಹರ್ ಶಂಭು ಹಾಡಿಗೆ ಅಪಸ್ವರ – ಮುಸ್ಲಿಮಳಾಗಿ ಆ ಹಾಡನ್ನು ಹಾಡಬಾರದು ಎಂದ ದಿಯೋಬಂದ್

    ಹರ್ ಹರ್ ಶಂಭು ಹಾಡಿಗೆ ಅಪಸ್ವರ – ಮುಸ್ಲಿಮಳಾಗಿ ಆ ಹಾಡನ್ನು ಹಾಡಬಾರದು ಎಂದ ದಿಯೋಬಂದ್

    ಲಕ್ನೋ: ಇತ್ತೀಚೆಗೆ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ರೀಲ್ಸ್ಗಳಲ್ಲಿ ಕೇಳಿ ಬರುತ್ತಿರುವ ವೈರಲ್ ಶಿವನ ಸ್ತುತಿಯ ಹಾಡು ಹರ್ ಹರ್ ಶಂಭು ಎಲ್ಲರ ಮನ ಗೆದ್ದಿದೆ. ಆದರೆ ಹಾಡು ಹಾಡಿದವರು ಯಾರು ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ವೈರಲ್ ಆದ ಬೆನ್ನಲ್ಲೇ ಹಾಡನ್ನು ಹಾಡಿದ ಗಾಯಕಿಗೆ ಮುಸ್ಲಿಮರಿಂದ ಅಪಸ್ವರ ವ್ಯಕ್ತವಾಗಿದೆ.

    ಇತ್ತೀಚಿನ ವೈರಲ್ ಹಾಡು ಹರ್ ಹರ್ ಶಂಭು ಹಾಡಿದ ಉತ್ತರ ಪ್ರದೇಶ ಮೂಲದ ಮುಸ್ಲಿಂ ಮಹಿಳೆ ಫರ್ಮಾನಿ ನಾಜ್‌ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ಜುಲೈ 24 ರಂದು ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ ಹಾಡು ಇದುವರೆಗೆ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಅನುಯಾಯಿಗಳು ಹೆಚ್ಚಾಗುತ್ತಿರುವುದರೊಂದಿಗೆ ಬೆಂಬಲ ವ್ಯಕ್ತವಾಗಿದೆ.

    ಫರ್ಮಾನಿ ನಾಜ್‌ಗೆ ಹಿಂದೂಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದರೂ ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತಿದೆ. ದಿಯೋಬಂದ್ ಮೂಲದ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಷರಿಯಾ ಕಾನೂನಿನ ಅಡಿಯಲ್ಲಿ ಹಿಂದೂ ದೇವತೆಯ ಹಾಡನ್ನು ಹಾಡಲು ಮುಸ್ಲಿಮರಿಗೆ ಅನುಮತಿಯಿಲ್ಲ ಎಂದು ಹೇಳಿದ್ದಾರೆ. ಆಕೆ ತನ್ನನ್ನು ಮುಸ್ಲಿಂ ಎಂದು ಭಾವಿಸುತ್ತಾಳಾದರೆ ಹಿಂದೂ ಹಾಡನ್ನು ಹಾಡಬಾರದು ಎಂದಿದ್ದಾರೆ.

    ಫರ್ಮಾನಿ ನಾಜ್ ಯಾರು?
    ಮುಜಾಫರ್‌ನಗರದ ಪ್ರಸಿದ್ಧ ಗಾಯಕಿ ಫರ್ಮಾನಿ ನಾಜ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ 38 ಲಕ್ಷಕ್ಕೂ ಅಧಿಕ ಫಾಲೊವರ್‌ಗಳನ್ನು ಹೊಂದಿದ್ದಾರೆ. ಅವರ ಪ್ರಸಿದ್ಧಿ ಇಷ್ಟಕ್ಕೇ ಸೀಮಿತವಾಗದೇ ಪ್ರಸಿದ್ಧ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ 12 ರಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ: ಈಶ್ವರಪ್ಪ

    2017ರಲ್ಲಿ ಫರ್ಮಾನಿ ನಾಜ್ ಮದುವೆಯಾಗಿದ್ದರು. ಒಂದು ಮಗುವೂ ಆಕೆಗಿದ್ದು, ಅದು ಅನಾರೋಗ್ಯಕ್ಕೆ ತುತ್ತಾಗಿತ್ತು. ಇರಿಂದ ಆಕೆಯ ಪತಿ ಮಗುವಿನ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಿಲ್ಲವೆಂದು ಆಕೆಯನ್ನು ಬಿಟ್ಟು ಹೋಗಿದ್ದ. ಬಳಿಕ ಆಕೆ ತನ್ನ ತಾಯಿಯ ಮನೆಯಲ್ಲಿಯೇ ವಾಸಿಸಲು ಪ್ರಾರಂಭಿಸಿದರು.

    ಇದಾದ ಬಳಿಕ ಗಾಯನವನ್ನು ಪ್ರಾರಂಭಿಸಿದ ಫರ್ಮಾನಿ ನಾಜ್ ತಮ್ಮ ಹಳ್ಳಿಯ ಯುವಕರೊಂದಿಗೆ ಸೇರಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಬಳಿಕ ಇಂಡಿಯನ್ ಐಡಲ್‌ನಲ್ಲೂ ಭಾಗವಹಿಸಲು ನಿರ್ಧರಿಸಿದರು. ಅವರ ಧ್ವನಿ ತೀರ್ಪುಗಾರರ ಹಾಗೂ ಅಭಿಮಾನಿಗಳ ಮೆಚ್ಚುಗೆಗೂ ಕಾರಣವಾಯಿತು.

    ಫರ್ಮಾನಿ ನಾಜ್ ಇತ್ತೀಚೆಗೆ ಹಾಡಿದ ಹರ್ ಹರ್ ಶಂಭು ಕಲಾವಿದರಿಗೆ ಯಾವುದೇ ಧರ್ಮವಿಲ್ಲ ಎಂಬ ಸಂದೇಶವನ್ನು ಸಾರುತ್ತದೆ ಎಂದು ಫರ್ಮಾನಿ ನಾಜ್ ಹೇಳಿದ್ದಾರೆ. ಸಲೀಮ್, ಮೊಹಮ್ಮದ್, ರಫಿಯಂತಹವರೂ ಕೂಡಾ ಭಜನೆ ಹಾಗೂ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಧರ್ಮ ಹಾಗೂ ಸಂಗೀತನ್ನು ಎಂದಿಗೂ ಜೋಡಿಸಬೇಡಿ ಎಂದು ಫರ್ಮಾನಿ ನಾಜ್ ವಿನಂತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಾಲ್ವರು ಸಂಸದರ ಅಮಾನತು ಹಿಂಪಡೆದ ಸ್ಪೀಕರ್

    ಹರ್ ಹರ್ ಶಂಭು ಹಾಡು ವೈರಲ್ ಆಗುತ್ತಿದ್ದಂತೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಸಂಜೀವ್ ಬಲ್ಯಾನ್ ಫರ್ಮಾನಿ ನಾಜ್ ಅವರನ್ನು ಹೊಗಳಿದ್ದು, ಆಕೆಯ ಮಗುವಿಗೆ ಚಿಕಿತ್ಸೆ ಕೊಡಿಸಲು ಸಹಾಯ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಮಾರಿ‌ ಮುಕ್ತವಾಗಲಿ: ಗ್ರಾಮಸ್ಥರಿಂದ ಶರಣ ಅಜ್ಜರ ಭಾವಚಿತ್ರ ಮೆರವಣಿಗೆ, ಭಜನೆ

    ಕೊರೊನಾ ಮಾರಿ‌ ಮುಕ್ತವಾಗಲಿ: ಗ್ರಾಮಸ್ಥರಿಂದ ಶರಣ ಅಜ್ಜರ ಭಾವಚಿತ್ರ ಮೆರವಣಿಗೆ, ಭಜನೆ

    ಬೆಳಗಾವಿ: ಕೊರೊನಾ ಗ್ರಾಮೀಣ ಭಾಗದಲ್ಲಿ ಇನ್ನೂ ಕಡಿಮೆಯಾಗಿಲ್ಲ. ‌ಕೊರೊನಾ ಮಹಾಮಾರಿ ಹೋಗಲಾಡಿಸುವಂತೆ ಹಲವು ಕಡೆ ಭಗವಂತನ ಸ್ಮರಣೆ ಮಾಡುತ್ತಿದ್ದಾರೆ. ಕೊರೊನಾ ಮಾರಿಯಿಂದ ಮುಕ್ತವಾಗಬೇಕು ಎಂದು ಗಿರಿಯಾಲ ಗ್ರಾಮಸ್ಥರು ಭಜನೆ ಮಾಡಿದರು.

    ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ ಕೆ.ಬಿ ಎಂಬ ಗ್ರಾಮದಲ್ಲಿ ಕೊರೊನಾ ಹೋಗಲಾಡಿಸಲು ಊರಿನ ಜನರು ಶ್ರೀ ವೆಂಕಟೇಶ್ವರನ ಪರಮ ಭಕ್ತನಾದ ಶ್ರೀ ಶರಣ ಅಜ್ಜರ ಭಾವಚಿತ್ರವನ್ನು ಇಡೀ ಊರಿನಲ್ಲಿ ಮೆರವಣಿಗೆ ಮಾಡಿದರು.

    ಎತ್ತಿನಗಾಡಿಯಲ್ಲಿ ಶರಣರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಿ ಭಕ್ತರಿಗೆ ದರ್ಶನ ಮಾಡಿಸಿದ್ರು. ಮಹಾಮಾರಿ ಕೊರೊನಾವನ್ನು ಆದಷ್ಟು ಬೇಗ ಹೋಗಲಾಡಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ರು. ಅಷ್ಟೇ ಅಲ್ಲ ಊರಿನ ತುಂಬ ಮೆರವಣಿಗೆ ಮಾಡಿ ಭಜನೆ ಮಾಡಿದ್ರು.

  • ಜಿಲ್ಲಾಧಿಕಾರಿ ಕಚೇರಿ ಮುಂದೆ ಭಜನೆ ಮಾಡಿ ಧರಣಿ ನಡೆಸಿದ ಶ್ರೀರಾಮಸೇನೆ

    ಜಿಲ್ಲಾಧಿಕಾರಿ ಕಚೇರಿ ಮುಂದೆ ಭಜನೆ ಮಾಡಿ ಧರಣಿ ನಡೆಸಿದ ಶ್ರೀರಾಮಸೇನೆ

    – ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡುವಂತೆ ಆಗ್ರಹ
    – ದಲಿತ ಬಾಲಕಿ ಅತ್ಯಾಚಾರಿಗಳನ್ನು ಬಂಧಿಸಿ

    ಗದಗ: ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಭಜನೆ ಮಾಡುವ ಮೂಲಕ ವಿನೂತನವಾಗಿ ಧರಣಿ ಮಾಡಿದ್ದಾರೆ. ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು, ದಲಿತ ವಿದ್ಯಾರ್ಥಿನಿ ರೇಣುಕಾ ಮಾದರ ಅತ್ಯಾಚಾರಿಗಳನ್ನ ಆದಷ್ಟು ಬೇಗ ಬಂಧಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂತ ಕಾರ್ಯಕರ್ತರಿಗೆ ದತ್ತ ಮಾಲಾಧಾರಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಭಜನೆ ಮಾಡುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪವಿತ್ರ ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡಬೇಕು, ಅಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಅಡೆ-ತಡೆ ಇಲ್ಲದೆ ಹಿಂದೂಗಳಿಗೆ ಪ್ರವೇಶ ನೀಡಬೇಕು ಜೊತೆಗೆ ನಿರಂತರ ಪೂಜಾ ಪುರಸ್ಕಾರ ನಡೆಯಬೇಕು ಎಂದು ಆಗ್ರಹಿಸಿದರು.

     

    ಕಾಮುಕರಿಂದ ಕಗ್ಗೊಲೆಯಾಗಿರುವ ವಿಜಯಪುರದ ದೇವರಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ದಲಿತ ವಿದ್ಯಾರ್ಥಿನಿ ರೇಣುಕಾ ಮಾದರ ಸಾವಿಗೆ ನ್ಯಾಯಾ ಕೊಡಿಸಿ, ಅತ್ಯಾಚಾರ ಮಾಡಿ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಭಜನೆ ಮಾಡುವ ಮೂಲಕವೇ ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ದತ್ತ ಮಾಲಾಧಾರಿಗಳು ಮನವಿ ಸಲ್ಲಿಸಿದರು.

  • ಅಧಿಕಾರಿಯ ನಿದ್ರೆಗೆ ಭಂಗ-ಯಕ್ಷಗಾನ, ಭಜನೆ ನಿಲ್ಲಿಸುವಂತೆ ಪೊಲೀಸರಿಂದ ಒತ್ತಡ!

    ಅಧಿಕಾರಿಯ ನಿದ್ರೆಗೆ ಭಂಗ-ಯಕ್ಷಗಾನ, ಭಜನೆ ನಿಲ್ಲಿಸುವಂತೆ ಪೊಲೀಸರಿಂದ ಒತ್ತಡ!

    ಮಂಗಳೂರು: ಮಹಾಶಿವರಾತ್ರಿ ಜಾಗರಣೆಯ ಪ್ರಯುಕ್ತ ನಡೆಯುತ್ತಿದ್ದ ಭಜನೆ ಹಾಗೂ ಯಕ್ಷಗಾನವನ್ನು ನಿಲ್ಲಿಸಲು ಒತ್ತಡ ಹೇರಿದ್ದಾರೆ ಅನ್ನೋ ಆರೋಪವೊಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ವಿರುದ್ಧ ಕೇಳಿಬಂದಿದೆ.

    ಹೌದು, ಮಂಗಳೂರಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾಗರಣೆಯ ಅಂಗವಾಗಿ ಭಜನೆಗಳು ಹಾಗೂ ಯಕ್ಷಗಾನ ನಡೆಯುತ್ತಿತ್ತು. ಈ ದೇವಸ್ಥಾನದ ಹತ್ತಿರದಲ್ಲೇ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಬಂಗಲೆ ಇದೆ. ಹೀಗಾಗಿ ಕಾರ್ಯಕ್ರಮದಿಂದ ಪೊಲೀಸ್ ಅಧಿಕಾರಿಯ ನಿದ್ದೆಗೆ ಭಂಗವಾಗಿದ್ದು, ಕಾರ್ಯಕ್ರಮ ನಿಲ್ಲಿಸಲು ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಕಾರ್ಯಕ್ರಮದಿಂದ ಕಿರಿಕಿರಿಯಾಗುತ್ತದೆ ಎಂದು ಪೊಲೀಸರು ಒತ್ತಡ ಹಾಕಿದ್ದಾರೆ. ಅಲ್ಲದೆ ಧ್ವನಿವರ್ಧಕ ಸ್ಥಗಿತಗೊಳಿಸಿ ಕಾರ್ಯಕ್ರಮ ನಡೆಸಲು ಸೂಚನೆ ನೀಡಿದ್ದಾರೆ. ನಾಗರಿಕರ ದೂರು ನೆಪದಲ್ಲಿ ಕಾರ್ಯಕ್ರಮ ರದ್ದುಪಡಿಸಲು ಒತ್ತಾಯ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರ ನಡುವೆ ಜಟಾಪಟಿ ನಡೆದಿದೆ.

    ಮಾಹಿತಿ ಪಡೆದ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕ ಡಾ.ಭರತ್ ಶೆಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ಜನಪ್ರತಿನಿಧಿಗಳ ಪ್ರವೇಶದಿಂದ ಜಟಾಪಟಿ ನಿಂತು ಕಾರ್ಯಕ್ರಮ ಮುಂದುವರಿದಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಜನಾ ಮಂಡಳಿಯಾದ ಲೋಕಾಯುಕ್ತ ಕಚೇರಿ: ವಿಡಿಯೋ ನೋಡಿ

    ಭಜನಾ ಮಂಡಳಿಯಾದ ಲೋಕಾಯುಕ್ತ ಕಚೇರಿ: ವಿಡಿಯೋ ನೋಡಿ

    ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಹೆಸರು ಕೇಳುತ್ತಿದ್ದಂತೆಯೇ ಭ್ರಷ್ಟರು ಭಜನೆ ಮಾಡುತ್ತಿದ್ದರು, ಆದರೆ ಈದೀಗ ಸಂಸ್ಥೆಯಲ್ಲಿಯೇ ಭಜನೆ ನಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ.

    ಹೌದು, ಇದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ. ಒಂದು ಕಾಲದಲ್ಲಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿ ಮೆರೆದಿದ್ದ ಲೋಕಾಯುಕ್ತ ಸಂಸ್ಥೆಯ ಇಂದಿನ ದುಸ್ಥಿತಿ. ಈ ಮೊದಲು ಸಂಸ್ಥೆಯ ಹೆಸರು ಕೇಳಿದರೆ, ಭ್ರಷ್ಟರು ರಾತ್ರಿಯಿಡಿ ಭಜನೆ ಮಾಡುತ್ತಿದ್ದರು. ಆದರೆ ಇದೀಗ ಅದೇ ಸಂಸ್ಥೆಯಲ್ಲಿ ಲಲಿತಾ ಸಹಸ್ರನಾಮ, ಭಜನೆ ನಡೆಯುತ್ತಿರುವುದರಿಂದ ಲೋಕಾಯುಕ್ತ ಸಂಸ್ಥೆಯ ದುಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ.

    ಇಂದು ಇದು ಲೋಕಾಯುಕ್ತ ಕಚೇರಿಯಾಗಿಲ್ಲ, ಬದಲಿಗೆ `ಲೋಕಾಯುಕ್ತ ಭಜನಾ ಮಂಡಳಿ’ಯಾಗಿದೆ. ರಾಜ್ಯ ಲೋಕಾಯುಕ್ತ ಕಚೇರಿಯಲ್ಲಿ ದಿನನಿತ್ಯ ನಡೆಯುತ್ತೆ ಸಹಸ್ರನಾಮ ಜಪ, ಭಜನೆ ಕಾರ್ಯಕ್ರಮ. ಕೆಲಸವಿಲ್ಲದೆ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಸಿಬ್ಬಂದಿ ಶುರುಮಾಡಿದ್ದಾರೆ. ಪ್ರತಿನಿತ್ಯ ಮಧ್ಯಾಹ್ನ ಊಟವಾದ ನಂತರ ಭಜನೆಗಾಗಿ ಕಚೇರಿಯನ್ನೇ ಬಂದ್ ಮಾಡಿ, ಲೋಕಾಯುಕ್ತ ಕಚೇರಿಯ 5ನೇ ಮಹಡಿಯಲ್ಲಿ ಸಿಬ್ಬಂದಿಗಳಿಂದ ಭಜನೆ, ಸಹಸ್ರನಾಮ ಹಾಗೂ ಜಪ ನಡೆಯುತ್ತಿದೆ.

    ಈ ಕಾರ್ಯಕ್ರಮದ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಜನರು ಲೋಕಾಯುಕ್ತವನ್ನೇ ಮರೆಯುತಿದ್ದಾರೆ. ಅಲ್ಲದೇ ಈ ಮೊದಲು ಲೋಕಾಯುಕ್ತರಿಗೆ ಚಾಕು ಹಾಕಿದ ಘಟನೆ ಮಾಸುವ ಮುನ್ನವೇ ಲೋಕಾಯುಕ್ತ ಕಚೇರಿಯಲ್ಲಿನ ಭಜನೆ ಇದೀಗ ಭಾರೀ ಸುದ್ದಿಯಲ್ಲಿದೆ.

    https://www.youtube.com/watch?v=QSvDESETPh8